ರಚನಾ ವಿಜ್ಞಾನ 9 ಪಾಠ-ಮಸೂರ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ

ಪಾಠ - ಮಸೂರ

I. ಕಲಿಕಾಂಶಗಳು/ಪರಿಕಲ್ಪನೆಗಳು

1) ಸಮಾಂತರ ಬೆಳಕಿನ ಪ್ರಭೆ, ಬೆಳಕಿನ ಕೇಂದ್ರೀಕರಣ ಪ್ರಭೆ ಮತ್ತು ಬೆಳಕಿನ ವಿಕೇಂದ್ರಿಕರಣ ಪ್ರಭೆ - ಇವುಗಳ ಅರ್ಥ

2) ಬೆಳಕಿನ ಕಿರಣಗಳು ಒಂದು ಕನ್ನಡಿಯ ಮೇಲೆ ಬಿದ್ದಾಗ ಪ್ರತಿಫಲನವಾಗುತ್ತದೆ.

3) ಮಸೂರದ ಮೂಲಕ ಹಾದು ಹೋದ ಬೆಳಕಿನ ಕಿರಣ ತನ್ನ ದಿಕ್ಕನ್ನು ಬದಲಾಯಿಸುತ್ತದೆ - ಕಾರಣ.

4) ಮಸೂರಗಳ ವಿಧಗಳನ್ನು ಗುರುತಿಸುವುದು

5) ಮಸೂರಗಳಿಗೆ ಸಂಬಂಧಿಸಿದ ಪರಿಮಾಪಗಳು - ಪ್ರಧಾನಾಕ್ಷ, ವಕ್ರತಾತ್ರಿಜ್ಯ, ವೃಕ್ ಕೇಂದ್ರ, ಪ್ರಧಾನ ಸಂಗಮ ಇವುಗಳ ಅರ್ಥ.

6) ಮಸೂರದಿಂದ ಹೊರಬಂದ ಬೆಳಕಿನ ಕಿರಣಗಳಲ್ಲಿನ ದೇಶ ಕಾಲಿಕತೆ (sಠಿಚಿಛಿe sಥಿಟಿಛಿhಡಿoಟಿisಚಿಣioಟಿ) ಮತ್ತು ಕಾಲ ಏಕಕಾಲಿಕತೆ (ಣime sಥಿಟಿಛಿhಡಿoಟಿisಚಿಣioಟಿ).

7) ಪೀನ ಮಸೂರ ಮತ್ತು ನಿಮ್ನ ಮಸೂರಗಳ ಮುಂದೆ ಬೇರೆ ಬೇರೆ ದೂರಗಳಲ್ಲಿ ವಸ್ತುವನ್ನಿಟ್ಟಾಗ ಉಂಟಾಗುವ ಬಿಂಬಗಳ ಲಕ್ಷಣಗಳು.

8) ಮಸೂರಗಳ ಉಪಯೋಗಗಳು


II. ಮನನ ಮಾಡಿಕೊಳ್ಳಬೇಕಾದ ಅಂಶಗಳು

1) ಮಸೂರಗಳಿಗೆ ಸಂಬಂಧಿಸಿದ ಕೆಲವು ಪರಿಮಾಪಗಳ ವ್ಯಾಖ್ಯಾನ.

2) ಮಸೂರಗಳಲ್ಲಿ ಬಿಂಬಗಳನ್ನು ಪಡೆಯುವಾಗ ಅನುಸರಿಸುವ ಚಿಹ್ನೆಗಳು.

3) ಮಸೂರಗಳಲ್ಲಿ ಬಿಂಬೋತ್ಪತ್ತಿ ಆಗುವುದರ ಪ್ರಾತಿನಿಧಿಕ ಕಿರಣ ರೇಖಾಚಿತ್ರಗಳನ್ನು ರಚಿಸುವಾಗ ಪರಿಗಣಿಸುವ ಕಿರಣಗಳು.

4) ಮಸೂರದಿಂದ ಉಂಟಾಗುವ ಪ್ರತಿಬಿಂಬಗಳನ್ನು ಪ್ರತಿನಿಧಿಸುವ ರೇಖಾಚಿತ್ರಗಳ ರಚನೆ.

5) ಪ್ರಧಾನಾಕ್ಷ ರೇಖೆಯ ಮೂಲಕ ಹಾದು ಹೋದ ಕಿರಣ. ವಕ್ರೀಭವನ ಹೊಂದುವುದಿಲ್ಲ ಎನ್ನುವುದನ್ನು ಸಕಾರಣಸಮೇತ ತಿಳಿದುಕೊಳ್ಳುವುದು.

6) ಮಸೂರದಲ್ಲಿ ಬಳಸುವ ಕಾರ್ಟಿಸಿಯನ್ ರೂಢಿ ನಿಯಮಗಳು



III. ಪಾಠದ ಪೂರ್ವ ಸಿದ್ಧತೆಗಳು

1) ವಿವಿಧ ರೀತಿಯ ಮಸೂರಗಳ ಆಯ್ಕೆ

2) ನಿಮ್ನ ಮಸೂರ ಮತ್ತು ಪೀನ ಮಸೂರಗಳನ್ನೊಳಗೊಂಡ ಉಪಕರಣಗಳ ಚಿತ್ರಗಳನ್ನು ಸಂಗ್ರಹಿಸುವುದು.

3) ಮಸೂರದಿಂದ ಉಂಟಾಗುವ ಪ್ರತಿಬಿಂಬಗಳನ್ನು ಪ್ರತಿನಿಧಿಸುವ ರೇಖಾಚಿತ್ರಗಳ ಚಾರ್ಟ್ ತಯಾರಿಸುವುದು

4) ಪಾಠದ ಬೋಧನೆಗೆ (ಪಠ್ಯ ಪುಸ್ತಕಗಳಲ್ಲಿ ಕೊಟ್ಟಿರುವ ಚಟುವಟಿಕೆಗಳನ್ನು) ನಿರ್ವಹಿಸಲು ಅಗತ್ಯವಿರುವ ಸಲಕರಣೆಗಳನ್ನು ಹೊಂದಿಸಿಕೊಳ್ಳುವುದು.


Iಗಿ. ಕಲಿಕಾ ಚಟುವಟಿಕೆಗಳು :

1) ಪ್ರಾತ್ಯಕ್ಷಿಕ ವಿಧಾನ

2) ಗುಂಪು ಚರ್ಚೆ

3) ಪ್ರಯೋಗಗಳು

4) ವಸ್ತು ಸಂಗ್ರಹಣೆ ಮತ್ತು ವಿಂಗಡನೆ


ಗಿ. ಕಲಿಕೆಯನ್ನು ಅನುಕೂಲಿಸುವ ವಿಧಾನ :

ಪ್ರಾತ್ಯಕ್ಷಿಕ ವಿಧಾನ

1) ಮಕ್ಕಳಿಗೆ ಪೀನ ಮತ್ತು ನಿಮ್ನ ಮಸೂರಗಳನ್ನು ಕೊಟ್ಟು ಅವುಗಳ ಮೇಲ್ಮೈ ಆಕಾರಗಳನ್ನು ಗಮನಿಸಲು ಹೇಳುವುದು. ನಂತರ ಈ ಕೆಳಗಿನ ಪ್ರಶ್ನೆಗಳನ್ನು ಉತ್ತರಿಸುವರು.

(i) ಮಸೂರಗಳ ಆಕಾರಗಳಾವುವು?

(ii) ಮಸೂರಗಳಲ್ಲಿರುವ ವ್ಯತ್ಯಾಸಗಳೇನು?

(iii) ಮಸೂರಗಳಲ್ಲಿರುವ ಸಮಾನತೆಗಳೇನು?


2) ಮಸೂರಗಳ ಮೂಲಕ ವಸ್ತುಗಳನ್ನು (ಪುಸ್ತಕ, ಕೂದಲು, ಪೆನ್ನು) ನೋಡಲು ಹೇಳುವುದು, ನಂತರ ಮಕ್ಕಳು ಈ ಕೆಳಗಿನ ಪ್ರಶ್ನೆಗಳನ್ನು ಉತ್ತರಿಸುವುದು.

(i) ನಿಮ್ನ ಮಸೂರದಿಂದ ವಸ್ತುವನ್ನು ನೋಡಿದಾಗ, ವಸ್ತುವು ಹೇಗೆ ಕಾಣಿಸುತ್ತದೆ?

(ii) ಪೀನ ಮಸೂರದಿಂದ ವಸ್ತುವನ್ನು ನೋಡಿದಾಗ, ವಸ್ತುವು ಹೇಗೆ ಕಾಣಿಸುತ್ತದೆ?

3) ಬರ್ಫದಿಂದ ಮಸೂರಗಳ ಆಕಾರ ತಯಾರಿಸುವುದು

4) ಶಾಲೆಯಲ್ಲಿರುವ ಸೂಕ್ಷ್ಮದರ್ಶಕದಲ್ಲಿರುವ ಮಸೂರವನ್ನು ಗುರುತಿಸಿ, ಅದರ ಕಾರ್ಯದ ಬಗ್ಗೆ ತಿಳಿಯುವುದು.

ಪ್ರಯೋಗಗಳು ಮತ್ತು : ಪಠ್ಯಪುಸ್ತಕದಲ್ಲಿ ಕೊಟ್ಟಿರುವ ಪ್ರಯೋಗಗಳನ್ನು ಮಾಡಿ ಅದರ

ವಿಶ್ಲೇಷಣೆ ಮಾಡುವುದು.

ವಸ್ತುಗಳ ಸಂಗ್ರಹ : ಖಗೋಳ ಶಾಸ್ತ್ರ, ಸೂಕ್ಷ್ಮಜೀವಿ ವಿಜ್ಞಾನ ಮತ್ತು ವೈದ್ಯಕೀಯ ವಿಜ್ಞಾನಗಳಲ್ಲಿ ಬಳಸುವ ದ್ಯುತಿ ಉಪಕರಣಗಳ ಚಿತ್ರವನ್ನು ಸಂಗ್ರಹಿಸಿ ಅದರಲ್ಲಿರುವ ಮಸೂರದ ಕಾರ್ಯವನ್ನು ತಿಳಿದುಕೊಳ್ಳುವುದು.

ಗಿI ಮೌಲ್ಯಮಾಪನ

1) ಪೀನ ಮಸೂರ ಮತ್ತು ನಿಮ್ನ ಮಸೂರಗಳಿಗಿರುವ ವ್ಯತ್ಯಾಸವನ್ನು (ಅವುಗಳ ಕಾರ್ಯದ ಆಧಾರದ ಮೇಲೆ) ಬರೆಯಿರಿ.

2) ``ಓದು ಮಸೂರವನ್ನು ಅಕ್ಷರಗಳ ಹತ್ತಿರ ಹಿಡಿದು ಓದುವರು. ಇದಕ್ಕೆ ವೈಜ್ಞಾನಿಕ ಕಾರಣ ಕೊಡಿ.

3) ನಿಮ್ನ ಮಸೂರದಿಂದ ಉಂಟಾಗುವ ಬಿಂಬವು ಯಾವಾಗಲೂ ಮಿಥ್ಯ, ಏಕೆ?

4) ಸರ ಸೂಕ್ಷ್ಮದರ್ಶಕದ ಕಾರ್ಯವನ್ನು ಪ್ರತಿನಿಧಿಸುವ ಕಿರಣ ಚಿತ್ರವನ್ನು ಬಿಡಿಸಿ.

5) ಒಂದು ವಸ್ತುವನ್ನು 10 ಛಿm ಸಂಗಮದೂರವಿರುವ ಪೀನ ಮಸೂರದಿಂದ 5 ಛಿm ದೂರದಲ್ಲಿರಿಸಿದಾಗ ಉಂಟಾಗುವ ಬಿಂಬದ ಸ್ಥಾನ ಗಾತ್ರ ಮತ್ತು ಲಕ್ಷಣಗಳನ್ನು ತಿಳಿಸಿ.

ವಿಶ್ಲೇಷಣೆ ಮೂಲಕ

ಹಾಗೂ ವಿಂಗಡನೆ