Difference between revisions of "STF 2013-14 Udupi"
Line 118: | Line 118: | ||
==See us at the Workshop== | ==See us at the Workshop== | ||
+ | 1 ನೇ ದಿನ | ||
{{#widget:Picasa | {{#widget:Picasa | ||
|user=bhagwatmc@gmail.com | |user=bhagwatmc@gmail.com | ||
Line 128: | Line 129: | ||
}} | }} | ||
− | + | ---------------------------------------------------------------------------------------------------------------------- | |
+ | 2ನೇ ದಿನ | ||
{{#widget:Picasa | {{#widget:Picasa | ||
Line 140: | Line 142: | ||
}} | }} | ||
+ | ---------------------------------------------------------------------------------------------------------------------- | ||
+ | 3 ನೇ ದಿ ನ | ||
{{#widget:Picasa | {{#widget:Picasa | ||
Line 150: | Line 154: | ||
|interval=5 | |interval=5 | ||
}} | }} | ||
+ | |||
+ | ---------------------------------------------------------------------------------------------------------------------- | ||
+ | 4ನೇ ದಿನ | ||
{{#widget:Iframe | {{#widget:Iframe | ||
Line 157: | Line 164: | ||
|border=0 | |border=0 | ||
}} | }} | ||
+ | |||
+ | ---------------------------------------------------------------------------------------------------------------------- | ||
+ | |||
'''Social Science Stf 2nd Batch December 2013''' | '''Social Science Stf 2nd Batch December 2013''' | ||
Line 169: | Line 179: | ||
|interval=5 | |interval=5 | ||
}} | }} | ||
+ | ---------------------------------------------------------------------------------------------------------------------- | ||
==Workshop short report== | ==Workshop short report== |
Revision as of 22:47, 17 December 2013
Head Teachers
Agenda
If district has prepared new agenda then it can be shared here
See us at the Workshop
Workshop short report
Upload workshop short report here (in ODT format)
Mathematics
Agenda
If district has prepared new agenda then it can be shared here
See us at the Workshop
Workshop short report
Upload workshop short report here (in ODT format)
Science
- SCIENCE STF ....1 st BATCH TRAINING-2013
“ ಡಿಸೆಂಬರ್ ತಿಂಗಳಲ್ಲಿ ಈ ಟ್ರೈನಿಂಗ್ ಗಳು ಯಾಕಾದ್ರೂ ಬರು ತ್ವಪ್ಪಾ .......... ? ಇದರಿಂದ ಏನಾದ್ರೂ ಉಪಯೋಗ ಉಂಟಾ ....? ”.....ಎಂಬ ಗೊಣಗಾಟದೊಂದಿಗೆ ಉಡು ಪಿ ಡಯಟ್ ನಲ್ಲಿ ಆರಂಭವಾದ 5 ದಿನಗಳ ವಿಜ್ಞಾನ ಶಿಕ್ಷಕರ STF ತರಬೇತಿಯ ಇಣು ಕು ನೋಟ ಹಾಗೂ ಅನಿಸಿಕೆಗಳು ......... ,
ಎಸ್ ಟಿ ಎಫ್ ತರಬೇತಿಯು ದಿನಾಂಕ: 09-12-13 ರಿಂದ 14-12-13 ೩ರ ವರೆಗೆ ನಡೆಯಿತು. 5 ದಿನಗಳ ತರಬೇತಿಯ ಮಧ್ಯದಲ್ಲಿ 11-12-13 ರಂ ದು ಮೈಸೂರಿನ ಅರಸು ಮನೆತನದ ಕೊನೆಯ ಕೊಂಡಿಯಾದ ಶ್ರೀ ಶ್ರೀಕಂಠದತದತ್ತ ಒಡೆಯರ್ ರವರು ದೈವಾಧೀನರಾದ್ದರಿಂದ ಒಂದು ದಿನದ ರಜೆಯ ನಿಮಿತ್ತ ಆರು ದಿನಗಳ ಸಮಯ ಹಿಡಿಯಿತು.
ಆರಂಭದ ಕ್ಷಣ
..........
ಮೊದಲ ದಿನ ದಿನಾಂಕ 09-12-13 ರಂದು ನೋಡಲ್ ಅಧಿಕಾರಿಯಾದ ಶ್ರೀ ಶಂಕರ್ ಖಾರ್ವಿಯವರು ಶಿಬಿರಾರ್ಥಿಗಳನ್ನು ಸ್ವಾಗತಿಸಿದ ನಂತರ ಮಾಸ್ಟರ್ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪ್ರಸನ್ನಕುಮಾರ್ ಶೆಟ್ಟಿ, ಶ್ರೀ ಗುರುಪ್ರಸಾದ್, ಶ್ರೀ ಗಿರೀಶ್ ಹಾಗೂ ತಾಂತ್ರಿಕ ಸಹಾಯಕರಾದ ಶ್ರೀ ಪ್ರದೀಪ್ ಶೆಟ್ಟಿಯವರ ಸಹಯೋಗದೊಂದಿಗೆ ತರಬೇತಿಯು ಆರಂಭಗೊಂಡಿತು.
ಮೊದಲ ದಿನ
........ ದಂದು koer karnatakaeducation.org.com ಗೆ ಹೋಗಿ ಜಿಲ್ಲಾ ತರಬೇತಿಯ agenda ನೋಡಿ ಶಿಬಿರಾರ್ಥಿಗಳ ಮೊದಲ ದಿನದ participants form ನ್ನು ತುಂಬಿದೆವು . ಪ್ರತಿಯೊಬ್ಬರು ತಮ್ಮ email-id ಗಳನ್ನು ವೀಕ್ಷಿಸಿದರು ,ಇಲ್ಲದವರು ಹೊಸ email-id ಯನ್ನು ರಚಿಸಿದರು . ಚಹಾ ವಿರಾಮದ ನಂತರ ಯುಟ್ಯೂಬ್ ನಿಂದ ವಿಡಿಯೋಗಳನ್ನು ಡೌನ್ ಲೋಡ್ ಮಾಡಲು ಕಲಿತೆವು . ಪಠ್ಯಕ್ಕೆ ಸಂಬಂಧಿಸಿದ ಕೆಲವು ವಿಡಿಯೋಗಳನ್ನು ಡೌನ್ ಲೋಡ್ ಮಾಡಿಕೊಂಡೆವು . ಅಪರಾಹ್ನ ಮೈಂಡ್ ಮ್ಯಾಪ್ ಮಾಡಲು ಅಗತ್ಯವಾದ ೯ನೇ ತರಗತಿಯ ಘಟಕವನ್ನು ಆಯ್ಕೆ ಮಾಡಿ ವಿಡಿಯೋ ಅಥವಾ ಇಮೇಜಿನಿಂದ ನಕ್ಷೆಗೆ ಹೈಪರ್ಲಿಂಕ್ ಮಾಡುವುದನ್ನು ಅರಿತೆವು .
ಎರಡನೇ ದಿನ'
......ದ ತರಬೇತಿಯನ್ನು Free mind tool ಬಳಸಿ ತಾವು ಆಯ್ಕೆ ಮಾಡಿದ topic ಗೆ mind map ರಚಿಸಿ ,ವಿವಿಧ ಪರಿಕಲ್ಪನಾ ನಕ್ಷೆಯನ್ನು ರಚಿಸಿ ಅವುಗಳಿಗೆ hyperlink ಮಾಡಿದನ್ನು ಕಲಿತೆವು . ಅಪರಾಹ್ನದ ವೇಳೆಯಲ್ಲಿ ವಿವಿಧ ಛಾಯಾಚಿತ್ರಗಳನ್ನು GIMP image editor Tool ಬಳಸಿ ,ಅದರ ಗಾತ್ರ, ಅಳತೆ ಯನ್ನು ಮತ್ತು crop ಮಾಡುವ ವಿಧಾನಗಳನ್ನು ತಿಳಿದು ಅದರ ಉಪಯೋಗಗಳ ಕುರಿತು ಚರ್ಚಿಸಲಾಯಿತು .
ಮೂರನೇ ದಿನ
KOER website ನ್ನು ತೆರದು ಅಲ್ಲಿರುವ ವಿಷಯಗಳ ಜೋಡಣಾ ವಿಧಾನಕ್ಕೆ ಅನುಗುಣವಾಗಿ ,ಹಿಂದಿನ ದಿನ ರಚಿಸಿದ ಪರಿಕಲ್ಪನೆ ನಕ್ಷೆಗಳಿಗೆ ಅನುಗುಣವಾಗಿ ಶಿಕ್ಷಕರ ಟಿಪ್ಪಣಿ, ಅಗತ್ಯವಾದ ಚಟುವಟಿಕೆಗಳು, ಯೋಜನೆಗಳು, ಇತ್ಯಾದಿಗಳನ್ನು ಸಮರ್ಪಕವಾಗಿ ನಮ್ಮಿಂದ ಮಾಡಿಸಲಾಯಿತು . ಅಪರಾಹ್ನ ಪ್ರತಿಯೊಂದು ಗುಂಪಿನವರು ತಾವು ಮಾಡಿದ ಸಂಪನ್ಮೂಲದ ಪಟ್ಟಿಯನ್ನು ಪ್ರೊಜೆಕ್ಟ ಮೂಲಕ ಪ್ರದರ್ಶಿಸಿ ಪರಸ್ಪರ ಚರ್ಚಿಸಿದೆವು .
ನಾಲ್ಕನೇ ದಿನ
......ದಂದು Open Shot Video Editor Tool ಬಳಸಿ ಸಂಪನ್ಮೂಲ ವಿಡಿಯೋವನ್ನು ಮೊಡಿಫೈ ಮಾಡಿ ನಮ್ಮದೇ ಆದ video ಹಾಗೂ audio ಸೇರಿಸುವುದನ್ನು ಕಲಿತೆವು . sound & videoದ Kdenlive ನಲ್ಲಿ ವಿಡಿಯೋ ತಂದು, ವಿಡಿಯೋ ಮತ್ತು ಆಡಿಯೋ ಭಾಗಗಳನ್ನು ಬೇರ್ಪಡಿಸಿ, ವಿಭಿನ್ನ ಟೂಲ್ ಗಳ ಮೂಲಕ ಎಡಿಟ್ ಮಾಡಿದೆವು.
ಅಪರಾಹ್ನ ಶ್ರೀ ಶಂಕರ್ ಖಾರ್ವಿಯವರು CCE ಯ ಕುರಿತು power point presentation ಮಾಡಿ, CCE ವಿಧಾನವನ್ನು ಶಾಲೆಗಳಲ್ಲಿ ಅನುಷ್ಟಾನಗೊಳಸಿರುವ ಶಿಕ್ಷಕರಿಂದ ಹಿಮ್ಮಾಹಿತಿ , ಅನುಭವಗಳನ್ನು ಪಡೆದು ಸಮಸ್ಯೆ ಹಾಗೂ ಸಂಶಯಗಳನ್ನು ಪರಿಹರಿಸಿದರು .
ಐದನೇ ದಿನ
...... ದಲ್ಲಿ ಸಂಪನ್ಮೂಲದ ತಾಳೆಪಟ್ಟಿಗೆ header ಮತ್ತು footer ಉಪಯೋಗಿಸಿ ಸಂಪನ್ಮೂಲ ವಿಷಯ, ರಚಿಸಿದವರ ಹೆಸರು ಹಾಗೂ ಪುಟ ಸಂಖ್ಯೆಯನ್ನು ಹಾಕಿದೆವು. ನಂತರ ತಾಳೆಪಟ್ಟಿಗೆ format ನ್ನು ಉಪಯೋಗಿಸಿ heading ಮತ್ತು numbering ಮಾಡಿ ಒಂದು ಅರ್ಥಪೂರ್ಣ ಪರಿವಿಡಿ ರಚಿತವಾಯಿತು. ಈ ಕಲಿಕೆಯಿಂದ ನಮಗೆ ಶಾಲೆಯಲ್ಲಿ ಪ್ರಶ್ನೆ ಪತ್ರಿಕೆ ರಚನೆಗೆ ಸಹಾಯವಾಗುತ್ತದೆ.
ಅಪರಾಹ್ನ Picasa tool ಬಳಸಿ ಛಾಯಾಚಿತ್ರಗಳನ್ನು upload ಮಾಡುವ ವಿಧಾನ ಮತ್ತು ಅದರ link ನ್ನು email-id ಗೆ copy - paste ಮಾಡಿ ಇತರರೊಂದಿಗೆ ಹಂಚಿಕೊಳ್ಳುವ ವಿಧಾನವನ್ನು ಪ್ರಸನ್ನಕುಮಾರ್ ಶೆಟ್ಟಿ,ಯವರು ತಿಳಿಸಿದರು .
ನಂತರ video ಗಳನ್ನು youtube ಗೆ upload ಮಾಡುವ ವಿಧಾನವನ್ನು ಗುರುಪ್ರಸಾದ್ ರವರು ತಾವು ರಚಿಸಿದ THE SUN video ವನ್ನು youtube ಗೆ upload ಮಾಡಿ ಅದರ link ನ್ನು email-id ಗೆ copy - paste ಮಾಡಿ ಇತರರೊಂದಿಗೆ ಹಂಚಿಕೊಳ್ಳುವ ವಿಧಾನವನ್ನು ತಿಳಿಸಿದರು .ನಂತರ ತರಬೇತಿ ತಂಡದ` group photo ತೆಗೆದು ಸಮಾರೋಪದೊಂದಿಗೆ ತರಬೇತಿಯನ್ನು ಮುಗಿಸಲಾಯಿತು.........
- ಸು ಚೇತಾ, ವೀಣಾ ಮತ್ತು ಪ್ರತಿಮಾ
The STF training for science teacher of udupi district was really amazing. Yes! It made us to look the teaching learning process in a different perspective. In the training we came to know about many subjects like openshot video, zimp editor,hyperlinking the documents,linking photos and videos etc, which improved our knowledge &skills.The most amazing thing we have learnt is the openshot video technique,with this we can edit the video &add our own voice to that.This will made our teaching very effective and easy.So we need not have to worry about the completion of syllabus.one more thing we learnt is the zimp editor,using this we can shape the pictures as we wish.It will help us in many cases.So we can say that the things we learnt in the training will definitely strengthen our teaching if we use it in the classroom.Overall the training was very informative.Thanks for the training.we expect manymore trainings like this in future days.
- Nalini Bhat & Prema
ಸಂಪನ್ಮೂಲ ವ್ಯಕ್ತಿಗಳ ಪರವಾಗಿ ಕಿರು ಅನಿಸಿಕೆ .....
.....ಬೈಂದೂರು ,ಬ್ರಹ್ಮಾವರ, ಉಡುಪಿ ವಲಯಗಳ ICT Phase-II ಶಾಲೆಗಳ ಒಟ್ಟು ೩೦ STF ವಿಜ್ಞಾನ ಶಿಕ್ಷಕರು ಈ ಸಾಲಿನ ಮೊದಲ ಬ್ಯಾಚ್ ನ ೫ ದಿನಗಳ ತರಬೇತಿಯನ್ನು ಉಡುಪಿ ಜಿಲ್ಲೆಯ DIET ಸಂಸ್ಥೆಯ ಸುಸಜ್ಜಿತ computer lab ನಲ್ಲಿ ಪಡೆದರು . ಈ ತರಬೇತಿಯು DIET ಸಂಸ್ಥೆಯ ಉಪಪ್ರಾಂಶುಪಾಲರು ಹಾಗೂ STF ಜಿಲ್ಲಾ ನೋಡಲ್ ಅಧಿಕಾರಿಗಳಾದ ಶ್ರೀ ಶಂಕರ್ ಖಾರ್ವಿ ಯವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಮೂಡಿ ಬಂದಿತು.
- ಕಳೆದ ಸಾಲಿನ ತರಬೇತಿಗೆ ಹೋಲಿಸಿದರೆ , ಈ ಸಾಲಿನ ತರಬೇತಿಗೆ ಬಂದ ಅದೇ ಶಿಕ್ಷಕರ computer aided science teaching ಕುರಿತಾದ ಮನೋಭಾವನೆಯು ಧನಾತ್ಮಕವಾಗಿರುವುದು ಗಮನಾರ್ಹ . ಶಾಲಾ computer ಗಳ ಸ್ಥಿತಿ ಅಯೋಮಯವಾಗಿದ್ದರೂ , ಅದನ್ನು ಬದಿಗಿಟ್ಟು ತಮ್ಮದೇ ಆದ LAPTOP ಖರೀದಿಸಿ , OBUNTU instal ಮಾಡಿ ವಿವಿಧ Tool ಗಳನ್ನು ಬಳಸುವ ಆಸಕ್ತಿ ತೋರುತ್ತಿರುವುದು ಕಂಡುಬಂದಿದೆ.
- ಇಡೀ ೫ ದಿನಗಳ ತರಬೇತಿಯ agenda ದ ಪ್ರತೀ ಅಂಶಗಳ ಕಲಿಕೆಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡ ರೀತಿ , ನಾವು ರಾಜ್ಯ ಮಟ್ಟದಲ್ಲಿ ಪಡೆದ ತರಬೇತಿ ಹಾಗೂ ನಮ್ಮ ಸಂಪನ್ಮೂಲ ಕಡಿಮೆಯೇ ಅನಿಸುತಿತ್ತು . ಅಷ್ಟರ ಮಟ್ಟಿಗೆ ನಮ್ಮ ಸಂಪನ್ಮೂಲ ಶಿಕ್ಷಕರ ತಂಡವನ್ನು ತರಬೇತಿ ಶಿಕ್ಷಕರು ಬಳಸಿಕೊಂಡರು .
- ತರಬೇತಿಯ ಅವಧಿಯಲ್ಲಿ ಅನೇಕ ಶಿಕ್ಷಕರು ಹೊಸ LAPTOP ಖರೀದಿಸಿ ತಂದದ್ದು, ಈಗಾಗಲೇ ತಮ್ಮಲ್ಲಿರುವ LAPTOP ಗಳಿಗೆ OBUNTU instal ಮಾಡಲು ಹಾತೊರೆಯುತಿದ್ದ ರೀತಿ ನೋಡುತಿದ್ದರೆ ..... OBUNTU ಬಗ್ಗೆ ಮೂಗು ಮುರಿಯುವ ಈ ಹಿಂದಿನ ಭಾವನೆ ತೊಲಗಿ , ಅದು teacher's friendly software ಆಗುತ್ತಿರುವುದು ಸಂತಸ ತಂದಿದೆ . ಶಿಕ್ಷಕರು ತಂದ ಎಲ್ಲಾ LAPTOP ಗಳಿಗೆ OBUNTU instalation ಮಾಡಿದ ಪ್ರಸನ್ನಕುಮಾರ್ ಶೆಟ್ಟಿ, ಹಾಗೂ ಪ್ರದೀಪ್ ಶೆಟ್ಟಿ ಕಾರ್ಯ ಶ್ಲಾಘನೀಯ .
- ಕೊನೆಯ ದಿನದ ಸಮಾರೋಪದ .......ತರಬೇತಿ ಶಿಕ್ಷಕರ ಅನಿಸಿಕೆಯಲ್ಲಿ , ಸ.ಪ್ರೌ ಶಾಲೆಯ ಶಿಕ್ಷಕ ಸದಾನಂದ ಶೆಟ್ಟಿ ಯವರು ಮಾರ್ಮಿಕವಾಗಿ ಶಿಕ್ಷಕರಿಗೆ computer aided science teaching ನ ಇಂದಿನ ಅಗತ್ಯ ಹಾಗೂ ಇತರ ಹೊಸ ಶಿಕ್ಷಕರಿಗೂ ಈ ತರಬೇತಿಯ ವಿಸ್ತರಣೆಯ ಬೇಡಿಕೆಯನ್ನು ಮಂಡಿಸಿದರು .
- ಶಿಕ್ಷಕರ ಬೇಡಿಕೆಗೆ ಅನುಗುಣವಾಗಿ ಸ್ವಂತ computer ಖರೀದಿಗೆ ಇರುವ ಇಲಾಖಾ ಸುತ್ತೋಲೆಯ ಪ್ರತಿಯನ್ನು ಸಂಗ್ರಹಿಸಿ ಸಮಾರೋಪದಂದು ಶಿಕ್ಷಕರಿಗೆ ನೀಡಿದ ಶ್ರೀ ಶಂಕರ್ ಖಾರ್ವಿಯವರ ಕಾಳಜಿಯನ್ನು ಪ್ರಂಶಸಿಸಲೇಬೇಕು.MRP ಯಾಗಿ ಭಾಗವಹಿಸಿದ್ದ ನಾನು , ನನಗೆ ಸಮರ್ಪಕವಾಗಿ ತಿಳಿದಿರದ ವಿಚಾರಗಳನ್ನು ಇತರ MRP ಶಿಕ್ಷಕ ರುಗಳಾದ ಗಿರೀಶ್ ಕುಮಾರ್ , ಪ್ರಸನ್ನಕುಮಾರ್ ಶೆಟ್ಟಿ, ಹಾಗೂ ಪ್ರದೀಪ್ ರವರಿಂದ ತಿಳಿಯಲು ಸಹಕಾರಿಯಾಯಿತು .
- ಗು ರು ಪ್ರಸಾದ್ ಹೆಚ್,MRP
Workshop short report
Upload workshop short report here (in ODT format)
Social Science
Agenda
If district has prepared new agenda then it can be shared here ಮೊದಲ ದಿನ- ಹಿನ್ನೋಟ -stf ತರಬೇತಿ, ಶಾಲೆಯಲ್ಲಿ ಸಂಪನ್ಮೂಲಗಳ ಬಳಕೆ ಬಗ್ಗೆ ಹಿಮ್ಮಾಹಿತಿ. ಕನ್ನಡ ಟೈಪಿಂಗ್ 5ನೇ ದಿನ-Kdenlive, Sound Record,೯ನೇ ತರಗತಿ ಹೊಸಪಠ್ಯದ ಬಗ್ಗೆ ಚರ್ಚೆ.
See us at the Workshop
1 ನೇ ದಿನ
2ನೇ ದಿನ
3 ನೇ ದಿ ನ
4ನೇ ದಿನ
Social Science Stf 2nd Batch December 2013
Workshop short report
ಸಮಾಜ ವಿಜ್ಞಾನ stf ತರಬೇತಿ ಉಡುಪಿ ಮೊದಲ ಹಂತ-ದಿನಾಂಕ:02/12/2013-06/12/2013
1ನೇ ದಿನ
ಸಮಾಜ ವಿಜ್ಞಾನ S T F ತರಬೇತಿ ಮೊದಲ ದಿನದ ವರದಿ ಡಯಟ್, ಉಡುಪಿ- 576101 ಸಮಾಜ ವಿಜ್ಞಾನ ಶಿಕ್ಷಕರಿಗೆ ೨ ನೇ ಹಂತದ S T F ತರಬೇತಿಯನ್ನು ದಿನಾಂಕ 02-12-2013 ರಿಂದ 06-12-2013 ರ ವರೆಗೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಉಡುಪಿ ಇಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 02-12-2013 ರಂದು ಬೆಳಗ್ಗೆ 9.30 ಗೆ ಸರಿಯಾಗಿ ಡಯಟ್ ನ ಹಿರಿಯ ಉಪನ್ಯಾಸಕರಾದ ಶ್ರೀ ರಂಗಧಾಮಪ್ಪ ಇವರು ಶಿಕ್ಷಕರನ್ನು ಉದ್ದೇಶಿಸಿ ಮಾತನಾಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಇಂದಿನ ಬದಲಾಗುತ್ತಿರುವ ಪ್ರಪಂಚದಲ್ಲಿ ಶಿಕ್ಷಕರು ಕೂಡ ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕೆಂದು ಸೂಚಿಸಿದರು. ಶ್ರೀಮತಿ ಶಾಲಿನಿ ಮೇಡಮ್ ಅವರ ಸುಶ್ರಾವ್ಯ ಕಂಠದಲ್ಲಿ ಪ್ರಾರ್ಥನೆಯು ಮೂಡಿ ಬಂತು. ಸಂಪನ್ಮೂಲ ವ್ಯಕ್ತಿ ಶ್ರೀ ಪ್ರಶಾಂತ ಜತ್ತನ್ನ ಅವರು ಇಡೀ ದಿನದ ಕಾರ್ಯಕ್ರಮದ ಪಕ್ಷಿನೋಟ ನೀಡಿದರು.. ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪ್ರದೀಪ್ ಮತ್ತು ಶ್ರೀ ಮಹಾಬಲೇಶ್ವರ ಭಾಗವತ್ ಅವರು ಇ- ಮೇಲ್ ಐಡಿಯನ್ನು ಸೃಷ್ಟಿಸುವುದು ಹಾಗೂ ಇ- ಮೇಲ್ ಕಳುಹಿಸುವುದನ್ನು ಶಿಕ್ಷಕರಿಂದ ಪ್ರಾಯೋಗಿಕವಾಗಿ ಮಾಡಿಸುವುದರ ಮೂಲಕ ತಿಳಿಸಿಕೊಟ್ಟರು. ಜೊತೆಗೆ ಶ್ರೀ ರಂಗಧಾಮಪ್ಪ ಇವರು ಉತ್ಸಾಹದಿಂದ ಶಿಕ್ಷಕರಿಗೆ ಸಹಕಾರ ನೀಡುತ್ತಿದ್ದರು. ಇದು ಶಿಕ್ಷಕರಲ್ಲಿ ಇನ್ನಷ್ಟು ಉತ್ಸಾಹವನ್ನು ತುಂಬುತಿತ್ತು. ಅಲ್ಲದೇ ಕನ್ನಡ ಟೈಪಿಂಗ್ ಕೂಡ ಪ್ರಾಯೋಗಿಕವಾಗಿ ಮಾಡಿ ಕಲಿತುಕೊಂಡೆವು. ಅಂತರಜಾಲದ ಬಗ್ಗೆ , ಚಿತ್ರಗಳು ಮತ್ತು ಮಾಹಿತಿಗಳನ್ನು ಡೌನ್ ಲೋಡ್ ಮಾಡುವುದನ್ನು ಮತ್ತು ಸೇವ್ ಮಾಡುವುದನ್ನು ತಿಳಿಸಿಕೊಟ್ಟರು. ಇದರಿಂದ ನಮಗೆ ತರಗತಿ ಪಾಠಕ್ಕೆ ಅಗತ್ಯವಾದ ಮಾಹಿತಿಗಳನ್ನು ಅಂತರ್ಜಾಲದಿಂದ ಪಡೆದುಕೊಳ್ಳಲು ಸಹಾಯವಾಗುತ್ತದೆ. AKSHATHA KINI P ASSISTANT TEACHER GOVERNMENT HIGH SCHOOL KOODABETTU-MALA KARKALA TALUK UDUPI DISTRICT Mobile:9343146469
2ನೇ ದಿನ
ಸಮಾಜ ವಿಜ್ಞಾನ ಎಸ್. ಟಿ. ಎಫ್ .ತರಬೇತಿಯ ಎರಡನೆ ದಿನದ ವರದಿ.ದಿನಾಂಕ 03/12/2013 ಇಂದಿನ ದಿನದ ನಮ್ಮ ತರಬೇತಿ ಕಾರ್ಯಕ್ರಮವು ಶ್ರೀಮತಿ ವಿನಯ ,ಸಹಶಿಕ್ಷಕರು ಸರಕಾರಿ ಪ್ರೌಢಶಾಲೆ ಎಣ್ಣೆಹೊಳೆ ಕಾರ್ಕಳ ಇವರ ಚಿಂತನೆಯೊಂದಿಗೆ ಆರಂಭವಾಯಿತು. ನಂತರ ನಿನ್ನೆ ದಿನದ ವರದಿಯನ್ನು ಶ್ರೀಮತಿ ಅಕ್ಷತಾ ರವರು ವಾಚಿಸಿದರು. ಇವತ್ತಿನ ತರಬೇತಿ ಕಾರ್ಯಕ್ರಮ ದಲ್ಲಿ ಡಯಟ್ ಹಿರಿಯ ಉಪನ್ಯಾಸಕರು& ನಮ್ಮ ಕಾರ್ಯಕ್ರಮದ ನೋಡಲ್ ಅಧಿಕಾರಿಗಳಾದ ಶ್ರೀಯುತ ರಂಗಧಾಮಪ್ಪ ಸರ್ ರವರು ಕಂಪ್ಯೂಟರಿನಲ್ಲಿ ನಮ್ಮ ಕಲಿಕೆಯ ವೇಗ ಕಡಿಮೆಯಾಗಿರುವುದಕ್ಕೆ ಕಾರಣ ಕಂಪ್ಯೂಟರಿನ ಬಳಕೆ ನಾವು ಕಡಿಮೆಮಾಡಿರುವುದು ಎಂಬುದನ್ನು ತಿಳಿಸಿದರು. ಸಂಪನ್ಮೂಲ ವ್ಯಕ್ತಿ ಪ್ರಶಾಂತ ಸರ್ ರವರು ಕೊಯರ್ ನ ಅರ್ಥ, ಉದ್ದೇಶಗಳು, ಯೋಜನೆಯ ಮುಖ್ಯ ತತ್ವಗಳು, ಕೊಯರ್ ನ ಮೊದಲ ವರ್ಷದ ಕಾರ್ಯಗಳು, ಸಂಪನ್ಮೂಲಗಳ ಸ್ವರೂಪ ಮತ್ತು ನಿರ್ಮಾಣ ಇವುಗಳ ಬಗ್ಗೆ ಪ್ರಾಯೋಗಿಕವಾಗಿ ಮಾಹಿತಿಯನ್ನು ನೀಡಿದರು.ನಂತರ ಕೊಯರ್ ನಲ್ಲಿ ನಿನ್ನೆ ದಿನದ ತರಬೇತಿಯ ಫೋಟೊಗಳನ್ನು ಅಫ್ ಲೋಡ ಮಾಡಿರುವುದನ್ನು ತೋರಿಸಲಾಯಿತು. ಭಾಗವತ್ ಸರ್ ರವರು ಕೊಯರ್ ನಲ್ಲಿ School Wiki , ಜಿಲ್ಲೆಯ ಶಾಲೆಯ ಶಾಲೆಯ ಮಾಹಿತಿಯನ್ನು , ಅಫ್ ಲೋಡ ಮಾಡುವುದರ ಕುರಿತು ಮಾಹಿತಿ ನೀಡಿದರು.ನಂತರ ಸಂಪನ್ಮೂಲಗಳಿಗೆ ಹೈಪರ್ ಲಿಂಕ್ ಮಾಡುವ ವಿಧಾನವನ್ನು ತಿಳಿಸಿದರು. ಶಿಬಿರಾರ್ಥಿಗಳಿಂದ ಹೈಪರ ಲಿಂಕ್ ನಲ್ಲಿ ಪ್ರಾಕ್ಟಿಸ್ ಮಾಡಲು ತಿಳಿಸಿದರು. ನಂತರ ಪ್ರದೀಪ ಸರ್ ರವರು ಲಿಂಕ್ ಮಾಡುವಾಗ ಶಾರ್ಟ ಕಟ್ ವಿಧಾನಗಳಾದ ಕಂಟ್ರೋಲ್ ಸಿ,ಕಂಟ್ರೋಲ್ ವಿ ಇವುಗಳ ಮಾಹಿತಿಯನ್ನು ನೀಡಿದರು. ಅದನ್ನು ಎಲ್ಲರಿಂದ ಪ್ರಾಯೋಗಿಕವಾಗಿ ಮಾಡಿಸಿದರು.ತದನಂತರ ಒಂದೊಂದು ವಿಷಯದ ಬಗ್ಗೆ ಮಾಹಿತಿಯನ್ನು ಹೈಪರ್ ಲಿಂಕ್ ನಲ್ಲಿ ಅಳವಡಿಸಿ ಅದನ್ನು ರಂಗಧಾಮಪ್ಪ ಸರ್ ರವರಿಗೆ Email ಮಾಡಲಾಯಿತು. ತದನಂತರ ಪ್ರತಿಯೊಂದು ಗುಂಪಿಗೆ ಸಂಪನ್ಮೂಲ ರಚನೆ ಮಾಡಲು ಪೂರ್ವಭಾವಿಯಾಗಿ ಒಂದೊಂದು ವಿಷಯವನ್ನು ನೀಡಿದರು. ಮಧ್ಯಾಹ್ನದ ಅವಧಿಯಲ್ಲಿ ಭಾಗವತ್ ಸರ್ ರವರು ಕೊಯರ್ ಗಾಗಿ ಸಂಪನ್ಮೂಲ ರಚನೆ ಮಾಡುವ ವಿವಿಧ ಹಂತಗಳನ್ನು ಅರ್ಥವತ್ತಾಗಿ ತಿಳಿಸಿದರು. ನಂತರ ಅವರು ತಯಾರಿಸಿದ ಅಮೇರಿಕಾ ಕ್ರಾಂತಿಗಳು ಎಂಬ ಪಾಠದ ಬಗ್ಗೆ ಮಾಡಿದ ಸಂಪನ್ಮೂಲ ರಚನೆಯನ್ನು ಹಂತ ಹಂತವಾಗಿ ತೋರಿಸಿದರು. ನಂತರ ನಮ್ಮ ಆಯ್ಕೆಯ ವಿಷಯಕ್ಕೆ ಸಂಬಂಧಿಸಿದಂತೆ ಸಂಪನ್ಮೂಲ ರಚಿಸಲು ಪೂರಕವಾಗಿ ಮೈಂಡ ಮ್ಯಾಫ್ ಮಾಡುವ ವಿಧಾನವನ್ನು ಪ್ರಾಯೋಗಿಕವಾಗಿ ನಮ್ಮಿಂದ ಮಾಡಿಸಿದರು. ವರದಿ ಜ್ಯೋತಿ ನಾಯಕ್ ಸಹಶಿಕ್ಷಕಿ ಸರಕಾರಿ ಪದವಿಪೂರ್ವ ಕಾಲೇಜು ಗೋಳಿಯಂಗಡಿ ಬ್ರಹ್ಮಾವರ ವಲಯ, ಉಡುಪಿ ಜಿಲ್ಲೆ.
3ನೇ ದಿನ
ಉಡುಪಿ ಸಮಾಜ ವಿಜ್ಞಾನ ಕೊಯರ್ ತರಬೇತಿದಿನಾಂಕ- 04/12/2013ರಂದು ನಡೆದ STF ತರಬೇತಿಯ 3ನೇ ದಿನದ ವರದಿ ಇಂದಿನ ದಿನ ತರಬೇತಿಯ ಶಿಬಿರಾರ್ಥಿಗಳಿಗೆ ತರಬೇತಿ ನೋಡಲ್ ಅಧಿಕಾರಿಗಳಾದ ಶ್ರೀ ರಂಗಧಾಮಪ್ಪ ಸರ್ ಇವರು ಆತ್ಮೀಯವಾಗಿ ಸ್ವಾಗತ ಕೋರಿಕೊಂಡು ತರಬೇತಿ ದಿನಕ್ಕೆ ಚಾಲನೆ ನೀಡಿದರು.ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪ್ರಶಾಂತ ಜತ್ತನ್ ಹಾಗೂ ಶ್ರೀ ಮಹಾಬಲೇಶ್ವರ್ ಭಾಗವತ್ ಸರ್ ಉಪಸ್ಥಿತಿ ಇದ್ದರು.ಆರಂಭದಲ್ಲಿ ಶ್ರೀಮತಿ ಭಾರತಿ ಪ್ರಭು ಸ.ಪ.ಪೂ.ಕಾಲೆಜು ಉಡುಪಿ ಇವರು ಶೈಕ್ಷಣಿಕ ಚಿಂತನೆಯನ್ನು ನಿರ್ವಹಿಸಿದರು.ಸ್ವಾರಸ್ಯಕರ ಕತೆಯ ಮೂಲಕ ಚಿಂತನವನ್ನು ರಸವತ್ತಾಗಿ ಪ್ರಸ್ತುತ ಪಡಿಸಿದರು. ನಂತರ ೨ನೇ ದಿನದ ವರದಿಯನ್ನು ಶ್ರೀಮತಿ ಜ್ಯೋತಿ ಮೇಡಮ್ ಸ.ಪ್ರೌ.ಶಾ. ಗೋಳಿಯಂಗಡಿ ಇವರು ಕೊಯರನಲ್ಲಿ ದಾಖಲಿಸಿದ ವರದಿಯನ್ನು ವಾಚಿಸಿದರು.ಪೂರ್ವ ದಿನದ ವರದಿಯು ಮತ್ತೋಮ್ಮೆ ಶಿಭಿರಾರ್ಥಿಗಳನ್ನು ಹಿಂದಿನ ದಿನದ ಕಲಿಕೆಗಳನ್ನು ನೆನಪಿಸುವಂತೆ ಮಾಡಿತು.ನಂತರ ನೋಡಲ್ ಅಧಿಕಾರಿಯವರಾದ ಶ್ರೀರಂಗದಾಮಪ್ಪ ಸರ್ 3ನೇದಿನದ ಅಧಿವೇಶನವನ್ನು ಪ್ರಾರಂಭಿಸಿದರು.ಬೆಳಗಿನ ದಿನದ ಮೊದಲ ಅಧಿವೇಶನವನ್ನು ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮಹಾಬಲೇಶ್ವರ್ ಭಾಗ್ವತ್ ಸರ್ ಇವರು ಘಟಕ ರೂಪುರೇಷೆ ಮೈಂಡ್ ಮ್ಯಾಪ್ ತಯಾರಿಸುವ ಬಗ್ಗೆ ತಿಳಿಸಿದರು. ಪ್ರತಿ ತಂಡದವರಿಗೆ ಮಾರ್ಗದರ್ಶನ ನೀಡಿದರು.ಪ್ರತಿ ತಂಡದ ಶಿಬಿರಾರ್ಥಿಗಳು ತಾವು ತೆಗೆದುಕೊಂಡ 9ನೇ ತರಗತಿಯ ಪಾಠಕ್ಕೆ ಸಂಬಂಧಿಸಿದಂತೆ ಒಂದು ವಿಷಯದಲ್ಲಿ ಮನೋನಕ್ಷೆ ಸಿದ್ದ ಪಡಿಸಿ ಸಂಪನ್ಮೂಲ ವ್ಯಕ್ತಿಯರಿಗೆ Mail ಕಳುಹಿಸಲಾಯಿತು. ಮನೋನಕ್ಷೆ ತಯಾರಿಕೆ ಹಂತ ಹಾಗೂ ಲಿಂಕ್ ಗಳನ್ನು ಹೈಪರ್ ಲಿಂಕ್ ಮೂಲಕ ಸಂಪರ್ಕಪಡೆಯುವ ಬಗ್ಗೆ ಶಿಭಿರಾರ್ಥಿಗಳಿಗೆ ತಿಳಿಸಿ ಆ ಮೂಲಕ ಶಿಭಿರಾರ್ಥಿಗಳಿಂದ ಮಾಡಿಸಲಾಯಿತು. ಬೆಳಗಿನ ಚಹ ವಿರಾಮದ ನಂತರ ದಿನದ ಎರಡನೆ ಅಧಿವೇಶನದಲ್ಲಿ ಒಂದು ಪಾಠ ತಯಾರಿಕೆ ಹಂತಗಳಾದ ಮನೋನಕ್ಷೆ, ಪಠ್ಯ ಪುಸ್ತಕ, ಮತ್ತಷ್ಟು ಮಾಹಿತಿ,ಕಲಿಕಾಉದ್ದೇಶಗಳು,ಪರಿಕಲ್ಪನೆ,ಬೋಧನೆಯ ರೂಪುರೇಷೆ,ಟಿಪ್ಪಣಿಗಳು,ಚಟುವಟಿಕೆ,ಯೋಜನೆ ಹಾಗೂ ಯೋಜನಾ ಕಾರ್ಯ ಸಿದ್ಧಪಡಿಸುವ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮಹಬಲೇಶ್ವರ್ ಭಾಗವತ್ ಸರ್ ಶಿಭಿರಾರ್ಥಿಗಳಿಗೆ ಸರಳವಾಗಿ ತಿಳಿಸಿದರು. ಇವರಿಗೆ ಪ್ರಶಾಂತ ಸರ್ ಸಹಕರಿಸಿ ಮತ್ತಷ್ಟು ಮಾಹಿತಿ ತಿಳಿಸಿದರು.ಬೆಳಗಿನ ಎರಡನೇ ಅಧಿವೇಶನದ ನಂತರ ಊಟದ ವಿರಾಮ ನೀಡಲಾಯಿತು.ಸರಳವಾದ ಬೋಜನವನ್ನು ಸವಿದ ಶಿಭಿರಾರ್ಥಿಗಳು ಆಸಕ್ತಿಯಿಂದ ದಿನದ ಮದ್ಯಾಹ್ನದ ಮೂರನೆ ಅವಧಿಗೆ ಸಿದ್ಧರಾದೆವು. ಬೆಳಗಿನ ಅವಧಿಯಲ್ಲಿ ಹಂಚಿದ ಪಾಠಕ್ಕೆ ಸಂಬಂಧಿಸಿದಂತೆ ಸಂಪನ್ಮೂಲವನ್ನು ಕ್ರೋಢೀಕರಣ ಮಾಡುವಲ್ಲಿ ನಾವು ಸಿದ್ಧರಾದೆವು.ಪ್ರತಿ ಹಂತದಲ್ಲಿಯೂ ಮಾಹಿತಿಯನ್ನು ಹಂತ ಹಂತವಾಗಿ ರೂಪಿಸಿಕೊಂಡು ಅಗತ್ಯಕ್ಕೆ ತಕ್ಕಂತೆ ಅಂತರ್ಜಾಲ ತಾಣದ ಸಹಕಾರ ಪಡೆಯುತ್ತ ಶಿಭಿರಾರ್ಥಿಗಳು ಮನೋನಕ್ಷೆ ಸಹಿತ ಪಾಠ ಯೋಜನೆ ಸಿದ್ಧ ಪಡಿಸಿದರು.ಪಾಠಕ್ಕೆ ಸಂಬಂಧಿಸಿದಂತೆ ಫೋಟೊಗಳನ್ನುಫೋಲ್ಡರ್ ನಲ್ಲಿ ಹಾಕಿಕೊಂಡು ಪಿಕಾಸಾದಲ್ಲಿ ಅಪ್ಲೋಡ್ ಮಾಡಿ ಫೋಟೋಲಿಂಕ್ ಬಳಸುವ ಬಗ್ಗೆ ಪ್ರಶಾಂತ್ ಸರ್ ವಿವರ ನೀಡಿದರು.ಇತರ ಸಂಪನ್ಮೂಲ ಶಿಕ್ಷಕರು ನಮಗೆ ಸಹಕರಿಸಿದರು.ಮದ್ಯಾಹ್ನದ ಚಹ ವಿರಾಮದ ನಂತರ ಮನೋನಕ್ಷೆ ತಯಾರಿಸಿ ಸಿದ್ಧ ಪಡಿಸಿದ ಭಕ್ತಿ ಪಂಥ,ರಾಷ್ಟ್ರೀಯ ಭಾವೈಕ್ಯತೆ,ಮತಪ್ರವರ್ತಕರು,ವಿಷಯಕ್ಕೆ ಸಂಬಂಧಿಸಿದಂತೆ ಶಿಭಿರಾರ್ಥಿಗಳು ಸಾಮೂಹಿಕ ಚರ್ಚೆ ಮೂಲಕ ಸಾಕಷ್ಟು ವಿಷಯಗಳನ್ನು ಸೇರಿಸುವ ಮೂಲಕ ಇನ್ನಷ್ಟು ಮನದಟ್ಟಾಯಿತು. ಯೋಜನಾಧಿಕಾರಿ ರಂಗಧಾಮಪ್ಪ ಸರ್ ವಿಷಯದ ಕುರಿತು ಮತ್ತಷ್ಟು ಮಾಹಿತಿ ನೀಡಿದರು.ನಂತರ ಶಿಭಿರದ ಯೋಜನಾಧಿಕಾರಿಗಳು ದಿನದಲ್ಲಿ ನಡೆದ ವಿಷಯದ ಬಗ್ಗೆ ಮತ್ತೊಮ್ಮೆ ಅವಲೋಕನಕ್ಕೆ ವೇದಿಕೆ ಕಲ್ಪಿಸಿದರು. ದಿನದ ತರಬೇತಿಯನ್ನು ಮುಕ್ತಾಯಗೊಳಿಸುವ ಮೂಲಕ ಸಾಕಷ್ಟು ವಿಷಯಗಳನ್ನು ತಿಳಿದು ಕೊಂಡೆವು .ಜೈಹಿಂದ್, ಜೈ ಕರ್ನಾಟಕ ವರದಿಗಾರರು, ಶ್ರೀಮತಿ ಯಶೋದ,ಸಹಶಿಕ್ಷಕರು, ಸ.ಪ್ರೌ.ಶಾ.ಕಾಳಾವರ. ಶ್ರೀ ಹೆರಿಯ, ಸಹಶಿಕ್ಷಕರು, ಸ.ಪ್ರೌ.ಶಾ.ವಡ್ಡರ್ಸೆ ಶ್ರೀಮತಿ ಬಾಬಿ. ಸಹಶಿಕ್ಷಕರು, ಸ.ಪ್ರೌ.ಶಾ.ಹಾಲಾಡಿ
4ನೇ ದಿನ
ಡಯೆಟ್ ಉಡುಪಿ ಇಲ್ಲಿ ನಡೆದ STF ಸಮಾಜ ವಿಜ್ಞಾನ ತರಬೇತಿಯ 4ನೆಯ ದಿನದ ವರದಿ ಡಯೆಟ್ ಉಡುಪಿ ಇಲ್ಲಿ ನಡೆಯುತ್ತಿರುವ STF ಸಮಾಜವಿಜ್ಞಾನ ತರಬೇತಿಯ 4ನೆಯ ದಿನದ ತರಬೇತಿಯು ಸಂಪನ್ಮೂಲ ವ್ಯಕ್ತಿ ಪ್ರಶಾಂತ್ ಎಲ್ಲರನ್ನೂ ಸ್ವಾಗತಿಸುವುದರೊಂದಿಗೆ ಆರಂಭವಾಯಿತು. ಶ್ರೀಮತಿ ಶಾಲಿನಿ B.S ಸ.ಪ್ರೌ.ಶಾಲೆ ಕಲ್ಯ ಇವರು ನಮ್ಮಲ್ಲಿರುವ Egoಗೆ ಸಂಬಂಧಿಸಿದ ವಿಚಾರವನ್ನೊಳಗೊಂಡ ಚಿಂತನವನ್ನು ನಡೆಸಿಕೊಟ್ಟರು. ಶ್ರೀಯುತ ಹಿರಿಯಸಹಶಿಕ್ಷಕರು ಸರಕಾರಿ ಪ್ರೌಢಶಾಲೆ ವಡ್ಡರ್ಸೆ ಇವರು ಹಿಂದಿನ ದಿನದ ತರಬೇತಿಯ ವರದಿಯನ್ನು ಮಂಡಿಸಿದರು. ಆ ವರದಿಯ ಬಗ್ಗೆ ಚರ್ಚೆ ನಡೆಸಲಾಯಿತು. ತರಬೇತಿಯ ನೋಡಲ್ ಅಧಿಕಾರಿಯಾಗಿರುವ ಡಯೆಟ್ ಹಿರಿಯಉಪನ್ಯಾಸಕರಾದ ಶ್ರೀಯುತ ರಂಗಧಾಮಪ್ಪ ಸರ್,ವರದಿಯನ್ನುಇನ್ನಷ್ಟು ಉತ್ತಮವಾಗಿ ತಯಾರಿಸುವ ಬಗ್ಗೆ ಸಲಹೆ ನೀಡಿದರು. ಬೆಳಿಗ್ಗೆಯ ತರಬೇತಿಯ ಮೊದಲ ಅವಧಿಯಲ್ಲಿ ಹಿಂದಿನ ದಿನದ ಸಂಪನ್ಮೂಲ ರಚನೆಗೆ ಸಂಬಂಧಿಸಿದ ಚರ್ಚೆಯು ಮುಂದುವರಿಯಿತು. ಭಕ್ತಿ ಪಂಥದ ಬಗ್ಗೆ ಸಪನ್ಮೂಲ ರಚನೆಯಲ್ಲಿ ಸಿದ್ಧಪಡಿಸಿದ ಚಟುವಟಿಕೆಗಳ ಬಗ್ಗೆ ಚರ್ಚಿಸಲಾಯಿತು.ಈ ಚರ್ಚೆಯಲ್ಲಿ ನೋಡಲ್ ಅಧಿಕಾರಿ ಶ್ರೀಯುತ ರಂಗಧಾಮಪ್ಪ ಸರ್ ಕಲಿಕಾ ಉದ್ಧೇಶಗಳಿಗೂ , ಚಟುವಟಿಕೆಗಳಿಗೂ ಸಂಬಂಧ ಇರಬೇಕಾದ ಅಗತ್ಯತೆ ಬಗ್ಗೆ ತಿಳಿಸಿದರು ಹಾಗೂ ಚಟುವಟಿಕೆಗಳ ಹಂತಗಳ ಬಗ್ಗೆ ಚರ್ಚಿಸಲಾಯಿತು. ನಮ್ಮ ಸಂಪನ್ಮೂಲವನ್ನು ಸಲಹೆಗಳನ್ನಾದರಿಸಿ ಇನ್ನಷ್ಟು ಉತ್ತಮಗೊಳಿಸುವ ಪ್ರಯತ್ನ ಮಾಡಲಾಯಿತು.ಸಂಪನ್ಮೂಲ ವ್ಯಕ್ತಿ ಶ್ರೀಯುತ ಮಹಾಬಲೇಶ್ವರ್ ಭಾಗವತ್ ಸರ್ ಸಂಪನ್ಮೂಲವನ್ನು ಕೊಯೆರ್ ಗೆ ಸೇರಿಸುವ ಬಗ್ಗೆ ತಿಳಿಸಿದರು.ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಸಮಾಜ ವಿಜ್ಞಾನ ವಿಷಯ ಪರಿವೀಕ್ಷಕರಾದ ಶ್ರೀಯುತ ವೆಂಕಟೇಶ್ ನಾಯಕ್ ಭೇಟಿ ನೀಡಿದರು. ಶ್ರೀಯುತ ಮಹಾಬಲೇಶ್ವರ್ ಭಾಗ್ವತ್ ಅವರು ವಿಷಯ ಪರಿವೀಕ್ಷಕರಿಗೆ ತರಬೇತಿಯ ಬಗ್ಗೆ ಸ್ಥೂಲವಾಗಿ ತಿಳಿಸಿದರು. ಬೆಳಗ್ಗಿನ ಲಘು ಉಪಹಾರದ ನಂತರ ಸಂಪನ್ಮೂಲ ವ್ಯಕ್ತಿಗಳಾದ ಮಹಾಬಲೇಶ್ವರ್ ಭಾಗ್ವತ್ ಸರ್ ಪೋಟೋದ ಗಾತ್ರವನ್ನು ಚಿಕ್ಕದಾಗಿಸುವುದು, edit ಮಾಡುವುದು ಮತ್ತು Ubuntu software centre, Interenetನಲ್ಲಿ Thunder bird mail ಬಗ್ಗೆ ತಿಳಿಸಿದರು.ಅದರ ಬಗ್ಗೆ ಪ್ರಾಯೋಗಿಕವಾಗಿ ಸಾಕಷ್ಟು ತಿಳಿದುಕೊಳ್ಳಲು ಸಂಪನ್ಮೂಲ ವ್ಯಕ್ತಿಗಳಾದ ಶ್ರೀಯುತ ಮಹಾಬಲೇಶ್ವರ್ ಭಾಗ್ವತ್ ಮತ್ತು ಶ್ರೀಯುತ ಪ್ರಶಾಂತ್ ಮಾರ್ಗದರ್ಶನ ನೀಡಿದರು. ಮಧ್ಯಾಹ್ನದ ಊಟದ ನಂತರದ ಮೊದಲ ಅವಧಿಯಲ್ಲಿ ಶಿಬಿರಾರ್ಥಿಗಳು ರೂಪಿಸಿದ ಸಂಪನ್ಮೂಲಕ್ಕೆ ಸಂಬಂಧಿಸಿದಂತೆ ಸಿದ್ಧಪಡಿಸಿದ ಇನ್ನಷ್ಟು ಚಟುವಟಿಕೆಗಳ ಬಗ್ಗೆ ಚರ್ಚಿಸಲಾಯಿತು.ಚಟುವಟಿಕೆಗಳು ಜ್ಞಾನ ಮತ್ತು ಜ್ಞಾನದ ರಚನೆ ಮತ್ತು ಪುನರ್ ರಚನೆ ಗೆ ಸಹಾಯಕವಾಗುವ ಬಗ್ಗೆ ವಿವರವಾಗಿ ತಿಳಿಸಲಾಯಿತು.ಆ ನಂತರ ಸಿದ್ಧಪಡಿಸಿದ ಶ್ರಮ ಮತ್ತು ಉದ್ಯೋಗದ ಸಂಪನ್ಮೂಲಕ್ಕೆ ಸಂಬಂಧಿಸಿದಂತೆ ಪರಿಕಲ್ಪನೆಗಳು,ಉದ್ದೇಶಗಳು ಮತ್ತು ಚಟುವಟಿಕೆಗಳ ಬಗ್ಗೆ ವಿಸ್ತಾರವಾದ ಚರ್ಚೆ ಮಾಡಲಾಯಿತು.ನೋಡಲ್ ಅಧಿಕಾರಿ ಶ್ರೀಯುತ ರಂಗಧಾಮಪ್ಪ ಸರ್ ತಮ್ಮ ಉಪಯುಕ್ತ ಸಲಹೆಗಳನ್ನು ನೀಡಿದರು.ಇದೇ ರೀತಿ 'ಕುಟುಂಬ',ಪ್ರಾಕೃತಿಕ ವಿಭಾಗಗಳು'climate,soil, Natural vegetation and animals of Karnataka ಪಾಠಗಳಿಗೆ ಸಂಬಂಧಿಸಿದಂತೆ ಸಿದ್ಧ ಪಡಿಸಿದ ಸಂಪನ್ಮೂಲಗಳ ಬಗ್ಗೆ ಚರ್ಚಿಸಲಾಯಿತು. ಮಧ್ಯಾಹ್ನದ ಚಹಾ ವಿರಾಮದ ನಂತರ ನೋಡಲ್ ಅಧಿಕಾರಿ ಶ್ರೀಯುತ ರಂಗಧಾಮಪ್ಪ ಸರ್ CCE ಬಗ್ಗೆ ಚರ್ಚೆ ಆರಂಭಿಸಿದರು. CCE ಯ ಉದ್ದೇಶಗಳು, ಅದನ್ನು ಸರಿಯಾಗಿ ಅಳವಡಿಸಿಕೊಳ್ಳುವ ಬಗ್ಗೆ ,ಕೃತಿ ಸಂಪುಟ ದ ರೂಪುರೇಷೆ ಅದು ಒಳಗೊಂಡಿರಬೇಕಾದ ಅಂಶಗಳ ಬಗ್ಗೆ, spreadsheet ತಯಾರಿಸಿ ಅದನ್ನು ಬಳಸಿಕೊಳ್ಳುವುದರ ಬಗ್ಗೆ ತಿಳಿಸಿದರು.ಈ ಸಂದರ್ಭದಲ್ಲಿ ಮೊಘಲರು ಪಾಠವನ್ನು ಉದಾಹರಣೆಯಾಗಿ ತೆಗೆದುಕೊಂಡು ,ಅಲ್ಲಿ cceಯನ್ನು ಗಮನದಲ್ಲಿರಿಸಿಕೊಂಡು ಅಳವಡಿಸಿಕೊಳ್ಳಬಹುದಾದ ಚಟುವಟಿಕೆಗಳು,ಮೌಲ್ಯಮಾಪನ ವಿಧಾನದಬಗ್ಗೆ ಸಾಕಷ್ಟು ಮಾಹಿತಿ ನೀಡಿದರು.ತದನಂತರ ಸಂಪನ್ಮೂಲ ವ್ಯಕ್ತಿ ಮಹಾಬಲೇಶ್ವರ ಭಾಗ್ವತ್ ರವರು you tube ನಿಂದ ವೀಡಿಯೋವನ್ನು download ಮಾಡಿಕೊಳ್ಳುವ ವಿಧಾನದ ಬಗ್ಗೆ ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಿದರು.ಇದರೊಂದಿಗೆ STF ತರಬೇತಿಯ ಮೂರನೆಯ ದಿನದ ತರಬೇತಿಯು ಸಂಪನ್ನಗೊಂಡಿತು. ವರದಿಗಾರರು. ಶೇಖರಬೋವಿ ಸಹಶಿಕ್ಷಕರು ಬಾಲಕಿಯರ ಸ.ಪ.ಪೂ ಕಾಲೇಜು ಉಡುಪಿ ಶ್ರೀಮತಿ ಭಾರತಿ ಎಸ್. ಸ.ಪ.ಪೂ ಕಾಲೇಜು ಉಡುಪಿ ಶ್ರೀ ರತ್ನಾಕರ್ ಸ.ಫ್ರೌ. ಶಾಲೆ ಬಿಜೂರು .
5ನೇ ದಿನದ ತರಬೇತಿ
ಸಮಾಜ ವಿಜ್ಞಾನ ಎಸ್ ಟಿ ಎಫ್ ತರಬೇತಿಡಯಟ್, ಉಡುಪಿ, ದಿನಾಂಕ:06-12-2013 ಈ ದಿನದ ತರಬೇತಿಯು ಶ್ರೀಮತಿ ವಿಮಲ, ಸಹಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಬೆಳಪು, ಉಡುಪಿ ಇವರ ಚಿಂತನ ಕಾರ್ಯಕ್ರಮದೊಂದಿಗೆ ಆರಂಭವಾಯಿತು. ನಾವು ನಕಾರಾತ್ಮಕ ಯೋಚನೆಗಳ ಬದಲು ಸಕಾರತ್ಮಕವಾಗಿ ಯೋಚನೆ ಮಾಡಿದರೆ ಫಲಿತಾಂಶ ಕೂಡ ಸಕಾರಾತ್ಮಕವಾಗಿರುತ್ತದೆ. ಮಕ್ಕಳನ್ನು ಒಬ್ಬರೊಂದಿಗೆ ಇನ್ನೊಬ್ಬರನ್ನು ಹೋಲಿಕೆ ಮಾಡಿದಾಗ ಕೂಡ ಕೀಳರಿಮೆ ಭಾವನೆ ಬೆಳೆಯುತ್ತದೆ. ಹಾಗಾಗಿ ಮಕ್ಕಳನ್ನು ಪ್ರೋತ್ಸಾಹಿಸಬೇಕೇ ಹೊರತು ಹೋಲಿಕೆ ಮಾಡಬಾರದು ಎಂಬ ವಿಚಾರಗಳು ಚಿಂತನೆಯಲ್ಲಿ ಮೂಡಿ ಬಂತು. ಶ್ರೀ ಶೇಖರ ಭೋವಿ, ಸಹಶಿಕ್ಷಕರು, ಸರ್ಕಾರಿ ಬಾಲಕಿಯರ ಪ್ರೌಢಶಾಲೆ, ಉಡುಪಿ ಇವರು ನಾಲ್ಕನೇ ದಿನದ ಸವಿವರ ವರದಿಯನ್ನು ವಾಚಿಸಿದರು. ಮೊದಲ ಅವಧಿಯಲ್ಲಿ ಹಿಂದಿನ ದಿನಗಳಲ್ಲಿ ತಯಾರಿಸಿದ ಸಂಪನ್ಮೂಲಗಳಿಗೆ ಅಂತಿಮ ರೂಪುರೇಷೆ ನೀಡಲಾಯಿತು. ಸಂಪನ್ಮೂಲ ವ್ಯಕ್ತಿಗಳಾದ ಶ್ರೀಯುತ ಭಾಗ್ವತ್ ಹಾಗೂ ಶ್ರೀಯುತ ಪ್ರದೀಪ ರವರು ಶಿಬಿರಾರ್ಥಿಗಳಿಗೆ ಸಹಕರಿಸಿದರು. ಅಲ್ಪಕಾಲದ ಚಹಾ ವಿರಾಮದ ನಂತರ ನಮ್ಮ ಸಂಪನ್ಮೂಲವನ್ನು ಕೋಯರ್ ಗೆ ಮತ್ತು ಎಸ್ ಟಿ ಎಫ್ ಸಮಾಜ ವಿಜ್ಞಾನ ಗ್ರೂಪ್ ಗೆ ಮತ್ತು ತರಬೇತಿಯ ನೋಡಲ್ ಅಧಿಕಾರಿಯಾಗಿರುವ ಶ್ರೀಯುತ ಶ್ರೀರಂಗಧಾಮಪ್ಪ ಸರ್ ಅವರಿಗೆ ಮೇಲ್ ಮಾಡುವುದನ್ನು ನಮ್ಮಿಂದ ಪ್ರಾಯೋಗಿಕವಾಗಿ ಮಾಡಿಸಲಾಯಿತು. ಶ್ರೀಯುತ ಶ್ರೀರಂಗಧಾಮಪ್ಪ ಸರ್ ಇವರು ನಾವು ಕಳುಹಿಸಿದ ಮೇಲ್ ಗಳನ್ನು ಪರಿಶೀಲಿಸಿದರು. ಸಂಪನ್ಮೂಲ ವ್ಯಕ್ತಿಗಳು ಮೇಲ್ ಗಳಿಗೆ ವಿವಿಧ ಫೈಲ್ ಗಳನ್ನು ಅಟೇಚ್ಮೆಂಟ್ ಮತ್ತು ಗೂಗಲ್ ಡ್ರೈವ್ ನ ಮೂಲಕ ಅಟೇಚ್ ಮಾಡುವುದನ್ನು ಮತ್ತು ಮೇಲ್ ನಲ್ಲಿರುವ ಅಟೇಚ್ಮೆಂಟ್ ಗಳನ್ನು ಡೌನ್ ಲೋಡ್ ಮಾಡುವುದನ್ನು ಕಲಿಸಲಾಯಿತು. ನಂತರ ಕೊಯರ್ ನಲ್ಲಿರುವ ವಿವಿಧ ವಿಷಯಗಳನ್ನು ತೋರಿಸುತ್ತಾ ಮತ್ತಷ್ಟು ತಿಳಿದುಕೊಳ್ಳಲು ಆಸಕ್ತಿ ಮೂಡಿಸಿದರು. ಕೊಯರ್ ಗೆ ಸಂಪನ್ಮೂಲಗಳನ್ನು ಅಪ್ಲೋಡ್ ಮಾಡುವ ಬಗ್ಗೆ ಮಾಹಿತಿ ನೀಡಿದರು. ಮಧ್ಯಾಹ್ನದ ಊಟದ ವಿರಾಮದ ನಂತರ Youtube ನಲ್ಲಿ ವೀಡಿಯೋಗಳನ್ನು ಸರ್ಚ್ ಮಾಡಿ ಅದನ್ನು ನೋಡುವುದು ಮತ್ತು ಡೌನ್ ಲೋಡ್ ಮಾಡುವುದರ ಬಗ್ಗೆ ತಿಳಿಸಿಕೊಟ್ಟರು. ವಿಡಿಯೋಗಳನ್ನು edit ಮಾಡುವುದನ್ನು ಪ್ರಾಯೋಗಿಕವಾಗಿ ಮಾಡಿಸಿದರು. ವಿಡಿಯೋಗಳಲ್ಲಿ ನಮಗೆ ಬೇಕಾದಷ್ಟನ್ನೇ ಬಳಸಿಕೊಳ್ಳುವ ಬಗ್ಗೆ, ಎರಡು ವಿಡಿಯೋಗಳನ್ನು ಸೇರಿಸುವ ಬಗ್ಗೆ , ಆಡಿಯೋ ವಿಡಿಯೋಗಳನ್ನು ಬೇರ್ಪಡಿಸುವ ಬಗ್ಗೆ ಇತ್ಯಾದಿಗಳ ಬಗ್ಗೆ ತಿಳಿಸಲಾಯಿತು. ಸೌಂಡ್ ರೆಕಾರ್ಡ್ ಮಾಡುವ ಬಗ್ಗೆ ಮತ್ತು ಅದನ್ನು ಬಳಸುವ ಬಗ್ಗೆ ತಿಳಿಸಿಕೊಟ್ಟರು. ಶ್ರೀಯುತ ಶ್ರೀರಂಗಧಾಮಪ್ಪ ಸರ್ ಅವರ ಧ್ವನಿಯನ್ನು ರೆಕಾರ್ಡ್ ಮಾಡಿ ಪರೀಕ್ಷಿಸುವುದರ ಮೂಲಕ ನಮಗೆ ತಿಳಿಸಿಕೊಡಲಾಯಿತು. ರೆಕಾರ್ಡ್ ಮಾಡಿದ ಧ್ವನಿಯನ್ನು ಬೇರೆ ವಿಡಿಯೋಗಳಿಗೆ ಹಿನ್ನೆಲೆ ಯಾಗಿ ಕೊಡುವುದನ್ನು ಕೂಡ ಶ್ರೀಯುತ ಪ್ರದೀಪ್ ಸರ್ ಅವರು ಚೆನ್ನಾಗಿ ವಿವರಿಸಿದರು. ಚಹಾ ವಿರಾಮದ ನಂತರ ಕಾರ್ಯಾಗಾರದ ಬಗೆಗಿನ ಅಭಿಪ್ರಾಯ ದಾಖಲಿಸಲು ಎಲ್ಲಾ ಶಿಬಿರಾರ್ಥಿಗಳಿಗೂ ಸೂಚಿಸಲಾಯಿತು. ಸಂಪನ್ಮೂಲ ವ್ಯಕ್ತಿಗಳ ಸಹಕಾರದೊಂದಿಗೆ ಈ ಕಾರ್ಯವನ್ನು ಪೂರ್ಣಗೊಳಿಸಲಾಯಿತು. ತದನಂತರ ಯಾದಗಿರಿ ತಂಡದೊಂದಿಗೆ G-TALK ಮಾಡಲಾಯಿತು. ೯ ನೇ ತರಗತಿಯ ಹೊಸ ಪಠ್ಯಪುಸ್ತಕದ ಕುರಿತು ಶಿಕ್ಷಕರ ನಿರೀಕ್ಷೆಗಳನ್ನು ಚರ್ಚಿಸಲಾಯಿತು. ಸಮಸ್ಯೆಗಳನ್ನು ಮತ್ತು ಉತ್ತಮ ಅಂಶಗಳನ್ನು ಪಟ್ಟಿ ಮಾಡಿ ಕೊಯರ್ ಗೆ ಅಪ್ಲೋಡ್ ಮಾಡಲಾಯಿತು. ಕೊನೆಯಲ್ಲಿ ನಡೆದ ಸರಳ ಸಮಾರೋಪ ಸಮಾರಂಭದಲ್ಲಿ ಶ್ರೀಯುತ ಜಯಪ್ರಕಾಶ್ ನಾಯಕ್, ಸರ್ಕಾರಿ ಪ್ರೌಢಶಾಲೆ, ತೆಂಕನಿಡಿಯೂರು ಮತ್ತು ಸರ್ಕಾರಿ ಪ್ರೌಢಶಾಲೆ, ಕಾಳಾವರದ ಶಿಕ್ಷಕಿ ಶ್ರೀಮತಿ ಯಶೋದಾ ಅವರು ಅನಿಸಿಕೆಯನ್ನು ಹಂಚಿಕೊಂಡರು. ಸಂಪನ್ಮೂಲ ವ್ಯಕ್ತಿ ಶ್ರೀಯುತ ಮಹಾಬಲೇಶ್ವರ ಭಾಗ್ವತ್ ಶಿಬಿರಾರ್ಥಿಗಳು ಕಂಪ್ಯೂಟರ್ ನಲ್ಲಿ ಅನ್ವೇಷಣಾ ಮನೋಭಾವನೆಯನ್ನು ಬೆಳೆಸಿಕೊಂಡರೆ ನಾವು ಮುಂದುವರೆಯಲು ಸಾಧ್ಯ ಎಂಬ ಸಲಹೆ ನೀಡಿದರು&ವೇದಿಕೆ ಜೊತೆ ನಿತ್ಯ ಸಂಪರ್ಕದಲ್ಲಿರಲು&ಕೊಯರ್ ಸಂಪನ್ಮೂಲದ ಹಂಚಿಕೆ ಬಗ್ಗೆ ತಿಳಿಸಿದರು. ಸಂಪನ್ಮೂಲ ವ್ಯಕ್ತಿ ಶ್ರೀಯುತ ಪ್ರದೀಪ್ ಸರ್ ಅವರು ಅಂತರ್ಜಾಲವನ್ನು ಹೆಚ್ಚು ಹೆಚ್ಚು ಬಳಕೆ ಮಾಡುವಂತೆ ತಿಳಿಹೇಳಿದರು. ನೋಡಲ್ ಅಧಿಕಾರಿಯಾಗಿರುವ ಶ್ರೀಯುತ ಶ್ರೀರಂಗಧಾಮಪ್ಪ ಸರ್ ಅವರು ಕೊಯರ್ ಗೆ ಮತ್ತಷ್ಟು ಸಂಪನ್ಮೂಲಗಳನ್ನು ಅಪ್ಲೋಡ್ ಮಾಡಲು ಕರೆ ನೀಡಿದರು. ಈ ದಿನ ಕಲಿತ ಎಲ್ಲಾ ವಿಚಾರಗಳನ್ನು ಮತ್ತೊಮ್ಮೆ ನೆನಪಿಸಿಕೊಂಡು ಈ ದಿನದ ತರಬೇತಿಯನ್ನು ಮುಕ್ತಾಯಗೊಳಿಸಲಾಯಿತು. "ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು" ಎಂಬಂತೆ ನಮ್ಮ ಬೋಧನೆಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳುವುದರಿಂದ ಬೋಧನೆ ಆಕರ್ಷಕವಾಗುವುದರ ಜೊತೆಗೆ ವೃತ್ತಿಯಲ್ಲಿ ಯಶಸ್ಸು ಕಾಣಲು ಸಾಧ್ಯ ಎಂಬ ಆಶಯದೊಂದಿಗೆ ವರದಿಯನ್ನು ಮುಕ್ತಾಯಗೊಳಿಸುತ್ತಿದ್ದೇವೆ. ವರದಿಗಾರರು: ಅಕ್ಷತಾ ಕಿಣಿ ಪಿ, ಸರ್ಕಾರಿ ಪ್ರೌಢಶಾಲೆ, ಕೂಡಬೆಟ್ಟು- ಮಾಳ, ಕಾರ್ಕಳ ತಾ. ಅಖಿಲಾ ಶೆಟ್ಟಿ ರಾಧಾ ನಾಯಕ್ ಸರ್ಕಾರಿ ಪ್ರೌಢಶಾಲೆ, ಎಣ್ಣೆಹೊಳೆ- ಕಾರ್ಕಳ ತಾ. ವೀಣಾ ಆರ್.ಎನ್ ಸರ್ಕಾರಿ ಪ್ರೌಢಶಾಲೆ, ಹೊಸ್ಮಾರು , ಕಾರ್ಕಳ ತಾ.
ಸಮಾಜ ವಿಜ್ಞಾನ stf ತರಬೇತಿ ಹಂತ;02
1 ನೇ ದಿನ,ದಿನಾಂಕ:16/12/2013
ಉಡುಪಿ ಜಿಲ್ಲೆಯ ಸಮಾಜವಿಜ್ಞಾನ ಶಿಕ್ಷಕರ ಎರಡನೆಯ ತಂಡದ STF ತರಬೇತಿಯ ಮೊದಲ ದಿನದ ವರದಿ. ಉಡುಪಿ ಜಿಲ್ಲೆಯ ಸಮಾಜವಿಜ್ಞಾನ ಶಿಕ್ಷಕರ ಎರಡನೆಯ ತಂಡದ STF ತರಬೇತಿಯನ್ನು ದಿನಾಂಕ 16.12.2013 ರಿಂದ 20/12/2013 ರವರೆಗೆ ಹಮ್ಮಿಕೊಳ್ಳಲಾಗಿದ್ದು, ಮೊದಲ ದಿನದ ತರಬೇತಿಯ ವರದಿಯನ್ನು ತಮ್ಮ ಮುಂದಿಡಲು ಸಂತೋಷಪಡುತ್ತೇನೆ.ಪೂರ್ವಾಹ್ನ 9.30ಕ್ಕೆ ಸರಿಯಾಗಿ ಸರಕಾರಿ ಪದವಿಪೂರ್ವ ಕಾಲೇಜು ಹೊಸಂಗಡಿಯ ಶಿಕ್ಷಕಿ ಶ್ರೀಮತಿ ಪುಷ್ಪಾವತಿಯವರ ಸುಶ್ರಾವ್ಯ ಪ್ರಾರ್ಥನೆಯೊಂದಿಗೆ ತರಬೇತಿ ಆರಂಭಗೊಂಡಿತು.ಎಲ್ಲರನ್ನು ತರಬೇತಿಗೆ ಆತ್ಮೀಯವಾಗಿ ಸ್ವಾಗತಿಸಿಕೊಂಡ ತರಬೇತಿಯ ಸಂಯೋಜಕರಾದ ಡಯಟ್ ಹಿರಿಯ ಉಪನ್ಯಾಸಕ ಶ್ರೀರಂಗಧಾಮಪ್ಪರವರು ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ, ತರಬೇತಿಯ ಧ್ಯೇಯೋದ್ದೇಶಗಳನ್ನು ಶಿಬಿರಾರ್ಥಿಗಳ ಮುಂದಿಟ್ಟರು.ಸಮಯಪಾಲನೆ, ಸ್ವಚ್ಛತೆ, ಕರ್ತವ್ಯಪಾಲನೆಗಳ ಕುರಿತು ಸಾಮಾನ್ಯ ಸೂಚನೆಗಳನ್ನು ನೀಡಿದರು.ಸಂಪನ್ಮೂಲವ್ಯಕ್ತಿ ಶ್ರೀ ಮಹಾಬಲೇಶ್ವರ ಭಾಗ್ವತ್ ಕಾರ್ಯಕ್ರಮ ನಿರ್ವಹಿಸಿದ್ದು ಸಂಪನ್ಮೂಲವ್ಯಕ್ತಿಗಳಾದ ಶ್ರೀ ಸದಾನಂದ್ ಬೈಂದೂರು,ಶ್ರೀ ಪ್ರದೀಪ್ ಉಪಸ್ಥಿತರಿದ್ದರು. ಮೊದಲ ಅವಧಿಯಲ್ಲಿ ಶಿಬಿರಾರ್ಥಿಗಳ ಪರಿಚಯದ ಬಳಿಕ ಇಮೇಲ್ ID ಖಾತೆ ತೆರೆಯಲು,ನೋಡಲು, mail ಮಾಡಲು, ತರಬೇತಿ ನೀಡಲಾಯಿತು.ನಂತರ ಪ್ರತಿಯೊಬ್ಬ ಕಲಿಕಾರ್ಥಿಯ ವಿವರಗಳನ್ನು (google form)ನಲ್ಲಿkoerನಲ್ಲಿ ದಾಖಲಿಸಲಾಯಿತು.ಚಹಾ ವಿರಾಮದ ಬಳಿಕ ಎರಡನೆಯ ಅವಧಿಯ ಪ್ರಾರಂಭ.ಈ ಅವಧಿಯಲ್ಲಿ ರಂಗಧಾಮಪ್ಪ ಸರ್ ರವರು ಎಸ್.ಟಿ.ಎಫ್.ನ ಮಹತ್ವದ ಕುರಿತಾಗಿ ವಿವರಿಸುತ್ತಾ, ತಂತ್ರಜ್ಞಾನ ಬಳಕೆಯ ಕೌಶಲವನ್ನು ಹೆಚ್ಚಿಸುವಲ್ಲಿ ,ಮಾಹಿತಿ ಸಂಗ್ರಹಿಸುವ ಸಾಮರ್ಥವನ್ನು ಬೆಳೆಸುವಲ್ಲಿ,ಸಮಾಜವಿಜ್ಞಾನ ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ,ಶಿಕ್ಷಕರ ವೃತ್ತಿಪರತೆಯನ್ನು ಹೆಚ್ಚಿಸಿ ಶಿಕ್ಷಕರನ್ನು ಕ್ರಿಯಾಶೀಲರನ್ನಾಗಿಸುವಲ್ಲಿ ಮತ್ತು ಪರೀಕ್ಷಾ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ಎಸ್.ಟಿ.ಎಫ್ ನ ಪ್ರಾಮುಖ್ಯತೆ ಹಾಗೂ ಮಕ್ಕಳನ್ನು ಕಲಿಕೆಯಲ್ಲಿ ತೊಡಗಿಸಿಕೊಳ್ಳುವುದು, ಕಲಿಕೆಯನ್ನು ತರಗತಿಯ ಆಚೆಗೂ ವಿಸ್ತರಿಸುವುದು,ಮಕ್ಕಳನ್ನು ಕಂಠಪಾಠದಿಂದ ಮುಕ್ತಗೊಳಿಸುವುದು ಇತ್ಯಾದಿ ಎನ್.ಸಿ.ಎಫ್.೨೦೦೫ ರ ಗುರಿಗಳನ್ನು ಈಡೇರಿಸುವಲ್ಲಿ STFನ ಅಗತ್ಯತೆಗಳನ್ನು ಮನದಟ್ಟು ಮಾಡಿದರು. ಈ ತರಬೇತಿ ಕೇವಲ ಕಂಪ್ಯೂಟರ್ ಸಾಕ್ಷರತೆಗಾಗಿ ಅಲ್ಲ ,ಕೌಶಲಗಳಿಸಲು .ಆದ್ದರಿಂದ ಎಲ್ಲರೂ ಆಸಕ್ತಿಯಿಂದ ತೊಡಗಿಸಿಕೊಳ್ಳಬೇಕೆಂಬ ಕಿವಿಮಾತನ್ನು ಹೇಳಿದರು.ಎಡುಬುಂಟುವನ್ನು ಪರಿಚಯಿಸುತ್ತಾ ಇದು ವೈರಸ್ ಮುಕ್ತ, ಉಚಿತ,೩೦೦೦ಕ್ಕಿಂತಲೂ ಹೆಚ್ಚುAplication ಗಳನ್ನು ಹೊಂದಿದೆ,ಹೊಸಹೊಸ operating systemಗಳನ್ನುಸೇರಿಸಿಕೊಳ್ಳುತ್ತಿದೆ,ಪ್ರಪಂಚದ ಎಲ್ಲಾ ಕಡೆ ಮತ್ತು ವೇಗವಾಗಿ ಬಳಕೆಮಾಡಬಹುದಾದ ವೈಶಿಷ್ಟ್ಯತೆ ಹೊಂದಿದೆ ಎಂದರು.ನಂತರದ ಅವಧಿಯಲ್ಲಿ ಮಹಾಬಲೇಶ್ವರ ಭಾಗ್ವತ್ ಇಂಗ್ಲಿಷ್ ,ಕನ್ನಡ ಟೈಪಿಂಗ್ ಮಾಡುವ ವಿಧಾನ ಹಾಗೂ ಹಂತಗಳನ್ನು ತಿಳಿಸಿಕೊಟ್ಟರು.Folder create ಮಾಡುವುದು,ಹೆಸರಿಸುವುದು,file save ಮಾಡುವುದು,save as ,desktop ಅಥವಾ placesನಲ್ಲಿ save ಮಾಡುವುದು, ಕನ್ನಡ ಟೈಪಿಂಗ್ ನಲ್ಲಿ ಅಕ್ಷರಗಳ ಬಳಕೆಗಾಗಿ KOER ನ ಸಹಾಯ ಪಡೆಯುವುದು ಇತ್ಯಾದಿಗಳನ್ನು ತಿಳಿದುಕೊಳ್ಳಲಾಯಿತು.ಊಟದ ವಿರಾಮದ ಬಳಿಕ ಟೈಪಿಂಗ್ ಮಾಡುವ ಕ್ರಮ,document save ಮಾಡುವುದು , Internetಗೆ ಪ್ರವೇಶ ಮಾಡುವುದು,Inbox ನಲ್ಲಿ ನ message ,file, photo, ಚಿತ್ರಗಳನ್ನು ನೋಡುವುದು, ,reply ಮಾಡುವುದು,forward ಮಾಡುವುದು,compose ಮಾಡುವುದು , compose ನಲ್ಲಿ ವಿಳಾಸ set ಮಾಡುವುದು,ಬದಲಾಯಿಸುವುದು,sign out ಮಾಡುವುದು ಇತ್ಯಾದಿಗಳ ಕುರಿತು ಶ್ರೀ ಪ್ರದೀಪ್ ರವರು ಮಾಹಿತಿ ನೀಡಿದರು,ಕಲಿಕೆ ದೃಢ ಪಟ್ಟ ಬಳಿಕ ಚಹಾ ವಿರಾಮ.ತದನಂತರ ಅಂತರ್ಜಾಲದಲ್ಲಿ ಸಂಪನ್ಮೂಲಗಳನ್ನು, ಚಿತ್ರಗಳನ್ನು ಹುಡುಕುವುದು ಮತ್ತು download ಮಾಡುವುದು,save ಮಾಡುವುದು,copyಮಾಡಿ ಬೇಕಾದ ದಾಖಲೆಗಳೊಂದಿಗೆ ಚಿತ್ರಗಳನ್ನು paste ಮಾಡುವುದು ಇತ್ಯಾದಿಗಳನ್ನು ಕಲಿಯಲಾಯಿತು.ಒಟ್ಟಿನಲ್ಲಿ ಹೇಳುವುದಾದರೆ ಸಂಪನ್ಮೂಲ ವ್ಯಕ್ತಿಗಳೆಲ್ಲರೂ ಸೇರಿ ಕಲಿಕಾರ್ಥಿಗಳತ್ತ ವಯಕ್ತಿಕ ಗಮನ ನೀಡಿ ಕಲಿಸುತ್ತಿರುವ ಈ ತರಬೇತಿಯಲ್ಲಿ ಶಿಬಿರಾರ್ಥಿಗಳು ಅತ್ಯುತ್ಸಾಹದಿಂದ ತೊಡಗಿಸಿ ಕೊಂಡಿರುವುದು ತರಬೇತಿಯ ಅನಿವಾರ್ಯತೆ ಹಾಗೂ ಸಫಲತೆಗೆ ಸಾಕ್ಷಿಯಾಗಿತ್ತು.ವರದಿ:ಶಾಲಿನಿ ಎನ್. ಶೆಟ್ಟಿ ,ಸ.ಸಂ.ಪ್ರೌ.ಶಾಲೆ, ಅಜ್ಜರಕಾಡು.ಉಡುಪಿ'
ಸಮಾಜ ವಿಜ್ಞಾನ stf ತರಬೇತಿ ಹಂತ;02
2 ನೇ ದಿನ,ದಿನಾಂಕ:17/12/2013 ಉಡುಪಿ ಜಿಲ್ಲಾ ಸಮಾಜವಿಜ್ಞಾನ ಶಿಕ್ಷಕರ ಎರಡನೇ ತಂಡದ ಎಸ್.ಟಿ.ಎಫ್ ತರಬೇತಿಯ ಎರಡನೇಯ ದಿನದ ವರದಿ ದಿನಾಂಕ:17/12/2013 ಎಸ್.ಟಿ.ಎಫ್ ತರಬೇತಿಯ ಸಂಯೋಜಕರು,ಡಯಟ್ ನ ಹಿರಿಯ ಉಪನ್ಯಾಸಕರು ಆಗಿರುವ ಶ್ರೀಯುತ ರಂಗಧಾಮಪ್ಪರವರಿಂದ ಸ್ವಾಗತದೊಂದಿಗೆ ಎರಡನೇ ದಿನದ ತರಬೇತಿ ಪ್ರಾರಂಭಗೊಂಡಿತು. ಸಂಪನ್ಮೂಲ ಶಿಕ್ಷಕರಾದ ಶ್ರೀ ಸದಾನಂದ ಬೈಂದೂರರವರ ಚಿಂತನ ಡಾ.ಸುಕುಮಾರ ಗೌಡರವರ ಲೇಖನ ಮಗು ಶಿಕ್ಷಕರಿಗೆ ಬರೆದಂತ "ಗುರುವಿಗೊಂದು ಮನವಿ" ಆಧರಿಸಿದ್ದು ಎಲ್ಲರನ್ನು ಚಿಂತನೆಗೆ ಹಚ್ಚಿತು. ತದನಂತರದಲ್ಲಿ ಶಿಕ್ಷಕಿ ಶ್ರೀಮತಿ ಶಾಲಿನಿ ಶೆಟ್ಟಿ ಯವರು ಮೊದಲನೆ ದಿನದ ತರಬೇತಿಯ ಸಮಗ್ರ ಮಾಹಿತಿಯನ್ನು ಚಾಚು ತಪ್ಪದೆ ವರದಿ ರೂಪದಲ್ಲಿ ಮಂಡಿಸಿದರು. ವರದಿಯ ನಂತರದಲ್ಲಿ ಶ್ರೀ ರಂಗಧಾಮಪ್ಪ ಸರ್ ರವರು ಮನೋನಕ್ಷೆ ತಯಾರಿ ಹಾಗೂ ನಾಲ್ಕಾರು ಮನೋನಕ್ಷೆಗಳನ್ನು ಹೈಪರ್ ಲಿಂಕ್ ಮಾಡುವುದಕ್ಕಾಗಿ ಶಿಕ್ಷಕರನ್ನು ಹತ್ತು ಗುಂಪುಗಳನ್ನಾಗಿ ಮಾಡಿ ೮ನೇ ತರಗತಿಯ ಸಮಾಜವಿಜ್ಞಾನದ ೧೦ ಪಾಠಗಳನ್ನು ಹಂಚಿಕೆ ಮಾಡಿದರು.ಸಂಪನ್ಮೂಲ ಶಿಕ್ಷಕರಾದ ಶ್ರೀ ಮಹಾಬಲೇಶ್ವರ ಭಾಗವತರವರು ಸ್ಥಳೀಯ ಸರಕಾರ ಪಾಠವನ್ನು ತೆಗೆದುಕೊಂಡು ಹಲವು ಮನೋನಕ್ಷೆಗಳನ್ನು ತಯಾರಿಸಿ ಹೈಪರ್ ಲಿಂಕ್ ಮಾಡಿ,ನಾವೂ ಕೂಡ ಮಾಡುವಂತೆ ಮಾಡಿಸಿದರು. ಎಲ್ಲಾ ಶಿಕ್ಷಕರು ತಾವು ಮಾಡಿದ ಸ್ಥಳೀಯ ಸರ್ಕಾರದ ಮನೋನಕ್ಷೆಗಳನ್ನು ಶ್ರೀರಂಗಧಾಮಪ್ಪ ಸರ್ ರವರಿಗೆ ಮೇಲ್ ಮಾಡಿದರು.ಚಹ ವಿರಾಮದ ನಂತರ ಅದೇ ಪಾಠಕ್ಕೆ ಸಂಬಂಧಪಟ್ಟ ಹಾಗೆ ನಾಲ್ಕಾರು ಮನೋನಕ್ಷೆಗಳನ್ನು ತಯಾರಿಸಿ ಹೈಪರ್ಲಿಂಕ್ ಮಾಡುವ ಬಗ್ಗೆ ಹಾಗು ಲಿಂಕ್ ತೆಗೆಯುವ ವಿಧಾನವನ್ನು ತಿಳಿಸಿಕೊಟ್ಟರು.ಭೋಜನ ವಿರಾಮದ ನಂತರ ಸಂಪನ್ಮೂಲ ಶಿಕ್ಷಕರಾದ ಶ್ರೀ ಸದಾನಂದರವರು ಕೋಯರ್ ಅಂದರೆ ಕರ್ನಾಟಕ ಮುಕ್ತ ವಿಷಯ ಸಂಪನ್ಮೂಲಗಳು ಇದರ ಬಗ್ಗೆ ವಿವರಣಾತ್ಮಕವಾದ ಮಾಹಿತಿಯನ್ನು ತಿಳಿಸಿಕೊಟ್ಟರು.ಕೊಯರ್ ನಲ್ಲಿರುವ ವಿಷಯಸಂಪನ್ಮೂಲಗಳನ್ನು ಶಿಕ್ಷಕರು ಬೋಧನೆಯಲ್ಲಿ ಹೇಗೆ ಅಳವಡಿಸಿಕೊಳ್ಳಬಹುದು ಎಂಬುದನ್ನು ತಿಳಿಸಿಕೊಟ್ಟರು.ಶಿಕ್ಷಕರು ಕೊಯರ್ ನಲ್ಲಿ ಬೇರೆ ಬೇರೆ ರಾಜ್ಯಗಳ ಪಠ್ಯವಿಷಯಗಳನ್ನು, ೮ ಹಾಗು ೯ನೇ ತರಗತಿಯ ಪಾಠಗಳ ಬಗೆಗಿರುವ ಮಾಹಿತಿಯ ಹುಡುಕಾಟ ನಡೆಸಿದರು. ಮಧ್ಯಾಹ್ನದ ಚಹ ವಿರಾಮದ ನಂತರದಲ್ಲಿ ಶಿಕ್ಷಕರು ಫ್ರಿಮೈಂಡ್ ನಲ್ಲಿ ಕನ್ನಡ ಟೈಪಿಂಗ್ ಮಾಡುವುದನ್ನುನ ಕಲಿತು, ಆರಿಸಿಕೊಂಡಂತ ಪಾಠವಿಷಯಗಳ ಕುರಿತು ಮನೋನಕ್ಷೆಗಳನ್ನು ತಯಾರಿಸುವಲ್ಲಿನ ತಲ್ಲೀನತೆಯು ಎರಡನೇಯ ದಿನದ ತರಬೇತಿಯ ಸಫಲತೆಯನ್ನು ಸೂಚ್ಯವಾಗಿ ತಿಳಿಸಿತ್ತು. ವರದಿ ಶ್ರೀಮತಿ ಜ್ಯೋತಿ,ಸಹಶಿಕ್ಷಕಿ ಸ.ಪ.ಪೂ.ಕಾಲೇಜು,ಶಂಕರನಾರಾಯಣ.ಕುಂದಾಪುರ