"ಕನ್ನಡ ವಿಷಯ ಶಿಕ್ಷಕರ ವೇದಿಕೆ ಕಾರ್ಯಾಗಾರ- 2015-16" ಆವೃತ್ತಿಗಳ ಮಧ್ಯದ ಬದಲಾವಣೆಗಳು
೭೩ ನೇ ಸಾಲು: | ೭೩ ನೇ ಸಾಲು: | ||
===ವರದಿಗಳು=== | ===ವರದಿಗಳು=== | ||
[http://karnatakaeducation.org.in/KOER/index.php/ಕನ್ನಡ_ವಿಷಯ_ಶಿಕ್ಷಕರ_ವೇದಿಕೆ_ಕಾರ್ಯಾಗಾರ-_2015-16_ಬೆಂಗಳೂರು_ವಿಭಾಗದ_ಕನ್ನಡ_ಎಂ_ಆರ್_ಪಿ_ಕಾರ್ಯಗಾರ-೧ರ_ವರದಿಗಳು ಐದು ದಿನದ ಕಾರ್ಯಾಗಾರದ ವರದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ] | [http://karnatakaeducation.org.in/KOER/index.php/ಕನ್ನಡ_ವಿಷಯ_ಶಿಕ್ಷಕರ_ವೇದಿಕೆ_ಕಾರ್ಯಾಗಾರ-_2015-16_ಬೆಂಗಳೂರು_ವಿಭಾಗದ_ಕನ್ನಡ_ಎಂ_ಆರ್_ಪಿ_ಕಾರ್ಯಗಾರ-೧ರ_ವರದಿಗಳು ಐದು ದಿನದ ಕಾರ್ಯಾಗಾರದ ವರದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ] | ||
− | |||
− | |||
− | |||
− | |||
− | |||
− | |||
=ಕನ್ನಡ ವಿಷಯದ ಎಸ್.ಟಿ.ಎಪ್. ತರಬೇತಿಯ ೨ ನೇಯ ದಿನದ ವರದಿ= | =ಕನ್ನಡ ವಿಷಯದ ಎಸ್.ಟಿ.ಎಪ್. ತರಬೇತಿಯ ೨ ನೇಯ ದಿನದ ವರದಿ= | ||
ಡಿ.ಎಸ್.ಇ.ಆರ್.ಟಿ . ವತಿಯಿಂದ ಕನ್ನಡ ವಿಷಯ ಎಸ್.ಟಿ.ಎಪ್. ತರಬೇತಿಯನ್ನು ಡಯಟ್ ಬೆಂ.ಗ್ರಾ. ಇಲ್ಲಿ ನೀಡುತ್ತಿದ್ದು ದಿನಾಂಕ ೩೦-೬-೨೦೧೫ ರಂದು ೨ನೇ ದಿನದ ಕಾರ್ಯಾಗಾರವನ್ನು ಬೆಳಿಗ್ಗೆ ದಾವಣಗೆರೆ ಜಿಲ್ಲೆಯವರಿಂದ | ಡಿ.ಎಸ್.ಇ.ಆರ್.ಟಿ . ವತಿಯಿಂದ ಕನ್ನಡ ವಿಷಯ ಎಸ್.ಟಿ.ಎಪ್. ತರಬೇತಿಯನ್ನು ಡಯಟ್ ಬೆಂ.ಗ್ರಾ. ಇಲ್ಲಿ ನೀಡುತ್ತಿದ್ದು ದಿನಾಂಕ ೩೦-೬-೨೦೧೫ ರಂದು ೨ನೇ ದಿನದ ಕಾರ್ಯಾಗಾರವನ್ನು ಬೆಳಿಗ್ಗೆ ದಾವಣಗೆರೆ ಜಿಲ್ಲೆಯವರಿಂದ |
೧೫:೫೦, ೭ ಜುಲೈ ೨೦೧೫ ನಂತೆ ಪರಿಷ್ಕರಣೆ
ಜೂನ್ ೨೦೧೫ರ ಕನ್ನಡ ವಿಷಯ ಶಿಕ್ಷಕರ ವೇದಿಕೆ SRP ಕಾರ್ಯಾಗಾರ
ಕಾರ್ಯಾಸೂಚಿ
- ಕಾರ್ಯಾಗಾರದ ಕಾರ್ಯಾಸೂಚಿಯನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
- ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಗಳ ವಿವರವನ್ನು ಇಲ್ಲಿ ನೋಡಬಹುದು
ಸಂಪನ್ಮೂಲಗಳು ಮತ್ತು ಕೈಪಿಡಿಗಳು
- ಕನ್ನಡ ಭಾಷಾ ಶಿಕ್ಷಕರ ವೇದಿಕೆ ಟಿಪ್ಪಣಿ
- ಅಂತರ್ಜಾಲದಲ್ಲಿ ಬ್ರೌಸಿಂಗ್ ಮಾಡುವುದು
- ಅಂತರ್ಜಾಲದಲ್ಲಿ ಸಂಪನ್ಮೂಲ ಹುಡುಕುವುದು
- ಬೇಸಿಕ್_Ubuntu_ಕೈಪಿಡಿ
- ಪಠ್ಯ ಸಂಪಾದನೆ ಬಗೆಗಿನ ಸಾಹಿತ್ಯ
- ಬೇಸಿಕ್ Libre office ಮತ್ತು ಕನ್ನಡ ಟೈಪಿಂಗ್ ಕೈಪಿಡಿ ಡೌನ್ ಲೊಡ್ ಮಾಡಲುಇಲ್ಲಿ ಒತ್ತಿ
- E-mail ಕೈಪಿಡಿಗಾಗಿ ಇಲ್ಲಿ ಒತ್ತಿ
- ವಿದ್ಯನ್ಮಾನ ವೈಯುಕ್ತಿಕ ಸಂಪನ್ಮೂಲ
- ಕನ್ನಡದಲ್ಲಿ GIMP ಕೈಪಿಡಿ ಡೌನ್ ಲೊಡ್ ಮಾಡಲುಇಲ್ಲಿ ಒತ್ತಿ
- ಪ್ರೀಮೈಂಡ್ ಕೈಪಿಡಿ
- ಕೊಯರ್_ಹಿನ್ನೆಲೆ_ಟಪ್ಪಣಿ
- ಸೇತುಬಂಧ ಕಾರ್ಯಕ್ರಮ ಚಟುವಟಿಕೆಗಳು ಮತ್ತು ಸಾಮಗ್ರಿಗಳಿಗಾಗಿ ಇಲ್ಲಿ ನೋಡಿ
- ಗೂಗಲ್ ಮ್ಯಾಪ್, ಟ್ರಾನ್ಸಲೇಟ್ ಬಳಕೆಯ ಕೈಪಿಡಿ
ಓದಲು ಲೇಖನ
ಭಾರತೀಯ ಭಾಷಾ ಬೋಧನೆ ಬಗೆಗಿನ ಎನ್.ಸಿ.ಎಫ್ ಪೊಶೀಷನ್ ಪೇಪರ್
ಅಭಿಪ್ರಾಯ
- ಈ ಕಾರ್ಯಗಾರದ ಬಗೆಗೆ ನಿಮ್ಮ ಅಭಿಪ್ರಾಯ ದಾಖಲಿಸಲು ಇಲ್ಲಿ ಒತ್ತಿ
- ಕಲಿಕಾರ್ಥಿಗಳು ದಾಖಲಿಸಿರುವ ಕಾರ್ಯಗಾರದ ಬಗೆಗಿನ ಹಿಮ್ಮಾಹಿತಿಯನ್ನು ಇಲ್ಲಿ ನೋಡಬಹುದು
ವರದಿಗಳು
ಐದು ದಿನದ ಕಾರ್ಯಾಗಾರದ ವರದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
ಮುಂದಿನ ಕಾರ್ಯಯೋಜನೆಗಳು
ಈ ಕಾರ್ಯಗಾರ ನಂತರ ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಗಳು ವಿಭಾಗ ಮಟ್ಟದಲ್ಲಿ ನಡೆಯುವ MRP ಕಾರ್ಯಾಗಾರದಲ್ಲಿ ಜಿಲ್ಲಾ ಮಟ್ಟದ ಸಂಪನ್ಮೂಲ ವ್ಯಕ್ತಿಗಳಿಗೆ 5ಮತ್ತು 3 ದಿನಗಳ ತರಬೇತಿಯನ್ನು ನೀಡುವರು.
ಕನ್ನಡ ವಿಷಯ ಶಿಕ್ಷಕರ ವೇದಿಕೆ MRP ಕಾರ್ಯಾಗಾರಗಳು
ಕಾರ್ಯಾಸೂಚಿ
ಸಂಪನ್ಮೂಲಗಳು ಮತ್ತು ಕೈಪಿಡಿಗಳು
- ಕನ್ನಡ ಭಾಷಾ ಶಿಕ್ಷಕರ ವೇದಿಕೆ ಟಿಪ್ಪಣಿ
- ಅಂತರ್ಜಾಲದಲ್ಲಿ ಬ್ರೌಸಿಂಗ್ ಮಾಡುವುದು
- ಅಂತರ್ಜಾಲದಲ್ಲಿ ಸಂಪನ್ಮೂಲ ಹುಡುಕುವುದು
- ಬೇಸಿಕ್_Ubuntu_ಕೈಪಿಡಿ
- ಪಠ್ಯ ಸಂಪಾದನೆ ಬಗೆಗಿನ ಸಾಹಿತ್ಯ
- ಬೇಸಿಕ್ Libre office ಮತ್ತು ಕನ್ನಡ ಟೈಪಿಂಗ್ ಕೈಪಿಡಿ ಡೌನ್ ಲೊಡ್ ಮಾಡಲುಇಲ್ಲಿ ಒತ್ತಿ
- E-mail ಕೈಪಿಡಿಗಾಗಿ ಇಲ್ಲಿ ಒತ್ತಿ
- ವಿದ್ಯನ್ಮಾನ ವೈಯುಕ್ತಿಕ ಸಂಪನ್ಮೂಲ
- ಕನ್ನಡದಲ್ಲಿ GIMP ಕೈಪಿಡಿ ಡೌನ್ ಲೊಡ್ ಮಾಡಲುಇಲ್ಲಿ ಒತ್ತಿ
- ಪ್ರೀಮೈಂಡ್ ಕೈಪಿಡಿ
- ಕೊಯರ್_ಹಿನ್ನೆಲೆ_ಟಪ್ಪಣಿ
- ಸೇತುಬಂಧ ಕಾರ್ಯಕ್ರಮ ಚಟುವಟಿಕೆಗಳು ಮತ್ತು ಸಾಮಗ್ರಿಗಳಿಗಾಗಿ ಇಲ್ಲಿ ನೋಡಿ
- ಗೂಗಲ್ ಮ್ಯಾಪ್, ಟ್ರಾನ್ಸಲೇಟ್ ಬಳಕೆಯ ಕೈಪಿಡಿ
ಓದಲು ಲೇಖನ
ಭಾರತೀಯ ಭಾಷಾ ಬೋಧನೆ ಬಗೆಗಿನ ಎನ್.ಸಿ.ಎಫ್ ಪೊಶೀಷನ್ ಪೇಪರ್
ಬೆಂಗಳೂರು ವಿಭಾಗದ ಕನ್ನಡ ಸಂಪನ್ಮೂಲ ವ್ಯಕ್ತಿಗಳ ಕಾರ್ಯಗಾರ-೧ ಜೂನ್ 29 ರಿಂದ ಜುಲೈ 3, 2015
ಕಲಿಕಾರ್ಥಿಗಳ ಮಾಹಿತಿ
ಕಾರ್ಯಾಗಾರದಲ್ಲಿ ನಮ್ಮನ್ನು ವೀಕ್ಷಿಸಿ
ಅಭಿಪ್ರಾಯ
ವರದಿಗಳು
ಐದು ದಿನದ ಕಾರ್ಯಾಗಾರದ ವರದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
ಕನ್ನಡ ವಿಷಯದ ಎಸ್.ಟಿ.ಎಪ್. ತರಬೇತಿಯ ೨ ನೇಯ ದಿನದ ವರದಿ
ಡಿ.ಎಸ್.ಇ.ಆರ್.ಟಿ . ವತಿಯಿಂದ ಕನ್ನಡ ವಿಷಯ ಎಸ್.ಟಿ.ಎಪ್. ತರಬೇತಿಯನ್ನು ಡಯಟ್ ಬೆಂ.ಗ್ರಾ. ಇಲ್ಲಿ ನೀಡುತ್ತಿದ್ದು ದಿನಾಂಕ ೩೦-೬-೨೦೧೫ ರಂದು ೨ನೇ ದಿನದ ಕಾರ್ಯಾಗಾರವನ್ನು ಬೆಳಿಗ್ಗೆ ದಾವಣಗೆರೆ ಜಿಲ್ಲೆಯವರಿಂದ
ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ನಂತರ ಬೆಂಗಳೂರು ಗ್ರಾಮಾಂತರ ಜಿಲ್ಲೆಯವರು ಚಿಂತನೆ ನಡೆಸಿಕೊಟ್ಟರು. ೧ನೇ ದಿನದ ತರಬೇತಿಯ ವರದಿಯನ್ನು ತುಮಕೂರು ಜಿಲ್ಲೆಯವರು ವಾಚಿಸಿದರು. ಕಾರ್ಯಕ್ರಮದ ಅಧಿಕಾರಿಯವರಾದ ಶ್ರೀ ಭಾಸ್ಕರ್ ಸರ್ ರವರು ೨ನೇ ದಿನದ ಕಾರ್ಯಸೂಚಿಯನ್ನು ತಿಳಿಸುತ್ತಾ ತರಬೇತಿಗೆ ಚಾಲನೆ ನೀಡಿದರು
ಸಂಪನ್ಮೂಲ ವ್ಯಕ್ತಿಗಳಾದ ರಾಜು ಪೂಜಾರಿ ಹಾಗೂ ಪ್ರಭಾಕರ್ ಶೆಟ್ಟಿ ಸರ್ ರವರು ಪರಿಣಾಮಕಾರಿ ಬೋಧನೆಗೆ ಅಂತರ್ಜಾಲ ಬಳಸಿ ಸಂಪನ್ಮೂಲ ಕಲೆಹಾಕುವ ಬಗ್ಗೆ ಹಂತಹಂತವಾಗಿ ಪ್ರಾತ್ಯಕ್ಷಿಕೆ ಮಾಡಿ ವಿವರಿಸಿದರು.ಕಡತಗಳನ್ನು ತೆರೆಯುವುದು ,ಕಡತದೊಳಗೆ ಕಡತಗಳನ್ನು ತೆರೆಯುವ ಬಗೆಯನ್ನು ಚೆನ್ನಾಗಿ ವಿವರಿಸಿದರು. ಈ ಸಂದರ್ಭದಲ್ಲಿ ಡಿ.ಎಸ್.ಇ.ಆರ್.ಟಿ .ಯ ಉಪನಿರದೇಶಕರಾದ ಶ್ರೀಮತಿ ಲಲಿತಾ ರವರು ಆಗಮಿಸಿ ಸದರಿ ತರಬೇತಿಯ ಅವಶ್ಯಕತೆ & ಅದರ ಪ್ರಯೋಜನವನ್ನು ಕುರಿತು ಶಿಕ್ಷರೊಂದಿಗೆ ಚರ್ಚಿಸಿದರು
ಮಧ್ಯಾಹ್ನದ ಅವಧಿಯಲ್ಲಿ ನಾವುಗಳು ಉಬುಂಟು ಸಾರ್ವಜನಿಕ ತಂತ್ರಾಂಶದ ಬಳಕೆ, ಭಾಷಾ ಬೋಧನೆಯಲ್ಲಿನ ಉದ್ದೇಶಗಳು, ಫೈಲ್ ಸೃಜಿಸುವುದು, ಒಡಿಟಿ, ಜೆ.ಪಿ.ಇ.ಜಿ, ಪಿ.ಎನ್.ಜಿ. ಫೈಲ್‌ಗಳನ್ನು ಸೇವ್ ಮಾಡುವುದು, ಸ್ಕ್ರೀನ್ ಷಾಟ್ ಸೇವ್ ಮಾಡುವುದು, ಇ-ಮೇಲ್ ಸೃಜಿಸುವುದು, ಇತರರಿಗೆ ಈ ಮೇಲ್ ಮಾಡುವುದು, ಭಾಷಾ ಶಿಕ್ಷಕರ ವೇದಿಕೆಗೆ ಮೇಲ್ ಕಳುಹಿಸುವುದು ಇತ್ಯಾದಿ ವಿವರಗಳನ್ನು ಮಾನ್ಯ ಸಂಪನ್ಮೂಲ ವ್ಯಕ್ತಿಗಳಾದ ಸರ್ವಶ್ರೀ ವೆಂಕಟೇಶ್, ಪ್ರಭಾಕರಶೆಟ್ಟಿ, ರಾಜು ಪೂಜಾರ, ರಮಾನಂದ್, ಫಕ್ಕೀರಪ್ಪ ಹಾಗೂ ಭಾಸ್ಕರ್ ರವರು ಅತಿ ವಿವರಯುತವಾಗಿ ನಮಗೆ ತಿಳಿಸಿ ಕೊಟ್ಟು ನಮ್ಮನ್ನು ತರಬೇತುಗೊಳಿಸಿದ್ದಾರೆ. ತರಬೇತಿ ಕಾರ್ಯಾಗಾರದಲ್ಲಿ ಶ್ರೀ ಮುರಳಿಯವರ ಗಾಯನ ಅತ್ಯುತ್ತವವಾಗಿ ಮೂಡಿ ಬರುತ್ತಿದೆ ಹಾಗೆಯೇ ಲೆಮನ್ ಟೀ ಕೂಡ ಉತ್ತಮವಾಗಿತ್ತು. ಕೊನೆಯಲ್ಲಿ ಎಲ್ಲರಿಗೂ ಅವರುಗಳ ಮೇಲ್ ಗಳನ್ನು ಪರೀಕ್ಷಿಸಲು ಹಾಗೂ ಪುನಃ ಪ್ರತಿಮೇಲ್ ಗಳನ್ನು ಮಾಡಲು ಪ್ರಾಯೋಗಿಕವಾಗಿ ಎಲ್ಲರಗೂ ಅವಕಾಶ ಮಾಡಿಕೊಡಲಾಯಿತು
ಇದರೊಂದಿಗೆ ಈ ದಿನದ ತರಬೇತಿಯನ್ನು ಮುಕ್ತಾಯಗೊಳಿಸಲಾಯಿತು
ಕನ್ನಡ ವಿಷಯದ ಎಸ್.ಟಿ.ಎಪ್. ತರಬೇತಿಯ ೩ನೇಯ ದಿನದ ವರದಿ
ನೀರಿನ ಒಂದೊಂದೇ ಹನಿ ಬೀಳುತ್ತಾ ಹೋದರೆ ಕೊಡ ತುಂಬುತ್ತದೆ, ಹಾಗೇಯೇ ಎಲ್ಲಾ ವಿದ್ಯಗಳಲ್ಲಿ ಪಾರಾಂಗತರಾಗಬೇಕಾದರೆ ಕ್ರಮೇಣ ತಾಳ್ಮೆಯಿಂದ ಕಲಿಯುತ್ತಾ ಹೋಗಬೇಕು " ಎಂಬ ಚಾಣಕ್ಯ ನೀತಿಯಂತೆ ನಿರಂತರ ಕಲಿಕೆಯಿಂದ ಯಶಸ್ಸನ್ನು ಸಾಧಿಸಲು ಸಾಧ್ಯ ಎಂಬ ಮಾತನ್ನು ತರಬೇತಿ ಕಾರ್ಯಾಗಾರವು ನಿಜವಾಗಿಸುವುದರಲ್ಲಿ ಸಂದೇಹವಿಲ್ಲ. ಅದರಂತೆ ಡಿ.ಎಸ್.ಇ.ಆರ್.ಟಿ . ವತಿಯಿಂದ ಕನ್ನಡ ವಿಷಯ ಎಸ್.ಟಿ.ಎಪ್. ತರಬೇತಿಯನ್ನು ಡಯಟ್ ಬೆಂ.ಗ್ರಾ. ಇಲ್ಲಿ ನೀಡುತ್ತಿದ್ದು ದಿನಾಂಕ ೩೦-೬-೨೦೧೫ ರಂದು ೩ನೇ ದಿನದ ಕಾರ್ಯಾಗಾರವನ್ನು ಬೆಳಿಗ್ಗೆ ೩ನೇ ದಿನ ತರಬೇತಿ ಕಾರ್ಯಕ್ರಮವನ್ನು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪಕ್ಕೀರಪ್ಪ ಸರ್ ರವರು ೩ನೇ ದಿನದ ಕಾರ್ಯಸೂಚಿಯನ್ನು ತಿಳಿಸುತ್ತಾ ತರಬೇತಿಗೆ ಚಾಲನೆ ನೀಡಿದರು. ತುಮಕೂರು ತಂಡದ ಶ್ರೀಯುತ ಮುರಳಿಧರ ರವರ ಗಣೇಶ ಸ್ತುತಿಯೊಂದಿಗೆ ಕಾರ್ಯಾಗಾರಕ್ಕೆ ಚಾಲನೆ ನೀಡಲಾಯಿತು. ದಿನದ ಚಿಂತನವನ್ನು ದಾವಣಗೆರೆ ತಂಡದ ಶ್ರೀಯುತ ರವೀಂದ್ರಚಾರ್ ರವರು "ಬದುಕು" ಎಂಬ ಶೀರ್ಷಿಕೆಯ ಚಿಂತನವು ಸಮಯೋಚಿತವಾಗಿತ್ತು. “information information there is no conformation” ಎಂಬ ಚಿಂತನೆಯ ನುಡಿ ಶಿಕ್ಷಣದ ದಾರಿಯನ್ನು ತೋರುವುದು ಮಂಡಿಸಿದರು. ನಂತರ ೨ನೇ ದಿನದ ವರದಿಯನ್ನು ರಾಮನಗರ ಜಿಲ್ಲಾ ತಂಡದ ಶ್ರೀ ಎಸ್. ಬಿ. ಪುಟ್ಟಸ್ವಾಮಿರವರು ವರದಿಯನ್ನು ಮಂಡಿಸಿದರು
ಸಂಪನ್ಮೂಲ ವ್ಯಕ್ತಿಗಳಾದ ಶ್ರೀಯುತ ಪ್ರಭಾಕರ್ ಶೆಟ್ಟಿಯವರು ತಂತ್ರಜ್ಞಾನವನ್ನು ಬಳಸಿಕೊಂಡು ಪಾಠಯೋಜನೆಯ ಪರಿಕಲ್ಪನೆಯನ್ನು ಹೇಗೆ ತಯಾರಿಸಿಕೊಳ್ಳುವುದು ಎಂಬ ವಿಷಯವನ್ನು ಪ್ರಾಯೋಗಿಕವಾಗಿ ಮಾಡಿ ವಿವರಿಸಿದರು.
“ಅರತವನು ನಾನೇಂದು ತೋರದಿರು ದರ್ಪ" ಎನ್ನುವ ಬೋಳುಬಸವ ಅಂಕಿತದ ನಿಜಗುಣರ ಪದ್ಯವನ್ನು ಹೇಳುವುದರೊಂದಿಗೆ ಅಹಂಕಾರ ಸಲ್ಲದು ವಿನಯ ಮತ್ತು ತಾಳ್ಮೆಯಿಂದ ಏನೆಲ್ಲಾ ಸಾಧಿಸಬಹುದು ಎಂಬುದಕ್ಕೆ ನಿದರ್ಶನ ನೀಡಿದರು ೫ W ಗಳಿಗಿಂತ ೧ H. ನ ಮಹತ್ವವನ್ನು ತಿಳಿದುಕೊಂಡು ಪೂರ್ವಸಿದ್ಧತೆಯೊಂದಿಗೆ ತರಗತಿ ಕೊಠಡಿಗೆ ಶಿಕ್ಷಕರು ಹೋದಾಗ ಕಲಿಕೆ ಪರಿಣಾಮಕಾರಿ ಆಗಿರುತ್ತದೆ ಎಂದು ತಿಳಿಸಿ ಪಾಠಯೋಜನೆಯ ಹಂತಗಳನ್ನು ವಿವರಿಸಿದರು. ಮೈಂಡ್ ಮ್ಯಾಪ್ ಫ್ರೀ ಮೈಂಡ್ ಪರಿಕಲ್ಪನಾ ನಕ್ಷೆಯ ತಯಾರಿಕೆಯನ್ನು ತೋರಿಸಿದರು
ಈ ಮಧ್ಯದಲ್ಲಿ ಅನಿರೀಕ್ಷಿತವಾಗಿ ಡಿ.ಎಸ್.ಇ.ಆರ್.ಟಿ. ಉಪನಿರ್ದೇಶಕರಾದ ಶ್ರೀಮತಿ ಜಲಜಮ್ಮರವರು ಮತ್ತು ಡಯಟ್ ನ ಪ್ರಾಂಶುಪಾಲರಾದ ಶ್ರೀಯುತ ಮಾದೇಗೌಡರು ತರಬೇತಿ ಕಾರ್ಯಾಗಾರಕ್ಕೆ ಭೇಟಿ ನೀಡಿ ಕಲಿಕೆ ಬೋಧನೆಯಲ್ಲಿ ಶಿಕ್ಷಕರ ಪಾತ್ರದ ಬಗ್ಗೆ ವಿಚಾರಗಳನ್ನು ತಿಳಿಸಿದರು. ಭಾಷಾ ಕ್ಷೇತ್ರಗಳನ್ನು ಮಕ್ಕಳಲ್ಲಿ ಅಭಿವೃದ್ಧಿಪಡಿಸಿ "ಸ್ಪಷ್ಟ ಓದು ಶುದ್ಧ ಬರೆಹ" ದ ಮಹತ್ವವನ್ನು ತಿಳಿಸಿದರು
ಈ ಎಲ್ಲ ವಿಚಾರಗಳ ಚಿಂತನ ಮಂಥನದಲ್ಲಿ ಕಲಿಯುವ ಹಂಬಲದಲ್ಲಿ ಮದ್ಯಾಹ್ನದ ಊಟದ ನೆನಪೇ ಆಗಲಿಲ್ಲ. ಆದರೂ ಹೊಟ್ಟೆಯ ಹಸಿವಿನ ಕೂಗು ನಮ್ಮೆಲ್ಲರನ್ನು ಊಟದ ಕಡೆಗೆ ಸೆಳೆಯಿತು
ಊಟದ ವಿರಾಮದ ನಂತರ ಮರಳಿ ಕಲಿಕೆಯ ಕಡೆಗೆ ಪಯಣ, ಜಾನಪದ ಗೀತೆಯ ಗಾಯನದೊಂದಿಗೆ ಐ.ಟಿ. ಫಾರ್ ಚೇಂಜ್ ನ ಶ್ರೀಯುತ ರಾಕೇಶ್ ರವರು ಅಂತರ್ಜಾಲದ ಗೂಗಲ್ , ಗೂಗಲ್ ನ ಬಳಕೆ, ಐ.ಡಿ. ತೆರೆಯುವುದು ಹಾಗೂ ವಿವಿಧ ಉಪಯೋಗಗಳ ಬಗ್ಗೆ ಬಹಳಷ್ಟು ಮಾಹಿತಿಯನ್ನು ನೀಡಿದರು. ಗೂಗಲ್ ಸಿಂಧುವಿನಿಂದ ಬಿಂದು ಬಿಂದುವಿನಷ್ಟು ತಿಳಿಯುತ್ತ, ಮನವರಿಕೆಯನ್ನು ಮಾಡಿಕೊಳ್ಳುವುದರಲ್ಲಿ ಸಂಜೆಯ ೫.೪೫ ಆದದ್ದೇ ಅರಿವಿಗೆ ಬರಲಿಲ್ಲ. ಕೊನೆಗೆ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಭಾಸ್ಕರ್ ಸರ್ ರವರು ವಂದನೆಯನ್ನು ಸಲ್ಲಿಸಿ ನಾಲ್ಕನೆಯ ದಿನದ ಕಾರ್ಯಕ್ರಮದ ಮಾಹಿತಿಯನ್ನು ತಿಳಿಸಿ ೩ನೇ ದಿನದ ತರಬೇತಿ ಕಾರ್ಯಾಗಾರಕ್ಕೆ ವಿದಾಯ ಹೇಳಲಾಯಿತು
ವರದಿ ಸಿದ್ಧತೆ & ಮಂಡನೆ : ಬೆಂಗಳೂರು ಗ್ರಾಮಾಂತರ ಜಿಲ್ಲಾ ತ
ಶ್ರೀ. ರಾಜು ಅವಳೇಕರ, ಶ್ರೀ ಗಂಗರಾಜು, ಎಂ. ಶ್ರೀ. ಬಿ. ಲಿಂಗದೇವರು, ಶ್ರೀಮತಿ ಲಲಿತಮ್ಮ
ನಾಲ್ಕನೇ ದಿನದ ಕಾರ್ಯಾಗಾರದ ವರದಿ
ದಿನಾಂಕ: 02/07/2015 ರಂದು ಮುಂಜಾನೆ 9:30ಕ್ಕೆ ತರಬೇತಿ ಆರಂಭವಾಯಿತು. ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪ್ರಭಾಕರ ಶೆಟ್ಟಿಯವರು ಶುಭನುಡಿಯೊಂದಿಗೆ ಚಾಲನೆ ನೀಡಿದರು
ಮೊದಲಿಗೆ ಬೆಂಗಳೂರು ಗ್ರಾಮಾಂತರ ತಂಡದವರು ನಿನ್ನೊಲುಮೆ ನಮಗಿರಲಿ ತಂದೆ ಎಂಬ ಪ್ರಾರ್ಥನೆಯೊಂದಿಗೆ ಚಾಲನೆ ನೀಡಿದರು. ಶ್ರೀಯುತರು ಇದನ್ನು ಅಣಕು ಗೀತೆಯಾಗಿ ಹಾಡುತ್ತ ಟಿ.ಎ.ಯೂ ಬೇಡ, ಡಿ.ಏ ಯೂ ಬೇಡ ಒಂದು ಲ್ಯಾಪ್ ಟಾಪ್ ನೀಡು ತಂದೆ ಎಂದು ಪ್ರಾರ್ಥಿಸಿದ್ದು ತುಂಬಾ ಸೊಗಸಾಗಿತ್ತು
ತುಮಕೂರು ಜಿಲ್ಲಾ ತಂಡದ ಶ್ರೀಮತಿ ದೇವಿಕಾರವರು ಚಿಂತನ ಕಾರ್ಯವನ್ನು ನಡೆಸಿಕೊಟ್ಟರು
ಬೆಂಗಳೂರು ಗ್ರಾಮಾಂತರ ತಂಡದವರು ವರದಿ ವಾಚನ ಮಾಡಿದರು. ಇದರಲ್ಲಿ ಹಿಂದಿನ ದಿನದ ಸಂಪೂರ್ಣ ವಿವರಗಳನ್ನು ತಿಳಿಸಿದರು. ಇದನ್ನು ಕನ್ನಡ ವಿಷಯ ಶಿಕ್ಷಕರ ವೇದಿಕೆಯೊಂದಿಗೆ ಹಂಚಿಕೊಂಡರು
ಐ.ಟಿ.ಫಾರ್ ಚೇಂಜ್ ಕಂಪನಿಯಿಂದ ಬಂದಿರುವ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ವೆಂಕಟೇಶ್ ರವರು ಹಿಂದಿನ ದಿನದ ಕೊನೆಯಲ್ಲಿ ತರಬೇತಿ ನೀಡಿದ್ದ ಮೈಂಡ್ ಮ್ಯಾಪ್ ಮತ್ತು ಪರಿಕಲ್ಪನಾ ನಕ್ಷೆಯನ್ನು ರಚಿಸುವ ಹಂತಗ ಳನ್ನು ಮತ್ತೊಮ್ಮೆ ವಿವರಿಸಿದರು. ಇದರಿಂದ ಎಲ್ಲಾ ಶಿಬಿರಾರ್ಥಿಳಿಗೂ ಮತ್ತೊಮ್ಮೆ ಹಿಂದಿನ ದಿನದ ಹಿಮ್ಮಾಹಿತಿಯನ್ನು ತಿಳಿದಂತೆ ಆಯಿತು
ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ರಾಜು ಪೂಜಾರಿಯವರು ಅಂತರ್ಜಾಲ ಪುಟದಲ್ಲಿ ವಿವಿಧ ವಿಳಾಸಗಳನ್ನು ಬುಕ್ ಮಾರ್ಕ್ ಮಾಡುವುದರ ವಿವಿಧ ಹಂತಗಳನ್ನು ವಿವರಿಸುತ್ತಾ ದೊಡ್ಡ ಪರದೆಯ ಮೇಲೆ ಪ್ರದರ್ಶಿಸಿದರು. ಅವರ ತರಬೇತಿಯ ನಡುವೆ ಶ್ರೀ ವೆಂಕಟೇಶ್ ರವರು ಇನ್ನೂ ಹೆಚ್ಚಿನ ವಿವರಗಳನ್ನು ನೀಡಿದರು. ಬುಕ್ ಮಾರ್ಕ್‌ಗಳನ್ನು ಅಳಿಸುವುದು, ಹಿಸ್ಟರಿಯನ್ನು ನೋಡುವುದು, ಅದನ್ನು ಅಳಿಸುವುದು ಮುಂತಾದ ವಿಷಯಗಳ ಬಗ್ಗೆ ವಿವರಿಸಿದರು
ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ರಾಜು ಪೂಜಾರಅವರು ಲಿಬ್ರೆ ಆಫೀಸ್ ನಲ್ಲಿ ಕ್ಯಾಲ್ಕ್ ಅನ್ನು ತೆರೆಯುವುದು, ಸೆಲ್ ಮರ್ಜ್, ಕಾಲಂ, ರೋಗಳಲ್ಲಿ ದತ್ತಾಂಶವನ್ನು ಭರ್ತಿ ಮಾಡುವುದು, ಅಕಾರಾಂತವಾಗಿ ಜೋಡಿಸುವುದು, ಕ್ಯಾಪಿಟಲ್ ಲೆಟರ್ ಗಳಾಗಿ ಬದಲಿಸುವುದು, ಕೂಡುವುದು, ಕಳೆಯುವುದು, ಕ್ರಮ ಸಂಖ್ಯೆಗಳನ್ನು ಮುಂದುವರೆಸಿ ನಮೂದಿಸುವುದು, ಭಿನ್ನ ಸೆಲ್ ಗಳಲ್ಲಿನ ದತ್ತಾಂಶಗಳ ಲೆಕ್ಕಾಚಾರಕ್ಕಾಗಿ ಫಾರ್ಮುಲಾಗಳನ್ನು ಹಾಕುವುದು, ಇತ್ಯಾದಿ ವಿವರಗಳನ್ನು ತಿಳಿಸಿದರು.ನಡುವೆಯೇ ಶ್ರೀ ವೆಂಕಟೇಶ್ ರವರು ಇನ್ನೂ ಹೆಚ್ಚಿನ ಮಾಹಿತಿಗಳನ್ನು ನಮೂದಿಸುವ ವಿವರಗಳನ್ನು ತಿಳಿಸಿದರು
ಚಹಾ ವಿರಾಮದ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ರಮಾನಂದರವರು ಭಾಷಾ ಬೋಧನೆಯ ಉದ್ದೇಶಗಳನ್ನು ವಿವರಿಸುತ್ತಾ, ಭಾಷೆಯ ಅರ್ಥ, ಮಹತ್ವ, ಭಾಷೆಯ ಹುಟ್ಟು, ಭಾಷೆಯನ್ನು ಕಲಿಸುವ ಬಗೆ ಭಾಷೆಯ ಶ್ರವಣ ಮತ್ತು ಚಾಕ್ಷುಷ ರೂಪಗಳ ಬಗ್ಗೆ ವಿವರಿಸಿದರು
ನಂತರ ಶ್ರೀ ವೆಂಕಟೇಶ್ ರವರು ಎನ್.ಸಿ.ಎಫ್ 2005ರಲ್ಲಿನ ಆಶಯಗಳು, ಭಾಷಾ ಬೋಧನೆಯ ಪೊಸಿಷನ್ ಪೇಪರ್ ಗಳನ್ನು ತಂಡಳಿಗೆ ನೀಡಿ ಅದರಲ್ಲಿನ ಮುಖ್ಯಾಂಶಗಳು ಮತ್ತು ಭಾಷಾ ಬೋಧನಾ ಸ್ಥಿತಿಗಳನ್ನು ಪಟ್ಟಿ ಮಾಡಿ ಜಿಲ್ಲಾವಾರು
ವಿವಿಧ ತಂತ್ರ ಜ್ಞಾನವನ್ನು ಬಳಸಿ ಪ್ರಸ್ತುತ ಪಡಿಸಲು ತಿಳಿಸಿದರು. ಎಲ್ಲ ತಂಡಳಿಗೆ ಆ ಪೊಜಿ಼ಷನ್ ಪೇಪರ್ ನ ಮಾಹಿತಿಯನ್ನು ನೀಡಿದರು
ಊಟದ ವಿರಾಮದ ನಂತರ ಎಲ್ಲಾ ತಂಡದ ಸದಸ್ಯರೂ ತಮ್ಮ ಟಾಸ್ಕ್ ನೊಂದಿಗೆ ತೊಡಗಿದರು. ಎಲ್ಲ ತಂಡಗಳು ವಿವಿಧ ತಂತ್ರಗಳನ್ನು ಬಳಸಿ ತಮ್ಮ ಜವಾಬ್ದಾರಿಯನ್ನು ಪೂರೈಸಿದರು. ವೀಡಿಯೋ, ಪಿ.ಪಿ.ಟಿ, ಒಡಿಟಿ ಗಳ ಮೂಲಕ ಪ್ರಸ್ತುತ ಪಡಿಸುತ್ತಾ ತಮ್ಮ ಆಲೋಚನೆಗಳನ್ನು ಚರ್ಚಿಸಿದರು
ಚಹಾ ವಿರಾಮದ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ‍್ರೀ ಪಕ್ಕೀರಪ್ಪನವರು ವೀಡಿಯೋ ಸಂಪನ್ಮೂಲಗಳು, ಚಿತ್ರಗಳನ್ನು ಆನ್ ಲೈನ್ ನಿಂದ ಹೇಗೆ ಡೌನ್ ಲೋಡ್ ಮಾಡಬಹುದೆಂಬುದನ್ನು ವಿವರಿಸಿದರು. ಯೂ ಟೂಬ್ ನಿಂದ ಹೇಗೆ ವಿಡಿಯೋಗಳನ್ನು ಡೌನ್ ಲೋಡ್ ಮಾಡುವುದು, ವೆಬ್ ಕ್ಯಾಮೆರಾ ಬಳಸಿ ವೀಡಿಯೋ ರಚಿಸುವುದು, ಡೌನ್ ಲೋಡ್ ಆಡ್ ಆನ್ ಗಳನ್ನು ಇನ್ ಸ್ಟಾಲ್ ಮಾಡುವುದು, ಸೌಂಡ್ ರೆಕಾರ್ಡ್ ಮಾಡುವುದು, ಮೊಬೈಲ್ ನಲ್ಲಿನ ಚಿತ್ರಗಳು ಮತ್ತು ವಿಡಿಯೋಗಳನ್ನು ಕಂಪ್ಯೂಟರ್ ಗೆ ವರ್ಗಾಯಿಸುವುದು, ಕಂಪ್ಯೂಟರ್ ನಿಂದ ಮೊಬೈಲ್ ಹೇಗೆ ದತ್ತಾಂಶಗಳನ್ನು ವರ್ಗಾಯಿಸುವುದು ಮುಂತಾದ ಅಂಶಗಳನ್ನು ಸವಿವರವಾಗಿ ತಿಳಿಸಿದರು
ಈ ಅವಧಿಯ ನಂತರ ಎಲ್ಲಾ ಶಿಬಿರಾರ್ಥಿಳೊಂದಿಗೆ ಒಂದು ಸಮೂಹ ಚಿತ್ರವನ್ನು ತೆಗೆದುಕೊಳ್ಳಲಾಯಿತು
ಕೊನೆಯ ಅವಧಿಯಲ್ಲಿ ಶ್ರೀ ವೆಂಕಟೇಶ್ ರವರು ಕೊಯೆರ್ (KOER) ನ ಮಹತ್ವವನ್ನು ಪ್ರಸ್ತುತಪಡಿಸಿದರು. ಕರ್ನಾಟಕ ಮುಕ್ತ ಶಿಕ್ಷಣ ಸಂಪನ್ಮೂಲ ವೆಬ್ ಸೈಟ್ ನ ಅಗಾಧತೆಯನ್ನು ತೆರೆದಿಟ್ಟರು. ಕರ್ನಾಟಕದಾದ್ಯಂತ ಇರುವ ನಮ್ಮ ಶಿಕ್ಷಕರು ತಯಾರಿಸಿರುವ ವಿವಿಧ ಸಂಪನ್ಮೂಲಗಳನ್ನು ಸಂಸ್ಕರಿಸಿ ಕೊಯೆರ್ ಗೆ ಅಪ್ ಲೋಡ್ ಮಾಡುವ ಹಂತಗಳನ್ನು ತೋರಿಸಿದರು. ಕನ್ನಡ ವಿಷಯಕ್ಕೆ ಈಗಲೇ ಸೇರಿರುವ ನೂರಾರು ಸಂಪನ್ಮೂಲಗಳನ್ನು ಉಪಯೋಗಿಸುವ, ಹಾಗೂ ನೋಡಿ ಬಳಸುವ ವಿವಿಧ ವಿಚಾರಗಳನ್ನು ನಮ್ಮೊಂದಿಗೆ ತೆರೆದಿಟ್ಟರು. ಕೊಯೆರ್ ಗೆ ವಿಷಯಗಳನ್ನು ಸೇರಿಸುವ ಬಗೆಯನ್ನು ನಮಗೆ ತಿಳಿಸಿದರು. ಇದರೊಂದಿಗೆ ಇಂದಿನ ದಿನದ ತರಬೇತಿ ಕಾರ್ಯಾಗಾರ ಮುಕ್ತಾಯ ಹೊಂದಿತು
ವರದಿ ರಚನೆ:
ಶ್ರೀ ರಮೇಶ್.ಕೆ. ಸ.ಶಿ. ಸರ್ಕಾರಿ ಪ್ರೌಢಶಾಲೆ
ಕುರುವಂಕ, ಅರಸೀಕೆರೆ ತಾಲ್ಲೂಕು
ಹಾಸನ ಜಿಲ್ಲೆ
ದಾವಣಗೆರೆ ತಂಡದಿಂದ ಐದನೇ ದಿನದ ತರಬೇತಿ ವರದಿಯ ವಾಚನ
ಇಲ್ಲಿ ನೆರೆದಿರುವ ಸರ್ವರಿಗೂ ಮೊದಲಿಗೆ ನಮಸ್ಕರಿಸುತ್ತಾ ಡಿ ವಿ ಜಿ ಯವರ
ಇಳೆಯಿಂದ ಮೊಳಕೆ ಬಗೆವಂದು ತಮಟೆಗಳಿಲ್ಲ
ಫಲ ಮಾಗುವಂದು ತುತ್ತೂರಿ ದನಿಯಿಲ್ಲ
ಬೆಳಕೀವ ಸೂರ್ಯಚಂದ್ರರದೊಂದು ಸದ್ದಿ ಲ್ಲ
ಹೊಲಿ ನಿನ್ನ ತುಟಿಗಳನು-- ಮಂಕುತಿಮ್ಮ
ಈ ನೀತಿ ಮಾತನ್ನು ಸ್ತುತಿಸುತ್ತಾ ದಿನದ ವರದಿ ಮಂಡಿಸುತ್ತೇನೆ
ನಾಲ್ಕು ದಿನದ ತರಬೇತಿಯಿಂದ ಉತ್ಸುಕರಾದ ನಾವುಗಳೆಲ್ಲ ಬೆಳಿಗ್ಗೆ ೯.೩೦ ಕ್ಕೆ ಸರಿಯಾಗಿ ಆಗಮಿಸಿದ ನಂತರ ಹಾಸನ ಜಿಲ್ಲೆಯ ರಮೇಶ ಅವರ ಸುಶ್ರಾವ್ಯ ಕಂಠದಿಂದ ಮೂಡಿದ ತಾಯೆ ಬಾರೆ ಮೊಗವ ತೋರೆ ಕನ್ನಡಿಗರ ಮಾತೆಯೆ ಪ್ರಾರ್ಥನೆಯೊಂದಿಗೆ ಐದನೆ ದಿನದ ಕಾರ್ಯಗಾರವನ್ನು ಪ್ರಾರಂಭಿಸಿದೆವು. ನಂತರ ರಾಮನಗರ ಜಿಲ್ಲೆಯ ಶ್ರೀ ಜಯಪ್ಪ ಇವರು ಉತ್ತಮವಾಗಿ ಚಿಂತನೆ ಮಂಡಿಸಿದರು. ಇದಾದ ನಂತರ ಬಹಳ ವಿಶಿಷ್ಟವಾಗಿ ಹಾಸನ ಜಿಲ್ಲೆಯ ಮಹೇಶ ಅವರ ಸಾರಥ್ಯದಲ್ಲಿ ದೃಶ್ಯ ಶ್ರವ್ಯ ಮಾಧ್ಯಮದ ಮೂಲಕ ಮೂಡಿಬಂದ ನಾಲ್ಕನೆ ದಿನದ ವರದಿ ವಾಚನ ಬಿತ್ತರವಾಯಿತು.. ಇದೇ ಸಂದರ್ಭದಲ್ಲಿ ಅತ್ಯುತ್ತಮವಾಗಿ ವರದಿ ವಾಚಿಸಿದ ಮಹೇಶ ತಂಡಕ್ಕೆ ಸಂಪನ್ಮೂಲ ವ್ಯಕ್ತಿಯಾದ ಶ್ರೀ ಪಕ್ಕೀರಪ್ಪ ಅವರು ಶ್ಲಾಘಿಸಿದರು. ನಂತರ ಶ್ರೀ. ರಾಜು ಅವರ ಮಾರ್ಗದರ್ಶನದಂತೆ ಪರಿಕಲ್ಪನಾನಕ್ಷೆಯ ರಚನೆ ಮಾಡಿದೆವು. ಮದ್ಯದಲ್ಲಿ ತುಮಕೂರಿನ ಸಚ್ಚೀದಾನಂದ ಅವರು ೧೦ ನೇ ತರಗತಿಯ ಜೀವನ ದೃಷ್ಟಿ ಪಾಠದ ಕ್ಲಿಷ್ಟಾಂಶಗಳ ಕುರಿತು ಮಾಹಿತಿ ನೀಡಿದರು.ನಂತರ ಶ್ರೀ ರಮೇಶ ಇವರು ಭರವಸೆ ಪದ್ಯದ ಪರಿಕಲ್ಪನಾ ನಕ್ಷೆ ಕುರಿತು ವಿಷಯ ಮಂಡನೆ ಮಾಡಿದರು
ಅದಾದ ಮೇಲೆ ರಾಜ್ಯ ಸಂಪನ್ಮೂಲ ವ್ಯಕ್ತಿಯಾದ ವೆಂಕಟೇಶ ರವರಿಂದ ಪರಿಕಲ್ಪನಾ ನಕ್ಷೆ, ಡ್ರೈವ್ ದಾಖಲು ಮಾಹಿತಿ,ಮೇಲ್ ಐಡಿ ಸಂರಕ್ಷಣೆ ಇತ್ಯಾದಿ ಗಣಕ ತೆರೆ ಅಂಶಗಳ ಬಗ್ಗೆ ಮಾಹಿತಿ ನೀಡಿದರು. ಇಷ್ಟೊತ್ತಿಗಾಗಲೇ ಸಮಯ ೧;೩೦ ಆದುದ್ದರಿಂದ ಎಲ್ಲಾ ತರಬೇತು ದಾರರು ಊಟಕ್ಕೆ ತೆರಳಿದೆವು
ಮದ್ಹ್ನಾಹದ ಅವದಿಯಲ್ಲಿ ಊಟವಾದ ನಂತರ ಶಿಕ್ಷಕರಿಗೆ ನೀಡಿದ ಪರಿಕಲ್ಪನಾ ನಕ್ಷೆಗಳನ್ನು ಮೇಲ್ ಮಾಡಿಸಿಕೊಂಡು ಅವುಗಳನ್ನು ಪರಿಶೀಲಿಸಿದರು ಆ ಪರಿಶಿಲಿಸುತ್ತಿರುವ ದೃಶ್ಯ ಈ ಕೆಳಗಿನಂತಿದೆ
ದೃಶ್ಯ -೧ ಸಂಪನ್ಮೂಲ ವ್ಯಕ್ತಿಗಳು ಪರಿಕಲ್ಪನಾ ನಕ್ಷೆ ವೀಕ್ಷಿಸುತ್ತಿರುವುದು
ನಂತರ ವೇಂಕಟೇಶ ಅವರು ಉಬಂಟು ಇನ್ಸ್ತಾಟಲ್ ,ಮತ್ತೆ ಮುಂದಿನ ಕಾರ್ಯಾಗಾರದಲ್ಲಿ ಐದು ದಿನ ಯಾವ ರೀತಿ ವಿಷಯ ಮಂಡನೆ ಮಾಡ ಬೇಕು ಎಂಬ ಮಾಹಿತಿ ತಿಳಿಸುತ್ತಾ ಉಪಯುಕ್ತ ಗಣಕಯಂತ್ರದ ಮಾಹಿತಿ ತಿಳಿಸಿದರು ಹೀಗೆ ರಾಜ್ಯ ಸಂಪನ್ಮೂಲ ತಂಡವು ನಮಗೆ ಬೇಕಾದ ಮಾಹಿತಿಯನ್ನು ತಿಳಿಸಿದರು ಎಂದು ಹೇಳಲು ನಮ್ಮ ಈ ಕೆಳಗಿನ ತಂಡವು ಹರ್ಷಿಸುತ್ತದೆ. ಆ ತಂಡ- ಶ್ರೀ ರವಿ ಎನ್. ಶ್ರೀ ರವೀಂದ್ರ ನಾಥಾಚಾರಿ ಕೆ ಪಿ. ಶ್ರೀ ರಾಜಶೇಖರ ಪಿ.ಜಿ.
ಶ್ರೀ ಎನ್ ಡಿ ಬಸವರಾಜ. ಶ್ರೀ ಸಿದ್ದಪ್ಪ ಕೆ ಎನ್
ವಂದನೆಗಳೊಂದಿಗೆ
ಮುಂದಿನ ಕಾರ್ಯಯೋಜನೆಗಳು
3 ದಿನಗಳ ಎರಡನೇ ಹಂತದ ಕಾರ್ಯಗಾರ ಜುಲೈ 13 ಕ್ಕೆ , ಗ್ರಾಮಾಂತರ ಡಯಟ್, ಬೆಂಗಳೂರಿನಲ್ಲಿ ನಿಗಧಿಯಾಗಿದೆ
ಕಲಬುರ್ಗಿ ವಿಭಾಗದ ಕನ್ನಡ ಸಂಪನ್ಮೂಲ ವ್ಯಕ್ತಿಗಳ ಕಾರ್ಯಗಾರ- 2 ಜುಲೈ 06 ರಿಂದ 10, 2015
ಕಲಿಕಾರ್ಥಿಗಳ ಮಾಹಿತಿ
ಕಲಬುರ್ಗಿ ವಿಭಾಗದ ಸಂಪನ್ಮೂಲ ವ್ಯಕ್ತಿಗಳು ತಮ್ಮ ಮಾಹಿತಿ ದಾಖಲಿಸಲು ಇಲ್ಲಿ ಒತ್ತಿರಿ
ಕಾರ್ಯಾಗಾರದಲ್ಲಿ ನಮ್ಮನ್ನು ವೀಕ್ಷಿಸಿ
ವರದಿಗಳು
ಐದು ದಿನದ ಕಾರ್ಯಾಗಾರದ ವರದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
ಮುಂದಿನ ಕಾರ್ಯಯೋಜನೆಗಳು
ಮೈಸೂರು ವಿಭಾಗದ ಕನ್ನಡ ಸಂಪನ್ಮೂಲ ವ್ಯಕ್ತಿಗಳ ಕಾರ್ಯಗಾರ- 27 -31ಜುಲೈ 2015
ಕಲಿಕಾರ್ಥಿಗಳ ಮಾಹಿತಿ
ಕಾರ್ಯಾಗಾರದಲ್ಲಿ ನಮ್ಮನ್ನು ವೀಕ್ಷಿಸಿ
ವರದಿಗಳು
ಐದು ದಿನದ ಕಾರ್ಯಾಗಾರದ ವರದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
ಮುಂದಿನ ಕಾರ್ಯಯೋಜನೆಗಳು
ಬೆಳಗಾವಿ ವಿಭಾಗದ ಕನ್ನಡ ಸಂಪನ್ಮೂಲ ವ್ಯಕ್ತಿಗಳ ಕಾರ್ಯಗಾರ 2015
ಕಲಿಕಾರ್ಥಿಗಳ ಮಾಹಿತಿ
ಕಾರ್ಯಾಗಾರದಲ್ಲಿ ನಮ್ಮನ್ನು ವೀಕ್ಷಿಸಿ
ವರದಿಗಳು
ಐದು ದಿನದ ಕಾರ್ಯಾಗಾರದ ವರದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ