ಶಿಕ್ಷಕರ ಸಮುದಾಯ ಕಲಿಕೆ ಬೆಂಗಳೂರು ದಕ್ಷಿಣ ವಲಯ 3 ವಿದ್ಯಾಗಮ ಕಾರ್ಯಕ್ರಮ

From ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು
Jump to navigation Jump to search

See in English


ಕೋವಿಡ್ -19 ರ ಕಾರಣದ ಲಾಕ್-ಡೌನ್ ಪರಿಣಾಮವಾಗಿ, ಶಾಲೆಗಳು ವಿದ್ಯಾರ್ಥಿಗಳ ಕಲಿಕೆಯನ್ನು ಬೆಂಬಲಿಸುವ ಮಾರ್ಗಗಳನ್ನು ಅನ್ವೇಷಸುತ್ತಿವೆ. ಈ ಪರಿಸ್ಥಿತಿಯು ಅಲ್ಪಾವಧಿಯ ಸವಾಲಾಗಿಲ್ಲ ಮತ್ತು ಮಧ್ಯ ಮಧ್ಯದಲ್ಲಿ ತೊಂದರೆಗಳನ್ನು ಉಂಟುಮಾಡುವ ಸಾಧ್ಯತೆಯಿರುವುದರಿಂದ, ವಿಶೇಷವಾಗಿ ಮನೆಯಲ್ಲಿ ಹೆಚ್ಚಿನ ಶೈಕ್ಷಣಿಕ ಬೆಂಬಲವನ್ನು ಪಡೆಯದ ವಿದ್ಯಾರ್ಥಿಗಳಿಗೆ, ಕಲಿಕೆಯ ಸಾಧ್ಯತೆಗಳನ್ನು ವಿನ್ಯಾಸಿಸುವ ಸಲುವಾಗಿ ಸೂಕ್ತ ಮತ್ತು ನಮ್ಯ ತಂತ್ರಗಳನ್ನು ರೂಪಿಸುವುದು ಅವಶ್ಯಕವಾಗಿದೆ. ನಮ್ಯ ಕಾರ್ಯತಂತ್ರಗಳು - ಆಫ್‌ಲೈನ್ ಚಟುವಟಿಕೆಗಳು, ಯೋಜನೆ ಆಧಾರಿತ ಕಲಿಕೆ, ವಿಷಯಾಧಾರಿತ ಕಲಿಕೆ ಇತ್ಯಾದಿಗಳೊಂದಿಗೆ ಆನ್‌ಲೈನ್ ಅಧಿವೇಶನಗಳ ಸಂಯೋಜನೆಯನ್ನು ಒಳಗೊಂಡಿರುತ್ತದೆ. ವಿದ್ಯಾರ್ಥಿಗಳೊಂದಿಗೆ ಯಾವುದೇ ಸಂವಹನ ನಡೆಸದಿರುವುದು ಅಥವಾ ಆನ್‌ಲೈನ್ ಶಿಕ್ಷಣವನ್ನು ಮಾತ್ರ ಅವಲಂಬಿಸುವುದು ಸಮರ್ಪಕವಾಗಿರುವುದಿಲ್ಲ ಮತ್ತು ವಿದ್ಯಾರ್ಥಿಗಳು, ಅದರಲ್ಲೂ ವಿಶೇಷವಾಗಿ ಸಮಾಜದ ಅಂಚಿನಲ್ಲಿರುವ ಹಿನ್ನೆಲೆಯಿಂದಾಗಿ ಅಪೌಷ್ಟಿಕತೆ, ಶಿಕ್ಷಣದಿಂದ ಹೊರಗುಳಿಯುವುದು, ಬಾಲ್ಯ ವಿವಾಹಗಳು ಮತ್ತು ಬಾಲ ಕಾರ್ಮಿಕ ಪದ್ಧತಿಯಂತಹ ಅಪಾಯವನ್ನು ಎದುರಿಸಬೇಕಾಗುತ್ತದೆ.ಕರ್ನಾಟಕದ ಶಿಕ್ಷಣ ಇಲಾಖೆಯು, ಶಾಲೆಗಳಿಗೆ ಕಲಿಕಾ ಚಟುವಟಿಕೆಗಳನ್ನು ಪ್ರಾರಂಭಿಸುವಂತೆ ಸೂಚಿಸಿದ್ದು, ಆದರಲ್ಲಿ ಎಲ್ಲಾ ವಿದ್ಯಾರ್ಥಿಗಳು ಒಂದೇ ಸಮಯದಲ್ಲಿ ತರಗತಿಗಳಲ್ಲಿ ಇರಬೇಕಾಗಿಲ್ಲ ಎಂದು ಸಹ ಸೂಚಿಸಿಲಾಗಿದೆ. 'ವಿದ್ಯಾಗಮ' ಎಂಬ ಹೆಸರಿನ ಈ ಕಾರ್ಯಕ್ರಮವು ಶಿಕ್ಷಕರು ಸಮುದಾಯ-ಮಟ್ಟದ ಸಂವಹನಗಳ ಮೂಲಕ ವಿದ್ಯಾರ್ಥಿಗಳಿಗೆ ಕಲಿಕೆಯ ಅವಕಾಶಗಳನ್ನು ಸೃಷ್ಟಿಸುವ ಅಂಶಗಳನ್ನು ಹೊಂದಿದೆ. ವಿದ್ಯಾರ್ಥಿಗಳು ಸ್ವತಃ ಅಥವ ಮನೆಯಲ್ಲಿರುವವರ ಬೆಂಬಲದೊಂದಿಗೆ ಮಾಡಬಹುದಾದ ಚಟುವಟಿಕೆಗಳು ಮತ್ತು ಕಾರ್ಯಯೋಜನೆಗಳನ್ನು ಇದು ಒದಗಿಸುತ್ತದೆ. ಶಿಕಸ (ಶಿಕ್ಷಕರ ಕಲಿಕಾ ಸಮುದಾಯ -ಟಿಸಿಒಎಲ್) ಕಾರ್ಯಕ್ರಮವು ಶಾಲೆಗಳು ಮತ್ತು ಶಿಕ್ಷಕರನ್ನು ತಮ್ಮ ಬೋಧನೆಯಲ್ಲಿ ಐಸಿಟಿಯನ್ನು ಸಂಯೋಜಿಸುವುದಕ್ಕೆ ಬೆಂಬಲಿಸುವ ಗುರಿಯನ್ನು ಹೊಂದಿದೆ ಮತ್ತು ಇಂತಹ ಸಂದರ್ಭದಲ್ಲಿ ಎಚ್ಚರಿಕೆಯಿಂದ ಕಲಿಕೆಯನ್ನು ಬೆಂಬಲಿಸುವ ಸಾಧ್ಯತೆಗಳ ಬಗ್ಗೆ ಗಮನ ಹರಿಸಬೇಕು ಮತ್ತು 2020-21 ಕಾರ್ಯಕ್ರಮವು ಶಾಲೆಗಳು ಹೇಗೆ ವಿದ್ಯಾಗಮವನ್ನು ವಿನ್ಯಾಸಗೊಳಿಸಬಹುದು ಮತ್ತು ಕಾರ್ಯಗತಗೊಳಿಸಬಹುದು ಎಂಬುದರ ಮೇಲೆ ಕೇಂದ್ರೀಕರಿಸುತ್ತದೆ. ಈ ಪುಟವು ಉಲ್ಲೇಖವಾಗಿ ಬಳಸಬಹುದಾದ ಸಂಭಾವ್ಯ ವಿಧಾನಗಳು / ಹಂತಗಳನ್ನು ಚರ್ಚಿಸುತ್ತದೆ, ಪ್ರತಿ ಶಾಲೆಯು ಸ್ಥಳೀಯ ಸಂದರ್ಭಗಳು ಮತ್ತು ಆದ್ಯತೆಗಳ ಆಧಾರದ ಮೇಲೆ ತನ್ನದೇ ಆದ ಆಡಕು (ಕಸ್ಟಮೈಸ್ಡ್ ) ಮಾಡಿದ ವಿಧಾನಗಳನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ.

ಕಾರ್ಯಕ್ರಮದ ತತ್ವಗಳು

 1. ವಿಕೇಂದ್ರೀಕರಣ (ಶಾಲೆ ಮತ್ತು ಸಮುದಾಯವನ್ನು ಸಂಪರ್ಕಿಸುವುದು, ಶಿಕ್ಷಕ ಸಂಸ್ಥೆ ಮತ್ತು ಶಾಲಾ ಸ್ವಾಯತ್ತತೆಯನ್ನು ಬಲಪಡಿಸುವುದು) - “ಒಂದೇ-ಗಾತ್ರವು- ಎಲ್ಲದಕ್ಕೂ ಸರಿ”ಹೊಂದುತ್ತದೆ ಎಂಬ ಕೇಂದ್ರೀಕೃತವಾದ ಕಾರ್ಯಕ್ರಮಕ್ಕಿಂತಲೂ ಹೆಚ್ಚಾಗಿ ಶಿಕ್ಷಕರನ್ನು ಪ್ರಯತ್ನದ ಕೇಂದ್ರಗಳಲ್ಲಿ ಮತ್ತು “ಶಾಲೆಗಳು ಹಾಗೂ ಸಮುದಾಯಗಳ” ವಿಕೇಂದ್ರೀಕೃತ ಪ್ರಯತ್ನಗಳನ್ನು ನೆಲೆಗೊಳಿಸುವುದಕ್ಕಾಗಿ ಬೆಂಬಲಿಸುವುದಾಗಿದೆ.  ಬದಲಾಗುತ್ತಿರುವ ಸನ್ನಿವೇಶಗಳಿಗೆ ಸನ್ನಿವೇಶದ ಹೊರಗೂ ('ಔಟ್‌ ಆಫ್ ಬಾಕ್ಸ್' )ಸ್ಥಳೀಯ ಕ್ರಿಯೆಗಳು ಸೇರಿದಂತೆ ನಮ್ಯತೆಗೆ ಹೊಂದಿಕೊಳ್ಳುವವರಿಗೆ ಇದು ಅವಶ್ಯಕವಾಗಿದೆ.  ಕೇಂದ್ರೀಕೃತಕ್ಕಿಂತಲು ಸ್ಥಳೀಯ ಕ್ರಮಗಳಲ್ಲಿ ತ್ವರಿತವಾಗಿ ನಿರ್ಧಾರ ತೆಗೆದುಕೊಳ್ಳಬಹುದಾಗಿದೆ. ಸೂಚನೆಗಳಿಗಾಗಿ ಕಾಯುವ ಬದಲು ಸವಾಲುಗಳಿಗೆ ಸ್ಪಂದಿಸಲು ಸಮಯೋಚಿತ ನಿರ್ಧಾರಗಳನ್ನು ತೆಗೆದುಕೊಳ್ಳವ ಅಧಿಕಾರವನ್ನು ಶಿಕ್ಷಕರಿಗೆ ಮತ್ತು ಶಾಲೆಗಳಿಗೆ ನೀಡಬೇಕಾಗಿದೆ. ಸ್ಥಳೀಯ ಕ್ರಿಯೆಗಳ ಅಗತ್ಯತೆಗಳನ್ನು ಪೂರೈಸಲು ಸೂಕ್ತವಾದ ಮಾರ್ಗಸೂಚಿಗಳನ್ನು ಒದಗಿಸುವ ಅಗತ್ಯವಿದೆ.
 2. ವ್ಯಾಪಕವಾದ ಪ್ರಯತ್ನಗಳು - 'ಡಿಜಿಟಲ್ ಶಿಕ್ಷಣ'ವನ್ನು ಮೀರಿ ವಿದ್ಯಾರ್ಥಿಗಳಿಗೆ ಸಮಗ್ರ ಕಲಿಕೆಯ ಅವಕಾಶಗಳನ್ನು ಒದಗಿಸಲು ಬಹು ಆಯ್ಕೆಗಳನ್ನು ಅನ್ವೇಷಿಸುವುದು.
 3. ಸಂಪನ್ಮೂಲಗಳನ್ನು ರಚಿಸಲು ಡಿಜಿಟಲ್ ಬಳಸುತ್ತಿರುವ ಗಣಿತ ಶಿಕ್ಷಕರು
  ಶಿಕ್ಷಣದ ಗುರಿಗಳು - ಅಭೂತಪೂರ್ವ ಸಾಂಕ್ರಾಮಿಕದ ಸಂದರ್ಭದಲ್ಲಿ ಪಠ್ಯಕ್ರಮ ಮತ್ತು ಪಠ್ಯಪುಸ್ತಕದ ಮಿತಿಗಳನ್ನು ಮೀರಿ ಶಿಕ್ಷಣವನ್ನು ಅನ್ವೇಷಿಸಬೇಕಾಗಿದೆ, ಏಕೆಂದರೆ ಇದರ ಪರಿಣಾಮವು ದಶಕಗಳವರೆಗೆ ಇರುತ್ತದೆ. ಶಿಕ್ಷಣದ ದೊಡ್ಡ ಗುರಿಗಳಿಗೆ ಅನುಗುಣವಾಗಿ, ಸಂಬಂಧಪಟ್ಟ ಮತ್ತು ಸಮರ್ಥ ನಾಗರಿಕರನ್ನು ನಿರ್ಮಿಸುವುದಕ್ಕಾಗಿ ಈ ಅನ್ವೇಷಣೆಯು ಅಗತ್ಯವಾಗಿರುತ್ತದೆ, ಇವರು ನಮ್ಮ ಸಾಂವಿಧಾನಿಕ ಆದರ್ಶಗಳನ್ನು ಸಾಧಿಸುವತ್ತ ಕೆಲಸ ಮಾಡಬಹುದು.
 4. ಸಮೃದ್ಧವಾದ ಸಂಪನ್ಮೂಲಗಳು - ಶಾಲೆಗಳು ಮತ್ತು ಶಿಕ್ಷಕರು ಸವಾಲುಗಳಿಗೆ ಸ್ಪಂದಿಸಬೇಕಾಗುತ್ತದೆ. ಸಾಂಕ್ರಾಮಿಕ ರೋಗದಿಂದಾಗಿ ಶಾಲೆಗಳಿಗೆ ಹೆಚ್ಚಿನ ಹೂಡಿಕೆಯ ಅಗತ್ಯವಿರುತ್ತದೆ, ವಿಶೇಷವಾಗಿ ಸಮಾಜದ ಅಂಚಿನಲ್ಲಿರುವ ಸಮುದಾಯಗಳ ವಿದ್ಯಾರ್ಥಿಗಳೊಂದಿಗೆ ಕೆಲಸ ಮಾಡುವ ಶಾಲೆಗಳು, ಮತ್ತು ಸಂಪನ್ಮೂಲ / ಧನಸಹಾಯವು ಶೈಕ್ಷಣಿಕ  ಚಟುವಟಿಕೆಗಳಿಗಾಗಿನ ಒಟ್ಟಾರೆ ಪರಿಣಾಮಕಾರತ್ವದ ಮೇಲೆ ನೇರವಾಗಿ ಪ್ರಭಾವವನ್ನು ಬೀರುತ್ತದೆ.
 5. ನ್ಯಾಯ ಬದ್ದತೆ - ಸಮಾಜದ ಅಂಚಿನಲ್ಲಿರುವ ಮಕ್ಕಳ ಗುಂಪುಗಳಿಗೆ ಶಿಕ್ಷಣದಲ್ಲಿ ಅಸಮ ಪ್ರಮಾಣದಲ್ಲಿ ಹೂಡಿಕೆ ಮಾಡುವ ಅವಶ್ಯಕತೆಯಿದೆ. ಇವುಗಳಲ್ಲಿ ಬಹಳಷ್ಟು ಮನೆಗಳು ಸಂಪನ್ಮೂಲ ಬೆಂಬಲವನ್ನು ಹೊಂದಿರುವುದಿಲ್ಲ. ನಗರದಿಂದ ಗ್ರಾಮೀಣ ಪ್ರದೇಶಗಳಿಗೆ ಮರುವಲಸೆ ಸಹ ಇರುತ್ತದೆ ಮತ್ತು ಶಾಲೆಗಳು ಈ 'ಹೊಸ' ವಿದ್ಯಾರ್ಥಿಗಳ ಕಲಿಕೆಯ ಅಗತ್ಯತೆಗಳನ್ನು ಪೂರೈಸುವ ಅಗತ್ಯವಿದೆ. ಲಾಕ್‌ಡೌನ್‌ಗೆ ತಳಮಟ್ಟದ ಆರೋಗ್ಯದ ಬೆಂಬಲ ನೀಡಿದರೆ, ಇದು ಸಮಾಜದ ಅಂಚಿನಲ್ಲಿರುವ ಗುಂಪುಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ, ಆದ್ದರಿಂದ ಶಾಲೆಗಳು ಎಂದಿನಂತೆ ಕೆಲಸ ಮಾಡದಿದ್ದರೂ ವಿದ್ಯಾಗಾಮಕ್ಕೆ ಕಲಿಕೆಯ ಅವಕಾಶಗಳನ್ನು ಒದಗಿಸುವ ಅಗತ್ಯವಿದೆ.

ಶಾಲಾ ಮಟ್ಟದ ಹಸ್ತಕ್ಷೇಪದ ವಿನ್ಯಾಸ

ಬೋಧನಾ -ಕಲಿಕೆ ಯೋಜನೆಗಾಗಿ ಸನ್ನಿವೇಶದ ಮಾಹಿತಿಯ ಸಂಗ್ರಹ

ಆನ್‌ಲೈನ್ ಶಿಕ್ಷಣವನ್ನು ಸಕ್ರಿಯಗೊಳಿಸಲು ಶಾಲೆಗಳು ತಮ್ಮ ವಿದ್ಯಾರ್ಥಿಗಳ ಮತ್ತು ಪೋಷಕರ ಬಗ್ಗೆ ಮೂಲಭೂತ ಮಾಹಿತಿಯನ್ನು ಹೊಂದಿದ್ದರೂ ಸಹ, ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಬೇಕಾಗುತ್ತದೆ - ವಿಳಾಸ, ಸ್ಥಳ ನಕಾಶೆ , ಮನೆಯಲ್ಲಿರುವ ಸಾಧನಗಳ ಸಂಖ್ಯೆ, ಪ್ರತಿ ಸಾಧನದಲ್ಲಿ ಇಂಟರ್ನೆಟ್ ಸಂಪರ್ಕ,  ವಿದ್ಯಾರ್ಥಿಗಳಿಗೆ ಸಾಧನಗಳ ಲಭ್ಯತೆ (ಅದನ್ನು ಕೆಲಸಕ್ಕೆ ತೆಗೆದುಕೊಳ್ಳುವ ಪೋಷಕರ ಒಡೆತನದಲ್ಲಿಸಾಧನವು ಇದ್ದರೆ, ಅದು ವಿದ್ಯಾರ್ಥಿಗೆ ಬೆಳಿಗ್ಗೆ ಅಥವಾ ಸಂಜೆ ಮಾತ್ರ ಬಳಸ ಬಹುದಾಗಿದೆ ಅಥವ ಪ್ರವೇಶಿಸಬಹುದಾಗಿದೆ), ವಿದ್ಯುತ್ ಸರಬರಾಜಿನ ಪರಿಸ್ಥಿತಿ, ಒಡಹುಟ್ಟಿದವರು ಮತ್ತು ಅವರು ಕಲಿಯುತ್ತಿರುವ ವರ್ಗಗಳು ( ಕೆಲವು ಆಫ್‌ಲೈನ್ ಚಟುವಟಿಕೆಗಳು ಪೋಷಕರು ಮತ್ತು ಒಡಹುಟ್ಟಿದವರ ಬೆಂಬಲವನ್ನು ತೆಗೆದುಕೊಳ್ಳಬಹುದು), ಪೋಷಕರ ಶೈಕ್ಷಣಿಕ ಸ್ಥಿತಿ, ಇತ್ಯಾದಿ.ಈ ಹಾಳೆಯನ್ನು ಮಾಹಿತಿ ಸಿದ್ದವಿನ್ಯಾಸ ಪುಟವಾಗಿ ನೋಡಿ. ಪ್ರತಿ ಶಾಲೆ ತನ್ನ ಆನ್‌ಲೈನ್ ಮತ್ತು ಆಫ್‌ಲೈನ್ ಬೋಧನಾ ಪ್ರಯತ್ನಗಳನ್ನು ಯೋಜಿಸಲು ಇದೇ ರೀತಿಯ ದಾಖಲೆಯನ್ನು ರಚಿಸಬೇಕಾಗಿದೆ.

ಪ್ರತಿಯೊಬ್ಬ ಪೋಷಕರು / ವಿದ್ಯಾರ್ಥಿಗಳನ್ನು ಪ್ರತ್ಯೇಕವಾಗಿ ದೂರವಾಣಿ ಕರೆಮಾಡುವುದು ಅತ್ಯಂತ ಸ್ನೇಹಪರ ವಿಧಾನವಾಗಿದ್ದರೂ, ವಿಶೇಷವಾಗಿ ದೊಡ್ಡ ಶಾಲೆಗಳಿಗೆ ಇದು ಕಷ್ಟಕರ / ಸಮಯ ತೆಗೆದುಕೊಳ್ಳಬಹುದು. ಧ್ವನಿ ಸಂದೇಶ ರವಾನೆ ಪದ್ದತಿಯು (ಐವಿಆರ್‌ಎಸ್‌ - ಇಂಟರ್ಯಾಕ್ಟಿವ್ ವಾಯ್ಸ್ ರೆಕಗ್ನಿಷನ್ ಸಿಸ್ಟಮ್) ಎಲ್ಲಾ ಪೋಷಕರನ್ನು ಪದೇ ಪದೇ ಕರೆಮಾಡುವ ಅಗತ್ಯವಿಲ್ಲದೇ ಶಾಲೆಗಳಿಗೆ ಈ ಹೆಚ್ಚಿನ ದತ್ತಾಂಶವನ್ನು ಸಂಗ್ರಹಿಸಲು ಸುಲಭವಾದ ಮಾರ್ಗವನ್ನು ಒದಗಿಸುತ್ತದೆ. ಶಾಲೆಯು ತಮ್ಮ ಫೋನ್‌ಗಳಲ್ಲಿ ಸಂಖ್ಯಾ ಮಣೆ (ನಂಬರ್ ಪ್ಯಾಡ್) ಯನ್ನು ಒತ್ತುವ ಮೂಲಕ ಈ ಹಲವು ಪ್ರಶ್ನೆಗಳಿಗೆ ಉತ್ತರಗಳನ್ನು ಒದಗಿಸಲು ಧ್ವನಿ ಗ್ರಾಹಕರಿಗೆ (ಪೋಷಕರಿಗೆ) ಸರಳ ಆಯ್ಕೆಗಳನ್ನು ಒದಗಿಸುವ ಸಂದೇಶವನ್ನು ಧ್ವನಿ ಮುದ್ರಣ ಮಾಡಬಹುದು ('ಮನೆಯಲ್ಲಿ ಒಂದು ಸಾಧನವನ್ನು ಹೊಂದಿದ್ದರೆ'  -1 ಅನ್ನು ಒತ್ತಿರಿ). ಪ್ರತಿಕ್ರಿಯೆಗಳು ಸ್ವಯಂಚಾಲಿತವಾಗಿ ಸ್ಪ್ರೆಡ್‌ಶೀಟ್‌ನಲ್ಲಿ ಸಂಗ್ರಹಿಸಲಾಗುತ್ತದೆ ಮತ್ತು ಇದನ್ನು ಸೂಕ್ಷ್ಮವಾದ ಯೋಜನೆಗೆ ಬಳಸಬಹುದು. ಪೋಷಕರಿಗೆ ವಿವರಣಾತ್ಮಕ ಧ್ವನಿ ಸಂದೇಶ (ಐವಿಆರ್‌ಎಸ್‌) ಸಂದೇಶಕ್ಕಾಗಿ ಈ ದಸ್ತಾವೇಜನ್ನು ನೋಡಿ. ಇದನ್ನು ಪೋಷಕರು ಮಾತನಾಡುವ ಭಾಷೆಯಲ್ಲಿ ಕಳುಹಿಸಬೇಕು ಮತ್ತು ಅವರ ಆಡು ಮಾತಿನ ರೀತಿಯಲ್ಲಿರಬೇಕು (ಔಪಚಾರಿಕ ಪಠ್ಯಪುಸ್ತಕದ ಭಾಷಾ ಆವೃತ್ತಿಗಳಿಗಿಂತ).

ಸಂದರ್ಭಕ್ಕೆ ಸೂಕ್ತವಾದ ಪಠ್ಯಕ್ರಮದ ವಿನ್ಯಾಸ

ತರಗತಿಯ ಬೋಧನೆಯಲ್ಲಿ ಅನುಸರಿಸಲಾದ ಬೋಧನಾ ಪ್ರಕ್ರಿಯೆಗಳನ್ನು, ಪುನರಾವರ್ತಿಸಲು ಸಾಧ್ಯವಾಗುವುದಿಲ್ಲ.   ಬದಲಾಗಿ, ಕಲಿಕಾ ಸಾಮಗ್ರಿಗಳು ಮತ್ತು ಹೊಸ ಬೋಧನೆ-ಕಲಿಕೆಯ ಪ್ರಕ್ರಿಯೆಗಳಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳಲು ಮತ್ತು ಸಂಬಂಧಿತ ಮತ್ತು ಅರ್ಥಪೂರ್ಣವಾದ ಕಲಿಕೆಯ ಅವಕಾಶಗಳನ್ನು ಒದಗಿಸಲು ಹೊಸತನವನ್ನು ನೀಡಬಹುದು.  'ಪಠ್ಯಕ್ರಮವನ್ನು ಪೂರ್ಣಗೊಳಿಸಲು' ಮತ್ತು 'ಪರೀಕ್ಷೆಗಳನ್ನು ನಡೆಸಲು' ಯಾವುದೇ ಒತ್ತಡವಿರಬಾರದು, ಏಕೆಂದರೆ ಅದು ವಿದ್ಯಾರ್ಥಿಗಳ ಆಸಕ್ತಿ ಮತ್ತು ಕಲಿಕೆಯ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರುತ್ತದೆ.  ಬದಲಾಗಿ, ಸಣ್ಣ ಪ್ರಮಾಣದ ಸಹಭಾಗಿತ್ವದ ಯೋಜನೆಗಳನ್ನು ವಿನ್ಯಾಸಗೊಳಿಸಲು ಅವಕಾಶಗಳನ್ನು ಒದಗಿಸಲು ಪಠ್ಯಪುಸ್ತಕ ವಿಷಯಗಳನ್ನು ಅಳವಡಿಸಿಕೊಳ್ಳಬಹುದು. ನಿರ್ದಿಷ್ಟ ಪರಿಸ್ಥಿತಿಯಲ್ಲಿ, ಒಂದು ವರ್ಗ / ದರ್ಜೆ ಮತ್ತು ವಿಭಾಗದ ಸಂಪೂರ್ಣ ಸಮನ್ವಯವನ್ನು ಹೊಂದುವುದು ಅಸಂಭವವಾಗಿದೆ, ಆದ್ದರಿಂದ ಯೋಜನೆಗಳು / ಚಟುವಟಿಕೆಗಳನ್ನು ಸಣ್ಣ ಕಲಿಕಾ ಗುಂಪುಗಳಿಗೆ (10-15 ವಿದ್ಯಾರ್ಥಿಗಳು) ವಿನ್ಯಾಸಗೊಳಿಸಬೇಕಾಗಿದೆ ಮತ್ತು ಇವು ಎಲ್ಲಾ ವಯಸ್ಸಿನ -ವಯಸ್ಸಿನ ಕಲಿಕಾ ಗುಂಪುಗಳಾಗಿರಬಹುದು. ಶಾಲೆಗಳು ಶಿಕ್ಷಕರ ಪ್ರಯತ್ನವನ್ನು ಬೆಂಬಲಿಸುವ ಸ್ಥಳೀಯ ಸಮುದಾಯ ಸ್ವಯಂಸೇವಕರೊಂದಿಗೆ (ಕಾಲೇಜು ವಿದ್ಯಾರ್ಥಿಗಳು, ಪ್ರೌಢ ಶಾಲಾ ಪದವೀಧರರು, ಇತರ ಅರ್ಹ, ಸಿದ್ಧರಿರುವ ಜನರು) ಸಂಪರ್ಕ ಮಾಡಬೇಕಾಗುತ್ತದೆ, ಡಿಜಿಟಲ್ ವಿಷಯ ಮತ್ತು ಆನ್‌ಲೈನ್ ಶಿಕ್ಷಣವನ್ನು ಭೌತಿಕ (ಮುಖಾಮುಖಿ) ಕಲಿಕೆ ಮತ್ತು ಸಾಮಗ್ರಿಗಳೊಂದಿಗೆ ಕಾರ್ಯಕ್ರಮವನ್ನು ಸಂಯೋಜಿಸುವ ಅಗತ್ಯವಿದೆ.

ಆನ್‌ಲೈನ್ ಬೋಧನೆಗಾಗಿ ಸೂಕ್ತವಾದ ಪಾಠ/ವಿಷಯವನ್ನು ರಚಿಸುವುದು (ರಚಿಸುವುದು ಮತ್ತು ಬೋಧಿಸುವುದು)

ಆನ್‌ಲೈನ್ ಬೋಧನೆಯು ಉಪನ್ಯಾಸಗಳ ವೀಡಿಯೊ ಮುದ್ರಣವನ್ನಾಗಿ ('ಚಾಕ್-ಅಂಡ್-ಟಾಕ್') ಪರಿವರ್ತಿಸುವುದಲ್ಲ, ಕಲಿಕೆಯನ್ನು ಆಕರ್ಷಕವಾಗಿ ಮಾಡುವ ಚಟುವಟಿಕೆಯನ್ನಾಗಿ ಮಾಡಲು ಹೆಚ್ಚಿನ ಸೃಜನಶೀಲತೆಯ ಅಗತ್ಯವಿದೆ. ಇಲ್ಲಿ ವಿದ್ಯಾರ್ಥಿಗಳು ಬೋಧನೆಯ ವೀಡಿಯೊಗಳನ್ನು ವೀಕ್ಷಿಸಲು ಗಂಟೆಗಟ್ಟಲೆ ಕಾಲ ಕಳೆಯುವ ಸಾಧ್ಯತೆಯಿಲ್ಲ.  ಆನ್‌ಲೈನ್ ಕಲಿಕೆಯಲ್ಲಿ ಪರಸ್ಪರ ಕ್ರಿಯೆಯು ಇನ್ನಷ್ಟು ಅಗತ್ಯವಿದೆ. ಇದರರ್ಥ ಪಾಠಗಳನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ ಮತ್ತು ಆನ್‌ಲೈನ್ ಬೋಧನೆಯಲ್ಲಿ ಬಳಸಲು ಡಿಜಿಟಲ್ ಆವೃತ್ತಿಗಳನ್ನು ರಚಿಸಬೇಕಾಗಿದೆ. ಪಾಠಗಳನ್ನು ವಿದ್ಯಾರ್ಥಿಗಳು ತಮ್ಮ ಕುಟುಂಬ ಸದಸ್ಯರೊಂದಿಗೆ ತಮ್ಮ ಮನೆ / ಸಮುದಾಯಗಳಲ್ಲಿ ಸಹ-ವಿನ್ಯಾಸ ಮತ್ತು ಕಾರ್ಯಗತಗೊಳಿಸುವ ಯೋಜನೆಗಳಾಗಿ ಅಭಿವೃದ್ಧಿಪಡಿಸಬಹುದು.

ಸಾಂಕ್ರಾಮಿಕ ರೋಗದ ಬಗ್ಗೆ ಶಿಕ್ಷಣ

ಕಾರ್ಯಕ್ರಮದ ಮೊದಲ ಗಮನವು ಸಾಂಕ್ರಾಮಿಕ ರೋಗದ ಬಗ್ಗೆ ಹೆಚ್ಚಿನ ಮತ್ತು ದೃಢವಾದ ತಿಳುವಳಿಕೆಯನ್ನು ಬೆಳೆಸುವುದು ಮತ್ತು ವಿದ್ಯಾರ್ಥಿಗಳ ಮೂಲಕ ಪೋಷಕರು ಮತ್ತು ಸಮುದಾಯಗಳಿಗೆ ಶಿಕ್ಷಣ ನೀಡುವುದಾಗಿದೆ. ಸರಳ ದೃಕ್‌ಶ್ರವಣ ಮತ್ತು ಮುದ್ರಣ ಸಾಮಗ್ರಿಗಳಲ್ಲಿ, ಕೆಲವು ಸಾಮಗ್ರಿಗಳು ಲಭ್ಯವಿವೆ ಮತ್ತು ಕೆಲವು ಅಭಿವೃದ್ಧಿ ಹೊಂದಿದವುಗಳು, ಇವುಗಳನ್ನು ಆನ್‌ಲೈನ್ ಮೂಲಕ ವಿದ್ಯಾರ್ಥಿಗಳೊಂದಿಗೆ ಮತ್ತು ಸಮುದಾಯದಲ್ಲಿ ಹಂಚಿಕೊಳ್ಳಬಹುದು. ಕಲಿಕೆಯನ್ನು ಅತಿದೊಡ್ಡ ಬಿಕ್ಕಟ್ಟಿನೊಂದಿಗೆ ಸಂಪರ್ಕಿಸಲು ಇದು ಅಗತ್ಯವಾಗಿರುತ್ತದೆ (ಕೇವಲ ಆರೋಗ್ಯ ಬಿಕ್ಕಟ್ಟು ಅಲ್ಲ, ಆದರೆ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟು) ಮತ್ತು ಕಲಿಯುವವರು ತಾವು ನಿರ್ಮಿಸಬೇಕಾದ ಪ್ರಪಂಚದ ಸ್ವರೂಪವನ್ನು ಪ್ರತಿಬಿಂಬಿಸಲು ಸಹಾಯ ಮಾಡುತ್ತದೆ. ಸಾಂಕ್ರಾಮಿಕ ರೋಗವನ್ನು ನಿರ್ಲಕ್ಷಿಸುವುದು ಮತ್ತು ಪಠ್ಯಪುಸ್ತಕಗಳ ಮೇಲೆ ಮಾತ್ರ ಕೇಂದ್ರೀಕರಿಸುವುದು ಉಪಯುಕ್ತ ಅಥವಾ ಅರ್ಥಪೂರ್ಣವಾಗುವುದಿಲ್ಲ.

ವಿಷಯ-ನಿರ್ದಿಷ್ಟ ವಿಷಯವಸ್ತು ಮತ್ತು ಶಿಕ್ಷಣಕ್ಕಾಗಿ ಬೋಧನ ವಿಧಾನದ ಮಾದರಿಗಳು

ಟಿಪಿಸಿಕೆ ಚೌಕಟ್ಟನ್ನು (ತಂತ್ರಜ್ಞಾನ ಬೋಧನಾ ವಿಧಾನ ವಿಷಯವಸ್ತು , ಟೆಕ್ನಾಲಜಿಕಲ್-ಪೆಡಾಗೋಗಿಕಲ್-ಕಂಟೆಂಟ್ ನಾಲೆಡ್ಜ್) ವಿದ್ಯಾರ್ಥಿಗಳ ಕಲಿಕೆಗಾಗಿ ಪಾಠದಲ್ಲಿ ತೊಡಗಿಸಿಕೊಳ್ಳಲು ಮತ್ತು ಸುಗಮಗೊಳಿಸುವ ಪಾಠಗಳ ಯೋಜನೆಯನ್ನು ಬೆಂಬಲಿಸಲು ಬಳಸಬಹುದು.

ಪಠ್ಯಕ್ರಮವನ್ನು ಮರು ವೀಕ್ಷಿಸುವುದು ಅನಿವಾರ್ಯವಾದ ಆರಂಭಿಕ ಹಂತವಾಗಿದೆ; ತರಗತಿಯ ಉಪನ್ಯಾಸಗಳನ್ನು ವೀಡಿಯೊ ಉಪನ್ಯಾಸಗಳೊಂದಿಗೆ ಬದಲಿಸುವ ಸಮಯವು ಇದಾಗಿರುವುದಿಲ್ಲ.  ಪಠ್ಯಪುಸ್ತಕಗಳು ಉಪನ್ಯಾಸ ಮತ್ತು ಕರ ನಿರತ ಚಟುವಟಿಕೆಗಳನ್ನು ಒಟ್ಟುಗೂಡಿಸಿ ಅರ್ಥಪೂರ್ಣ ರೀತಿಯಲ್ಲಿ ವ್ಯಾಖ್ಯಾನಿಸಲು ಶಾಲೆಗಳು ಮತ್ತು ಶಿಕ್ಷಕರಿಗೆ ಅವಕಾಶ ನೀಡಬೇಕು. ಈ ಅವಧಿಯಲ್ಲಿ ಶಿಸ್ತಿನ ಗಡಿಗಳನ್ನು ಮೀರುವ ಅಗತ್ಯವಿದ್ದರೂ, ವಿಷಯ-ವಿಶೇಷತೆಯನ್ನು ಈ ವಿಧಾನಗಳು ಹೊಂದಿರಬೇಕು . ಆದ್ದರಿಂದ ಇವುಗಳನ್ನು ಗಣಿತ, ಕನ್ನಡ, ಇಂಗ್ಲಿಷ್ ಮತ್ತು ವಿಜ್ಞಾನ ವಿಷಯಗಳ ಮೂಲಕ ಚರ್ಚಿಸಲಾಗಿದೆ.

ಆನ್‌ಲೈನ್ ಕಲಿಕೆಯ ವೇದಿಕೆಯೊಂದಿಗೆ ಹೊಂದಾಣಿಕೆ ಮತ್ತು ಪರಿಚಿತತೆ (ಸಂಪರ್ಕ ಮತ್ತು ಬೋಧನೆ)

ಬಿಬಿಬಿ ಮೂಲಕ ಆನ್‌ಲೈನ್ ತರಗತಿಗಳನ್ನು ಮಾಡುವ ಶಿಕ್ಷಕರು

ಅನೇಕ ಶಿಕ್ಷಕರು ಮೊಬೈಲ್ ಫೋನ್ ವೇದಿಕೆಗಳ ಮೂಲಕ ಸಂಪನ್ಮೂಲಗಳು, ವರ್ಕ್‌ಶೀಟ್‌ಗಳು, ರಸಪ್ರಶ್ನೆಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಇವು ಅಸಮಕಾಲಿಕ ಸಂವಹನಕ್ಕೆ ಅನುಮತಿಸುತ್ತವೆ , ಅವು ಉಪಯುಕ್ತವಾಗಿವೆ ಮತ್ತು ಆನ್‌ಲೈನ್ ವೇದಿಕೆಗಳ ಮೂಲಕ  ಪರಸ್ಪರ ಸಮಕಾಲಿಕ ಕ್ರಿಯೆಗಳಿಂದ ಪೂರಕವಾಗಬಹುದು.

ಆನ್‌ಲೈನ್ ವೇದಿಕೆಗಳಲ್ಲಿ ಕಲಿಸಲು ಹಾಗೂ ಅಸಮಕಾಲಿಕವಾಗಿ ಹಂಚಲಾದ ವಿಷಯವನ್ನು ಕುರಿತು ಪ್ರಶ್ನೆಗಳು ಮತ್ತು ಅನುಮಾನಗಳನ್ನು ಸ್ಪಷ್ಟಪಡಿಸಲು ಬಳಸಬಹುದು. ಆನ್‌ಲೈನ್ ಬೋಧನೆಯನ್ನು ಬೆಂಬಲಿಸಲು ಆನ್‌ಲೈನ್ ಕಲಿಕಾ ವೇದಿಕೆಗಳು ಕೆಲವು ವೈಶಿಷ್ಟ್ಯಗಳನ್ನು ಹೊಂದಿವೆ - ವೀಡಿಯೊ ಕಾನ್ಫರೆನ್ಸಿಂಗ್, ಪರದೆಯ ಹಂಚಿಕೆ (ಇದು ಪ್ರಸ್ತುತಿ ಅಥವಾ ವೀಡಿಯೊ ಅಥವಾ ವೆಬ್ ಪುಟಗಳನ್ನು ಸಹ ಹೊಂದಿದೆ), ಬಿಳಿ /ಕಪ್ಪು ಡಿಜಿಟಲ್ ಹಲಗೆ, ಆನ್‌ಲೈನ್ ಸಂದೇಶಗಳು, ಇತ್ಯಾದಿ. ಭಾಗವಹಿಸುವವರನ್ನು ನಿಷ್ಕ್ರಿಯ(ಮ್ಯೂಟ್) ಮಾಡುವುದು, ನಿರ್ಬಂಧಿಸುವುದು, ಪ್ರಸ್ತುತಿ ಹಕ್ಕುಗಳನ್ನು ಹಂಚಿಕೊಳ್ಳುವುದು ಮುಂತಾದ ವಿದ್ಯಾರ್ಥಿಗಳ ನಿರ್ವಹಣಾ ಕಾರ್ಯಗಳಲ್ಲಿ ಭಾಗವಹಿಸುವವರು ಸಹ ಕಲಿಯಲು ಉಪಯುಕ್ತವಾಗಿದೆ. ಬಿಗ್‌ಬ್ಲೂಬಟನ್ ಉಚಿತ ಮತ್ತು ಮುಕ್ತ ಮೂಲ ಆನ್‌ಲೈನ್ ಬೋಧನಾ ವೇದಿಕೆಯಾಗಿದೆ. ಮಕ್ಕಳಿಗೆ ಬೋಧಿಸಲು ಇದನ್ನು ಸ್ವತಂತ್ರ ವೇದಿಕೆಯಾಗಿ ಬಳಸಬಹುದು ಅಥವಾ ಇದನ್ನು ಮೂಡಲ್ ಕಲಿಕಾ ನಿರ್ವಹಣ ವ್ಯವಸ್ಥೆಯೊಂದಿಗೆ (ಮೂಡಲ್ ಲರ್ನಿಂಗ್ ಮ್ಯಾನೇಜ್ಮೆಂಟ್ ಸಿಸ್ಟಮ್) ಸಂಯೋಜಿಸಬಹುದು. ನಂತರದ ಆಯ್ಕೆಯು ಶಿಕ್ಷಕರ ತರಬೇತಿ ಕಾರ್ಯಕ್ರಮಗಳಿಗೆ ಸೂಕ್ತವಾಗಿದೆ, ಆದರೆ ಮೊದಲಿನದು ಸರಳವಾಗಿದೆ ಮತ್ತು ಆದ್ದರಿಂದ ಅದು ವಿದ್ಯಾರ್ಥಿಗಳ ಬೋಧನೆಗೆ ಸೂಕ್ತವಾಗಿದೆ. ಇದನ್ನು ಫೋನ್‌ನಲ್ಲಿ ಬಳಸಲು  ವೆಬ್ ವಿಳಾಸ (URL) ಒಂದಿದ್ದರೆ ಸಾಕು. ಯಾವುದೇ ಅಪ್ಲಿಕೇಶನ್ ಸ್ಥಾಪನೆ ಅಗತ್ಯವಿಲ್ಲ ಎಂಬ ಅನುಕೂಲವನ್ನು ಬಿಗ್‌ಬ್ಲೂಬಟನ್ ಹೊಂದಿದೆ. (ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಬಗ್ಗೆ ದತ್ತಾಂಶವನ್ನು ಸಂಗ್ರಹಿಸುವ ಸ್ವಾಮ್ಯದ ಡಿಜಿಟಲ್ ವೇದಿಕೆಯ ಬಳಕೆಯನ್ನು ತಪ್ಪಿಸುವುದು ಅತ್ಯಗತ್ಯ, ಅವುಗಳು ವಾಣಿಜ್ಯ ಶೋಷಣೆ ಮತ್ತು ಗೌಪ್ಯತೆ ನಷ್ಟಗಳಿಗೆ ಗುರಿಯಾಗುವಂತೆ ಮಾಡುತ್ತದೆ, ಆದ್ದರಿಂದ ಬಿಬಿಬಿ ಯಂತಹ ಉಚಿತ ಮತ್ತು ಮುಕ್ತ-ಮೂಲ ವೇದಿಕೆಗಳಿಗೆ ಆದ್ಯತೆ ನೀಡಬೇಕು, ಸಾರ್ವಜನಿಕ ದತ್ತಾಂಶ ಮೂಲಸೌಕರ್ಯಗಳಾದ ರಾಜ್ಯ ಸರ್ಕಾರದ ದತ್ತಾಂಶ ಕೇಂದ್ರದಂತೆ ಸಾಮಾನ್ಯವಾಗಿ ಅವುಗಳನ್ನು ಉಚಿತವಾಗಿ ಸ್ಥಾಪಿಸಬಹುದು).

ಬಿಗ್‌ಬ್ಲೂಬಟನ್‌ನೊಂದಿಗಿನ ಪರಿಚಯಿಸಿಕೊಳ್ಳಲು ತಲಾ ಕೆಲವು ಗಂಟೆಗಳ ಎರಡು ಅವಧಿಗಳು ಬೇಕಾಗುತ್ತವೆ, ಎರಡನೆಯದು ಕಲಿಕೆಯ ಮರು ಮನನದಲ್ಲಿ ಮತ್ತು ಯಾವುದೇ ಅನುಮಾನಗಳು ಅಥವಾ ಸಮಸ್ಯೆಗಳನ್ನು ಪರಿಹರಿಸಲು ಈ ಅವಧಿಯ ಅವಶ್ಯಕತೆ ಇದೆ.

ಬಿಗ್‌ಬ್ಲೂಬಟನ್ ಕಲಿಯುವುದಕ್ಕಾಗಿ ಬಿಗ್‌ಬ್ಲೂಬಟನ್ ಕಾರ್ಯಾಗಾರ ಪುಟವನ್ನು ನೋಡಿ.

ಆನ್‌ಲೈನ್ ತರಗತಿಗಳು ನಡೆಸುವ ಹೊಂದಿರುವ ಹಂತಗಳು ಈ ಕೆಳಗಿನಂತಿವೆ.

   1. ಬಿಬಿಬಿಯಲ್ಲಿ ಕಾಲ್ಪನಿಕ ಶಾಲೆ (ವರ್ಚುವಲ್) ಮತ್ತು ಕಾಲ್ಪನಿಕ ತರಗತಿ ಕೊಠಡಿ(ವರ್ಚುವಲ್) ಗಳನ್ನು ರಚಿಸುವುದು

   2. ಪ್ರತಿಯೊಬ್ಬ ಶಿಕ್ಷಕರು ಬಿಬಿಬಿಗೆ ಲಾಗ್ ಇನ್ ಆಗುತ್ತಾರೆ ಮತ್ತು ಸಂಬಂಧಿತ ತರಗತಿಯಲ್ಲಿ ಕಲಿಸುತ್ತಾರೆ

   3. ವಿದ್ಯಾರ್ಥಿಗಳು ಈ ಕಾಲ್ಪನಿಕ ತರಗತಿ ಕೊಠಡಿಯನ್ನು ( ವರ್ಚುವಲ್) ವೆಬ್ ವಿಳಾಸದ ಮೂಲಕ ಪ್ರವೇಶಿಸಬಹುದು.

ಇಂಟರ್ನೆಟ್ / ವೆಬ್‌ನ ಅರಿವು / ಎಚ್ಚರಿಕೆಯಿಂದ ವೆಬ್‌ ಬಳಸುವುದರ ಕುರಿತಾದಂತೆ ವಿದ್ಯಾರ್ಥಿಗಳ ಸಂವೇದನೆಯು ಈ ಘಟಕದ ಒಂದು ಅಂಶವಾಗಿರಬೇಕು. ವಿದ್ಯಾರ್ಥಿಗಳು ಸೈಬರ್ ಅಪರಾಧ / ಸೈಬರ್ ಬೆದರಿಕೆ ಮತ್ತು ಅವರ ಯೋಗಕ್ಷೇಮಕ್ಕೆ ಧಕ್ಕೆಯುಂಟುಮಾಡುವ ಸೈಟ್‌ಗಳ ಪ್ರವೇಶಕ್ಕೆ ಗುರಿಯಾಗುತ್ತಾರೆ ಮತ್ತು ಸೈಬರ್ ಪ್ರಪಂಚದ 'ಮಾಡಬಹುದಾದ' ಮತ್ತು ‘ಮಾಡಬಾರದ’ ವಿಷಯಗಳ ತಿಳುವಳಿಕೆಯನ್ನು ವಿದ್ಯಾರ್ಥಿಗಳು ಮತ್ತು ಪೋಷಕರೊಂದಿಗೆ ಹಂಚಿಕೊಳ್ಳಬೇಕಾಗುತ್ತದೆ.

ವಿದ್ಯಾರ್ಥಿಗಳೊಂದಿಗೆ ಸಂವಹನಕ್ಕಾಗಿ ಸಮುದಾಯ ಸ್ಥಳಗಳಿಗೆ ಭೇಟಿ

ಶಿಕ್ಷಕರು, ಪೋಷಕರು ಮತ್ತು ಸಮುದಾಯದ ಸದಸ್ಯರ ಸಹಾಯದಿಂದ, ಅನೇಕ ವಿದ್ಯಾರ್ಥಿಗಳು ಉಳಿದುಕೊಂಡಿರುವ ವಾಸಸ್ಥಳಗಳಲ್ಲಿ ಸಮುದಾಯದ ಸ್ಥಳಗಳನ್ನು ಗುರುತಿಸಬಹುದು ಮತ್ತು ಕಲಿಕೆಯನ್ನು ಬೆಂಬಲಿಸಲು ಆವರ್ತಕ / ನಿಯಮಿತವಾಗಿ ಸಂವಾದಗಳನ್ನು ಆಯೋಜಿಸಬಹುದು ಎಂದು ವಿದ್ಯಾಗಮ ಸೂಚಿಸುತ್ತದೆ. ಕಲಿಕೆಯನ್ನು ಬೆಂಬಲಿಸಲು ಮುಖಾಮುಖಿ ಸಂವಹನಗಳು ಅಮೂಲ್ಯವಾಗಿರುತ್ತದೆ. ಡಿಜಿಟಲ್ ಮತ್ತು ಆನ್‌ಲೈನ್ ಕಲಿಕೆಯ ಸಾಧ್ಯತೆಗಳ ಭಾಗವಾಗಿರದ ವಿದ್ಯಾರ್ಥಿಗಳಿಗೆ ಇಂತಹ ಭೇಟಿಗಳು ವಿಶೇಷವಾಗಿ ಉಪಯುಕ್ತವಾಗಿವೆ. ಸಮುದಾಯ ಕಲಿಕೆಗಾಗಿ ಸಣ್ಣ (ಮಿಶ್ರ ವಯಸ್ಸು) ಗುಂಪುಗಳಿಗಾಗಿ ಸ್ಥಳಗಳು ಲಭ್ಯವಾಗಬೇಕಿರುತ್ತದೆ.

ವಿದ್ಯಾಗಮಕ್ಕೆ ಸಮುದಾಯ ಸ್ಥಳವಾಗಿ ಶಾಲೆ

ಸಮುದಾಯದ ಸ್ಥಳಗಳನ್ನು ಗುರುತಿಸುವ ಅಗತ್ಯವಿದ್ದರೂ, ಅಂತಹ ಸಮುದಾಯದ ಸ್ಥಳಕ್ಕೆ ಶಾಲೆಯು ಮೊದಲ ಆಯ್ಕೆಯಾಗಿದೆ - ಏಕೆಂದರೆ ಇದು ವಿದ್ಯಾರ್ಥಿಗಳ ಸುರಕ್ಷತೆ ಮತ್ತು ನೈರ್ಮಲ್ಯದ ಮೇಲೆ ಹೆಚ್ಚಿನ ಆಧ್ಯತೆಗಳನ್ನು ಗಳಿಸುತ್ತದೆ. ಸುರಕ್ಷತೆ ಮತ್ತು ಕಲಿಕೆಯನ್ನು ಖಚಿತಪಡಿಸಿಕೊಳ್ಳಲು ಅನೇಕ ಅಂಶಗಳನ್ನು ಪರಿಗಣಿಸಿ, ಈ ಅನ್ವೇಷಣೆಯು ಸಾಕಷ್ಟು ಸುರಕ್ಷತೆಗಳೊಂದಿಗೆ ಸೀಮಿತವಾಗಿ ಶಾಲೆಯನ್ನು ತೆರೆಯಲು ಒಂದು ಆಯ್ಕೆಯಾಗಿದೆ. ಅಚ್ಚರಿಯ ತರಗತಿಗಳು, ತರಗತಿಗಳನ್ನು ಸಣ್ಣ ಸಮೂಹಗಳಾಗಿ ಮರುಸಂಘಟಿಸುವುದು, ಶಾಲೆಯಲ್ಲಿ ಮತ್ತು ಶಾಲೆಯಿಂದ ಹೊರಗಿರುವ ಚಟುವಟಿಕೆಗಳನ್ನು ಸಂಯೋಜಿಸುವುದು, ಸಮುದಾಯ ಸುಗಮಗಾರಿಕೆಯ ಬೆಂಬಲದೊಂದಿಗೆ ಪ್ರಾರಂಭಿಸುವ ಕೆಲವು ತಂತ್ರಗಳಾಗಿವೆ.

ಸೀಮಿತ ಶಾಲಾ ತೆರೆಯುವಿಕೆಯನ್ನು ಈಗ ಅನೇಕ ಆಧಾರದ ಮೇಲೆ ವಾದಿಸಲಾಗುತ್ತಿದೆ,  opening public services important for marginalized, risks outweigh benefits ಪುಟವನ್ನು ನೋಡಿ.

ಶಾಲಾ ಹಾಜರಾತಿ ಮತ್ತು ತರಗತಿಯ ಸಂಘಟನೆ

 1. ದೊಡ್ಡ ಗುಂಪು ವಿದ್ಯಾರ್ಥಿಗಳಿಗೆ ವಿಷಯಾಧಾರಿತ ಸೂಚನೆಯ ಬದಲು, ಶಾಲೆಯಲ್ಲಿ ಅಲ್ಪ ಸಮಯವನ್ನು ವಿದ್ಯಾರ್ಥಿಗಳ ಸಣ್ಣ ಗುಂಪುಗಳು ಭೇಟಿಯಾಗುವುದನ್ನು ಗಂಭೀರವಾಗಿ ಪರಿಗಣಿಸುವ ಆಯ್ಕೆಯಾಗಿರಬೇಕು.
 2. ಹೊಂದಿಕೊಳ್ಳುವ ವೇಳಾಪಟ್ಟಿಯನ್ನು ಅಭಿವೃದ್ಧಿಪಡಿಸಿ ಅದು ಕಡಿಮೆ ದಿನಗಳಲ್ಲಿ ವಿದ್ಯಾರ್ಥಿಗಳನ್ನು ಸಣ್ಣ ಸಮೂಹಗಳಲ್ಲಿ ಭೇಟಿಯಾಗಲು ಅನುವು ಮಾಡಿಕೊಡುತ್ತದೆ. ಉದಾಹರಣೆಗೆ, ತರಗತಿ ಕೋಣೆಯ (ಕ್ಲಾಸ್ ಕ್ಯಾಬ್‌ನ) ಮೂರನೇ ಒಂದು ಭಾಗದಷ್ಟು ವಿದ್ಯಾರ್ಥಿಗಳು ವಾರದ ಎರಡು ನಿರ್ದಿಷ್ಟ ದಿನಗಳಲ್ಲಿ ಹಾಜರಾಗುತ್ತಾರೆ ಮತ್ತು ಇದು ಆರು ದಿನಗಳ ವಾರದಲ್ಲಿ ಇಡೀ ವಿದ್ಯಾರ್ಥಿಗಳ ಗುಂಪನ್ನು ಒಳಗೊಂಡಿರುತ್ತದೆ.
 3. ಸಂಪರ್ಕದ ಅವಧಿ ಇರುವಂತೆ ಮತ್ತು ನಂತರ ಯಾವುದೇ ಸಂಪರ್ಕದ ಅವಧಿ ಇಲ್ಲದಿರುವ ರೀತಿಯಲ್ಲಿ ಸಹವರ್ತಿಗಳಿಗೆ ತರಗತಿಗಳನ್ನು ನಿಗದಿಪಡಿಸಿ (ಆದ್ದರಿಂದ ಆಯ್ಕೆ ಮಾಡಿದ ಎರಡು ದಿನಗಳು 2/3 ದಿನಗಳ ಅಂತರವನ್ನು ಹೊಂದಿರಬೇಕು)
 4. ಆರಂಭದಲ್ಲಿ ಕೆಲವೇ ಗಂಟೆಗಳವರೆಗೆ ತರಗತಿಗಳನ್ನು ಹೊಂದಿರುವುದು , ಆದರೆ ಕ್ರಮೇಣ ಶಾಲೆಯ ಸಮಯವನ್ನು ಹೆಚ್ಚಿಸಿ
 5. ಶಾಲೆಯಲ್ಲಿ ಉನ್ನತ ಶ್ರೇಣಿಗಳೊಂದಿಗೆ ಪ್ರಾರಂಭಿಸಿ ಮತ್ತು ಪ್ರಕ್ರಿಯೆಗಳು ಸ್ಥಿರವಾದ ನಂತರ ಕಿರಿಯ ಪ್ರಾಥಮಿಕ ಶಾಲೆಯ ಕಡೆಗೆ ಸರಿಯಿರಿ.
 6. ಸಾರ್ವಜನಿಕ ಆರೋಗ್ಯ ತಜ್ಞರೊಂದಿಗೆ ಸಮಾಲೋಚಿಸಿ ಯಾವುದೇ ವಿದ್ಯಾರ್ಥಿಯು ಕೋವಿಡ್ ನ ಯಾವುದೇ ರೋಗಲಕ್ಷಣಗಳು ಕಂಡುಬಂದಾಗ  ಪರಿಸ್ಥಿತಿಯನ್ನು ನಿರ್ವಹಿಸಲು ಸ್ಪಷ್ಟ ಮಾರ್ಗಸೂಚಿಗಳನ್ನು ಅಭಿವೃದ್ಧಿಪಡಿಸುವುದು.
 7. ವಾರ್ಡ್ / ಪಂಚಾಯತ್ ಮತ್ತು ತಾಲ್ಲೂಕು ಮಟ್ಟಗಳಲ್ಲಿ ವರದಿಯಾದ ಸೋಂಕಿನ ಹರಡುವಿಕೆಯ ಆಧಾರದ ಮೇಲೆ ಕ್ಷೇತ್ರ ಮತ್ತು ವಲಯ ಮಟ್ಟದಲ್ಲಿ ಶಾಲಾ ಕಾರ್ಯಾಚರಣೆಗಳು ಮತ್ತು ಕಾರ್ಯತಂತ್ರಗಳನ್ನು ನಿರ್ಧರಿಸಲಾಗುತ್ತದೆ

ಸೂಕ್ತವಾದ ಪಠ್ಯಕ್ರಮ ಮತ್ತು ಪ್ರಕ್ರಿಯೆಗಳು

 1. ಆರೋಗ್ಯ ಮತ್ತು ಸುರಕ್ಷತಾ ಪಠ್ಯಕ್ರಮವನ್ನು ಅಭಿವೃದ್ಧಿಪಡಿಸಿ ಅದು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರಿಗೆ ಆರೋಗ್ಯ ಮತ್ತು ತಡೆಗಟ್ಟುವ ಕ್ರಮಗಳನ್ನು ಒತ್ತಿಹೇಳುತ್ತದೆ
 2. ಸೋಂಕನ್ನು ಪತ್ತೆಹಚ್ಚುವ ಬಗ್ಗೆ ಜಾಗೃತಿ ಮೂಡಿಸುವುದು, ಸೋಂಕನ್ನು ವರದಿ ಮಾಡಲು ಸಹಾಯ ಮಾಡುವುದು ಮತ್ತು ಪೋಷಕರು ಮತ್ತು ವಿದ್ಯಾರ್ಥಿಗಳೊಂದಿಗೆ (ಪ್ರೌಢ ಶಾಲೆಯ) ಸಮುದಾಯ ಮಟ್ಟದ ನಿಯಂತ್ರಣವನ್ನು ನಿರ್ವಹಿಸಲು ಕೇಂದ್ರೀಕರಿಸುವ ಮೂಲಕ ಶಾಲಾ ಪಠ್ಯಕ್ರಮದಲ್ಲಿ ಸಮುದಾಯ ಶಿಕ್ಷಣವನ್ನು ಸೇರಿಸಿ. ಇದು ಶಾಲೆಗಳು ಮತ್ತು ಶಿಕ್ಷಕರಿಗೆ ನಿಯೋಜಿಸಲಾದ ಕೋವಿಡ್ ಸಂಬಂಧಿತ ಜವಾಬ್ದಾರಿಗಳೊಂದಿಗೆ ಸಹ ಸಂಬಂಧ ಹೊಂದಿದೆ
 3. ಸಾಕ್ಷರತೆ ಮತ್ತು ಅಂಕಿಗಳನ್ನು ಗುರುತಿಸುವ ಮೂಲಭೂತ ಕೌಶಲ್ಯಗಳಲ್ಲಿ ವಿದ್ಯಾರ್ಥಿಗಳ ಅಭಿವೃದ್ಧಿಗೆ ಬೆಂಬಲ ನೀಡುವತ್ತ ಗಮನಹರಿಸಿ, ಇದು ಶೈಕ್ಷಣಿಕ ಕಾರ್ಯಕ್ಷಮತೆಗೆ ನಿರ್ಣಾಯಕ ಅವಶ್ಯಕತೆಯಾಗಿರಬಹುದು, ವಿಶೇಷವಾಗಿ ಶಾಲಾ ಸಂವಹನಗಳಲ್ಲಿ ದೀರ್ಘ ಅಂತರವನ್ನು ನೀಡಲಾಗಿದೆ. (ಇದು ಕಿರಿಯ ಮಕ್ಕಳಿಗೆ ವಿಶೇಷವಾಗಿ ಸತ್ಯವಾಗಿದೆ ಮತ್ತು ಸಮುದಾಯ-ಬೆಂಬಲಿತ ಉಪಕ್ರಮಕ್ಕಾಗಿ ಇದು ಅಂಗನವಾಡಿಗಳೊಂದಿಗೆ ಸಂಭಾವ್ಯವಾಗಿ ಸಂಪರ್ಕ ಹೊಂದಬಹುದು. ಲಾಕ್-ಡೌನ್ ಸಮಯದಲ್ಲಿ ಅವರ ಕುಟುಂಬಗಳು ವಲಸೆ ಬಂದಿರುವ ಮಕ್ಕಳಿಗೂ ಇದು ಅಗತ್ಯವಾಗಿರುತ್ತದೆ)
 4. ಕಲಿಕಾ ಚಟುವಟಿಕೆಗಳನ್ನು ಪಠ್ಯಕ್ರಮಕ್ಕೆ ಅನುಗುಣವಾಗಿ ವಿನ್ಯಾಸಗೊಳಿಸಲಾಗದಿದ್ದರೂ, ವಿಷಯವನ್ನು ರವಾನಿಸಲು ಸೀಮಿತವಾಗಿರಬಾರದು. ಬದಲಾಗಿ, ಅವರು ಪ್ರಸ್ತುತ ಸಂದರ್ಭದಲ್ಲಿ ಅಗತ್ಯ ಮತ್ತು ಪ್ರಸ್ತುತವಾದ ಕೌಶಲ್ಯಗಳನ್ನು ಆಧರಿಸಿರಬೇಕು. ಈ ಚಟುವಟಿಕೆಗಳು ಸ್ವಯಂ-ಕಲಿಕೆ ಮತ್ತು ಸೃಷ್ಟಿಸುವುದಕ್ಕಾಗಿ  ಸಹಕಾರಿ ಕಲಿಕೆಯೊಂದಿಗೆ ಸಂಯೋಜಿಸಬೇಕು (ವಿದ್ಯಾರ್ಥಿಗಳ ಸ್ವಂತ ಭೌತಿಕ ಸನ್ನಿವೇಶಗಳಲ್ಲಿ ಮತ್ತು ಶಿಕ್ಷಕರೊಂದಿಗೆ), ಮತ್ತು ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವೆ ಹಂಚಿಕೊಳ್ಳವ  ಸಾಧ್ಯತೆಗಳನ್ನು ಅನುಮತಿಸಬೇಕು. ಅನುಸರಣೆ ಮತ್ತು ಮಾರ್ಗದರ್ಶನಕ್ಕಾಗಿ ಸಣ್ಣ ಗುಂಪು ಉಪನ್ಯಾಸಗಳು ಮತ್ತು ವಿದ್ಯಾರ್ಥಿಗಳೊಂದಿಗೆ ಪರಸ್ಪರ ಸಂವಾದವನ್ನು ಪ್ರೋತ್ಸಾಹಿಸಬೇಕು. ಈ ಮಾದರಿಯನ್ನು ಸಂಪೂರ್ಣವಾಗಿ ಆನ್‌ಲೈನ್ ಸ್ವರೂಪದಲ್ಲಿ ಬಳಸಬಹುದು (ಪ್ರಸ್ತುತ ಲಾಕ್-ಡೌನ್ ಸಮಯದಲ್ಲಿ) ಮತ್ತು ಹಂತ ಹಂತವಾಗಿ ಶಾಲೆಗಳು ತೆರೆದಾಗ ಭೌತಿಕ ತರಗತಿಗಳೊಂದಿಗೆ ಸಂಯೋಜಿಸಬಹುದು.
 5. ವಿದ್ಯಾರ್ಥಿಗಳಿಗೆ ಯೋಜನೆ ಆಧಾರಿತ ಕೆಲಸವನ್ನು ವಿನ್ಯಾಸಗೊಳಿಸುವುದು ಇದರಲ್ಲಿ ಪ್ರಕ್ರಿಯೆಗಳನ್ನು ತನಿಖೆ ಮಾಡಲು,ಅವರ ಸುತ್ತಲಿನ ವಿದ್ಯಮಾನಗಳನ್ನು ಅನ್ವೇಷಿಸಲು ಮತ್ತು ಜೊತೆಗೆ ಪ್ರಶ್ನಿಸುವ, ತನಿಖೆ ಮಾಡುವ, ವಿಶ್ಲೇಷಿಸುವ ಮತ್ತು ಪ್ರಸ್ತುತಿಯ ಕೌಶಲ್ಯಗಳನ್ನು ನಿರ್ಮಿಸಲು ಅನುವು ಮಾಡಿಕೊಡುತ್ತದೆ. ಇವುಗಳನ್ನು ಪಠ್ಯಪುಸ್ತಕದಿಂದ ನಿರ್ದಿಷ್ಟ ಅಧ್ಯಾಯಗಳಿಗೆ ಜೋಡಣೆ ಮಾಡಬಹುದು. ಈ ಯೋಜನೆಗಳು ವಿದ್ಯಾರ್ಥಿಗಳಿಗೆ ಶಿಕ್ಷಕರಂತೆ ಪ್ರವೇಶವನ್ನು ಹೊಂದಿರುವ ಜನರೊಂದಿಗೆ ಪ್ರತ್ಯೇಕವಾಗಿ ಕೆಲಸ ಮಾಡಲು ಅನುವು ಮಾಡಿಕೊಡುತ್ತದೆ.
 6. ಪ್ರವೇಶವನ್ನು ಹೊಂದಿರುವ ಜನರೊಂದಿಗೆ ಮತ್ತು ಶಿಕ್ಷಕರೊಂದಿಗೆ ಯೋಜನೆ ಆಧಾರಿತ ಕಲಿಕೆಯು ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಕೆಲಸ ಮಾಡಲು ಅನುವು ಮಾಡಿಕೊಡುತ್ತದೆ. ಶಿಕ್ಷಕರ ಸಂವಹನವು ಡಿಜಿಟಲ್ ವಿಧಾನಗಳ ಸಂಯೋಜನೆಯೊಂದಿಗೆ ಆನ್‌ಲೈನ್ ವೇದಿಕೆಗಳ ಮೂಲಕ ವೀಡಿಯೊಗಳ ರೂಪದಲ್ಲಿ ಮತ್ತು ಸಣ್ಣ ಗುಂಪು ಸಂವಹನಗಳಾಗಿರಬಹುದು.
 7. ಮೂಲ ಸಾಕ್ಷರತೆ ಮತ್ತು ಅಂಕಿಗಳ ಗುರುತಿಸುವಿಕೆಯನ್ನು ಬಲಪಡಿಸುವುದು ಅತ್ಯಗತ್ಯವಾಗಿರುತ್ತದೆ, ವಿಶೇಷವಾಗಿ ವಿದ್ಯಾರ್ಥಿಗಳು ವಲಸೆ ಬಂದಿರುವ ಸಂದರ್ಭಗಳಲ್ಲಿ ಮತ್ತು ಆದ್ದರಿಂದ ಭಾಷೆ ಮತ್ತು ಬೋಧನಾ ವಿಧಾನದಲ್ಲಿ ಸ್ಥಗಿತಗೊಳಿಸುವಿಕೆಯನ್ನು ಎದುರಿಸಬೇಕಾಗುತ್ತದೆ.
 8. ವಿದ್ಯಾರ್ಥಿಗಳುಸುಲಭವಾಗಿ ಲಭ್ಯವಿರುವ  ಮತ್ತು / ಅಥವಾ ಕಡಿಮೆ-ವೆಚ್ಚದ ವಸ್ತುಗಳೊಂದಿಗೆ ಪೂರ್ಣಗೊಳಿಸಬಹುದಾದ ಸಾಕಷ್ಟು ಕರ ನಿರತ  ಅಭ್ಯಾಸ  ಚಟುವಟಿಕೆಗಳನ್ನು  ಅಭಿವೃದ್ಧಿಪಡಿಸಿ. ಸೂಕ್ತವಾದ ಸಂಪನ್ಮೂಲಗಳನ್ನು ಗುರುತಿಸಿ ಮತ್ತು ರಚಿಸಿ - ಡಿಜಿಟಲ್ ಮತ್ತು ಡಿಜಿಟಲ್ ಅಲ್ಲದ - ಮೂಲಸೌಕರ್ಯದ ಕನಿಷ್ಠ ಬೇಡಿಕೆಯಲ್ಲಿ  ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳಬಹುದು.ವಿಷಯದ ವಯೋಮಾನ ಮತ್ತು ವಿದ್ಯಾರ್ಥಿಗಳ ವಯಸ್ಸನ್ನು ಆಧರಿಸಿ ಸಂಪನ್ಮೂಲಗಳ ನಿರ್ದಿಷ್ಟ ಉದಾಹರಣೆಗಳನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ. ಇದನ್ನು ಪ್ರತಿ ವಿಷಯಕ್ಕೂ ಪ್ರತ್ಯೇಕವಾಗಿ ಚರ್ಚಿಸಲಾಗುತ್ತಿದೆ.
 9. ಕಲಿಕಾ ಕಾರ್ಯಕ್ರಮಕ್ಕೆ “ಶೈಕ್ಷಣಿಕೇತರ” ಚಟುವಟಿಕೆಗಳನ್ನು ಸಂಯೋಜಿಸಿ. ಇದು ಕಲೆ, ಕರಕುಶಲ ಮತ್ತು ಸಂಗೀತವನ್ನು ಒಳಗೊಂಡಿರಬಹುದು. ಸಮುದಾಯದ ಸ್ವಯಂಸೇವಕರ ಬೆಂಬಲದೊಂದಿಗೆ ಸಾಧ್ಯವಾದಲ್ಲೆಲ್ಲಾ ಇವುಗಳನ್ನು ಪೂರ್ಣಗೊಳಿಸಬಹುದು.

ಶಾಲಾ ಬೆಂಬಲ ವ್ಯವಸ್ಥೆ

ಈ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಶಾಲೆಗಳಿಗೆ ಶೈಕ್ಷಣಿಕ, ಆರ್ಥಿಕ, ಆಡಳಿತಾತ್ಮಕ ಬೆಂಬಲ, ಜೊತೆಗೆ ಸಮುದಾಯದ ಬೆಂಬಲ ಬೇಕಾಗುತ್ತದೆ.

ಶೈಕ್ಷಣಿಕ ಬೆಂಬಲ ವ್ಯವಸ್ಥೆ

ಶಾಲೆಗಳಿಗೆ ಮತ್ತು ಶಿಕ್ಷಕರಿಗೆ ನಿರಂತರ ಬೆಂಬಲವನ್ನು ಒದಗಿಸಲು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳು (ಡಿಐಇಟಿ), ಕ್ಷೇತ್ರ ಸಂಪನ್ಮೂಲ ಕೇಂದ್ರಗಳು (ಬಿಆರ್‌ಸಿಗಳು) ಮತ್ತು ವಲಯ ಸಂಪನ್ಮೂಲ ಕೇಂದ್ರಗಳು (ಸಿಆರ್‌ಸಿ ಗಳು) ಅನುಕೂಲ ಕಲ್ಪಿಸಬೇಕಾಗಿದೆ. ಈ ಸಾಂಕ್ರಾಮಿಕ ರೋಗವು ಕೇಂದ್ರೀಕೃತ ವಿಧಾನಗಳಿಂದ ಕಾರ್ಯನಿರ್ವಹಿಸುವುದಿಲ್ಲ ಎಂಬ ತತ್ವವನ್ನು ಪದೇ ಪದೇ ಸಾಬೀತುಪಡಿಸಿವೆ, ಏಕೆಂದರೆ ಸ್ಥಳೀಯ ಪರಿಹಾರಗಳನ್ನು ಶಾಲೆಗಳು / ಶಿಕ್ಷಕರು ಕಲ್ಪಿಸಿಕೊಳ್ಳಬೇಕಾಗಿದೆ. ಆದ್ದರಿಂದ ಶಾಲಾ ವ್ಯವಸ್ಥೆಯ ಬೆಂಬಲಕ್ಕಾಗಿ ಮಾರ್ಗಸೂಚಿಗಳು ಮತ್ತು ಶಾಲೆಗಳ ಪ್ರತಿಕ್ರಿಯೆಗಳ ಸ್ವಾಯತ್ತ ವಿನ್ಯಾಸವನ್ನು ಪ್ರೋತ್ಸಾಹಿಸಬೇಕು. ಇದು ಉನ್ನತ ಆದೇಶಗಳಿಗೆ (ಹೆವಿ-ಹ್ಯಾಂಡ್ ಫಿಯೆಟ್‌ಗಳು) ಪ್ರತಿರೋಧಕವಾಗುತ್ತವೆ.

ಶೈಕ್ಷಣಿಕ ಬೆಂಬಲ ವ್ಯವಸ್ಥೆಯು ಈ ಕೆಳಗಿನ ಅಂಶಗಳಲ್ಲಿ ಶಾಲೆಗಳನ್ನು ಬೆಂಬಲಿಸಬಹುದು

 1. ಪ್ರಸಾರ / ಪೂರ್ವ- ಮುದ್ರಣಮಾಡಲಾದ ಶೈಕ್ಷಣಿಕ ಸಾಮಗ್ರಿಗಳನ್ನು ಅಭಿವೃದ್ಧಿಪಡಿಸಿ, ಇದನ್ನು ರಾಜ್ಯವ್ಯಾಪಿ ದೂರದರ್ಶನ ಮತ್ತು ಸ್ಥಳೀಯ ಕೇಬಲ್ ಚಾನೆಲ್‌ಗಳಲ್ಲಿ ಬಳಸಬಹುದು.  ಅಂತಹ ಕಾರ್ಯಕ್ರಮಗಳು ಮಕ್ಕಳ ಒಟ್ಟಾರೆ ಬೆಳವಣಿಗೆಯನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಮತ್ತು ಪಠ್ಯದ ಡಿಜಿಟಲ್ ನ ಮನರಂಜನೆಯೊಂದೆ ಆಗಿರಬಾರದು. ಕಲಿಕಾ ವಿಷಯಗಳು , ಆಟಗಳು ಮತ್ತು ದೈನಂದಿನ ದಿನಚರಿಯ ಚಟುವಟಿಕೆಗಳ ಮೂಲಕ ಕಲಿಯಲು ಮಕ್ಕಳನ್ನು ಪ್ರೋತ್ಸಾಹಿಸುವಂತಿರಬೇಕು, ಅದು ಅವರ ಪೋಷಕರು, ಒಡಹುಟ್ಟಿದವರು ಮತ್ತು ಕುಟುಂಬ ಸದಸ್ಯರೊಂದಿಗೆ ಸಕಾರಾತ್ಮಕ ಸಂವಾದವನ್ನು ಬೆಳೆಸುತ್ತದೆ, ಏಕೆಂದರೆ ಅವರು ಕೋವಿಡ್ ಸೋಂಕಿನಿಂದ ಸುರಕ್ಷಿತವಾಗಿರಲು ಹೆಚ್ಚಿನ ಸಮಯವನ್ನು ಮನೆಯೊಳಗೆ ಕಳೆಯುತ್ತಾರೆ. ಅಂತಹ  ವಿಷಯ ವಸ್ತುಗಳು ವಿದ್ಯಾರ್ಥಿಗಳ  ವಯಸ್ಸಿಗೆ ಸೂಕ್ತವಾದುದನ್ನು ಅಭಿವೃದ್ಧಿಪಡಿಸುವಲ್ಲಿ ವಿಷಯ ತಜ್ಞರು ಮಾರ್ಗದರ್ಶನ ನೀಡಬಹುದು. ಈ ರೀತಿಯ ‘ಮನೆಯಿಂದ ಕಲಿಯುವಿಕೆ’ ಸನ್ನಿವೇಶದಲ್ಲಿ, ಮಕ್ಕಳ ಕಲಿಕೆಯನ್ನು ಬೆಂಬಲಿಸುವಲ್ಲಿ ಪೋಷಕರಿಗೆ ಪ್ರಮುಖ ಪಾತ್ರ ವಹಿಸಬೇಕಾಗಿದೆ.
 2. ವಿದ್ಯಾರ್ಥಿಗಳಿಗೆ ಅಂತರ್ಜಾಲ ಸುರಕ್ಷತೆ ಮತ್ತು ಆನ್‌ಲೈನ್ ವೇದಿಕೆಗಳನ್ನು ಬಳಸುವ ಜವಾಬ್ದಾರಿಯುತ ಮಾರ್ಗಗಳು ಮತ್ತು ಆನ್‌ಲೈನ್ ವೇದಿಕೆಗಳ ನಿಯಮಗಳು ಮತ್ತು ಶಿಷ್ಟಾಚಾರಗಳನ್ನು ಅರ್ಥಮಾಡಿಕೊಳ್ಳಲು ಅಧ್ಯಾಯಗಳನ್ನು ಅಭಿವೃದ್ಧಿಪಡಿಸಬೇಕು. ಮಕ್ಕಳು ವ್ಯಸನಕಾರಿ ಇಂಟರ್ನೆಟ್ ಬಳಕೆ ಮತ್ತು ಆನ್‌ಲೈನ್ ದುರುಪಯೋಗಕ್ಕೆ ಹೆಚ್ಚು ಗುರಿಯಾಗುತ್ತಾರೆ ಮತ್ತು ಪ್ರಸ್ತುತ ಸನ್ನಿವೇಶದಲ್ಲಿನ ಪಠ್ಯಕ್ರಮವು ಇದನ್ನು ಸಂಬೋಧಿಸಬೇಕು ಮತ್ತು ಅವುಗಳನ್ನು ಉಪಕರಣಗಳು ಮತ್ತು ಸಂಪನ್ಮೂಲಗಳೊಂದಿಗೆ ಸಿದ್ಧಪಡಿಸಬೇಕು. ಯುವ ವ್ಯಕ್ತಿಗಳು, ಹಾನಿಗೊಳಗಾಗುವ ಸಾಧ್ಯತೆಗಳು ಹೆಚ್ಚು. ಆದ್ದರಿಂದ ದರ್ಜೆ/ ತರಗತಿಯ ಆಧಾರದ ಮೇಲೆ ಮಾನವ ಸಂಪನ್ಮೂಲ ಮತ್ತು ಸಂಶೋಧನೆಯ ಅಭಿವೃದ್ಧಿ ಸಚಿವಾಲಯದ (MHRD) ಮಾರ್ಗಸೂಚಿಯು ವಿದ್ಯಾರ್ಥಿಗಳಿಗೆ ಪರದೆಯ ಕನಿಷ್ಠ ಸಮಯವನ್ನು ಸೂಚಿಸಿವೆ.

ಸಮುದಾಯ ಬೆಂಬಲ ವ್ಯವಸ್ಥೆ

 1.    ಸಮುದಾಯದ ಸ್ವಯಂಸೇವಕರು ಲಂಗರು ಹಾಕಬಹುದಾದ ಸಮುದಾಯ-ಮಟ್ಟದ ಕಲಿಕಾ ಕೇಂದ್ರಗಳನ್ನು ಸ್ಥಾಪಿಸಿ, ಅವರು ಮಕ್ಕಳಿಗೆ ವಿಶೇಷವಾಗಿ ಲಾಕ್-ಡೌನ್ ಸಮಯದಲ್ಲಿ ವಲಸೆ ಹೋಗಬೇಕಾದವರಿಗೆ ಶಾಲೆಯಲ್ಲಿನ ಚಟುವಟಿಕೆಗಳನ್ನು ಬೆಂಬಲಿಸಬಹುದು ಮತ್ತು ವಿಸ್ತರಿಸಬಹುದು.
 2. ವಿಶೇಷವಾಗಿ ಕಿರಿಯ ಮಕ್ಕಳಿಗಾಗಿ (ರೋಗನಿರೋಧಕ ಶಕ್ತಿ, ಇತ್ಯಾದಿ), ಮೂಲಭೂತವಾಗಿ ತಡೆಗಟ್ಟುವುದಕ್ಕೆ ಆರೋಗ್ಯ ಸೇವೆಗಾಗಿ ಸಮುದಾಯ ಮಟ್ಟದ ಆರೋಗ್ಯ ಕೇಂದ್ರಗಳೊಂದಿಗೆ ಸಂಪರ್ಕ ಸಾಧಿಸುವುದು.

ಶಾಲಾ ಅನುದಾನ

ಸಾಂಕ್ರಾಮಿಕ ರೋಗದಿಂದ ಉಂಟಾಗುವ ಅಗತ್ಯತೆಗಳನ್ನು ಪೂರೈಸಲು ಶಾಲೆಗಳಿಗೆ ಹೆಚ್ಚುವರಿ ಹಣದ ಅಗತ್ಯವಿರುತ್ತದೆ. ಇದು ಈ ಕೆಳಗಿನವುಗಳನ್ನು ಒಳಗೊಂಡಿರುತ್ತದೆ.

 1. ಸಾಬೂನು / ಮಾರ್ಜಕ ಸೇರಿದಂತೆ ಮೂಲ ನೈರ್ಮಲ್ಯ ಸೌಲಭ್ಯಗಳನ್ನು ಒದಗಿಸುವುದು,
 2. ಕುಡಿಯುವ ನೀರು, ಕಾರ್ಯನಿರ್ವಹಿಸುತ್ತಿರುವ ಶೌಚಾಲಯ ಮತ್ತು ಸ್ವಚ್ಚಗೊಳಿಸುವ ಸೌಲಭ್ಯಗಳು ನಿರ್ಣಾಯಕವಾದವು.
 3. ವರ್ಕ್‌ಶೀಟ್‌ಗಳು ಇತ್ಯಾದಿಗಳನ್ನು ಒಳಗೊಂಡಂತೆ ಬೋಧನಾ-ಕಲಿಕಾ ವಸ್ತುಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಉತ್ಪಾದಿಸುವುದು
 4. ಶಿಕ್ಷಕರು ಸಮುದಾಯಗಳಿಗೆ ಸಣ್ಣ ಗುಂಪುಗಳಲ್ಲಿ ಸ್ಥಳೀಯ ಕಲಿಕೆಯನ್ನು ಬೆಂಬಲಿಸಲು ಪ್ರಯಾಣಿಸುತ್ತಾರೆ
 5. ಸ್ಥಳೀಯ ಕಲಿಕಾ ಚಟುವಟಿಕೆಗಳನ್ನು ಬೆಂಬಲಿಸಲು (ಪೂರಕ ಮತ್ತು ಪರಿಪೂರಕವಾಗಿ) ಸ್ವಯಂಸೇವಕರನ್ನು ತೊಡಗಿಸಿಕೊಳ್ಳುವುದು
 6. ಉಷ್ಣ ಶೋಧಕ ಯಂತ್ರ (ಥರ್ಮಲ್ ಸ್ಕ್ಯಾನರ್‌ಗಳು) / ಉಷ್ಣಮಾಪಕ (ಥರ್ಮಾಮೀಟರ್‌ಗಳು), ನೋವು ನಿವಾರಕಗಳು ಇತ್ಯಾದಿಗಳನ್ನು ಒಳಗೊಂಡಂತೆ ಔಷಧಿಯ ಪೆಟ್ಟಿಗೆ.

ಶಾಲೆಗಳು ಸ್ಥಳೀಯ ದತ್ತಿ, ಸಮುದಾಯ ಸಂಸ್ಥೆಗಳು, ಪೋಷಕ ಗುಂಪುಗಳು ಇತ್ಯಾದಿಗಳಿಂದ ಕೆಲವು ಹಣವನ್ನು ಸಂಗ್ರಹಿಸಲು ಪ್ರಯತ್ನಿಸಬಹುದು ಮತ್ತು ಪ್ರಯತ್ನಿಸಬೇಕು ಆದರೆ ರಾಜ್ಯ ಸರ್ಕಾರ / ಶಿಕ್ಷಣ ಇಲಾಖೆಯಿಂದ ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿಗೆ (ಎಸ್‌ಡಿಎಂಸಿ) ಹೆಚ್ಚುವರಿ ಆಯವ್ಯಯದ ಬೆಂಬಲದ ಅವಶ್ಯಕತೆಯಿದೆ. ಇಂತಹ ತಾತ್ಕಾಲಿಕ ಶಾಲಾ ಅನುದಾನವು ಶಾಲೆಯ ಸಾಮರ್ಥ್ಯ ಮತ್ತು ಅದರ ಸ್ಥಳವನ್ನು ಪರಿಗಣಿಸುವ ಅಗತ್ಯವಿದೆ.

ಸಾರ್ವಜನಿಕ ಡಿಜಿಟಲ್ ಮೂಲಸೌಕರ್ಯ

ಸರ್ಕಾರವು ಡಿಜಿಟಲ್ ಮೂಲಸೌಕರ್ಯಗಳ ಸಮರ್ಪಕ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ಅಂತಹ ಮೂಲಸೌಕರ್ಯಗಳನ್ನು ಸಾರ್ವಜನಿಕ ಶಾಲೆಗಳು ಅಥವಾ ಆರೋಗ್ಯ ಕೇಂದ್ರಗಳ ಮಾದರಿಯಲ್ಲಿ ಅಗತ್ಯವಾದ ಸಾರ್ವಜನಿಕ ಉಪಯುಕ್ತತೆಯಾಗಿ ನೋಡಬೇಕು. ಸಾರ್ವಜನಿಕ ಡಿಜಿಟಲ್ ಮೂಲಸೌಕರ್ಯದಲ್ಲಿ ಹೂಡಿಕೆ ಮಾಡಲು ಸರ್ಕಾರವು ಆದ್ಯತೆ ನೀಡಬೇಕು, ಹಿರಿಯ ಮತ್ತು ಉನ್ನತ ಪ್ರಾಥಮಿಕ ಶಾಲೆಗಳಲ್ಲಿ ಲಭ್ಯವಿರುವ ಮತ್ತು ಕೆಲಸ ಮಾಡುವ ಡಿಜಿಟಲ್ ಪ್ರಯೋಗಾಲಯ ಮತ್ತು ಎಲ್ಲಾ ಶಾಲೆಗಳಲ್ಲಿ ದೂರದರ್ಶನ ಮತ್ತು ರೇಡಿಯೊ ಉಪಕರಣಗಳನ್ನು ಖಾತ್ರಿಪಡಿಸಿಕೊಳ್ಳಬೇಕು ಮತ್ತು ಇವುಗಳನ್ನು ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಪ್ರವೇಶಿಸಲು ಅವಕಾಶವಿರುವಂತೆ ಮಾಡಬೇಕು. ಇದಲ್ಲದೆ, ಪಂಚಾಯತ್, ಸ್ಥಳೀಯ ಜ್ಞಾನ ಕೇಂದ್ರಗಳು, ಶಾಲೆಗಳು ಮತ್ತು ಇತರ ಸಮುದಾಯ ಸ್ಥಳಗಳೊಂದಿಗೆ ಸಮುದಾಯ ಮಟ್ಟದಲ್ಲಿ ಡಿಜಿಟಲ್ ಮೂಲಸೌಕರ್ಯವನ್ನು ಒಗ್ಗೂಡಿಸಲು ಪ್ರಯತ್ನಿಸಬೇಕು. ಡಿಜಿಟಲ್ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಗ್ರಾಮೀಣ ಮತ್ತು ದೂರದ ವಾಸಸ್ಥಳಗಳಿಗೆ ಆದ್ಯತೆ ನೀಡಬೇಕು. ಡಿಜಿಟಲ್ ಮೂಲಸೌಕರ್ಯಕ್ಕೆ ಅಸಮಾನ ಪ್ರವೇಶವನ್ನು ಸಾರ್ವಜನಿಕ ಹೂಡಿಕೆಗಳ ಮೂಲಕ ಆದ್ಯತೆಯ ಮೇಲೆ ತಿಳಿಸಬೇಕಾಗಿದೆ.