"ಮಾಡ್ಯೂಲ್ ೭ ಪುರುಷ ಪ್ರಧಾನತೆ ಭಾಗ ೨" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
(ಹೊಸ ಪುಟ: ಗ)
 
೧ ನೇ ಸಾಲು: ೧ ನೇ ಸಾಲು:
+
=== ಉದ್ದೇಶ: ===
 +
ಮಾರುಕಟ್ಟೆಗಳು ಹೇಗೆ ಬ್ಯೂಟಿ ಎಂದರೇನು ಎನ್ನುವುದರ ಬಗ್ಗೆ ಪರಿಣಾಮ ಬೀರುತ್ತವೆ ಹಾಗು ಅವು ಹೇಗೆ ಪರುಷ ಪ್ರಧಾನತೆಯ ಭಾಗ ಎನ್ನುವುದರ ಬಗ್ಗೆ ಮಾತನಾಡುವುದು.
 +
 
 +
=== ಪ್ರಕ್ರಿಯೆ ===
 +
ಕುಶಲೋಪರಿಯ ಮೂಲಕ ನಮ್ಮ ಮಾತುಕತೆಯನ್ನು ಶುರು ಮಾಡುವುದು.
 +
 
 +
ಕಟ್ಟುಪಾಡುಗಳನ್ನು ಜ್ಞಾಪಿಸುವುದು - ಅವರು ಹೇಳಿಲ್ಲ ಅಂದರೆ ನಾವೇ ಒಂದೊಂದಾಗಿ ಹೇಳುವುದು.  
 +
 
 +
೧. ಏನಾದ್ರೂ ಮಾತಾಡ್ಬೇಕಿದ್ರೆ ಕೈ ಎತ್ತಿ ಮಾತಾಡೋಣ
 +
 
 +
೨. ಬೇರೆಯವರು ಮಾತಾಡ್ತಿದ್ರೆ ಅವರನ್ನ interrupt ಮಾಡೋದಾಗ್ಲಿ, ನಗೋದು, ಅಣಕ ಮಾಡೋದಾಗ್ಲಿ ಮಾಡೋದು ಬೇಡ
 +
 
 +
೩. ಎಲ್ಲಾರೂ ಭಾಗವಹಿಸಬೇಕು
 +
 
 +
೪. ನೀವು ಗಲಾಟೆ ಮಾಡ್ತ ಇದರೆ ನಾವು ಸೈಲೆಂಟ್‌ ಆಗ್ತೀವಿ. ಆಗ್ಲೂ ಮಾತಾಡ್ತ ಇದ್ರೆ ನಾವು ವಾಪಸ್‌ ಹೊರಟು ಹೋಗ್ತೀವಿ
 +
 
 +
೫. ಫೋಟೋ ತೆಗೀವಾಗ ಫೋಸ್‌ ಕೊಡಬೇಡಿ
 +
 
 +
೬. ನಾವು ನಿಮಗೆ ಎಷ್ಟು ಮರ್ಯಾದೆ  ಕೊಡ್ತಿವೋ ನಿವು ನಮಗೆ ಅಷ್ಟೇ ಮರ್ಯಾದೆ  ಕೊಡಬೇಕು    '''10 ನಿಮಿಷ'''
 +
 
 +
ಇಲ್ಲಿಯವರೆಗೆ ಮಾತನಾಡಿದ ವಿಷಯಗಳ ಬಗ್ಗೆ ನೆನಪಿಸುವುದು. ಕಿಶೋರಿಯರು ಕೆಲವು ವಿಷಯಗಳನ್ನು ಹೇಳಬಹುದು. ಕೆಲವು ವಿಷಯಗಳ ಬಗ್ಗೆ ಹೇಳದೇ ಇರಬಹುದು. ಹೇಳದೆ ಇದ್ದರೆ ನಾವೇ daily routine ಚಟುವಟಿಕೆಯ ಬಗ್ಗೆ ಹೇಳಿ, ಈ ರೀತಿ ಗಂಡುಮಕ್ಕಳು ಈ ರೀತಿಯ ಕೆಲಸನ ಮಾಡಬೇಕು, ಹೆಣ್ಣು ಮಕ್ಕಳು ಈ ರೀತಿಯ ಕೆಲಸಗಳನ್ನೇ ಮಾಡಬೇಕು ಅನ್ನುವುದಕ್ಕೆ ಒಂದು ಹೆಸರು ಹೇಳಿದ್ವಿ, ಅದೇನಂದ್ರೆ ಪುರುಷ ಪ್ರಧಾನತೆ.
 +
 
 +
ಬೋರ್ಡಿನ ಮೇಲೆ ದೊಡ್ಡದಾಗಿ ಬರೆದು ತೋರಿಸುವುದು.
 +
 
 +
ಪುರುಷ ಪ್ರಧಾನತೆ ಅಂದರೆ ಪುರುಷರಿಗೇ ಹೆಚ್ಚಿನ ಅಧಿಕಾರ, ಅವಕಾಶ, ಮನ್ನಣೆ ಕೊಡುವ ವ್ಯವಸ್ಥೆ. ಇದರಲ್ಲಿ ಹೆಣ್ಣು ಮಕ್ಕಳನ್ನು ಕಡೆಗಣಿಸಲಾಗುತ್ತದೆ. ಇವತ್ತು ಇದರ ಬಗ್ಗೆ ಇನ್ನೂ ಹೆಚ್ಚು ತಿಳಿದುಕೊಳ್ಳೋಣ.
 +
 
 +
ದೊಡ್ಡ ಗುಂಪಿನಲ್ಲಿಯೇ, ನಿಮ್ಮ ಪ್ರಕಾರ Beauty ಅಥವ ಸೌಂದರ್ಯ - ಯಾರನ್ನಾದ್ರೂ ನಾವು ಸುಂದರವಾಗಿದಾರೆ ಅಂತಿದೀವಿ ಇಲ್ಲ ಬ್ಯೂಟಿಫುಲ್ ಆಗಿದಾರೆ ಅಂತಿದೀವಿ ಅಂದ್ರೆ ಏನು ಅಂತ ಹೇಳ್ತೀರ?” ಎಂದು ಕೇಳುವುದು. ಅವರು ಹೇಳುವ ಉತ್ತರಗಳನ್ನು ಬೋರ್ಡಿನ ಮೇಲೆ ಬರೆಯುವುದು
 +
 
 +
ಅವರು, ತೆಳ್ಳಗಿರಬೇಕು, ಮೂಗು, ಕೂದಲು ಇತ್ಯಾದಿ ಹೇಳಬಹುದು
 +
 
 +
ನಂತರ ಪ್ರೊಜೆಕ್ಟರ್‌ನಲ್ಲಿ ಮಹಿಳೆಯರಿಗಾಗಿ ಮಾಡಿದ ಒಂದೊಂದೇ ಒಂದೊಂದೇ ಜಾಹಿರಾತುಗಳನ್ನು ತೋರಿಸುವುದು. ಒಟ್ಟೂ ೪ ಜಾಹಿರಾತುಗಳನ್ನು ತೋರಿಸುವುದು  
 +
 
 +
ಪ್ರತಿ ಜಾಹಿರಾತು ಆದ ಮೇಲೆ, ಇದರಲ್ಲಿರುವವರು ನಿಮ್ಮ ಪ್ರಕಾರ ಹೇಗಿದ್ದಾರೆ ಅಂತ ಕೇಳುವುದು, ಬಣ್ಣ ಹೇಗಿದೆ, ಉದ್ದನ ಗಿಡ್ಡನ, ದಪ್ಪನ ಸಣ್ಣನ, - ಜೋರಾಗಿ ಹೇಳಿಸುವುದು
 +
 
 +
ಕಿಶೋರಿಯರು ಹೇಳುವುದನ್ನು ಬೋರ್ಡಿನ ಮೇಲೆ ಬರೆಯುವುದು.
 +
 
 +
ಇದೇ ರೀತಿ ಪುರುಷರಿಗಾಗಿ ಮಾಡಿದ ೪ ಜಾಹಿರಾತುಗಳನ್ನು ತೋರಿಸುವುದು. ಪ್ರತಿ ಜಾಹಿರಾತು ಆದ ಮೇಲೆ, ಇದರಲ್ಲಿರುವವರು ನಿಮ್ಮ ಪ್ರಕಾರ ಹೇಗಿದ್ದಾರೆ ಅಂತ ಕೇಳುವುದು, ನೋಡಲು ಹೇಗಿದ್ದಾರೆ, ಬಾಡಿ ಹೇಗಿದೆ,

ಎಲ್ಲ ಜಾಹಿರಾತುಗಳನ್ನು ತೋರಿಸಿದ ನಂತರ, ಬೋರ್ಡಿನ ಮೇಲೆ ಬರೆದಿರುವುದನ್ನು ಗಮನಿಸಲು ಹೇಳುವುದು.
 +
 
 +
ನೀವು ಹೇಳಿದ ಬ್ಯೂಟಿ ಅಂದ್ರೆ ಏನು ಅಂತ ಹೇಳಿದ್ದೂ, ಜಾಹಿರತಾತುಗಳ ಬಗ್ಗೆ ಹೇಳಿದ್ದೂ ಒಂದೇ ಥರ ಇದೆ ಅನ್ಸುತ್ತೆ. ಅಲ್ವ? ಎಂದು ಕೇಳುವುದು.
 +
 
 +
ಆದರೆ ನಮ್ಮ ಸುತ್ತ ಮುತ್ತ ನೋಡಿದ್ರೆ ಎಲ್ಲರೂ ಇದೇ ರೀತಿ ಇರಲ್ಲ ಅಲ್ವ? ಕೆಲವೊಬ್ರು ಸಣ್ಣ ಇರ್ತಾರೆ,, ಇನ್ನ ಕೆಲವರು ಸ್ವಲ್ಪ ದಪ್ಪ ಇರ್ತಾರೆ. ಇನ್ನು ಕೆಲವರು ಎತ್ತರ, ಇನ್ನು ಕೆಲವರು ಕುಳ್ಳ, ಕೆಲವರು ಬೆಳ್ಳಗೆ ಇನ್ನ ಕೆಲವರು ಅಷ್ಟು ಬೆಳ್ಳಗೆ ಇರಲ್ಲ. ಅದ್ರೂ ನಮಗೆ ಇವರ ತರನೇ ಇರಬೇಕು ಅನ್ಸುತ್ತೆ ಅಲ್ವ?
 +
 
 +
ಆಲಿಯಾ ಭಟ್‌ ನೋಡಿದ್ರೆ ಅಯ್ಯೋ, ನಾನೂ ಕೂಡ ಅವಳ  ಥರನೇ, ಎತ್ತರ, ಬೆಳ್ಳಗೆ, ತೆಳ್ಳಗೆ ಇದ್ದಿದ್ರೆ ಚೆನ್ನಾಗಿರ್ತಿತ್ತು ಅನ್ಸುತ್ತೆ ಅಲ್ವ?
 +
 
 +
ಬ್ಯೂಟಿ ಅಂದರೆ ಏನು ಅಂತ ನಾವು ಅಂದ್ಕೋತೀವೋ ಅದು ಈ ಜಾಹಿರಾತುಗಳ ಮೂಲಕ ನಮಗೆ influence ಆಗಿರೋದು ಅಂತ ಅನ್ಸುತ್ತೆ? ಇದನ್ನ ನೀವು ಒಪ್ತೀರ?
 +
 
 +
ಇದೆಲ್ಲ ಬರೋದು ಹೆಣ್ಮಕ್ಳು ಹೀಗೆ ಇರಬೇಕು, ಗಂಡ್ಮಕ್ಳು ಹೀಗೇ ಇರಬ್ಏಕು ಅನ್ನೋದು ಬರೋದು ಕೂಡ ಪುರುಷಪ್ರಧಾನತೆ ಇಂದಾನೆ
 +
 
 +
ಹೆಣ್ಣು ಗಂಡಿನ ಮಧ್ಯೆ ಅಸಮಾನತೆಯನ್ನ ಹೆಚ್ಚು ಮಾಡೋದ್ರಲ್ಲಿ ಮಾಧ್ಯಮಗಳದ್ದು ಮೇಲುಗೈ ಗೊತ್ತ? ಅದು ಹೇಗೆ ಅಂತ ನಾನ್ ಹೇಳ್ತೀನಿ ಕೇಳಿ.
 +
 
 +
'''ಫಿಲಮ್ ಗಳ ಮುಖಾಂತರ ಆಗೋದು ಅಥವ ಆಗ್ತಿರೋದು ಅಥವ ಆಗಿರೋದು ಏನು ?'''
 +
 
 +
೧.  ಪ್ರೀತಿಯ ಹೆಸರು ಹೇಳಿ, ಫಾಲೋ ಮಾಡಿ, ಕಿರಿಕಿರಿ ಮಾಡಿ, ಹಿಂಸೆ ಮಾಡೋದು ಓಕೆ ಅಂತ ಹುಡುಗರಿಗೆ ಅನ್ನಿಸೋ ಹಾಗೆ ಮಾಡಿರೋದು (ಖರಾಬು ಹಾಡು ಕಣ್ಣಮುಂದೆ ತಂದ್ಕೊಂಡ್ರೆ, ಇದೇನು ಪಾಯಿಂಟ್ ಅಂತ ಗೊತ್ತಾಗುತ್ತೆ)
 +
 
 +
೨. ಹೀರೋ ಪ್ರೊಟೆಕ್ಷನ್ ಅಡಿಯಲ್ಲಿ ಮಾತ್ರ ಹೀರೋಯಿನ್ ಸೇಫ್ ಅನ್ನೋ ಭಾವನೆ ಹುಟ್ಟಾಕಿರೋದು - ಅಂದ್ರೆ ನಿಜ ಜೀವನದಲ್ಲಿ ಪುರುಷ ಪ್ರಧಾನತೆಯಿಂದಾಗಿ ಹೆಣ್ಣು ಮಕ್ಕಳನ್ನ ಗಂಡು ಮಕ್ಕಳ ಜೊತೆಯಿಲ್ಲದೇ ಇದ್ದರೆ ಕಳ್ಸಲ್ವಲ್ಲ ಹಾಗೆ
 +
 
 +
೩. ಪ್ರೀತಿ ಮಾಡೋದಿಕ್ಕೆ ಹಾಸ್ಯಾಸ್ಪದವಾದ ಕಾರಣಗಳನ್ನ ಒಪ್ಕೊಳ್ಳೋ ಹಾಗೆ ಮತ್ತೆ ಅದನ್ನ ನಿಜ ಜೀವನದಲ್ಲೂ ಹುಡುಗರು, ಹುಡುಗೀರು ಫಾಲೋ ಮಾಡೋ ಹಾಗೆ ಮಾಡಿರೊದು. ಟ್ರಾಫಿಕ್ ಜಾಮಲ್ಲಿ ಪಾಸ್ ಆಗ್ತಿರೋ ಬಸ್ಸಲ್ಲಿರೋ ಹುಡ್ಗೀನ ಕಿಟ್ಕಿ ಮೂಲಕ ನೋಡಿ ನೋಡಿ ಪ್ರೀತ್ಸೋದು, ನಿಂಗೋಸ್ಕರ ನಾನು ಸಾಯಕ್ಕೂ ರೆಡಿ ಅಂತ ರಕ್ತದಲ್ಲಿ ಲೆಟರ್ ಬರಿಯೋದು ಇತ್ಯಾದಿ
 +
 
 +
೪. ಹಿಂಸೆ ಮತ್ತೆ ದೌರ್ಜನ್ಯನ ಸರ್ವೇ ಸಾಮಾನ್ಯ ಅನ್ನೋ ಹಾಗೆ ತೋರ್ಸೋದು. ವಿಲನ್ ಕೈಲಿ ಹೆಣ್ಣು ಮಕ್ಕಳನ್ನ ಹೊಡೆಸೋದು, ಹೀರೋನ ಮಾನ ಅವಮಾನಗಳಿಗಾಗಿ ಅವನ ಮನೆಯ ಹೆಣ್ಣು ಮಕ್ಕಳನ್ನ ಕಿಡ್ನ್ಯಾಪ್ ಮಾಡ್ಸೋದು ಇನ್ನೂ ಇನ್ನೂ ಏನೇನೋ
 +
 
 +
೫. ಈಗಾಗಲೇ ಇರುವಂತಹ ಕಟ್ಟು ಪಾಡುಗಳನ್ನ ಕಮ್ಮಿ ಮಾಡೋ ಕಡೆ ಅಲ್ಲದೆ, ಜಾಸ್ತಿ ಮಾಡೋದು. ಸಾಮಾಜಿಕ ಪಾತ್ರಗಳು ಮತ್ತು ಅವುಗಳ ಜವಾಬ್ದಾರಿಗಳನ್ನ ಗಟ್ಟಿ ಮಾಡೋದು. ಇಲ್ಲೂ ಹೆಣ್ಣು ಮಕ್ಕಳು ನಿರ್ಧಾರ ಮಾಡಲ್ಲ, ಅಕ್ಕ ಸೀನಲ್ಲಿರಲ್ಲ, ಹಾಡುಗಳಾದ್ಮೇಲೆ ಹೀರೋಯಿನ್ ಫಿಲಮ್ಮಲ್ಲಿರಲ್ಲ ಫಿಲಮ್ಮಿನ ಜವಾಬ್ದಾರಿ ಮತ್ತೆ ಕಥೆ ಹೀರೋದ್ದೆ.  
 +
 
 +
೬. ಆಮೇಲೆ ಗಂಡು ಅಂದ್ರೆ ಹೀಗೇ ಇರಬೇಕು ಅಂದ್ರೆ ಪೌರುಷವಂತ, ಜವಾಬ್ದಾರಿ ಹೊರುವವನು ಮತ್ತೆ ರಕ್ಷಕ, ಹೆಣ್ಣು ಅಂದರೆ ಹೀಗೇ ಇರ್ಬೇಕು ಅಂದ್ರೆ ಸುಂದರಿ, ಸುಶೀಲೆ ಮತ್ತು ಸಹನಶೀಲೆ.
 +
 
 +
೭. ಇನ್ನೂ ನಿಮಗೆ ಶಾಕ್ ಆಗೋ ವಿಷಯ ಇನ್ನೊಂದಿದೆ, ಮನೆಯಲ್ಲಿ ನಾವು ಯಾವ ಥರ ಬಟ್ಟೆ ಹಾಕ್ಕೋಬೇಕು, ಹೇಗಿದ್ರೆ ಹೊರಗೆ ಹೋಗಬಹುದು ಅಂತ ಹೇಳೋವ್ರು, ಮತ್ತೆ ಸ್ಲೀವ್ ಲೆಸ್ ಹಾಕ್ಕೊಳಕ್ಕೆ, ನಮಗಿಷ್ಟ ಬಂದಹಾಗೆ ಹೇರ್ ಸ್ಟೈಲ್ ಮಾಡ್ಕೊಳಕ್ಕೆ ಬಿಡದೇ ಇರೊ ನಮ್ಮ ಸಮಾಜದ ಜನರು - ಈ ಫಿಲಮ್ಮುಗಳಲ್ಲಿ ಬರೋ ಐಟಮ್ ಸಾಂಗ್ಸ್ ನೋಡಿ ಖುಷಿ ಪಡೋದು, ಶಿಳ್ಳೆ ಹಾಕೋದು, ಆ ಹೀರೋಯಿನ್ಸ್ ಬಗ್ಗೆ ಪೋಲಿ ಕಾಮೆಂಟ್ಸ್ ಮಾಡೋದು ಮಾಡ್ತಾರಲ್ಲ, ಇದ್ರಿಂದಾನೂ ಇರ್ಬೋದಲ್ವ, ನಮ್ಮನೆ ಮಕ್ಳನ್ನ ಬಿಟ್ಟು ಎಲ್ಲಾ ಹೆಣ್ಮಕ್ಳನ್ನ ರೇಗುಸ್ಬೋದು ಅಂತ ಮೆಜಾರಿಟಿ ಗಂಡು ಮಕ್ಕಳು ಅಂದ್ಕೊಂಡಿರೋದು?  
 +
 
 +
ಇನ್ಮುಂದೆ ಗಮನಿಸಿ, ಕಥೆ ಯಾವುದೇ ಇರಲಿ, ಹೀರೋಯಿನ್ ಗೆ ಮತ್ತೆ ಉಳಿದ ಹೆಣ್ಣು ಪಾತ್ರಗಳಿಗೆ ಫಿಲಮ್ಮಲ್ಲಿ ಎಷ್ಟು ನಿಮಿಷದ ಕಥೆ ಬರ್ದಿದಾರೆ, ಹಿಂಸೆ ಮತ್ತು ದೌರ್ಜನ್ಯದ ಫೈಟಿಂಗ್ ಸೀನುಗಳಿಗೆ ಎಷ್ಟು ಸಮಯ ಕೊಟ್ಟಿದ್ದಾರೆ, ಐಟಮ್ ಸಾಂಗ್ ನ ಹಾಡಿನಲ್ಲಿ ಏನ್ ಹೇಳ್ತಿದಾರೆ, ಆ ಸಾಂಗ್ನಲ್ಲಿರೋ ಹುಡುಗೀಗೆ ಯಾವ ಥರ ಬಟ್ಟೆ ಹಾಕ್ಸಿದಾರೆ ಮತ್ತೆ ಆ ಹಾಡು ಬಂದಾಗ ಹುಡುಗರು ಏನ್ಮಾಡ್ತಾರೆ ಅಂತ.  
 +
 
 +
ಇನ್ನ ಟೀ.ವೀ ವಿಷಯಕ್ಕೆ ಬರೋಣ. ಇಲ್ಲಿ ಆಗೋದು ನಿಜಕ್ಕೂ ಹೆಣ್ಣು ಮಕ್ಕಳ ಸ್ಥಾನಮಾನ ಕೆಳಕ್ಕೆ ತರೋಂತದ್ದೇ.
 +
 
 +
ಸೀರಿಯಲ್ ಗಳಲ್ಲಿ ಕಥೆ ಎಳೀತಾರೆ, ತುಂಬಾ ಜಾಹೀರಾತು ಬರುತ್ತೆ ಅನ್ನೋದೆಲ್ಲ ಪಕ್ಕಕ್ಕಿಟ್ರೇ, ಇದ್ರಲ್ಲಿ ಯಾವಾಗ್ಲೂ ಹೀರೋ ಕೋಟ್ಯಾಧಿಪತಿ, ಹೀರೋಯಿನ್ ಬಡ ಅಳುಮುಂಜಿ ಹೆಣ್ಣು ಮಗಳಾಗಿರ್ತಾಳೆ. ಮತ್ತೆ ಈ ಕಥೆಗಳಲ್ಲಿ ಕೇಡಿಗಳು ಅಥವ ವಿಲನ್ ಯಾವಾಗ್ಲೂ ಆಸ್ತಿಯ ಬಗ್ಗೆನೋ ಅಥವ ಹೀರೋನ ಪ್ರೀತಿಗಾಗೋ ಏನು ಬೇಕಾದರೂ ಮಾಡೋದಿಕ್ಕೆ ರೆಡಿ ಇರುವ ಹೆಣ್ಣುಮಕ್ಕಳೇ ಆಗಿರುತ್ತಾರೆ. ಇವರು ವಿಷ ಹಾಕ್ತಾರೆ, ಮೆಟ್ಟಿಲ ಮೇಲೆ ಎಣ್ಣೆ ಹಾಕ್ತಾರೆ, ಆಕ್ಸಿಡೆಂಟ್ ಮಾಡುಸ್ತ್ರಾರೆ, ಹೊಡುಸ್ತಾರೆ ಒಟ್ಟಾರೆ ಹೆಣ್ಣು ಮಕ್ಕಳಿಗೆ ಧ್ವೇಷ ಸಹಜವಾದದ್ದು ಅನ್ನೋ ಸಂದೇಶ ನೋಡುಗರ ಮನಸ್ಸಿನಲ್ಲಿ ಮೂಡೋ ಹಾಗೆ ಮಾಡ್ತಾರೆ. ಮತ್ತೆ ಒಂದೇ ಸಮ ಅನ್ಯಾಯಗಳಿಗೆ ಒಳಗಾಗಿ ಗೋಳಾಡೋ ಹೆಣ್ಣುಮಕ್ಕಳಿಂದ, ಈ ಹೆಣ್ಣು ಮಕ್ಕಳಿಗೆ ಏನೂ ಕೈಲಾಗಲ್ಲ ಅನ್ನೋ ಸಂದೇಶಾನೂ ಸಿಗುತ್ತೆ. ಇವುಗಳಿಂದ ಹೆಣ್ಣು ಮಕ್ಕಳ ಸ್ಟೇಟಸ್ ಕಮ್ಮಿ ಆದಹಾಗೇನೇ ತಾನೆ ?
 +
 
 +
'''ಬನ್ನಿ ಜಾಹೀರಾತುಗಳು ಅಥವ ಅಡ್ವರ್ಟೈಸ್ಮೆಂಟ್ ಗಳ ಬಗ್ಗೆ ತಿಳ್ಕೊಳ್ಳೋಣ:'''
 +
 
 +
ಈ ಜಾಹೀರಾತುಗಳಲ್ಲಿ ಹೆಣ್ಣು ಮತ್ತು ಗಂಡು ಅವರವರ ಸಾಮಾಜಿಕ ಪಾತ್ರಗಳಲ್ಲಿ ಪುರುಷ ಪ್ರಧಾನತೆ ಕೊಟ್ಟಿರುವ ಜವಾಬ್ದಾರಿಗಳನ್ನ ಎತ್ತಿಹಿಡಿಯೋದನ್ನ ನೀವು ನೋಡೇ ಇರ್ತೀರ ತಾನೆ?
 +
 
 +
ಬಟ್ಟೆ ಒಗೆಯೋ ಸೋಪು, ವಾಶಿಂಗ್ ಮೆಷೀನ್, ಬಟ್ಟೆಗಳ ಘಮ ಘಮಕ್ಕಾಗಿ ಹಾಕುವ ಸುಗಂಧಗಳಿಗೆ, ಕಾಫಿ ಮಾಡೋದಿಕ್ಕೆ, ಅಡಿಗೆ ಮನೆಯಲ್ಲಿ ಬಳಸುವ ಎಣ್ಣೆ, ಪಾತ್ರೆ, ಸಾಂಬಾರ್ ಪುಡಿ, ಸಾರು ಪುಡಿ ಇವೆಲ್ಲಕ್ಕೂ ಹೆಣ್ಣು ಮಕ್ಕಳನ್ನೇ ತೋರಿಸುತ್ತಾರೆ. ಕಾರು, ಕಾರಿನ ಟೈರು, ಪೈಂಟು, ಸಿಮೆಂಟು, ಶೂಸು,  ಗಳಿಗೆ ಗಂಡು ಮಕ್ಕಳೇ ಮಾಡೆಲ್ ಗಳು. ಇವೆಲ್ಲಾ ಕೆಲಸಗಳಾದರೆ, ಇನ್ನ ಹೆಣ್ಣು ಸುಂದರವಾಗಿರಬೇಕು/ಲಕ್ಷಣವಾಗಿರಬೇಕು/ಹೀಗಿದ್ದರೆ ಸಾಕು ಅನ್ನೋ ಸಂದೇಶವನ್ನ ಗಟ್ಟಿಗೊಳೊಸೋದಿಕ್ಕೆ ಅಂತಾನೇ ಫೇರ್ ನೆಸ್ ಕ್ರೀಮ್ಸ್, ಮುಖದ ಚರ್ಮ ನುಣುಪಾಗಲು ಕ್ರೀಮ್ ಗಳು, ಸೂರ್ಯ ರಶ್ಮಿಗೆ ತ್ವಚೆ ಕಂದದ ಹಾಗೆ ನೋಡೋ ಕ್ರೀಮ್ ಗಳು, ಕೂದಲಿನ ನುಣುಪು, ಹೊಳಪಿಗಾಗಿ ಪ್ರಾಡಕ್ಟ್ ಗಳು ಒಂದೇ ಎರಡೇ!
 +
 
 +
ಇದೇ ಥರ ಗಂಡು ಮಕ್ಕಳು ಸಧೃಡ ಪೌರುಷವಂತರು ಅಂತ ತೋರಿಸೋದಿಕ್ಕೇನೇ ಬೈಕುಗಳು, ಕಾರುಗಳು, ಥರಹೇವಾರಿ ಡ್ರಿಂಕುಗಳು, ಶೇವಿಂಗ್ ಸಾಮಗ್ರಿ, ಟೂತ್ ಪೇಸ್ಟ್ , ಚಡ್ಡಿ, ಬನಿಯನ್‌ ಇತ್ಯಾದಿ.
 +
 
 +
ಇನ್ನೂ ಶಾಕಿಂಗ್ ಆಗಿರುವ ವಿಷಯ ಏನು ಈ ಜಾಹೀರಾತುಗಳ ಬಗ್ಗೆ ಅಂದ್ರೆ, ಯಾವುದೇ ವಸ್ತುವಿನ ಜಾಹೀರಾತಿಗೆ ಸಂಬಂಧವಿಲ್ಲದಿದ್ದರೂ ತುಂಡು ಬಟ್ಟೆ ಹಾಕಿದ ಹೆಣ್ಣು ಮಕ್ಕಳ ಬಳಕೆ ಮಾಡಲಾಗುತ್ತೆ ಇದನ್ನ ಗಮನಿಸಿದ್ದೀರ ? ಅದು ಗಂಡು ಮಕ್ಕಳ ಡಿಯೋಡರೆಂಟ್ ಆಗಿರಬಹುದು, ಮನೆಗಳಿಗೆ ಬಳಸಬಹುದಾದ ನಲ್ಲಿಗಳಾಗಿರಬಹುದು ಅಥವ ಗಂಡು ಮಕ್ಕಳ ಚೆಡ್ಡಿ, ಬನಿಯನ್ ಆಗಿರಬಹುದು, ಇವುಗಳಲ್ಲೆಲ್ಲಾ ಹೆಣ್ಣು ಮಕ್ಕಳನ್ನು ತೋರಿಸುವ ರೀತಿ ಗಮನಿಸಿ. ಇವುಗಳಿಂದ ಹೆಣ್ಣುಮಕ್ಕಳಿಗಾಗುವ ತೊಂದರೆ ಏನು ಗೊತ್ತಾ? ಇದು ಹೆಣ್ಣು ಮಕ್ಕಳೆಂದರೆ ಸುಂದರವಾಗಿರಬೇಕಾದವರು ಮತ್ತು ಮನೆಗೆಲಸಗಳಲ್ಲಿ ತೊಡಗಿ ಕೊಳ್ಳಬೇಕಾದವರು ಎನ್ನುವುದನ್ನೇ ಮತ್ತೆ ಮತ್ತೆ ತೋರಿಸುತ್ತಲೇ ಇರುತ್ತದೆ.
 +
 
 +
ಎಲ್ಲೆಲ್ಲೂ ಹೆಣ್ಣು ಮಕ್ಕಳ ಸ್ಥಾನ ಪುರುಷ ಪ್ರಧಾನತೆಗೆ ಅನುಗುಣವಾಗಿಯೇ ಇರಬೇಕೆನ್ನುವುದನ್ನು ತೋರಿಸುತ್ತಲೇ ಇದ್ದರೆ ನಾವು ಸಮಾನತೆಯ ಕಡೆಗೆ ಓದುತ್ತಾ ಹೋಗುವುದೂ, ಓದಿ ನಮ್ಮ ಕಾಲ ಮೇಲೆ ನಾವು ನಿಂತು ನಾವಿಷ್ಟ ಪಟ್ಟ ಕೆಲಸಗಳಲ್ಲಿ ತೊಡಗಿಕೊಳ್ಳುವುದೂ ಕಷ್ಟವಾಗುತ್ತೆ ತಾನೆ ? ನಮ್ಮ ಫಿಲಮ್ ಗಳಲ್ಲಿ, ಸೀರಿಯಲ್ ಗಳಲ್ಲಿ ಮತ್ತು ಜಾಹೀರಾತುಗಳಲ್ಲಿ, ಹೆಣ್ಣುಮಕ್ಕಳನ್ನ ಇಂಜಿನಿಯರ್, ಡಾಕ್ಟರ್, ಪೈಲಟ್, ಸೈಂಟಿಸ್ಟ್, ಬೈಕರ್, ಬಿಸಿನೆಸ್ ಮಾಡುವವರು ಹೀಗೆಲ್ಲಾ ತೋರಿಸಿದರೆ ಅದರ ಪ್ರಭಾವ ಹೇಗಿರಬಹುದು ಎಂದು ಯೋಚಿಸಿ.
 +
 
 +
ಇವನ್ನೆಲ್ಲಾ ಗಮನಿಸೋದಿಕ್ಕೆ, ಗಮನಿಸಿದ್ದನ್ನು ನಿಮ್ಮ ಸುತ್ತಲಿನವರ ಜೊತೆ ಹಂಚಿಕೊಳ್ಳಲು ಆರಂಭಿಸಬಹುದೆ ? ಹಾಗೇ ಪ್ರಶ್ನಿಸೋದಕ್ಕೂ ಸ್ಟಾರ್ಟ್‌ ಮಾಡ್ಬೇಕು ತಾನೆ ?
 +
 
 +
ಇದರ ಬಗ್ಗೆ ನೀವೆಲ್ರೂ ಯೋಚನೆ ಮಾಡ್ತೀರ ?
 +
 
 +
ಇವುಗಳ ಬಗ್ಗೆ ಮುಂದಿನ ವಾರಗಳಲ್ಲಿ ಇನ್ನೂ ಜಾಸ್ತಿ ಮಾತಾಡೋಣ. ನಮಸ್ಕಾರ  
 +
 
 +
=== ಒಟ್ಟೂ ಸಮಯ ===
 +
೪೦ ನಿಮಿಷಗಳು
 +
 
 +
=== ಒಟ್ಟೂ ಫೆಸಿಲಿಟೇಟರ್‌ಗಳು: ೨ ===
 +
 
 +
=== ಬೇಕಾಗಿರುವ ಸಂಪನ್ಮೂಲಗಳು ===
 +
 
 +
# Projector
 +
# Projector cable
 +
# Speaker
 +
# ಕಿಶೋರಿಯರು ಹೇಳುವುದುನ್ನು ಬರೆದುಕೊಳ್ಳು ನೋಟ್‌ಬುಕ್‌
 +
# ಕ್ಯಾಮೆರ
 +
 
 +
=== ಇನ್‌ಪುಟ್‌ಗಳು ===
 +
ನಾವು ತೋರಿಸುವ ಜಾಹಿರಾತುಗಳು
 +
 
 +
=== ಔಟ್‌ಪುಟ್‌ಗಳು ===
 +
ಕಿಶೋರಿಯರು ಬ್ಯೂಟಿ ಎಂದರೇನು ಎಂದು ಹೇಳಿದ ಅಂಶಗಳು

೦೭:೦೦, ೨೯ ಏಪ್ರಿಲ್ ೨೦೨೪ ನಂತೆ ಪರಿಷ್ಕರಣೆ

ಉದ್ದೇಶ:

ಮಾರುಕಟ್ಟೆಗಳು ಹೇಗೆ ಬ್ಯೂಟಿ ಎಂದರೇನು ಎನ್ನುವುದರ ಬಗ್ಗೆ ಪರಿಣಾಮ ಬೀರುತ್ತವೆ ಹಾಗು ಅವು ಹೇಗೆ ಪರುಷ ಪ್ರಧಾನತೆಯ ಭಾಗ ಎನ್ನುವುದರ ಬಗ್ಗೆ ಮಾತನಾಡುವುದು.

ಪ್ರಕ್ರಿಯೆ

ಕುಶಲೋಪರಿಯ ಮೂಲಕ ನಮ್ಮ ಮಾತುಕತೆಯನ್ನು ಶುರು ಮಾಡುವುದು.

ಕಟ್ಟುಪಾಡುಗಳನ್ನು ಜ್ಞಾಪಿಸುವುದು - ಅವರು ಹೇಳಿಲ್ಲ ಅಂದರೆ ನಾವೇ ಒಂದೊಂದಾಗಿ ಹೇಳುವುದು.  

೧. ಏನಾದ್ರೂ ಮಾತಾಡ್ಬೇಕಿದ್ರೆ ಕೈ ಎತ್ತಿ ಮಾತಾಡೋಣ

೨. ಬೇರೆಯವರು ಮಾತಾಡ್ತಿದ್ರೆ ಅವರನ್ನ interrupt ಮಾಡೋದಾಗ್ಲಿ, ನಗೋದು, ಅಣಕ ಮಾಡೋದಾಗ್ಲಿ ಮಾಡೋದು ಬೇಡ

೩. ಎಲ್ಲಾರೂ ಭಾಗವಹಿಸಬೇಕು

೪. ನೀವು ಗಲಾಟೆ ಮಾಡ್ತ ಇದರೆ ನಾವು ಸೈಲೆಂಟ್‌ ಆಗ್ತೀವಿ. ಆಗ್ಲೂ ಮಾತಾಡ್ತ ಇದ್ರೆ ನಾವು ವಾಪಸ್‌ ಹೊರಟು ಹೋಗ್ತೀವಿ

೫. ಫೋಟೋ ತೆಗೀವಾಗ ಫೋಸ್‌ ಕೊಡಬೇಡಿ

೬. ನಾವು ನಿಮಗೆ ಎಷ್ಟು ಮರ್ಯಾದೆ  ಕೊಡ್ತಿವೋ ನಿವು ನಮಗೆ ಅಷ್ಟೇ ಮರ್ಯಾದೆ  ಕೊಡಬೇಕು 10 ನಿಮಿಷ

ಇಲ್ಲಿಯವರೆಗೆ ಮಾತನಾಡಿದ ವಿಷಯಗಳ ಬಗ್ಗೆ ನೆನಪಿಸುವುದು. ಕಿಶೋರಿಯರು ಕೆಲವು ವಿಷಯಗಳನ್ನು ಹೇಳಬಹುದು. ಕೆಲವು ವಿಷಯಗಳ ಬಗ್ಗೆ ಹೇಳದೇ ಇರಬಹುದು. ಹೇಳದೆ ಇದ್ದರೆ ನಾವೇ daily routine ಚಟುವಟಿಕೆಯ ಬಗ್ಗೆ ಹೇಳಿ, ಈ ರೀತಿ ಗಂಡುಮಕ್ಕಳು ಈ ರೀತಿಯ ಕೆಲಸನ ಮಾಡಬೇಕು, ಹೆಣ್ಣು ಮಕ್ಕಳು ಈ ರೀತಿಯ ಕೆಲಸಗಳನ್ನೇ ಮಾಡಬೇಕು ಅನ್ನುವುದಕ್ಕೆ ಒಂದು ಹೆಸರು ಹೇಳಿದ್ವಿ, ಅದೇನಂದ್ರೆ ಪುರುಷ ಪ್ರಧಾನತೆ.

ಬೋರ್ಡಿನ ಮೇಲೆ ದೊಡ್ಡದಾಗಿ ಬರೆದು ತೋರಿಸುವುದು.

ಪುರುಷ ಪ್ರಧಾನತೆ ಅಂದರೆ ಪುರುಷರಿಗೇ ಹೆಚ್ಚಿನ ಅಧಿಕಾರ, ಅವಕಾಶ, ಮನ್ನಣೆ ಕೊಡುವ ವ್ಯವಸ್ಥೆ. ಇದರಲ್ಲಿ ಹೆಣ್ಣು ಮಕ್ಕಳನ್ನು ಕಡೆಗಣಿಸಲಾಗುತ್ತದೆ. ಇವತ್ತು ಇದರ ಬಗ್ಗೆ ಇನ್ನೂ ಹೆಚ್ಚು ತಿಳಿದುಕೊಳ್ಳೋಣ.

ದೊಡ್ಡ ಗುಂಪಿನಲ್ಲಿಯೇ, ನಿಮ್ಮ ಪ್ರಕಾರ Beauty ಅಥವ ಸೌಂದರ್ಯ - ಯಾರನ್ನಾದ್ರೂ ನಾವು ಸುಂದರವಾಗಿದಾರೆ ಅಂತಿದೀವಿ ಇಲ್ಲ ಬ್ಯೂಟಿಫುಲ್ ಆಗಿದಾರೆ ಅಂತಿದೀವಿ ಅಂದ್ರೆ ಏನು ಅಂತ ಹೇಳ್ತೀರ?” ಎಂದು ಕೇಳುವುದು. ಅವರು ಹೇಳುವ ಉತ್ತರಗಳನ್ನು ಬೋರ್ಡಿನ ಮೇಲೆ ಬರೆಯುವುದು

ಅವರು, ತೆಳ್ಳಗಿರಬೇಕು, ಮೂಗು, ಕೂದಲು ಇತ್ಯಾದಿ ಹೇಳಬಹುದು

ನಂತರ ಪ್ರೊಜೆಕ್ಟರ್‌ನಲ್ಲಿ ಮಹಿಳೆಯರಿಗಾಗಿ ಮಾಡಿದ ಒಂದೊಂದೇ ಒಂದೊಂದೇ ಜಾಹಿರಾತುಗಳನ್ನು ತೋರಿಸುವುದು. ಒಟ್ಟೂ ೪ ಜಾಹಿರಾತುಗಳನ್ನು ತೋರಿಸುವುದು  

ಪ್ರತಿ ಜಾಹಿರಾತು ಆದ ಮೇಲೆ, ಇದರಲ್ಲಿರುವವರು ನಿಮ್ಮ ಪ್ರಕಾರ ಹೇಗಿದ್ದಾರೆ ಅಂತ ಕೇಳುವುದು, ಬಣ್ಣ ಹೇಗಿದೆ, ಉದ್ದನ ಗಿಡ್ಡನ, ದಪ್ಪನ ಸಣ್ಣನ, - ಜೋರಾಗಿ ಹೇಳಿಸುವುದು

ಕಿಶೋರಿಯರು ಹೇಳುವುದನ್ನು ಬೋರ್ಡಿನ ಮೇಲೆ ಬರೆಯುವುದು.

ಇದೇ ರೀತಿ ಪುರುಷರಿಗಾಗಿ ಮಾಡಿದ ೪ ಜಾಹಿರಾತುಗಳನ್ನು ತೋರಿಸುವುದು. ಪ್ರತಿ ಜಾಹಿರಾತು ಆದ ಮೇಲೆ, ಇದರಲ್ಲಿರುವವರು ನಿಮ್ಮ ಪ್ರಕಾರ ಹೇಗಿದ್ದಾರೆ ಅಂತ ಕೇಳುವುದು, ನೋಡಲು ಹೇಗಿದ್ದಾರೆ, ಬಾಡಿ ಹೇಗಿದೆ,

ಕಿಶೋರಿಯರು ಹೇಳುವುದನ್ನು ಬೋರ್ಡಿನ ಮೇಲೆ ಬರೆಯುವುದು.

ಎಲ್ಲ ಜಾಹಿರಾತುಗಳನ್ನು ತೋರಿಸಿದ ನಂತರ, ಬೋರ್ಡಿನ ಮೇಲೆ ಬರೆದಿರುವುದನ್ನು ಗಮನಿಸಲು ಹೇಳುವುದು.

ನೀವು ಹೇಳಿದ ಬ್ಯೂಟಿ ಅಂದ್ರೆ ಏನು ಅಂತ ಹೇಳಿದ್ದೂ, ಜಾಹಿರತಾತುಗಳ ಬಗ್ಗೆ ಹೇಳಿದ್ದೂ ಒಂದೇ ಥರ ಇದೆ ಅನ್ಸುತ್ತೆ. ಅಲ್ವ? ಎಂದು ಕೇಳುವುದು.

ಆದರೆ ನಮ್ಮ ಸುತ್ತ ಮುತ್ತ ನೋಡಿದ್ರೆ ಎಲ್ಲರೂ ಇದೇ ರೀತಿ ಇರಲ್ಲ ಅಲ್ವ? ಕೆಲವೊಬ್ರು ಸಣ್ಣ ಇರ್ತಾರೆ,, ಇನ್ನ ಕೆಲವರು ಸ್ವಲ್ಪ ದಪ್ಪ ಇರ್ತಾರೆ. ಇನ್ನು ಕೆಲವರು ಎತ್ತರ, ಇನ್ನು ಕೆಲವರು ಕುಳ್ಳ, ಕೆಲವರು ಬೆಳ್ಳಗೆ ಇನ್ನ ಕೆಲವರು ಅಷ್ಟು ಬೆಳ್ಳಗೆ ಇರಲ್ಲ. ಅದ್ರೂ ನಮಗೆ ಇವರ ತರನೇ ಇರಬೇಕು ಅನ್ಸುತ್ತೆ ಅಲ್ವ?

ಆಲಿಯಾ ಭಟ್‌ ನೋಡಿದ್ರೆ ಅಯ್ಯೋ, ನಾನೂ ಕೂಡ ಅವಳ  ಥರನೇ, ಎತ್ತರ, ಬೆಳ್ಳಗೆ, ತೆಳ್ಳಗೆ ಇದ್ದಿದ್ರೆ ಚೆನ್ನಾಗಿರ್ತಿತ್ತು ಅನ್ಸುತ್ತೆ ಅಲ್ವ?

ಬ್ಯೂಟಿ ಅಂದರೆ ಏನು ಅಂತ ನಾವು ಅಂದ್ಕೋತೀವೋ ಅದು ಈ ಜಾಹಿರಾತುಗಳ ಮೂಲಕ ನಮಗೆ influence ಆಗಿರೋದು ಅಂತ ಅನ್ಸುತ್ತೆ? ಇದನ್ನ ನೀವು ಒಪ್ತೀರ?

ಇದೆಲ್ಲ ಬರೋದು ಹೆಣ್ಮಕ್ಳು ಹೀಗೆ ಇರಬೇಕು, ಗಂಡ್ಮಕ್ಳು ಹೀಗೇ ಇರಬ್ಏಕು ಅನ್ನೋದು ಬರೋದು ಕೂಡ ಪುರುಷಪ್ರಧಾನತೆ ಇಂದಾನೆ

ಹೆಣ್ಣು ಗಂಡಿನ ಮಧ್ಯೆ ಅಸಮಾನತೆಯನ್ನ ಹೆಚ್ಚು ಮಾಡೋದ್ರಲ್ಲಿ ಮಾಧ್ಯಮಗಳದ್ದು ಮೇಲುಗೈ ಗೊತ್ತ? ಅದು ಹೇಗೆ ಅಂತ ನಾನ್ ಹೇಳ್ತೀನಿ ಕೇಳಿ.

ಫಿಲಮ್ ಗಳ ಮುಖಾಂತರ ಆಗೋದು ಅಥವ ಆಗ್ತಿರೋದು ಅಥವ ಆಗಿರೋದು ಏನು ?

೧.  ಪ್ರೀತಿಯ ಹೆಸರು ಹೇಳಿ, ಫಾಲೋ ಮಾಡಿ, ಕಿರಿಕಿರಿ ಮಾಡಿ, ಹಿಂಸೆ ಮಾಡೋದು ಓಕೆ ಅಂತ ಹುಡುಗರಿಗೆ ಅನ್ನಿಸೋ ಹಾಗೆ ಮಾಡಿರೋದು (ಖರಾಬು ಹಾಡು ಕಣ್ಣಮುಂದೆ ತಂದ್ಕೊಂಡ್ರೆ, ಇದೇನು ಪಾಯಿಂಟ್ ಅಂತ ಗೊತ್ತಾಗುತ್ತೆ)

೨. ಹೀರೋ ಪ್ರೊಟೆಕ್ಷನ್ ಅಡಿಯಲ್ಲಿ ಮಾತ್ರ ಹೀರೋಯಿನ್ ಸೇಫ್ ಅನ್ನೋ ಭಾವನೆ ಹುಟ್ಟಾಕಿರೋದು - ಅಂದ್ರೆ ನಿಜ ಜೀವನದಲ್ಲಿ ಪುರುಷ ಪ್ರಧಾನತೆಯಿಂದಾಗಿ ಹೆಣ್ಣು ಮಕ್ಕಳನ್ನ ಗಂಡು ಮಕ್ಕಳ ಜೊತೆಯಿಲ್ಲದೇ ಇದ್ದರೆ ಕಳ್ಸಲ್ವಲ್ಲ ಹಾಗೆ

೩. ಪ್ರೀತಿ ಮಾಡೋದಿಕ್ಕೆ ಹಾಸ್ಯಾಸ್ಪದವಾದ ಕಾರಣಗಳನ್ನ ಒಪ್ಕೊಳ್ಳೋ ಹಾಗೆ ಮತ್ತೆ ಅದನ್ನ ನಿಜ ಜೀವನದಲ್ಲೂ ಹುಡುಗರು, ಹುಡುಗೀರು ಫಾಲೋ ಮಾಡೋ ಹಾಗೆ ಮಾಡಿರೊದು. ಟ್ರಾಫಿಕ್ ಜಾಮಲ್ಲಿ ಪಾಸ್ ಆಗ್ತಿರೋ ಬಸ್ಸಲ್ಲಿರೋ ಹುಡ್ಗೀನ ಕಿಟ್ಕಿ ಮೂಲಕ ನೋಡಿ ನೋಡಿ ಪ್ರೀತ್ಸೋದು, ನಿಂಗೋಸ್ಕರ ನಾನು ಸಾಯಕ್ಕೂ ರೆಡಿ ಅಂತ ರಕ್ತದಲ್ಲಿ ಲೆಟರ್ ಬರಿಯೋದು ಇತ್ಯಾದಿ

೪. ಹಿಂಸೆ ಮತ್ತೆ ದೌರ್ಜನ್ಯನ ಸರ್ವೇ ಸಾಮಾನ್ಯ ಅನ್ನೋ ಹಾಗೆ ತೋರ್ಸೋದು. ವಿಲನ್ ಕೈಲಿ ಹೆಣ್ಣು ಮಕ್ಕಳನ್ನ ಹೊಡೆಸೋದು, ಹೀರೋನ ಮಾನ ಅವಮಾನಗಳಿಗಾಗಿ ಅವನ ಮನೆಯ ಹೆಣ್ಣು ಮಕ್ಕಳನ್ನ ಕಿಡ್ನ್ಯಾಪ್ ಮಾಡ್ಸೋದು ಇನ್ನೂ ಇನ್ನೂ ಏನೇನೋ

೫. ಈಗಾಗಲೇ ಇರುವಂತಹ ಕಟ್ಟು ಪಾಡುಗಳನ್ನ ಕಮ್ಮಿ ಮಾಡೋ ಕಡೆ ಅಲ್ಲದೆ, ಜಾಸ್ತಿ ಮಾಡೋದು. ಸಾಮಾಜಿಕ ಪಾತ್ರಗಳು ಮತ್ತು ಅವುಗಳ ಜವಾಬ್ದಾರಿಗಳನ್ನ ಗಟ್ಟಿ ಮಾಡೋದು. ಇಲ್ಲೂ ಹೆಣ್ಣು ಮಕ್ಕಳು ನಿರ್ಧಾರ ಮಾಡಲ್ಲ, ಅಕ್ಕ ಸೀನಲ್ಲಿರಲ್ಲ, ಹಾಡುಗಳಾದ್ಮೇಲೆ ಹೀರೋಯಿನ್ ಫಿಲಮ್ಮಲ್ಲಿರಲ್ಲ ಫಿಲಮ್ಮಿನ ಜವಾಬ್ದಾರಿ ಮತ್ತೆ ಕಥೆ ಹೀರೋದ್ದೆ.  

೬. ಆಮೇಲೆ ಗಂಡು ಅಂದ್ರೆ ಹೀಗೇ ಇರಬೇಕು ಅಂದ್ರೆ ಪೌರುಷವಂತ, ಜವಾಬ್ದಾರಿ ಹೊರುವವನು ಮತ್ತೆ ರಕ್ಷಕ, ಹೆಣ್ಣು ಅಂದರೆ ಹೀಗೇ ಇರ್ಬೇಕು ಅಂದ್ರೆ ಸುಂದರಿ, ಸುಶೀಲೆ ಮತ್ತು ಸಹನಶೀಲೆ.

೭. ಇನ್ನೂ ನಿಮಗೆ ಶಾಕ್ ಆಗೋ ವಿಷಯ ಇನ್ನೊಂದಿದೆ, ಮನೆಯಲ್ಲಿ ನಾವು ಯಾವ ಥರ ಬಟ್ಟೆ ಹಾಕ್ಕೋಬೇಕು, ಹೇಗಿದ್ರೆ ಹೊರಗೆ ಹೋಗಬಹುದು ಅಂತ ಹೇಳೋವ್ರು, ಮತ್ತೆ ಸ್ಲೀವ್ ಲೆಸ್ ಹಾಕ್ಕೊಳಕ್ಕೆ, ನಮಗಿಷ್ಟ ಬಂದಹಾಗೆ ಹೇರ್ ಸ್ಟೈಲ್ ಮಾಡ್ಕೊಳಕ್ಕೆ ಬಿಡದೇ ಇರೊ ನಮ್ಮ ಸಮಾಜದ ಜನರು - ಈ ಫಿಲಮ್ಮುಗಳಲ್ಲಿ ಬರೋ ಐಟಮ್ ಸಾಂಗ್ಸ್ ನೋಡಿ ಖುಷಿ ಪಡೋದು, ಶಿಳ್ಳೆ ಹಾಕೋದು, ಆ ಹೀರೋಯಿನ್ಸ್ ಬಗ್ಗೆ ಪೋಲಿ ಕಾಮೆಂಟ್ಸ್ ಮಾಡೋದು ಮಾಡ್ತಾರಲ್ಲ, ಇದ್ರಿಂದಾನೂ ಇರ್ಬೋದಲ್ವ, ನಮ್ಮನೆ ಮಕ್ಳನ್ನ ಬಿಟ್ಟು ಎಲ್ಲಾ ಹೆಣ್ಮಕ್ಳನ್ನ ರೇಗುಸ್ಬೋದು ಅಂತ ಮೆಜಾರಿಟಿ ಗಂಡು ಮಕ್ಕಳು ಅಂದ್ಕೊಂಡಿರೋದು?  

ಇನ್ಮುಂದೆ ಗಮನಿಸಿ, ಕಥೆ ಯಾವುದೇ ಇರಲಿ, ಹೀರೋಯಿನ್ ಗೆ ಮತ್ತೆ ಉಳಿದ ಹೆಣ್ಣು ಪಾತ್ರಗಳಿಗೆ ಫಿಲಮ್ಮಲ್ಲಿ ಎಷ್ಟು ನಿಮಿಷದ ಕಥೆ ಬರ್ದಿದಾರೆ, ಹಿಂಸೆ ಮತ್ತು ದೌರ್ಜನ್ಯದ ಫೈಟಿಂಗ್ ಸೀನುಗಳಿಗೆ ಎಷ್ಟು ಸಮಯ ಕೊಟ್ಟಿದ್ದಾರೆ, ಐಟಮ್ ಸಾಂಗ್ ನ ಹಾಡಿನಲ್ಲಿ ಏನ್ ಹೇಳ್ತಿದಾರೆ, ಆ ಸಾಂಗ್ನಲ್ಲಿರೋ ಹುಡುಗೀಗೆ ಯಾವ ಥರ ಬಟ್ಟೆ ಹಾಕ್ಸಿದಾರೆ ಮತ್ತೆ ಆ ಹಾಡು ಬಂದಾಗ ಹುಡುಗರು ಏನ್ಮಾಡ್ತಾರೆ ಅಂತ.  

ಇನ್ನ ಟೀ.ವೀ ವಿಷಯಕ್ಕೆ ಬರೋಣ. ಇಲ್ಲಿ ಆಗೋದು ನಿಜಕ್ಕೂ ಹೆಣ್ಣು ಮಕ್ಕಳ ಸ್ಥಾನಮಾನ ಕೆಳಕ್ಕೆ ತರೋಂತದ್ದೇ.

ಸೀರಿಯಲ್ ಗಳಲ್ಲಿ ಕಥೆ ಎಳೀತಾರೆ, ತುಂಬಾ ಜಾಹೀರಾತು ಬರುತ್ತೆ ಅನ್ನೋದೆಲ್ಲ ಪಕ್ಕಕ್ಕಿಟ್ರೇ, ಇದ್ರಲ್ಲಿ ಯಾವಾಗ್ಲೂ ಹೀರೋ ಕೋಟ್ಯಾಧಿಪತಿ, ಹೀರೋಯಿನ್ ಬಡ ಅಳುಮುಂಜಿ ಹೆಣ್ಣು ಮಗಳಾಗಿರ್ತಾಳೆ. ಮತ್ತೆ ಈ ಕಥೆಗಳಲ್ಲಿ ಕೇಡಿಗಳು ಅಥವ ವಿಲನ್ ಯಾವಾಗ್ಲೂ ಆಸ್ತಿಯ ಬಗ್ಗೆನೋ ಅಥವ ಹೀರೋನ ಪ್ರೀತಿಗಾಗೋ ಏನು ಬೇಕಾದರೂ ಮಾಡೋದಿಕ್ಕೆ ರೆಡಿ ಇರುವ ಹೆಣ್ಣುಮಕ್ಕಳೇ ಆಗಿರುತ್ತಾರೆ. ಇವರು ವಿಷ ಹಾಕ್ತಾರೆ, ಮೆಟ್ಟಿಲ ಮೇಲೆ ಎಣ್ಣೆ ಹಾಕ್ತಾರೆ, ಆಕ್ಸಿಡೆಂಟ್ ಮಾಡುಸ್ತ್ರಾರೆ, ಹೊಡುಸ್ತಾರೆ ಒಟ್ಟಾರೆ ಹೆಣ್ಣು ಮಕ್ಕಳಿಗೆ ಧ್ವೇಷ ಸಹಜವಾದದ್ದು ಅನ್ನೋ ಸಂದೇಶ ನೋಡುಗರ ಮನಸ್ಸಿನಲ್ಲಿ ಮೂಡೋ ಹಾಗೆ ಮಾಡ್ತಾರೆ. ಮತ್ತೆ ಒಂದೇ ಸಮ ಅನ್ಯಾಯಗಳಿಗೆ ಒಳಗಾಗಿ ಗೋಳಾಡೋ ಹೆಣ್ಣುಮಕ್ಕಳಿಂದ, ಈ ಹೆಣ್ಣು ಮಕ್ಕಳಿಗೆ ಏನೂ ಕೈಲಾಗಲ್ಲ ಅನ್ನೋ ಸಂದೇಶಾನೂ ಸಿಗುತ್ತೆ. ಇವುಗಳಿಂದ ಹೆಣ್ಣು ಮಕ್ಕಳ ಸ್ಟೇಟಸ್ ಕಮ್ಮಿ ಆದಹಾಗೇನೇ ತಾನೆ ?

ಬನ್ನಿ ಜಾಹೀರಾತುಗಳು ಅಥವ ಅಡ್ವರ್ಟೈಸ್ಮೆಂಟ್ ಗಳ ಬಗ್ಗೆ ತಿಳ್ಕೊಳ್ಳೋಣ:

ಈ ಜಾಹೀರಾತುಗಳಲ್ಲಿ ಹೆಣ್ಣು ಮತ್ತು ಗಂಡು ಅವರವರ ಸಾಮಾಜಿಕ ಪಾತ್ರಗಳಲ್ಲಿ ಪುರುಷ ಪ್ರಧಾನತೆ ಕೊಟ್ಟಿರುವ ಜವಾಬ್ದಾರಿಗಳನ್ನ ಎತ್ತಿಹಿಡಿಯೋದನ್ನ ನೀವು ನೋಡೇ ಇರ್ತೀರ ತಾನೆ?

ಬಟ್ಟೆ ಒಗೆಯೋ ಸೋಪು, ವಾಶಿಂಗ್ ಮೆಷೀನ್, ಬಟ್ಟೆಗಳ ಘಮ ಘಮಕ್ಕಾಗಿ ಹಾಕುವ ಸುಗಂಧಗಳಿಗೆ, ಕಾಫಿ ಮಾಡೋದಿಕ್ಕೆ, ಅಡಿಗೆ ಮನೆಯಲ್ಲಿ ಬಳಸುವ ಎಣ್ಣೆ, ಪಾತ್ರೆ, ಸಾಂಬಾರ್ ಪುಡಿ, ಸಾರು ಪುಡಿ ಇವೆಲ್ಲಕ್ಕೂ ಹೆಣ್ಣು ಮಕ್ಕಳನ್ನೇ ತೋರಿಸುತ್ತಾರೆ. ಕಾರು, ಕಾರಿನ ಟೈರು, ಪೈಂಟು, ಸಿಮೆಂಟು, ಶೂಸು,  ಗಳಿಗೆ ಗಂಡು ಮಕ್ಕಳೇ ಮಾಡೆಲ್ ಗಳು. ಇವೆಲ್ಲಾ ಕೆಲಸಗಳಾದರೆ, ಇನ್ನ ಹೆಣ್ಣು ಸುಂದರವಾಗಿರಬೇಕು/ಲಕ್ಷಣವಾಗಿರಬೇಕು/ಹೀಗಿದ್ದರೆ ಸಾಕು ಅನ್ನೋ ಸಂದೇಶವನ್ನ ಗಟ್ಟಿಗೊಳೊಸೋದಿಕ್ಕೆ ಅಂತಾನೇ ಫೇರ್ ನೆಸ್ ಕ್ರೀಮ್ಸ್, ಮುಖದ ಚರ್ಮ ನುಣುಪಾಗಲು ಕ್ರೀಮ್ ಗಳು, ಸೂರ್ಯ ರಶ್ಮಿಗೆ ತ್ವಚೆ ಕಂದದ ಹಾಗೆ ನೋಡೋ ಕ್ರೀಮ್ ಗಳು, ಕೂದಲಿನ ನುಣುಪು, ಹೊಳಪಿಗಾಗಿ ಪ್ರಾಡಕ್ಟ್ ಗಳು ಒಂದೇ ಎರಡೇ!

ಇದೇ ಥರ ಗಂಡು ಮಕ್ಕಳು ಸಧೃಡ ಪೌರುಷವಂತರು ಅಂತ ತೋರಿಸೋದಿಕ್ಕೇನೇ ಬೈಕುಗಳು, ಕಾರುಗಳು, ಥರಹೇವಾರಿ ಡ್ರಿಂಕುಗಳು, ಶೇವಿಂಗ್ ಸಾಮಗ್ರಿ, ಟೂತ್ ಪೇಸ್ಟ್ , ಚಡ್ಡಿ, ಬನಿಯನ್‌ ಇತ್ಯಾದಿ.

ಇನ್ನೂ ಶಾಕಿಂಗ್ ಆಗಿರುವ ವಿಷಯ ಏನು ಈ ಜಾಹೀರಾತುಗಳ ಬಗ್ಗೆ ಅಂದ್ರೆ, ಯಾವುದೇ ವಸ್ತುವಿನ ಜಾಹೀರಾತಿಗೆ ಸಂಬಂಧವಿಲ್ಲದಿದ್ದರೂ ತುಂಡು ಬಟ್ಟೆ ಹಾಕಿದ ಹೆಣ್ಣು ಮಕ್ಕಳ ಬಳಕೆ ಮಾಡಲಾಗುತ್ತೆ ಇದನ್ನ ಗಮನಿಸಿದ್ದೀರ ? ಅದು ಗಂಡು ಮಕ್ಕಳ ಡಿಯೋಡರೆಂಟ್ ಆಗಿರಬಹುದು, ಮನೆಗಳಿಗೆ ಬಳಸಬಹುದಾದ ನಲ್ಲಿಗಳಾಗಿರಬಹುದು ಅಥವ ಗಂಡು ಮಕ್ಕಳ ಚೆಡ್ಡಿ, ಬನಿಯನ್ ಆಗಿರಬಹುದು, ಇವುಗಳಲ್ಲೆಲ್ಲಾ ಹೆಣ್ಣು ಮಕ್ಕಳನ್ನು ತೋರಿಸುವ ರೀತಿ ಗಮನಿಸಿ. ಇವುಗಳಿಂದ ಹೆಣ್ಣುಮಕ್ಕಳಿಗಾಗುವ ತೊಂದರೆ ಏನು ಗೊತ್ತಾ? ಇದು ಹೆಣ್ಣು ಮಕ್ಕಳೆಂದರೆ ಸುಂದರವಾಗಿರಬೇಕಾದವರು ಮತ್ತು ಮನೆಗೆಲಸಗಳಲ್ಲಿ ತೊಡಗಿ ಕೊಳ್ಳಬೇಕಾದವರು ಎನ್ನುವುದನ್ನೇ ಮತ್ತೆ ಮತ್ತೆ ತೋರಿಸುತ್ತಲೇ ಇರುತ್ತದೆ.

ಎಲ್ಲೆಲ್ಲೂ ಹೆಣ್ಣು ಮಕ್ಕಳ ಸ್ಥಾನ ಪುರುಷ ಪ್ರಧಾನತೆಗೆ ಅನುಗುಣವಾಗಿಯೇ ಇರಬೇಕೆನ್ನುವುದನ್ನು ತೋರಿಸುತ್ತಲೇ ಇದ್ದರೆ ನಾವು ಸಮಾನತೆಯ ಕಡೆಗೆ ಓದುತ್ತಾ ಹೋಗುವುದೂ, ಓದಿ ನಮ್ಮ ಕಾಲ ಮೇಲೆ ನಾವು ನಿಂತು ನಾವಿಷ್ಟ ಪಟ್ಟ ಕೆಲಸಗಳಲ್ಲಿ ತೊಡಗಿಕೊಳ್ಳುವುದೂ ಕಷ್ಟವಾಗುತ್ತೆ ತಾನೆ ? ನಮ್ಮ ಫಿಲಮ್ ಗಳಲ್ಲಿ, ಸೀರಿಯಲ್ ಗಳಲ್ಲಿ ಮತ್ತು ಜಾಹೀರಾತುಗಳಲ್ಲಿ, ಹೆಣ್ಣುಮಕ್ಕಳನ್ನ ಇಂಜಿನಿಯರ್, ಡಾಕ್ಟರ್, ಪೈಲಟ್, ಸೈಂಟಿಸ್ಟ್, ಬೈಕರ್, ಬಿಸಿನೆಸ್ ಮಾಡುವವರು ಹೀಗೆಲ್ಲಾ ತೋರಿಸಿದರೆ ಅದರ ಪ್ರಭಾವ ಹೇಗಿರಬಹುದು ಎಂದು ಯೋಚಿಸಿ.

ಇವನ್ನೆಲ್ಲಾ ಗಮನಿಸೋದಿಕ್ಕೆ, ಗಮನಿಸಿದ್ದನ್ನು ನಿಮ್ಮ ಸುತ್ತಲಿನವರ ಜೊತೆ ಹಂಚಿಕೊಳ್ಳಲು ಆರಂಭಿಸಬಹುದೆ ? ಹಾಗೇ ಪ್ರಶ್ನಿಸೋದಕ್ಕೂ ಸ್ಟಾರ್ಟ್‌ ಮಾಡ್ಬೇಕು ತಾನೆ ?

ಇದರ ಬಗ್ಗೆ ನೀವೆಲ್ರೂ ಯೋಚನೆ ಮಾಡ್ತೀರ ?

ಇವುಗಳ ಬಗ್ಗೆ ಮುಂದಿನ ವಾರಗಳಲ್ಲಿ ಇನ್ನೂ ಜಾಸ್ತಿ ಮಾತಾಡೋಣ. ನಮಸ್ಕಾರ  

ಒಟ್ಟೂ ಸಮಯ

೪೦ ನಿಮಿಷಗಳು

ಒಟ್ಟೂ ಫೆಸಿಲಿಟೇಟರ್‌ಗಳು: ೨

ಬೇಕಾಗಿರುವ ಸಂಪನ್ಮೂಲಗಳು

  1. Projector
  2. Projector cable
  3. Speaker
  4. ಕಿಶೋರಿಯರು ಹೇಳುವುದುನ್ನು ಬರೆದುಕೊಳ್ಳು ನೋಟ್‌ಬುಕ್‌
  5. ಕ್ಯಾಮೆರ

ಇನ್‌ಪುಟ್‌ಗಳು

ನಾವು ತೋರಿಸುವ ಜಾಹಿರಾತುಗಳು

ಔಟ್‌ಪುಟ್‌ಗಳು