STF 2015-16 Kodagu
Science
Batch 1
Agenda
If district has prepared new agenda then it can be shared here
See us at the Workshop
Workshop short report
1st Day
ಕೊಡಗು ಜಿಲ್ಲೆಯ ವಿಜ್ಞಾನ ಎಸ್.ಟಿ.ಎಫ್ ತರಬೇತಿ ಕಾರ್ಯಾಗಾರವು ದಿನಾಂಕ ೦೧/೧೨/೨೦೧೫ ರಂದು ಆರಂಭವಾಗಿ ದಿನಾಂಕ ೦೫/೧೨/೨೦೧೫ ರವರೆಗೆ ಯಶಸ್ವಿಯಾಗಿ ನಡೆದಿದ್ದು ,ಈ ಕಾರ್ಯಾಗಾರದಲ್ಲಿ ಭಾಗವಹಿಸದ್ದ ಎಲ್ಲಾ ಶಿಕ್ಷಕರು ತಾವು ಗಳಿಸಿದ ಜ್ಞಾನವನ್ನು ಮುಂದಿನ ಹಂತಕ್ಕೆ ತಲುಪಿಸಲು ತೆರಳಿದ್ದಾರೆ. ತರಬೇತಿಯ ಐದು ದಿನಗಳ ಕ್ರೋಢೀಕೃತ ವರದಿಯನ್ನು ತಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತಿದ್ದೇನೆ.
ಮೊದಲನೆಯ ದಿನ ಶಿಕ್ಷರೆಲ್ಲರೂ ಆರಂಭದಲ್ಲಿ ಟೈಪ್ ಮಾಡುವುದನ್ನು ಕಲಿಯಲು ಟಕ್ಸ್ ಟೈಪಿಂಗ್ ಅದೇ ರೀತಿ ಮೌಸ್ ಬಳಕೆ ಅಭ್ಯಸಿಸಲು ಟಕ್ಸ್ ಪೈಂಟ್ ಈ ಟೂಲ್ ಗಳನ್ನು ಅಭ್ಯಸಿಸದರು.ನಂತರ ಡಯಟ್ ನ ಪ್ರಭಾರ ಪ್ರಾಂಶುಪಾಲರಾದ ಶ್ರೀಯುತ ಬೊಮ್ಮೇಗೌಡ ರವರು ಮತ್ತು ಉಪನ್ಯಾಸಕರಾದ ಶ್ರೀಮತಿ ವೀಣಾರವರು ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.ಮದ್ಯಾಹ್ನದ ಊಟದ ವಿರಾಮದ ನಂತರ ಫಾಸ್, ಕೋಯರ್ ಮತ್ತು ಉಬುಂಟು ಬಗ್ಗೆ ಪಿಪಿಟಿಯ ಮೂಲಕ ತಿಳಿಸಲಾಯಿತು.ನಂತರ ವೈಯುಕ್ತಿಕ ವಿದ್ಯುನ್ಮಾನ ಸಂಗ್ರಹಾಲಯವನ್ನು ಹೇಗೆ ತೆರೆಯುವುದು.ಮತ್ತು ಓಪನ್ ಆಫಿಸ್ ನಲ್ಲಿ ಯಾವ ರೀತಿ ಫೈಲ್ ತರೆಯುವುದು ಅದನ್ನು ಸೇವ್ ಮಾಡುವುದು ಇತ್ಯಾದಿಗಳ ಬಗ್ಗೆ ತಿಳಿಸಲಾಯಿತು.ಶಿಬಿರಾರ್ಥಿಗಳು ನಂತರ ಅದರ ಬಗ್ಗೆ ತಾವೇ ಸ್ವತಃ ಅದನ್ನು ಅಭ್ಯಸಿಸಿದರು.ನಂತರ ಇ ಮೇಲ್ ಖಾತೆ ತೆರೆಯುವ ಬಗ್ಗೆ ತಿಳಿಸಲಾಯಿತು.
2nd Day
ಎರಡನೆಯ ದಿನ ಆರಂಭದಲ್ಲಿ ಎಲ್ಲಾ ಶಿಕ್ಷಕರು ತಮ್ಮ ತಮ್ಮ ಇ ಮೇಲ್ ಖಾತೆಗಳನ್ನು ತೆರೆದರು ಮತ್ತು ಸಹುದ್ಯೋಗಿಗಳೊಂದಿಗೆ ಸಂವಹನ ನಡೆಸಿದರು.ಅದೇ ರೀತಿ ಫೈಲ್ ಗಳನ್ನು ಹೇಗೆ ಅಟಾಚ್ ಮಾಡುವುದು ಎಂಬುವುದನ್ನು ಕಲಿತರು.ನಂತರ ಅವರಿಗೆ ಅಂತರ್ಜಾಲದಿಂದ ಚಿತ್ರಗಳನ್ನು ಮತ್ತು ವಿಡಿಯೋಗಳನ್ನು ಹೇಗೆ ಡೌನ್ಲೋಡ್ ಮಾಡುವುದು,ಸೇವ್ ಮಾಡುವುದು ಮತ್ತು ಹೈಪರ್ ಲಿಂಕ್ ಹೇಗೆ ಕೊಡುವುದು ಎಂಬುದನ್ನು ಕಲಿಸಲಾಯಿತು.ಅದರ ಬಗ್ಗೆ ಸ್ವತಃ ಅವರೇ ಅಭ್ಯಸಿಸಿದರು.ನಂತರ ವಿಜ್ಞಾನ ಟೂಲ್ ಗಳಾದ ಕ್ಯಾಲ್ಞಿಯಂ ಮತ್ತು ಕೆ ಸ್ಟಾರ್ ಬಗ್ಗೆ ತಿಳಿಸಲಾಯಿತು.ಅದರ ಬಗ್ಗೆ ಸ್ವತಃ ಕಲಿತರು.ಶಿಬಿರಾರ್ಥಿಗಳನ್ನು ಗುಂಪುಗಳನ್ನಾಗಿ ವಿಂಗಡಿಸಿ ಅವರಿಗೆ ಪ್ರಯೋಗಾಲಯ ಚಟುವಟಿಕೆಗೆ ಅಣಿಯಾಗಲು ತಿಳಿಸಲಾಯಿತು.
3rd Day
ಮೂರನೆಯ ದಿನ ಶಿಬಿರಾರ್ಥಿಗಳೆಲ್ಲರೂ ಪ್ರಾಯೋಗಿಕ ಚಟುವಟಿಕೆಯಲ್ಲಿ ತಲ್ಲೀನರಾದರು.ನಂತರ ಅದರ ಬಗ್ಗೆ ಧನಾತ್ಮಕವಾದ ಚರ್ಚೆ ನಡೆಯಿತು.
4th Day
ನಾಲ್ಕನೆಯ ದಿನ ಆರಂಭದಲ್ಲಿ ಸುಮಾರು ಎರಡು ತಾಸು ವಿದ್ಯುತ್ ಸಮಸ್ಯೆ ಕಾಡಿತು. ಆಗ ಹತ್ತನೆಯ ತರಗತಿಯ ಫಲಿತಾಂಶ ಉತ್ತಮಪಡಿಸುವ ಬಗ್ಗೆ ಚರ್ಚೆ ನಡೆಸಲಾಯಿತು.ನಂತರ ಫೆಟ್ ಅನ್ನು ಹೇಗೆ ಚಟುವಟಿಕೆಯಾಗಿ ಉಪಯೋಗಿಸಬಹುದು ಎಂಬುದನ್ನು ತಿಳಿಸಲಾಯಿತು.ಶಿಬಿರಾರ್ಥಿಗಳು ತಂಡಗಳಲ್ಲಿ ಫೆಟ್ ಉಪಯೋಗಿಸಿ ಒಂದೊಂದು ಚಟುವಟಿಕೆಯನ್ನು ಪ್ರದರ್ಶಿಸಿದರು.ಅದರ ಬಗ್ಗೆ ಚರ್ಚೆ ನಡೆಸಲಾಯಿತು.
5th Day
ಕೊನೆಯ ದಿನದ ಮೊದಲ ಅವಧಿಯಲ್ಲಿ ಸ್ಟೆಲ್ಲೇರಿಯಂ ಉಪಯೋಗಿಸುವ ಬಗ್ಗೆ ಮತ್ತು ಮೈಂಡ್ ಮ್ಯಾಪಿಂಗ್ ಬಗ್ಗೆ ತಿಳಿಸಲಾಯಿತು.ನಂತರ ಶಿಕ್ಷಕರು ಅದರ ಬಗ್ಗೆ ಸ್ವತಃ ಅಭ್ಯಸಿಸಿದರು.ನಂತರ ಕಾರ್ಯಾಗಾರದ ಬಗ್ಗೆ ಹಿಮ್ಮಾಯಿತಿಯನ್ನು ಅಂತರ್ಜಾಲದಲ್ಲಿ ಭರ್ತಿ ಮಾಡಲಾಯಿತು.ಶಿಬಿರಾರ್ಥಿಗಳು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾ ತರಬೇತಿಯು ಉತ್ತಮವಾಗಿತ್ತು ಆದರೆ ಎರಡು ತಂಡಗಳಲ್ಲಿ ಮಾಡಿದ್ದರೆ ಇನ್ನಷ್ಟು ಪರಿಣಾಮಕಾರಿಯಾಗಿ ಮೂಡಿಬರುತ್ತಿತ್ತು ಎಂದು ತಿಳಿಸಿದರು.
ಒಟ್ಟಾರೆಯಾಗಿ ತರಬೇತಿ ಯಶಸ್ವಿಯಾಗಬೇಕಾದರೆ ತಾವು ಪಡೆದ ಜ್ಞಾನವನ್ನು ಶಿಕ್ಷಕರು ತರಗತಿ ಕೋಣೆಯೊಳಗೆ ಅಳವಡಿಸಬೇಕಾಗುತ್ತದೆ ಮತ್ತು ಇತರ ಶಿಕ್ಷಕರಿಗೆ ತಲುಪಿಸಬೇಕಾಗುತ್ತದೆ.
ಧನ್ಯವಾದಗಳೊಂದಿಗೆ,
ಪ್ರವೀಣ ಕಾಮತ್ ಕೆ
ಸಹ ಶಿಕ್ಷಕರು ,ಸರಕಾರಿ ಪ್ರೌಢ ಶಾಲೆ
ಅಂಕನಹಳ್ಳಿ
ಸೋಮವಾರಪೇಟೆ ತಾಲೂಕು
ಕೊಡಗು ಜಿಲ್ಲೆ.
ಮೊ : ೯೪೮೦೨೧೯೮೦೦
Batch 2
Agenda
If district has prepared new agenda then it can be shared here
See us at the Workshop
Workshop short report
Upload workshop short report here (in ODT format), or type it in day wise here
Batch 3
Agenda
If district has prepared new agenda then it can be shared here
See us at the Workshop
Workshop short report
Upload workshop short report here (in ODT format), or type it in day wise here
Add more batches, by simply copy pasting Batch 3 information and renaming it as Batch 4
Kannada
Batch 1
Agenda
If district has prepared new agenda then it can be shared here
See us at the Workshop
Workshop short report
1st Day
2nd Day
3rd Day
4th Day
5th Day.
Batch 2
Agenda
If district has prepared new agenda then it can be shared here
See us at the Workshop
Workshop short report
1st Day
2nd Day
3rd Day
4th Day
5th Day.
Batch 3
Agenda
If district has prepared new agenda then it can be shared here
See us at the Workshop
Workshop short report
1st Day
2nd Day
3rd Day
4th Day
5th Day.