ರಚನಾ ವಿಜ್ಞಾನ 9 ವಿಜ್ಞಾನ ಕಲಿಕೆ ಅನುಕೂಲಿಸುವುದು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ವಿಜ್ಞಾನ ಕಲಿಕೆ ಅನುಕೂಲಿಸುವುದು

ಪೀಠಿಕೆ

ಒಂದು ಸಹಜ ಕಲಿಕೆಯಿಂದ ಸಮುದಾಯದಲ್ಲಿ ಸಾಕಷ್ಟು ಜ್ಞಾನ ಹೊಂದಿರುತ್ತದೆ. ವಿಮರ್ಶಾಯುಕ್ತ ಚಿಂತನೆ ಮತ್ತು ಅಂತಹ ಪದ್ಧತಿಯಿಂದ ತನ್ನ ಜ್ಞಾನ ಪುನಾರಚಿಸಿಕೊಳ್ಳಲು "ವಿಜ್ಞಾನ" ವಿಷಯ ಅವಕಾಶ ಒದಗಿಸುತ್ತದೆ. "ವಿಜ್ಞಾನ ವಿಷಯವನ್ನು ವೈಜ್ಞಾನಿಕ ಮನೋಭಾವ ಮತ್ತು ನಿಸರ್ಗ ಪೂರಕ ಜೀವನ ದೃಷ್ಟಿಕೋನದಿಂದ ಅಧ್ಯಯನ ಮಾಡುವುದೂ ಸೂಕ್ತ ಎಂದು ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು 2005 ಅಭಿಪ್ರಾಯ ಪಡುತ್ತದೆ. ವಿಜ್ಞಾನ ವಿಷಯವು ದಿನನಿತ್ಯದ ಅನುಭವಗಳನ್ನು ಪರೀಕ್ಷಿಸಿ ವಿಶ್ಲೇಷಿಸುವ ಅವಕಾಶ ನೀಡಬೇಕು. ಈ ದಿನನಿತ್ಯದ ಅನುಭವಗಳೇ ಮಗುವಿಗೆ ಸಹಜ ಕಲಿಕೆ. ಈ ಸಹಜ ಅನುಭವಗಳನ್ನು ವಿಮರ್ಶೆ, ಚರ್ಚೆ, ಪ್ರಯೋಗ, ವಿಶ್ಲೇಷಣೆ ಹೀಗೆ ವಿವಿಧ ಸಂಸ್ಕರಣೆಗಳಿಗೆ ಒಳಪಡಿಸಿಕೊಳ್ಳಲು ಅನುಕೂಲಿಸಿ ತನ್ಮೂಲಕ ವಿಜ್ಞಾನ ಪರಿಕಲ್ಪನೆ ರೂಪಿಸಿಕೊಳ್ಳಲು ವಿದ್ಯಾರ್ಥಿಗೆ ಕಲಿಕೆ ಲಾಭವಾಗುತ್ತದೆ. ಜ್ಞಾನ ಪುನಾರಚನೆಯಾಗುತ್ತದೆ. ಈ ಆಶಯಗಳಂತೆ ಹೊಸದಾಗಿ ಪಠ್ಯ ಪುಸ್ತಕ ರಚಿಸಲ್ಪಟ್ಟಿದ್ದು, ಸದರಿ ಸಾಹಿತ್ಯದಲ್ಲಿ ಪ್ರಸ್ತುತ ಪರಿಷ್ಕರಿಸಲ್ಪಟ್ಟ ಪಠ್ಯ ಪುಸ್ತಕಗಳ ಪರಿಚಯ ಮತ್ತು ಅನುಸರಿಸಬಹುದಾದ ರಚನಾತ್ಮಕವಾದಿ ಪದ್ದತಿಗಳ ವಿವರ ನೀಡಿದೆ.

ಎನ್.ಸಿ.ಎಫ್-2005 ವಿಜ್ಞಾನ ವಿಷಯವು ದಿನನಿತ್ಯದ ಅನುಭವಗಳನ್ನು ಪರೀಕ್ಷಿಸಿ ವಿಶ್ಲೇಷಿಸುವ ಅವಕಾಶ ನೀಡಬೇಕು ಎಂದು ತಿಳಿಸುತ್ತದೆ. ಮುಂದುವರಿದಂತೆ, ಚಟುವಟಿಕೆ ಹಾಗೂ ಪ್ರಾಜೆಕ್ಟ್‍ಗಳ ಮೂಲಕ ವಿಷಯಗಳನ್ನು ಕಲಿಯುವಂತಾಗಬೇಕು. ಪ್ರಾದೇಶಿಕತೆಗೆ ಸೂಚಕ ಪ್ರಾಜೆಕ್ಟ್ ಯೋಜನೆಗಳನ್ನು ಕೈಗೊಳ್ಳುವಂತೆ ಮಕ್ಕಳನ್ನು ಉತ್ತೇಜಿಸಬೇಕು. ಇಂತಹ ಪ್ರಾಜೆಕ್ಟ್‍ಗಳಿಂದ ಬರುವ ಮಾಹಿತಿ, ಭಾರತದ ಪರಿಸರದ ಬಗ್ಗೆ ದೊಡ್ಡ ಮಾಹಿತಿ ಭಂಡಾರವನ್ನೇ ಸೃಷ್ಠಿಮಾಡಬಲ್ಲದು ಎಂದು ಎನ್‍ಸಿಎಫ್ 05 ಭಾವಿಸುತ್ತದೆ. (ಇದಕ್ಕೆ ಭಾರತ ದೇಶದÀ ಮೇಲ್ಮೆಪದರ ಚಿತ್ರದ ಉದಾಹರಣೆಯನ್ನು ನೀಡುತ್ತದೆ) ಅನ್ವೇಷಣಾ ಕಲಿಕೆಗೆ ಒತ್ತು ನೀಡುತ್ತಾ ಜ್ಞಾನ ಕಟ್ಟಿಕೊಳ್ಳುವ ಪ್ರಕ್ರಿಯೆಗೆ ವಿಜ್ಞಾನ ಕಲಿಕೆ ಪೂರಕವಾಗಬೇಕು ಎಂದು ಎನ್‍ಸಿಎಫ್ ಆಶಿಸುತ್ತದೆ. ವಿಜ್ಞಾನ ಕಲಿಕೆಗೆ ಸಂಬಂಧಿಸಿದಂತೆ ಇನ್ನೂ ಕೆಲವು ಮುಖ್ಯ ಆಶಯಗಳನ್ನು ಎನ್‍ಸಿಎಫ್ ತಿಳಿಸಿದ್ದು ಅವುಗಳನ್ನು ಈ ಕೆಳಗೆ ನೀಡಿದೆ.


ವಿಜ್ಞಾನ ಕಲಿಕೆಗೆ ಸಂಬಂಧಿಸಿದಂತೆ ಕೆಲವು ಮುಖ್ಯ ಆಶಯಗಳು

1. ಪಠ್ಯಕ್ರಮವನ್ನು ಮಕ್ಕಳಿಗೆ ಅರ್ಥಪೂರ್ಣ ಅನುಭವವನ್ನಾಗಿಸಲು ಪಠ್ಯಪುಸ್ತಕವನ್ನು ಹೊರತುಪಡಿಸಿ, ಅನುಭವದಿಂದ, ಪ್ರಕೃತಿ, ವಸ್ತುಗಳು, ಸಮುದಾಯದಿಂದ, ಗ್ರಂಥಾಲಯದಿಂದ ಮತ್ತಿತರ ಮೂಲಗಳಿಂದ ಜ್ಞಾನ ಪಡೆಯುವ ಹಾಗೂ ಜ್ಞಾನ ಕಟ್ಟಿಕೊಳ್ಳುವ ಚಟುವಟಿಕೆಗಳನ್ನು ಸೃಜಿಸಬೇಕು. ಮಗುವಿನ ಸ್ವಾನುಭವಗಳಿಗೆ, ಅದರ ಭಾವನೆಗಳಿಗೆ ಮತ್ತು ಅವರ ಸಕ್ರಿಯ ಭಾಗವಹಿಸುವಿಕೆಗೆ ಆದ್ಯತೆ ಮತ್ತು ಪೆÇ್ರೀತ್ಸಾಹ ನೀಡಬೇಕು. ಹೀಗಾದಾಗ ಕಲಿಕೆ ಶಿಶು ಕೇಂದ್ರಿತವಾಗುತ್ತದೆ.

2. ಮಕ್ಕಳ ಗುಂಪು ಚಟುವಟಿಕೆಗಳಿಂದ ಸಾಮಾಜಿಕ ಮೌಲ್ಯಗಳ ಕಲಿಕೆ.

3. ಆಯಾ ಹಂತದ ಸಂವೇದನಾಶೀಲತೆಯ ಬೆಳವಣಿಗೆಯನುಸಾರ ಮಾಹಿತಿಗಳು ಮತ್ತು ವಿಜ್ಞಾನ ನಿಯಮಗಳು. ಅವುಗಳ ಬಳಕೆಯ ಅರಿವನ್ನು ಮೂಡಿಸುವುದು.

4. ವಿಜ್ಞಾನ ಜಾಗತಿಕ ಮತ್ತು ಅಭಿವೃದ್ಧಿಶೀಲ ದೃಷ್ಟಿಕೋನಗಳನ್ನು ಬೆಳೆಸಿ ವಿಜ್ಞಾನವೊಂದು ಸಾಮಾಜಿಕ ಮಹೋಧ್ಯಮ (Soಛಿiಚಿಟ Iಟಿಜusಣಡಿಥಿ) ಎನ್ನುವುದನ್ನು ರೂಢಿಸುವುದು.

5. ಸ್ಥಳೀಯ ಹಾಗೂ ಪ್ರಾಪಂಚಿಕ ಪರಿಸರದೊಳಗಿರುವ ಸಂಬಂಧಗಳನ್ನು ಗುರುತಿಸುವುದು ಮತ್ತು ಪರಸ್ಪರ ಅನುಭೂತಿ ಕಾಳಜಿಗಳನ್ನು ರೂಢಿಸುವುದು. ಪ್ರಾಮಾಣಿಕತೆ, ಸ್ವಾಯತ್ತತೆ, ಅನ್ಯೋನ್ಯ ಸಹಕಾರ ಮನೋಭಾವ, ಜೀವ ಕಾಳಜಿ ಮತ್ತು ಪರಿಸರ ರಕ್ಷಣೆ ಮತ್ತು ಪರಿಸರ ಕಳಕಳಿಗಳ ಬೆಳವಣಿಗೆಗೆ ಒತ್ತು ನೀಡುವುದು. ಇದಕ್ಕೆ ಪರಿಸರ ಅಧ್ಯಯನ ಪಾಠಗಳಿಂದ ಕಲಿಕೆ ಆರಂಭಗೊಂಡು ವಿಜ್ಞಾನ ಮತ್ತು ತಂತ್ರಕಲೆಗಳ ಮೂಲತತ್ವಗಳನ್ನು ಹಂತ ಹಂತವಾಗಿ ಮಕ್ಕಳು ತಿಳಿಯುವಂತಾಗಬೇಕು.

6. ಅವಶ್ಯ ಪಠ್ಯಜ್ಞಾನ ಮತ್ತು ಉದ್ಯೋಗಗಳ ಕ್ಷೇತ್ರಕ್ಕೆ ಪ್ರವೇಶ ದೊರಕಿಸುವಂತಹ ಪ್ರಾಯೋಗಿಕ ತಂತ್ರ ಕೌಶಲಗಳ ಗಳಿಕೆಗೆ ಒತ್ತು ನೀಡುವುದು.

7. ಸ್ವಭಾವ ಸಹಜ ಕುತೂಹಲದ ಅಂತರಂಗ, ನೈಸರ್ಗಿಕ ಸಂವೇದನೆಗಳು ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನಗಳ ಸೃಷ್ಠಿಶೀಲತೆಗಳ ಪರಿಚಯ ಮಾಡಿಸುವುದು.

8. ವಸ್ತುನಿಷ್ಠತೆ, ವಿಚಾರಶೀಲ ಚಿಂತನೆ, ನಿರ್ಭಯತೆ ಮತ್ತು ಪಕ್ಷಪಾತವಿಲ್ಲದ ವೈಜ್ಞಾನಿಕ ಮನೋಧರ್ಮದ ಬೆಳವಣಿಗೆಗೆ ಗಮನ ನೀಡುವುದು. ಪ್ರಯೋಗಗಳನ್ನು ಮಾಡುತ್ತಾ ವೈಜ್ಞಾನಿಕ ನಿಯಮಗಳನ್ನು ಮನಗಾಣುವ ನಿಖರ ಮಾರ್ಗಗಳನ್ನು ಅಭಿವೃದ್ಧಿಗೊಳಿಸುವುದು. ವ್ಯವಸ್ಥಿತ ಪ್ರಯೋಗಗಳ ಮೂಲಕ ತರ್ಕಬದ್ಧ ವಿಷಯಗಳತ್ತ ಮಕ್ಕಳನ್ನು ಆಕರ್ಷಿಸಲು ಗಮನ ನೀಡುವುದು.

9. ಯಾಂತ್ರಿಕ ಹಾಗೂ ವಿದ್ಯುತ್ ಉಪಕರಣಗಳ ಸರಳ ಮಾದರಿಗಳನ್ನು ವಸ್ತು ನಿಷ್ಟ, ನಿರ್ದಿಷ್ಟ ನಿಖರ ಜ್ಞಾನ ರಚನೆ ಮಾಡಿಕೊಳ್ಳಲು ಬಳಸುವ ಹಾಗೆ ಉತ್ತೇಜನ ನೀಡುವುದು.

10. ಮಾಧ್ಯಮಿಕ ಹಂತದಲ್ಲಿ ವಿಜ್ಞಾನ ಕಲಿಕೆಯು ಒಂದು ಶಿಸ್ತಿನಲ್ಲಿರುವಂತೆ ಮತ್ತು ವಿಜ್ಞಾನದ ವಿವಿಧ ಕ್ಷೇತ್ರಗಳನ್ನು ಒಂದುಗೂಡಿಸುವ ಸಮ್ಮಿಳಿತ ಶಿಕ್ಷಣದ ಮಾರ್ಗಗಳನ್ನು ಆರಂಭಿಸುವುದು.

11. ಪಠ್ಯಗಳಲ್ಲಿ ಕಲಿತ ತತ್ವಗಳನ್ನು ಆವಿಷ್ಕರಿಸುವ ಕೌಶಲ್ಯಗಳನ್ನು ಅಭಿವೃದ್ಧಿಗೊಳಿಸಲು ಕ್ರಮಕೈಗೊಳ್ಳುವುದು.


ಹೊಸಪಠ್ಯದ ಆಶಯಗಳು

ರಾ.ಪ.ಚೌ-2005ರ ಚೌಕಟ್ಟಿನಡಿಯಲ್ಲಿ ಈ ಪಠ್ಯಪುಸ್ತಕವನ್ನು ರಚಿಸಲಾಗಿದೆ. ವಿಜ್ಞಾನ ಪಠ್ಯಪುಸ್ತಕದಲ್ಲಿ ಮಗುವಿನ ದಿನನಿತ್ಯದ ಅನುಭವಗಳನ್ನು ಪರೀಕ್ಷಿಸುವ, ವಿಶ್ಲೇಷಿಸುವ ಅವಕಾಶವನ್ನು ನೀಡಲಾಗಿದೆ. ಪರಿಸರಕ್ಕೆ ಸಂಬಂಧಿಸಿದ ವಿಷಯಗಳು, ಚಟುವಟಿಕೆಗಳು ಹಾಗೂ ಪ್ರಾಜೆಕ್ಟ್‍ಗಳ ಮೂಲಕ ಕಲಿಯಲು ವಿಫುಲ ಅವಕಾಶಗಳನ್ನು ನೀಡಿದೆ. ಜ್ಞಾನ ಕಟ್ಟಿಕೊಳ್ಳುವ ಪ್ರಕ್ರಿಯೆ ವಿಜ್ಞಾನ ಕಲಿಕೆಗೆ ಪೂರಕವಾಗಿದೆ.

ಟ ವಿಜ್ಞಾನ ವಿಷಯವು ಕೇವಲ ಅಂಕಗಳಿಸಲು ಮಾತ್ರವಲ್ಲದೇ ತಮ್ಮ ಜೀವನದಲ್ಲಿ ಬರುವ ಸವಾಲುಗಳನ್ನು ಎದುರಿಸಲು ಪೂರಕವಾಗುವಂತೆ ರಚಿತವಾಗಿದೆ.

ಟ ವಿಜ್ಞಾನ ಕಲಿಕೆಯಲ್ಲಿ ಭಾರತೀಯ ಸಂಸ್ಕೃತಿಯ, ವೈಜ್ಞಾನಿಕ ಪರಿಕಲ್ಪನೆಗಳು ಮತ್ತು ಅವುಗಳ ತಿಳುವಳಿಕೆಯ ಬಗ್ಗೆ ಗಮನ ನೀಡಲಾಗಿದೆ. ಭಾರತೀಯ ವಿಜ್ಞಾನಿಗಳ ಜೀವನ ಹಾಗೂ ಅವರ ಸಾಧನೆಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದೆ.

ಟ ಮಗುವಿನ ನಿತ್ಯಜೀವನದ ಘಟನೆಗಳ ಅನುಭವದ ಮೂಲಕ ವೈಜ್ಞಾನಿಕ ಕಾರಣಗಳು, ಕಾರ್ಯ ಕಾರಣ ಸಂಬಂಧ ಮತ್ತು ಸತ್ಯಾಸತ್ಯತೆಗಳ ಅರಿವನ್ನು ಮೂಡಿಸುವಂತಿದೆ. ವೈಜ್ಞಾನಿಕ ಚೌಕಟ್ಟಿನೊಳಗೆ ಮಾನವನ ಬದುಕು ಮತ್ತು ವಾಸ್ತವಗಳ ಬಗ್ಗೆ ಪರಿಚಯ ಮಾಡಿದೆ.

ಟ ಆರೋಗ್ಯ ಮತ್ತು ನೈರ್ಮಲ್ಯಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಿದೆ.

ಟ ನಿತ್ಯಜೀವನದಲ್ಲಿ ನೈಸರ್ಗಿಕ ಸಂಪನ್ಮೂಲಗಳ ಸದ್ಬಳಕೆಯ ಬಗ್ಗೆ ತಿಳಿವಳಿಕೆ ಮೂಡಿಸಿದೆ.

ಟ ಪ್ರತಿ ಘಟಕದಲ್ಲೂ ವೈಚಾರಿಕತೆಯನ್ನು ಮೂಡಿಸುವ ಅನೇಕ ಚಟುವಟಿಕೆಗಳನ್ನು ನೀಡಲಾಗಿದೆ.

ಟ ಕಲಿಕೆಯು ಪಠ್ಯಪುಸ್ತಕ ಕೇಂದ್ರಿತವಾಗದೇ ಶಾಲೆಯ ಹೊರಗಿನ ಬದುಕಿನೊಂದಿಗೆ ತಮ್ಮ ಅನುಭವಗಳನ್ನು ಸಮೀಕರಿಸಿಕೊಂಡು ಜ್ಞಾನವನ್ನು ಕಟ್ಟಿಕೊಳ್ಳುವ ಹಾಗೂ ಸಂಯೋಜಿಸುವ ಅವಕಾಶವನ್ನು ನೀಡಿದೆ.

ಟ ಕಂಠಪಾಠದ ವಿಧಾನದ ಕಲಿಕೆಗೆ ಬದಲಾಗಿ ನೈಜ ಅನುಭವದ ಕಲಿಕೆಯ ಮೌಲ್ಯ ಮಾಡುವ ಬಗ್ಗೆ ಹೆಚ್ಚು ಒತ್ತು ನೀಡಿದೆ.

ಟ ಹೆಚ್ಚು-ಹೆಚ್ಚು ಚಟುವಟಿಕೆಗಳ ಮೂಲಕ ಮಗುವು ತನ್ನ ಸುತ್ತಲಿನ ಪ್ರಪಂಚ / ಪರಿಸರವನ್ನು ಅರ್ಥ ಮಾಡಿಕೊಳ್ಳಲು ಅವಕಾಶ ಕಲ್ಪಿಸಿಕೊಡಲಾಗಿದೆ.


ಪಠ್ಯಪುಸ್ತಕದಲ್ಲಿ ಅಳವಡಿಸಿಕೊಂಡಿರುವ ಹೊಸ ಅಂಶಗಳು

ವಿಜ್ಞಾನ ಕಲಿಕೆಯು ಸಾಮಾಜಿಕ ಪರಿವರ್ತನೆಯ ಅಸ್ತ್ರವೆಂದು ಎನ್.ಸಿ.ಎಫ್-2005 ಭಾವಿಸಿದೆ. ಈ ಆಶಯದಿಂದ ಕೆಳಗಿನ ಅಂಶಗಳನ್ನು ಹೊಸ ಪಠ್ಯ ಪುಸ್ತಕದಲ್ಲಿ ಸೇರ್ಪಡೆಗೊಳಿಸಿದೆ.

ಟ ವಿಜ್ಞಾನ ವಿಷಯದ ವಸ್ತು. ವಿಧಾನ ಮತ್ತು ಭಾಷೆಯು ಕಲಿಯುವವರ ವಯೋಮಾನ, ತಾರ್ಕಿಕತೆ ಮತ್ತು ವಿಮರ್ಶಾತ್ಮಕ ಚಿಂತನಾಶಕ್ತಿಗೆ ಸರಿಹೊಂದುವಂತಿದೆ.

ಟ ಪರಿಸರಕ್ಕೆ ಸಂಬಂಧಿಸಿದಂತೆ, ಮಕ್ಕಳ ಕುತೂಹಲ ಮತ್ತು ಸೃಜನಶೀಲತೆ ಇವುಗಳನ್ನು ಪೆÇೀಷಿಸಲು ಅಗತ್ಯವಾದ ವಿಧಾನಗಳನ್ನು ಮತ್ತು ಪ್ರಕ್ರಿಯೆಗಳನ್ನು ವಿದ್ಯಾರ್ಥಿ ವಿಜ್ಞಾನ ಶಿಕ್ಷಣದ ಮೂಲಕ ಕಲಿಯುವಂತಾಗಿದೆ. ಶಾಲಾ ಪಠ್ಯಕ್ರಮದ ಬಹುಪಾಲು ಹಂತಗಳಲ್ಲಿ ಪರಿಸರದ ಬಗ್ಗೆ ಕಾಳಜಿ ಮೂಡಿಸಲಾಗಿದೆ.

ಟ ಮಕ್ಕಳ ವಿಶಾಲ ಪರಿಸರವನ್ನು ಗಣನೆಗೆ ತೆಗೆದುಕೊಂಡು ವಿಜ್ಞಾನ ಶಿಕ್ಷಣವನ್ನು ರೂಪಿಸಲಾಗಿದೆ. ಜೊತೆಗೆ ಅವರು ಕಾರ್ಯ ನಿರ್ವಹಿಸಲು ಸೂಕ್ತ ಜ್ಞಾನ ಮತ್ತು ಕೌಶಲಗಳನ್ನು ಒದಗಿಸಿಕೊಟ್ಟಿದೆ.

ಟ ಸಮಾಜದ ಅಗತ್ಯಗಳಿಗೆ ತಕ್ಕಂತೆ ವಿಜ್ಞಾನ ಕಲಿಕೆಯು ಅರ್ಥಪೂಣವಾಗಿದ್ದು, ವಿಕಾಸಗೊಳ್ಳುವ ಗುರಿಗಳನ್ನೂ ಅಳವಡಿಸಿದೆ.

ಟ ವಿಜ್ಞಾನ ಕಿಟ್ + ಪ್ರಯೋಗಾಲಯ ನಿರ್ವಹಣೆ + ವಿಜ್ಞಾನ ಕ್ಲಬ್ - ಹೀಗೆ ಚಟುವಟಿಕೆಗಳನ್ನು ರೂಪಿಸಿದೆ.

ಟ ಪ್ರಶ್ನಿಸುವ ಮತ್ತು ಆಲೋಚಿಸುವ ಸಾಮಥ್ರ್ಯಗಳನ್ನು ಅಭಿವೃದ್ಧಿಪಡಿಸಲು ಸಾಕಷ್ಟು ಅವಕಾಶ ಕಲ್ಪಿಸಿದೆ. ಪ್ರಯೋಗ ನಿರ್ಧಾರ, ಪರಿಕಲ್ಪನೆಗಳ ಅವಲೋಕನ...ಹಾಗೂ ಸಾಬೀತುಪಡಿಸಿಕೊಳ್ಳಲು ವಿಫುಲ ಅವಕಾಶಗಳಿವೆ.

ಟ ಮಗುವು ತನ್ನ ಸುತ್ತಲಿನ ಪ್ರಪಂಚದ ಸಂಗತಿಗಳು / ಆಗು-ಹೋಗುಗಳನ್ನು ಅದ್ಭುತಗಳನ್ನು ಅರ್ಥೈಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದೆ..

ಟ ಚಿಂತನೆ, ಪ್ರತಿಸ್ಪಂದನೆ ಮತ್ತು ಕ್ರಮಬದ್ಧತೆ ಹಾಗೂ ವಸ್ತುನಿಷ್ಠತೆಯ ಗುಣಗಳನ್ನು ಮಕ್ಕಳಲ್ಲಿ ಅಭಿವೃದ್ಧಿಯಾಗುವಂತೆ ಕಲಿಕಾಂಶಗಳನ್ನು ಇರಿಸಿದೆ.

ಟ ಸಮಾಜದ ಬದಲಾವಣೆ ಮತ್ತು ಪ್ರಗತಿಯ ಅಗತ್ಯತೆಗಳನ್ನು ಮನವರಿಕೆ ಮಾಡಿಕೊಟ್ಟು, ಮಕ್ಕಳು ಬದಲಾದ ಸನ್ನಿವೇಶ / ಸಮಾಜದಲ್ಲಿ ಶಕ್ತಿಯುತವಾಗಿ ಕಾರ್ಯ ನಿರ್ವಹಿಸಲು ವಿಜ್ಞಾನ ಶಿಕ್ಷಣ ಅವಕಾಶ ಮಾಡಿಕೊಟ್ಟಿದೆ.

ಟ ದೈನಂದಿನ ಅನುಭವಗಳನ್ನು ಸ್ವತಃ ಪರೀಕ್ಷಿಸಿ, ವಿಶ್ಲೇಷಿಸಿ, ಚಿಂತನಶೀಲ ವಿಧಾನಗಳು ವಿಕಾಸಗೊಳ್ಳುವ ಮಾರ್ಗಗಳು ಅರ್ಥಪೂರ್ಣವಾಗುವಂತೆ ಮಾಡಲು, ಮಕ್ಕಳ ಕುತೂಹಲ ಹೆಚ್ಚಿಸಲು, ಸೃಜನಶೀಲರಾಗಲು ನೆರವಾಗುವಂತೆ ವಿಜ್ಞಾನ ಶಿಕ್ಷಣ ಪಠ್ಯಪುಸ್ತಕವು ರಚಿತವಾಗಿದೆ.