ರಚನಾ ವಿಜ್ಞಾನ 9 ಪಾಠ-ಸಂಶ್ಲೇಷಿತ ವಸ್ತುಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೦೯:೪೯, ೧೧ ಡಿಸೆಂಬರ್ ೨೦೧೩ ರಂತೆ Shariff (ಚರ್ಚೆ | ಕಾಣಿಕೆಗಳು) ಇವರಿಂದ (ಹೊಸ ಪುಟ: ==ಪಾಠ - ಸಂಶ್ಲೇಷಿತ ವಸ್ತುಗಳು== 1) ಕಲಿಕಾಂಶಗಳು/ಪರಿಕಲ್ಪನೆಗಳು v ನೈಸರ್ಗಿಕ/ನ...)
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)

ಪಾಠ - ಸಂಶ್ಲೇಷಿತ ವಸ್ತುಗಳು

1) ಕಲಿಕಾಂಶಗಳು/ಪರಿಕಲ್ಪನೆಗಳು

v ನೈಸರ್ಗಿಕ/ನಿಸರ್ಗದತ್ತ ವಸ್ತುಗಳು ಮತ್ತು ಸಂಶ್ಲೇಷಿತ ವಸ್ತುಗಳಿಗಿರುವ ವ್ಯತ್ಯಾಸ.

v ಸಂಶ್ಲೇಷಕ ವಸ್ತುಗಳನ್ನು ಗುರುತಿಸುವುದು.

v ನಿತ್ಯ ಜೀವನದಲ್ಲಿ ಸಂಶ್ಲೇಷಕ ವಸ್ತುಗಳ ಅನ್ವಯ.

v ಪಾಲಿಮರ್‍ಗಳು - ನೈಸರ್ಗಿಕ ಮತ್ತು ಸಂಶ್ಲೇಷಕ.

v ಪ್ಲಾಸ್ಟಿಕ್ - ವಿಧಗಳು ಮತ್ತು ಗುಣಗಳು.

v ಪ್ಲಾಸ್ಟಿಕ್‍ಗಳ ಅನುಕೂಲ ಮತ್ತು ಅನಾನುಕೂಲಗಳು.

v ಜೈವಿಕ ವಿಘಟನೆಗೆ ಒಳಪಡುವ ಮತ್ತು ಜೈವಿಕ ವಿಘಟನೆಗೆ ಒಳಪಡದ ವಸ್ತುಗಳನ್ನು ವರ್ಗೀಕರಿಸುವುದು - ವ್ಯತ್ಯಾಸ ಮತ್ತು ಕಾರಣ.

v ಪ್ಲಾಸ್ಟಿಕ್ ಬಳಕೆಯ ಅನಿವಾರ್ಯ, ನಿಯಂತ್ರಣ ಮತ್ತು ಪುನರ್ ಬಳಕೆಯ ವಿಧಾನಗಳು

v ಸಿಮೆಂಟ್ ತಯಾರಿಕೆ, ಸಿಮೆಂಟ್‍ನ ವಿಧಗಳು, ಸಿಮೆಂಟ್ ಗಟ್ಟೀಕರಣ ಮತ್ತು ಜಲೋಪಚಾರ.

v ವಾಷಿಂಗ್ ಸೋಡಾ (ಸೋಡಿಯಂ ಕಾರ್ಬೊನೇಟ್), ಅಡುಗೆ ಸೋಡಾ (ಸೋಡಿಯಂ ಬೈಕಾರ್ಬೊನೇಟ್) ಪ್ಲಾಸ್ಟರ್ ಆಫ್ ಪ್ಯಾರಿಸ್ - ತಯಾರಿಕಾ ವಿಧಾನಗಳು, ರಾಸಾಯನಿಕ ಗುಣಗಳು ಮತ್ತು ಉಪಯೋಗಗಳು.

2) ಮನನ ಮಾಡಿಕೊಳ್ಳಬೇಕಾದ ಅಂಶಗಳು

v ಸ್ವಾಭಾವಿಕ ಮತ್ತು ಸಂಶ್ಲೇಷಿತ ವಸ್ತುಗಳನ್ನು ಗುರುತಿಸಿ ಅವುಗಳ ನಡುವಿನ ವ್ಯತ್ಯಾಸ ತಿಳಿಯುವುದು

v ನಿತ್ಯ ಜೀವನದಲ್ಲಿ ಸಂಶ್ಲೇಷಿತ ವಸ್ತುಗಳ ಮಹತ್ವ ತಿಳಿಯುವುದು

v ಸಂಶ್ಲೇಷಿತ ವಸ್ತುಗಳ ಅನುಕೂಲ ಮತ್ತು ಅನಾನುಕೂಲಗಳ ಬಗ್ಗೆ ತಿಳಿಯುವುದು

v ಸಂಶ್ಲೇಷಿತ ವಸ್ತುಗಳ ಮಿತ, ನ್ಯಾಯಯುತ ಹಾಗೂ ಪುನರ್ ಬಳಕೆಯಿಂದ ಪರಿಸರ ಸಂರಕ್ಷಣೆ ವಿಧಾನ.

v ಜೈವಿಕ ವಿಘಟನೆಗೆ ಒಳಪಡುವ ಮತ್ತು ವಿಘಟನೆಗೆ ಒಳಪಡದ ವಸ್ತುಗಳ ನಡುವಿನ ವ್ಯತ್ಯಾಸ ಮತ್ತು ಕಾರಣ.

3) ಘಟಕಕ್ಕೆ ಮುನ್ನ ಪೂರ್ವ ಸಿದ್ಧತೆಗಳು

v ವಿವಿಧ ನೈಸರ್ಗಿಕ ಮತ್ತು ಸಂಶ್ಲೇಷಿತ ವಸ್ತುಗಳನ್ನು ವಿದ್ಯಾರ್ಥಿಗಳ ಸಹಾಯದಿಂದ ಸಂಗ್ರಹಿಸಿ ಇಟ್ಟುಕೊಳ್ಳುವುದು.

v ವಿವಿಧ ರೀತಿಯ ಸಂಶ್ಲೇಷಿತ ವಸ್ತುಗಳಾದ ಪಾಲಿಮರ್‍ಗಳು ಗಾಜು, ಸಿಮೆಂಟ್, ಬಣ್ಣಗಳು, ಪ್ಲಾಸ್ಟರ್ ಆಫ್ ಪ್ಯಾರಿಸ್, ಸೀಮೆಸುಣ್ಣ, ಕೃತಕ ನೂಲುಗಳು (ದಾರ) ಅಡುಗೆ ಸೋಡಾ, ವಾಷಿಂಗ್ ಸೋಡಾ, ಮುಂತಾದವುಗಳನ್ನು ಸಂಗ್ರಹಿಸಿಟ್ಟು ಕೊಳ್ಳುವುದು.

v ಸಂಶ್ಲೇಷಿತ ವಸ್ತುಗಳ ಅಸಮರ್ಪಕ ಬಳಕೆಯಿಂದಾಗಿ ಉಂಟಾಗಿರುವ ಪರಿಸರ ಸಂಬಂಧಿ ಸಮಸ್ಯೆಗಳ ಕುರಿತಾದ ಚಿತ್ರಪಟಗಳು, ನ್ಯೂಸ್ ಪೇಪರ್ ಕಟಿಂಗ್‍ಗಳು, ಲೇಖನಗಳನ್ನು ಸಂಗ್ರಹಿಸಿಟ್ಟು ಕೊಳ್ಳುವುದು.

v ಸಂಶ್ಲೇಷಿತ ವಸ್ತುಗಳ ಪುನರ್‍ಬಳಕೆಗೆ ಸಂಬಂಧಿಸಿದ ಪ್ರಮುಖ ಅಂಶಗಳ ಪಟ್ಟಿ.

4) ಕಲಿಕಾ ಚಟುವಟಿಕೆಗಳು

v ನೈಸರ್ಗಿಕ ಮತ್ತು ಸಂಶ್ಲೇಷಿತ ವಸ್ತುಗಳ ಪಟ್ಟಿ ತಯಾರಿಸಲು ತಿಳಿಸುವುದು.

v ಸಂಗ್ರಹಿಸಿರುವ ವಸ್ತುಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲು ತಿಳಿಸಿ, ವರ್ಗೀಕರಣಕ್ಕೆ ಸಮರ್ಥನೆ ನೀಡುವಂತೆ ತಿಳಿಸುವುದು.

v ಸಂಶ್ಲೇಷಿತ ವಸ್ತುಗಳ ತಯಾರಿಕೆಯಲ್ಲಿ ಬಳಸುವ ಕಚ್ಚಾ ವಸ್ತುಗಳನ್ನು ಪಟ್ಟಿಮಾಡುವಂತೆ ತಿಳಿಸುವುದು.

v ತರಗತಿ ವಿದ್ಯಾರ್ಥಿಗಳನ್ನು ತಂಡಗಳಾಗಿ ವಿಂಗಡಿಸಿ ಒಂದೊಂದು ತಂಡಕ್ಕೆ ಒಂದೊಂದು ಕ್ಷೇತ್ರದಲ್ಲಿ ಬಳಸುವ ನೈಸರ್ಗಿಕ ಮತ್ತು ಸಂಶ್ಲೇಷಿತ ವಸ್ತುಗಳನ್ನು ಪಟ್ಟಿ ಮಾಡಲು ತಿಳಿಸುವುದು.

ಉದಾ : ಗೃಹ ಉಪಯೋಗಿ ವಸ್ತುಗಳು, ವಿದ್ಯುತ್ ಉಪಕರಣಗಳು ಜವಳಿ, ಆಹಾರ ಸಂಗ್ರಹಣೆ, ಧಾನ್ಯಗಳ ಸಂಗ್ರಹಣೆ, ಕಟ್ಟಡ ನಿರ್ಮಾಣ, ಕೃಷಿ, ಇತ್ಯಾದಿ. ನಂತರ ತರಗತಿಯಲ್ಲಿ ಪ್ರತಿ ತಂಡವು ತಾನು ಸಂಗ್ರಹಿಸಿರುವ ಮಾಹಿತಿಗಳನ್ನು ತರಗತಿಯಲ್ಲಿ ಮಂಡಿಸಲು ತಿಳಿಸುವುದು.

v ವಿವಿಧ ಬಗೆಯ ಪ್ಲಾಸ್ಟಿಕ್ ವಸ್ತುಗಳನ್ನು ಸಂಗ್ರಹಿಸಿ ಶಿಕ್ಷಕರ ಸಮ್ಮುಖದಲ್ಲಿ ಅವುಗಳಿಗಿರುವ ವ್ಯತ್ಯಾಸಗಳನ್ನು ಪ್ರಾಯೋಗಿಕವಾಗಿ ತಿಳಿಯುವಂತೆ ಮಾಡುವುದು.

v ಬಾಚಣಿಗೆ, ಟೂತ್‍ಬ್ರಶ್, ಪ್ಲಾಸ್ಟಿಕ್ ಚೀಲ, ಕುಕ್ಕರ್‍ನ ಹಿಡಿಕೆ, ಸ್ವಿಚ್‍ಗಳು ಮುಂತಾದವುಗಳನ್ನು ಬಿಸಿ ಮಾಡಿದಾಗ ಅವುಗಳಲ್ಲಾಗುವ ಬದಲಾವಣೆಗಳನ್ನು ಪಟ್ಟಿ ಮಾಡಲು ತಿಳಿಸುವುದು.

v ವಿವಿಧ ಬಗೆಯ ಗಾಜಿನ ವಸ್ತುಗಳನ್ನು ಸಂಗ್ರಹಿಸಿ ಅವುಗಳ ಗುಣಗಳು ಮತ್ತು ಉಪಯೋಗಗಳನ್ನು ತಿಳಿಯುವಂತೆ ಮಾಡುವುದು. (ಬಾಟಲ್, ಪ್ರನಾಳ, ಮಸೂರ, ಕನ್ನಡಿ, ವಾಹನಗಳ ಕಿಟಕಿಯಲ್ಲಿ ಬಳಸುವ ಗಾಜು, ಬಣ್ಣದ ಗಾಜು). ಬಿಸಿ ಮಾಡಿದಾಗ ಅವುಗಳಲ್ಲಾಗುವ ಬದಲಾವಣೆಗಳನ್ನು ಗುರುತಿಸುವಂತೆ ತಿಳಿಸುವುದು.

v ವಿವಿಧ ಮಾದರಿಯ ಸಿಮೆಂಟ್‍ನ್ನು ಸಂಗ್ರಹಿಸಿ ಅವುಗಳ ಬಣ್ಣ ಮತ್ತು ಗುಣಗಳಲ್ಲಿನ ವ್ಯತ್ಯಾಸ ಗುರುತಿಸುವಂತೆ ಮಾಡುವುದು (ಪೆÇೀರ್ಟ್‍ಲ್ಯಾಂಡ್ ಸಿಮೆಂಟ್, ವೈಟ್ ಸಿಮೆಂಟ್ ವಾಟರ್ ಪ್ರೂಫ್ ಸಿಮೆಂಟ್ ಇತ್ಯಾದಿ) ನೀರನ್ನು ಸೇರಿಸಿದಾಗ ಗಟ್ಟಿಯಾಗಲು ತೆಗೆದುಕೊಳ್ಳುವ ಸಮಯ ತಿಳಿಯುತ್ತಾರೆ. v ಸೋಡಿಯಂ ಕಾರ್ಬೊನೇಟ್, ಸೋಡಿಯಂ ಬೈಕಾರ್ಬೊನೇಟ್‍ಗಳನ್ನು ಪ್ರಯೋಗ ಶಾಲೆಯಲ್ಲಿ ತಯಾರಿಸಿ, ಅವುಗಳ ಗುಣಗಳನ್ನು ತಿಳಿಸುವುದು. ಪ್ಲಾಸ್ಟರ್ ಆಫ್ ಪ್ಯಾರಿಸ್ ಉಪಯೋಗಗಳನ್ನು ಪಟ್ಟಿ ಮಾಡಿಸುವುದು.

4) ಕಲಿಕೆಗೆ ಅನುಕೂಲಿಸುವ ವಿಧಾನಗಳು

v ಹಿಂದೆ ವಿವಿಧ ಕ್ಷೇತ್ರಗಳಲ್ಲಿ ಬಳಸುತ್ತಿದ್ದ ನೈಸರ್ಗಿಕ ವಸ್ತುಗಳು ಹಾಗೂ ಈಗ (ಪ್ರಸ್ತುತ) ಬಳಸುತ್ತಿರುವ ಪರ್ಯಾಯ ಸಂಶ್ಲೇಷಿತ ವಸ್ತುಗಳನ್ನು ಪಟ್ಟಿ ಮಾಡಲು ತಿಳಿಸುವುದು.

v ಸಂಶ್ಲೇಷಿತ ವಸ್ತುಗಳ ಅನುಕೂಲ ಮತ್ತು ಅನಾನೂಕೂಲಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ತಿಳಿಸುವುದು (ವೃತ್ತ ಪತ್ರಿಕೆಗಳು ಗ್ರಂಥಾಲಯಗಳು, ಅಂತರ್ಜಾಲ ತಾಣಗಳು)

v ಸಂಶ್ಲೇಷಿತ ವಸ್ತುಗಳು ಮಾನವನಿಗೆ ವರವೇ? ಈ ವಿಷಯದ ಬಗ್ಗೆ ಚರ್ಚಾ ಸ್ಪರ್ಧೆ ಏರ್ಪಡಿಸುವುದು.

v ಪ್ಲಾಸ್ಟಿಕ್, ಗಾಜು, ರಸಗೊಬ್ಬರಗಳು, ಕೀಟನಾಶಕಗಳು ಮುಂತಾದ ಸಂಶ್ಲೇಷಿತ ವಸ್ತುಗಳ ಅಸಮರ್ಪಕ ನಿರ್ವಹಣೆಯಿಂದ ಪರಿಸರದ ಮೇಲಾಗಿರುವ ಪರಿಣಾಮಗಳ ಬಗ್ಗೆ ವೃತ್ತ ಪತ್ರಿಕೆಗಳು, ದೂರದರ್ಶನ, ಗ್ರಂಥಾಲಯದ ಪುಸ್ತಕ ಮತ್ತು ತಜ್ಞರಿಂದ ಮಾಹಿತಿ ಸಂಗ್ರಹಿಸಲು ತಿಳಿಸುವುದು.

v ಪ್ಲಾಸ್ಟಿಕ್, ಗಾಜು, ಮುಂತಾದ ಸಂಶ್ಲೇಷಿತ ವಸ್ತುಗಳ ಸಮರ್ಪಕ ಬಳಕೆ ಮತ್ತು ಪುನರ್ ಬಳಕೆಯ ಕುರಿತು ತಜ್ಞರಿಂದ ಉಪನ್ಯಾಸ ಏರ್ಪಡಿಸುವುದು.

v ಘನ ತ್ಯಾಜ್ಯ, ನಗರ ತ್ಯಾಜ್ಯಗಳ ಅಸಮರ್ಪಕ ನಿರ್ವಹಣೆಯಿಂದ ಉಂಟಾಗಿರುವ ಸಮಸ್ಯೆಗಳ ಬಗ್ಗೆ ಚಿತ್ರಪಟಗಳ ಪ್ರದರ್ಶನ ಮತ್ತು ವಿಡಿಯೋ ಪ್ರದರ್ಶನ ಏರ್ಪಡಿಸುವುದು.

5) ಮೌಲ್ಯಮಾಪನ ಚಟುವಟಿಕೆಗ¼ Àು

v ಸಂಶ್ಲೇಷಿತ ವಸ್ತುಗಳು ಎಂದರೆ ಕೇವಲ ಪ್ಲಾಸ್ಟಿಕ್‍ಗಳು ಮಾತ್ರವೇ? ಚರ್ಚಿಸಿ.

v ಪ್ಲಾಸ್ಟಿಕ್ ವಸ್ತುಗಳು ಅತ್ಯಂತ ಜನಪ್ರಿಯವಾಗಲು ಕಾರಣವಾದ ಪ್ಲಾಸ್ಟಿಕ್‍ನ ಗುಣಗಳ ಪಟ್ಟಿ ತಯಾರಿ.

v ಥರ್ಮೋ ಪ್ಲಾಸ್ಟಿಕ್ ಬಿಸಿ ಮಾಡಿದಾಗ ಮೆದುವಾಗುತ್ತದೆ ಆದರೆ ಥರ್ಮೋ ಸೆಟ್ಟಿಂಗ್ ಪ್ಲಾಸ್ಟಿಕ್ ಬಿಸಿ ಮಾಡಿದಾಗ ಮೆದುವಾಗುವುದಿಲ್ಲ. ಈ ಬಗ್ಗೆ ಚಟುವಟಿಕೆ ನಡೆಸಿ ಕಾರಣದ ಬಗ್ಗೆ ಚರ್ಚಿಸುವುದು.

v ಪ್ಲಾಸ್ಟಿಕ್‍ಗಳ ಅತಿಯಾದ ಬಳಕೆ ಮತ್ತು ಅಸಪರ್ಮಕ ನಿರ್ವಹಣೆಯಿಂದ ಪರಿಸರದ ಮೇಲಾಗುವ ಪರಿಣಾಮಗಳನ್ನು ಪಟ್ಟಿಮಾಡಿಸಿ.

v ಪ್ಲಾಸ್ಟಿಕ್‍ಗಳ ಅಸಮರ್ಪಕ ನಿರ್ವಹಣೆ ಮತ್ತು ಅತಿಯಾದ ಬಳಕೆಯಿಂದ ಉಂಟಾಗಿರುವ ಸಮಸ್ಯೆಗಳಿಗೆ ಸೂಚಿಸುವ ಪರಿಹಾರ ಕ್ರಮಗಳೇನು, ಪಟ್ಟಿ ಮಾಡಿ.

v ನೈಸರ್ಗಿಕ ವಸ್ತುಗಳು ಜೈವ ಶಿಥಿಲೀಯ ಆದರೆ ಸಂಶ್ಲೇಷಿತ ವಸ್ತುಗಳು ಜೈವ ಶಿಥಿಲೀಯಗಳಲ್ಲ ಏಕೆ? ಕಾರಣ ಊಹಿಸಿ ಬರೆಯಲು ತಿಳಿಸಿ.

v ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಸಿಮೆಂಟ್ ಹೆಚ್ಚು ಜನಪ್ರಿಯವಾಗಲು ಕಾರಣವಾದ ಅಂಶಗಳನ್ನು ಪಟ್ಟಿ ಮಾಡಿಸಿ. v ಸೋಡಿಯಂ ಕಾರ್ಬೊನೇಟ್ ಮತ್ತು ಸೋಡಿಯಂ ಬೈ ಕಾರ್ಬೊನೇಟ್‍ಗಳ ಉಪಯೋಗಗಳನ್ನು ಪಟ್ಟಿಮಾಡಿಸಿ. v ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ಸೀಮೆಸುಣ್ಣ ಎರಡು ಕ್ಯಾಲ್ಸಿಯಂ ಸಲ್ಫೇಟ್ ಸಂಯುಕ್ತಗಳೇ ಆದರೂ ಪ್ಲಾಸ್ಟರ್ ಆಫ್ ಪ್ಯಾರಿಸ್ ಪುಡಿಗೆ ನೀರನ್ನು ಸೇರಿಸಿದರೆ ಗಟ್ಟಿಯಾಗುತ್ತದೆ ಆದರೆ ಸೀಮೆ ಸುಣ್ಣಕ್ಕೆ ನೀರು ಸೇರಿಸಿದರೆ ಅದು ಗಟ್ಟಿಯಾಗುವುದಿಲ್ಲ, ಏಕೆ? ಆಲೋಚಿಸಿ.



ಶಿಕ್ಷಕರ ಗಮನಕ್ಕೆ

ಥರ್ಮೋ ಪ್ಲಾಸ್ಟಿಕ್ ಪಾಲಿಮರ್

ಥರ್ಮೋ ಸೆಟ್ಟಿಂಗ್ ಪಾಲಿಮರ್

1) ಇವು ಬಿಸಿ ಮಾಡಿದ ಕೂಡಲೇ ಮೆದುವಾಗುತ್ತವೆ

2) ಉದ್ದ ಸರಪಳಿಯ ದೊಡ್ಡ ಅಣುಗಳಿಂದಾಗಿವೆ

3) ಇವು ಸಾಮಾನ್ಯವಾಗಿ ಕೆಲವು ಸಾವಯವ ದ್ರಾವಕಗಳಲ್ಲಿ ವಿಲೀನವಾಗುತ್ತವೆ

1) ಇವು ಬಿಸಿ ಮಾಡಿದಾಗ ಮೆದುವಾಗುವುದಿಲ್ಲ, ಬದಲಿಗೆ ದೀರ್ಘ ಕಾಲ ಬಿಸಿ ಮಾಡಿದಾಗ ಸಾಮಾನ್ಯವಾಗಿ ಉರಿಯಲು (ದಹಿಸಲು) ಪ್ರಾರಂಭಿಸುತ್ತವೆ.

2) ಸಹ-ವೇಲೆನ್ಸಿ ಬಂಧಗಳಿಂದ ಕೂಡಿರುವ ಮೂರು ಆಯಾಮದ ರಚನೆಯ ಅಣುಗಳಿಂದಾಗಿವೆ.

3) ಅಡ್ಡ ಜೋಡಣೆಯಿಂದಾಗಿರುವ ಬಲವಾದ ಬಂಧಗಳನ್ನು ಹೊಂದಿದ್ದು ಯಾವುದೇ ಸಾವಯವ ದ್ರಾವಕಗಳಲ್ಲಿ ವಿಲೀನವಾಗುವುದಿಲ್ಲ.


ಸಿಮೆಂಟ್‍ನ ಘಟಕಗಳ ಕಾರ್ಯಗಳು :

1) ಸುಣ್ಣ (ಅಚಿಔ) : ಇದು ಸಿಮೆಂಟ್‍ನ ಮುಖ್ಯ ಘಟಕ. ಇದು ಹೆಚ್ಚಾದರೆ ಅಥವಾ ಕಡಿಮೆಯಾದರೆ ಸಿಮೆಂಟ್‍ನ ಸಾಮಥ್ರ್ಯ ಕಡಿಮೆಯಾಗುತ್ತದೆ.

2) ಸಿಲಿಕಾ ಸಿಮೆಂಟ್‍ಗೆ ಶಕ್ತಿಯನ್ನು ನೀಡುತ್ತದೆ.

3) ಅಲ್ಯುಮಿನ (ಂಟ2ಔ3) : ಬೇಗ ಗಟ್ಟಿಯಾಗುವಂತೆ ಮಾಡುತ್ತದೆ.

4) ಜಿಪ್ಸಂ (ಅಚಿSಔ4.2ಊ20) : ಸಿಮೆಂಟ್ ಬೇಗ ಗಟ್ಟಿಯಾಗುವುದನ್ನು ತಡೆಯುತ್ತದೆ. ಸಿಮೆಂಟ್‍ನ ವಿಧಗಳು :

1) ಪೆÇೀರ್ಟ್‍ಲ್ಯಾಂಡ್ ಸಿಮೆಂಟ್

2) ವೈಟ್ ಪೆÇೀರ್ಟ್‍ಲ್ಯಾಂಡ್ ಸಿಮೆಂಟ್

3) ಹೈ-ಅಲ್ಯುಮಿನ ಸಿಮೆಂಟ್ - ಬೇಗ ಗಟ್ಟಿಯಾಗುತ್ತದೆ.

4) ಹೈ-ಅರ್ಲಿ-ಸ್ಟ್ರೆಂತ್ (ಊ.ಇ.S.) (ಊigh ಇಚಿಡಿಟಥಿ Sಣಡಿeಟಿಣh) - 5-30 ನಿಮಿಷಗಳಲ್ಲಿ ಗಟ್ಟಿಯಾಗುತ್ತದೆ.

5) ವಾಟರ್-ಪ್ರೂಫ್ ಸಿಮೆಂಟ್ ಹೆಚ್ಚುವರಿ ಅಧ್ಯಯನ ಚಟುವಟಿಕೆಗಳು

v ಜವಳಿ ಆಟೋಮೊಬೈಲ್, ಕಟ್ಟಡ ನಿರ್ಮಾಣ ಮುಂತಾದ ಕ್ಷೇತ್ರಗಳಲ್ಲಿ ಬಳಸುತ್ತಿರುವ ಪಾಲಿಮರ್‍ಗಳ ಬಗ್ಗೆ ಕ್ಷೇತ್ರ ಭೇಟಿ ಅಥವಾ ಗ್ರಂಥಾಲಯ ಅಥವಾ ಅಂತರ್ಜಾಲದಲ್ಲಿ ಮಾಹಿತಿ ಸಂಗ್ರಹಿಸುವುದು.

v ಪ್ಲಾಸ್ಟಿಕ್, ಗಾಜು ಮುಂತಾದ ವಸ್ತುಗಳ ಪುನರ್ ಬಳಕೆಯ ವಿಧಾನಗಳ ಬಗ್ಗೆ ಮಾಹಿತಿ ಸಂಗ್ರಹಿಸುವುದು.

v ಸಂಶ್ಲೇಷಿತ ವಸ್ತುಗಳಿಗೆ ಪರ್ಯಾಯವಾಗಿ ಸುಲಭವಾಗಿ ಮತ್ತು ಅಗ್ಗವಾಗಿ ದೊರೆಯುವ ಪರಿಸರ ಸ್ನೇಹಿ ನೈಸರ್ಗಿಕ ವಸ್ತುಗಳ ಬಗ್ಗೆ ಮಾಹಿತಿ ಸಂಗ್ರಹಿಸುವುದು.