ಚತುರ್ಭುಜದ ಪಾರ್ಶ್ವಬಾಹುಗಳ ಮಧ್ಯ ಬಿಂದುಗಳನ್ನು ಸೇರಿಸಿದಾಗ ಸಮಾಂತರ ಚತುರ್ಭುಜವು ಉಂಟಾಗುತ್ತದೆ.

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೧೦:೨೯, ೨೧ ಫೆಬ್ರುವರಿ ೨೦೨೨ ರಂತೆ Girija (ಚರ್ಚೆ | ಕಾಣಿಕೆಗಳು) ಇವರಿಂದ (added Category:ಚತುರ್ಭುಜಗಳು using HotCat)
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)

ಕಲಿಕೆಯ ಉದ್ದೇಶಗಳು

ಚತುರ್ಭುಜದ ಪಾರ್ಶ್ವಬಾಹುಗಳ ಮಧ್ಯ ಬಿಂದುಗಳನ್ನು ಸೇರಿಸಿದಾಗ ಸಮಾಂತರ ಚತುರ್ಭುಜವು ಉಂಟಾಗುತ್ತದೆ ಎಂದು ಪರಿಶೀಲಿಸುವುದು.

ಅಂದಾಜು ಸಮಯ

4೦ ನಿಮಿಷಗಳು

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಪಾರ್ಶ್ವ ಕೋನಗಳು, ಚತುರ್ಭುಜಗಳು, ಸಮಾಂತರ ಚತುರ್ಭುಜದ ಬಗ್ಗೆ ಪೂರ್ವ ಜ್ಞಾನ

ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ

ಡಿಜಿಟಲ್: ಕಂಪ್ಯೂಟರ್, ಜಿಯೋಜಿಬ್ರಾ ಅಪ್ಲಿಕೇಶನ್, ಪ್ರೊಜೆಕ್ಟರ್.

ಡಿಜಿಟಲ್ ಅಲ್ಲದ: ವರ್ಕ್‌ಶೀಟ್ ಮತ್ತು ಪೆನ್ಸಿಲ್

ಬಹುಮಾಧ್ಯಮ ಸಂಪನ್ಮೂಲಗಳು

Download this geogebra file from this link.


ವಿಧಾನ/ಬೆಳವಣಿಗೆಯ ಪ್ರಶ್ನೆಗಳು

  1. ಚತುರ್ಭುಜ ABCD ಎಳೆಯಿರಿ
  2. ಚತುರ್ಭುಜದ ಬಾಹುಗಳಲ್ಲಿ ಮಧ್ಯದ ಬಿಂದುಗಳನ್ನು ಗುರುತಿಸಿ
  3. P ಎಂಬುದು ಚತುರ್ಭುಜದ AB ಬಾಹುವಿನ ಮಧ್ಯಬಿಂದು, ಅದೇ ರೀತಿ BC, CD ಮತ್ತು DA ಬಾಹುಗಳಿಗೆ Q, R ಮತ್ತು S ಕ್ರಮವಾಗಿ ಮಧ್ಯದ ಬಿಂದುಗಳು
  4. P, Q, R ಮತ್ತು S ಬಿಂದುಗಳನ್ನು ಸೇರಿಸಿ ಚತುರ್ಭುಜ PQRS ರಚಿಸಿ.
  5. ನೀವು ಚತುರ್ಭುಜದ ಸತತ ಬಾಹುಗಳ ಮಧ್ಯ-ಬಿಂದುಗಳನ್ನು ಸೇರಿದರೆ, ನೀವು ಯಾವ ಆಕಾರವನ್ನು ಪಡೆಯುತ್ತೀರಿ?
  6. ಚತುರ್ಭುಜ PQRS ಬಾಹುಗಳನ್ನು ಅಳೆಯಿರಿ? ನಿಮ್ಮ ತೀರ್ಮಾನವೇನು?
  7. ಚತುರ್ಭುಜಗಳ PQRS ನ ಕೋನಗಳನ್ನು ಗುರುತಿಸಿ ಮತ್ತು ಅಳೆಯಿರಿ? ನಿಮ್ಮ ತೀರ್ಮಾನವೇನು?
  8. ಜೋಡಿ ಪಾರ್ಶ್ವ ಕೋನಗಳನ್ನು ಗುರುತಿಸಿ? ನಿಮ್ಮ ತೀರ್ಮಾನವೇನು?
  9. ಚತುರ್ಭುಜ PQRS ನ ಮಧ್ಯಬಿಂದುಗಳನ್ನು ಸೇರಿಸಿದರೆ, ಯಾವ ರೀತಿಯ ಅಕೃತಿಯು ರೂಪುಗೊಳ್ಳುತ್ತದೆ?
  10. ಸಮಾಂತರ ಚತುರ್ಭುಜದ ಮುಖ್ಯ ಗುಣಲಕ್ಷಣಗಳು ಯಾವುವು?

ಮೌಲ್ಯ ನಿರ್ಣಯ ಪ್ರಶ್ನೆಗಳು

  • ಸಮಾಂತರ ಚತುರ್ಭುಜದ ಮಧ್ಯಬಿಂದುಗಳನ್ನು ಸೇರಿಸಿದರೆ, ಯಾವ ರೀತಿಯ ಆಕೃತಿ ರೂಪುಗೊಳ್ಳುತ್ತದೆ?