ಭಾರತದ ಪ್ರಾಕೃತಿಕ ವಿಭಾಗಗಳು ಚಟುವಟಿಕೆ2
Jump to navigation
Jump to search
ಚಟುವಟಿಕೆ - ಚಟುವಟಿಕೆಯ ಹೆಸರು
ಭಾರತದ ಪ್ರಾಕೃತಿಕ ನಕ್ಷೆಯಲ್ಲಿ ಪ್ರಾಕೃತಿಕ ವಿಭಾಗಗಳನ್ನು,ಪ್ರಮುಖ ಪರ್ವತ-ಬೆಟ್ಟಗಳನ್ನು,ನದಿಗಳನ್ನು ಗುರುತಿಸುವುದು.
ಅಂದಾಜು ಸಮಯ
೪೦ ನಿಮಿಷ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಕಾರ್ಡಶೀಟ್ ಗಳು,ಮಾರ್ಕರ್ /ಸ್ಕೆಚ್ ಪೆನ್,ಭಾರತದ ಪ್ರಾಕೃತಿಕ ನಕ್ಷೆ
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ಭಾರತದ ಪ್ರಾಕೃತಿಕ ನಕ್ಷೆಯನ್ನು ಗಮನವಿಟ್ಟು ವೀಕ್ಷಿಸುವುದು.
ಬಹುಮಾಧ್ಯಮ ಸಂಪನ್ಮೂಲಗಳ
ಪ್ರೊಜೆಕ್ಟರ್,ಭಾರತದ ಪ್ರಾಕೃತಿಕ ನಕ್ಷೆ
==ಪ್ರಸಕ್ತ ಸ್ಥಳೀಯ ಸಂಪರ್ಕಗಳು==----
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ಭಾರತದ ಪ್ರಾಕೃತಿಕ ನಕ್ಷೆಯನ್ನು ಐದು ನಿಮಿಷಗಳ ಕಾಲ ವೀಕ್ಷಿಸಿ ಕೊಟ್ಟಿರುವ ಕಾರ್ಡಶೀಟ್ನಲ್ಲಿ ಭಾರತದ ನಕ್ಷೆ ರಚಿಸಿ,ಪ್ರಾಕೃತಿಕ ವಿಭಾಗಗಳನ್ನು,ಪ್ರಮುಖ ಪರ್ವತ-ಬೆಟ್ಟಗಳನ್ನು,ನದಿಗಳನ್ನು ಗುರುತಿಸುವುದು.
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
- ಭಾರತದ ಪ್ರಾಕೃತಿಕ ವಿಭಾಗಗಳಾವುವು ?
- ನೀವಿರು ವ ಪ್ರದೇಶ ಯಾವ ಪ್ರಾಕೃತಿಕ ವಿಭಾಗಲ್ಲಿದೆ ?
- ಉತ್ತರದ ಪರ್ವತಗಳ ಮೂರು ಪ್ರಮುಖ ಶ್ರೇಣಿಗಳಾವುವು?
- ನಿಮ್ಮ ರಾಜ್ಯದ ಯಾವ ದಿಕ್ಕಿಗೆ ಉತ್ತರದ ಮೈದಾನ ಪ್ರದೇಶವಿದೆ ?
- ಉತ್ತರದ ಮೈದಾನ ಪ್ರದೇಶದಲ್ಲಿ ಯಾವ ನದಿಗಳ ಜಲಾನಯನ ಪ್ರದೇಶವಿದೆ ?
- ಉತ್ತರದ ಮೈದಾನ ಪ್ರದೇಶ ಯಾವ ಪ್ರಾಕೃತಿಕ ವಿಭಾಗಗಳ ಮಧ್ಯೆ ಕಂಡು ಬರುತ್ತದೆ?
- ಉತ್ತರದ ಮೈದಾನ ಪ್ರದೇಶದಲ್ಲಿ ಹೆಚ್ಚಾಗಿ ಕಂಡು ಬರುವ ಮಣ್ಣು ಯಾವುದು ?
- ಉತ್ತರದ ಮೈದಾನ ಪ್ರದೇಶದಲ್ಲಿರುವ ನದಿಗಳನ್ನು ಹೆಸರಿಸಿ
- ಪರ್ಯಾಯ ಪ್ರಸ್ಥ ಭೂಮಿಯು ಯಾವ ಪ್ರಾಕೃತಿಕ ವಿಭಾಗಗಳ ಮಧ್ಯೆ ಇದೆ? ?
- ಪರ್ಯಾಯ ಪ್ರಸ್ಥ ಭೂಮಿಯ ಪ್ರಮುಖ ಬೆಟ್ಟಗಳನ್ನು ಹೆಸರಿಸಿ.
- ಭಾರತದ ಕರಾವಳಿ ಎಲ್ಲಿಂದ ಎಲ್ಲಿಯವರೆಗೆ ಹಬ್ಬಿದೆ ?
- ಭಾರತದ ದಕ್ಷಿಣದ ತುದಿಗೆ ಏನೆಂದು ಕರೆಯುತ್ತಾರೆ?
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
- ಹಿಮಾಲಯ ಪರ್ವತಗಳನ್ನು ಯಾವ ಅಂಶದ ಆಧಾರದ ಮೇಲೆ ಮೂ ರು ಶ್ರೇಣಿಗಳಾಗಿ ವಿಭಜಿಸಲಾಗಿದೆ?
- ಭಾರತದ ಅತ್ಯಂತ ಹಳೆಯ ಭೂಸ್ವರೂಪ ಯಾವುದು ?
- ಪೂರ್ವ ಮತ್ತು ಪಶ್ಚಿಮ ಕರಾವಳಿಗಳ ವ್ಯತ್ಯಾಸಗಳನ್ನು ನಕ್ಷೆಯ ಸಹಾಯದಿಂದ ವಿವರಿಸಿ.
- ಭಾರತದ ಯಾವ ಪ್ರಾಕೃತಿಕ ವಿಭಾಗದಲ್ಲಿ ಸಂಚಯನ ಮೈದಾನವನ್ನು ಕಾಣಬಹು ದು?
- ಪೂ ರ್ವ ಕರಾವಳಿಯಲ್ಲಿ ಏಕೆ ಹೆಚ್ಚು ಮೆಕ್ಕಲು ಮಣ್ಣನ್ನು ಕಾಣಬಹುದು ?
- ಪಶ್ಚಿಮ ಕರಾವಳಿಯು ಪೂರ್ವ ಕರಾವಳಿಗಿಂತ ಕಿರಿದಾಗಿರಲು ಕಾರಣವೇನು?
ಪ್ರಶ್ನೆಗಳು
ಚಟುಟವಟಿಕೆಯ ಮೂಲಪದಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಭಾರತದ_ಪ್ರಾಕೃತಿಕ_ವಿಭಾಗಗಳು