GHS Honagera, Anganwadi
Objective of visit
Discussions with Angandwadi team
ದಿನಾಂಕ : 29-01-2014
Digital story telling ಕಾರ್ಯಕ್ರಮದ ಅಡಿಯಲ್ಲಿ 9 ನೇ ತರಗತಿಯ 10 ಮಕ್ಕಳ ತಂಡವನ್ನು ಸರಕಾರಿ ಪ್ರೌಢಶಾಲೆ ಹೊನಗೇರಾ ತಾ|| ಜಿ|| ಯಾದಗಿರಿ ಹಾಗೂ ಇಬ್ಬರು ಸಹ ಶಿಕ್ಷಕರಾದ ಶ್ರೀ ಮಹಾವೀರ ಶ್ರೀ. ಅಶೋಕ ಸರ್ ರವರು ಈ ದಿನ ಅಂಗನವಾಡಿ ಶಾಲಾ ಕೇಂದ್ರಕ್ಕೆ ಬೇಟಿ ನೀಡಿ ಮಾಹಿತಿ ಸಂಗ್ರಹಣೆ ಮಾಡಿದ್ದೇವೆ.
ಅಂಗನವಾಡಿ ಶಾಲಾ ಕೇಂದ್ರದ ಸಂಖ್ಯೆ-4 ಶಾಲಾ ಶಿಕ್ಷಕರ ಹೆಸರು ಶ್ರೀಮತಿ. ಶಶಿಕಲಾ ಹಾಗೂ ಖಾಜಾಬಿ ಎಂಬವರು ಅಂಗನವಾಡಿ ಶಾಲಾ ಕೇಂದ್ರದಲ್ಲಿ ಉಪಸ್ಥಿತರಿದ್ದರು. ಇವರಿಂದ ಅಂಗನವವಾಡಿ ಶಾಲಾ ಕೇಂದ್ರಕ್ಕೂ, ಊರಿನ ಸಮುದಾಯಕ್ಕು ಹಾಗೂ ಇನ್ನಿತರ ಸಂಘ ಸಂಸ್ಥೆಗಳಿಗೆ ಯಾವ ರೀತಿ ಸಂಬಂದವಿದೆ ಎಂದು ತಿಳಿದುಕೊಂಡೆವು.
ಅಂಗನವಾಡಿ ಶಾಲಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುವವರ ಸಂಖ್ಯೆ 2 ಶಾಲಾ ಪ್ರಾರಂಬವಾಗುವ ಸಮಯ ಬೆಳಿಗ್ಗೆ 9.00 ರಿಂದ 4.00 ರ ವರೆಗೆ ಬೆಳಿಗ್ಗೆ ಸಹಾಯಕಿಯಾದ ಖಾಜಾಬಿಯವರು ಮನೆ ಮನೆಗೆ ಹೋಗಿ ಮಕ್ಕಳನ್ನು ಶಾಲೆಗೆ ಕರೆತರುವ ಕೆಲಸ ನಿರ್ವಹಿಸುವಳು. ಹಾಗೇ 4 ಗಂಟೆ ಶಾಲೆ ಮುಗಿದ ನಂತರ ಮನೆಮನೆಗೆ ಮಕ್ಕಳನ್ನು ಹಿಂದಿರುಗುಸುವ ಕಾರ್ಯನಿರ್ವಹಿಸುವಳು.
ಅಂಗನವಾಡಿ ಶಾಲಾ ಕೇಂದ್ರದಲ್ಲಿ ದಾಖಾಲಾತಿಯಾದ ಮಕ್ಕಳ ಸಂಖ್ಯೆ 45 ಆದರೆ ಈ ದಿನ ಮಕ್ಕಳ ಹಾಜರಾದವರ ಸಂಖ್ಯೆ 20 ಜನ.
ಮಕ್ಕಳಿಗೆ ಆಹಾರ ನೀಡುವ ವೇಳಾಪಟ್ಟಿ ವಿವರ ಈ ಕೆಳಗಿನಂತಿದೆ.
ಬೆಳಿಗ್ಗೆ ಮದ್ಯಾಹ್ನ(ಅಲ್ಪ ವಿರಾಮದಲ್ಲಿ) ಮದ್ಯಾಹ್ನ (ದೀರ್ಘ ವಿರಾಮ) ಸೋಮವಾರ ಹಾಲು ಗೋಧಿ ಸಜ್ಜಕ ಉಪ್ಪಿಟ್ಟು ಮಂಗಳವಾರ - ಮೊಳಕೆಕಾಳು ಬುಧವಾರ ಹಾಲು ಗೋಧಿ ಸಜ್ಜಕ ಗುರುವಾರ - ಶುಕ್ರವಾರ - ಮೊಳಕೆಕಾಳು ಶನಿವಾರ - ರವಿವಾರ -------------------------- ರಜೆ ದಿನ --------------------------
ಶಾಲೆಯಲ್ಲಿ ಮಕ್ಕಳಿಗೆ ದಿನಾಲು ಆಹಾರ ನಿಡುವುದರ ಜೊತೆಗೆ ಮನೆಗೆ ಆಹಾರ ಸರಬರಾಜು ಮಾಡುತ್ತಾರೆ.
6 ತಿಂಗಳಿಂದ ಮೂರು ವರ್ಷದ ಮಕ್ಕಳಿಗೆ 3 ಕೆ.ಜಿ ಸಿಹಿ ಅನ್ನ ಪಾಕೇಟ್+ ಹಾಲಿನ ಪೌಡರ್ ಅರ್ಧ ಕೆ.ಜಿ + 180 ಗ್ರಾಂ ಬೆಲ್ಲಾ + 120 ಗ್ರಾಂ ಸಕ್ಕರೆ.
ವೀಕ್ ಇರುವ ಮಕ್ಕಳಿಗೆ | ಅರ್ಧ ಕೆ.ಜಿ. ಶೇಂಗಾ +ಅರ್ಧ ಕೆಜಿ ಬೆಲ್ಲಾ +ಅರ್ಧ ಕೆ.ಜಿ ಪೌಡರ್+ 180 ಗ್ರಾಂ ಸಕ್ಕರೆ
ಅಂಗನವಾಡಿ ಕೇಂದ್ರದಿಂದ 16 ಜನ ಗರ್ಭೀಣಿಯರಿಗೆ ಮತ್ತು 13 ಜನ ಬಾಣಂತಿಯರಿಗೆ ಸಹ ಆಹಾರದ ವ್ಯವಸ್ಥೆ ಮಾಡುತ್ತಿದೆ. ಗರ್ಭೀಣಿಯರಿಗೆ - 3kg ಗೋಧಿ + ಅರ್ಧ ಕೆ.ಜಿ. ಬೆಲ್ಲಾ + ಅರ್ಧ ಕೆ.ಜಿ ಶೇಂಗಾ + 350 ಗ್ರಾಂ ತೊಗರಿಬೇಳೆ. ಬಾಣಂತಿಯರಿಗೆ - 3 kg ಗೋಧಿ + ಅರ್ಧ ಕೆ.ಜಿ ಬೆಲ್ಲಾ + ಅರ್ಧ ಕೆ.ಜಿ. ಶೇಂಗಾ + 350 ಗ್ರಾಂ ತೊಗರಿಬೇಳೆ. ಈ ಎಲ್ಲಾ ಆಹಾರ ಪದಾರ್ಥಗಳು ಮಹಿಳಾ ಮತ್ತು ಮಕ್ಕಳ ಶ್ರೀ. ಎಸ್.ಎಮ್. ನಿಷ್ಟಿ ಈ ಇಲಾಖೆಯ ಸಚಿವರ ಹೆಸರು ಶ್ರೀಮತಿ. ಉಮಾಶ್ರೀ ಯವರು. ಅಂಗನವಾಡಿ ಶಾಲಾ ಕೇಂದ್ರಕ್ಕೂ ಗ್ರಾಮ ಪಂಚಾಯತಿಯಿಂದ ಕೂಡಾ ಸಹಾಯವಿದೆ. ರೋಜಗಾರ ಯೋಜನೆಯಲ್ಲಿ ಅಂಗನವಾಡಿ ಶಾಲಾ ಕೇಂದ್ರ ನಿರ್ಮಾಣವಾಗಿದೆ. ದಿನಾಂಕ : 01-08-2006 ರಂದು ಪ್ರಾರಂಭವಾಗಿದೆ. ಇನ್ನಿತರ ಸಂಘ ಸಂಸ್ಥೆಗಳಾದ ದೇವರ ದ್ಯಾವಮ್ಮ, ಸ್ತ್ರೀಶಕ್ತಿ ಸಂಘ, ಗದ್ದೆ ಲಕ್ಷ್ಮಿ, ಗಿರಿಲಿಂಗಮ್ಮ , ಭಾಗ್ಯಶ್ರೀ, ಭಾಗ್ಯವಂತಿ, ಸರಸ್ವತಿ ಮೈಲಾರಲಿಂಗೇಶ್ವರಿ ಇತ್ಯಾದಿ. ಇವುಗಳಿಂದ ವಿಶೇಷ ದಿನಗಳಾದ ಅಂದರೆ ರಾಷ್ಟ್ರೀಯ ಹಬ್ಬಗಳಾದ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವದಂದು ಹಾಲು ಮತ್ತು ಮೊಟ್ಟೆ ಸಿಹಿ ಮತ್ತು ಖಾರ ಕೊಡುತ್ತಾರೆ. ಅಲ್ಲದೇ ಹೊಲಿಗೆಯಂತ್ರ ಕಸತಿ ಕೆಲಸ ನೀಡುವುದು.
ಅಂಗನವಾಡಿ ಶಾಲಾ ಕೇಂದ್ರದಿಂದ ಮಕ್ಕಳಿಗೆ ಶಾಲೆ ಪೂರ್ವ ಶಿಕ್ಷಣ, ದೈಹಿಕ ಬೆಳವಣಿಗೆ, ಗ್ರಹಣ ಶಕ್ತಿ ವಿಕಾಸ, ಭಾವನಾತ್ಮಕ ಬೆಳವಣಿಗೆ, ಸಾಮಾಜಿಕ ಬೆಳವಣಿಗೆ ಈ ಹಂತಗಳ ಮೂಲಕ ಶಿಕ್ಷಣ ನಿಡುತ್ತಾರೆ.
ಪಕ್ಷಿಗಳು ಹಣ್ಣುಗಳು, ಅಕ್ಷರ ಜ್ಞಾನ, A to Z ಚಾರ್ಟ್ ಮೂಲಕ ಶಿಕ್ಷಣ ನಿಡುವುದು. ಬ್ಯಾಟ್, ಬಾಲ್ , ಸ್ಲೇಟ್ , ಪೆನಿಸಿಲ್, ಆಟಿಕೆಗಳ ಮೂಲಕ ಶಿಕ್ಷಣ ನೀಡುವುದು. ಹೊನಗೇರಾದಲ್ಲಿ ಒಟ್ಟು 6 aಅಂಗನವಾಡಿ ಶಾಲಾ ಕೇಂದ್ರಗಳಿವೆ ಹಾಗೂ 12 ಜನ ಸಿಬ್ಬಂದಿ ವರ್ಗದವರಿದ್ದಾರೆ.
ಅಂಗನವಾಡಿ ಶಾಲಾ ಕೇಂದ್ರ - ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಸಹಾಯವಿದೆ. ಡಾಕ್ಟರರವರಿಂದ ತಿಂಗಳಿಗೊಮ್ಮೆ ಮಕ್ಕಳಿಗೆ , ಗರ್ಬೀಣಿ ಮತ್ತು ಬಾಣಂತಿಯವರಿಗೆ ತಪಾಸಣೆ ನಿಡುತ್ತಾರೆ.
ಅಂಗನವಾಡಿ ಶಾಲಾ ಕೇಂದ್ರದಿಂದ ಭಾಗ್ಯಲಕ್ಷ್ಮೀ ಯೋಜನೆಗೆಯಿಂದ ಒಂದು ಲಕ್ಷ ಧನ ಸಹಾಯವಿದೆ. ಈ ಕೇಂದ್ರದಿಂದ 85 ಜನ ಮಕ್ಕಳು ಈ ಯೋಜನೆಯ ಸಹಾಯ ಪಡೆದಿದ್ದಾರೆ. ಈ ಭಾಗ್ಯಲಕ್ಷ್ಮೀ ಯೋಜನೆಯಿಂದ 18 ವರ್ಷದ ನಂತರ ಧನ ಪಡೆಯಬಹುದು. ಆ ಮಗು ಕನಿಷ್ಠ 10 ನೇ ತರಗತಿ ಓದಿರಬೇಕು. ಅಲ್ಲದೇ ಬಾಲಕಿ ಸಮೃದ್ಧಿ ಯೋಜನೆಯೊಂದ ಕಡು ಬಡ ಮಕ್ಕಳಿಗೆ ತಿಂಗಳಿಗೆ 50/- ಯಂತೆ ನೀಡುತ್ತಾರೆ.
ಅಲ್ಲದೇ ಅಂಗನವಾಡಿ ಶಾಲಾ ಕೇಂದ್ರದಿಂದ ಸಾಕಷ್ಟು ಸವಲಭ್ಯಗಳು ಮಕ್ಕಳು ಪಡೆಯಬಹುದು. ಇಷ್ಟು ಮಾಹಿತಿಯನ್ನು ನೀಡಿದ ಶ್ರೀಮತಿ. ಶಶಿಕಲಾ ಶಿಕ್ಷಕರಿಗೆ ಧನ್ಯವಾದಗಳು ಹೇಳುತ್ತೇನೆ. ಅಲ್ಲದೇ ಕಲಿಕೆ ಕೇಂದ್ರದ ಸಿಬ್ಬಂದಿಯವರಿಗೆ ಧನ್ಯವಾದಗಳು ಹೇಳುತ್ತೇನೆ.
Learnings
Album
Videos