Digital story telling GHS Jayanagara 2016
Visited Places
Rain water harvesting
ಮಳೆ ನೀರಿನ ಕೋಯ್ಲು - ಮಕ್ಕಳಿಗೆ ಮಳೆ ಬರುವುದನ್ನು ಗೊತ್ತು ಆದರೆ ಮಳೆ ಯಿಂದ ನೀರನ್ನು ಹೇಗೆ ಸಂಗ್ರಹಣೆ ಮಾದುತ್ತಾರೆ ಎಂಬುದರ ಬಗ್ಗೆ ಗೊತ್ತೆ ಇರಲಿಲ್ಲ ಆದ್ದರಿಂದ ಇದನ್ನು ಆಧಾರವಾಗಿ ಇಟ್ಟುಕೊಂಡು ಜಯನಗರದಲ್ಲಿರುವ ಮಳೆ ನೀರಿನ ಕೋಯ್ಲು ಘಟಕಕ್ಕೆ ೯ನೇ ತರಗತಿಯ ಮಕ್ಕಳೊಂದಿಗೆ ಭೇಟಿ ನೀಡಲಾಯಿತು. ತರಗತಿಯಲ್ಲಿ ಕೇವಲ ಮಳೆ ನೀರನ್ನು ಸಂಗ್ರಹಣೆ ಮಾಡುಬೇಕು ಎಂಬುವುದನ್ನು ಮಾತ್ರ ಹೇಳಿಕೊಡಲಾಗುವುದು . ಇದರ ಸಂಪೂರ್ಣವಾದ ಮಾಹಿತಿಯನ್ನು ಪಡೆದುಕಳ್ಳಲಾಯಿತು. ಮತ್ತು ಇದರಿಂದ ಆಗುವ ಪ್ರಯೋಜನಗಳೇನು , ಏತಕ್ಕಗಿ ಮಳೆ ನೀರನ್ನು ಸಂಗ್ರಹಿಸಿ ಇಡಲಾಗುವುದು , ಇನ್ನಿತರ ಹಲವಾರು ಮಾಹಿತಿಯನ್ನು ಈ ಕೇಂದ್ರದಿಂದ ತಿಳಿದುಕೊಳ್ಳಲಾಯಿತು.
Apex bank
Police station
'ಪೋಲೀಸ್' ಎಂಬ ಹೆಸರು ಕೇಳಿದ ತಕ್ಷಣ ಮನದ ಮೂಲೆಯಲೆಲ್ಲೋ ಅಳುಕಾಗುತ್ತದೆ. ಮಕ್ಕಳಂತು ಮತ್ತಷ್ಟು ಹೆದರುವುದರಲ್ಲಿ ಅನುಮಾನವಿಲ್ಲ. ಇಂತಹ ಸಂದರ್ಭದಲ್ಲಿ ಪಠ್ಯಕ್ರಮದ ಪಾಠದ ಜೊತೆ ಪ್ರತ್ಯಕ್ಷವಾಗಿ ಪೋಲೀಸ್ ಸಿಬ್ಬಂದಿಗಳ ಕಾರ್ಯಚಟುವಟಿಕೆಗಳನ್ನು ಪರಿಚಯ ಮಾಡಿಸುವ ಉದ್ದೇಶದಿಂದ 'ಶಿಕ್ಷಕರ ಕಲಿಕಾ ಸಮೂದಾಯದಡಿಯಲ್ಲಿ 'ವಿದ್ಯುನ್ಮಾನ ಕಥಾ ಪ್ರಸ್ತುತಿ ಕಾರ್ಯಕ್ರಮ'ವನ್ನು ಹಮ್ಮಿಕೊಂಡು ನಮ್ಮ ಶಾಲೆಯ ೯ನೇ ತರಗತಿಯ ಮಕ್ಕಳು ಶಾಲೆಗೆ ಪಕ್ಕದಲ್ಲಿರುವ ತಿಲಕನಗರ ಪೋಲೀಸ್ ಠಾಣೆಗೆ ಭೇಟಿ ನೀಡಿ ವಿಚಾರಗಳನ್ನು ಸಂಗ್ರಹಿಸಿ ಅನುಭವ ಮತ್ತು ಅನಿಸಿಕೆಯನ್ನು 'ವಿದ್ಯುನ್ಮಾನ ಕಥಾ ಪ್ರಸ್ತುತಿ'ಯ ಮೂಲಕ ಹಂಚಿಕೊಳ್ಳಲಾಯಿತು.ನೈಜ ಕಲಿಕೆಯ ಪರಿಣಾಮವಾಗಿ ಮಕ್ಕಳಲ್ಲಿ ಆತ್ಮವಿಶ್ವಾಸ,ಸಮಾಜದ ಜೊತೆಗಿನ ಒಡನಾಟ,ಸಂಘಟನಾ ಕೌಶಲ,ಪರಸ್ಪರ ಚರ್ಚೆ, ಮೊದಲಾದ ಪ್ರಕ್ರಿಯೆಗಳಿಗೆ ಪ್ರೋತ್ಸಾಹ ದೊರೆತು ಕಲಿಕೆಗೆ ಮತ್ತಷ್ಟು ಉತ್ತೇಜನಕಾರಿಯಾಯಿತು ಮತ್ತು ಪೋಲೀಸ್ ಸಿಬ್ಬಂದಿಗಳ ಮೇಲಿನ ಭಯ ಮಾಯವಾಗಿ ಈ ಮಕ್ಕಳು ಸಹ ಪೋಲೀಸ್ ಹುದ್ದೆಗೆ ಸೇರಿ ಸಮಾಜ ಸೇವೆ ಮಾಡುವ ಅಭಿಲಾಷೆ ವ್ಯಕ್ತಪಡಿಸಿದರು.
Fire station
ಆಗ್ನಿ ಶಾಮಕ ಠಾಣೆ (Fire station) ಎಂಬ ಹೆಸರು ಮಕ್ಕಳು ಕೇವಲ ತರಗತಿಯಲ್ಲಿ ಪಠ್ಯದಲ್ಲಿ ಮಾತ್ರ ಕೇಳಿರುತ್ತಾರೆ ಜೋತೆಗೆ ಟಿ.ವಿ.ಯಲ್ಲಿ ನೋಡಿರುತ್ತಾರೆ . ಇಲ್ಲಿ ಪಠ್ಯಕ್ರಮದ ಪಾಠದ ಜೊತೆ ಪ್ರತ್ಯಕ್ಷವಾಗಿ ಆಗ್ನೀಶಾಮಕ ಸಿಬ್ಬಂದಿಗಳ ಕಾರ್ಯಚಟುವಟಿಕೆಗಳನ್ನು ಪರಿಚಯ ಮಾಡಿಸುವ ಉದ್ದೇಶದಿಂದ 'ಶಿಕ್ಷಕರ ಕಲಿಕಾ ಸಮೂದಾಯದಡಿಯಲ್ಲಿ 'ವಿದ್ಯುನ್ಮಾನ ಕಥಾ ಪ್ರಸ್ತುತಿ ಕಾರ್ಯಕ್ರಮ'ವನ್ನು ಹಮ್ಮಿಕೊಂಡು ನಮ್ಮ ಶಾಲೆಯ ೯ನೇ ತರಗತಿಯ ಮಕ್ಕಳು ಶಾಲೆಗೆ ಪಕ್ಕದಲ್ಲಿರುವ ಜಯನಗರ ಆಗ್ನೀ ಶಾಮಕ ಠಾಣೆಗೆ ಭೇಟಿ ನೀಡಿ ವಿಚಾರಗಳನ್ನು ಸಂಗ್ರಹಿಸಿ ಅನುಭವ ಮತ್ತು ಅನಿಸಿಕೆಯನ್ನು 'ವಿದ್ಯುನ್ಮಾನ ಕಥಾ ಪ್ರಸ್ತುತಿ'ಯ ಮೂಲಕ ಹಂಚಿಕೊಳ್ಳಲಾಯಿತು.ನೈಜ ಕಲಿಕೆಯ ಪರಿಣಾಮವಾಗಿ ಮಕ್ಕಳಲ್ಲಿ ಆತ್ಮವಿಶ್ವಾಸ,ಸಮಾಜದ ಜೊತೆಗಿನ ಒಡನಾಟ,ಸಂಘಟನಾ ಕೌಶಲ,ಪರಸ್ಪರ ಚರ್ಚೆ, ಮೊದಲಾದ ಪ್ರಕ್ರಿಯೆಗಳಿಗೆ ಪ್ರೋತ್ಸಾಹ ದೊರೆತು ಕಲಿಕೆಗೆ ಮತ್ತಷ್ಟು ಉತ್ತೇಜನಕಾರಿಯಾಯಿತು ಮತ್ತು ಅವರು ಮಾಡುವ ಕಾರ್ಯಗಳನ್ನು ಪ್ರಯೋಗದ ಮೂಲಕ ಎಲ್ಲರಿಗೂ ತೋರಿಸಲಾಯಿತು .
Ward office
Post office
ಪ್ರಸ್ತುತ ಜೀವನದಲ್ಲಿ ಅಂಚೆ ಕಚೇರಿಯ ವ್ಯವಹಾರ ಮತ್ತು ವಹಿವಾಟನ್ನು ತಿಳಿದುಕೊಳ್ಳುವುದು ಮಹತ್ವದ್ದಾಗಿದೆ. ಪಠ್ಯಕ್ರಮದ ಪಾಠದ ಜೊತೆ ಪ್ರತ್ಯಕ್ಷವಾಗಿ ಅಂಚೆಕಚೇರಿಯ ಕಾರ್ಯಚಟುವಟಿಕೆಗಳನ್ನು ಪರಿಚಯ ಮಾಡಿಸುವ ಉದ್ದೇಶದಿಂದ 'ಶಿಕ್ಷಕರ ಕಲಿಕಾ ಸಮೂದಾಯದಡಿಯಲ್ಲಿ 'ವಿದ್ಯುನ್ಮಾನ ಕಥಾ ಪ್ರಸ್ತುತಿ ಕಾರ್ಯಕ್ರಮ'ವನ್ನು ಹಮ್ಮಿಕೊಂಡು ನಮ್ಮ ಶಾಲೆಗೆ ಪಕ್ಕದಲ್ಲಿರುವ ಜಯನಗರದ ಅಂಚೆ ಕಚೇರಿಗೆ ಭೇಟಿ ನೀಡಿದ ನಮ್ಮ ಅನುಭವ ಮತ್ತು ಅನಿಸಿಕೆಯನ್ನು ವಿದ್ಯುನ್ಮಾನ ಕಥಾ ಪ್ರಸ್ತುತಿಯ ಮೂಲಕ ಹಂಚಿಕೊಳ್ಳಲಾಯಿತು.ಕುತೂಹಲಕಾರಿಯಾದ ಅಂಚೆರವಾನೆ,ಶೀಘ್ರ ಅಂಚೆ,ವಿದೇಶಿ ಹಣದ ರವಾನೆ ಅಂಚೆ ATM,ವಿವಿಧ ಸೌಲಭ್ಯಗಳು ಮೊದಲಾದವುಗಳ ನೈಜ ಕಲಿಕೆಯ ಪರಿಣಾಮವಾಗಿ ಮಕ್ಕಳಲ್ಲಿ ಆತ್ಮವಿಶ್ವಾಸ,ಸಮಾಜದ ಜೊತೆಗಿನ ಒಡನಾಟ,ಸಂಘಟನಾ ಕೌಶಲ,ಪರಸ್ಪರ ಚರ್ಚೆ, ಮೊದಲಾದ ಪ್ರಕ್ರಿಯೆಗಳಿಗೆ ಪ್ರೋತ್ಸಾಹ ದೊರೆತು ಕಲಿಕೆಗೆ ಮತ್ತಷ್ಟು ಉತ್ತೇಜನಕಾರಿಯಾಗಿದೆ