ರಚನಾ ವಿಜ್ಞಾನ 9 ಪಾಠ-ದ್ಯುತಿ ವಿದ್ಯುತ್ ಪರಿಣಾಮ ಮತ್ತು ಲೇಸರ್

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೦೭:೧೮, ೧೧ ಡಿಸೆಂಬರ್ ೨೦೧೩ ರಂತೆ Shariff (ಚರ್ಚೆ | ಕಾಣಿಕೆಗಳು) ಇವರಿಂದ (ಹೊಸ ಪುಟ: ==ಪಾಠ - ದ್ಯುತಿ ವಿದ್ಯುತ್ ಪರಿಣಾಮ ಮತ್ತು ಲೇಸರ್== I. ಕಲಿಕಾಂಶಗಳು/ಪರಿಕಲ್ಪನೆ...)
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)
Jump to navigation Jump to search

ಪಾಠ - ದ್ಯುತಿ ವಿದ್ಯುತ್ ಪರಿಣಾಮ ಮತ್ತು ಲೇಸರ್

I. ಕಲಿಕಾಂಶಗಳು/ಪರಿಕಲ್ಪನೆಗಳು

1) ಶಕ್ತಿಯನ್ನು ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಬದಲಾಯಿಸಬಹುದು ಎನ್ನುವುದಕ್ಕೆ ಉದಾಹರಣೆಗಳನ್ನು ಕೊಡುವುದು.

2) ದೈನಂದಿನ ಬದುಕಿನಲ್ಲಿ ಬೆಳಕಿನ ಮಹತ್ವ.

3) ಮುಕ್ತ ಇಲೆಕ್ಟ್ರಾನ್ ಮತ್ತು ವಿಸ್ಧಾನಿತ ಇಲೆಕ್ಟ್ರಾನ್‍ಗಳ ಅಂತರ.

4) ದ್ಯುತಿ ವಿದ್ಯುತ್ ಪರಿಣಾಮದ ಪರಿಕಲ್ಪನೆ.

5) ದ್ಯುತಿ ವಿದ್ಯುತ್ ಪರಿಣಾಮ ಉಂಟಾಗಲು ಇರಬೇಕಾದ ಸಂದರ್ಭಗಳು.

6) ದ್ಯುತಿ ಇಲೆಕ್ಟ್ರಾನಿನ ಚಲನಶಕ್ತಿ ಮತ್ತು ದ್ಯುತಿ ಇಲೆಕ್ಟ್ರಾನ್‍ಗಳ ಸಂಖ್ಯೆ ಇವುಗಳು ಯಾವ ಅಂಶವನ್ನು ಅವಲಂಬಿಸಿರುತ್ತದೆ.

7) ದ್ಯುತಿ ವಿದ್ಯುತ್ ಪರಿಣಾಮದ ಅನ್ವಯಗಳು.

8) ಲೇಸರ್ ಬೆಳಕಿನ ಲಕ್ಷಣಗಳು.

9) ಲೇಸರ್ ಬೆಳಕು ಮತ್ತು ಸಾಮಾನ್ಯ ಬೆಳಕಿಗೆ ಇರುವ ವ್ಯತ್ಯಾಸ.

10) ಲೇಸರ್ ಬೆಳಕಿನ ಉಪಯೋಗಗಳು.


II. ಮನನ ಮಾಡಿಕೊಳ್ಳಲೇ ಬೇಕಾದ ಅಂಶಗಳು

1) ದ್ಯುತಿ ವಿದ್ಯುತ್ ಪರಿಣಾಮದ ವ್ಯಾಖ್ಯೆ

2) ದ್ಯುತಿ ವಿದ್ಯುತ್ ಪರಿಣಾಮದ ಪ್ರಯೋಗವು ತೋರಿಸಿದ ಅಂಶಗಳು ಮತ್ತು ಅವುಗಳ ಅರ್ಥೈಸುವಿಕೆ.

3) ಲೇಸರ್ ಬೆಳಕಿನ ಉತ್ಪಾದನೆಯ ವಿವಿಧ ಹಂತಗಳಾದ ಸ್ವಯಂ ಉತ್ಸರ್ಜನೆ, ಉದ್ರೆಚನ, ಸಂದಣಿ ವಿಲೋಮನ, ದ್ಯುತಿ ಪ್ರೇಕ್ಷಣೆ, ಚೋದಿತ ಉತ್ಸರ್ಜನೆ ಮುಂತಾದವುಗಳ ಅರ್ಥ.

4) ಹೀಲಿಯಂ-ನಿಯಾನ್ ಲೇಸರ್‍ನ ಕಾರ್ಯವಿಧಾನ.

5) ಲೇಸರ್ ಬೆಳಕಿನ ಉಪಯೋಗಗಳು



III. ಪಾಠದ ಪೂರ್ವ ಸಿದ್ಧತೆ

1) ದ್ಯುತಿ ವಿದ್ಯುತ್ ಪರಿಣಾಮವನ್ನು ಅನುಸರಿಸಿ ಕೆಲಸ ಮಾಡುವ ಹಲವು ಉಪಕರಣಗಳ ಚಿತ್ರಗಳನ್ನು ಸಂಗ್ರಹಿಸಿಕೊಳ್ಳುವುದು.

2) ನಿರ್ಣಾಯಕ ಆವೃತ್ತಿಯ ಪರಿಕಲ್ಪನೆಯ ಸಾದೃಶ ಪ್ರಯೋಗಕ್ಕೆ ಬೇಕಾದ ಪಿಂಗ್‍ಪಾಂಗ್ ಚೆಂಡು, ಒಂದು ಟಿನ್ ಡಬ್ಬಗಳನ್ನು ಸಂಗ್ರಹಿಸಿಕೊಳ್ಳುವುದು.

3) ಲೇಸರ್‍ನ ಗುಣ ಲಕ್ಷಣಗಳನ್ನು ವಿವರಿಸುವ ಚಟುವಟಿಕೆಗೆ ಬೇಕಾದ ಲೇಸರ್ ಕೀ ಚೈನು ಮತ್ತು ಒಂದು ಬಿಳಿ ಹಾಳೆಯನ್ನು ಅಂಟಿಸಿರುವ ಕಾರ್ಡ್‍ಬೋರ್ಡ್‍ಗಳನ್ನು ಸಂಗ್ರಹಿಸಿಕೊಳ್ಳುವುದು.

4) ಘನ ಲೇಸರ್ ಮತ್ತು ದ್ರವ ಲೇಸರ್ ಉತ್ಪಾದನೆಯ ಬಗ್ಗೆ ಮಾಹಿತಿ ಸಂಗ್ರಹಣೆ.

Iಗಿ. ಕಲಿಕೆಯನ್ನು ಅನುಕೂಲಿಸುವ ವಿಧಾನ

1) ಗುಂಪು ಚರ್ಚೆ

2) ಸರಳ ಪ್ರಯೋಗ ವಿಧಾನ

3) ಪ್ರಾತ್ಯಕ್ಷತೆ

ಗಿ. ಕಲಿಕಾ ಚಟುವಟಿಕೆ

1) ನಿರ್ಣಾಯಕ ಆವೃತ್ತಿಯ ಪರಿಕಲ್ಪನೆ ಸಾದೃಶ ಪ್ರಯೋಗ

ಬೇಕಾಗುವ ವಸ್ತುಗಳು : ಒಂದು ಪಿಂಗ್‍ಪಾಂಗ್ ಚೆಂಡು ಮತ್ತು ಒಂದು ಟಿನ್ ಡಬ್ಬ (ತಳರಹಿತ)

ವಿಧಾನ : ಚೆಂಡನ್ನು ಸ್ವಲ್ಪ ಎತ್ತರದಿಂದ ಭೂಮಿಗೆ ಲಂಬವಾಗಿ ನೇರ ಚಲಿಸುವಂತೆ ಡಬ್ಬದೊಳಗೆ ಹಾಕುವುದು. ಚೆಂಡು ಡಬ್ಬದೊಳಗಿಂದ ಎಷ್ಟು ಎತ್ತರಕ್ಕೆ ಪುಟಿದೇಳುತ್ತದೆ ಎಂದು ಗುರುತಿಸಿಕೊಳ್ಳುವುದು. ಎತ್ತರವನ್ನು ಕ್ರಮೇಣ ಹೆಚ್ಚಿಸುತ್ತಾ, ಯಾವ ಕನಿಷ್ಠ ಎತ್ತರದಲ್ಲಿ ಚೆಂಡು ಡಬ್ಬದ ತಳದಿಂದ ಪುಟಿದು ಹೊರಬಲ್ಲಬಹುದು ಎಂಬುದನ್ನು ಗಮನಿಸುವುದು. ಅದನ್ನು ನಿರ್ಣಾಯಕ ಎತ್ತರ ಎಂದು ಗುರುತಿಸಿಕೊಳ್ಳುವುದು.

ಚೆಂಡು ನಿರ್ಣಾಯಕ ಎತ್ತರದಿಂದ ಮೇಲೆ ಸಾಗಿದಾಗ ಹಾಗೆಲ್ಲಾ, ಡಬ್ಬದಿಂದ ಹೊರಬರುವ ಚೆಂಡಿನ ಚಲನ ಶಕ್ತಿಯು ಹೆಚ್ಚಾಗುವುದನ್ನು ಗಮನಿಸುವುದು.

2) ಲೇಸರ್‍ನ ಲಕ್ಷಣಗಳನ್ನು ಅರಿಯುವ ಚಟುವಟಿಕೆ

ಬೇಕಾಗುವ ವಸ್ತುಗಳು : ಲೇಸರ್ ಕೀ ಚೈನು, ವಿದ್ಯುತ್ ಟಾರ್ಚ್, ಬಿಳಿಹಾಳೆಯನ್ನು ಅಂಟಿಸಿದ ಕಾರ್ಡ್ ಬೋರ್ಡ್

ವಿಧಾನ : ಲೇಸರ್ ಕೀ ಚೈನು ಮತ್ತು ವಿದ್ಯುತ್ ಟಾರ್ಚ್ ಇವುಗಳನ್ನು ಒಂದರÀÀ ಪಕ್ಕ ಒಂದನ್ನು ಇಟ್ಟು, ಅದರಿಂದ ಹೊರಬರುವ ಬೆಳಕನ್ನು ಬಿಳಿಹಾಳೆ ಅಂಟಿಸಿದ ಕಾರ್ಡ್ ಬೋರ್ಡ್ ಮೇಲೆ ಲಂಬವಾಗಿ ಬೀಳುವಂತೆ ಮಾಡುವುದು.

ನಿಧಾನವಾಗಿ ಕಟ್ಟನ್ನು ಹಿಂದೆ ಸರಿಸಿ, ಆಗ ಆಗುವ ವ್ಯತ್ಯಾಸಗಳನ್ನು ಲೇಸರ್ ಮತ್ತು ಟಾರ್ಚ್‍ಗೆ ಸಂಬಂಧಿಸಿದಂತೆ ಗಮನಿಸಿ. ದೂರ ಸರಿದಂತೆಲ್ಲಾ ಕಾರ್ಡ್‍ಬೋರ್ಡ್ ಮೇಲೆ ವಿದ್ಯುತ್ ಟಾರ್ಚ್ ಬೆಳಕಿನಿಂದ ರೂಪುಗೊಂಡ ವೃತ್ತವು ಹಿರಿದಾಗುತ್ತಾ ಹೋಗುತ್ತದೆ, ಹೆಚ್ಚು ವಿಸ್ತಿರ್ಣಕ್ಕೆ ಪ್ರಸರಿಸುವುದರಿಂದ ವೃತ್ತದ ಪ್ರತಿ ಬಿಂದುವಿನಲ್ಲೂ ತೀವ್ರತೆ ಕನಿಷ್ಠ. ಆದರೆ ಲೇಸರ್‍ನಲ್ಲಿ ವೃತ್ತವು ಅದೇ ವಿಸ್ತೀರ್ಣ ದ್ದಾಗಿರುತ್ತದೆ ಮತ್ತು ವೃತ್ತದ ಪ್ರತಿಯೊಂದು ಬಿಂದುವಿನಲ್ಲೂ ತೀವ್ರತೆ ಹೆಚ್ಚಾಗಿಯೇ ಇರುತ್ತದೆ.