GHS Honagera Panchayat office
Objective of visit
Discussions with Panchayat team
- ಡಿಜಿಟೆಲ್ ಸ್ಟೋರಿ ಟೆಲ್ಲಿಂಗ್ ಕಾರ್ಯಕ್ರಮ :
ಈ ಕಾರ್ಯಕ್ರಮದ ಅಡಿಯಲ್ಲಿ 9ನೇ ತರಗತಿಯ 10 ಮಕ್ಕಳ ಒಂದು ತಂಡವನ್ನು ಹೊನಗೇರಿಯ ಗ್ರಾಮ ಪಂಚಾಯತಿಗೆ ಕರೆದುಕೊಂಡು ಹೋಗಲಾಯಿತು. ಈ ಮಕ್ಕಳ ಜೊತೆ ಸರಕಾರಿ ಪ್ರೌಢ ಶಾಲೆ, ಹೊನಗೇರಾ ಈ ಶಾಲೆಯ ಸಮಾಜ ವಿಜ್ಞಾನ ಶಿಕ್ಷಕಿಯಾದ ಶ್ರೀಮತಿ. ಗೌರಮ್ಮ ಹಾಗೂ ಕಲಿಕಾ ಕೇಂದ್ರದ ಸಿಬ್ಬಂದಿಯಾದ ಶ್ರೀ. ಯೋಗೇಶ್ ಇವರು ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.. ಈ ತಂಡದ ಮಕ್ಕಳನ್ನು ಗ್ರಾಮ ಪಂಚಾಯಿತಿಗೆ ಕರೆದುಕೊಂಡು ಹೋಗಿ ಗ್ರಾಮ ಪಂಚಾಯಿತಿಯ ರಚನೆ, ಗ್ರಾಮ ಪಂಚಾಯಿತಿಯ ಉದ್ದೇಶಗಳು ಹಾಗೂ ಕಾರ್ಯಗಳ ಬಗ್ಗೆ ಮಕ್ಕಳು ಅನೆಕ ಪ್ರಶ್ನೆಗಳನ್ನು ಕೇಳುವ ಮೂಲಕ ಮಾಹಿತಿಯನ್ನು ಪಡದುಕೊಂಡರು. ಮಕ್ಕಳು ಮಾಹಿತಿಯ ಜೊತೆಯಲ್ಲಿಯೇ ಛಾಯಚಿತ್ರಗಳನ್ನು ತೆಗೆಯುವ ಮೂಲಕ ಮಾಹಿತಿಯನ್ನು ಕಲೆಹಾಕಿದರು. ಅಲ್ಲದೆ ಗ್ರಾಮ ಮತ್ತು ಶಾಲೆಗೆ ಇರುವ ನಿಕಟ ಸಂಬಂಧವೇನು? ಎಂಬುದರ ಬಗ್ಗೆ ತಿಳಿದುಕೊಂಡರು ಹಾಗೂ ಗ್ರಾಮ ಪಂಚಾಯಿತಿಯಲ್ಲಿ ಇರುವ ಸಮಸ್ಯೆಗಳ ಬಗ್ಗೆಯು ಮಕ್ಕಳು ಮಾಹಿತಿಯನ್ನು ಸಂಗ್ರಹಿಸಿದರು. ಹಾಗೆಯೇ ಗ್ರಾಮ ಪಂಚಾಯತಿಯಲ್ಲಿ ಇರುವ ಸಮಿತಿಗಳಾದ ಸೌಕರ್ಯ ಸಮೀತಿ, ಉತ್ಪನ್ನ ಸಮಿತಿ, ಹಾಗೂ ಸಾಮಾಜಿಕ ನ್ಯಾಯ ಸಮಿತಿಯ ಬಗ್ಗೆ ಮಾಹಿತಿ ಪಡೆದರು. ಗ್ರಾಮ ಪಂಚಾಯತಿಯ ಹೊಸ ಯೋಜನೆಗಳಾದ ಕುರಿದನಗಳ ದೊಡ್ಡಿ, ಆಟದ ಮೈದಾನ, ಕೌಶಲ್ಯಾಭಿವೃದ್ದಿ, ರೈತರ ಭೂ ಅಭಿವೃದ್ದಿ, ಸ್ಮಶಾನಾಭಿವೃದ್ಧಿ, ಮನೆಗೊಂದು ಶೌಚಾಲಯ ಈ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಹಾಗೆಯೇ ಗ್ರಾಮ ಪಂಚಾಯತಿಯ ಒಟ್ಟು ಸಿಬ್ಬಂದಿಗಳ ಸಂಖ್ಯೆ 10 ಒಬ್ಬರು PDO ಇಬ್ಬರು ಕರವಸೂಲಿಗಾರರು 5 ಜನ ಪಂಪ ಅಪರೇಟರ್, ಒಬ್ಬರು ಕಂಪ್ಯೂಟರ್ ಅಪರೇಟರ್ ಹಾಗೂ ಒಬ್ಬರು ಸಿಪಾಯಿ, ಈ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಮಾಹಿತಿ ತಿಳಿಯಿತು. ಗ್ರಾಮ ಪಂಚಾಯಿತಿಯ ರಚನೆಯಲ್ಲಿ ಇದರಲ್ಲಿ ಒಟ್ಟು 20 ಜನ ಸದಸ್ಯರಿದ್ದಾರೆ. 11 ಜನ ಪುರುಷ ಸದಸ್ಯರು 9 ಜನ ಮಹಿಳಾ ಸದಸ್ಯರು ಇದ್ದಾರೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಸದಸ್ಯರ ಸಂಖ್ಯೆ 6 ಜನ ಇದರಲ್ಲಿ ಒಬ್ಬರು ಅದ್ಯಕ್ಷರು (ಗಂಗಮ್ಮ ಎಸ್. ಹೊಸಳ್ಳಿ ) ಮತ್ತೊಬ್ಬರು ಉಪಾಧ್ಯಕ್ಷರು (ಸಾಬಣ್ಣ ಕೆ. ಶಹಾಪುರ ) ಇದ್ದಾರೆ.
ಗ್ರಾಮ ಪಂಚಾಯತಿಯ ಕಾರ್ಯಗಳು : ಸಿ.ಸಿ ರಸ್ತೆಗಳ ನಿರ್ಮಾಣ ಕುಡಿಯುವ ನೀರಿನ ವ್ಯವಸ್ಥೆ ಚರಂಡಿ ವ್ಯವಸ್ಥೆ ಶೌಚಾಲಯದ ನಿರ್ಮಾಣ ಬೀದಿ ದೀಪಗಳು ಗ್ರಂಥಾಲಯಗಳ ವ್ಯವಸ್ಥೆ ಶಾಲೆಗೆ ಸಂಬಂಧಿಸಿದ ಕಟ್ಟಡಗಳ ನಿರ್ಮಾಣ ಪರಿಸರದ ಸ್ವಚ್ಛತೆ ಇತರ ಕಾರ್ಯಗಳು. ಈ ಕಾಮಗಾರಿಗಳನ್ನು ಮಹಾತ್ಮಗಾಂಧಿ ಯೋಜನೆ ಅಡಿಯಲ್ಲಿ ಮಾಡಲಾಗುತ್ತದೆ ಎಂಬುದರ ಬಗ್ಗೆ ಮಾಹಿತಿಯನ್ನು ಪಡೆಯಲಾಯಿತು. ಗ್ರಾಮ ಪಂಚಾಯಿತಿಯ ಸಂದೇಶವೇನೆಂದರೆ ಮಕ್ಕಳಿಗೆ ಅವರು ಊರನ್ನು ಸ್ವಚ್ಛವಾಗಿಡಲು ಮತ್ತು ಎಲ್ಲಾ ತೆರಿಗೆಗಳನ್ನು ಪಾಔರಿಸುವಂತೆ ಪೋಷಕರಿಗೆ ಹೇಳಲು ತಿಳಿಸಿದರು. ಒಟ್ಟಾರೆಯಾಗಿ ಈ ಕಾರ್ಯಕ್ರಮವು ಅಚ್ಚುಕಟ್ಟಾಗಿ ನಡೆಯಿತು.