ಕನ್ನಡ ವಿಷಯ ಶಿಕ್ಷಕರ ವೇದಿಕೆ ಕಾರ್ಯಾಗಾರ- 2015-16

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಜೂನ್ ೨೦೧೫ರ ಕನ್ನಡ ವಿಷಯ ಶಿಕ್ಷಕರ ವೇದಿಕೆ SRP ಕಾರ್ಯಾಗಾರ

ಕಾರ್ಯಾಸೂಚಿ

  1. ಕಾರ್ಯಾಗಾರದ ಕಾರ್ಯಾಸೂಚಿಯನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
  2. ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಗಳ ವಿವರವನ್ನು ಇಲ್ಲಿ ನೋಡಬಹುದು
  1. ಜಿಲ್ಲಾ ಮಟ್ಟದ ಸಂಪನ್ಮೂಲ ವ್ಯಕ್ತಿಗಳ ಮತ್ತು ಜಿಲ್ಲಾ ಹಂತದ ಕಾರ್ಯಗಾರಗಳ ಅಜೆಂಡಾ

ಸಂಪನ್ಮೂಲಗಳು ಮತ್ತು ಕೈಪಿಡಿಗಳು

  1. ಕನ್ನಡ ಭಾಷಾ ಶಿಕ್ಷಕರ ವೇದಿಕೆ ಟಿಪ್ಪಣಿ
  2. ಅಂತರ್ಜಾಲದಲ್ಲಿ ಬ್ರೌಸಿಂಗ್ ಮಾಡುವುದು
  3. ಅಂತರ್ಜಾಲದಲ್ಲಿ ಸಂಪನ್ಮೂಲ ಹುಡುಕುವುದು
  4. ಬೇಸಿಕ್_Ubuntu_ಕೈಪಿಡಿ
  5. ಪಠ್ಯ ಸಂಪಾದನೆ ಬಗೆಗಿನ ಸಾಹಿತ್ಯ
  6. ಬೇಸಿಕ್ Libre office ಮತ್ತು ಕನ್ನಡ ಟೈಪಿಂಗ್ ಕೈಪಿಡಿ ಡೌನ್ ಲೊಡ್ ಮಾಡಲುಇಲ್ಲಿ ಒತ್ತಿ
  7. E-mail ಕೈಪಿಡಿಗಾಗಿ ಇಲ್ಲಿ ಒತ್ತಿ
  8. ವಿದ್ಯನ್ಮಾನ ವೈಯುಕ್ತಿಕ ಸಂಪನ್ಮೂಲ
  9. ಕನ್ನಡದಲ್ಲಿ GIMP ಕೈಪಿಡಿ ಡೌನ್ ಲೊಡ್ ಮಾಡಲುಇಲ್ಲಿ ಒತ್ತಿ
  10. ಪ್ರೀಮೈಂಡ್ ಕೈಪಿಡಿ
  11. ಕೊಯರ್_ಹಿನ್ನೆಲೆ_ಟಪ್ಪಣಿ
  12. ಸೇತುಬಂಧ ಕಾರ್ಯಕ್ರಮ ಚಟುವಟಿಕೆಗಳು ಮತ್ತು ಸಾಮಗ್ರಿಗಳಿಗಾಗಿ ಇಲ್ಲಿ ನೋಡಿ
  13. ಗೂಗಲ್ ಮ್ಯಾಪ್, ಟ್ರಾನ್ಸಲೇಟ್ ಬಳಕೆಯ ಕೈಪಿಡಿ

ಓದಲು ಲೇಖನ
ಭಾರತೀಯ ಭಾಷಾ ಬೋಧನೆ ಬಗೆಗಿನ ಎನ್.ಸಿ.ಎಫ್ ಪೊಶೀಷನ್ ಪೇಪರ್

ಅಭಿಪ್ರಾಯ

  1. ಈ ಕಾರ್ಯಗಾರದ ಬಗೆಗೆ ನಿಮ್ಮ ಅಭಿಪ್ರಾಯ ದಾಖಲಿಸಲು ಇಲ್ಲಿ ಒತ್ತಿ
  2. ಕಲಿಕಾರ್ಥಿಗಳು ದಾಖಲಿಸಿರುವ ಕಾರ್ಯಗಾರದ ಬಗೆಗಿನ ಹಿಮ್ಮಾಹಿತಿಯನ್ನು ಇಲ್ಲಿ ನೋಡಬಹುದು

ವರದಿಗಳು

ಐದು ದಿನದ ಕಾರ್ಯಾಗಾರದ ವರದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

ಮುಂದಿನ ಕಾರ್ಯಯೋಜನೆಗಳು

ಈ ಕಾರ್ಯಗಾರ ನಂತರ ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಗಳು ವಿಭಾಗ ಮಟ್ಟದಲ್ಲಿ ನಡೆಯುವ MRP ಕಾರ್ಯಾಗಾರದಲ್ಲಿ ಜಿಲ್ಲಾ ಮಟ್ಟದ ಸಂಪನ್ಮೂಲ ವ್ಯಕ್ತಿಗಳಿಗೆ 5ಮತ್ತು 3 ದಿನಗಳ ತರಬೇತಿಯನ್ನು ನೀಡುವರು.

ಕನ್ನಡ ವಿಷಯ ಶಿಕ್ಷಕರ ವೇದಿಕೆ MRP ಕಾರ್ಯಾಗಾರಗಳು

ಕಾರ್ಯಾಸೂಚಿ

  1. ಅಜೆಂಡಾ ನೋಡಲು ಇಲ್ಲಿ ಕ್ಲಿಕ್ ಮಾಡಿ

ಸಂಪನ್ಮೂಲಗಳು ಮತ್ತು ಕೈಪಿಡಿಗಳು

  1. ಕನ್ನಡ ಭಾಷಾ ಶಿಕ್ಷಕರ ವೇದಿಕೆ ಟಿಪ್ಪಣಿ
  2. ಅಂತರ್ಜಾಲದಲ್ಲಿ ಬ್ರೌಸಿಂಗ್ ಮಾಡುವುದು
  3. ಅಂತರ್ಜಾಲದಲ್ಲಿ ಸಂಪನ್ಮೂಲ ಹುಡುಕುವುದು
  4. ಬೇಸಿಕ್_Ubuntu_ಕೈಪಿಡಿ
  5. ಪಠ್ಯ ಸಂಪಾದನೆ ಬಗೆಗಿನ ಸಾಹಿತ್ಯ
  6. ಬೇಸಿಕ್ Libre office ಮತ್ತು ಕನ್ನಡ ಟೈಪಿಂಗ್ ಕೈಪಿಡಿ ಡೌನ್ ಲೊಡ್ ಮಾಡಲುಇಲ್ಲಿ ಒತ್ತಿ
  7. E-mail ಕೈಪಿಡಿಗಾಗಿ ಇಲ್ಲಿ ಒತ್ತಿ
  8. ವಿದ್ಯನ್ಮಾನ ವೈಯುಕ್ತಿಕ ಸಂಪನ್ಮೂಲ
  9. ಕನ್ನಡದಲ್ಲಿ GIMP ಕೈಪಿಡಿ ಡೌನ್ ಲೊಡ್ ಮಾಡಲುಇಲ್ಲಿ ಒತ್ತಿ
  10. ಪ್ರೀಮೈಂಡ್ ಕೈಪಿಡಿ
  11. ಕೊಯರ್_ಹಿನ್ನೆಲೆ_ಟಪ್ಪಣಿ
  12. ಸೇತುಬಂಧ ಕಾರ್ಯಕ್ರಮ ಚಟುವಟಿಕೆಗಳು ಮತ್ತು ಸಾಮಗ್ರಿಗಳಿಗಾಗಿ ಇಲ್ಲಿ ನೋಡಿ
  13. ಗೂಗಲ್ ಮ್ಯಾಪ್, ಟ್ರಾನ್ಸಲೇಟ್ ಬಳಕೆಯ ಕೈಪಿಡಿ

ಓದಲು ಲೇಖನ
ಭಾರತೀಯ ಭಾಷಾ ಬೋಧನೆ ಬಗೆಗಿನ ಎನ್.ಸಿ.ಎಫ್ ಪೊಶೀಷನ್ ಪೇಪರ್

ಬೆಂಗಳೂರು ವಿಭಾಗದ ಕನ್ನಡ ಸಂಪನ್ಮೂಲ ವ್ಯಕ್ತಿಗಳ ಕಾರ್ಯಗಾರ-೧ ಜೂನ್ 29 ರಿಂದ ಜುಲೈ 3, 2015

ಕಲಿಕಾರ್ಥಿಗಳ ಮಾಹಿತಿ

  1. ಕಲಿಕಾರ್ಥಿಗಳ ಮಾಹಿತಿ ತುಂಬಲು ಇಲ್ಲಿ ಕ್ಲಿಕ್ ಮಾಡಿ
  2. ಕಲಿಕಾರ್ಥಿಗಳ ಮಾಹಿತಿ
  3. ಕಲಿಕಾರ್ಥಿಗಳ ಮಾಹಿತಿಯ ಸಾರಾಂಶ

ಕಾರ್ಯಾಗಾರದಲ್ಲಿ ನಮ್ಮನ್ನು ವೀಕ್ಷಿಸಿ

See us at the Workshop

ಅಭಿಪ್ರಾಯ

  1. ಕಲಿಕಾರ್ಥಿಗಳ ಹಿಮ್ಮಾಹಿತಿ ದಾಖಲಿಸಲು ಇಲ್ಲಿ ಒತ್ತಿ
  2. ಕಲಿಕಾರ್ಥಿಗಳು ದಾಖಲಿಸಿರುವ ಹಿಮ್ಮಾಹಿತಿ ಸಾರಾಂಶ

ವರದಿಗಳು

ಐದು ದಿನದ ಕಾರ್ಯಾಗಾರದ ವರದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

ಕಲಬುರ್ಗಿ ವಿಭಾಗದ ಕನ್ನಡ ಸಂಪನ್ಮೂಲ ವ್ಯಕ್ತಿಗಳ ಕಾರ್ಯಗಾರ- 2 ಜುಲೈ 06 ರಿಂದ 10, 2015

ಕಲಿಕಾರ್ಥಿಗಳ ಮಾಹಿತಿ

ಕಲಬುರ್ಗಿ ವಿಭಾಗದ ಸಂಪನ್ಮೂಲ ವ್ಯಕ್ತಿಗಳು ತಮ್ಮ ಮಾಹಿತಿ ದಾಖಲಿಸಲು ಇಲ್ಲಿ ಒತ್ತಿರಿ

ಕಾರ್ಯಾಗಾರದಲ್ಲಿ ನಮ್ಮನ್ನು ವೀಕ್ಷಿಸಿ

ವರದಿಗಳು

1ನೇ ದಿನದ ವರದಿ
ಎಸ್ .ಟಿ. ಎಫ್ ತರಬೇತಿ
ದಿನಾಂಕ ೬-೭-೨೦೧೫
೧೦-ರಿಂದ ೧೧ರವರೆಗೆ ನೊಂದಣಿ ಕಾರ್ಯ ಜರಗಿತು.
೧೧ ಗಂಟೆಗೆ ಕಾರ್ಯಕ್ರಮದ ಉದ್ಘಾಟನೆ ಪ್ರಾರಂಭವಾಯಿತು.
ಕಾರ್ಯಕ್ರಮದ ಅಧ್ಯಕ್ಷರು ಬಿ. ಎಡ್ ಕಾಲೇಜಿನ ಪ್ರಾಚಾರ್ಯರಾದ ಶ್ರೀ ಬಸವೇಗೌಡರು ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ದೊಡ್ಡರಂಗಪ್ಪ ಅವರು ಮತ್ತು ಶ್ರೀ ಶಶಿಧರ ಅವರು ವಹಿಸಿಕೊಂಡಿದ್ದರು.
IT for change ನ ಶ್ರೀ ವೆಂಕಟೇಶ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು.
ಹೊಸ ತಂತ್ರಜ್ಞಾನವನ್ನು ಕಲಿಕೆಗೆ ಹೇಗೆ ಬಳಸಿಕೊಳ್ಳಬಹುದು ಎಂದು ಹೇಳಿದರು.
ಬದಲಾಗುತ್ತಿರುವ ಸಮಾಜಕ್ಕೆ ಸ್ಪಂದಿಸಬೇಕಾದರೆ ಕಂ೦ಪ್ಯೂಟರ್ ಕಲಿಕೆ ಅವಶ್ಯವಾಗಿ ಬೇಕೇ ಬೇಕು ಎಂದು ದೊಡ್ಡರಂಗಪ್ಪಾ ಅವರು ಹೇಳಿದರು. S T F ತರಬೇತಿಗೆ ಏನೇ ಸಹಾಯ ಬೇಕಾದರೂ ಕೇಳಿ ನೋಡಲ್ ಅಧಿಕಾರಿ ಶ್ರೀಶಶಿಕಾಂ ಅವರು ಹೇಳಿದರು. ಪ್ರಾಚಾರ್ಯರು ಅಧ್ಯಕ್ಷಿಯ ಭಾಷಣ ಮಾಡಿ ಎಸ್ ಟಿ ಎಫ್ ತರಬೇತಿಯಿಂದ ಎಲ್ಲಾ ತಂತ್ರಜ್ಞಾನ ಮಾಹಿತಿ ಪಡೆದುಕೊಂಡು ಕಕೆಯನ್ನು ಪರಿಣಾಮಕಾರಿಯಾಗಿ ಮಾಡಬೇಕೆಂದರು. ವೆಂಕಟೇಶ ಅವರು ಸ್ಮಾರ್ಟ್ ಫೋನ್ ಬಳಸಿ ಎಲ್ಲಾಮಾಹಿತಿಯನ್ನು ಸಂಗ್ರಹಿಸಿಕೊಂಡು ಚಟುವಟಿಕೆ ಆಧಾರದಿಮದ ಕಲಿಕೆಯಲ್ಲಿ ಹೊಸತನವನ್ನು ತಂದರೆ ಬೋಧನೆ ಪರಿಣಾಮಕಾರಿಯಾಗಿರುತ್ತದೆ ಎಂದರು.
ಎಸ್ ಆರ್ ಪಿ ಗಳಾದ ಶ್ರೀ ರಘುನಾಥ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ನಂತರು ಸ್ನ್ಯಾಕ್ಸ ಮತ್ತು ಟೀ ಕುಡುದು ಮತ್ತೆ ತರಬೇತಿ ಆರಂಭವಾಯಿತು. ರಘುನಾಥ, ಬಸವರಾಜ ಮೇಟಿ, ಬಸವರಾಜ ಗುಂಜಲ್ಲಿ ಮತ್ತು ರಾಘವೇಂದ್ರ ಅವರು ಕನ್ನಡ ಟೈಪ್ ರೈಟಿಂಗ್ ,ಟೆಕ್ಸ್ಟ ರೈಟಿಂಗ್, ಮತ್ತು ಐ ಡಿ ಕ್ರಿಯೆಟಿಂಗ್ ಮಾಡಿವುದನ್ನು ಕಲಿಸಿದರು. ನಂತರ ರುಚಿಕರವಾದ ಊಟ ಮಾಡಿ ಇನ್ನಷ್ಟು ಚೈತನ್ಯ ತುಂಬಿಕೊಡು ಮತ್ತೆ ಬಂದೆವು.
ಅಂತರ್ ಜಾಲದಿಂದ ಮಾಹಿತಿ ಕಾಪಿ ಮಾಡುವುದು ಅನಂತರ ಪೇಸ್ಟ್ ಮಾಡುವ ವಿಧಾನವನ್ನು ಹಂತಹಂತವಾಗಿ ಕಲಿಸಿದರು. ಪಾಠ ಬೋಧನೆ ಮಾಡುವುದನ್ನು ತಂಡಗಳಿಗೆ ಹಂಚಿದರು. ಮಾಹಿತಿ ಸಂಗ್ರಹಿಸಲು ಹೇಳಿದರು.
ಹೀಗೆ ದಿನ ಪೂರ್ತಿ ಅತೀ ಉತ್ಸಾಹದಿಂದ ಅನೇಕ ಮಾಹಿತಿ ಪಡೆದುಕೊಂಡು ಮನೆಗೆ ತೆರಳಿದೆವು.


ಐದು ದಿನದ ಕಾರ್ಯಾಗಾರದ ವರದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

ಮುಂದಿನ ಕಾರ್ಯಯೋಜನೆಗಳು

ಮೈಸೂರು ವಿಭಾಗದ ಕನ್ನಡ ಸಂಪನ್ಮೂಲ ವ್ಯಕ್ತಿಗಳ ಕಾರ್ಯಗಾರ ಆಗಸ್ಟ್ 24-282015

ಕಲಿಕಾರ್ಥಿಗಳ ಮಾಹಿತಿ

ಕಲಿಕಾರ್ಥಿಗಳ ಮಾಹಿತಿ ದಾಖಲಿಸಲು ಇಲ್ಲಿ ಕ್ಲಿಕ್ ಮಾಡಿ

ಕಾರ್ಯಾಗಾರದ ಹಿಮ್ಮಾಹಿತಿ

ಕಾರ್ಯಾಗಾರದ ಬಗೆಗಿನ ಹಿಮ್ಮಾಹಿತಿ ನೀಡಲು ಇಲ್ಲಿ ಕ್ಲಿಕ್ ಮಾಡಿ

ಕಾರ್ಯಾಗಾರದಲ್ಲಿ ನಮ್ಮನ್ನು ವೀಕ್ಷಿಸಿ

ವರದಿಗಳು

ಐದು ದಿನದ ಕಾರ್ಯಾಗಾರದ ವರದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

ಮುಂದಿನ ಕಾರ್ಯಯೋಜನೆಗಳು

ಬೆಳಗಾವಿ ವಿಭಾಗದ ಕನ್ನಡ ಸಂಪನ್ಮೂಲ ವ್ಯಕ್ತಿಗಳ ಕಾರ್ಯಗಾರ 2015

ಕಲಿಕಾರ್ಥಿಗಳ ಮಾಹಿತಿ

  1. ಕಲಿಕಾರ್ಥಿಗಳ ಮಾಹಿತಿ ತುಂಬಲು ಇಲ್ಲಿ ಕ್ಲಿಕ್ ಮಾಡಿ
  2. ಬೆಳಗಾವಿ ವಿಭಾಗದ ಸಂಪನ್ಮೂಲ ವ್ಯಕ್ತಿಗಳ ಮಾಹಿತಿಯನ್ನು ಇಲ್ಲಿ ನೋಡಿ
  3. ಕಾರ್ಯಗಾರದ ಐದನೇ ದಿನ ಕಾರ್ಯಗಾರದ ಬಗೆಗಿನ ಹಿಮ್ಮಾಹಿತಿ ನೀಡಲು ಇಲ್ಲಿ ಕ್ಲಿಕ್ ಮಾಡಿ

ಕಾರ್ಯಾಗಾರದಲ್ಲಿ ನಮ್ಮನ್ನು ವೀಕ್ಷಿಸಿ

ವರದಿಗಳು

ಕನ್ನಡ ವಿಷಯ ಶಿಕ್ಷಕರ ವೇದಿಕೆ
೨೦೧೫-೨೦೧೬ರ ಎಂ, ಆರ್, ಪಿ, ತರಬೇತಿಯ ವರದಿ
ದಿನಾಂಕ;೦೭/೦೮/೨೦೧೫.
ಸ್ಥಳ: ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ
ಧಾರವಾಡ.
ವರದಿ ಮಂಡನೆ
ಮಲೆನಾಡ ಜಿಲ್ಲೆ ಶಿವಮೊಗ್ಗ ತಂಡದಿಂದ
ತಂಡದ ಸದಸ್ಯರು:

  1. ಶ್ರೀ ಗಣಪತಿ ಉಪನ್ಯಾಸಕರು ಡಯಟ್ ಶಿವಮೊಗ್ಗ.
  2. ಶ್ರೀ ಶಿವಾನಂದ ಹೆಚ್ ಜೆ ಕನ್ನಡ ಶಿಕ್ಷಕರು ಆನವೇರಿ ಭದ್ರಾವತಿ
  3. ಶ್ರೀ ಗವಿರಂಗಪ್ಪ ಸಿ ಕನ್ನಡ ಶಿಕ್ಷಕರು ಬಾಳೇಮಾರನಹಳ್ಳಿ ಭದ್ರಾವತಿ
  4. ಶ್ರೀ ಗೋಪ ಕನ್ನಡ ಶಿಕ್ಷಕರು ಸಾಗರ ತಾಲ್ಲೂಕು
  5. ಶ್ರೀ ಗಣಪತಿ ಕನ್ನಡ ಶಿಕ್ಷಕರು ಸಾಗರ ತಾಲ್ಲೂಕು.

ವರದಿ

  1. ಈ ದಿನ ವಿಜಯಪುರ ತಂಡದಿಂದ ಪ್ರಮೋದ ರೇ ಮೆಂಚ.ಇವರ ಶಿವನ ಪ್ರಾರ್ಥನೆಯೊಂದಿಗೆ ತರಬೇತಿಯು ಪ್ರಾರಂಭವಾಯಿತು.
  2. ವಿಜಯಪುರ ತಂಡದ ಶ್ರೀ ಬಾಲಿ ರವರು ದಿನಾಂಕ:೦೬/೦೮/೨೦೧೫ ರಂದು ನಡೆದ ತರಬೇತಿಯ ವರದಿಯನ್ನು ತುಂಬಾ ಸುಂದರವಾಗಿ ಮಂಡಿಸಿದರು.

ಪಾಠದ ಚೌಕಟ್ಟು
ಶಿವಮೊಗ್ಗ ತಂಡದಿಂದ ಶಬರಿ
ಗದಗದ ತಂಡದಿಂದ ಎದೆಗೆ ಬಿದ್ದ ಅಕ್ಷರ
ವಿಜಯಪುರ ತಂಡದಿಂದ ವಚನ ಸೌರಭ
ಉತ್ತರ ಕನ್ನಡ ತಂಡದಿಂದ ಹಕ್ಕಿ ಹಾರುತಿದೆ ನೋಡಿದಿರಾ
ಬಳ್ಳಾರಿ ತಂಡದಿಂದ ಕೌರವೇಂದ್ರನ ಕೊಂದೆ ನೀನು
ಈ ಗದ್ಯ ಹಾಗೂ ಪದ್ಯಗಳ ಪಾಠದ ಚೌಕಟ್ಟನ್ನು ಮಂಡಿಸಲಾಯಿತು
. ಎರಡನೇ ಅವಧಿ
ಶ್ರೀ ವೆಂಕಟೇಶ್ ರವರು ಎಲ್ಲಾ ಶಿಭಿರಾರ್ಥಿಗಳಿಗೆ ಯೂಟ್ಯೂಬ್ ನಿಂದ ವೀಡಿಯೋಗಳನ್ನು ಡೌನ್ ಲೋಡ್ ಹಾಗೂ ಅಪ್ ಲೋಡ್ ಮಾಡುವ ಬಗೆಯನ್ನು ಬಹಳ ಅರ್ಥಪೂರ್ಣವಾಗಿ ಎಲ್ಲರ ಮನಮುಟ್ಟುವಂತೆ ವಿವರಿಸಿದರು
ಊಟದ ವಿರಾಮ
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಧಾರವಾಡದ ತರಬೇತಿ ಸಂಯೋಜಕರಾದ ಶ್ರೀಮತಿ ಶಂಕ್ರಮ್ಮ ಡವಳಗೀ. ರವರು ಎಲ್ಲರಿಗೂ ಶುಚಿಯಾದ ಮತ್ತು ರುಚಿಯಾದ ಊಟದ ವ್ಯವಸ್ಥೆಯನ್ನು ಮಾಡಿದರು.
ಮೂರನೇ ಅವಧಿ
ಈ ಅವಧಿಯಲ್ಲಿ ಶ್ರೀ ವೆಂಕಟೇಶ್ ರವರು ಒಬಂಟುವನ್ನು ಕಂಪ್ಯೂಟರ್ ಗಳಿಗೆ ಇನ್ ಸ್ಟಾಲ್ ಮಾಡುವ ಬಗೆಯನ್ನು ವಿವರಿಸಿದರು.
ಸಮಾರೋಪ ಸಮಾರಂಭ
ಶ್ರಿ ಗಂಗಪ್ಪ ಪ್ರಾಂಶುಪಾಲರು ಡಯಟ್, ಧಾರವಾಡ. ಇವರ ಅಧ್ಯಕ್ಷತೆಯಲ್ಲಿ ಐದುದಿನಗಳ ಎಂ, ಆರ್, ಪಿ, ತರಬೇತಿಯ ಸಮಾರೋಪ ಸಮಾರಂಭ ಜರುಗಿತು.
ಶ್ರೀಮತಿ ಶಂಕ್ರಮ್ಮ ಢವಳಗೀ ಕಾರ್ಯಕ್ರಮ ನಿರೂಪಿಸಿ,ದರು.
ಶಿಭಿರಾರ್ಥಿಗಳಾದ ಶ್ರೀ ಶಿವಾನಂದ ಹೆಚ್, ಜೆ. ಹಾಗೂ ಶ್ರೀ ಬಾಲಚಂದ್ರ ಗುಣಿ, ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು
ರಂಗನಾಥ ವಾಲ್ಮೀಕಿಯವರು ವಂದಿಸಿದರು.
ತದನಂತರ ಸಾಮೂಹಿಕ ಭಾವಚಿತ್ರ ತೆಗೆಸಿ ಎಲ್ಲಾ ಸಂಪನ್ಮೂಲ ವ್ಯಕ್ತಿಗಳಿಗೆ ಕೃತಜ್ಞತೆ ಸಲ್ಲಿಸಲಾಯಿತು
. ವಂದನೆಗಳೊಂದಿಗೆ
ಶ್ರೀ ಶಿವಾನಂದ ಹೆಚ್, ಜೆ.
ಕನ್ನಡ ಭಾಷಾ ಶಿಕ್ಷಕರು
ಸ. ಪ್ರೌ ಶಾಲೆ. ಆನವೇರಿ ಭದ್ರಾವತಿ
ಶಿವಮೊಗ್ಗ. ಜಿಲ್ಲೆ.
'ಕನ್ನಡ ಎಸ್ ಟಿ ಎಫ್ ಎಮ್ ಆರ್ ಪಿ ಎರಡು ಹಂತದ ತರಬೇತಿಯ ವರದಿ
ದಿನಾಂಕ: 03-08-2015 ಮತ್ತು 17-08-2015ರಂದು ನಡೆದ 5 & 3 ದಿನಗಳ ಎಮ್ ಆರ್ ಪಿ ತರಬೇತಿಯು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಧಾರವಾಡ ಇಲ್ಲಿ ನಡೆದಿತ್ತು. ತರಬೇತಿಯಲ್ಲಿ ಶಿವಮೊಗ್ಗ ವಿಜಯಪೂರ , ಬಳ್ಳಾರಿ , ಗದಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಂದ MRPಗಳಾಗಿ ಶಿಬಿರಾರ್ಥಿಗಳು ಭಾಗವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ಬಸವರಾಜ ಪೂಜಾರ, ಶ್ರೀ ರಂಗನಾಥ ವಾಲ್ಮೀಕಿ, ಶ್ರೀ ಪೈಗಂಬರ ಕಲಾವಂತ, ಶ್ರೀ ಮಂಜುನಾಥ ಮತ್ತು IT For Changeನ ಸಂಪನ್ಮೂಲ ವ್ಯಕ್ತಿಯಾದ ಶ್ರೀ ವೆಂಕಟೇಶ ಭಾಗವಹಿಸಿದ್ದರು.
ತರಬೇತಿಯು ಡಯಟ್‌ನ ಪ್ರಾಚಾರರ್ಯರಾದ ಶ್ರೀ ಆರ್ ಗಂಗಪ್ಪನವರ ಆರಂಭಿಕ ಮಾತುಗಳಿಂದ ಆರಂಭಗೊಂಡಿತು. ಇಲ್ಲಿಯ ತರಬೇತಿಯ ವಿಷಯಗಳನ್ನು ಅರಿತುಕೊಂಡು ನಿಮ್ಮ ಜಿಲ್ಲೆಯಲ್ಲಿ ಕನ್ನಡ ಭಾಷಾ ಶಿಕ್ಷಕರಿಗೆ ತಿಳಿಸುತ್ತಾ ತರಗತಿಯಲ್ಲಿ ಅಳವಡಿಸಿಕೊಳ್ಳಲು ಸಜ್ಜರಾಗಿರಿ ಎಂಬ ಕಿವಿ ಮಾತನ್ನು ಹೇಳಿದರು. ನೋಡಲ್ ಅಧಿಕಾರಿಗಳಾದ ಶ್ರೀ ಮತಿ ಶಂಕ್ರಮ್ಮ ಢವಳಗಿ ಅವರು ಇಲ್ಲಿಯ ಸಂಪನ್ಮೂಲವನ್ನು ಸದ್ವಿನಿಯೋಗ ಪಡಿಸಿಕೊಳ್ಳುವಂತೆ ತಿಳಿ ಹೇಳಿದರು .
ತರಬೇತಿಯ ಉದ್ದೇಶ ಮತ್ತು ಮಹತ್ವ
ರಾಜ್ಯದ ಪ್ರೌಢಶಾಲೆಗಳಲ್ಲಿ ಕನ್ನಡ ವಿಷಯವನ್ನು ಬೋಧಿಸುತ್ತಿರುವ ಕನ್ನಡ ಭಾಷಾ ಶಿಕ್ಷಕರಿಗೆ ಗಣಕ ಯಂತ್ರದ ಜ್ಞಾನವನ್ನು ನೀಡುವದರ ಜೊತೆಗೆ ಹೊಸ ತಂತ್ರಜ್ಞಾನ ಉಬುಂಟು ಬಳಸಿಕೊಂಡು ತಮ್ಮ ತಮ್ಮ ಪಠ್ಯಕ್ರಮದ ವಿಸಯಗಳನ್ನು ಅಂತರ್‌ ಜಾಲದಿಂದ ಹುಡುಕಿಕೊಂಡು ತರಗತಿಯಲ್ಲಿ ಬಳಸಿಕೊಳ್ಳುವಂತೆ ಪ್ರೇರಣೆ ನೀಡುವುದು. ಅಲ್ಲದೆ ತಮ್ಮ ಸಹೊದ್ಯೋಗಿಗಳಿಂದ ರಚಿಸಲ್ಪಟ್ಟ ಹೊಸ ವಿಷಯಗಳನ್ನು ಅಳವಡಿಕೊಳ್ಳುವದು. ಮತ್ತು ತಾವೇನಾದರು ಹೊಸ ವಿಷಯಗಳನ್ನು ಆವಿಷ್ಕರಿಸಿದ್ದರೆ ಅದನ್ನು ಗುಂಪುಗಳಲ್ಲಿ ಹಂಚಿಕೊಂಡು ತಮ್ಮ ಪಾಠಕ್ಕೆ ಬಳಸಿಕೊಳ್ಳುವಂತೆ ಪ್ರೇರಣೆ ನೀಡುವುದು .
ತರಬೇತಿ ನೀತಿ ನಿಯಮಗಳನ್ನು ವಿವರಿಸುತ್ತಿರುವ ನೋಡಲ್ ಅಧಿಕಾರಿಗಳು, ಶ್ರೀಮತಿ ಶಂಕ್ರಮ್ಮ ಢವಳಗಿ
ಇಲಾಖೆಯು ಸೂಚಿಸಿದ ಪಠ್ಯಕ್ರಮದಂತೆ ಪ್ರತಿದಿನ ಬೆಳಗ್ಗೆ 9:30 ರಿಂದ ಸಾಯಂಕಾಲ 5:30ರವರೆಗೆ ಪಾಠಗಳು ಸಾಗುತ್ತಿದ್ದವು. ಶಿಬಿರಾರ್ಥಿಗಳು ಹೊಸ ವಿಷಯ ಬಂದಾಗ ಉತ್ಸಾಹದಿಂದ ಕಲಿತು ತಮ್ಮ ತಮ್ಮ ಗಣಕಯಂತ್ರಗಳಲ್ಲಿ ಪ್ರಯೋಗಶೀಲರಾಗುತ್ತಿದ್ದರು. .ಶಿಬಿರಾರ್ಥಿಗಳಿಗೆ ಕಂಪ್ಯೂಟರ್ , ಮಹತ್ವ ಬಳಸುವ ವಿಧಾನ , ಹೊಸ ತಂತ್ರಜ್ಞಾನ, ಉಚಿತ ತಂತ್ರಾಂಶ ಹೊಂದಿದ UBUNTU ಪರಿಚಯ , ಅಂತರ್ ಜಾಲ ಬಳಕೆ, Email ಗಳ ಸೃಷ್ಟಿ ಮತ್ತು ಬಳಸುವ ವಿಧಾನ ಅಲ್ಲದೆ UBUNTU ತಂತ್ರಾಂಶದಲ್ಲಿರುವ ಲಿಬ್ರೆ ರೈಟರ್, ಇಂಪ್ರೇಶ್ , ಜಿಂಪ್ ಎಡಿಟರ್, ಕ್ಯಾಲ್ಕ,ಆಡಿಯೋ ಸಿಟಿ, ವೆಬ್ ಬ್ರೌಜರ್, ಚಿತ್ರಗಳ ಸಂಗ್ರಹ, ವಿಡಿಯೋಗಳ ಸಂಗ್ರಹ, ಮುಂತಾದ ವಿಷಯಗಳ ಬಗ್ಗೆ ತಿಳಿಸಿಕೊಡಲಾಯಿತು.
ತರಬೇತಿ ಪಡೆಯುವಲ್ಲಿ, ನೀಡುವಲ್ಲಿ ನಿರತರಾದ ಸಂಪನ್ಮೂಲ ವ್ಯಕ್ತಿಗಳು ಮತ್ತು ಶಿಬಿರಾರ್ಥಿಗಳು
ಒಟ್ಟಿನಲ್ಲಿ ಎಂಟು ದಿನಗಳ ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿಗಳನ್ನು ತಂತ್ರಾಂಶ ಮತ್ತು ಪಠ್ಯ ಜ್ಞಾನದಲ್ಲಿ ಸಜ್ಜುಗೊಳಿಸಿ ತಮ್ಮ ತಮ್ಮ ಜಿಲ್ಲೆಯಲ್ಲಿ ಕನ್ನಡ ಭಾಷಾ ಶಿಕ್ಷಕರಿಗೆ ತರಬೇತಿ ನೀಡಲು ಸಜ್ಜುಗೊಳಿಸಲಾಯಿತು.
ಐದು ದಿನದ ಕಾರ್ಯಾಗಾರದ ವರದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

ಕಾರ್ಯಗಾರದ ಬಗೆಗಿನ ಹಿಮ್ಮಾಹಿತಿ

ಎರಡನೇ ಹಂತದ ಕಾರ್ಯಗಾರದ ಬಗೆಗಿನ ಹಿಮ್ಮಾಹಿತಿಯನ್ನು ನೀಡಲು ಇಲ್ಲಿ ಕ್ಲಿಕ್ ಮಾಡಿ