ನೀವು ಗಣಕಯಂತ್ರಕ್ಕೆ ಚಾಲನೆ ನೀಡಿ ಕೀಲಿಮಣೆಯಿಂದಾಗಲಿ, ಮೌಸ್ನಿಂದಾಗಲಿ ಸಂದೇಶ ಕಳುಹಿಸಿದಾಗ ಗಣಕಯಂತ್ರವು '೦' ಮತ್ತು '1' ರ ಭಾಷೆಯಲ್ಲಿ ಮಾತ್ರ ಅರ್ಥಮಾಡಿಕೊಳ್ಳುತ್ತದೆ . ನಾವು ಆ ಭಾಷೆಯನ್ನು ಮಾತನಾಡುವುದಕ್ಕಾಗಲಿ ಅಥವಾ ಅರ್ಥಮಾಡಿಕೊಳ್ಳುವುದಕ್ಕಾಗಲಿ ಸಾಧ್ಯವಿಲ್ಲ. ನಮ್ಮ ನಿರ್ದೇಶನಗಳನ್ನು ಗಣಕಯಂತ್ರಕ್ಕೆ ವಿವರಿಸಲು ವಿಶೇಷವಾದ ಗಣಕಯಂತ್ರದ ಕಾರ್ಯಯೋಜನೆ (ಕಂಪ್ಯೂಟರ್ ಪ್ರೋಗ್ರಾಮ್)ಬೇಕಾಗುತ್ತದೆ ಇದನ್ನು ಆಪರೇಟಿಂಗ್ ಸಿಸ್ಟಮ್ ಎನ್ನುವರು. ಯಂತ್ರಾಂಶದ ಜೊತೆ ಕಾರ್ಯನಿರ್ವಹಿಸುವುದರಿಂದ ಆಪರೇಟಿಂಗ್ ಸಿಸ್ಟಮ್ ಅನ್ನು ಸಿಸ್ಟಮ್ ಸಾಫ್ಟ್ ವೇರ್ ಎಂದೂ ಸಹ ಕರೆಯುತ್ತಾರೆ. ಪ್ರತಿಯೊಂದು ಗಣಕಯಂತ್ರವು ಗಣಕಯಂತ್ರ ಕಾರ್ಯಯೋಜನೆಯನ್ನು ನಿರ್ವಹಿಸಲು ಆಪರೇಟಿಂಗ್ ಸಿಸ್ಟಮ್ ಅನ್ನು ಹೊಂದಿರಬೇಕು. ನಿಮ್ಮ ಮೊಬೈಲ್ ಫೋನ್ಗಳೂ ಸಹ ಆಪರೇಟಿಂಗ್ ಸಿಸ್ಟಮ್ ಅನ್ನು ಹೊಂದಿರುತ್ತವೆ. ಗಣಕಯಂತ್ರವನ್ನು ಚಾಲುಮಾಡಿದಾಗ, ಆಪರೇಟಿಂಗ್ ಸಿಸ್ಟಮ್ ಸ್ವಯಂ ಚಾಲನೆಗೊಳ್ಳುತ್ತದೆ. ಈ ಪ್ರಕ್ರಿಯೆಯನ್ನು ಬೂಟಿಂಗ್ ಎನ್ನುತ್ತಾರೆ. ಗಣಕಯಂತ್ರದ ಇತರೆ ಕಾರ್ಯಯೋಜನೆಗಳಾದ: ಬಣ್ಣ ಬಳಸುವಿಕೆ, ಬೆರಳಚ್ಚು ಮಾಡಲು, ಸಂಗೀತ ಕೇಳುವುದು, ಗಣಿತವನ್ನು ಕಲಿಯುವುದು ಇವುಗಳನ್ನು ಅಪ್ಲಿಕೇಷನ್ ಸಾಫ್ಟ್ ವೇರ್ ಅಥವಾ ಆಪ್ಸ್ (Apps.) ಎನ್ನುತ್ತಾರೆ. ಇವು ಸಿಸ್ಟಮ್ ಸಾಫ್ಟ್ ವೇರ್ ಜೊತೆ ಕಾರ್ಯನಿರ್ವಹಿಸುತ್ತವೆ. | ನೀವು ಗಣಕಯಂತ್ರಕ್ಕೆ ಚಾಲನೆ ನೀಡಿ ಕೀಲಿಮಣೆಯಿಂದಾಗಲಿ, ಮೌಸ್ನಿಂದಾಗಲಿ ಸಂದೇಶ ಕಳುಹಿಸಿದಾಗ ಗಣಕಯಂತ್ರವು '೦' ಮತ್ತು '1' ರ ಭಾಷೆಯಲ್ಲಿ ಮಾತ್ರ ಅರ್ಥಮಾಡಿಕೊಳ್ಳುತ್ತದೆ . ನಾವು ಆ ಭಾಷೆಯನ್ನು ಮಾತನಾಡುವುದಕ್ಕಾಗಲಿ ಅಥವಾ ಅರ್ಥಮಾಡಿಕೊಳ್ಳುವುದಕ್ಕಾಗಲಿ ಸಾಧ್ಯವಿಲ್ಲ. ನಮ್ಮ ನಿರ್ದೇಶನಗಳನ್ನು ಗಣಕಯಂತ್ರಕ್ಕೆ ವಿವರಿಸಲು ವಿಶೇಷವಾದ ಗಣಕಯಂತ್ರದ ಕಾರ್ಯಯೋಜನೆ (ಕಂಪ್ಯೂಟರ್ ಪ್ರೋಗ್ರಾಮ್)ಬೇಕಾಗುತ್ತದೆ ಇದನ್ನು ಆಪರೇಟಿಂಗ್ ಸಿಸ್ಟಮ್ ಎನ್ನುವರು. ಯಂತ್ರಾಂಶದ ಜೊತೆ ಕಾರ್ಯನಿರ್ವಹಿಸುವುದರಿಂದ ಆಪರೇಟಿಂಗ್ ಸಿಸ್ಟಮ್ ಅನ್ನು ಸಿಸ್ಟಮ್ ಸಾಫ್ಟ್ ವೇರ್ ಎಂದೂ ಸಹ ಕರೆಯುತ್ತಾರೆ. ಪ್ರತಿಯೊಂದು ಗಣಕಯಂತ್ರವು ಗಣಕಯಂತ್ರ ಕಾರ್ಯಯೋಜನೆಯನ್ನು ನಿರ್ವಹಿಸಲು ಆಪರೇಟಿಂಗ್ ಸಿಸ್ಟಮ್ ಅನ್ನು ಹೊಂದಿರಬೇಕು. ನಿಮ್ಮ ಮೊಬೈಲ್ ಫೋನ್ಗಳೂ ಸಹ ಆಪರೇಟಿಂಗ್ ಸಿಸ್ಟಮ್ ಅನ್ನು ಹೊಂದಿರುತ್ತವೆ. ಗಣಕಯಂತ್ರವನ್ನು ಚಾಲುಮಾಡಿದಾಗ, ಆಪರೇಟಿಂಗ್ ಸಿಸ್ಟಮ್ ಸ್ವಯಂ ಚಾಲನೆಗೊಳ್ಳುತ್ತದೆ. ಈ ಪ್ರಕ್ರಿಯೆಯನ್ನು ಬೂಟಿಂಗ್ ಎನ್ನುತ್ತಾರೆ. ಗಣಕಯಂತ್ರದ ಇತರೆ ಕಾರ್ಯಯೋಜನೆಗಳಾದ: ಬಣ್ಣ ಬಳಸುವಿಕೆ, ಬೆರಳಚ್ಚು ಮಾಡಲು, ಸಂಗೀತ ಕೇಳುವುದು, ಗಣಿತವನ್ನು ಕಲಿಯುವುದು ಇವುಗಳನ್ನು ಅಪ್ಲಿಕೇಷನ್ ಸಾಫ್ಟ್ ವೇರ್ ಅಥವಾ ಆಪ್ಸ್ (Apps.) ಎನ್ನುತ್ತಾರೆ. ಇವು ಸಿಸ್ಟಮ್ ಸಾಫ್ಟ್ ವೇರ್ ಜೊತೆ ಕಾರ್ಯನಿರ್ವಹಿಸುತ್ತವೆ. |