STF 2014-15 Uttara Kannada
19 districts
Mathematics
Batch 1
Agenda
If district has prepared new agenda then it can be shared here
See us at the Workshop
09/12/2014 to 13/12/2014
Workshop short report
Upload workshop short report here (in ODT format), or type it in day wise here
1st Day. 09/12/2014
ಉತ್ತರ ಕನ್ನಡ ಜಲ್ಲೆಯ ಗಣಿತ ಶಿಕ್ಷಕರ STFತರಬೇತಿಯು ಡಯಟ ಕುಮಟಾದಲ್ಲಿ ದಿ:09/12/2014 ರಂದು ಪ್ರಾರಂಭವಾಯಿತು. ಎಲ್ಲ ಶಿಬಿರಾಥಿ೯ಗಳು ಮುಂಜಾನೆ 9:30ಕ್ಕೆ ಸರಿಯಾಗಿ ತರಬೇತಿಗೆ ಹಾಜರಾದರು. ತರಬೇತಿಯ ಸಂಯೋಜಕರಾದ ಶ್ರೀಮತಿ ತ್ರಿವೇಣಿ ನಾಯಕ, ಉಪನ್ಯಾಸಕರು ಡಯಟ್ ಕುಮಟ ಇವರು ಉಪಸ್ಥಿತರಿದ್ದು ಶಿಬಿರಾಥಿ೯ಗಳನ್ನು ಸ್ವಾಗತಿಸಿ ಕಾಯ೯ಕ್ರಮದ ರೋಪುರೇಷೆಗಳನ್ನು ತಿಳಿಸಿದರು. ಶ್ರೀಮತಿ ರೇಖಾ ನಾಯಕ ಉಪನ್ಯಾಸಕರು ಡಯಟ್ ಕುಮಟ ಇವರು ಶಿಬಿರಾಥಿ೯ಗಳನ್ನು ಉದ್ದೇಶಿಸಿ ಈ ತರಬೇತಿಯ ಪ್ರಯೋಜನವನ್ನು ಶಿಕ್ಷಕರು ಪಡೆದು ವಿದ್ಯಾಥಿ೯ಗಳಿಗೆ ಶೈಕ್ಷಣಿವಾಗಿ ಅನುಕೂಲಿಸಬೇಕಾಗಿ ಸಲಹೆ ನೀಡಿದರು. ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಗಣಪತಿ ಕೊಡ್ಲೆಕೆರೆಯವರು STF ನ ಪರಿಚಯ , ubuntu ತಂತ್ರಾಂಶದ ಬಳಕೆ ಹಾಗೂ ವಿಶೇಷತೆಗಳ ಕುರಿತು ಮಾಹಿತಿ ನೀಡಿದರು. ಇನ್ನೋವ೯ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪ್ರಕಾಶ್ ಶೆಟ್ಟಿಯವರು ಹೊಸ folder ನ್ನು ರಚಯಿಸುವುದು ಮತ್ತು file ಗಳಾನ್ನು ಸಂಗ್ರಹಿಸಿ folder ನಲ್ಲಿ ಇರಿಸುವದು, Libre office writer tools, ಕನ್ನಡ ಹಾಗೂ ಇಂಗ್ಲಿಷ್ typing ಕುರಿತು ತಿಳಿಸಿದರು. ನಂತರ ಶಿಬಿರಾಥಿ೯ಗಳು file ಹಾಗೂ folder ರಚಿಸುವದನ್ನು,type ಮಾಡುವುದನ್ನು ರೂಡಿಸಿಕೊಂಡರು.
2nd Day. 10/12/2014
ಬೆಳಿಗ್ಗೆ 9:30ಕ್ಕೆ ಸರಿಯಾಗಿ ಪ್ರಾರಂಭವಾಯಿತು. ಪ್ರಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪ್ರಕಾಶ ಶೆಟ್ಟಿಯವರು, Save ಮತ್ತು Save As ಗಳ ವ್ಯತ್ಯಾಸ ,Email ಕಳಿಸುವುದು ಮತ್ತು ಸ್ವೀಕರಿಸುವುದು ಹಾಗೂ ಅದನ್ನು ತೆರೆದು ವೀಕ್ಷಿಸುವುದರ ಕುರಿತು ಮಾಹಿತಿ ನೀಡಿದರು.ಎಲ್ಲ ಶಿಬಿರಾಥಿ೯ಗಳು Email ಕಳಿಸುವುದು ಹಾಗೂ ಸ್ವೀಕರಿಸುವುದನ್ನು ರೂಢಿಸಿಕೊಂಡರು.ನಂತರ ಇನ್ನೋವ೯ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಗಣಪತಿ ಕೊಡ್ಲೆಕೆರೆಯವರು free mind ಎಂಬ tool ನ್ನು ಪರಿಚಯಿಸಿ, ಅದನ್ನು ಉಪಯೋಗಿಸುವ ವಿಧಾನದ ಪ್ರಾತ್ಯಕ್ಷಿಕೆ ನೀಡಿದರು. ಎಲ್ಲ ಶಿಬಿರಾಥಿ೯ಗಳು ವಿವಿಧ ಘಟಕಗಳಿಗೆ ಸಂಬಂಧಿಸಿದ mindmap ನ್ನ್ನು ರಚಿಸಿದರು. ಮಧ್ಯಾಹ್ನದ ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪ್ರಶಾಂತ ನಾಯಕ ಹಾಗೂ ಶ್ರೀ ಗೋಪಿನಾಥ ನಾಯ್ಕ ಅವರು GeoGebra tools ಗಳನ್ನು ಪರಿಚಯಿಸಿ, tools ಗಳನ್ನು ಉಪಯೋಗಿಸುವ ಪ್ರಾಥಮಿಕ ಜ್ಞಾ ನ ದ ಕುರಿತು ಪ್ರಾತ್ಯಕ್ಷಿಕೆ ನೀಡಿದರು . ನಂತರ ಎಲ್ಲ ಶಿಬಿರಾಥಿ೯ಗಳು ಇದನ್ನು ರೂಢಿಸಿಕೊಂಡರು.ಮಧ್ಯಾಹ್ನದ ಅವದಿಯಲ್ಲಿ ಶಿಬಿರಾಥಿ೯ಗಳು participant forms ನ್ನು ಭತಿ೯ ಮಾಡಿದರು. ನಂತರ ಸಂಪನ್ಮೂಲ ವ್ಯಕ್ತಿಗಳಾದ ಗಣಪತಿ ಕೊಡ್ಲೆಕೆರೆ ಮತ್ತು ಪ್ರಕಾಶ್ ಶೆಟ್ಟಿಯವರು ಅಂತಜಾ೯ಲ, ವೆಬ್ ಬ್ರೌಸರ್, ಸಚ್೯ ಎಂಜಿನ್, ಎಡ್ರೆಸ್ ಬಾರ್ ಕುರಿತು ಮಾಹಿತಿ ಹಾಗೂ Email Id ರಚಿಸುವ ವಿಧಾನವನ್ನು ಪ್ರಾತ್ಯಕ್ಷಿಕೆಯ ಮೂಲಕ ಪ್ರದಶಿ೯ಸಿದರು. ನಂತರ ಎಲ್ಲ ಶಿಬಿರಾಥಿ೯ಗಳ Email Id ಯನ್ನು ತೆರೆಯಲಾಯಿತು.
3rd Day. 11/12/2014
ಮೂರನೇ ದಿನದ STFತರಬೇತಿಯು 9:30ಕ್ಕೆ ಆರಂಭವಾಯಿತು. ಪ್ರಾರಂಭದಲ್ಲಿ ಶ್ರೀ ಪ್ರಕಾಶ್ ಶೆಟ್ಟಿಯವರು , Hyperlink ಕೊಡುವುದು, Web address ನ್ನು Saveಮಾಡಿ Hyperlink ಕೊಡುವುದು, ಅಂತಜಾ೯ಲದಿಂದ Image saveಮಾಡಿ Hyperlink ಕೊಡುವುದರ ಬಗ್ಗೆ ಮಾಹಿತಿ ನೀಡಿದರು. ನಂತರ ಸಂಪನ್ಮೂಲ ವ್ಯಕ್ತಿಗಳಾದ ಶೀ ಗಣಪತಿ ಕೊಡ್ಲಕೆರೆಯವರು Koer ಉಪಯುಕ್ತ ವೆಬ್ ತಾಣಗಳ ಪರಿಚಯದ ಸಂಪೂಣ೯ ಮಾಹಿತಿ ನೀಡಿದರು. ಶಿಬಿರಾಥಿ೯ಗಳು Hyperlink ನೀಡುವುದನ್ನು ರೂಢಿಸಿಕೊಂಡು, Koerದ ಪರಿಚಯ ಮಾಡಿಕೊಂಡರು. ಮಧ್ಯಾನದ ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶೀ ಗೋಪಿನಾಥ ನಾಯ್ಕರವರು ಜಿಯೋಜಿಬ್ರಾದಲ್ಲಿ ಕೋನದ ರಚನೆಯ Toolನ್ನು Animationಸಹಿತ ರಚಿಸುವ ವಿಧಾನವನ್ನು ಪರಿಚಯಿಸಿದರು. ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪ್ರಶಾಂತ ನಾಯ್ಕರವರು ಬಹುಭುಜಾಕ್ರತಿಯನ್ನು animationಸಹಿತ ಪ್ರದಶಿ೯ಸುವ ವಿಧಾನದ ತಿಳುವಳಿಕೆ ನೀಡಿದರು.ನಂತರದಲ್ಲಿ ಎಲ್ಲ ಶಿಬಿರಾಥಿ೯ಗಳು ಇದನ್ನು ರೂಢಿಸಿಕೊಂಡರು.
4th Day. 12/12/2014
ಕುಮಟಾದ ಡಯಟನಲ್ಲಿ ನಡೆದ STF ಗಣಿತ ತರಬೇತಿಯ ನಾಲ್ಕನೇ ದಿನವಾದ ದಿ:12.12.2014 ರಂದು ಪ್ರಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಗಣಪತಿ ಕೊಡ್ಲಕೆರೆಯವರು KOER ತಾಣದಲ್ಲಿ ಹಳೆಯ ಮೇಲ್ ಗಳನ್ನು ವೀಕ್ಷಿಸುವುದು ಮತ್ತು KOER ನಲ್ಲಿ contribute ಮಾಡುವುದು, Email ಗೆ signature ಮಾಡುವುದುPicasa ದಲ್ಲಿ photo upload ಮಾಡುವುದುಮತ್ತು GIMP editing ಮಾಡುವ ವಿಧಾನಗಳ ಪ್ರಾತ್ಯಕ್ಷಿಕೆ ನೀಡಿದರು. ನಂತರ ಶಿಬಿರಾಥಿ೯ಗಳು ಪ್ರಾಯೋಗಿಕವಾಗಿ ರೂಢಿಸಿಕೊಂಡರು. ಮಧ್ಯಾಹ್ನದ ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪ್ರಕಾಶ ಶೆಟ್ಟಿಯವರು screenshot ಮತ್ತು ಗಣಿತದ ಉಪಯುಕ್ತ ವೆಬ್ಸೈಟ್ ಗಳು, ಮತ್ತು ಗಣಿತದ ಸಂಪನ್ಮೂಲ ಗ್ರಂಥಾಲಯ ತಯಾರಿಸುವುದರ ಕುರಿತು ಮಾಹಿತಿ ನೀಡಿದರು. ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪ್ರಶಾಂತ ನಾಯಕ ಹಾಗೂ ಶ್ರೀ ಗೋಪಿನಾಥ ನಾಯ್ಕ ಅವರು ನೇರ ಸಾಮಾನ್ಯ ಸ್ಪಶ೯ಕದ ರಚನೆ, Animation ಕೊಡುವುದರ ಸಂಪೂಣ೯ ಮಾಹಿತಿ ನೀಡಿದರು. ನಂತರ ಶಿಬಿರಾಥಿ೯ಗಳು ಇದನ್ನು ರೂಢಿಸಿಕೊಂಡರು.
5th Day. 13/12/2014
ಕುಮಟಾದ ಡಯಟ್ ನಲ್ಲಿ ನಡೆದ STF ಗಣಿತ ತರಬೇತಿಯ ಐದನೇ ದಿನವಾದ ದಿ:13.12.2014 ಂದು ಪ್ರಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಗಣಪತಿ ಕೊಡ್ಲಕೆರೆಯವರು ಗಣಿತದ ಸೂತ್ರಗಳನ್ನು ಬರೆಯುವ ವಿಧಾನವನ್ನು ತಿಳಿಸಿದರು. ನಂತರ ಶಿಬಿರಾಥಿ೯ಗಳು ಸೂತ್ರ ಬರೆಯುವುದನ್ನು ರೂಢಿಸಿಕೊಂಡರು. ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪ್ರಕಾಶ ಶೆಟ್ಟಿಯವರು PhET ಮತ್ತು stellarium tool ಗಳ ಕುರಿತು ಪ್ರಾತ್ಯಕ್ಷಿಕೆ ನೀಡಿ, ಗ್ರಹಗಳ ಮತ್ತು ಗ್ರಹಣಗಳ ವೀಕ್ಷಣೆಯ ಕುರಿತು ವಿಶೇಷ ವಿವರಗಳನ್ನು ನೀಡಿದರು. ನಂತರ ಶಿಬಿರಾಥಿ೯ಗಳು ಪ್ರಾಯೋಗಿಕವಾಗಿ ಇದನ್ನು ರೂಢಿಸಿಕೊಂಡರು. ಅಪರಾಹ್ನದ ಅವಧಿಯಲ್ಲಿ feedback form ನ್ನು ಶಿಬಿರಾಥಿ೯ಗಳು ತುಂಬಿ send ಮಾಡಿದರು. ಶಿಬಿರಾಥಿ೯ಗಳು ತರಬೇತಿ ಕುರಿತು ಅನಿಸಿಕೆಗಳನ್ನು ವ್ಯಕ್ತಪಡಿಸಿದರು.ತರಬೇತಿ ಸಂಯೋಜಕರಾದ ತ್ರಿವೇಣಿ ನಾಯಕ ಅವರು ತರಬೇತಿಯಲ್ಲಿ ಪಡೆದ ಜ್ಞಾನವನ್ನು ವಿಧ್ಯಾಥಿ೯ಗಳ ಶೈಕ್ಷಣಿಕ ಮಟ್ಟವನ್ನು ಹೆಚ್ಚಿಸಲು ಶಿಬಿರಾಥಿ೯ಗಳಿಗೆ ಮಾಗ೯ದಶ೯ನ ಮಾಡಿದರು.
Batch 2
Agenda
If district has prepared new agenda then it can be shared here
See us at the Workshop
Workshop short report
1st Day. 16/12/2014
ದಿನಾಂಕ 16/12/2014 ರಂದು ಬೆಳಿಗ್ಗೆ 9.30 ಕ್ಕೆ ಸರಿಯಾಗಿ ಡಯಟ್ ಕುಮಟಾದಲ್ಲಿ STF ಗಣಿತ ಶಿಕ್ಷಕರ ತರಬೇತಿಗೆ ಎಲ್ಲಾ ಶಿಬಿರಾರ್ಥಿಗಳು ಹಾಜರಾಗಿದ್ದರು.Resource person ಆಗಿ ಆಗಮಿಸಿದ ಶ್ರೀ ಪ್ರಶಾಂತ ನಾಯಕಯವರು ಬಂದ ಎಲ್ಲಾ ಶಿಬಿರಾರ್ಥಿಗಳನ್ನು ಹಾಗೂ ಡಯಟ್ ನ ಉಪನ್ಯಾಸಕರಾದ ಶ್ರೀಮತಿ ತ್ರಿವೇಣಿ ನಾಯಕರನ್ನು ಸ್ವಾಗತಿಸಿದರು ಹಾಗೂ ತರಬೇತಿಯ ಕುರಿತು ಪ್ರಾಸ್ತಾವಿಕ ಮಾತುಗಳನ್ನಾಡಿದರು.ಉಪನ್ಯಾಸಕರಾದ ಶ್ರೀಮತಿ ತ್ರಿವೇಣಿ ನಾಯಕರವರು ಮಾತನಾಡುತ್ತಾ, ಶಿಕ್ಷಕರಿಗೆ ತಮ್ಮ ಪಾಠದ ಯೋಜನೆಗೆ ಹಾಗೂ ಪಾಠದ ಬೆಳವಣಿಗೆಗೆ ಬೇಕಾದ ಹಲವಾರು ಅಂಶಗಳನ್ನು ಈ ತರಬೇತಿಯಲ್ಲಿ ಪಡೆದುಕೊಳ್ಳಬಹುದು. ಅಲ್ಲದೇ ನಮ್ಮ ರಾಜ್ಯದ ಯಾವುದೇ ಮೂಲೆಯಲ್ಲಿನ ಶಿಕ್ಷಕರ ಜೊತೆ STF ಮೂಲಕ ಸಂಪರ್ಕ ಸಾಧಿಸಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು ಎಂದು ಹೇಳಿದರು. ನಂತರ ಶ್ರೀಪ್ರಶಾಂತ ನಾಯಕ ಯವರು ತರಬೇತಿಯ ಆರಂಭದಲ್ಲಿ ಕಂಪ್ಯೂಟರ್ ನ on/off ಮಾಡುವುದು, ubuntu operating system ನಲ್ಲಿ application, places, menu bar, status bar,settings, ಹಾಗೂ joining report ನ್ನು ಕನ್ನಡದಲ್ಲಿ ಮತ್ತು englishನಲ್ಲಿ ಬರೆಯುವ ಬಗ್ಗೆ ತಿಳಿಸಿಕೊಟ್ಟರು.ಮದ್ಯಾಹ್ನದ ಅವಧಿಯಲ್ಲಿ ಶ್ರೀ ಗೋಪಿನಾಥ ನಾಯಕಯವರು ಹಾಗೂ ಶ್ರೀ ಗಣೇಶ ಹೆಗಡೆಯವರು inernet ಬಳಕೆಯ ಕುರಿತು ವಿವರವಾಗಿ ತಿಳಿಸಿಕೊಟ್ಟರು. ಅದರಲ್ಲಿ internet, web browser, gmail account ತೆರೆಯುವ ಬಗ್ಗೆ ಹಾಗೂ ಅದನ್ನು ಬಳಸುವ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು. ನಂತರ ಎಲ್ಲಾ ಶಿಬಿರಾರ್ಥಿಗಳು ಪ್ರಾಯೋಗಿಕವಾಗಿ email create ಮಾಡಿದರು. ಕೊನೆಯ ಅವಧಿಯಲ್ಲಿ ಶ್ರೀ ಪ್ರಶಾಂತ ನಾಯಕಯವರು ಹಾಗೂ ಶ್ರೀಗೋಪಿನಾಥ ನಾಯಕಯವರು ಹಾಗೂ ಶ್ರೀ ಗಣೇಶ ಹೆಗಡೆಯವರುmaths STF participant information form ತುಂಬುವುದನ್ನು ಹೇಳಿಕೊಟ್ಟು ಎಲ್ಲರಿಂದಲೂ form ತುಂಬಿಸಿದರು.
2nd Day. 17/12/2104
ರಡನೇ ದಿನದ ತರಬೇತಿ ದಿ:17.12.2014 ರಂದು ಬೆಳಿಗ್ಗೆ 9:30ಕ್ಕೆ ಸರಿಯಾಗಿ ಆರಂಭವಾಯಿತು. ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಗಣೇಶ ಹೆಗಡೆಯವರು Mail ಮಾಡುವುದು, file attach ಮಾಡುವುದು, ನಮಗೆ ಬಂದ mail ನ್ನು ನೋಡುವುದು ಇವುಗಳನ್ನು ವಿವರಿಸಿದರು. ಶಿಬಿರಾಥಿ೯ಗಳು ಇವೆಲ್ಲವನ್ನು ರೂಢಿಸಿಕೊಂಡರು. ಮಧ್ಯಾಹ್ನದ ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪ್ರಶಾಂತ ನಾಯ್ಕ ಅವರು free mind ಉಪಯೋಗಿಸಿ mapping ಮಾಡುವುದನ್ನು ತಿಳಿಸಿಕೊಟ್ಟರು, ಶಿಬಿರಾಥಿ೯ಗಳು ಇದನ್ನು ರೂಢಿಸಿಕೊಂಡರು. ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಗೋಪಿನಾಥ ನಾಯ್ಕ ಅವರು GeoGibra ಉಪಯೋಗಿಸಿ ಸರಳರೇಖೆ, ತ್ರಿಭುಜ ರಚನೆ, ಲಂಬರೇಖೆ, ವೃತ್ತರಚನೆ ಮಾಡುವುದನ್ನು ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಿಕೊಟ್ಟರು. ಶಿಬಿರಾಥಿ೯ಗಳು ಇದನ್ನು ರೂಢಿಸಿಕೊಂಡರು.ರಡನೇ ದಿನದ ತರಬೇತಿ ದಿ:17.12.2014 ರಂದು ಬೆಳಿಗ್ಗೆ 9:30ಕ್ಕೆ ಸರಿಯಾಗಿ ಆರಂಭವಾಯಿತು. ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಗಣೇಶ ಹೆಗಡೆಯವರು Mail ಮಾಡುವುದು, file attach ಮಾಡುವುದು, ನಮಗೆ ಬಂದ mail ನ್ನು ನೋಡುವುದು ಇವುಗಳನ್ನು ವಿವರಿಸಿದರು. ಶಿಬಿರಾಥಿ೯ಗಳು ಇವೆಲ್ಲವನ್ನು ರೂಢಿಸಿಕೊಂಡರು. ಮಧ್ಯಾಹ್ನದ ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪ್ರಶಾಂತ ನಾಯ್ಕ ಅವರು free mind ಉಪಯೋಗಿಸಿ mapping ಮಾಡುವುದನ್ನು ತಿಳಿಸಿಕೊಟ್ಟರು, ಶಿಬಿರಾಥಿ೯ಗಳು ಇದನ್ನು ರೂಢಿಸಿಕೊಂಡರು. ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಗೋಪಿನಾಥ ನಾಯ್ಕ ಅವರು GeoGibra ಉಪಯೋಗಿಸಿ ಸರಳರೇಖೆ, ತ್ರಿಭುಜ ರಚನೆ, ಲಂಬರೇಖೆ, ವೃತ್ತರಚನೆ ಮಾಡುವುದನ್ನು ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಿಕೊಟ್ಟರು. ಶಿಬಿರಾಥಿ೯ಗಳು ಇದನ್ನು ರೂಢಿಸಿಕೊಂಡರು.
3rd Day. 18/12/2014
ದಿನಾಂಕ 18/12/2014 ರಂದು ತರಬೇತಿಯ ಮೂರನೇ ದಿನದ ಅವಧಿಯು ಸರಿಯಾಗಿ ಬೆಳಿಗ್ಗೆ 9:30 ಕ್ಕೆ ಆರಂಭವಾಯಿತು. ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಗೋಪಿನಾಥ್ ನಾಯ್ಕ ಅವರು GeoGebra ಮುಂದುವರಿದ ಭಾಗವಾಗಿ angle measurment, angle animation, polygon animation ಗಳ ಬಗ್ಗೆ ಪ್ರಾತ್ಯಕ್ಷಿಕೆಗಳ ಮೂಲಕ ವಿವರಿಸಿದರು. ನಂತರ ಶಿಬಿರಾಥಿ೯ಗಳು ಅವೆಲ್ಲವನ್ನು ರೂಢಿಸಿಕೊಂಡರು. ಪ್ರಾಯೋಗಿಕ ಅವಧಿಯ ನಂತರ ಮತ್ತೋರ್ವ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಮಾಧುರಿ ಭಟ್ಟ ಅವರು text ಗೆ hyperlink ಕೊಡುವುದು ಮತ್ತು website link ನ್ನು save ಮಾಡಿ resource library ತಯಾರಿಸುವುದರ ಕುರಿತು ಹೇಳಿದರು. ನಂತರ ಶಿಬಿರಾಥಿ೯ಗಳು ಅವನ್ನು ರೂಢಿಸಿಕೊಂಡರು. ಮಧ್ಯಾಹ್ನದ ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪ್ರಶಾಂತ ನಾಯ್ಕ ಅವರು koer page open ಮಾಡುವುದು ಮತ್ತು ಅದರಲ್ಲಿರುವ resource ಗಳ ಬಳಕೆಯ ಬಗ್ಗೆ ವಿವರವಾಗಿ ತಿಳಿಸಿದರು. ನಂತರ ಶಿಬಿರಾಥಿ೯ಗಳು ಅದನ್ನು ರೂಢಿಸಿಕೊಂಡರು.
4th Day. 19/12/2014
ನಾಲ್ಕನೇ ದಿನದ ತರಬೇತಿಯು ದಿ:19/12/2014 ರಂದು ಬೆಳಿಗ್ಗೆ 9:30 ಗಂಟೆಗೆ ಸರಿಯಾಗಿ ಆರಂಭವಾಯಿತು. ಶಿಬಿರಾಥಿ೯ಗಳೆಲ್ಲ ತಮ್ಮ email check ಮಾಡಿದರು. ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಗಣಪತಿ ಕೊಡ್ಲಕೆರೆ ಅವರು ಬೆಳಿಗ್ಗಿನ ಎರಡು ಅವಧಿಗಳಲ್ಲಿ KOER ನಲ್ಲಿ contribute ಮಾಡುವುದು, new topic add ಮಾಡುವುದು, Picasa ದಲ್ಲಿ ಫೊಟೋ upload ಮಾಡುವುದು, GIMP editor ನಲ್ಲಿ ಫೊಟೊ edit ಮಾಡುವುದು ಮತ್ತು screenshot ಇವುಗಳ ಬಗ್ಗೆ ತಿಳಿಸಿಕೊಟ್ಟರು.ನಂತರ ಶಿಬಿರಾಥಿ೯ಗಳು ಇವೆಲ್ಲವನ್ನು ರೂಢಿಸಿಕೊಂಡರು. ಮಧ್ಯಾಹ್ನದ ಅವಧಿಯ ಪ್ರಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಗಣಪತಿ ಕೊಡ್ಲಕೆರೆ ಮತ್ತು ಶ್ರೀಮತಿ ಮಾಧುರಿ ಭಟ್ಟ ಅವರು practice session ನಲ್ಲಿ ಶಿಬಿರಾಥಿ೯ಗಳ ತೊಡಕುಗಳನ್ನು ನಿವಾರಿಸಿದರು. ನಂತರದ ಅವಧಿಯಲ್ಲಿ stellarium ನ ಪರಿಚಯವನ್ನು ಶ್ರೀ ಕೊಡ್ಲಕೆರೆ ಮಾಡಿಕೊಟ್ಟರು. ನಂತರ ಶಿಬಿರಾಥಿ೯ಗಳೆಲ್ಲ ಆಸಕ್ತಿಯಿಂದ stellarium software ಬಳಸುವುದನ್ನು ರೂಢಿಸಿಕೊಂಡರು.
Batch 3
Agenda
If district has prepared new agenda then it can be shared here
See us at the Workshop
22/12/2014 to 26/12/2014
Workshop short report
2nd Day.
ದಿನಾಂಕ 23/12/2014 ರಂದು ಬೆಳಿಗ್ಗೆ 9.30 ಕ್ಕೆ ಸರಿಯಾಗಿ ಡಯಟ್ ಕುಮಟಾದಲ್ಲಿ STF ಗಣಿತ ಶಿಕ್ಷಕರ ತರಬೇತಿಗೆ ಎಲ್ಲಾ ಶಿಬಿರಾರ್ಥಿಗಳು ಹಾಜರಾಗಿದ್ದರು. Resource person ಆಗಿ ಆಗಮಿಸಿದ ಶ್ರೀ.s.s.paiರವರು ಬಂದ ಎಲ್ಲಾ ಶಿಬಿರಾರ್ಥಿಗಳನ್ನು ಹಾಗೂ ಡಯಟ್ ನ ಉಪನ್ಯಾಸಕರಾದ ಶ್ರೀಮತಿ ರೇಖಾ ನಾಯಕರು ಸ್ವಾಗತಿಸಿದರು. ನಂತರ s.s.paiರವರು free mind ಮತ್ತು geogebra introduction ಕುರಿತು ಸವಿವರವಾಗಿ ತಿಳಿಸಿದರು.
3rd Day.
ದಿನಾಂಕ 24/12/2014 ರಂದು ಬೆಳಿಗ್ಗೆ 9.30 ಕ್ಕೆ ಸರಿಯಾಗಿ ಡಯಟ್ ಕುಮಟಾದಲ್ಲಿ STF ಗಣಿತ ಶಿಕ್ಷಕರ ತರಬೇತಿಗೆ ಎಲ್ಲಾ ಶಿಬಿರಾರ್ಥಿಗಳು ಹಾಜರಾಗಿದ್ದರು. Resource person ಆಗಿ ಆಗಮಿಸಿದ ಶ್ರೀ.ಗಣಪತಿ ಕೋಡ್ಲಕೇರಿರವರು ಬಂದ ಎಲ್ಲಾ ಶಿಬಿರಾರ್ಥಿಗಳನ್ನು ಹಾಗೂ ಡಯಟ್ ನ ಉಪನ್ಯಾಸಕರಾದ ಶ್ರೀಮತಿ ರೇಖಾ ನಾಯಕರು ಸ್ವಾಗತಿಸಿದರು. ನಂತರ ಗಣಪತಿ ಕೋಡ್ಲಕೇರಿ ರವರು koer,gimp editorಮತ್ತು geogebra ತಿಳಿಸಿದರು.
4th Day.
ದಿನಾಂಕ 25/12/2014 ರಂದು ಬೆಳಿಗ್ಗೆ 9.30 ಕ್ಕೆ ಸರಿಯಾಗಿ ಡಯಟ್ ಕುಮಟಾದಲ್ಲಿ STF ಗಣಿತ ಶಿಕ್ಷಕರ ತರಬೇತಿಗೆ ಎಲ್ಲಾ ಶಿಬಿರಾರ್ಥಿಗಳು ಹಾಜರಾಗಿದ್ದರು. Resource person ಆಗಿ ಆಗಮಿಸಿದ ಗೋಪಿನಾಥ ನಾಯ್ಕರವರು ಬಂದ ಎಲ್ಲಾ ಶಿಬಿರಾರ್ಥಿಗಳನ್ನು ಹಾಗೂ ಡಯಟ್ ನ ಉಪನ್ಯಾಸಕರಾದ ಶ್ರೀಮತಿ ರೇಖಾ ನಾಯಕರು ಸ್ವಾಗತಿಸಿದರು.ನಂತರ ಗೋಪಿನಾಥ ನಾಯ್ಕರವರು koer,gimp editorಮತ್ತು geogebra ತಿಳಿಸಿದರು.
5th Day.
ಐದನೆ ದಿನದ ತರಬೆೇತಿಯು ದಿ:26/12/2014 ರಂದು ಬೆಳಿಗ್ಗೆ 9.30 ಗಂಟೆಗೆ ಆರಂಭವಾಯಿತು.ಸ೦ಚಾಲಕರಾದ ಶ್ರೀಮತಿ ರೇಖಾನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪ್ರಶಾಂತ ನಾಯ್ಕ ಇವರು phet ಮತ್ತು formula typing ಅನ್ನು ತರಗತಿ ಕೋಣೆಯಲ್ಲಿ ಬೋಧಿಸಿದರು.ಶಿಬಿರಾರ್ಥಿಗಳು ಕೆಲವು ಸೂತ್ರಗಳನ್ನುtype ಮಾಡಿದರು. ನಂತರ ಎರಡನೆೇ ಅವಧಿಯಲ್ಲಿ direct common tangent ಅನ್ನು ರಚಿಸುವ ವಿಧಾನವನ್ನು ವಿವರಿಸಿದರು. ಶಿಬಿರಾರ್ಥಿಗಳು dct ಅನ್ನು ರಚಿಸಿದರು. ಮಧ್ಯಾಹ್ನದ ಅವಧಿಯಲ್ಲಿ ಶಿಬಿರಾರ್ಥಿಗಳು feed back form ಅನ್ನು ಭರ್ತಿ ಮಾಡಿದರು.ಕೊನೆಯಲ್ಲಿ ಸರಳಕಾರ್ಯಕ್ರಮದೊಂದಿಗೆ ತರಬೇತಿಯನ್ನುಮುಗಿಸಲಾಯಿತು.
Batch 4
Agenda
If district has prepared new agenda then it can be shared here
See us at the Workshop
29/12/2014 to 03/01/2015
Workshop short report
1st Day. 29/12/2014
ದಿನಾಂಕ 29/12/2014 ರಂದು ಬೆಳಿಗ್ಗೆ 9.30 ಕ್ಕೆ ಸರಿಯಾಗಿ ಡಯಟ್ ಕುಮಟಾದಲ್ಲಿ STF ಗಣಿತ ಶಿಕ್ಷಕರ ತರಬೇತಿಗೆ ಎಲ್ಲಾ ಶಿಬಿರಾರ್ಥಿಗಳು ಹಾಜರಾಗಿದ್ದರು. Resource person ಆಗಿ ಆಗಮಿಸಿದ ದೇವನ ಬಾಂದೇಕರ ರವರು ಬಂದ ಎಲ್ಲಾ ಶಿಬಿರಾರ್ಥಿಗಳನ್ನು ಹಾಗೂ ಡಯಟ್ ನ ಉಪನ್ಯಾಸಕರಾದ ಶ್ರೀಮತಿ ರೇಖಾ ನಾಯಕರು ಸ್ವಾಗತಿಸಿದರು ಹಾಗೂ ತರಬೇತಿಯ ಕುರಿತು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪನ್ಯಾಸಕರಾದ ಶ್ರೀಮತಿ ರೇಖಾ ನಾಯಕರವರು ಮಾತನಾಡುತ್ತಾ, ಶಿಕ್ಷಕರಿಗೆ ತಮ್ಮ ಪಾಠದ ಯೋಜನೆಗೆ ಹಾಗೂ ಪಾಠದ ಬೆಳವಣಿಗೆಗೆ ಬೇಕಾದ ಹಲವಾರು ಅಂಶಗಳನ್ನು ಈ ತರಬೇತಿಯಲ್ಲಿ ಪಡೆದುಕೊಳ್ಳಬಹುದು. ಅಲ್ಲದೇ ನಮ್ಮ ರಾಜ್ಯದ ಯಾವುದೇ ಮೂಲೆಯಲ್ಲಿನ ಶಿಕ್ಷಕರ ಜೊತೆ STF ಮೂಲಕ ಸಂಪರ್ಕ ಸಾಧಿಸಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು ಎಂದು ಹೇಳಿದರು. ನಂತರ ದೇವನ ಬಾಂದೇಕರ ಯವರು ತರಬೇತಿಯ ಆರಂಭದಲ್ಲಿ ಕಂಪ್ಯೂಟರ್ ನ on/off ಮಾಡುವುದು, ubuntu operating system ನಲ್ಲಿ application, places, menu bar, status bar,settings, ಹಾಗೂ joining report ,inernet ,web browser, gmail account ತೆರೆಯುವ ಬಗ್ಗೆ ಹಾಗೂ ಅದನ್ನು ಬಳಸುವ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು. ನಂತರ ಎಲ್ಲಾ ಶಿಬಿರಾರ್ಥಿಗಳು ಪ್ರಾಯೋಗಿಕವಾಗಿ email create ಮಾಡಿದರು.
2nd Day. 30/12/2014
ದಿನಾಂಕ 30/12/2014 ರಂದು ಬೆಳಿಗ್ಗೆ 9.30 ಕ್ಕೆ ಸರಿಯಾಗಿ ಡಯಟ್ ಕುಮಟಾದಲ್ಲಿ STF ಗಣಿತ ಶಿಕ್ಷಕರ ತರಬೇತಿಗೆ ಎಲ್ಲಾ ಶಿಬಿರಾರ್ಥಿಗಳು ಹಾಜರಾಗಿದ್ದರು. Resource person ಆಗಿ ಆಗಮಿಸಿದ ಶ್ರೀ.ಗೋಪಿನಾಥ ನಾಯ್ಕ ರವರು ಬಂದ ಎಲ್ಲಾ ಶಿಬಿರಾರ್ಥಿಗಳನ್ನು ಹಾಗೂ ಡಯಟ್ ನ ಉಪನ್ಯಾಸಕರಾದ ಶ್ರೀಮತಿ ರೇಖಾ ನಾಯಕರನ್ನು ಸ್ವಾಗತಿಸಿದರು. ನಂತರ ಶ್ರೀ.ಗೋಪಿನಾಥ ನಾಯ್ಕ ರವರು free mind ಮತ್ತು geogebra introduction ಕುರಿತು ಸವಿವರವಾಗಿ ತಿಳಿಸಿದರು. ಜಿ -ಮೇಲ್ compose ಮಾಡುವುದನ್ನು ತಿಳಿಸಿಕೊಟ್ಟರು.
3rd Day. 01/01/2015
ದಿನಾಂಕ 31/12/2014 ರಂದು ಬೆಳಿಗ್ಗೆ 9.30 ಕ್ಕೆ ಸರಿಯಾಗಿ ಡಯಟ್ ಕುಮಟಾದಲ್ಲಿ STF ಗಣಿತ ಶಿಕ್ಷಕರ ತರಬೇತಿಗೆ ಎಲ್ಲಾ ಶಿಬಿರಾರ್ಥಿಗಳು ಹಾಜರಾಗಿದ್ದರು. Resource person ಆಗಿ ಆಗಮಿಸಿದ ಶ್ರೀ.ಪ್ರಶಾಂತ ನಾಯ್ಕ ರವರು ಬಂದ ಎಲ್ಲಾ ಶಿಬಿರಾರ್ಥಿಗಳನ್ನುಸ್ವಾಗತಿಸಿದರು. ಹಾಗೂ ಡಯಟ್ ನ ಉಪನ್ಯಾಸಕರಾದ ಶ್ರೀಮತಿ ರೇಖಾ ನಾಯಕರು ಪ್ರಾಸ್ತಾವಿಕವಾಗಿ ಮಾತನಾಡಿದರು. ನಂತರ ಪ್ರಶಾಂತ ನಾಯ್ಕರವರು koer,gimp editor,screan shotಮತ್ತು geogebraದಲ್ಲಿ DCT constructionದ ಬಗ್ಗೆ ತಿಳಿಸಿದರು.
4th Day. 02/01/2015
ಬೆಳಿಗ್ಗೆ 9.30 ಕ್ಕೆ ಸರಿಯಾಗಿ ಡಯಟ್ ಕುಮಟಾದಲ್ಲಿ STF ಗಣಿತ ಶಿಕ್ಷಕರ ತರಬೇತಿಗೆ ಎಲ್ಲಾ ಶಿಬಿರಾರ್ಥಿಗಳು ಹಾಜರಾಗಿದ್ದರು. Resource person ಆಗಿ ಆಗಮಿಸಿದ ಗೋಪಿನಾಥ ನಾಯ್ಕರವರು ಬಂದ ಎಲ್ಲಾ ಶಿಬಿರಾರ್ಥಿಗಳನ್ನು ಹಾಗೂ ಡಯಟ್ ನ ಉಪನ್ಯಾಸಕರಾದ ಶ್ರೀಮತಿ ರೇಖಾ ನಾಯಕರು ಸ್ವಾಗತಿಸಿದರು. ನಂತರ ಗೋಪಿನಾಥ ನಾಯ್ಕರವರು koer,Hyperlinkಮತ್ತು geogebra ದಲ್ಲಿ ಬರುವ angle animation & Polygon animation ಬಗ್ಗೆ ತಿಳಿಸಿದರು.ಶಿಭಿರಾರ್ಥಿಗಳು ಆಸಕ್ತಿಯಿಂದ ಹೇಳಿದ ಎಲ್ಲಾ ವಿಷಯಗಳನ್ನು ರೂಢಿಸಿಕೊಂಡರು.
5th Day. 03/01/2015
ಐದನೆ ದಿನದ ತರಬೆೇತಿಯು ದಿ:20/12/2014 ರಂದು ಬೆಳಿಗ್ಗೆ 9.30 ಗಂಟೆಗೆ ಆರಂಭವಾಯಿತು.ಸ೦ಚಾಲಕರಾದ ಶ್ರೀಮತಿ ರೇಖಾ ಸಿ ನಾಯ್ಕ ಉ ಪನ್ಯಾಸಕರು ಡಯಟ ಕುಮಟಾರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪ್ರಶಾಂತ ನಾಯ್ಕ ಇವರು phet ಮತ್ತು formula typing ಅನ್ನು ತರಗತಿ ಕೋಣೆಯಲ್ಲಿ ಬೋಧಿಸಿದರು.ಶಿಬಿರಾರ್ಥಿಗಳು ಕೆಲವು ಸೂತ್ರಗಳನ್ನುtype ಮಾಡಿದರು. ಮಧ್ಯಾಹ್ನದ ಅವಧಿಯಲ್ಲಿ stellerium ವಿವರಿಸಿದರು. ಶಿಬಿರಾರ್ಥಿಗಳು feed back form ಅನ್ನು ಭರ್ತಿ ಮಾಡಿದರು.ಕೊನೆಯಲ್ಲಿ ಸರಳಕಾರ್ಯಕ್ರಮದೊಂದಿಗೆ ತರಬೇತಿಯನ್ನುಮುಗಿಸಲಾಯಿತು.