ಬದಲಾವಣೆಗಳು

Jump to navigation Jump to search
GHGHS-en module 3
೧ ನೇ ಸಾಲು: ೧ ನೇ ಸಾಲು: −
+
== ಸಾರಾಂಶ ==
 +
ಹಿಂದಿನ ವಾರದಲ್ಲಿ ಕಿಶೋರಿಯರು ಕಂಪ್ಯೂಟರ್‌ ಬಗ್ಗೆ ತಿಳಿತುಕೊಳ್ಳುವತ್ತ ತಮ್ಮ ಮೊದಲ ಹೆಜ್ಜೆ ಇಟ್ಟಿದ್ದಾರೆ. ಈ ವಾರ ಅವರು ಅದರ ಮುಂದಿನ ಹೆಜ್ಜೆಯಾಗಿ ಟೈಪಿಂಗ್‌ ಅನ್ನು ಕಲಿಯುತ್ತಾರೆ. ಇದರ ಜೊತೆಗೆ ಕಂಪ್ಯೂಟರ್‌ ಬಗೆಗಿನ ಮಿಥ್ಯವನ್ನು ಹೋಗಲಾಡಿಸುವುದಕ್ಕಾಗಿ ಹಾಗೂ ಎಲ್ಲರೂ ಕೂಡಿಕೊಂಡು ಕಂಪ್ಯೂಟರ್‌ ಅಂದರೆ ಏನು ಎಂದು ಚರ್ಚಿಸುವುದಕ್ಕಾಗಿ ಗುಂಪಿನ ಚಟುವಟಿಕೆ ಮಾಡಲಾಗುತ್ತದೆ.
 +
 
 +
ಫೆಸಿಲಿಟೇಟರ್‌:  ಶ್ರೇಯಸ್‌
 +
 
 +
ಕೊ - ಫೆಸಿಲಿಟೇಟರ್‌ : ಕಾರ್ತಿಕ್, ಅನುಷಾ
 +
 
 +
== ಊಹೆಗಳು ==
 +
1. ನಮಗೆ ಇನ್ನು ೨ ಕ್ಲಾಸುಗಳು ಸಿಗುತ್ತವೆ.
 +
 
 +
2. ಒಟ್ಟು ಕಿಶೋರಿಯ ಸಂಖ್ಯೆ ೩೬.
 +
 
 +
3. ಕಿಶೋರಿಯರಿಗೆ ಕಂಪ್ಯೂಟರ್‌ನ ಬೇಸಿಕ್‌ ಜ್ಞಾನ ಇದೆ.
 +
 
 +
4. ಹಿಂದಿನ ವಾರ ಕಿಶೋರಿಯರು ಮಾತುಕತೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ.
 +
 
 +
5. ಕಿಶೋರಿಯರಲ್ಲಿ  ಬೇರೆ ಬೇರೆ ಗುಂಪುಗಳು ಈಗಾಗಲೇ ಇವೆ.
 +
 
 +
6. ಕೆಲವು ಕಿಶೋರಿಯರನ್ನು ಉಳಿದ ಕಿಶೋರಿಯರು ಹಿಯಾಳಿಸುವುದರಿಂದ ಅವರಿಗೆ ಕಂಪ್ಯೂಟರ್‌ ಬಳಕೆ ಮಾಡಲು ಹಿಂಜರಿಕೆ ಇದೆ.
 +
 
 +
7. ಮೌಸ್‌ ಮತ್ತು ಕೀ-ಪ್ಯಾಡ್‌ನ ಬಳಕೆ ಇನ್ನು ಕರಗತ ಆಗಿಲ್ಲ.
 +
 
 +
8. ಇದು ಡಿಜಿಟಲ್‌ ಸಾಕ್ಷರತೆಯ ಭಾಗವಾಗಿರುವುದರಿಂದ ಹೊಸ ಹೆಜ್ಜೆ ಹೊಸ ದಿಶೆಯ ಬೇರೆ ತರಗತಿಗಳನ್ನು ಯೋಜಿಸಿದಂತೆ ಇಲ್ಲಿ ಕಿಶೋರಾವಸ್ಥೆಯ ಅಂಶಗಳನ್ನು ಹೆಚ್ಚು ತರಲು ಸಾಧ್ಯವಾಗದಿರಬಹುದು.
 +
 
 +
9. ಕಿಶೋರಿಯರೊಂದಿಗೆ ನಮ್ಮ rapport ಪೂರ್ಣವಾಗಿ ಆಗಿಲ್ಲ. ಸಮಯದ ಅಭಾವವಿರುವುದರಿಂದ ನಮಗೆ ಅದಕ್ಕೆ ಜಾಸ್ತಿ ಸಮಯ ನೀಡಲು ಆಗಿಲ್ಲ.
 +
 
 +
10. ಇಂಗ್ಲಿಷ್‌ ಮಾಧ್ಯಮವಾದ್ದರಿಂದ ಕಿಶೋರಿಯರು ಇಂಗ್ಲಿಷ್‌ನಲ್ಲಿ ಮಾತನಾಡಲು ಪ್ರಯತ್ನಿಸುತ್ತಾರೆ.ಕೆಲವು ಕಿಶೋರಿಯರಿಗೆ ಇಂಗ್ಲಿಷ್‌ನಲ್ಲಿ ನಿರರ್ಗಳವಾಗಿ ಮಾತನಾಡಲು ಆಗದಿರುವುದರಿಂದ ಅವರ ಅಭಿವ್ಯಕ್ತಿಗೆ ತೊಂದರೆಯಾಗುತ್ತಿದೆ.
 +
 
 +
11. ಕಂಪ್ಯೂಟರ್‌ ಬಳಸಲು ಕಿಶೋರಿಯರು ಉತ್ಸುಕರಾಗಿದ್ದಾರೆ.
 +
 
 +
12. ಅಪರ್ಣ ಇನ್ನು ಒಂದು ಬಾರಿಯೂ ಅವರೊಂದಿಗೆ ಮಾತನಾಡಿಲ್ಲ.
 +
 
 +
13. ಲ್ಯಾಬ್‌ನಲ್ಲಿರುವ ಎಲ್ಲ ಕಂಪ್ಯೂಟರ್‌ ಕೆಲಸ ಮಾಡುತ್ತಿಲ್ಲ. ಕಿಶೋರಿಯರ ಸಂಖ್ಯೆ ಜಾಸ್ತಿ ಇರುವುದರಿಂದ ಎಲ್ಲರೂ ಹಾಜರಿದ್ದರೆ ಕಂಪ್ಯೂಟರ್‌ ಎಲ್ಲರಿಗೂ ಸಿಗದಿರಬಹುದು.
 +
 
 +
14. ಹಿಂದಿನ ವಾರ ಕಂಪ್ಯೂಟರ್‌ ಬಳಕೆ ಹೆಚ್ಚು ಮಾಡಲು ಸಮಯಾವಕಾಶವಿರಲಿಲ್ಲ.
 +
 
 +
15. ಕೆಲವು ಕಿಶೋರಿಯರ ಮನೆಯಲ್ಲಿ ಕಂಪ್ಯೂಟರ್‌ ಇವೆ ಹಾಗೂ ಇನ್ನು ಕೆಲವರು ಕಂಪ್ಯೂಟರ್‌ ಅನ್ನು ಕೇವಲ ಶಾಲೆಯಲ್ಲಿ ನೋಡಿದ್ದಾರೆ.
 +
 
 +
16. ಕನ್ನಡ ಟೈಪ್‌ ಮಾಡಲು ಇನ್ನೂ ಕಲಿತಿಲ್ಲ.
 +
 
 +
17.  ಕಂಪ್ಯೂಟರ್‌ನಲ್ಲಿ ಫೋಲ್ಡರ್‌ ಮಾಡುವುದನ್ನು ಕಲಿತಿದ್ದಾರೆ.
 +
 
 +
18.  ಲಿಂಗತ್ವದ ಬಗೆಗಿನ ವಿಚಾರಗಳನ್ನು ಒಂದೇ ಸಲ ಪರಿಚಯಿಸಿದರೆ short circuit ಥರ ಆಗುತ್ತದೆ.
 +
 
 +
19.  ಇದು ಫ್ಯಾಸಿನೇಟಿಂಗ್‌ ಟೂಲ್‌ ಎನ್ನುವುದನ್ನು ಮನದಲ್ಲಿಟ್ಟುಕೊಂಡು ನಾವು ಮಾತನಾಡಬೇಕಿದೆ.
 +
 
 +
== ಉದ್ದೇಶ ==
 +
1. ಕಂಪ್ಯೂಟರ್‌ ಅಂದರೆ ಏನು ಎನ್ನುವುದನ್ನು ಕಿಶೋರಿಯರಿಗೆ ಮನವರಿಕೆ ಮಾಡಿ ಕೊಡುವುದು.
 +
 
 +
2. ಟೈಪಿಂಗ್‌ ಅನ್ನು Text Editerನಲ್ಲಿ ಕಲಿಯುವುದು.
 +
 
 +
== ಪ್ರಕ್ರಿಯೆ ==
 +
ನಮಸ್ಕಾರ ಎಂದು ಹೇಳುತ್ತಾ ಮಾತುಕಥೆಯನ್ನು ಆರಂಭಿಸುತ್ತೇವೆ.
 +
 
 +
ಹಿಂದಿನ ವಾರದಲ್ಲಿ ಚರ್ಚಿಸಿದ ಕಟ್ಟುಪಾಡುಗಳನ್ನು ಜ್ಞಾಪಿಸಿಕೊಳ್ಳುತ್ತೇವೆ. ಕಿಶೋರಿಯರು ಹೇಳದಿದ್ದರೆ ನಾವೇ ಜ್ಞಾಪಿಸುತ್ತೇವೆ. '''೧೦ ನಿಮಿಷ'''
 +
 
 +
ಕಿಶೋರಿಯರನ್ನು ಮೂರು ಗುಂಪುಗಳಲ್ಲಿ ವಿಂಗಡಿಸಿಕೊಂಡು ನಾವು ಸಣ್ಣ ಚಟುವಟಿಕೆಯನ್ನು ಮಾಡುತ್ತೇವೆ. ಕೆಳಗಿನ ೧೨ ವಿಷಯಗಳನ್ನು ಸಣ್ಣ ಚೀಟಿಗಳಲ್ಲಿ ಬರೆದು ಅವರಿಗೆ ೩ ಗುಂಪುಗಳಲ್ಲಿ ಒಂದೊಂದು ಚೀಟಿಯನ್ನು ಎತ್ತಿ, ಅದು ಕಂಪ್ಯೂಟರ್‌ಗೆ ಹೊಂದುತ್ತದೆಯೋ ಇಲ್ಲವೋ ಎಂದು ಮಾತನಾಡುತ್ತೇವೆ.
 +
 
 +
ಕಂಪ್ಯೂಟರ್‌ ಅಂದರೆ ಏನು? ಎನ್ನುವುದು ಎಲ್ಲರಿಗೂ ಇರುವ ಸಾಮಾನ್ಯ ಪ್ರಶ್ನೆ.   '''೨೦ ನಿಮಿಷ'''
 +
# ಮಾಯಾ ಡಬ್ಬಿ (magic box)
 +
# dumb box
 +
# ಆಯುಧ
 +
# ಸಾಧನ
 +
# ಸಕಲ ಕಲಾವಲ್ಲಭ
 +
# ಆಳು
 +
# ಸ್ವತಂತ್ರ ವಸ್ತು
 +
# ಅಗತ್ಯವಿಲ್ಲದ್ದು
 +
# fly over
 +
# ಶಕುಂತಲಾ ದೇವಿ
 +
# ಮಿನಿ ಥಿಯೇಟರ್‌
 +
# ever evolving
 +
ಇದಾದ ನಂತರ ನಾವು ಕಿಶೋರಿಯರನ್ನು ಕಂಪ್ಯೂಟರ್‌ ಎಂದರೆ ಏನು ಎನ್ನುವ ಬಗ್ಗೆ ಸಣ್ಣ ಗುಂಪುಗಳಲ್ಲೇ ಮಾತನಾಡುತ್ತೇವೆ. ನಂತರ ಕಂಪ್ಯೂಟರ್‌ ಲ್ಯಾಬ್‌ಗೆ ಹೋಗುತ್ತೇವೆ.  
 +
 
 +
text editerನಲ್ಲಿ ಇಂಗ್ಲಿಷ್‌ ಪಠ್ಯದ "All the World Her Stage” title ಬರೆದು ಸೇವ್‌ ಮಾಡುವುದು ಹೇಗೆ ಎಂದು ಹೇಳಿಕೊಡುತ್ತೇವೆ. '''೧೦ ನಿಮಿಷ'''
 +
 
 +
ಅವರಿಗೆ ಅವರ ಇಂಗ್ಲಿಷ್‌ ಪಠ್ಯದ "All the World Her Stage” ಪಾಠದ ೧೨, ೧೩, ಮತ್ತು ೧೪ನೇ paragraph ಅನ್ನು ಟೈಪ್‌ ಮಾಡಲು ಹೇಳುತ್ತೇವೆ.                        
 +
 
 +
ಹೀಗೆಯೇ ಮುಂದಿನ ವಾರಗಳಲ್ಲೂ ಬೇರೆ ಬೇರೆ ವಿಷಯಗಳ ಬಗ್ಗೆ ತಿಳಿದುಕೊಳ್ಳೋಣ ಎಂದು ಮಾತುಕತೆಯನ್ನು ಮುಗಿಸುತ್ತೇವೆ.  '''೪೦ ನಿಮಿಷ'''
 +
 
 +
== ಬೇಕಾದ ಸಂಪನ್ಮೂಲಗಳು ==
 +
* ಕಂಪ್ಯೂಟರ್‌ ಇರುವ ಲ್ಯಾಬ್‌
 +
* ಲ್ಯಾಪ್‌ಟಾಪ್‌
 +
* ಪ್ರೊಜೆಕ್ಟರ್‌
 +
* spike buster
 +
* ಕ್ಯಾಮೆರಾ
 +
 
 +
== ಒಟ್ಟು ಬೇಕಿರುವ ಫೆಸಿಲಿಟೇಟರ್‌ಗಳು  ೩ ==
 +
ಒಬ್ಬ ಮುಖ್ಯ ಫೆಸಿಲಿಟೇಟರ್‌, ೨ ಸಹಾಯಕ ಫೆಸಿಲಿಟೇಟರ್‌ಗಳು
 +
 
 +
== ಒಟ್ಟು ಸಮಯ ==
 +
೮೦ ನಿಮಿಷಗಳು
 +
 
 +
== ಇನ್‌ಪುಟ್‌ಗಳು ==
 +
೧೨ ವಿಷಯಗಳ ಚೀಟಿಗಳು
 +
 
 +
== ಔಟ್‌ಪುಟ್‌ಗಳು ==
 +
ಕಿಶೋರಿಯರು ಟೈಪಿಸಿದ ಫೈಲ್‌ಗಳು
೪೦೭

edits

ಸಂಚರಣೆ ಪಟ್ಟಿ