ಭೂ ಬಳಕೆಯ ಪ್ರಕಾರಗಳು-ಗುಂಪು ಚಟುವಟಿಕೆ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search


ಚಟುವಟಿಕೆ - ಭೂ ಬಳಕೆಯ ಮಾಹಿತಿ ಸಂಗ್ರಹಣೆ-ಗುಂಪು ಚಟುವಟಿಕೆ

ಅಂದಾಜು ಸಮಯ

30 ನಿಮಿಷಗಳು

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

  1. ಪೇಪರ್
  2. ಪೆನ್
  3. ಮೊಬೈಲ್
  4. ಚಿತ್ರಪಟಗಳು
  5. ವಿದ್ಯಾರ್ಥಿಗಳು ಸಂಗ್ರಹ ಮಾಡಿದ ವಿವಿಧ ಬೆಳೆಗಳ ಗಿಡ,ಎಲೆಗಳು
  6. ಹಿರಿಯರ ಸಹಾಯ

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

ಆತ್ಮೀಯ ಶಿಕ್ಷಕರೇ, ನಾವು ಭಾರತದಲ್ಲಿ ವ್ಯವಸಾಯದ ಪ್ರಾಮುಖ್ಯತೆಯನ್ನು ವಿದ್ಯಾರ್ಥಿಗಳಿಗೆ ತಿಳಿಯ ಪಡಿಸಬೇಕಾಗಿದೆ.

  1. ಭಾರತದಲ್ಲಿ ವ್ಯವಸಾಯದ ಭೂಮಿಯು ಸಾಕಷ್ಟಿದ್ದರೂ ವ್ಯವಸಾಯವಾಗುತ್ತಿಲ್ಲ.ಕಾರಣವೇನು ಎಂದು ಅವರಿಗೆ ಮನವರಿಕೆ ಮಾಡಬೇಕಾಗಿದೆ.
  2. ಇತ್ತೀಚೆಗೆ ವ್ಯವಸಾಯದ ಮೇಲೆ ವಾಯುಗುಣದ ,ವಾತಾವರಣದ ಪ್ರಭಾವವು ಬೀರುತ್ತಿರುವ ಬಗ್ಗೆ ಮನವರಿಕೆ ಮಾಡಬಹುದು.
  3. ಅರಣ್ಯ ನಾಶದಿಂದ ಮಳೆಯ ಪ್ರಮಾಣ ಕುಸಿತವಾಗಿರುವುದು, ಮಾತ್ರವಲ್ಲದೆ ಅದು ವ್ಯವಸಾಯದ ಮೇಲೆ ಪ್ರಭಾವಬೀರುವುದು ಎಂದು ತಿಳಿಸಬೇಕಾಗಿದೆ.
  4. ನಿರುದ್ಯೋಗದ ಸಮಸ್ಯೆಯನ್ನು ವಿವರಿಸುತ್ತಾ , ಕೃಷಿಯಲ್ಲಿ ಉದ್ಯೋಗವಿರುವ ಬಗ್ಗೆ ಭರವಸೆ ಮೂಡಿಸಬೇಕಾಗಿದೆ.
  5. ಬಳಕೆಯಾಗದ ಭೂಮಿಯನ್ನು ಬಳಕೆ ಮಾಡುವ ಅವಶ್ಯಕತೆಯನ್ನು ತಿಳಿಸಬೇಕು.
  6. ಕೃಷಿ ಎಂಬುವುದು ಅನಕ್ಷರಸ್ಥರು ಮಾತ್ರ ಮಾಡುವ ಉದ್ಯೋಗವಲ್ಲ, ವಿದ್ಯಾವಂತರೀಗೂ ಅವಕಾಶಗಳು ಸಾಕಷ್ಟಿದೆ ಎಂದು ತಿಳಿಸಬೇಕು.

ಬಹುಮಾಧ್ಯಮ ಸಂಪನ್ಮೂಲಗಳ

  1. ಸ್ಥಳೀಯ ಪೇಪರ್ ಗಳಲ್ಲಿ ಬರುವ ವಿಶೇಷ ಲೇಖನಗಳನ್ನು(ಕೃಷಿ ಬಗ್ಗೆ) ಸಂಗ್ರಹ ಮಾಡಿ ವಿದ್ಯಾರ್ಥಿಗಳಿಗೆ ತೋರಿಸುವುದು.
  2. ಕೃಷಿ ಸಂಬಂದಿಸಿದ ಸಿ.ಡಿ ಗಳನ್ನು ತಂದು ವಿದ್ಯಾರ್ಥಿಗಳಿಗೆ ತೋರಿಸುವುದು.
  3. ಕೃಷಿಗೆ ಸಂಬಂದಿಸಿದ ವಾರ್ತೆಗಳನ್ನು , ಟಿವಿ ಕಾರ್ಯಕ್ರಮಗಳನ್ನು ನೋಡಲು ಹೇಳುವುದು.

ಪ್ರಸಕ್ತ ಸ್ಥಳೀಯ ಸಂಪರ್ಕಗಳು

  1. ಸ್ಥಳೀಯ ರೈತರನ್ನು ಶಾಲೆಗೆ ಕರೆದು ವ್ಯವಸಾಯದ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ಕೊಡುವುದು.
  2. ಹೊಲಕ್ಕೆ ಭೇಟಿ ಕೊಡುವುದು.

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

  1. ವಿವಿಧ ದೇಶದಲ್ಲಿ ಭೂಬಳಕೆ ಬಗ್ಗೆ ಮಾಹಿತಿ ನೋಡಲು ಇಲ್ಲಿ ಕ್ಲಿಕ್ ಮಾಡಿ
  2. ಭಾರತದಲ್ಲಿ ಭೂ ಬಳಕೆ ಮಾದರಿ ಮಾಹಿತಿಯನ್ನು ವೀಕ್ಷಿಸಿಸಲು ಇಲ್ಲಿ ನೋಡಿ
  3. ಪ್ರಸ್ತುತ ಭಾರತದಲ್ಲಿರುವ ಭೂ ಬಳಕೆಯ ನಿಯಮಗಳು ಅದರ ಮಾಹಿತಿ ಇಲ್ಲಿದೆ
  4. ಭೂ ಬಳಕೆಯ ಚಿತ್ರಗಳು, ಪೈ ನಕ್ಷೆಗಳು ಇತ್ಯಾದಿಗಳು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
  5. ಮರುಭೂಮಿಯಲ್ಲಿ ಮಾಡಿರುವ ಕೃಷಿಯ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
  6. ಅರಣ್ಯ ಉತ್ಪನ್ನ ಬಳಕೆ ಬಗ್ಗೆ ಮಾಹಿತಿ ಇರುವ ವೀಡಿಯೋ ಇದೆ.

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

  1. ವಿದ್ಯಾರ್ಥಿಗಳಿಗೆ ಮೊದಲಿನ ದಿನವೇ ವ್ಯವಸಾಯದ ಭೂಮಿಗಳು ಅವರ ಊರಿನಲ್ಲಿ ಎಲ್ಲಿ ಇವೆ ಎಂದು ಮಾಹಿತಿ ಪಡೆದುಕೊಂಡು ಬರಲು ಹೇಳುವುದು.
  2. ಯಾವ ಯಾವ ಕೃಷಿಯನ್ನು ಅವರ ಊರಿನಲ್ಲಿ ಮಾಡುತ್ತಾರೆ ಎಂದು ಹಿರಿಯರಿಂದ ಮಾಹಿತಿ ಪಡೆದುಕೊಂಡು ಬರಲು ಹೇಳುವುದು.
  3. ಅವರ ಊರಿನಲ್ಲಿ ಕೃಷೀ ಭೂಮಿಗಳ ಚಿತ್ರಗಳನ್ನು ಮೊಬೈಲ್ ನಲ್ಲಿ ತೆಗೆದುಕೊಂಡು ಬರಲು ಹೇಳುವುದು.
  4. ಅವರ ಊರಿನಲ್ಲಿ ಬೀಳು ಭೂಮಿಗಳು ಎಲ್ಲಿವೆ ಎಂದು ತಿಳಿದುಕೊಂಡು ಬರಲು ತಿಳಿಸುವುದು.

ನಂತರ ತರಗತಿಯಲ್ಲಿ ವಿದ್ಯಾರ್ಥಿಗಳನ್ನು ಗುಂಪುಗಳನ್ನು ಮಾಡಿಕೊಂಡು ತಾವು ತಂದಿರುವ ಮಾಹಿತಿಯನ್ನು ವಿಶ್ಲೇಸಿಸಲು ಹೇಳುವುದು.

  1. ಮೊದಲಿಗೆ ಅವರ ಊರಿನ ಬೆಳೆಗಳ ಹೆಸರುಗಳನ್ನು ಬರೆಯಲು ಹೇಳುವುದು
  2. ಅವುಗಳನ್ನು ಒಣ ಬೇಸಾಯದ ಬೆಳೆಗಳು , ಗುಡ್ಡ ಪ್ರದೇಶದ ಬೆಳೆಗಳು, ಹೊಲದಲ್ಲಿ ಬೆಳೆಯುವ ಬೆಳೆಗಳು,ಎಂದು ವಿಂಗಡಿಸಲು ಹೇಳುವುದು.
  3. ಅವರ ಊರಿನಲ್ಲಿ ಬಳಕೆಯಾಗದೇ ಇರುವ ಭೂಮಿಗಳು ಇರುವ ಪ್ರದೇಶಗಳನ್ನು ಪಟ್ಟಿ ಮಾಡಲು ಹೇಳುವುದು.
  4. ಅವರ ಊರಿನಲ್ಲಿ ಅರಣ್ಯ ಪ್ರದೇಶಗಳನ್ನು ಪಟ್ಟಿ ಮಾಡಿಸುವುದು.

ಪಟ್ಟಿ ಮಾಡಿಸಿದ ನಂತರ ಅದನ್ನು ತರಗತಿಯಲ್ಲಿ ಮಂಡಿಸಲು ಹೇಳುವುದು.ಈ ಸಂದರ್ಭದಲ್ಲಿ ಭೂಬಳಕೆಯು ಅವರ ಊರುಗಳಲ್ಲಿ ಹೇಗೆ ಇದೆ ಎಂದು ಅವರಿಗೆ ಮನವರಿಕೆ ಮಾಡುತ್ತಾ , ಅವರ ಊರಿನ ಪಾಳು ಬಿದ್ದಿರುವ ಭೂ ಬಳಕೆಯ ಮಹತ್ವವನ್ನು ಅವರಿಗೆ ತಿಳಿಸುವುದು. ಅರಣ್ಯವನ್ನು ರಕ್ಷಣೆ ಮಾಡಿ ವಾತಾವರಣವನ್ನು ಕಾಪಾಡುವುದರ ಮೂಲಕ , ಕೃಷೀಗೂ ನೆರವು ಆಗುವುದರ ಮಹತ್ವವನ್ನು ತಿಳಿಸುವುದು.ಅವರ ಊರಿನಲ್ಲಿ ಸಾಗುವಳೀ ಕ್ಷೇತ್ರವು ಯಾವ ಪ್ರಮಾಣದಲ್ಲಿದೆ ಎಂದು ತಿಳಿಸಿ, ವ್ಯವಸಾಯ ಮಾಡುವುದರ ಅಗತ್ಯತೆಯನ್ನು ತಿಳಿಸುವುದು.ಕೃಷಿ ಯೋಗ್ಯವಲ್ಲದ ಭೂಮಿಯನ್ನು ಮಾತ್ರ ಕೈಗಾರಿಕೆಗಳಿಗೆ ಕೊಡುವುದರ ಅಗತ್ಯತೆಯನ್ನು ತಿಳಿಸುವುದು ಅಗತ್ಯವಾಗಿದೆ.

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

ಪ್ರಶ್ನೆಗಳು

ಚಟುಟವಟಿಕೆಯ ಮೂಲಪದಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಭಾರತದ_ಭೂ_ಬಳಕೆ_ಹಾಗೂವ್ಯವಸಾಯ