ಎರಡು ಕೋನಗಳನ್ನು ಮತ್ತು ಒಳಗೊಂಡ ಬಾಹುವಿನ ತ್ರಿಭುಜದ ರಚನೆ
ಬದಲಾವಣೆ ೦೯:೫೩, ೨೧ ಫೆಬ್ರುವರಿ ೨೦೨೨ ರಂತೆ Girija (ಚರ್ಚೆ | ಕಾಣಿಕೆಗಳು) ಇವರಿಂದ (added Category:ತ್ರಿಭುಜಗಳು using HotCat)
ತ್ರಿಭುಜದ ಎರಡು ಕೋನಗಳು ಮತ್ತು ಒಂದು ಬಾಹುವನ್ನು ತಿಳಿದಿರುವಾಗ ಮತ್ತು ಕೊಟ್ಟಿರುವ ಬಾಹುಗಳನ್ನು ಅರ್ಥಮಾಡಿಕೊಳ್ಳುವಾಗ ತ್ರಿಭುಜದ ರಚನೆಯು ಎರಡು ಕೋನಗಳ ನಡುವೆ ಮಾತ್ರ ವಿಶಿಷ್ಟ ತ್ರಿಭುಜವನ್ನು ರೂಪಿಸುತ್ತದೆ. ರಚನೆಯು ಕೋ.ಬಾ.ಕೋ ಸರ್ವಸಮತೆಯ ನಿಯಮವನ್ನು ಅನುಸರಿಸುತ್ತದೆ.
ಉದ್ದೇಶಗಳು:
- ಎರಡು ಕೋನ ಮತ್ತು ಬಾಹುಗಳನ್ನು ನೀಡಿದಾಗ ತ್ರಿಭುಜವನ್ನು ರಚಿಸಲು
- ಕೊಟ್ಟಿರುವ ಬಾಹು ಎರಡು ಕೋನಗಳ ನಡುವೆ ಸೇರಿಸಬೇಕು ಎಂಬುದನ್ನು ಅರ್ಥಮಾಡಿಕೊಳ್ಳಲು
ಅಂದಾಜು ಸಮಯ:
೨೦ ನಿಮಿಷಗಳು
ಪೂರ್ವಾಪೇಕ್ಷಿತ/ಸೂಚನೆಗಳು , ಇದ್ದರೆ
ಬಿಂದು, ರೇಖೆಗಳು, ಕೋನಗಳು,ತ್ರಿಭುಜದ ಅಂಶಗಳು ಮತ್ತು ತ್ರಿಭುಜದ ಗುಣಲಕ್ಷಣಗಳ ಪೂರ್ವ ಜ್ಞಾನ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಡಿಜಿಟಲ್: ಕಂಪ್ಯೂಟರ್, ಜಿಯೋಜಿಬ್ರಾ ಅಪ್ಲಿಕೇಶನ್, ಪ್ರೊಜೆಕ್ಟರ್.
ಡಿಜಿಟಲ್ ಅಲ್ಲದ: ವರ್ಕ್ಶೀಟ್ ಮತ್ತು ಪೆನ್ಸಿಲ್
Download this geogebra file from this link.
ವಿಧಾನ/ಬೆಳವಣಿಗೆಯ ಪ್ರಶ್ನೆಗಳು:
- ನಿರ್ದಿಷ್ಟ 2 ಕೋನಗಳು ಕೂಡಿದಾಗ ಕೋನಗಳ ಮೊತ್ತ 180° ಆದರೆ, ನೀವು ತ್ರಿಭುಜವನ್ನು ರಚಿಸಬಹುದೇ?
- ಕೇವಲ 2 ಕೊಟ್ಟಿರುವ ಕೋನಗಳೊಂದಿಗೆ ತ್ರಿಭುಜವನ್ನು ರಚಿಸಲು ಸಾಧ್ಯವೇ? ರಚಿಸುವುದಕ್ಕೆ ಅಗತ್ಯವಿರುವ ಇತರ ನಿಯತಾಂಕ ಯಾವುದು.
- ಯಾವುದೇ ಒಂದು ಬಾಹುವನ್ನು ನಿರ್ದಿಷ್ಟಪಡಿಸಿದರೆ, 2 ಕೋನಗಳೊಂದಿಗೆ ಎಷ್ಟು ತ್ರಿಭುಜಗಳು ಸಾಧ್ಯ.
- ಕೊಟ್ಟಿರುವ ಬಾಹು ಒಳಗೊಂಡ ಬಾಹುವಾಗಿದ್ದರೆ, ಎಷ್ಟು ತ್ರಿಭುಜಗಳು ಸಾಧ್ಯ.
ಮೌಲ್ಯ ನಿರ್ಣಯ ಪ್ರಶ್ನೆಗಳು:
- ಕೊಟ್ಟಿರುವ ಬಾಹುವನ್ನು ಏಕೆ ಒಳಗೊಂಡ ಬಾಹುವಾಗಿಯೇ ಸೇರಿಸಬೇಕು?
- ಕೊಟ್ಟಿರುವ ಕೋ, ಕೋ ಮತ್ತು ಬಾ ಗಳು ಕೋ.ಕೋ.ಬಾ, ಕೋ.ಬಾ.ಕೋ ಮತ್ತು ಬಾ.ಕೋ.ಕೋ. ಸರ್ವಸಮತೆ ತ್ರಿಭುಜಗಳಾಗಿವೆ.