ಬದಲಾವಣೆಗಳು

Jump to navigation Jump to search
ಹೊಸ ಪುಟ: ==== '''<nowiki/>'ಶಿಕ್ಷಕರ ಕಲಿಕಾ ಸಮುದಾಯ' ಕಾರ್ಯಕ್ರಮದ ಗುರಿಗಳು''' ==== VTC ಮತ್ತು ITFC ಸಹಯೋ...
==== '''<nowiki/>'ಶಿಕ್ಷಕರ ಕಲಿಕಾ ಸಮುದಾಯ' ಕಾರ್ಯಕ್ರಮದ ಗುರಿಗಳು''' ====
VTC ಮತ್ತು ITFC ಸಹಯೋಗದಲ್ಲಿ ಈಗ ಸರ್ಕಾರಿ ಅನುದಾನಿತ ಶಾಲೆಗಳನ್ನು ಬಲಪಡಿಸಲು 'ಶಿಕ್ಷಕರ ಕಲಿಕಾ ಸಮುದಾಯ' ಎಂಬ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಿದೆ ಮತ್ತು ಈ ಶಾಲೆಗಳಿಗೆ ಒದಗುವಂತೆ ಮಾಡುತ್ತಿದೆ,

ಇದರ ಗುರಿಗಳು:
* ಶಿಕ್ಷಕರನ್ನು ತಮ್ಮ ವೃತ್ತಿಪರ ಅಭಿವೃದ್ಧಿ ಮತ್ತು ವಿಷಯ ಬೋಧನೆಗೆ ಐಸಿಟಿ ಅನ್ವಯಗಳ ಬಳಕೆಗೆ ಪರಿಚಯಿಸುವುದು
* ವಿದ್ಯಾರ್ಥಿಯ ಕಲಿಕೆ ಫಲಿತಾಂಶಗಳು ಮತ್ತು ಶಾಲಾ ಗುಣಮಟ್ಟವನ್ನು ಸುಧಾರಿಸಲು ಐಸಿಟಿ ಬಳಸಿ ಕಲಿಸಲು ಶಿಕ್ಷಕರಿಗೆ ಬೆಂಬಲಿಸುವುದು.
* ಬೆಂಗಳೂರು ದಕ್ಷಿಣ ವಲಯ 3ರ ಶಾಲೆಗಳಲ್ಲಿ, ಶಾಲೆಗಳ ನಡುವೆ ಸಹಯೋಗವನ್ನು ಸುಧಾರಿಸಲು ಮತ್ತು ವಿದ್ಯಾರ್ಥಿ ಕಲಿಕೆ ಸುಧಾರಿಸಲು ಶಿಕ್ಷಕರ ನಡುವೆ ವೃತ್ತಿಪರ ಕಲಿಕೆ ಸಮುದಾಯಗಳ (ಪಿಎಲ್‌ಸಿಗಳ) ರಚನೆ.
ಕಾರ್ಯಕ್ರಮದ ಚಟುವಟಿಕೆಯು ಕೆಳಗಿನವುಗಳನ್ನು ಒಳಗೊಂಡಿರುತ್ತವೆ:
* ವಿಷಯ ಆಧಾರಿತ ಕಾರ್ಯಾಗಾರಗಳು ಸೇರಿದಂತೆ ವಲಯಮಟ್ಟದ ಎಲ್ಲಾ ಶಾಲೆಗಳಿಗೆ ಮೊಬೈಲ್ ಫೋನ್ ಆಧಾರಿತ ಗುಂಪುಗಳು ಮತ್ತು ಸಂಪನ್ಮೂಲ ವೆಬ್‌ಸೈಟ್‌ಗಳ ಮೂಲಕ ಬೆಂಬಲಿತವಾದ ಕಲಿಕೆ ಕಾರ್ಯಕ್ರಮಗಳು
* ಶಿಕ್ಷಕರಿಗೆ ವಲಯ ಮಟ್ಟದ ಕಾರ್ಯಕ್ರಮಗಳ ಮೂಲಕ ತರಗತಿಗಳಿಗಾಗಿ ಡಿಜಿಟಲ್ ಕಲಿಕಾ ಸಾಮಗ್ರಿಗಳನ್ನು ರಚಿಸಲು ಬೆಂಬಲ
* ತರಗತಿ ಬೋಧನೆಗೆ ಸಂಪನ್ಮೂಲಗಳನ್ನು ಒದಗಿಸುವುದು ಮತ್ತು ಹೊಸ ಉಪಕರಣಗಳನ್ನು ಪ್ರದರ್ಶಿಸಲು ಆಸಕ್ತ ಶಾಲೆಗಳಲ್ಲಿ ಶಾಲಾ ಹಂತದ ಬೆಂಬಲ, ಐಸಿಟಿ ಪ್ರಯೋಗಾಲಯಗಳನ್ನು ಸ್ಥಾಪಿಸುವುದು ಮತ್ತು ನಿರ್ವಹಿಸುವುದು ಮತ್ತು ಶಾಲಾ ಆಡಳಿತ ಮತ್ತು ಸಂವಹನದಲ್ಲಿ ಐಟಿ ಬಳಕೆಗಾಗಿ ಬೆಂಬಲಿಸುವುದು.
ಕಾರ್ಯಗಾರದ ಗುರಿಗಳು,
* ಶಾಲಾ ಮುಖ್ಯ ಶಿಕ್ಷಕರಿಗೆ 'ಶಿಕ್ಷಕರ ಕಲಿಕಾ ಸಮುದಾಯ' ಕಾರ್ಯಕ್ರಮದ ಪರಿಚಯ, ಸಂಬಂಧಿಸಿದ ಸಾಮಾನ್ಯ ಕ್ಷೇತ್ರಗಳನ್ನು ಗುರುತಿಸುವುದು, ವಲಯ ಹಾಗು ಶಾಲಾ ಮಟ್ಟದ ಶೈಕ್ಷಣಿಕ ಕೆಲಸಗಳ ಕಾರ್ಯಕ್ರಮದ ಬಗ್ಗೆ ಚರ್ಚೆ.
* ಶಾಲಾ ನಾಯಕತ್ವ ಹಾಗು ಅಭಿವೃದ್ಧಿಯ ಬಗ್ಗೆ ಮುಖ್ಯ ಶಿಕ್ಷಕರ ನಡುವೆ "ವೃತ್ತಿಪರ ಕಲಿಕಾ ಸಮುದಾಯ"ಗಳನ್ನು ರಚಿಸುವುದು, ಸಹಯೋಗ ಹಾಗು ಕಲಿಕೆಗೆ ಸ್ವಾಯತ್ತ ಸ್ಥಳವನ್ನು ನೀಡುವುದು.
* ಗಣಿತ, ಕನ್ನಡ ಹಾಗು ಆಂಗ್ಲ ವಿಷಯಗಳಿಗೆ 2018-19ನೇ ಸಾಲಿನಲ್ಲಿ ವಲಯ ಹಾಗು ಶಾಲಾ ಮಟ್ಟದ ಕಾರ್ಯಕ್ರಮಗಳನ್ನು ಪ್ರಾರಂಭಿಸುವುದು. ಇವುಗಳ ಮೂಲಕ ಪಡೆದ ತಿಳುವಳಿಕೆಯ ಚರ್ಚೆ.
{| class="wikitable"
|ಕ್ರಮ ಸಂಖ್ಯೆ
|ವಿಶೇಷಗಳು
|ಸಮಯ
|ವಿಸ್ತರಿಸಿದ ಸಭಾ ಯೋಜನೆ
|-
|1
|ನೋಂದಣಿ
|9.30 - 10.00
|ODKಯಲ್ಲಿ ಭಾಗುದಾರರ ಮಾಹಿತಿಯನ್ನು ಭರ್ತಿಮಾಡುವುದು, ಕಡತವನ್ನು ಪಡೆದುಕೊಳ್ಳುವುದು, ಮುಖ್ಯ ಶಿಕ್ಷಕರ ಫೋನ್‌ಗಳಲ್ಲಿ ಮೂಡಲ್‌ ಅನ್ನು ಅನುಷ್ಟಾನಗೊಳಿಸುವುದು.
|-
|2
|ಸನ್ನಿವೇಶದ ಸಂಯೋಜನೆ
|10.00 - 11.30
|ಉದ್ಘಾಟನೆ ಹಾಗು ಸ್ವಾಗತ ಭಾಷಣ

ಸನ್ನಿವೇಶದ ಸಂಯೋಜನೆ ಅನುದಾನಿತ ಶಾಲೆಗಳ ಸವಾಲುಗಳು, SSLC ಫಲಿತಾಂಶ ಹಾಗು ದಾಖಲಾತಿಯ ಮಾಹಿತಿ ಹಂಚಿಕೆ.

ನಮ್ಮ ಶಾಲೆಯ ಮೂರು ಪ್ರಮುಖ ಸವಾಲುಗಳು ಯಾವುವು?
|-
|
|ಚಹಾ ವಿರಾಮ
|11.30 - 11.45
|
|-
|3
|ನಿರೀಕ್ಷೆಗಳು ಹಾಗು ಯೋಜನೆಗಳು
|11.45 - 12.30
|'''ಪ್ರಾಣಿಗಳ ಕಥೆ'''ಯ ಓದು ಹಾಗು ಚರ್ಚೆ, ಭಾಗುದಾರರ ಅನುಭವದ ಹಂಚಿಕೆ.

ಐ.ಸಿ.ಟಿಯು ಯಾವ ಪಾತ್ರವನ್ನು ವಹಿಸಬಹುದು?

ನನ್ನ ಶಾಲೆಗೆ ಯೋಜನೆ.

'''ಐಟಿಎಫ್‌ಸಿ ಯ ಕೆಲಸಗಳು'''
|-
|4
|ಮೊಬೈಲ್‌ ಅನ್ವಯಕಗಳು
|12.30 - 1.00
|ಟೆಲಿಗ್ರಾಮ್‌ ಹಾಗು ಮೂಡಲ್‌ನಂತಹ ಮೂಲಭೂತ ಮತ್ತು ಹಲವು ಸಾಮಾನ್ಯ ಅನ್ವಯಕಗಳನ್ನು ಮೊಬೈಲ್‌ನಲ್ಲಿ ಅನುಷ್ಟಾನಗೊಳಿಸುವುದು.

ಟೆಲಿಗ್ರಾಮ್‌ ಗುಂಪನ್ನು ಸೃಷ್ಟಿಸುವುದು.
|-
|
|ಭೋಜನ ವಿರಾಮ
|1.00 - 2.00
|
|-
|5
|ಕಾರ್ಯಕ್ರಮದ ವಿನ್ಯಾಸ ಹಾಗು ಸಾಧ್ಯತೆಗಳು
|2.00 - 4.00
|ಒಟ್ಟಾರೆ ಕಾರ್ಯಕ್ರಮದ ವಿನ್ಯಾಸ ಹಾಗು ಸಾಧ್ಯತೆಗಳು.

ಗಣಿತ, ಕನ್ನಡ/ಬೇರೆ ಭಾಷೆ, ಶಾಲಾ ನಾಯಕತ್ವ ಹಾಗು ಡಿಜಿಟಲ್ ಸಾಕ್ಷರತಾ ಅಂಶಗಳು.

ವಲಯ ಮಟ್ಟದ ಕಾರ್ಯಗಾರಗಳ ಚರ್ಚೆ.

ಆಸಕ್ತ ಶಾಲೆಗಳಲ್ಲಿ ಶಾಲಾ ಮಟ್ಟದ ಕಾರ್ಯಕ್ರಮದ ಯೋಜನೆ
|-
|
|ಚಹಾ ವಿರಾಮ
|
|
|-
|6
|ಮುಂದಿನ ಹೆಜ್ಜೆಗಳು
|4.00 - 4.30
|ಮುಂದಿನ ಮುಖ್ಯ ಶಿಕ್ಷಕರ ಕಾರ್ಯಗಾರಗಳಿಗೆ ದಿನಾಂಕ ನಿಗದಿ, ವಲಯ ಮಟ್ಟದ ಕಾರ್ಯಗಾರಗಳ ಹಂಚಿಕೆ.

ಶಾಲಾ ಮಟ್ಟದ ಕಾರ್ಯಕ್ರಮಗಳಿಗಾಗಿ ನಮೂನೆಯನ್ನು ಭರ್ತಿ ಮಾಡಿ.
|}

[[ವರ್ಗ:ಶಿಕಸ ಹಂತ 3]]
[[ವರ್ಗ:ಕಾರ್ಯಗಾರ]]

ಸಂಚರಣೆ ಪಟ್ಟಿ