ಕನ್ನಡ ಜಿಲ್ಲಾ ಹಂತದ ಕಾರ್ಯಾಗಾರ 2015-16

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
  1. [ See in English]

ಜಿಲ್ಲಾ ಹಂತದ ಕನ್ನಡ ವಿಷಯ ಶಿಕ್ಷಕರ ವೇದಿಕೆ ಕಾರ್ಯಾಗಾರಗಳು 2015-16

  1. ಕನ್ನಡ ವಿಷಯಶಿಕ್ಷಕರ ವೇದಿಕೆ ಕಾರ್ಯಗಾರ ನಡೆಯಬೇಕಿರುವ ಜಿಲ್ಲೆಗಳ ಮಾಹಿತಿ (ಶಾಲೆಗಳ ಸಂಖ್ಯೆ, ತಂಡಗಳ ಸಂಖ್ಯೆ ) ಮತ್ತು ಜಿಲ್ಲಾ ನೋಡಲ್ ಅಧಿಕಾರಿಗಳ ಮಾಹಿತಿಯನ್ನು ಈ ಕೆಳಗಿನ ಲಿಂಕ್‌ನಲ್ಲಿ ನೋಡಬಹುದು ಇಲ್ಲಿ ಕ್ಲಿಕ್ ಮಾಡಿ
  2. ಜಿಲ್ಲಾವಾರು ಸಂಪನ್ಮೂಲ ವ್ಯಕ್ತಿಗಳ ಮಾಹಿತಿಯನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

ಕನ್ನಡ ವಿಷಯ ಶಿಕ್ಷಕರ ವೇದಿಕೆ ಜಿಲ್ಲಾ ಅನುಕ್ರಮ ಕಾರ್ಯಗಾರದಲ್ಲಿ ಗಮನವಹಿಸಬೇಕಾದ ಅಂಶಗಳು

ಈ ವರ್ಷದ ಕನ್ನಡ ವಿಷಯ ಶಿಕ್ಷಕರ ಜಿಲ್ಲಾ ಅನುಕ್ರಮ ಕಾರ್ಯಾಗಾರದಲ್ಲಿ ಈ ಕೆಳಕಂಡ ಅಂಶಗಳ ಮೇಲೆ ಗಮನವಹಿಸಲಾಗುವುದು.

  1. ಕನ್ನಡ ವಿಷಯ ಶಿಕ್ಷಕರಲ್ಲಿ ಕಂಪ್ಯೂಟರ್ ಕೌಶಲ ಅಭಿವೃದ್ದಿಪಡಿಸುವುದು.
  2. ಸ್ವಕಲಿಕೆಗೆ ಮತ್ತು ತರಗತಿ ಉಪಯೋಗಕ್ಕಾಗಿ ಸಂಪನ್ಮೂಲ ರಚನೆಯ ಕಲಿಕಾ ಸಂಪನ್ಮೂಲವಾಗಿ ಅಂತರ್ಜಾಲದ ಬಳಕೆಯ ಬಗ್ಗೆ ತಿಳಿಯುವುದು
  3. ವಿದ್ಯುನ್ಮಾನ ಸಂಪನ್ಮೂಲ ಸಂಗ್ರಹಾಲಯ ರಚನೆ
  4. ಸಂವಹನಕ್ಕಾಗಿ ಇಮೇಲ್ ಬಳಕೆ ಕನ್ನಡ ವಿಷಯ ಶಿಕ್ಷಕರ ವೇದಿಕೆ
  5. ಕೊಯರ್ ಬಳಕೆ ಮತ್ತು ಕೊಯರ್ ಗೆ ಸಂಪನ್ಮೂಲ ನೆರವು ನೀಡುವುದು.
    1. ಕೊಯರ್‌ನಲ್ಲಿ ಸಂಪನ್ಮೂಲ ನಿರ್ವಹಣೆಯನ್ನು ಅರ್ಥೈಸಿಕೊಳ್ಳುವರು ಮತ್ತು ಹೊಸ ಚಟುವಟಿಕೆಗಳನ್ನು ಮತ್ತು ಅಭಿಪ್ರಾಯಗಳನ್ನು ಹಂಚಿಕೊಳ್ಳುವರು.
  6. ವಿದ್ಯುನ್ಮಾನ ಕೌಶಲಗಳನ್ನು ಅಭಿವೃದ್ದಿ ಪಡಿಸಿಕೊಳ್ಳುವರು - ಇಮೆಲ್, ಅಂತರ್ಜಾಲ ಶೋಧನೆ ಮತ್ತ ಡೌನ್‌ಲೋಡ್, ಪಠ್ಯ ರಚನೆ, ಸಂಕಲನ.

ಡಯಟ್ ನೋಡಲ್ ಅಧಿಕಾರಿಗಳ ಜವಬ್ದಾರಿಗಳು

  1. ನೋಡಲ್ ಅಧಿಕಾರಿಗಳು ಕಾರ್ಯಗಾರದಮೊದಲದಿನ ತಂಡಗಳ ಮಾಹಿತಿ ತುಂಬಲು ಇಲ್ಲಿ ಕ್ಲಿಕ್ ಮಾಡಿ . ಈ ಮಾಹಿತಿಯನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
  2. ನೋಡಲ್ ಅಧಿಕಾರಿಗಳು ಕಾರ್ಯಗಾರದ ಐದನೇ ದಿನ ಕಾರ್ಯಗಾರದ ಬಗ್ಗೆ ಡಯಟ್ ಹಿಮ್ಮಾಹಿತಿ ತುಂಬಲು ಇಲ್ಲಿ ಕ್ಲಿಕ್ ಮಾಡಿ . ಈ ಮಾಹಿತಿಯನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
  3. ಕಾರ್ಯಗಾರದ ಸಮಯದಲ್ಲಿ ಏನಾದರೂ ಸಹಾಯ ಬೇಕಿದ್ದಲ್ಲಿ koer@karnatakaeducation.org.in ವಿಳಾಸಕ್ಕೆ ಇಮೇಲ್ ಮಾಡಿ. ಅಥವಾ ತುರ್ತು ಸಹಾಯಕ್ಕಾಗಿ ವೆಂಕಟೇಶ್ ಸರ್ (ಮೊಬೈಲ್ 9945147359) ರವರಿಗೆ ಕರೆ ಮಾಡಿ .
  4. ಡಯಟ್ ನೋಡಲ್ ಅಧಿಕಾರಿಗಳು ಮತ್ತು ಸಂಪನ್ಮೂಲ ವ್ಯಕ್ತಿಗಳು ವಿಷಯ ಶಿಕ್ಷಕರ ವೇದಿಕೆ ಕಾರ್ಯಾಗಾರದ ಬಗೆಗಿನ ಡಿ.ಎಸ್.ಇ.ಆರ್.ಟಿ ಮಾರ್ಗಸೂಚಿಯನ್ನು ಓದಿಕೊಳ್ಳಬೇಕು. ಈ ಮಾರ್ಗಸೂಚಿಗಾಗಿ ಇಲ್ಲಿ ಕ್ಲಿಕ್ ಮಾಡಿ ಕಾರ್ಯಾಗಾರಕ್ಕೂ ಮುನ್ನ ಕಂಪ್ಯೂಟರ್ ಲ್ಯಾಬ್ ಸುಸ್ಥಿತಿಯಲ್ಲಿರುವುದನ್ನು ಖಚಿತಪಡಿಸಿಕೊಳ್ಳಬೇಕು.
  5. ಕಾರ್ಯಗಾರ ನಡೆಯುವ ಐ.ಸಿ.ಟಿ ಲ್ಯಾಬ್‌ನಲ್ಲಿ ಹೊಸ ಉಬುಂಟು ತಂತ್ರಾಂಶ 14.04 ಅನುಸ್ಥಾಪನೆ ಗೊಂಡಿರಬೇಕು . ಉಬುಂಟು ಇನ್‌ಸ್ಟಾಲ್‌ ಮಾಡುವ ಬಗೆಯನನ್ಉ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
  6. ವಿಷಯ ಶಿಕ್ಷಕರ ವೇದಿಕೆ ತಂತ್ರಜ್ಞಾನಾಧಾರಿತವಾಗಿರುವುದರಿಂದ ಕಂಪ್ಯೂಟರ್ ಗಳ ಲಭ್ಯತೆ ಮತ್ತು ಉತ್ತಮ ಇಂಟರ್ ನೆಟ್ ಸಂಪರ್ಕ' ತುಂಬಾ ಮುಖ್ಯವಾದದ್ದು . ಸಂಪನ್ಮೂಲ ವ್ಯಕ್ತಿಗಳು ಮತ್ತು ಡಯಟ್ ಜಿಲ್ಲಾ ನೋಡಲ್ ಅಧಿಕಾರಿಗಳು ಒಬ್ಬ ಶಿಕ್ಷಕರಿಗೆ ಒಂದು ಕಂಪ್ಯೂಟರ್ ಅನುಪಾತದಲ್ಲಿ ಕಂಪ್ಯೂಟರ್ ಗಳು ಲಭ್ಯತೆ ಮತ್ತು ಕನಿಷ್ಟ 8 mbps ಇಂಟರ್ ನೆಟ್ ಸಂಪರ್ಕ ಸುಸ್ಥಿತಿಯಲ್ಲಿರುವ ಬಗ್ಗೆ ಖಚಿತಪಡಿಸಿಕೊಳ್ಳುವುದು .
  7. ಸಮಪರ್ಕ ಕಲಿಕೆಗೆ ಅವಕಾಶವಾಗುವಂತೆ ತಂಡಗಳಲ್ಲಿನ ಕಲಿಕಾರ್ಥಿಗಳ ಸಂಖ್ಯೆ ಯನ್ನು 20 ಕ್ಕೆ ಮಿತಿಗೊಳಿಸಿಕೊಳ್ಳುವುದು ಉತ್ತಮ .

ಸಂಪನ್ಮೂಲ ವ್ಯಕ್ತಿಗಳ ಜವಾಬ್ದಾರಿಗಳು

ಕಾರ್ಯಗಾರದ ಸಮಯದಲ್ಲಿ ಸಂಪನ್ಮೂಲ ವ್ಯಕ್ತಿಗಳು ನಿಗಧಿಪಡಿಸಿರುವ ಕಾರ್ಯಸೂಚಿಯನ್ನು ತಪ್ಪದೇ ಅನುಷ್ಟಾನಗೊಳಿಸಬೇಕು. ಈ ಕೆಳಕಂಡ ಚಟುವಟಿಕೆಗಳು ಕಡ್ಡಾಯವಾಗಿ ಪೂರ್ಣಗೊಳ್ಳಬೇಕು.

  1. ಎಲ್ಲಾ ಕಲಿಕಾರ್ಥಿಗಳು ಇಮೇಲ್ ಬಳಕೆ ಮಾಡುತ್ತಿರುವುದನ್ನು ಹಾಗು ವಿಷಯ ಶಿಕ್ಷಕರ ವೇದಿಕೆಗೆ ಇಮೇಲ್ ಕಳುಹಿಸುತ್ತಿರುವ ಬಗ್ಗೆ ಗಮನವಹಿಸುವುದು .
    1. ಇಮೇಲ್ ಐಡಿ ಹೊಂದಿರದ ಶಿಕ್ಷಕರಿಗೆ ಮೊದಲನೇ ದಿನ ತಪ್ಪದೇ ಇಮೇಲ್ ಐಡಿ ರಚಿಸಿಕೊಡಬೇಕು.ಮತ್ತು ಎಲ್ಲಾ ಕಲಿಕಾರ್ಥಿಗಳ ಇಮೇಲ್ ಐಡಿಯನ್ನು ಕನ್ನಡ ವಿಷಯ ಶಿಕ್ಷಕರ ವೇದಿಕೆಗೆ ಸೇರಿಸಬೇಕು. ಗುಂಪಿಗೆ ಸೇರಿಸುವ ಬಗೆಗಿನ ಕೈಪಿಡಿಯನ್ನು ಇಲ್ಲಿ ನೋಡಬಹುದು
    2. ಪ್ರತಿಯೊಬ್ಬರು ತಮ್ಮ ಡಾಕ್ಯುಮೆಂಟ್‌ಗಳನ್ನು ಇಮೆಲ್ ಗೆ ಲಗತ್ತಿಸುವುದು ಮತ್ತು ಇತರರು ಕಳುಹಿಸಿದ ಡಾಕ್ಯುಮೆಂಟ್‌ಗಳನ್ನು ಡೌನ್‌ಲೋಡ್ ಮಾಡುವುದನ್ನು ಕಲಿಯಬೇಕು.
  2. ಕಲಿಕಾರ್ಥಿಗಳು ವೈಯುಕ್ತಿಕ ಸಂಪನ್ಮೂಲ ಸಂಗ್ರಾಹಾಲಯದ ಮೂಲಕ ಡಾಕ್ಯಮೆಂಟ್ ರಚಿಸುವುದು .
  3. ಕಲಿಕಾರ್ಥಿಗಳು ವೆಬ್ ಲಿಂಕ್‌ಗಳು ಮತ್ತು ಇತರೇ ವಿದ್ಯುನ್ಮಾನ ಸಂಪನ್ಮೂಲಗಳನ್ನು ಇಮೇಲ್ ಮೂಲಕ ವೇದಿಕೆಗೆ ಹಂಚಿಕೊಳ್ಳುವುದು .
  4. ಕಲಿಕಾರ್ಥಿಗಳು ಕೊಯರ್ ಪುಟದ ಬಗ್ಗೆ ತಿಳಿದುಕೊಳ್ಳುವುದು, ಕೊಯರ್ ಪುಟಕ್ಕೆ ಸೂಕ್ತವಾಗುವ ಸಂಪನ್ಮೂಲಗಳನ್ನು ಗುರುತಿಸಿ ಕೊಯರ್ ಗೆ 'ಸಂಪನ್ಮೂಲ ನರೆವು' ನೀಡುವುದು.
  5. ಕಲಿಕಾರ್ಥಿಗಳು ಕೊಯರ್ ನ ನೆರವು ಬಟನ್ ಮೂಲಕ ಬೋಧನಾ ಚಟುವಟಿಕೆಗಳನ್ನು ಹಂಚಿಕೊಳ್ಳುವುದು.
  6. ಕಾರ್ಯಗಾರದ ವರದಿಗಳು ಮತ್ತು ಚಿತ್ರಗಳನ್ನು ಆಯಾ ಜಿಲ್ಲಾ ಪುಟಕ್ಕೆ ಸೇರಿಸುವುದು (ಜಿಲ್ಲಾ ಮಾಹಿತಿಯ ಕೋಷ್ಟಕವನ್ನು ನೋಡಿ).
    1. ಪ್ರತಿ ದಿನದ ವರದಿಗಳು
    2. ಕಾರ್ಯಗಾರದ ಚಿತ್ರಗಳು ( ಗೂಗಲ್ ಪೋಟೋ ಆಲ್ಬಮ್ ಗೆ ಚಿತ್ರಗಳನ್ನು ಅಪಲೋಡ್ ಮಾಡಬೇಕು)
  7. ಕಾರ್ಯಗಾರದ ಐದನೇ ದಿನ ಕಲಿಕಾರ್ಥಿಗಳ ಹಿಮ್ಮಾಹಿತಿ ಹಾಳೆ ಯನ್ನು ತಪ್ಪದೇ ತುಂಬಿಸಬೇಕು

ಸಂಪನ್ಮೂಲಗಳು ಮತ್ತು ಕೈಪಿಡಿಗಳು

  1. ಕನ್ನಡ ಭಾಷಾ ಶಿಕ್ಷಕರ ವೇದಿಕೆ ಟಿಪ್ಪಣಿ
  2. ಅಂತರ್ಜಾಲದಲ್ಲಿ ಬ್ರೌಸಿಂಗ್ ಮಾಡುವುದು
  3. ಅಂತರ್ಜಾಲದಲ್ಲಿ ಸಂಪನ್ಮೂಲ ಹುಡುಕುವುದು
  4. ಬೇಸಿಕ್_Ubuntu_ಕೈಪಿಡಿ
  5. ಪಠ್ಯ ಸಂಪಾದನೆ ಬಗೆಗಿನ ಸಾಹಿತ್ಯ
  6. ಬೇಸಿಕ್ Libre office ಮತ್ತು ಕನ್ನಡ ಟೈಪಿಂಗ್ ಕೈಪಿಡಿ ಡೌನ್ ಲೊಡ್ ಮಾಡಲುಇಲ್ಲಿ ಒತ್ತಿ
  7. E-mail ಕೈಪಿಡಿಗಾಗಿ ಇಲ್ಲಿ ಒತ್ತಿ
  8. ವಿದ್ಯನ್ಮಾನ ವೈಯುಕ್ತಿಕ ಸಂಪನ್ಮೂಲ
  9. ಕನ್ನಡದಲ್ಲಿ GIMP ಕೈಪಿಡಿ ಡೌನ್ ಲೊಡ್ ಮಾಡಲುಇಲ್ಲಿ ಒತ್ತಿ
  10. ಪ್ರೀಮೈಂಡ್ ಕೈಪಿಡಿ
  11. ಕೊಯರ್_ಹಿನ್ನೆಲೆ_ಟಪ್ಪಣಿ
  12. ಸೇತುಬಂಧ ಕಾರ್ಯಕ್ರಮ ಚಟುವಟಿಕೆಗಳು ಮತ್ತು ಸಾಮಗ್ರಿಗಳಿಗಾಗಿ ಇಲ್ಲಿ ನೋಡಿ
  13. ಗೂಗಲ್ ಮ್ಯಾಪ್, ಟ್ರಾನ್ಸಲೇಟ್ ಬಳಕೆಯ ಕೈಪಿಡಿ

ಓದಲು ಲೇಖನ
ಭಾರತೀಯ ಭಾಷಾ ಬೋಧನೆ ಬಗೆಗಿನ ಎನ್.ಸಿ.ಎಫ್ ಪೊಶೀಷನ್ ಪೇಪರ್

ಕಾರ್ಯಾಗಾರದ ನಂತರದ ಚಟುವಟಿಕೆ

  • ಕಲಿಕಾರ್ಥಿಗಳು ಪ್ರತಿದಿನ ತಪ್ಪದೇ ಕನ್ನಡ ವಿಷಯ ಶಿಕ್ಷಕರ ವೇದಿಕೆ ಇಮೇಲ್ ನೋಡಬೇಕು
  • ನಿರಂತರವಾಗಿ ಕೊಯರ್ ವೆಬ್ ಪುಟವನ್ನು ನೋಡುವುದು ಮತ್ತು ವಿಷಯಶಿಕ್ಷಕರ ವೇದಿಕೆಗೆ ಸಂಪನ್ಮೂಲ ನೆರವು ನೀಡುವುದು .

ಜಿಲ್ಲಾ ಕಾರ್ಯಗಾರದ ವರದಿಗಳು ಮತ್ತು ಪೋಟೋಗಳು

ಈ ಕೆಳಗಿನ ಕೋಷ್ಟಕದಲ್ಲಿನ ಜಿಲ್ಲೆಯ ಮೇಲೆ ಕ್ಲಿಕ್ ಮಾಡುವ ಮೂಲಕ ಜಿಲ್ಲಾ ಹಂತದ ಕನ್ನಡ ವಿಷಯ ಶಿಕ್ಷಕರ ವೇದಿಕೆ ಜಿಲ್ಲಾಹಂತದ ಅನುಕ್ರಮ ಕಾರ್ಯಾಗಾರದ ಮಾಹಿತಿ ಪಡೆಯಬಹುದು

ಬೆಂಗಳೂರು ವಿಭಾಗ ಬೆಂಗಳೂರು ಗ್ರಾಮಾಂತರ Davanagere Ramanagara Shimoga Tumkur – Madhugiri
ಬೆಳಗಾವಿ ವಿಭಾಗ Bijapur Gadag Uttara Kannada
ಕಲಬುರ್ಗಿ ವಿಭಾಗ Bellary Bidar Kalburgi
ಮೈಸೂರು ವಿಭಾಗ Chamarajanagara Chikmagalur Hassan Kodagu Mandya Mysore

--