ಜಿಂಪ್ ಇಮೇಜ್ ಎಡಿಟರ್ ಕಲಿಯಿರಿ
ಪರಿಚಯ
ಜಿಂಪ್- ರಾಸ್ಟರ್ ಗ್ರಾಫಿಕ್ಸ್ ಎಡಿಟರ್ ನ ಒಂದು ಮುಕ್ತ ಸಂಪನ್ಮೂಲವಾಗಿದೆ. ಇದನ್ನು ಚಿತ್ರಗಳನ್ನು ಸಂಪಾದಿಸಲು, ಚಿತ್ರಗಳಿಗೆ ಮರು-ಸ್ಪರ್ಶ ನೀಡಲು, ರೇಖಾಚಿತ್ರಗಳನ್ನು ರಚಿಸಲು, ಚಿತ್ರಗಳನ್ನು ಮರು-ಗಾತ್ರಗೊಳಿಸಲು, ವಿವಿಧ ಚಿತ್ರಿಕಾ ವಿನ್ಯಾಸಗಳನ್ನು ಬದಲಾಯಿಸಲು ಹಾಗೂ ಇದೇ ರೀತಿಯ ವಿಶೇಷ ಕಾರ್ಯಗಳಿಗೆಂದು ಬಳಸುತ್ತಾರೆ. ಜಿಂಪ್-ಒಂದು ವಿಸ್ತರಣೀಯ ತಂತ್ರಾಂಶವಾಗಿದೆ. ಜಿಂಪ್ ನ್ನು ಚಿತ್ರಗಳ ಗುಣಮಟ್ಟವನ್ನು ಉತ್ತಮಗೊಳಿಸಲು ಮತ್ತು ಚಿತ್ರಗಳ ವರ್ಧನೆಗೆ ಬಳಸುತ್ತಾರೆ. ಈ ಅನ್ವಯವು ಜಿ ಎನ್ ಯು(GNU’S Not Unix)ವಿನಿಂದ ಸಾರ್ವಜನಿಕ ಪರವಾನಗಿ ಪಡೆದ ಉಚಿತ ಹಾಗೂ ಮುಕ್ತ ತಂತ್ರಾಂಶವಾಗಿದೆ.
ಮೂಲ ಮಾಹಿತಿ
ಐ.ಸಿ.ಟಿ ಸಾಮರ್ಥ್ಯ | |
ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ | ಚಿತ್ರಗಳ ರಚನೆಗೆ, ಚಿತ್ರಗಳ ಪರಿಷ್ಕರಣೆಗೆ, ಚಿತ್ರಗಳ ವಿನ್ಯಾಸಗಳಿಗೆ ಮತ್ತು ನೀಡಿರುವ ಅಳತೆಗಳಿಗೆ ಅನುಗುಣವಾಗಿ ಚಿತ್ರಗಳನ್ನು ಮರು-ಗಾತ್ರಕ್ಕೊಳಪಡಿಸಲು ಬಳಸುವ ಒಂದು ವಿಶೇಷ ಸಾಧನವಾಗಿದೆ. |
ಆವೃತ್ತಿ | ಜಿಂಪ್- ಇಮೇಜ್ ಎಡಿಟರ್ (ಚಿತ್ರ ಸಂಪಾದಕ ತಂತ್ರಾಂಶ)ದ ಆವೃತ್ತಿ….. 2.8.10 |
ಸಂರಚನೆ | ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿದ್ದು, ಯಾವುದೇ ಸಂರಚನೆಯ ಅಗತ್ಯತೆ ಇರುವುದಿಲ್ಲ. |
ಇತರೇ ಸಮಾನ ಅನ್ವಯಕಗಳು | GIMP Inkscape , XGimp image editor, etc |
ಮೊಬೈಲ್ ಮತ್ತು ಟ್ಯಾಬ್ಲೆಟ್ನಲ್ಲಿ ಈ ಅನ್ವಯಕ | Currently there is no GIMP app but alternative many image editing App available at play store. |
ಅಭಿವೃದ್ದಿ ಮತ್ತು ಸಮುದಾಯ ಸಹಾಯ | The GIMP Development Team |
ಲಕ್ಷಣಗಳ ಮೇಲ್ನೋಟ
ಜಿಂಪ್ ನ್ನು ಬಳಸಿ ಚಿತ್ರಗಳ ಗಾತ್ರಗಳನ್ನು ಕಡಿಮೆ ಮಾಡಬಹುದು. ಅಂದರೆ ನಮ್ಮ ಅವಶ್ಯಕತೆಗೆ ತಕ್ಕಂತೆ ಉದ್ದ ಮತ್ತು ಅಗಲಗಳನ್ನು ಕಡಿಮೆ ಮಾಡಬಹುದು.ಚಿತ್ರ/ಪೋಟೊಗಳ ರೆಸಲ್ಯೂಷನ್ ಕಡಿಮೆ ಮಾಡಬಹುದು. ಈ ರೀತಿ ಬದಲಾಯಿಸಿದ ಚಿತ್ರಗಳನ್ನು ಎಕ್ಸ್ ಪೋರ್ಟ್ ಮಾಡಬೇಕು. ಅವು .ಜೆಪಿಜಿ ಎಂದು ಸೇವ್ ಆಗುವವು.
ಅನುಸ್ಥಾಪನೆ
- ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ.
- ಒಂದುವೇಳೆ ನಿಮ್ಮ ಕಂಪ್ಯೂಟರ್ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ. ಉಬುಂಟು ಸಾಪ್ಟ್ವೇರ್ ಸೆಂಟರ್ನಲ್ಲಿ “
____
” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು. - ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ.
- Application > System Tools > ಮೂಲಕ ಟರ್ಮಿನಲ್ಲ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ Ctrl+Alt+T ಒತ್ತುವ ಮೂಲಕವೂ ತೆರೆಯಬಹುದು.
- ಟರ್ಮಿನಲ್ ಪುಟ ತೆರೆದ ನಂತರ ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ
sudo apt-get install ____
ಅನ್ವಯಕ ಬಳಕೆ
ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು
ಬೇರೆ ಎಲ್ಲಾ ಅನ್ವಯಕಗಳಂತೆಯೇ, ಇದನ್ನು ಸಹ FILE – SAVE AS ಮೂಲಕ ಉಳಿಸಬಹುದು. ಕೀಬೋರ್ಡ್ ಮೂಲಕ ಮಾಡುವುದಾದಲ್ಲಿ CTRL-S ಕೀ ಬಳಸಬಹುದು. ಕಡತಕ್ಕೆ ಅರ್ಥಪೂರ್ಣವಾದ ಹೆಸರನ್ನುನಮೂದಿಸಿ ಉಳಿಸಬಹುದು. ಈ ಚಿತ್ರವು .xcf ನಮೂನೆಯಲ್ಲಿ ಉಳಿಯುತ್ತದೆ.
ಉನ್ನತೀಕರಿಸಿದ ಲಕ್ಷಣಗಳು
- Modifying Images
ಸಂಪನ್ಮೂಲ ರಚನೆಯ ಆಲೋಚನೆಗಳು
Modify pictures hight, width, size, etc and creating resources.