ಕೊಯರ್ ಕಾರ್ಯಗಾರ ವಿಜ್ಞಾನ-III

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಕೊಯರ್ ೩ ನೇ ಕಾರ್ಯಾಗಾರದ ಹಿನ್ನೆಲೆ- ವಿಜ್ಞಾನ ಪೆಬ್ರವರಿ 6-8

STF ಕಾರ್ಯಗಾರಗಳ ಪ್ರಕಿಯೆ ಮತ್ತು ಫಲಿತಾಂಶ

ಶಿಕ್ಷಕರು ಮತ್ತು ಭೋದಕ ಶಿಕ್ಷಕರ ಮೂಲಕ 2013-14 ನೇ ಸಾಲಿನ ಹೊಸ 9ನೇ ತರಗತಿಯ ಪಠ್ಯಪುಸ್ತಕಕ್ಕೆ ವಿದ್ಯನ್ಮಾನ ಸಂಪನ್ಮೂಲ ಸಂಗ್ರಹಾಲಯ ಅಭಿವೃದ್ದಿಪಡಿಸುವ ಉದ್ದೇಶದಿಂದ ಜುಲೈ-ಸೆಪ್ಟೆಂಬರ್ ತಿಂಗಳಿನಲ್ಲಿ ರಾಜ್ಯ ಮಟ್ಟದ ವಿಷಯ ಶಿಕ್ಷಕರ ವೇದಿಕೆ ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತು . ಈ ಕಾರ್ಯಗಾರದಲ್ಲಿ ಭಾಗವಹಿಸಿದ ಸಂಪನ್ಮೂಲ ವ್ಯಕ್ತಿಗಳು 9 ನೇ ತರಗತಿಯ ಪಠ್ಯಪುಸ್ತಕಗಳ ವಿಷಯಗಳಿಗೆ ಸಂಪನ್ಮೂಲಗಳನ್ನು ಅಭಿವೃದ್ದಿಪಡಿಸಿ ವಿಕೀ ವೆಬ್ ಪುಟದಲ್ಲಿ ಸೇರಿಸಿರುತ್ತಾರೆ. ಹಾಗು ಇದೇ ಸಂಪನ್ಮೂಲ ವ್ಯೆಕ್ತಿಗಳು ತಮ್ಮ ಜಿಲ್ಲಾ ಹಂತದಲ್ಲಿನನ ಶಿಕ್ಷಕರಿಗೆ ವಿಷಯ ಶಿಕ್ಷಕರ ವೇದಿಕೆ ಕಾರ್ಯಗಾರಗಳನ್ನು ನಡೆಸಿದ್ದಾರೆ. ಈ ಪ್ರಕ್ರಿಯೆಗಾಗಿ ಪ್ರತೀ ವಿಷಯಕ್ಕೆ ಸಂಪನ್ಮೂಲ ವ್ಯಕ್ತಿಗಳ 2 ತಂಡಗಳಿಗೆ ತರಬೇತಿ ನೀಡಲಾಗಿತ್ತು . ಅವರ ಕಾರ್ಯಗಳೆಂದರೆ :-

  1. ರಾಜ್ಯ ಮಟ್ಟದ ಕಾರ್ಯಗಾರದಲ್ಲಿ (5+3 ದಿನ) ಸಂಪನ್ಮೂಲಗಳನ್ನು ಅಭಿವೃದ್ದಿಪಡಿಸುವುದು ಮತ್ತು ಕೊಯರ್ ವಿಕೀ ಪುಟಕ್ಕೆ ಅಪ್ಲೋಡ್ ಮಾಡುವುದು .
  2. ಸಂಪನ್ಮೂಲ ಅಭಿವೃದ್ದಿ ಮತ್ತು ಬಳಕೆಯ ಜ್ಞಾನ ಹೆಚ್ಚಿಸಲು ಜಿಲ್ಲಾ ಹಂತದ ಶಿಕ್ಷಕರಿಗೆ ತರಬೇತಿ ನೀಡುವುದು (5 ದಿನ).

STF ಕಾರ್ಯಾಗಾರಗಳ ಫಲಿತಾಂಶಗಳು

  1. 9ನೇ ತರಗತಿಯ ವಿಜ್ಞಾನ, ಗಣಿತ ಮತ್ತು ಸಮಾಜ ವಿಜ್ಞಾನದ ಪಠ್ಯ ವಿಷಯಗಳ ಸುಮಾರು 20ಕ್ಕೂ ಹೆಚ್ಚು ಅದ್ಯಾಯಗಳಿಗೆ ಹಲವಾರು ಚಟುವಟಿಕೆಗಳನ್ನೊಳಗೊಂಡ ಸಂಪನ್ಮೂಲ ಅಭಿವೃದ್ದಿಪಡಿಸಲಾಗಿದೆ.
  2. ವೆಬ್ ಆಧಾರಿತ ಸಂಪನ್ಮೂಲ ಅಭಿವೃದ್ದಿಪಡಿಸುವುದಕ್ಕಾಗಿಯೇ ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ಶಿಕ್ಷಕರು ಹಾಗು ಡಯಟ್ ಉಪನ್ಯಾಸಕರನ್ನೊಳಗೊಂಡ ಸುಮಾರು 90 ಜನರಿಗೆ ತರಭೇತಿ ನೀಡಲಾಗಿದೆ.
  3. ರಾಜ್ಯ ಮಟ್ಟದಲ್ಲಿನ ತರಭೇತಿ ಪಡೆದ ಸಂಪನ್ಮೂಲ ವ್ಯಕ್ತಿಗಳು ಜಿಲ್ಲಾ ಹಂತದಲ್ಲಿ ಕೊಯರ್ ಬಳಕೆ ಮತ್ತು ಕೊಯರ್ ಗೆ ಸಂಪನ್ಮೂಲ ನೆರವು ನೀಡುವ ಬಗ್ಗೆ ಆಯಾ ಜಿಲ್ಲೆಯ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಮತ್ತು ಮುಖ್ಯಶಿಕ್ಷಕರುಗಳಿಗೆ ತರಭೇತಿ ನೀಡಿದ್ದಾರೆ.
  4. ವಿವಿಧ ಜಿಲ್ಲೆಗಳ ಬಹಳಷ್ಟು ಶಿಕ್ಷಕರು ಕೊಯರ್ ಪುಟಕ್ಕೆ ಸಂಪನ್ಮೂಲಗಳ ನೆರವು ನೀಡುತ್ತಿದ್ದಾರೆ.

ಸಂಪನ್ಮೂಲ ಅಭಿವೃದ್ದಿ ಪ್ರಕ್ರಿಯೆಯ ಮುಂದಿನ ಯೋಜನೆಗಳು

  1. ವಿವಿಧ ಜಿಲ್ಲೆಗಳ ಶಿಕ್ಷಕರು ಹಂಚಿಕೊಂಡಿರುವ ಸಂಪನ್ಮೂಲಗಳನ್ನು ವಿಶ್ಲೇಷಣೆ ಮಾಡುವುದ
  2. ಜಿಲ್ಲಾಹಂತದ ತರಭೇತಿಯಲ್ಲಿ ಕಲಿಕಾರ್ಥಿಗಳ ಮೂಲಕ ವ್ಯಕ್ತವಾದ ಅಭಿಪ್ರಾಯಗಳ ಆಧಾರದ ಮೇಲೆ ಕೊಯರ್ ಪುಟಗಳನ್ನು ವಿಶ್ಲೇಷಣೆ ಮತ್ತು ಪರಿಷ್ಕರಣೆ ಮಾಡುವುದು .
  3. ಕೊಯರ್ ಗೆ ಸಂಪನ್ಮೂಲಗಳ ನೆರವು ನೀಡಲು, ವಿಶ್ಲೇಷಿಸಲು ಮತ್ತು ಅಪ್ಲೋಡ್ ಮಾಡಲು ಕೆಲವು ನಿರ್ದಿಷ್ಟ ಪ್ರಕ್ರಿಯೆಗಳನ್ನು ಮತ್ತು ಮಾನದಂಡಗಳನ್ನು ನಿಗದಿಪಡಿಸುವುದು.
  4. ಶಿಕ್ಷಕರ ತರಭೇತಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿಸಲು ಸಹಕಾರವಾಗುವಂತೆ ಜಿಲ್ಲಾ ಹಂತದ ಕೊಯರ್ ಕಾರ್ಯಗಾರಗಳ ಅನುಭವ ಹಂಚಿಕೊಳ್ಳುವುದು.
  5. Ideate on the training needs and processes for the 2014-15 academic year

ಕಾರ್ಯಾಗಾರದ ಅವಧಿ ಮತ್ತು ರಚನೆ

ಈ ಮೂರನೇ ಕೊಯರ್ ಕಾರ್ಯಗಾಗರವು ವಿಜ್ಞಾನ, ಗಣಿತ ಮತ್ತು ಸಮಾಜ ವಿಜ್ಞಾನದ ಶಿಕ್ಷಕರನ್ನೋಳಗೊಂಡ ವಿಶೇಷ ತಂಡವನ್ನು ಹೊಂದಿದ್ದು, ಸಂಪನ್ಮೂಲ ರಚನೆ, ಅಪ್ಲೋಡ್ ಮತ್ತು ಹೊಸ ಹೊಸ ಚಟುವಟಿಕೆಗಳ ಕುರಿತು ಕಾರ್ಯ ನಿರ್ವಹಿಸಲು ಈ ಶಿಕ್ಷಕರು ಸಜ್ಜುಗೊಳಿಸುವುದಾಗಿದೆ. ಇಲ್ಲಿಯವರೆಗಿನ ಕೊಯರ್ ಫಲಿತಾಂಶದ ಬಗ್ಗೆ ಚಿಂತನೆ ನಡೆಸಲು ಹಾಗು ಮುಂದಿನ ಯೋಜನೆಗಳನ್ನು ಯೋಚಿಸಲು ಪೂರಕವಾಗುವಂತೆ ಈ ಕಾರ್ಯಗಾರವನ್ನು 3 ದಿನ ನಡೆಸಲು ಯೋಜಿಸಲಾಗಿದೆ, This core group will continue to work through the next year for this resource creation and curation.

Agenda

Will be added soon.


Handouts

Will be added soon.