MDRS ಮಾಡ್ಯೂಲ್ ೬ ಪುರುಷ ಪ್ರಧಾನತೆ ಭಾಗ ೧

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೦೮:೩೬, ೨೯ ಏಪ್ರಿಲ್ ೨೦೨೪ ರಂತೆ Anusha (ಚರ್ಚೆ | ಕಾಣಿಕೆಗಳು) ಇವರಿಂದ
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)
Jump to navigation Jump to search

ಉದ್ದೇಶ:

  • ದಿನನಿತ್ಯದ ಜೀವನದಲ್ಲಿ ಗಂಡು ಮತ್ತು ಹೆಣ್ಣು ಯಾವ ಯಾವ ರೀತಿಯ ಕೆಲಸಗಳನ್ನು ನಿಭಾಯಿಸುತ್ತಾರೆ ಎಂದು ಸೂಕ್ಷ್ಮವಾಗಿ ನೋಡುವುದು
  • ಪುರುಷ ಪ್ರಧಾನತೆ ಶಬ್ದವನ್ನು ಪರಿಚಯ ಮಾಡಿಸುವುದು
  • ಮಾರುಕಟ್ಟೆ ವ್ಯವಸ್ಥೆ ಹೇಗೆ ಪುರುಷ ಪ್ರಧಾನತೆಯನ್ನು ಹೇರುತ್ತದೆ ಎಂದು ಅರ್ಥಮಾಡಿಕೊಳ್ಳವುದು.

ಪ್ರಕ್ರಿಯೆ

ಕುಶಲೋಪರಿಯ ಮೂಲಕ ನಮ್ಮ ಮಾತುಕತೆಯನ್ನು ಶುರು ಮಾಡುವುದು.

ಕಟ್ಟುಪಾಡುಗಳನ್ನು ಜ್ಞಾಪಿಸುವುದು - ಅವರು ಹೇಳಿಲ್ಲ ಅಂದರೆ ನಾವೇ ಒಂದೊಂದಾಗಿ ಹೇಳುವುದು.  

೧. ಏನಾದ್ರೂ ಮಾತಾಡ್ಬೇಕಿದ್ರೆ ಕೈ ಎತ್ತಿ ಮಾತಾಡೋಣ

೨. ಬೇರೆಯವರು ಮಾತಾಡ್ತಿದ್ರೆ ಅವರನ್ನ interrupt ಮಾಡೋದಾಗ್ಲಿ, ನಗೋದು, ಅಣಕ ಮಾಡೋದಾಗ್ಲಿ ಮಾಡೋದು ಬೇಡ

೩. ಎಲ್ಲಾರೂ ಭಾಗವಹಿಸಬೇಕು

೪. ನೀವು ಗಲಾಟೆ ಮಾಡ್ತ ಇದರೆ ನಾವು ಸೈಲೆಂಟ್‌ ಆಗ್ತೀವಿ. ಆಗ್ಲೂ ಮಾತಾಡ್ತ ಇದ್ರೆ ನಾವು ವಾಪಸ್‌ ಹೊರಟು ಹೋಗ್ತೀವಿ

೫. ಫೋಟೋ ತೆಗೀವಾಗ ಫೋಸ್‌ ಕೊಡಬೇಡಿ

೬. ನಾವು ನಿಮಗೆ ಎಷ್ಟು ಮರ್ಯಾದೆ  ಕೊಡ್ತಿವೋ ನಿವು ನಮಗೆ ಅಷ್ಟೇ ಮರ್ಯಾದೆ  ಕೊಡಬೇಕು 10 ನಿಮಿಷ

ಇದಾದ ನಂತರ ಪ್ರತಿಯೊಬ್ಬರಿಗೂ ಒಂದೊಂದು A4 ಹಾಳೆಯನ್ನು ಕೊಡುವುದು. ಈ ಹಾಳೆಯಲ್ಲಿ ಬೆಳಿಗ್ಗೆ ೬ ಗಂಟೆಯಿಂದ ಮಧ್ಯಾಹ್ನ ಎರಡು ಗಂಟೆಯವೆರೆಗೆ ಪ್ರತಿ ಗಂಟೆಯೂ ಮನೆಯ ಸದಸ್ಯರು ಏನು ಮಾಡುತ್ತಿರುತ್ತಾರೆ ಎಂದು ಬರೆಯಲು ಹೇಳುವುದು

ತಮ್ಮ ಕುಟುಂಬದಲ್ಲಿ ಇರುವ ಎಲ್ಲಾ ವ್ಯಕ್ತಿಗಳನ್ನು ಸೂಚಿಸುತ್ತ ಈ ಚಟುವಟಿಕೆ ಮಾಡಬೇಕು.

ಪ್ರತಿಯೊಬ್ಬ ವ್ಯಕ್ತಿಯೂ ಬೆಳಿಗ್ಗೆ ಏಳುವ ಸಮಯದಿಂದ ಮೊದಲುಗೊಂಡು ಮಧ್ಯಾಹ್ನದವರೆಗೆ ಮಾಡುವ

ಎಲ್ಲಾ ಚಟುವಟಿಕೆಗಳನ್ನು ಪಟ್ಟಿಮಾಡಲು ತಿಳಿಸುವುದು.

ಸಮಯ ಅಮ್ಮ ಅಪ್ಪ ಅಣ್ಣ / ತಮ್ಮ ಅಕ್ಕ / ತಂಗಿ ನಾನು
ಬೆಳಿಗೆ 5-6
6-7
7-8
8-9
9-10
10-11
11-12
ಮಧ್ಯಾಹ್ನ 12-1
1-2
2-3

ಪ್ರತಿಯೊಬ್ಬರೂ ಪಟ್ಟಿಮಾಡಿದ ಮೇಲೆ ಅವರು ಬರೆದಿರುವುದನ್ನು ಗಮನಿಸಲು ಹೇಳುವುದು.

ನೀವು ಈ ದಿನಚರಿಗಳನ್ನು ಬರೆದಾಗ ನಿಮ್ಮ ಗಮನಕ್ಕೆ ಬಂದ ಅಂಶಗಳೇನು? ಎಂದು ಪ್ರಶ್ನೆಯನ್ನು ಕೇಳುವುದು.

ಪ್ರಾಂಪ್ಟ್‌ ಮಾಡಲು ಅಪ್ಪ ಏನ್‌ ಮಾಡ್ತ ಇದ್ರು, ಅಮ್ಮ ಏನ್ ಮಾಡ್ತಿದ್ರು. ಯಾರು ಹೊರಗಡೆ ಹೋಗ್ತಿದ್ರು, ಯಾರು ಮನೇನಲ್ಲಿದ್ರು. ನೀವೇನ್ಮಾಡ್ತಿದ್ರಿ ಎಂದು ಕೇಳುವುದು. ಯಾರ್ಯಾರು ಮಾಡೋದು ಸಿಮಿಲರ್‌ ಇತ್ತು, ಬೇರೆ ಬೇರೆ ಇತ್ತು  ಹೀಗೆ ಪ್ರಾಂಪ್ಟ್‌ ಮಾಡೋದು.  

ಎಲ್ಲರೂ ಹೇಳಾದ ನಂತರ, ನೀವು ಹೇಳ್ತಿರೋದನ್ನ ನೋಡಿದರೆ ಅಮ್ಮ ಒಂದು ರೀತಿಯ ಕೆಲಸ ಮಾಡ್ತಾರೆ, ಅಪ್ಪ ಒಂದು ರೀತಿಯ ಕೆಲಸ ಮಾಡ್ತಾರೆ.

ಇವಾಗ ಅಪ್ಪ ಮಾಡೋ ಕೆಲಸ ಅಮ್ಮ ಮಾಡೋದು, ಅಮ್ಮ ಮಾಡೋ ಕೆಲಸ ಅಪ್ಪ ಮಾಡೋದು ಅಂತ ಬದಲಾಯಿಸಿಕೊಳ್ಳಬಹುದ? ಉದಾಹರಣೆಗೆ - ಅಪ್ಪ ಅಡಿಗೆ ಮಾಡೋದು, ನೆಲ ಒರೆಸಿ ರಂಗೋಲಿ ಹಾಕೋದು. ನಿಮ್ಮ ಅಣ್ಣ/ ತಮ್ಮನ ಬದಲು ನೀವು ಅಂಗಡಿಗೆ ಹೋಗೋದು?

ಇದನ್ನ ಕೇಳಿ ಕಿಶೋರಿಯರಿಗೆ ನಗು ಬರಬಹುದು ಅಥವ ಇದೆಲ್ಲ ಹೇಗೆ ಸಾಧ್ಯ ಅಂತ ಕೇಳಬಹುದು.

ಮಹಿಳೆಯರಿಗೆ ಒಂದು ರೀತಿ ಕೆಲಸ ಇರುತ್ತೆ, ಗಂಡ್ಮಕ್ಳಿಗೇ ಒಂದು ರೀತಿಯ ಕೆಲಸ ಇರುತ್ತೆ ಅಂತಾನೂ ಹೇಳಬಹುದು.

ಅವರು ಏನು ಹೇಳುತ್ತಾರೆ ಅನ್ನುವ ಆಧಾರದ ಮೇಲೆ ಇದನ್ನ ಕೇಳಿದ್ರೇನೆ ನಮಗೆ ನಗು ಬರುತ್ತೆ. ಇದನ್ನ ಊಹಿಸಿಕೊಳ್ಳೋಕೂ ಆಗಲ್ಲ. ಈ ರೀತಿ ಪುರುಷರು ಈ ಕೆಲಸ ಮಾಡ್ಬೇಕು, ಮಹಿಳೆಯರು ಈ ಕೆಲಸಾನೇ ಮಾಡ್ಬೇಕು ಅಂತ ಸಮಾಜ ಹೇಳುತ್ತೆ.

ಆದ್ರೆ ನಾವು ಗಮನಿಸಿದ್ರೆ ಯಾರ್ಬೇಕಿದ್ರೂ ಯಾವ ಕೆಲಸ ಕೂಡ ಮಾಡಬಹುದಲ್ವ?  

ಹೌದೋ, ಇಲ್ವೋ .. ಹೌದು ಎಂದು ಜೋರಾಗಿ ಹೇಳಿಸೋದು.

ಈ ರೀತಿ ಹೆಣ್ಮಕ್ಳು ಈ ರೀತಿ ಇರಬೇಕು, ಈ ಕೆಲಸಾನೇ ಮಾಡ್ಬೇಕು, ಗಂಡ್ಮಕ್ಳು ಈ ರೀತಿ ಇರ್ಬೇಕು, ಈ ಕೆಲಸಾನೇ ಮಾಡ್ಬೇಕು ಅನ್ನೋ ಸಾಮಾಜಿಕ ವ್ಯವಸ್ಥೆಗೆ ಒಂದು ಹೆಸರಿದೆ.

ಅದರ ಹೆಸರೇ ಪುರುಷಪ್ರಧಾನತೆ. ಏನು? ಪುರುಷಪ್ರಧಾನತೆ.

ಪುರುಷಪ್ರಧಾನತೆ ಎಂದು ಜೋರಾಗಿ ಹೇಳಿಸುವುದು.

ಚಾರ್ಟಿನ ಮೇಲೆ ಬರೆಯುವುದು / ಪ್ರೊಜೆಕ್ಟರ್‌ನಲ್ಲಿ ತೋರಿಸುವುದು.  

ಪುರುಷ ಪ್ರಧಾನತೆ ಅಂದರೆ ಪುರುಷರಿಗೇ ಹೆಚ್ಚಿನ ಅಧಿಕಾರ, ಅವಕಾಶ, ಮನ್ನಣೆ ಕೊಡುವ ವ್ಯವಸ್ಥೆ. ಇದರಲ್ಲಿ ಹೆಣ್ಣು ಮಕ್ಕಳನ್ನು ಕಡೆಗಣಿಸಲಾಗುತ್ತದೆ. ಇವತ್ತು ಇದರ ಬಗ್ಗೆ ಇನ್ನೂ ಹೆಚ್ಚು ತಿಳಿದುಕೊಳ್ಳೋಣ.

ದೊಡ್ಡ ಗುಂಪಿನಲ್ಲಿಯೇ ಮಹಿಳೆಯರ ಮತ್ತು ಪುರುಷರಿಗಾಗಿ ಮಾಡಿರುವ ಪ್ರಾಡಕ್ಟ್‌ಗಳಿರುವ  ಈ ಕೆಳಗಿನ ಜಾಹಿರಾತುಗಳನ್ನು ತೋರಿಸುವುದು.

  • MTR masala
  • Swiggy
  • Bru instant
  • Surf excel matic
  • Garnier
  • Fair and handsome
  • Bru instant 2
  • Butterfly bottles
  • Fortune oil
  • ID products

ಪ್ರತಿ ಜಾಹಿರಾತನ್ನು ನೋಡಿದ ನಂತರ ಅದರಲ್ಲಿ ಏನಿತ್ತು, ಹೆಣ್ಣುಮಕ್ಕಳು ಏನು ಮಾಡ್ತಾ ಇದ್ರು? ಗಂಡುಮಕ್ಕಳು ಏನು ಮಾಡ್ತಾ ಇದ್ರು?

ಹೆಣ್ಣು / ಗಂಡು ಮಕ್ಕಳ ಪಾತ್ರ ಹೇಗಿತ್ತು?

ಇವು ನಮ್ಮ ಮನೆಗಳಲ್ಲು ಆಗ್ತಾ ಇದ್ಯ? ನಮ್ಮ ಸುತ್ತಮುತ್ತಾ ಸಮಾಜದಲ್ಲಿ ಆಗ್ತಾ ಇದ್ಯ?

ಇವೆಲ್ಲಾ ಹೀಗೇ ಇರಬೇಕು ಅಂತ ಮಾಡಿರೋದು ಯಾರು? ಏಕೆ?

ಕಂಪನಿಗಳು ತಮ್ಮ ಸರಕುಗಳನ್ನ ಆಕರ್ಷಕವಾಗಿ ತೋರಿಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡ್ತವೆ. ಹೀಗಿದ್ದಾಗ ಅವರಿಗೆ ಹೆಚ್ಚು ಲಾಭ ಬರಲಿ ಅನ್ನೋ ಉದ್ದೇಶಕ್ಕೆ ಹೆಣ್ಣುಮಕ್ಕಳಿಗೆ ಹಾಗು ಗಂಡುಮಕ್ಕಳಿಗೆ ಒಂದೇ ಥರಹದ ವಿವಿಧ ಪ್ರಾಡಕ್ಟ್‌ಗಳನ್ನ ಸೃಷ್ಟಿಸುತ್ತವೆ. ಅದಲ್ಲಿ ನಾವು ನೋಡಿದ್ರೆ ತುಂಬಾ ವಿಭಿನ್ನವಾದ ingredients ಏನು ಇರಲ್ಲ.

ಉದಾ : garnier and fair and handsome

ಅದೇ ರೀತಿ ಹಲವು ಜಾಹಿರಾತುಗಳು ಹೆಣ್ಣುಮಕ್ಕಳಿಗೆ ಬಟ್ಟೆ ಒಗೆಯೋದು, ಅಡಿಗೆ ಮಾಡೋದು, ಬಟ್ಟೆ ಒಣಗಾಕೋದು, ಮನೆಯ ಕೆಲಸಗಳನ್ನು ಆಕೆಯೇ ಮಾಡಬೇಕು ಎನ್ನುವ ರೀತಿಯಲ್ಲಿ ತೋರಿಸುತ್ತವೆ. ಇದರಿಂದ ಹೆಣ್ಣಿನ ಪಾತ್ರ ಈ ಕೆಲಸಗಳಿಗೇ ಸೀಮಿತವಾಗುತ್ತದೆ. ಹಂಗೆ ನೀವು ಗಂಡಸರು ಏನು ಮಾಡ್ತಿದಾರೆ ಅಂತ ನೋಡಿದ್ರೆ - ಅವರು ಸುಮ್ಮನೆ ಕೂತಿರುತ್ತಾರೆ, ಹೆಣ್ಣನ್ನು ಕಾಪಾಡಲು ಬರುತ್ತಾರೆ (ಬ್ರು ಜಾಹಿರಾತು), ಇದೇನಿದು ಹೆಣ್ಣುಮಕ್ಕಳ ಕ್ರೀಂ ಹಚ್ತಿದ್ಯ ಅಂತ ಇತರ ಪುರುಷರನ್ನು ಛೇಡಿಸುತ್ತಾರೆ (fair and handsome). ಹೀಗೆಲ್ಲಾ ಮಾಡೋದರ ಮೂಲಕ ಗಂಡುಮಕ್ಕಳು ಇದನ್ನೇ ಮಾಡಬೇಕು, ಅವರ ಪಾತ್ರ ಇವಿಷ್ಟಕ್ಕೇ ಸೀಮಿತ ಎನ್ನುವ ಸಾಮಾಜಿಕ ಕಟ್ಟುಪಾಡುಗಳನ್ನು ಹೇರಲಾಗುತ್ತರೆ.

ಇದರಿಂದ ಮಾರುಕಟ್ಟೆಯಲ್ಲಿರುವ ಆ ಕಂಪನಿಗಳಿಗೆ ಲಾಭವೇ ಹೊರತು, ಅದುನ್ನ ಫಾಲೋ ಮಾಡೋ ನಮಗಲ್ಲ.

ನೋಡಿ ಪುರುಷಪ್ರಧಾನತೆ ಹೇಗೆ ನಮ್ಮ ಮೇಲೆ ಹೇರಲ್ಪಡುತ್ತೆ ಅಂತ.

ಏನಿದು? ಪುರುಷಪ್ರಧಾನತೆ….

ಇದೇ ಥರದ ಬೇರೆ ಬೇರೆ ವಿಷ್ಯಗಳನ್ನ ಮುಂದಿನ ಕ್ಲಾಸಲ್ಲಿ ನೋಡೋಣ.

ಮುಂದಿನ ಕ್ಲಾಸಲ್ಲಿ ಮತ್ತೆ ಸಿಗೋಣ ಅಂತ ಹೇಳಿ ಸೆಶನ್‌ ಅನ್ನು ಮುಗಿಸುವುದು.

 

ಒಟ್ಟು ಸಮಯ

೬೦ ನಿಮಿಷಗಳು

ಒಟ್ಟು ಫೇಸಿಲಿಟೇಟರ್‌ಗಳು: 1

ಬೇಕಾಗಿರುವ ಸಂಪನ್ಮೂಲಗಳು

  • Projector
  • ಸ್ಕೆಚ್‌ ಪೆನ್‌ಗಳು - ೨ ಸೆಟ್‌ಗಳು
  • Speaker
  • Laptop
  • A4 sheets - 50 sheets

ಇನ್‌ಪುಟ್‌ಗಳು

Ads for showing in the session

ಔಟ್‌ಪುಟ್‌ಗಳು