ಕನ್ನಡ ವಿಷಯ ಶಿಕ್ಷಕರ ವೇದಿಕೆ ಕಾರ್ಯಾಗಾರ- 2015-16
ಜೂನ್ ೨೦೧೫ರ ಕನ್ನಡ ವಿಷಯ ಶಿಕ್ಷಕರ ವೇದಿಕೆ SRP ಕಾರ್ಯಾಗಾರ
ಕಾರ್ಯಾಸೂಚಿ
- ಕಾರ್ಯಾಗಾರದ ಕಾರ್ಯಾಸೂಚಿಯನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
- ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಗಳ ವಿವರವನ್ನು ಇಲ್ಲಿ ನೋಡಬಹುದು
ಸಂಪನ್ಮೂಲಗಳು ಮತ್ತು ಕೈಪಿಡಿಗಳು
- ಕನ್ನಡ ಭಾಷಾ ಶಿಕ್ಷಕರ ವೇದಿಕೆ ಟಿಪ್ಪಣಿ
- ಅಂತರ್ಜಾಲದಲ್ಲಿ ಬ್ರೌಸಿಂಗ್ ಮಾಡುವುದು
- ಅಂತರ್ಜಾಲದಲ್ಲಿ ಸಂಪನ್ಮೂಲ ಹುಡುಕುವುದು
- ಬೇಸಿಕ್_Ubuntu_ಕೈಪಿಡಿ
- ಪಠ್ಯ ಸಂಪಾದನೆ ಬಗೆಗಿನ ಸಾಹಿತ್ಯ
- ಬೇಸಿಕ್ Libre office ಮತ್ತು ಕನ್ನಡ ಟೈಪಿಂಗ್ ಕೈಪಿಡಿ ಡೌನ್ ಲೊಡ್ ಮಾಡಲುಇಲ್ಲಿ ಒತ್ತಿ
- E-mail ಕೈಪಿಡಿಗಾಗಿ ಇಲ್ಲಿ ಒತ್ತಿ
- ವಿದ್ಯನ್ಮಾನ ವೈಯುಕ್ತಿಕ ಸಂಪನ್ಮೂಲ
- ಕನ್ನಡದಲ್ಲಿ GIMP ಕೈಪಿಡಿ ಡೌನ್ ಲೊಡ್ ಮಾಡಲುಇಲ್ಲಿ ಒತ್ತಿ
- ಪ್ರೀಮೈಂಡ್ ಕೈಪಿಡಿ
- ಕೊಯರ್_ಹಿನ್ನೆಲೆ_ಟಪ್ಪಣಿ
- ಸೇತುಬಂಧ ಕಾರ್ಯಕ್ರಮ ಚಟುವಟಿಕೆಗಳು ಮತ್ತು ಸಾಮಗ್ರಿಗಳಿಗಾಗಿ ಇಲ್ಲಿ ನೋಡಿ
- ಗೂಗಲ್ ಮ್ಯಾಪ್, ಟ್ರಾನ್ಸಲೇಟ್ ಬಳಕೆಯ ಕೈಪಿಡಿ
ಓದಲು ಲೇಖನ
ಭಾರತೀಯ ಭಾಷಾ ಬೋಧನೆ ಬಗೆಗಿನ ಎನ್.ಸಿ.ಎಫ್ ಪೊಶೀಷನ್ ಪೇಪರ್
ಅಭಿಪ್ರಾಯ
- ಈ ಕಾರ್ಯಗಾರದ ಬಗೆಗೆ ನಿಮ್ಮ ಅಭಿಪ್ರಾಯ ದಾಖಲಿಸಲು ಇಲ್ಲಿ ಒತ್ತಿ
- ಕಲಿಕಾರ್ಥಿಗಳು ದಾಖಲಿಸಿರುವ ಕಾರ್ಯಗಾರದ ಬಗೆಗಿನ ಹಿಮ್ಮಾಹಿತಿಯನ್ನು ಇಲ್ಲಿ ನೋಡಬಹುದು
ವರದಿಗಳು
ಐದು ದಿನದ ಕಾರ್ಯಾಗಾರದ ವರದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
ಮುಂದಿನ ಕಾರ್ಯಯೋಜನೆಗಳು
ಈ ಕಾರ್ಯಗಾರ ನಂತರ ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಗಳು ವಿಭಾಗ ಮಟ್ಟದಲ್ಲಿ ನಡೆಯುವ MRP ಕಾರ್ಯಾಗಾರದಲ್ಲಿ ಜಿಲ್ಲಾ ಮಟ್ಟದ ಸಂಪನ್ಮೂಲ ವ್ಯಕ್ತಿಗಳಿಗೆ 5ಮತ್ತು 3 ದಿನಗಳ ತರಬೇತಿಯನ್ನು ನೀಡುವರು.
ಕನ್ನಡ ವಿಷಯ ಶಿಕ್ಷಕರ ವೇದಿಕೆ MRP ಕಾರ್ಯಾಗಾರಗಳು
ಕಾರ್ಯಾಸೂಚಿ
ಸಂಪನ್ಮೂಲಗಳು ಮತ್ತು ಕೈಪಿಡಿಗಳು
- ಕನ್ನಡ ಭಾಷಾ ಶಿಕ್ಷಕರ ವೇದಿಕೆ ಟಿಪ್ಪಣಿ
- ಅಂತರ್ಜಾಲದಲ್ಲಿ ಬ್ರೌಸಿಂಗ್ ಮಾಡುವುದು
- ಅಂತರ್ಜಾಲದಲ್ಲಿ ಸಂಪನ್ಮೂಲ ಹುಡುಕುವುದು
- ಬೇಸಿಕ್_Ubuntu_ಕೈಪಿಡಿ
- ಪಠ್ಯ ಸಂಪಾದನೆ ಬಗೆಗಿನ ಸಾಹಿತ್ಯ
- ಬೇಸಿಕ್ Libre office ಮತ್ತು ಕನ್ನಡ ಟೈಪಿಂಗ್ ಕೈಪಿಡಿ ಡೌನ್ ಲೊಡ್ ಮಾಡಲುಇಲ್ಲಿ ಒತ್ತಿ
- E-mail ಕೈಪಿಡಿಗಾಗಿ ಇಲ್ಲಿ ಒತ್ತಿ
- ವಿದ್ಯನ್ಮಾನ ವೈಯುಕ್ತಿಕ ಸಂಪನ್ಮೂಲ
- ಕನ್ನಡದಲ್ಲಿ GIMP ಕೈಪಿಡಿ ಡೌನ್ ಲೊಡ್ ಮಾಡಲುಇಲ್ಲಿ ಒತ್ತಿ
- ಪ್ರೀಮೈಂಡ್ ಕೈಪಿಡಿ
- ಕೊಯರ್_ಹಿನ್ನೆಲೆ_ಟಪ್ಪಣಿ
- ಸೇತುಬಂಧ ಕಾರ್ಯಕ್ರಮ ಚಟುವಟಿಕೆಗಳು ಮತ್ತು ಸಾಮಗ್ರಿಗಳಿಗಾಗಿ ಇಲ್ಲಿ ನೋಡಿ
- ಗೂಗಲ್ ಮ್ಯಾಪ್, ಟ್ರಾನ್ಸಲೇಟ್ ಬಳಕೆಯ ಕೈಪಿಡಿ
ಓದಲು ಲೇಖನ
ಭಾರತೀಯ ಭಾಷಾ ಬೋಧನೆ ಬಗೆಗಿನ ಎನ್.ಸಿ.ಎಫ್ ಪೊಶೀಷನ್ ಪೇಪರ್
ಬೆಂಗಳೂರು ವಿಭಾಗದ ಕನ್ನಡ ಸಂಪನ್ಮೂಲ ವ್ಯಕ್ತಿಗಳ ಕಾರ್ಯಗಾರ-೧ ಜೂನ್ 29 ರಿಂದ ಜುಲೈ 3, 2015
ಕಲಿಕಾರ್ಥಿಗಳ ಮಾಹಿತಿ
ಕಾರ್ಯಾಗಾರದಲ್ಲಿ ನಮ್ಮನ್ನು ವೀಕ್ಷಿಸಿ
See us at the Workshop
ಅಭಿಪ್ರಾಯ
ವರದಿಗಳು
ಐದು ದಿನದ ಕಾರ್ಯಾಗಾರದ ವರದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
ಕಲಬುರ್ಗಿ ವಿಭಾಗದ ಕನ್ನಡ ಸಂಪನ್ಮೂಲ ವ್ಯಕ್ತಿಗಳ ಕಾರ್ಯಗಾರ- 2 ಜುಲೈ 06 ರಿಂದ 10, 2015
ಕಲಿಕಾರ್ಥಿಗಳ ಮಾಹಿತಿ
ಕಲಬುರ್ಗಿ ವಿಭಾಗದ ಸಂಪನ್ಮೂಲ ವ್ಯಕ್ತಿಗಳು ತಮ್ಮ ಮಾಹಿತಿ ದಾಖಲಿಸಲು ಇಲ್ಲಿ ಒತ್ತಿರಿ
ಕಾರ್ಯಾಗಾರದಲ್ಲಿ ನಮ್ಮನ್ನು ವೀಕ್ಷಿಸಿ
ಐದು ದಿನದ ಕಾರ್ಯಾಗಾರದ ವರದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
ಮುಂದಿನ ಕಾರ್ಯಯೋಜನೆಗಳು
ಮೈಸೂರು ವಿಭಾಗದ ಕನ್ನಡ ಸಂಪನ್ಮೂಲ ವ್ಯಕ್ತಿಗಳ ಕಾರ್ಯಗಾರ ಆಗಸ್ಟ್ 24-282015
ಕಲಿಕಾರ್ಥಿಗಳ ಮಾಹಿತಿ
ಕಲಿಕಾರ್ಥಿಗಳ ಮಾಹಿತಿ ದಾಖಲಿಸಲು ಇಲ್ಲಿ ಕ್ಲಿಕ್ ಮಾಡಿ
ಕಾರ್ಯಾಗಾರದ ಹಿಮ್ಮಾಹಿತಿ
ಕಾರ್ಯಾಗಾರದ ಬಗೆಗಿನ ಹಿಮ್ಮಾಹಿತಿ ನೀಡಲು ಇಲ್ಲಿ ಕ್ಲಿಕ್ ಮಾಡಿ
ಕಾರ್ಯಾಗಾರದಲ್ಲಿ ನಮ್ಮನ್ನು ವೀಕ್ಷಿಸಿ
ವರದಿಗಳು
2ನೇ ದಿನದ ವರದಿ
ಮೈಸೂರು ವಿಭಾಗ ಮಟ್ಟದ ಕನ್ನಡ ಎಸ್ ಟಿ ಎಫ್ ಸಂಪನ್ಮೂಲ ವ್ಯಕ್ತಿಗಳ ತರಬೇತಿ ಕಾರ್ಯಾಗಾರ ೨೦೧೫-೧೬
ಬೆಂಗಳೂರು ಗ್ರಾಮಾಂತರ ಡಯಟ್
ಮೈಸೂರು ತಂಡದವರಿಂದ
ದಿನಾಂಕ ೨೫-೦೮-೨೦೧೫ ರಂದು ಬೆಳಿಗ್ಗೆ ೯ ೩೦ಕ್ಕೆ ಸರಿಯಾಗಿ ರಮೇಶ್ ಭಟ್ಟ ರ ಸ್ವಾಗತದೊಂದಿಗೆ ತರಬೇತಿಯು ಪ್ರಾರಂಭವಾಯಿತು.
ಹಿಂದಿನ ದಿನದ ಸಂಪೂರ್ಣ ಕಾರ್ಯಕ್ರಮದ ಸವಿವರವನ್ನು ಕೊಡಗು ಜಿಲ್ಲೆಯ ತಂಡದ ಸದಸ್ಯರಾದ ಶ್ರೀ ವೆಂಕತನಾಯಕ್ ರವರ ಪ್ರಾರ್ಥನೆಯೊಂದಿಗೆ ಶುಭಾರಂಭ ಮಾಡಲಾಯಿತು .
ಶ್ರೀಯುತ ಮಂಜುನಾಥರವರಿಂದ ವರದಿಯ ಮೆಲುಕು ಹಾಕಲಾಯಿತು . ವರದಿಯು ಸಂಪೂರ್ಣ ವಿಷಯಗಳಿಂದ ಕೂಡಿದ್ದು ಉತ್ತಮವಾಗಿತ್ತು
೧.ಮೊದಲ ಅವಧಿಯಲ್ಲಿ ಶ್ರೀಯುತ ವೆಂಕಟೇಶ್ ರವರು ಒಬಂಟು ಮತ್ತು ಎಡುಬಂಟುಗಳಿಗಿರುವ ವ್ಯತ್ಯಾಸವನ್ನು ತಿಳಿಸಿದರು . ಎಡುಬಂಟು ಶೈಕ್ಷಣಿಕವಾಗಿ ಎಷ್ಟು ಉತ್ತಮ ಎಂಬುದನ್ನು ತಿಳಿಸಿಕೊಟ್ಟರು .ಇಲಾಖೆಯ ಎಲ್ಲಾ ಕಛೇರಿಗಳಲ್ಲಿ ಬಹಳ ಉಪಯುಕ್ತವಾಗಿದೆ ಎಂಬುದನ್ನು ಅನೇಕ ಉದಾಹರಣೆಗಳ ಮೂಲಕ ತಿಳಿಸಿಕೊಟ್ಟರು .ಒಟ್ಟಾರೆ ಎಡುಬಂಟು ಶಾಲೆಗಳಲ್ಲಿ ಮತ್ತು ನಾವು ವೈಯಕ್ತಿಕವಾಗಿ ಬಳಸಲು ವೈರಸ್ ಮುಕ್ತವಾಗಿ ಅನುಕೂಲವಾಗಿರುತ್ತದೆ ಎಂಬುದನ್ನು ಸವಿವರವಾಗಿ ತಿಳಿಸಿಕೊಟ್ಟರು .
೨. ಎರಡನೇ ಅವಧಿಯಲ್ಲಿ ಪಠ್ಯಬೋಧನೆಗೆ ಅಂತರ್ಜಾಲವನ್ನು ಹೇಗೆ ಸಿದ್ಧಪಡಿಸಿಕೊಂಡು ಉಪಯೋಗಿಸಬಹುದೆಂಬುದನ್ನು ಸವಿವರವಾಗಿ ರಮೇಶ್ ಭಟ್ ರವರು ತಿಳಿಸಿಕೊಟ್ಟರು . ನಂತರ ಅಪ್ಲಿಕೇಶನ್ ಮೂಲಕ ಪೇಜ್ ತೆರೆಯುವುದು ಸೇವ್ ಮಾಡುವುದು, ಇಮೇಜಸ್ ಕಾಫಿ ಮಾಡುವುದು
Hyper link ಮೂಲಕ ಹೇಗೆ ವೆಬ್ ಪೇಜ್ ಗೆ ಹೋಗಬಹುದು ಎಂಬುದನ್ನು ತಿಳಿಸಿಕೊಟ್ಟರು .
ಪಾಠಗಳನ್ನು ಹಂಚಿಕೆ ಮಾಡಿಕೊಟ್ಟು ಪ್ರತಿಯೊಂದು ಜಿಲ್ಲೆಗೂ ತಂಡಗಳನ್ನು ಮಾಡಿ ೧೦ನೇ ತರಗತಿಯ ಪಠ್ಯ ಕ್ರಮದಲ್ಲಿನ ವಿಷಯಗಳನ್ನು ಹಂಚಿಕೆ ಮಾಡಿದರು .ಹಾಗು ಈ ಹಂಚಿಕೆ ಮಾಡಿದ ಪಾಠಗಳ ಮೇಲೆ ಪ್ರಾಯೋಗಿಕ ಚಟುವಟಿಕೆಗಳನ್ನು ಮಾಡಲಾಯಿತು. ತಾವು ಸಂಗ್ರಹಿಸಿದ ಪಾಟಗಳ ವಿವರಗಳನ್ನು ತಮ್ಮ ಇ ಮೇಲ್ ಮುಖಾಂತರ ಹಂಚಿಕೊಳ್ಳುವಂತೆ ತಿಳಿಸಿದರು
ನಂತರ ಊಟದ ವಿರಾಮ
ಮದ್ಯಾಹ್ನದ ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ರವಿಕುಮಾರ್ ರವರು ಇ ಮೇಲ್ಬಗ್ಗೆ ತಿಳಿಸಿಕೊಟ್ಟರು ಪ್ರತಿಯೊಬ್ಬರು email ಹೊಂದಿರುವಬಗ್ಗೆ ೊಂಡು ಇಲ್ಲದವರ ಖಾತೆಯನ್ನು ತೆರೆಯಲಾಯಿತು. ನಂತರ ಇ ಮೇಲ್ ನಲ್ಲಿ ಸೆಟ್ಟಿಂಗ್ಸ್ , ಫೋಟೋ ಅಪ್ ಲೋಡ್ , ಸಿಗನೇಚರ್ ಹೊಂದುವುದು, ಪಾಸ್ ವರ್ಡ್ ಬದಲಾಯಿಸುವ ಬಗ್ಗೆ ತಿಳಿಸಿಕೊಟ್ಟರು, ಎಲ್ಲರು ಎಸ್ ಟಿ ಎಫ್ ಗೂಗಲ್ ಗ್ರೂಪ್ ಮೂಲಕ ತಮ್ಮ ಇಮೇಲ್ ಗಳನ್ನು ಪರಿಶೀಲಿಸಿಕೊಂಡು ಮೇಲ್ ಮಾಡುವಂತೆ ಪ್ರಾಯೋಗಿಕ ತರಬೇತಿಗೆ ಬಿಡಲಾಯಿತು. ಎಲ್ಲಾ ಶಿಬಿರಾರ್ಥಿಗಳಿಗೂ ಪಾಠಗಳ ಬಗ್ಗೆ ವಿವರ ಸಂಗ್ರಹಿಸಲಾಯಿತು .
ಪರಿಕಲ್ಪನಾ ನಕ್ಷೆ
ನಂತರ ರಮೇಶ್ ಭಟ್ಟರವರು ಮೈಂಡ್ ಮ್ಯಾಪ್ ಬಗ್ಗೆ ಹೇಗೆ ಮಾಡುವುದು ಅದರಿಂದ ಆಗುವ ಪ್ರಯೂಜನಗಳ ಬಗ್ಗೆ ಹಂತ ಹಂತವಾಗಿ ತಿಳಿಸಿಕೊಟ್ಟರು
Application-------Office------Free Maind ಮೂಲಕ ಪರಿಕಲ್ಪನಾ ನಕ್ಷೆಯನ್ನು ತಯಾರು ಮಾಡುವ ಬಗ್ಗೆ ತಿಳಿಸಿಕೊಟ್ಟರು ನಂತರ Maind Map ಅನ್ನು ಎಲ್ಲಾ ಸಂಪನ್ಮೂಲ ವ್ಯಕ್ತಿಗಳು ತಮ್ಮ ತಮ್ಮ ಗಣಕ ಯಂತ್ರದಲ್ಲಿ ವಿವಿಧ ವಿನ್ಯಾಸದ ವರ್ಣರಂಜಿತ ನಕ್ಷೆಗಳನ್ನು ಮೂಡಿಸಿ ಸಕ್ರೀಯವಾಗಿ ಪಾಲ್ಗೊಂಡು ಆ ದಿನದ ಕಾರ್ಯಕ್ರಮಕ್ಕೆ ಮಂಗಳ ಹಾಡಿದರು .
ಮೈಸೂರು ವಿಭಾಗ ಮಟ್ಟದ ಎಸ್ ಟಿ ಎಫ್ ಕನ್ನಡ ತರಬೇತಿ ಕಾರ್ಯಾಗಾರ
ಬೆಂಗಳೂರು ಗ್ರಾಮಾಂತರ ಡಯಟ್ ರಾಜಾಜಿನಗರ ಬೆಂಗಳೂರು
೩ನೇ ದಿನದ ವರದಿ
ಜ್ಞಾನವೇ ಶಕ್ತಿ ಎಂಬ ಮಾತಿಲ್ಲವೇ ? ಹೌದು ಜ್ಞಾನದ ಮೂಲಕವೇ ನಮ್ಮೊಳಗಿನ ಶಕ್ತಿ ಸಂಚಾರವಾಗುವುದು.
ನಿಜಕ್ಕೂ ಮನುಜನಲ್ಲಿ ಅಡಗಿದೆ . ಅಗಾಧ ಶಕ್ತಿ , ಅಪಾರ ಬಲ! ಇದನ್ನು ಅರಿಯ ಬೇಕಾಗಿದೆ ಅಷ್ಟೇ
ಇಂತಹ ಜ್ಞಾನ ಸಂಗ್ರಹಣಾ ಕಾರ್ಯಕ್ಕಾಗಿ ನಮ್ಮ ಶಿಕ್ಷಣ ಇಲಾಖೆ ಹಲವಾರು ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸುತ್ತ ಬಂದಿದೆ . ಇಂತಹ ಕಾರ್ಯಕ್ರಮಗಳಲ್ಲಿ ಪ್ರಸ್ತುತ ಎಸ್ ಟಿ ಎಫ್ ತರಬೇತಿ ಕಾರ್ಯಾಗಾರವೂ ಸಹ ಒಂದು .
ಸಿಲಿಕಾನ್ ಸಿಟಿ , ಕಂಪ್ಯೂಟರ್ ನಗರ ಎಂದೇ ಪ್ರಖ್ಯಾತವಾದ ಕರುನಾಡಿನ ರಾಜಧಾನಿ ಬೆಂಗಳೂರಿನ ರಾಜಾಜಿನಗರದ ಗ್ರಾಮಾಂತರ ಶಿಕ್ಷಕ ಶಿಕ್ಷಣ ತರಬೇತಿ ಕೇಂದ್ರದಲ್ಲಿ ಕನ್ನಡ ಭಾಷಾ ವಿಷಯ ಶಿಕ್ಷಕ ವೇದಿಕೆಯ ವತಿಯಿಂದ ಪ್ರಸ್ತುತಕ್ಕೆ ಅವಶ್ಯಕವಿರುವ ಗಣಕ ಯಂತ್ರದ ಮುಖೇನ ಭಾಷಾ ಬೋಧನೆಯ ವಿಶಿಷ್ಟ ಕಾರ್ಯಾಗಾರದ ಮೂರನೇಯ ದಿನ ೯:೩೦ ರ ಸಮಯಕ್ಕೆ ಸರಿಯಾಗಿ ಸಂಪನ್ಮೂಲ ವ್ಯಕ್ತಿ ರಮೇಶ್ ಭಟ್ ರವರ ಸ್ವಾಗತದೊಂದಿಗೆ ತರಬೇತಿ ಕಾರ್ಯಕ್ರಮ ಆರಂಭ ವಾಯಿತು .ಮೈಸೂರು ತಂಡದ ಶ್ರೀಯುತ ಸಂಜಯ್ ಕುಮಾರ್ ರವರು ಕಾಲಭೈರವೇಶ್ವರನನ್ನು ಪ್ರಾಥಿFಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು . ನಂತರ ಅದೇ ತಂಡದ ಹಿರಿಯರಾದ ಶ್ರೀಯುತ ಶ್ರೀಕಂಠ ಶೆಟ್ಟ್ರು ಬದುಕಿನಲ್ಲಿ ಹಾಸುಹೊಕ್ಕಾಗಿರುವ ನಗುವಿನ ಮಹತ್ವದ ಬಗ್ಗೆ ಡಿ.ವಿ.ಜಿ ಯವರ
ಕಗ್ಗದ ಪದ್ಯವನ್ನು ಉದಾಹರಿಸುತ್ತ ಅಥFಪೂಣFವಾಗಿ ಚಿಂತನ ಕಾರ್ಯಕ್ರಮವನ್ನು ನಡೆಸಿಕೊಟ್ಟರು . ಅದೇ ತಂಡದ ಶ್ರೀಯುತ ಆನಂದ್ ರವರು ಎರಡನೇ ದಿನದ ವರದಿಯನ್ನು ಗಣಕ ಯಂತ್ರದಲ್ಲಿ ದಾಖಲಿಸಿ ಬಿಳಿ ಪರದೆಯ ಮೇಲೆ ಪ್ರದಶಿFಸುತ್ತಾ ವಾಚಿಸಿದರು.
ಮೊದಲನೇ ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿ ಶ್ರಿಯುತ ವೆಂಕಟೇಶ್ ರವರು ಮನೋನಕ್ಷೆ ಯನ್ನು ತಯಾರಿಸಲು ಬಳಸಬೇಕಾದ ಕೀ ಗಳ ಬಗ್ಗೆ ತಿಳಿಸಿ ಅದನ್ನು ಉಳಿಸಿಕೊಳ್ಳುವುದರ ಬಗ್ಗೆ ತಿಳಿಸಿದರು ಹಾಗೂ ಇದನ್ನು ಇಮೇಜ್ ಆಗಿ ಪರಿವತಿFಸಲು ಸಹಾಯಕ ವಾಗುವ p n g ಮತ್ತು j p n g ಗಳ ಬಗ್ಗೆ ತಿಳಿಸಿದರು . ನಂತರ ಈ ಮೇಲ್ ರಚನೆ , ಫೈಲ್ ಕಂಪೋಜ್ ,ಡೌನ್ ಲೋಡ್ ಮುಂತಾದ ವಿಚಾರಗಳನ್ನು ಸ್ಪಷ್ಠಿಕರಿಸಿದರು . ಇಷ್ಟರಲ್ಲಿ ಎಲ್ಲರಿಗೂ ಚಹ ವಿರಾಮ ನೀಡಲಾಯಿತು.
ಸ್ವಲ್ಪವೂ ತಡಮಾಡದೆ ತಮ್ಮ ತಮ್ಮ ಗಣಕ ಯಂತ್ರಗಳ ಮುಂದೆ ಆಸೀನರಾದ ಶಿಬಿರಾಥಿFಗಳಿಗೆ ಸಂಪನ್ಮೂಲ ವ್ಯಕ್ತಿ ಶ್ರೀಯುತ ಸಮಂತ್ ರವರು ಲಿಬ್ರೆ ರೈಟರ್ ನಲ್ಲಿ ಬರುವ ಮೆನು ಬಾರ್ , ಸ್ಟ್ಯಾಂಡಡ್F ಬಾರ್, ಗ್ರಾಫಿಕ್ ಬಾರ್ ಇವುಗಳ ಬಗ್ಗೆ ಸವಿವರವಾಗಿ ತಿಳಿಸಿದರು. ಅಷ್ಟರಲ್ಲಿ ಊಟದ ಸಮಯ ಸನಿಹವಾಯಿತು. ಎಲ್ಲರೂ ಊಟಕ್ಕೆ ತೆರಳಿದರು.
ನಂತರದ ಅವಧಿಯಲ್ಲಿ ಮತ್ತೆ ಶಬಿರಾಥಿFಗಳು ಪ್ರಾಯೋಗಿಕವಾಗಿ ಲಿಬ್ರೇ ಆಫೀಸ್ ರೈಟರ್ ಬಗ್ಗೆ ಅಭ್ಯಸಿಸಿದರು. ಶ್ರೀಯುತ ವೆಂಕಟೇಶ್ ರವರ ಮನವಿ ಮೇರೆಗೆ ಶಿಬಿರಾಥಿFಗಳಾದ ಶಿವಕುಮಾರಸ್ವಾಮಿ ರವರು "ತನುವು ನಿನ್ನದು ಮನವು ನಿನ್ನದು " ಎಂಬ ಕುವೆಂಪುರವರ ಭಾವಗೀತೆಯನ್ನು ಸುಶ್ರಾವ್ಯವಾಗಿ ಹಾಡಿದರು , ಪ್ರಶಾಂತ್ ರವರು "ಶ್ರದ್ಧೆಯೇ ಗುರು " ಎಂಬ ಗೀತೆಯನ್ನು , ಸಂಜಯ್ ರವರು " ಒಳ್ಳೆಯ ಗಾಣಿಗರೆಣ್ಣೆ" ಎಂಬ ಜನಪದ ಗೀತೆಯನ್ನು ಹಾಡಿದರು . ಇವೆಲ್ಲವನ್ನು ಗಣಕಯಂತ್ರದಲ್ಲಿ ವೆಂಕಟೇಶ್ ರವರು ರೆಕಾಡ್F ಮಾಡಿದರು. ರಮೇಶ್ ಭಟ್ ರವರ ಯಕ್ಷಗಾನ ಪ್ರಸಂಗವೂ ಸಹ ಶಿಬಿರಾಥಿFಗಳ ಮನಸ್ಸನ್ನು ರಂಜಿಸಿತು.
ಅರುಣ್ ಕುಮಾರ್ ರವರು ಗೂಗಲ್ ಆಪ್ ನಲ್ಲಿನ ವಿಷಯಗಳನ್ನು ಭಾಷಾಂತರ ಮಾಡುವುದರ ಬಗ್ಗೆ ವಿವರಿಸಿದರು. ವೆಂಕಟೇಶ್ ರವರು ಜೊತೆಗೂಡಿ ವಿಷಯವನ್ನು ಶಿಬಿರಾಥಿFಗಳಿಗೆ ಮನದಟ್ಟು ಮಾಡಿದರು.
ನಂತರದ ಅವಧಿಯಲ್ಲಿ ಶ್ರೀಯುತ ರಮೇಶ್ ಭಟ್ ರವರು ಗಣಕಯಂತ್ರದ ಮೂಲಕ ಪಾಠಯೋಜನೆಗೆ ಬೇಕಾದ ಧ್ವನಿ ಸಂಗ್ರಹಣೆ ಮಾಡುವ ಕ್ರಮವನ್ನು ಹಂತ ಹಂತವಾಗಿ ತಿಳಿಸಿದರು . ಶಿಬಿರಾಥಿFಗಳು ಗಣಕಯಂತ್ರದಲ್ಲಿ ಪ್ರಾಯೋಗಿಕ ಅಭ್ಯಾಸ ಮಾಡುವುದರ ಮೂಲಕ ಮೂರನೇ ದಿನದ ತರಬೇತಿಗೆ ವಿರಾಮ ಹಾಡಿದರು.
ಮೈಸೂರು ವಿಭಾಗೀಯ ಎಸ್‌ಟಿಎಫ್ ಕನ್ನಡ ಎಂಆರ್‌ಪಿ ತರಬೇತಿ ಕಾರ್ಯಾಗಾರ
೪ನೇ ದಿನದ ವರದಿ
ಮಂಡ್ಯ ತಂಡದವರಿಂದ
ದಿನಾಂಕ: ೨೭-೦೮-೨೦೧೫, ಗುರುವಾರ
ಈ ಮಾತನ್ನು ತಮನ್ನೇ ಉದ್ಧೇಶಿಸಿ ಹೇಳುತ್ತಿದ್ದೇನೆ. ಅಚ್ಚರಿಗೊಳ್ಳದಿರಿ ಸಹ ಶಿಬಿರಾರ್ಥಿಗಳೇ, . ಕಂಪ್ಯೂಟರ್ ಪರಿಪೂರ್ಣವಾಗಿ ತಿಳಿಯದ ನಾವು ೪ನೇ ದಿನಕ್ಕೆ ಕಾಲಿಟ್ಟು ಇದೀಗ ಅನೂಹ್ಯ ಲೋಕದ ಧ್ರುವತಾರೆಗಳೇ ಆಗಿದ್ದೇವೆ. ಧ್ರುವತಾರೆ ಪಟ್ಟ ನೀಡಿದ ಎಲ್ಲಾ ಎಸ್‌ಟಿಎಫ್ ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಗಳಿಗೆ ಸಪ್ರೇಮ ಪ್ರಣಾಮಗಳನ್ನು ಸಲ್ಲಿಸುತ್ತಾ, ೪ನೇ ದಿನ ತರಬೇತಿ ಕಾರ್ಯದಲ್ಲಿ ನಡೆದ ವರದಿಯನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ.
ಬೆಳಿಗ್ಗೆ ೯.೩೦ಗಂಟೆಗೆ ಎಂದಿನಂತೆ ಸಂಪನ್ಮೂಲ ವ್ಯಕ್ತಿ ಅರುಣ್ ಅವರ ನಿರೂಪಣೆ ಸ್ವಾಗತದೊಂದಿಗೆ ಕಾರ್ಯಾಗಾರ ಶುಭಾರಂಭಗೊಂಡಿತು. ಚಾಮರಾಜನಗರ ಜಿಲ್ಲೆಯ ತಂಡದರಿಂದ ಶ್ರೀ ಶಿವಕುಮಾರಸ್ವಾಮಿ ಅವರ ಪ್ರಾರ್ಥನೆ, ಶ್ರೀ ಕೆ.ಬಿ.ಬಸವರಾಜು ಅವರ ಮೌಲಿಕ ಚಿಂತನೆ ಹಾಗೂ ಶ್ರೀ ಟಿ.ಪರಶುರಾಮ್ ಅವರ ಅರ್ಥಪೂರ್ಣ ವರದಿಯೊಂದಿಗೆ ಕಾರ್ಯಗಾರ ಸಂಪನ್ನಗೊಂಡಿತು.
ಬಳಿಕ ಸಂಪನ್ಮೂಲ ವ್ಯಕ್ತಿ ಶ್ರೀ ವೆಂಕಟೇಶಮೂರ್ತಿ ಅವರು ಎಸ್‌ಟಿಎಫ್ ಕಾರ್ಯಾಚರಣೆಗೊಳ್ಳುವ ಬಗ್ಗೆ ಹೆಚ್ಚಿನ ಪೂರಕ ಮಾಹಿತಿ ನೀಡಿದರು. ಅಲ್ಲದೇ ಎಸ್‌ಟಿಎಫ್‌ನ ಕಾರ್ಯಚಟುವಟಿಕೆಗಳ ಬಗೆಗೆ ಸಂಕ್ಷಿಪ್ತ ಮಾಹಿತಿ ನೀಡಿದರು.
ಇವರೊಡನೆ ಸಂಪನ್ಮೂಲ ವ್ಯಕ್ತಿ ಶ್ರೀ ಶಮಂತ್ ಅವರು ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲ ಚಟುವಟಿಕೆಗಳ ಕುರಿತು ಸವಿವರ ಮಾಹಿತಿ ನೀಡಿದರು. ಅಲ್ಲದೇ ಕೋಯರ್‌ಗೆ ಸಂಪನ್ಮೂಲಗಳನ್ನು ಲಗತ್ತಿಸುವುದು ಹೇಗೆ? ಅದರಿಂದಾಗುವ ಪ್ರಯೋಜನಗಳೇನು ಎಂಬುದರ ಬಗೆಗೆ ಸವಿವರವಾದ ಮಾಹಿತಿ ನೀಡಿದರು. ಅಲ್ಲದೇ ಐಸಿಟಿಎಸ್‌ನ ಪಿಎಸ್‌ನಲ್ಲಿರುವ ಸಾಧಾರಣ ಪ್ರಶ್ನೆಗಳು ಹಾಗೂ ಅದಕ್ಕಿರುವ ಉತ್ತರ ಇರುವ ಬಗೆಗೆ ತಿಳಿಸಿದರು.
ಇವರೊಡನೆ ಸಂಪನ್ಮೂಲ ವ್ಯಕ್ತಿ ಶ್ರೀ ವೆಂಕಟೇಶಮೂರ್ತಿ ಅವರು ಕೊಯರ್‌ಗೆ ಸಂಪನ್ಮೂಲಗಳನ್ನು ಅಪ್‌ಡೇಟ್ ಮಾಡುವುದು ಹೇಗೆ ಎಂಬ ಬಗೆಗೆ ಸವಿವರವಾದ ಮಾಹಿತಿ ನೀಡಿದರು.
ಈ ತನ್ಮಧ್ಯೆ ವಿವರಗಳ ಸಮಗ್ರ ಮಾಹಿತಿಯಿಂದ ದಣಿದಿದ್ದ ಶಿಬಿರಾರ್ಥಿಗಳಿಗೆ ಟೀ ಬ್ರೇಕ್ ಹೊಸ ಚೈತನ್ಯ ನೀಡಿತು.
ಟೀ ಹೀರಿದ ಬಳಿಕ ಹೊಸ ಉತ್ಸಾಹದೊಂದಿಗೆ ಆಗಮಿಸಿದ ಶಿಬಿರಾರ್ಥಿಗಳಿಗೆ ಸಂಪನ್ಮೂಲ ವ್ಯಕ್ತಿ ಶ್ರೀ ಶಮಂತ್ ಅವರು, ನಮಗೆ ನಿಗದಿಗೊಳಿಸಿದ ಪಠ್ಯಕ್ಕೆ ಪೂರಕ ಸಂಪನ್ಮೂಲಗಳನ್ನು ಯಾವ ಮಾದರಿಯಲ್ಲಿ ನೀಡಬೇಕು ಎಂಬುದರ ಬಗೆಗೆ ವಿವರ ನೀಡಿದರು.
ಪರಿಕಲ್ಪನೆ ನಕ್ಷೆ, ಹಿನ್ನಲೆ, ಸಂದರ್ಭ, ಕಲಿಕೋದ್ದೇಶಗಳು, ಕವಿ /ಲೇಖಕರ ಪರಿಚಯ, ಶಿಕ್ಷಕರ ಟಿಪ್ಪಣಿ, ಸಾರಾಂಶ, ಚಟುವಟಿಕೆ-೧ರ ವಿಧಾನ, ಪ್ರಕ್ರಿಯೆ, ಸಮಯ, ಸಾಮಗ್ರಿ, ಸಂಪನ್ಮೂಲಗಳು, ಹಂತಗಳು, ಚರ್ಚಾ ಪ್ರಶ್ನೆಗಳು, ಭಾಷಾ ವೈವಿಧ್ಯಗಳು, ಶಬ್ಧಕೋಶ ಬಳಕೆ, ವ್ಯಾಕರಣ, ಮೌಲ್ಯ ಮೌಪನ, ಪಠ್ಯದ ಬಗೆಗೆ ಹಿಮ್ಮಾಹಿತಿ ನೀಡುವುದು ಸೇರಿದಂತೆ ಹಲವು ಉಪಯುಕ್ತ ಮಾಹಿತಿಗಳನ್ನುನೀ
ನೀಡಿದರು. ಅಲ್ಲದೇ ಈಗಾಗಲೇ ನೀಡಿರುವ ಚಟುವಟಿಕೆಯನ್ನು ಈ ಮಾದರಿಯಲ್ಲೇ ಸಂಪನ್ನಗೊಳಿಸಲು ಸಲಹೆ ನೀಡಿದರು.
ಅವರು ತಿಳಿಸಿದ ಮಾದರಿಯಲ್ಲಿ ಪ್ರತಿಯೊಬ್ಬರು ಕಂಪ್ಯೂಟರ್ ಪರದೆಗೆ ಕಣ್ಣು ನೆಟ್ಟಿರುವಾಗ ಇದ್ದಕ್ಕಿದ್ದಂತೆ ತರಬೇತಿ ಅಂಕಣದಲ್ಲಿ ಮಿಂಚಿನ ಸಂಚಾರವಾಯಿತು. ಡಿಎಸ್‌ಇಆರ್‌ಟಿ ಸಂಸ್ಥೆಯ ಎಸ್‌ಡಿಪಿಐ ಯವರಾದ ಶ್ರೀ ಮಂಜುನಾಥ್ ಸರ್ ಅವರ ದೀಢೀರ್ ಆಗಮನ. ಎಲ್ಲರೂ ಒಂದು ಕ್ಷಣ ಕಕ್ಕಾಬಿಕ್ಕಿ. ಆದರೆ ಮಂಜುನಾಥ್ ಸರ್ ಅವರ ಸರಳ ಸೌಮ್ಯತೆ , ಸ್ನೇಹದ ಮಾತುಗಳು ಇಡೀ ವಾತಾವರಣವನ್ನು ತಿಳಿಗೊಳಿಸಿದವು.
ಅವರನ್ನು ನಾವೇಲ್ಲರೂ ಪ್ರೀತಿಯಿಂದ ಸ್ವಾಗತಿಸಿದ ಬಳಿಕ ಮಾತಿಗೆ ನಿಂತ ಮಂಜುನಾಥ್ ಸರ್ ಅವರು, ೨೦೧೧ರಿಂದ ಎಸ್‌ಟಿಎಫ್ ತರಬೇತಿಗೆ ಸಹಭಾಗಿತ್ವ ನೀಡುತ್ತಿರುವ ಕರ್ನಾಟಕ ಉನ್ನತ ಶಿಕ್ಷಣ ಪರಿಷತ್ ಹಾಗೂ ಐಟಿ ಫಾರ್ ಚೆಂಜ್ ಅವರ ಸಹಕಾರವನ್ನು ಶ್ಲಾಘಿಸಿದರು. ಅಲ್ಲದೇ ಶಾಲೆಗಳಲ್ಲಿ ತಂತ್ರಜ್ಞಾನದ ಮೂಲಕ ಮಕ್ಕಳ ಶಿಕ್ಷಣವನ್ನು ಸರಳಗೊಳಿಸುವುದು ಅಲ್ಲದೇ ಸಂತಸದಾಯಕಗೊಳಿಸುವ ಬಗೆಗೆ ಹಲವು ಸಲಹೆ ನೀಡಿದರು. ಅರ್ಥಪೂರ್ಣ ಸಂಹವನ ಕುರಿತು ವಿಚಾರ ಪ್ರಸ್ತಾಪಿಸಿದ ಅವರು, ಶಾಲೆಗಳಲ್ಲಿ ಹಾಲಿ ಇರುವ ಸಾಧನಗಳ ಸದ್ಭಳಕೆ ಕುರಿತು ತಮಗೆ ಬಾಗಲಕೋಟೆಯಲ್ಲಿ ಆದ ಘಟನೆಯನ್ನು ಸ್ಮರಿಸಿದರು. ಯುನಿಸೆಫ್ ಅವರು ನೀಡಿದ ರೇಡಿಯೋ ಉಪಕರಣದ ಅನುಭವವನ್ನು ಬಿಚ್ಚಿಟ್ಟರು. ಅಲ್ಲದೇ ಸರಳ ಉಪಕರಣಗಳ ಮೂಲಕ ಮಕ್ಕಳ ಮನಸ್ಸನ್ನು ಹೇಗೆ ಗೆಲ್ಲಬಹುದು ಎಂಬ ವಿಚಾರವಾಗಿ ಉದಾಹರಣೆ ಸಹಿತವಾಗಿ ತಿಳಿಸುವ ಮೂಲಕ ಶಿಬಿರಾರ್ಥಿಗಳ ಮನ ಸೆಳೆದರು.
‘ಪ್ರಶ್ನೆಯನ್ನು ಕೇಳಿದವನು ಆ ಕ್ಷಣಕ್ಕೆ ಮೂರ್ಖನಾಗುತ್ತಾನೆ. ಆದರೆ ಪ್ರಶ್ನೆಯನ್ನೇ ಕೇಳದವನು ಎಂದೆಂದಿಗೂ ಮೂರ್ಖನಾಗಿರುತ್ತಾನೆ' ಎಂಬ ಚೀನಿ ಗಾದೆಯನ್ನು ಉದಾಹರಿಸಿದ ಶ್ರೀಯುತರು, ‘Think out of the bok’ ಎಂಬ ವಾಕ್ಯವನ್ನು ಉದಾಹರಿಸುತ್ತ ಶಿಬಿರಾರ್ಥಿಗಳನ್ನು ಉತ್ತೇಜನಗೊಳಿಸಿದರು.
ಮಧ್ಯಾಹ್ನ ೧.೩೦ ಸಮೀಪಿಸಿದರೂ ಯಾರಿಗೂ ಹೊಟ್ಟೆ ಹಸಿವಿನ ಸಂಕಷ್ಟ ಗೊತ್ತಾಗದಂತೆ ನಮ್ಮನ್ನು ತಮ್ಮ ಮಾತಿನ ವಾಕ್‌ಝರಿಯಲ್ಲಿ ತಣಿಸಿದ ಶ್ರೀಯುತ ಮಂಜುನಾಥ್ ಸರ್ ಅವರು ಎಲ್ಲರಿಗೂ ಶುಭ ಕೋರಿ ನಿರ್ಗಮಿಸಿದರು.
ಮಧ್ಯಾಹ್ನ ಭೋಜನ ಮುಗಿದ ಬಳಿಕ ತರಬೇತಿ ಎಂದಿನಂತೆ ಚಾಲನೆಗೊಂಡಿತು. ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಶಮಂತ್ ಅವರು ಗೂಗಲ್ ಡ್ರೈವ್ ಕುರಿತು ಉಪಯುಕ್ತ ಮಾಹಿತಿ ನೀಡಿದರು. ವಿಡಿಯೋ ಅಪ್‌ಲೋಡ್ ಮಾಡುವುದು. ಅದನ್ನು ಶೇರ್ ಮಾಡುವುದು. ಪಿಕಾಸೋ ಮೂಲಕ ಪೋಟೋಗಳನ್ನು ಸಂಪಾದಿಸುವುದು. ಅಲ್‌ಬಮ್ ಮಾಡುವುದು ಕುರಿತು ಉಪಯುಕ್ತ ಮಾಹಿತಿ ನೀಡಿದರು. ಬಳಿಕ ಶಿಬಿರಾರ್ಥಿಗಳು ಅವರು ಹೇಳಿದ ಎಲ್ಲಾ ವಿವರಗಳನ್ನು ಪ್ರಾಯೋಗಿಕವಾಗಿ ತರಬೇತಿ ಮಾಡಿದೆವು.
5ನೇ ದಿನದ ವರದಿ
ಮೈಸೂರು ವಿಭಾಗೀಯ ಮಟ್ಟದ ಕನ್ನಡ ವಿಷಯ ವೇದಿಕೆ ಯಡಿಯಲ್ಲಿ
ಎಂ.ಆರ್.ಪಿ ತರಬೇತಿ ಯ ಐದನೇಯ ದಿನದ ವರದಿ
ತರಬೇತಿ ಸ್ಧಳ : ಡಯಟ್ , ಬೆಂಗಳೂರು - ಗ್ರಾಮಾಂತರ, ರಾಜಾಜಿ ನಗರ.ಬೆಂಗಳೂರು.
ಗೌರವಾನ್ವಿತ ವೃತ್ತಿ ಬಾ೦ಧವರೇ,
ತಮಗೆಲ್ಲರಿಗೂ ವರ ಮಹಾಲಕ್ಷ್ಮೀ ಹಬ್ಬದ ಶುಭಾಶಯಗಳು .
ದಿನಾಂಕ:೨೮/೦೮/೨೦೧೫ ರ ಶುಕ್ರವಾರದ ತರಬೇತಿ ಯ ಅಂತಿಮ ದಿನ .
ಈ ದಿನದ ತರಬೇತಿಗೆ ಶ್ರೀಯುತ ರಮೇಶ ಭಟ್ ರವರು ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿದ ರು. ಮಂಡ್ಯ ತಂಡದ ಶಿಕ್ಷಕ ಮಿತ್ರ ರಾದ ಶ್ರೀಯುತ ರಂಗನಾಥ ಎನ್. ರವರು ಪ್ರಾರ್ಥನೆಯನ್ನು ನಡೆಸಿಕೂಟ್ಟರು . ಶ್ರೀಯುತ ತಿಮ್ಮೀರಾಯ ಗೌಡರು ಮತ್ತು ಶ್ರೀಯುತ ಚಿಕ್ಕ ನಾಯಕರು ಚಿಂತನ ನಡೆಸಿಕೂಟ್ಟರು . ನಾಲ್ಕನೇ ದಿನದ ವರದಿಯನ್ನು ಶ್ರೀಯುತ ಮಧುಸೂಧನ್ ವಾಚಿಸಿದರು .
ಮೊದಲ ಅವಧಿಯನ್ನು ಶ್ರೀಯುತ ರಮೇಶ್ ಭಟ್ ಹಾಗೂ ಶ್ರೀಯುತ ಶಮಂತ್ ರವರು ನಿರ್ವಹಿಸುತ್ತಾ libre office calc ನ ಬಳಕೆ ಹಾಗೂ ಶ್ಯೆಕ್ಷಣಿಕ ಉಪಯೋಗಗಳ ಬಗ್ಗೆ ಸಮರ್ಥವಾಗಿ ತಿಳಿಸಿಕೂಟ್ಟರು.
ಈ ವೇಳೆಗೆ ಚಹಾ ವಿರಾಮದೊಂದಿಗೆ ಸಂವಾದ ಮುಕ್ತಾಯವಾಯಿತು.
ಎರಡನೇ ಅವಧಿಯಲ್ಲಿ ಶ್ರೀಯುತ ವೆಂಕಟೇಶ ರವರು ಇ ಮೇಲ್ ನಲ್ಲಿ folder ರಚನೆ,
ಇ ಮೇಲ್ ಗುಂಪುಗಳು ಮತ್ತು ವೈಯುಕ್ತಿಕ ವಾಗಿ ಇ ಮೇಲ್ ಸಂಗ್ರಹ ಮಾಡುವ ವಿಧಾನವನ್ನು ತಿಳಿಸಿದರು.
ಈ ಸಮಯಕ್ಕೆ ಸರಿಯಾಗಿ ಹಿಂದಿ ಶಿಕ್ಷಕ ವೇದಿಕೆಯಲ್ಲಿ ತರಬೇತಿ ನಿರತ ಶಿಕ್ಷಕ ಮಿತ್ರರೊಂದಿಗೆ vedio chating ಮಾಡುತ್ತಾ ಪರಸ್ಪರ ಅಭಿಪ್ರಾಯಗಳನ್ನು ಹಂಚಿಕೊ೦ಡಿದ್ದು ಅಪ್ಯಾಯ ಮಾನ ವಾಗಿತ್ತು.
ಈ ವೇಳೆಗೆ ಮಧ್ಯಾಹ್ನದ ಊಟ ದ ವಿರಾಮಕ್ಕೆ ಸಂವಾದ ಮುಕ್ತಾಯವಾಯಿತು.
ವರ ಮಹಾಲಕ್ಷ್ಮೀ ಹಬ್ಬದ ವಿಶೇಷವಾಗಿ ಊಟದೊಂದಿಗೆ ಪಾಯಸವು ಸೇರಿತ್ತು.
ಮೂರನೇ ಅವಧಿಯಲ್ಲಿ ಶ್ರೀಯುತ ವೆಂಕಟೇಶ್ ರವರು ಕಲ್ಪತರು (ubuntu software) online & offline ನಲ್ಲಿ install ಮಾಡುವ ವಿಧಾನವನ್ನು ಪ್ರಾಯೋಗಿಕವಾಗಿ ವಿವರಿಸಿದರು.
ನಾಲ್ಕನೇ ಅವಧಿಯಲ್ಲಿ ಶಿಬಿರಾರ್ಥಿಗಳಿಂದ feedback form 2015-16 ಪಡೆಯಲಾಯಿತು.
ತರಬೇತಿಯ ಅಂತ್ಯದಲ್ಲಿ ಶಿಬಿರಾರ್ಥಿಗಳ ಅನಿಸಿಕೆಯನ್ನು ವ್ಯಕ್ತಪಡಿಸಲು ಅವಕಾಶ ನೀಡಲಾಯಿತು.
INTERVAL …………………………… ಇನ್ನೂ ಮೂರು ದಿನಗಳ ತರಬೇತಿ ಬಾಕಿ ಇದೆ.
ವಂದನೆಗಳೊಂದಿಗೆ,
ವರದಿ ಯನ್ನು ಸಿದ್ಧಪಡಿಸಿದ ತಂಡ:
ತಂಡದ ನಾಯಕರು : ಶ್ರೀಯುತ ಎಂ.ಕೆ.ಮೂರ್ತಿ ಉಪನ್ಯಾಸಕರು,ಡಯಟ್,ಚಿಕ್ಕಮಗಳೂರು.
ತಂಡದ ಸದಸ್ಯರು :
೧). ಶ್ರೀಯುತ ಶೇಖರಪ್ಪ ಹೆಚ್.ಕೆ. ಶಿಕ್ಷಕರು,ಸ.ಪ್ರೌ.ಶಾಲೆ.ಬಳ್ಳಾವರ.
೨). .ಶ್ರೀಯುತ ನವೀನ್ ಕುಮಾರ್ ಎ. ಶಿಕ್ಷಕರು,ಸ.ಪ್ರೌ.ಶಾಲೆ.ಸಿದ್ಧರಮಠ.
೩). ಶ್ರೀಯುತ ಸತೀಶ ಎಂ.ಹೆಚ್. ಶಿಕ್ಷಕರು,ಸ.ಪ್ರೌ.ಶಾಲೆ. ಸೋಮನಹಳ್ಳಿ.
ಐದು ದಿನದ ಕಾರ್ಯಾಗಾರದ ವರದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
ಮುಂದಿನ ಕಾರ್ಯಯೋಜನೆಗಳು
ಬೆಳಗಾವಿ ವಿಭಾಗದ ಕನ್ನಡ ಸಂಪನ್ಮೂಲ ವ್ಯಕ್ತಿಗಳ ಕಾರ್ಯಗಾರ 2015
ಕಲಿಕಾರ್ಥಿಗಳ ಮಾಹಿತಿ
- ಕಲಿಕಾರ್ಥಿಗಳ ಮಾಹಿತಿ ತುಂಬಲು ಇಲ್ಲಿ ಕ್ಲಿಕ್ ಮಾಡಿ
- ಬೆಳಗಾವಿ ವಿಭಾಗದ ಸಂಪನ್ಮೂಲ ವ್ಯಕ್ತಿಗಳ ಮಾಹಿತಿಯನ್ನು ಇಲ್ಲಿ ನೋಡಿ
- ಕಾರ್ಯಗಾರದ ಐದನೇ ದಿನ ಕಾರ್ಯಗಾರದ ಬಗೆಗಿನ ಹಿಮ್ಮಾಹಿತಿ ನೀಡಲು ಇಲ್ಲಿ ಕ್ಲಿಕ್ ಮಾಡಿ
ಕಾರ್ಯಾಗಾರದಲ್ಲಿ ನಮ್ಮನ್ನು ವೀಕ್ಷಿಸಿ
ವರದಿಗಳು
ಕನ್ನಡ ವಿಷಯ ಶಿಕ್ಷಕರ ವೇದಿಕೆ
೨೦೧೫-೨೦೧೬ರ ಎಂ, ಆರ್, ಪಿ, ತರಬೇತಿಯ ವರದಿ
ದಿನಾಂಕ;೦೭/೦೮/೨೦೧೫.
ಸ್ಥಳ: ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ
ಧಾರವಾಡ.
ವರದಿ ಮಂಡನೆ
ಮಲೆನಾಡ ಜಿಲ್ಲೆ ಶಿವಮೊಗ್ಗ ತಂಡದಿಂದ
ತಂಡದ ಸದಸ್ಯರು:
- ಶ್ರೀ ಗಣಪತಿ ಉಪನ್ಯಾಸಕರು ಡಯಟ್ ಶಿವಮೊಗ್ಗ.
- ಶ್ರೀ ಶಿವಾನಂದ ಹೆಚ್ ಜೆ ಕನ್ನಡ ಶಿಕ್ಷಕರು ಆನವೇರಿ ಭದ್ರಾವತಿ
- ಶ್ರೀ ಗವಿರಂಗಪ್ಪ ಸಿ ಕನ್ನಡ ಶಿಕ್ಷಕರು ಬಾಳೇಮಾರನಹಳ್ಳಿ ಭದ್ರಾವತಿ
- ಶ್ರೀ ಗೋಪ ಕನ್ನಡ ಶಿಕ್ಷಕರು ಸಾಗರ ತಾಲ್ಲೂಕು
- ಶ್ರೀ ಗಣಪತಿ ಕನ್ನಡ ಶಿಕ್ಷಕರು ಸಾಗರ ತಾಲ್ಲೂಕು.
ವರದಿ
- ಈ ದಿನ ವಿಜಯಪುರ ತಂಡದಿಂದ ಪ್ರಮೋದ ರೇ ಮೆಂಚ.ಇವರ ಶಿವನ ಪ್ರಾರ್ಥನೆಯೊಂದಿಗೆ ತರಬೇತಿಯು ಪ್ರಾರಂಭವಾಯಿತು.
- ವಿಜಯಪುರ ತಂಡದ ಶ್ರೀ ಬಾಲಿ ರವರು ದಿನಾಂಕ:೦೬/೦೮/೨೦೧೫ ರಂದು ನಡೆದ ತರಬೇತಿಯ ವರದಿಯನ್ನು ತುಂಬಾ ಸುಂದರವಾಗಿ ಮಂಡಿಸಿದರು.
ಪಾಠದ ಚೌಕಟ್ಟು
ಶಿವಮೊಗ್ಗ ತಂಡದಿಂದ ಶಬರಿ
ಗದಗದ ತಂಡದಿಂದ ಎದೆಗೆ ಬಿದ್ದ ಅಕ್ಷರ
ವಿಜಯಪುರ ತಂಡದಿಂದ ವಚನ ಸೌರಭ
ಉತ್ತರ ಕನ್ನಡ ತಂಡದಿಂದ ಹಕ್ಕಿ ಹಾರುತಿದೆ ನೋಡಿದಿರಾ
ಬಳ್ಳಾರಿ ತಂಡದಿಂದ ಕೌರವೇಂದ್ರನ ಕೊಂದೆ ನೀನು
ಈ ಗದ್ಯ ಹಾಗೂ ಪದ್ಯಗಳ ಪಾಠದ ಚೌಕಟ್ಟನ್ನು ಮಂಡಿಸಲಾಯಿತು
.
ಎರಡನೇ ಅವಧಿ
ಶ್ರೀ ವೆಂಕಟೇಶ್ ರವರು ಎಲ್ಲಾ ಶಿಭಿರಾರ್ಥಿಗಳಿಗೆ ಯೂಟ್ಯೂಬ್ ನಿಂದ ವೀಡಿಯೋಗಳನ್ನು ಡೌನ್ ಲೋಡ್ ಹಾಗೂ ಅಪ್ ಲೋಡ್ ಮಾಡುವ ಬಗೆಯನ್ನು ಬಹಳ ಅರ್ಥಪೂರ್ಣವಾಗಿ ಎಲ್ಲರ ಮನಮುಟ್ಟುವಂತೆ ವಿವರಿಸಿದರು
ಊಟದ ವಿರಾಮ
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಧಾರವಾಡದ ತರಬೇತಿ ಸಂಯೋಜಕರಾದ ಶ್ರೀಮತಿ ಶಂಕ್ರಮ್ಮ ಡವಳಗೀ. ರವರು ಎಲ್ಲರಿಗೂ ಶುಚಿಯಾದ ಮತ್ತು ರುಚಿಯಾದ ಊಟದ ವ್ಯವಸ್ಥೆಯನ್ನು ಮಾಡಿದರು.
ಮೂರನೇ ಅವಧಿ
ಈ ಅವಧಿಯಲ್ಲಿ ಶ್ರೀ ವೆಂಕಟೇಶ್ ರವರು ಒಬಂಟುವನ್ನು ಕಂಪ್ಯೂಟರ್ ಗಳಿಗೆ ಇನ್ ಸ್ಟಾಲ್ ಮಾಡುವ ಬಗೆಯನ್ನು ವಿವರಿಸಿದರು.
ಸಮಾರೋಪ ಸಮಾರಂಭ
ಶ್ರಿ ಗಂಗಪ್ಪ ಪ್ರಾಂಶುಪಾಲರು ಡಯಟ್, ಧಾರವಾಡ. ಇವರ ಅಧ್ಯಕ್ಷತೆಯಲ್ಲಿ ಐದುದಿನಗಳ ಎಂ, ಆರ್, ಪಿ, ತರಬೇತಿಯ ಸಮಾರೋಪ ಸಮಾರಂಭ ಜರುಗಿತು.
ಶ್ರೀಮತಿ ಶಂಕ್ರಮ್ಮ ಢವಳಗೀ ಕಾರ್ಯಕ್ರಮ ನಿರೂಪಿಸಿ,ದರು.
ಶಿಭಿರಾರ್ಥಿಗಳಾದ ಶ್ರೀ ಶಿವಾನಂದ ಹೆಚ್, ಜೆ. ಹಾಗೂ ಶ್ರೀ ಬಾಲಚಂದ್ರ ಗುಣಿ, ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು
ರಂಗನಾಥ ವಾಲ್ಮೀಕಿಯವರು ವಂದಿಸಿದರು.
ತದನಂತರ ಸಾಮೂಹಿಕ ಭಾವಚಿತ್ರ ತೆಗೆಸಿ ಎಲ್ಲಾ ಸಂಪನ್ಮೂಲ ವ್ಯಕ್ತಿಗಳಿಗೆ ಕೃತಜ್ಞತೆ ಸಲ್ಲಿಸಲಾಯಿತು
.
ವಂದನೆಗಳೊಂದಿಗೆ
ಶ್ರೀ ಶಿವಾನಂದ ಹೆಚ್, ಜೆ.
ಕನ್ನಡ ಭಾಷಾ ಶಿಕ್ಷಕರು
ಸ. ಪ್ರೌ ಶಾಲೆ. ಆನವೇರಿ ಭದ್ರಾವತಿ
ಶಿವಮೊಗ್ಗ. ಜಿಲ್ಲೆ.
'ಕನ್ನಡ ಎಸ್ ಟಿ ಎಫ್ ಎಮ್ ಆರ್ ಪಿ ಎರಡು ಹಂತದ ತರಬೇತಿಯ ವರದಿ
ದಿನಾಂಕ: 03-08-2015 ಮತ್ತು 17-08-2015ರಂದು ನಡೆದ 5 & 3 ದಿನಗಳ ಎಮ್ ಆರ್ ಪಿ ತರಬೇತಿಯು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಧಾರವಾಡ ಇಲ್ಲಿ ನಡೆದಿತ್ತು. ತರಬೇತಿಯಲ್ಲಿ ಶಿವಮೊಗ್ಗ ವಿಜಯಪೂರ , ಬಳ್ಳಾರಿ , ಗದಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಂದ MRPಗಳಾಗಿ ಶಿಬಿರಾರ್ಥಿಗಳು ಭಾಗವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ಬಸವರಾಜ ಪೂಜಾರ, ಶ್ರೀ ರಂಗನಾಥ ವಾಲ್ಮೀಕಿ, ಶ್ರೀ ಪೈಗಂಬರ ಕಲಾವಂತ, ಶ್ರೀ ಮಂಜುನಾಥ ಮತ್ತು IT For Changeನ ಸಂಪನ್ಮೂಲ ವ್ಯಕ್ತಿಯಾದ ಶ್ರೀ ವೆಂಕಟೇಶ ಭಾಗವಹಿಸಿದ್ದರು.
ತರಬೇತಿಯು ಡಯಟ್‌ನ ಪ್ರಾಚಾರರ್ಯರಾದ ಶ್ರೀ ಆರ್ ಗಂಗಪ್ಪನವರ ಆರಂಭಿಕ ಮಾತುಗಳಿಂದ ಆರಂಭಗೊಂಡಿತು. ಇಲ್ಲಿಯ ತರಬೇತಿಯ ವಿಷಯಗಳನ್ನು ಅರಿತುಕೊಂಡು ನಿಮ್ಮ ಜಿಲ್ಲೆಯಲ್ಲಿ ಕನ್ನಡ ಭಾಷಾ ಶಿಕ್ಷಕರಿಗೆ ತಿಳಿಸುತ್ತಾ ತರಗತಿಯಲ್ಲಿ ಅಳವಡಿಸಿಕೊಳ್ಳಲು ಸಜ್ಜರಾಗಿರಿ ಎಂಬ ಕಿವಿ ಮಾತನ್ನು ಹೇಳಿದರು. ನೋಡಲ್ ಅಧಿಕಾರಿಗಳಾದ ಶ್ರೀ ಮತಿ ಶಂಕ್ರಮ್ಮ ಢವಳಗಿ ಅವರು ಇಲ್ಲಿಯ ಸಂಪನ್ಮೂಲವನ್ನು ಸದ್ವಿನಿಯೋಗ ಪಡಿಸಿಕೊಳ್ಳುವಂತೆ ತಿಳಿ ಹೇಳಿದರು .
ತರಬೇತಿಯ ಉದ್ದೇಶ ಮತ್ತು ಮಹತ್ವ
ರಾಜ್ಯದ ಪ್ರೌಢಶಾಲೆಗಳಲ್ಲಿ ಕನ್ನಡ ವಿಷಯವನ್ನು ಬೋಧಿಸುತ್ತಿರುವ ಕನ್ನಡ ಭಾಷಾ ಶಿಕ್ಷಕರಿಗೆ ಗಣಕ ಯಂತ್ರದ ಜ್ಞಾನವನ್ನು ನೀಡುವದರ ಜೊತೆಗೆ ಹೊಸ ತಂತ್ರಜ್ಞಾನ ಉಬುಂಟು ಬಳಸಿಕೊಂಡು ತಮ್ಮ ತಮ್ಮ ಪಠ್ಯಕ್ರಮದ ವಿಸಯಗಳನ್ನು ಅಂತರ್ ಜಾಲದಿಂದ ಹುಡುಕಿಕೊಂಡು ತರಗತಿಯಲ್ಲಿ ಬಳಸಿಕೊಳ್ಳುವಂತೆ ಪ್ರೇರಣೆ ನೀಡುವುದು. ಅಲ್ಲದೆ ತಮ್ಮ ಸಹೊದ್ಯೋಗಿಗಳಿಂದ ರಚಿಸಲ್ಪಟ್ಟ ಹೊಸ ವಿಷಯಗಳನ್ನು ಅಳವಡಿಕೊಳ್ಳುವದು. ಮತ್ತು ತಾವೇನಾದರು ಹೊಸ ವಿಷಯಗಳನ್ನು ಆವಿಷ್ಕರಿಸಿದ್ದರೆ ಅದನ್ನು ಗುಂಪುಗಳಲ್ಲಿ ಹಂಚಿಕೊಂಡು ತಮ್ಮ ಪಾಠಕ್ಕೆ ಬಳಸಿಕೊಳ್ಳುವಂತೆ ಪ್ರೇರಣೆ ನೀಡುವುದು .
ತರಬೇತಿ ನೀತಿ ನಿಯಮಗಳನ್ನು ವಿವರಿಸುತ್ತಿರುವ ನೋಡಲ್ ಅಧಿಕಾರಿಗಳು, ಶ್ರೀಮತಿ ಶಂಕ್ರಮ್ಮ ಢವಳಗಿ
ಇಲಾಖೆಯು ಸೂಚಿಸಿದ ಪಠ್ಯಕ್ರಮದಂತೆ ಪ್ರತಿದಿನ ಬೆಳಗ್ಗೆ 9:30 ರಿಂದ ಸಾಯಂಕಾಲ 5:30ರವರೆಗೆ ಪಾಠಗಳು ಸಾಗುತ್ತಿದ್ದವು. ಶಿಬಿರಾರ್ಥಿಗಳು ಹೊಸ ವಿಷಯ ಬಂದಾಗ ಉತ್ಸಾಹದಿಂದ ಕಲಿತು ತಮ್ಮ ತಮ್ಮ ಗಣಕಯಂತ್ರಗಳಲ್ಲಿ ಪ್ರಯೋಗಶೀಲರಾಗುತ್ತಿದ್ದರು. .ಶಿಬಿರಾರ್ಥಿಗಳಿಗೆ ಕಂಪ್ಯೂಟರ್ , ಮಹತ್ವ ಬಳಸುವ ವಿಧಾನ , ಹೊಸ ತಂತ್ರಜ್ಞಾನ, ಉಚಿತ ತಂತ್ರಾಂಶ ಹೊಂದಿದ UBUNTU ಪರಿಚಯ , ಅಂತರ್ ಜಾಲ ಬಳಕೆ, Email ಗಳ ಸೃಷ್ಟಿ ಮತ್ತು ಬಳಸುವ ವಿಧಾನ ಅಲ್ಲದೆ UBUNTU ತಂತ್ರಾಂಶದಲ್ಲಿರುವ ಲಿಬ್ರೆ ರೈಟರ್, ಇಂಪ್ರೇಶ್ , ಜಿಂಪ್ ಎಡಿಟರ್, ಕ್ಯಾಲ್ಕ,ಆಡಿಯೋ ಸಿಟಿ, ವೆಬ್ ಬ್ರೌಜರ್, ಚಿತ್ರಗಳ ಸಂಗ್ರಹ, ವಿಡಿಯೋಗಳ ಸಂಗ್ರಹ, ಮುಂತಾದ ವಿಷಯಗಳ ಬಗ್ಗೆ ತಿಳಿಸಿಕೊಡಲಾಯಿತು.
ತರಬೇತಿ ಪಡೆಯುವಲ್ಲಿ, ನೀಡುವಲ್ಲಿ ನಿರತರಾದ ಸಂಪನ್ಮೂಲ ವ್ಯಕ್ತಿಗಳು ಮತ್ತು ಶಿಬಿರಾರ್ಥಿಗಳು
ಒಟ್ಟಿನಲ್ಲಿ ಎಂಟು ದಿನಗಳ ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿಗಳನ್ನು ತಂತ್ರಾಂಶ ಮತ್ತು ಪಠ್ಯ ಜ್ಞಾನದಲ್ಲಿ ಸಜ್ಜುಗೊಳಿಸಿ ತಮ್ಮ ತಮ್ಮ ಜಿಲ್ಲೆಯಲ್ಲಿ ಕನ್ನಡ ಭಾಷಾ ಶಿಕ್ಷಕರಿಗೆ ತರಬೇತಿ ನೀಡಲು ಸಜ್ಜುಗೊಳಿಸಲಾಯಿತು.
ಐದು ದಿನದ ಕಾರ್ಯಾಗಾರದ ವರದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
ಕಾರ್ಯಗಾರದ ಬಗೆಗಿನ ಹಿಮ್ಮಾಹಿತಿ
ಎರಡನೇ ಹಂತದ ಕಾರ್ಯಗಾರದ ಬಗೆಗಿನ ಹಿಮ್ಮಾಹಿತಿಯನ್ನು ನೀಡಲು ಇಲ್ಲಿ ಕ್ಲಿಕ್ ಮಾಡಿ