ಚಿತ್ರ:OER Note .odt ಮುಕ್ತ ಶೈಕ್ಷಣಿಕ ಸಂಪನ್ಮೂಲ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಮುಕ್ತ ಶೈಕ್ಷಣಿಕ ಸಂಪನ್ಮೂಲ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು 2005 ರ ಬಗ್ಗೆ ನಿಮಗೆ ತಿಳಿದಿದೆ, ಇದು ಹೇಳುವುದೇನೆಂದರೆ ಶಿಕ್ಷಣ ಸಂದರ್ಭೋಚಿತ ,ಅಂತರ್ಗತ ಮತ್ತು ಅರ್ಥಪೂರ್ಣವಾಗಿರಬೇಕು ಎಂದು .ನಿಮ್ಮ ಪಠ್ಯಕ್ರಮದ ಶಿಕ್ಷಣ ವಿಭಾಗದಲ್ಲಿ ನೀವು ಈಗಾಗಲೇ ರಚನಾತ್ಮಕ ಕಲಿಕಾ ಮಾದರಿಗಳ ಬಗ್ಗೆ ಅಧ್ಯಾಯನ ಮಾಡಿದ್ದೀರಾ.ಈ ವಿಚಾರಗಳು ಸತ್ಯ, ಪ್ರಶಿಕ್ಷಕರಿಗೆ ಮತ್ತು ಪ್ರಶಿಕ್ಷಣಾರ್ಥಿಗಳಿಗೆ ಸೂಕ್ತ ಸಂಪನ್ಮೂಲಗಳು ಲಭ್ಯವಿರಬೇಕು. ಈ ಸಂಪನ್ಮೂಲಗಳು ಸಂದರ್ಭೋಚಿತವಾಗಿ ಸುಲಭವಾಗಿ ಸಿಗುವಂತೆ ಇರಬೇಕು ಮತ್ತು ಕಲಿಕಾರ್ಥಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಅವುಗಳನ್ನು ಬದಲಾವಣೆ ಮಾಡಿಕೊಳ್ಳಲು ಅವಕಾಶವಿರಬೇಕು. ಪ್ರಸ್ತುತ ಈಗ ,ಅನೇಕ ಸಂದರ್ಭಗಳಲ್ಲಿ ಶಿಕ್ಷಕರಿಗೆ ಪಠ್ಯಪುಸ್ತಕವೇ ಅತ್ಯಂತ ಮುಖ್ಯವಾದ ಸಂಪನ್ಮೂಲವಾಗಿದೆ, ಆದರೆ ಅದೊಂದೇ ಸಂಪನ್ಮೂ ಲ ವಲ್ಲ. ಪಠ್ಯಪುಸ್ತಕ ಸೀಮಿತ ಸಂಪನ್ಮೂಲವನ್ನು ಹೊಂದಿರುತ್ತದೆ ಮತ್ತು ವರ್ಷಕ್ಕೆ ಒಂದು ಬಾರಿ ರಚಿಸಲಾಗುತ್ತದೆ. ಮತ್ತು ಕೆಲವು ಚಿಂತನೆಗಳನ್ನು ಪ್ರತಿನಿಧಿಸುತ್ತದೆ. ಇದು ಹೆಚ್ಚು ಪಠ್ಯ ಆಧಾರಿತವಾಗಿರುತ್ತದೆ ಮತ್ತು ಸಿಮೀತ ಆಡೀಯೋ ಮತ್ತು ವೀಡಿಯೋ ಸಂಪನ್ಮೂಲಗಳನ್ನು ಹೊಂದಿದ್ದು ಮಕ್ಕಳ ಬಹು ಕಲಿಕಾ ಅವಶ್ಯಕತೆಗಳಿಗೆ ಅನುಗುಣವಾಗಿಲ್ಲದಿರಬಹುದು.ಹೆಚ್ಚುವರಿ ಸಂಪನ್ಮೂಲಗಳು ಸಿಗುತ್ತವೆ. ವಿದ್ಯುನ್ಮಾನ ವಲ್ಲದ ಸಂಪನ್ಮೂಲಗಳು ಲಭ್ಯವಾಗಿದ್ದು ವೆಚ್ಚದಾಯಕವಾಗಿವೆ. ಸುಲಭವಾಗಿ ಸ್ಥಳೀಯ ಅಗತ್ಯಗಳು ಹಾಗೂ ಸಂದರ್ಭಗಳಲ್ಲಿ ಮಾರ್ಪಡಿಸಲಾಗಲು ಸಾಧ್ಯವಾಗುವುದಿಲ್ಲ. ವಿಮರ್ಶಾತ್ಮಕ ಮತ್ತು ವೈವಿಧ್ಯಮಯ ದೃಷ್ಟಿಕೋನಗಳು ಬರಬೇಕಾದರೆ ಬಹುವಿಧದ ಸಂಪನ್ಮೂಲಗಳು ಲಭ್ಯವಿರಬೇಕು . ಜ್ಞಾನದ ನಿರ್ಮಾಣ ಮತ್ತು ಹಂಚಿಕೆ ಮಾಡಿಕೊಳ್ಳಲು ಹೆಚ್ಚಿನ ಸಾಧ್ಯತೆಗಳು ಇರಬೇಕು .ಕೆಲವು ಜ್ಞಾನದ ಸ್ವರೂಪಗಳನ್ನು ಅಂದರೆ ಮುಖ್ಯವಿರುವ ವಿಷಯಗಳನ್ನು ಉಳಿಸಿಕೊಂಡು ಉಳಿದವು ನಾಶವಾಗುತ್ತವೆ . ಜ್ಞಾನದ ಹಂಚಿಕೆ ಮುಕ್ತವಾಗಿ ಆಗಬೇಕಾದರೆ , ಶೈಕ್ಷಣಿಕ ಸಂಪನ್ಮೂಲಗಳು ಕೂಡ ಮುಕ್ತವಾಗಿ ಲಭ್ಯವಾಗಬೇಕು , ಹಂಚಿಕೆ ಮಾಡಲು ಮತ್ತು ತಮ್ಮ ಸ್ಥಳಿಯ ಪರಿಸರಕ್ಕೆ ತಕ್ಕಂತೆ ಬದಲಾವಣೆ ,ಅವಶ್ಯಕತೆ ಮತ್ತು ಸಂಧಂರ್ಭಕ್ಕೆ ತಕ್ಕಂತೆ ಬಳಕೆ ಮಾಡಿಕೊಳ್ಳುವ ಮುಕ್ತವಾಗಿರಬೇಕು. ಜ್ಞಾನದ ರಚನೆ ,ಹಂಚಿಕೆ ಮತ್ತು ವಿತರಣೆಯಲ್ಲಿ ಐಸಿಟಿ ಯ ಪಾತ್ರವನ್ನು ನೀವು ಐಸಿಟಿ ಮತ್ತು ಸಮಾಜ ವಿಭಾಗದಲ್ಲಿ ಅಭ್ಯಾಸ ಮಾಡಬಹುದು. ಮೇಲೆ ಹೇಳಿದ ರೀತಿಯ ಸಂಪನ್ಮೂಲಗಳನ್ನು ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು (OERs) ಎಂದು ಕರೆಯುತ್ತಾರೆ. ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಎಲ್ಲಾವು ಮುಕ್ತವಾಗಿ ಲಭ್ಯವಾಗುವ ವಿದ್ಯುನ್ಮಾನ ಸಂಪನ್ಮೂಲಗಳಾಗಿರುತ್ತವೆ , ಇವುಗಳು ಬಹು ಸ್ವರೂಪಗಳಲ್ಲಿ ಅಂದರೆ ಪಠ್ಯ, ಆಡೀಯೋ, ವೀಡಿಯೋ ಗಳಲ್ಲಿ ಕಲಿಕಾರ್ಥಿಗಳ ಅಗತ್ಯತೆಗೆ ಅನುಗುಣವಾಗಿ ಲಭ್ಯವಾಗುತ್ತವೆ . ೨೦೦೧ ರಲ್ಲಿ ಜಾಗತಿಕ ವಿದ್ಯಮಾನವು ವಿಕಿಪಿಡಿಯದಿಂದ ಆರಂಭ ವಾಯಿತು,(www.wikipedia.org). ಜ್ಞಾನವು ರಚನೆಯಾಗಿ ಅದು ಅನೇಕ ವ್ಯಕ್ತಿಗಳೊಂದಿಗೆ ಹಂಚಿಕೆ ಆಗಬೇಕು ,ಕೇವಲ ಒಬ್ಬ ವ್ಯಕ್ತಿ ಹತ್ತಿರ ಅದು ನಿರ್ಭಂಧ ವಾಗಬಾರದು. ಅಮೇರಿಕಾದ ಪ್ರಸಿದ್ಧ ವಿಶ್ವವಿದ್ಯಾಲಯವಾದ ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ೨೦೦೧ ರಲ್ಲಿ ಅನೇಕ ಕೋರ್ಸ್ ಸಾಮಗ್ರಿಗಳನ್ನು ಮುಕ್ತವಾಗಿ ಬಿಡುಗಡೆ ಮಾಡಿತು ಇದನ್ನು open courseware ಎನ್ನುವರು. ಸಬ್ ಸಹಾರನ್ ಆಫ್ರಿಕಾದಲ್ಲಿ ಶಿಕ್ಷಕರ ಶಿಕ್ಷಣದಲ್ಲಿ ಎಲ್ಲಾರ ಸಹಯೋಗದೊಂದಿಗೆ ಶೈಕ್ಷಣಿಕ ಸಂಪನ್ಮೂಲಗಳನ್ನು ಶಿಕ್ಷಕರ ಶಿಕ್ಷಣಕ್ಕಾ ಗಿ ಬೆಳವಣಿಗೆ ಮಾಡಿದರು ಮತ್ತು ಇದನ್ನು http://www.tessafrica.net ಪ್ರಕಟಮಾಡಿದರು. ಆರಂಭದಲ್ಲಿ ಪ್ರಕಟವಾದ ಕೆಲವು ಮುಕ್ತ ಸಂಪನ್ಮೂಲಗಳು . ಈಗ ಪ್ರಪಂಚದದ್ಯಾಂತ ಬೋಧನೆ ಮತ್ತು ಕಲಿಕೆಗಾಗಿ ಅನೇಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಬಳಕೆಗೆ ಲಭ್ಯಯಿವೆ. ರಾಷ್ಟ್ರೀಯ ತಂತ್ರಜ್ಞಾನ ವರಧಿತ ಕಲಿಕಾ ಕಾರ್ಯಕ್ರಮ (NPTEL) (http://nptel.iitk.ac.in)ಮತ್ತು ಇಗ್ನೋ ದಲ್ಲಿ ಮುಕ್ತ ಶೈಕ್ಷಣಿಕ ಸಂಪನ್ಮೂಲಕ್ಕೆ ಸಂಬಂಧಿಸಿದಂತೆ ಅನೇಕ ಕೋರ್ಸಗಳನ್ನು ಮಾಡಲು ಅವಕಾಶವಿದೆ.

ಮುಕ್ತ ಶೈಕ್ಷಣಿಕ ಸಂಪನ್ಮೂಲ OERs ಪ್ರಕಾರಗಳು ಮುಕ್ತ ಶೈಕ್ಷಣಿಕ ಸಂಪನ್ಮೂಲ ಗಳಲ್ಲಿ ಅನೇಕ ಪ್ರಕಾರಗಳಿವೆ. ಈಗಾಗಲೇ ರಚಿತವಾದ ಸಂಪನ್ಮೂಲಗಳನ್ನು ಮುಕ್ತ ವಾಗಿ ಹಂಚಿಕೆ ಮಾಡುವುದು. www.khanacademy.org; www.tessafrica.net ಮುಕ್ತ ಪಠ್ಯ ಸಾಮಾಗ್ರಿಗಳನ್ನು ಮತ್ತು ಕೋರ್ಸಗಳನ್ನು ರೂಪಿಸುವುದು www.nroer.metastudio.org; www.edx.org; www.coursera.org ; www.nptel.iitk.ac.in ಸಹಯೋಜಿತ ಸಂಪನ್ಮೂಲ ರಚನೆ . ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲ ಯೋಜನೆಯು DSERT ಕರ್ನಾಟಕ ದ ಯೋಜನೆಯಾಗಿದೆ, ಶೈಕ್ಷಣಿಕ ಸಂಪನ್ಮೂಲಗಳನ್ನು ರಚನೆ ಮತ್ತು ಹಂಚಿಕೆ ಮಾಡಲು ಶಿಕ್ಷಕರಿಗೆ ಬೆಂಬಲವನ್ನು ನೀಡುತ್ತದೆ. ಮುಕ್ತ ಶೈಕ್ಷಣಿಕ ಸಂಪನ್ಮೂಲ OERs ತತ್ವಗಳು ಮುಕ್ತ ಶೈಕ್ಷಣಿಕ ಸಂಪನ್ಮೂಲದಲ್ಲಿನ ಸಂಪನ್ಮೂಲಗಳು ಕಲಿಕಾರ್ಥಿಗಳಿಗೆ/ಬಳಕೆದಾರರಿಗೆ ಕೆಲವೊಂದು ಸ್ವಾತಂತ್ರವನ್ನು ಒದಗಿಸಿಕೊಟ್ಟಿದೆ.ಆ ಸ್ವಾತಂತ್ರಗಳು ಈ ಕೆಳಗಿನಂತಿವೆ :

  1. ಸಂಪನ್ಮೂಲಗಳನ್ನು ಮುಕ್ತವಾಗಿ ಪಡೆದು,ಅವುಗಳನ್ನು ಬಳಕೆ ಮತ್ತು ಮರುಬಳಕೆ ಮಾಡಬಹುದು.
  2. ಸಂಪನ್ಮೂಲಗಳನ್ನು ಪರಿಷ್ಕರಿಸಿ ಮತ್ತು ತಮಗೆ ಸೂಕ್ತವಾಗುವಂತೆ ಅಳವಡಿಕೆ ಮಾಡಿಕೊಳ್ಳಬಹುದು.
  3. ಸಂಪನ್ಮೂಲಗಳನ್ನು ಮರು ಮಿಶ್ರಣ ಮತ್ತು ಸಂಯೋಜನೆ ಮಾಡಿ ಹೊಸ ಸಂಪನ್ಮೂಲಗಳನ್ನು ರಚನೆ ಮಾಡಬಹುದು.
  4. ಸಂಪನ್ಮೂಲಗಳನ್ನು ಮರು ಹಂಚಿಕೆ ಮಾಡಬಹುದು- ಪರಿಷ್ಕೃತ / ಮರುಮಿಶ್ರಣ ಮಾಡಿ ಮರು ಹಂಚಿಕೆ ಮಾಡಬಹುದು. ಇವುಗಳನ್ನು ನಾವು 4 Rs ಮರುಬಳಕೆ, ಪರಿಷ್ಕರಿಸು , ಮರು ಮಿಶ್ರಣ ಮತ್ತು ಮರು ವಿತರಣೆ (re-use, re-vise, re-mix and re-distribute) ಎನ್ನುತ್ತೇವೆ .

ಈ ಫೈಲಿಗೆ ಯಾವ ಪುಟವೂ ಸಂಪರ್ಕ ಹೊಂದಿಲ್ಲ.