ಬೇಸಿಕ್ Libreoffice ಕೈಪಿಡಿ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಬೇಸಿಕ್ Libre office ಮತ್ತು ಕನ್ನಡ ಟೈಪಿಂಗ್ ಕೈಪಿಡಿಗಾಗಿ ಇಲ್ಲಿ ಒತ್ತಿ

ವರ್ಡ್ ಪ್ರೊಸೆಸರ್ ಎಂದರೇನು?

ವರ್ಡ್ ಪ್ರೊಸೆಸರ್ ಎಂಬುದು ದಾಖಲೆಗಳನ್ನು ಸೃಷ್ಟಿಸಲು, ತಿದ್ದಲು ಮತ್ತು ಮುದ್ರಿಸಲು ಉಪಯೋಗಿಸುವ ಒಂದು ವಿಧವಾದ ಆಪ್ಲಿಕೇಶನ್ ಸಾಫ್ಟ್ ವೇರ್. ಇದನ್ನು ಉಪಯೋಗಿಸಿ ಸೃಷ್ಟಿಸಬಹುದಾದ ಹಲವು ರೀತಿಯದಾಖಲೆಗಳೆಂದರೆ - ಪತ್ರಗಳು, ವರದಿಗಳು, ಮೆಮೋಗಳು ಮತ್ತು ಇತರೆ ವೈಯಕ್ತಿಕ , ವ್ಯಾವಹಾರಿಕ ಮತ್ತು ವೃತ್ತಿಗತ ದಾಖಲೆಗಳು. ಇದನ್ನು ಪಠ್ಯವನ್ನು ಫಾರ್ಮೆಟ್ ಮಾಡಲು, ಕಾಗುಣಿತವನ್ನು ಪರೀಕ್ಷಿಸಲು, ಟೇಬಲ್‌ಗಳನ್ನು ಸೇರಿಸಲು ಮತ್ತು ಸೂಕ್ತವಾದ ಚಿತ್ರಗಳನ್ನು ಸೇರಿಸಲು ಸಹ ಉಪಯೋಗಿಸಬಹುದು. ಇದು ಕೇವಲ ಸಮಯವನ್ನು ಉಳಿಸುವುದು ಮಾತ್ರವಲ್ಲದೆ ನಿಮ್ಮಲ್ಲಿರುವ ಕ್ರಿಯಾತ್ಮಕತೆಯನ್ನು ಹೊರತರಲು ಸಹಾಯ ಮಾಡುತ್ತದೆ. ಈಗಿನ ದಿನಗಳಲ್ಲಿ ಸಾಮಾನ್ಯವಾಗಿ ಅತಿಹೆಚ್ಚು ಉಪಯೋಗಿಸಲ್ಪಡುವ ವರ್ಡ್ ಪ್ರೊಸೆಸರ್ ಎಂದರೆ ಒಪೆನ್ ಆಫಿಸ್ ವರ್ಡ್ ಪ್ರೊಸೆಸರ್. ನೀವು ಕಛೇರಿಯ ಪತ್ರ ವ್ಯವಹಾರವನ್ನು ಲಿಖಿತವಾಗಿ ಮಾಡುವಾಗ, ಮತ್ತು ಅದೇ ಮಾಹಿತಿಯನ್ನು ಅನೇಕರಿಗೆ ಕಳುಹಿಸುವಾಗ, ಹೆಚ್ಚಿನ ಪ್ರತಿಯನ್ನು ತಯಾರಿಸುವ ಅಗತ್ಯತೆ ಇರುತ್ತದೆ. ಆಗ ಅಲ್ಲಿ ಸಮಯ ಮತ್ತು ಶಕ್ತಿಯ ಅಪವ್ಯಯವಾಗುತ್ತದೆ. ಇದರ ಬದಲಿಗೆ ಅದೇ ಪತ್ರವನ್ನು ಕಂಪ್ಯೂಟರ್‌ನಲ್ಲಿರುವ ವರ್ಡ್ ಪ್ರೊಸೆಸರ್ ಮೂಲಕ ಮಾಡಿದಾಗ ನಿಮ್ಮ ಕಾರ್ಯ ಸುಲಭಗೊಳ್ಳುತ್ತದೆ. ವರ್ಡ್ ಪ್ರೊಸೆಸರ್ ಅನ್ನು ಪ್ರಾರಂಭಿಸುವುದು:

ದಾಖಲೆಯನ್ನು ಸೃಷ್ಟಿಸಲು, ನೀವು ಮೊದಲು ವರ್ಡ್ ಪ್ರೊಸೆಸರ್ ಅನ್ನು ಪ್ರಾರಂಭಿಸಬೇಕು. ಮೊದಲಿಗೆ ಆಪ್ಲಿಕೇಶನ್ ಒತ್ತಿ ಮತ್ತು ಆಫಿಸ್ಅನ್ನು ಸೆಲೆಕ್ಟ್ ಮಾಡಿ ನಂತರ ವರ್ಡ್ ಪ್ರೊಸೆಸರ್ ಅನ್ನು ಕ್ಲಿಕ್ ಮಾಡಿ.

Lo1.jpg

ನೀವು ವರ್ಡ್ ಪ್ರೊಸೆಸರ್ ವಿಂಡೋವನ್ನು ತೆರೆದಿದ್ದೀರಿ. ಪರದೆಯ ಮೇಲೆ ಕಾಣುವ ಖಾಲಿಯಾದ ಬಿಳಿಯ ಸ್ಥಳವನ್ನು ಡಾಕ್ಯುಮೆಂಟ್ ಏರಿಯಾ ಎಂದು ಕರೆಯುತ್ತಾರೆ. ಈ ಸ್ಥಳದಲ್ಲಿ ನೀವು ಪಠ್ಯ, ಚಿತ್ರಗಳು ಮತ್ತು ಟೇಬಲ್ಗಳನ್ನು ಸೇರಿಸಬಹುದು.

ವರ್ಡ್ ಪ್ರೊಸೆಸರ್ ಇಂಟರ್ಫೇಸ್ ನ ಇತರ ಭಾಗಗಳು ಕೆಳಗಿನಂತಿವೆ.

ಟೈಟಲ್ ಬಾರ್ :

ಟೈಟಲ್ ಬಾರ್ , ದಾಖಲೆಯ ಮತ್ತು ಅಪ್ಲಿಕೇಶನ್‌ನ ಹೆಸರನ್ನು ಪ್ರದರ್ಶಿಸುತ್ತದೆ. ಅನ್ ಟೈಟಲ್ಡ್ 1 ವರ್ಡ್ ಪ್ರೊಸೆಸರ್ ಎಂದ ಟೈಟಲ್ ಬಾರ್ ಪ್ರದರ್ಶಿಸುತ್ತದೆ ಎಂದಿಟ್ಟು ಕೊಳ್ಳಿ. ಇಲ್ಲಿ, ಅನ್ ಟೈಟಲ್ಡ್ 1 ಎಂಬುದು ದಾಖಲೆಯ ಹೆಸರು ಮತ್ತು ವರ್ಡ್ಪ್ರೊಸಸರ್ ಎಂಬುದು ಅಪ್ಲಿಕೇಶನ್ನ ಹೆಸರು . Lob2.png


ಮೆನು ಬಾರ್ :

ನಿಮಗಾಗಿ ವರ್ಡ್ ಪ್ರೊಸೆಸರ್ ನಿರ್ವಹಿಸಬೇಕಾದ ಕಾರ್ಯಗಳಿಗೆ ಸೂಚನೆಗಳನ್ನು ಕೊಡಲು ಸಾಧ್ಯವಾಗಿಸುವಂತಹ ಕಮಾಂಡ್ ಗಳನ್ನು ಮೆನು ಬಾರ್ ಒದಗಿಸುತ್ತದೆ. ಉದಾಹರಣೆಗೆ, ವ್ಯೂ (view) ಒದಗಿಸುವ ಕಮಾಂಡ್‌ಗಳನ್ನು ಉಪಯೋಗಿಸಿ ನೀವು ದಾಖಲೆಯನ್ನು ವಿವಿಧ ರೀತಿಯಲ್ಲಿ ವೀಕ್ಷಿಸಬಹುದು.

Lob3.png


ಟೂಲ್ ಬಾರ್ :

ಟೂಲ್ ಬಾರ್ ಪದೇ ಪದೇ ನಿರ್ವಹಿಸುವ ಕಾರ್ಯಗಳಿಗೆ ಗುಂಡಿಗಳ ರೂಪದಲ್ಲಿ ಶಾರ್ಟ್ ಕಟ್ ಗಳನ್ನು ಒದಗಿಸುತ್ತದೆ.

Lob4.png

ರೂಲರ್ಸ್ :

ರೂಲರ್ಸ್ ಎಂಬುದು ಡಾಕ್ಯುಮೆಂಟ್ ಏರಿಯಾದ ಮೇಲ್ಭಾಗದಲ್ಲಿ ಮತ್ತು ಎಡಪಕ್ಕದಲ್ಲಿ ಹಾಯ್ದು ಹೋಗುವ ಬಂಧನಾರೇಖೆಗಳು. ಈ ಬಂಧನಾರೇಖೆಗಳನ್ನು ಉಪಯೋಗಿಸಿ , ಅಂಚುಗಳನ್ನು ಬದಲಾಯಿಸಬಹುದು ಮತ್ತು ಪಠ್ಯವನ್ನು ಪುಟದಲ್ಲಿ ಜೋಡಿಸಬಹುದು.

Lob5.png


ಇನ್‌ಸರ್ಷನ್ ಪಾಯಿಂಟ್ ಅಥವಾ ಕರ್ಸರ್ ಪಾಯಿಂಟ್ :

ಇನ್‌ಸರ್ಷನ್ ಪಾಯಿಂಟ್ ಎಂಬುದು ಮಿನುಗುತ್ತಿರುವ ಒಂದು ಉದ್ದ ಗೆರೆ ಮತ್ತು ಇದು ಪರದೆಯ ಮೇಲಿನ ಯಾವ ಸ್ಥಳ ದಲ್ಲಿ ಪಠ್ಯ ಮತ್ತು ಗ್ರಾಫಿಕ್ಸ್ ಗಳು ಇಡಲ್ಪಡುವುದೆಂಬುದನ್ನು ಸೂಚಿಸುತ್ತದೆ.

ಸ್ಕ್ರಾಲ್ ಬಾರ್: ಸ್ಕ್ರಾಲ್ ಬಾರ್ಸ್ ಗಳನ್ನು ದಾಖಲೆಯೊಳಗೆ ಮೇಲೆ ಮತ್ತು ಕೆಳಗೆ ಅಥವಾ ಎಡಕ್ಕೆ ಮತ್ತು ಬಲಕ್ಕೆ ಚಲಿಸಲು ಉಪಯೋಗಿಸುತ್ತಾರೆ.

Lob6.png


ಸ್ಟೇಟಸ್ ಬಾರ್ : ಚಾಲ್ತಿಯಲ್ಲಿರುವಂತಹ ಪುಟ, ದಾಖಲೆಯೊಳಗೆ ಒಟ್ಟು ಪುಟಗಳ ಸಂಖ್ಯೆ ಮತ್ತು ಇನ್ ಸರ್ಷನ್ ಪಾಯಿಂಟ್ ಈಗಿರುವ ಸ್ಥಳ ಇಂತಹ ವಿವರಗಳನ್ನು ಸ್ಟೇಟಸ್ ಬಾರ್ ಪ್ರದರ್ಶಿಸುತ್ತದೆ.

Lob7.png

ಹೊಸ ದಾಖಲೆಯೊಂದನ್ನು ಸೃಷ್ಟಿಸುವುದು:

ವರ್ಡ್ ಪ್ರೊಸೆಸರ್ ಆರಂಭಗೊಂಡಾಗ, ಅದು ಖಾಲಿಯಾದ ದಾಖಲೆಯೊಂದನ್ನು ಪ್ರದರ್ಶಿಸುತ್ತದೆ. ಆದರೆ, ವರ್ಡ್ ಪ್ರೊಸಸರ್ ವಿಂಡೋ ಈಗಾಗಲೇ ತೆರೆಯಲ್ಪಟ್ಟಿದ್ದಲ್ಲಿ, ಈ ಕೆಳಗಿನ ಕ್ರಮಗಳನ್ನು ಅನುಸರಿಸುವುದರ ಮೂಲಕ ನೀವು ಹೊಸದೊಂದು ಖಾಲಿ ದಾಖಲೆಯೊಂದನ್ನು ಸೃಷ್ಟಿಸಬಹುದು.

1 . ಫೈಲ್ ಮೆನುವಿನ ಮೇಲೆ, ನ್ಯೂ ಅನ್ನು ಕ್ಲಿಕ್ ಮಾಡಿ. ನ್ಯೂ ಡಾಕ್ಯೂಮೆಂಟ್‌ನ ಕಾರ್ಯ ಕಿಂಡಿ ಮೂಡುತ್ತದೆ.


2. ಟೆಕ್ಸ್ಟ್ ಡಾಕ್ಯೂಮೆಂಟ್‌ ಅನ್ನು ಕ್ಲಿಕ್ ಮಾಡಿ. ಇದು ಹೊಸದೊಂದು ಖಾಲಿಯಾದ ವರ್ಡ್ ಪ್ರೊಸೆಸರ್ ದಾಖಲೆಯನ್ನು ಸೃಷ್ಟಿಸುತ್ತದೆ.

Lob8.png


ಉಬಂಟುವಿನಲ್ಲಿ ಕನ್ನಡ ಟೈಪಿಂಗ್

ಉಬುಂಟುವಿನಲ್ಲಿ ಕನ್ನಡ ಓದುವುದು, ಬರೆಯುವುದು ಬಹಳ ಸುಲಭ. ಇತ್ತೀಚಿನ ಉಬುಂಟು ಆವೃತ್ತಿಗಳಲ್ಲಿ ಕನ್ನಡವನ್ನು ಯಾವುದೇ ಕಷ್ಟವಿಲ್ಲದೇ ಓದಬಹುದು. ಅದಕ್ಕೆ ಬೇಕಿರುವ ಕೆಲವು ಫಾಂಟ್ ಗಳು ಉಬುಂಟುವಿನ ಜೊತೆಯಲ್ಲಿಯೇ ಸ್ಥಾಪಿತವಾಗಿರುತ್ತವೆ. ಕನ್ನಡದಲ್ಲಿ ಟೈಪಿಸಲು ಐ-ಬಸ್ (ibus) ಎಂಬ ತಂತ್ರಾಂಶ ಲಭ್ಯವಿದ್ದು ಬಹಳ ಸಕ್ಷಮವಾಗಿ ಕೆಲಸ ಮಾಡುತ್ತಿದೆ. ಇದನ್ನು ನಿಮ್ಮ ಉಬುಂಟುವಿನಲ್ಲಿ ಸ್ಥಾಪಿಸಿಕೊಳ್ಳುವುದು ಸುಲಭ ಸಾಧ್ಯ. ಕೆಳಗೆ ಕೊಟ್ಟಿರುವ ಸಲಹೆಗಳನ್ನು ಅಂತೆಯೇ ಬಳಸಿ.

BUS ಅನ್ನು ಆಯ್ದು ಕೊಳ್ಳುವುದು ನಿಮ್ಮ ಭಾಷೆಯನ್ನು ಸೆಟ್ ಮಾಡುವುದು:

Lob9.png


  1. ಡೆಸ್ಕ್ ಟಾಪ್ ಮೇಲಿರುವ Application → System Tools → Ibus ಮೇಲೆ ಕ್ಲಿಕ್ ಮಾಡಿ.
  2. 'Input Method' ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
  3. ನಿಮ್ಮ ಭಾಷೆಯನ್ನು drop down ಮೆನುವಿನಿಂದ ಆರಿಸಿ.
  4. "Add" ಬಟನ್ ಮೇಲೆ ಕ್ಲಿಕ್ ಮಾಡಿ.
  5. ಅದನ್ನು ಎಲ್ಲಕ್ಕಿಂತ ಮೇಲೆ ತನ್ನಿ.
  6. Close ಬಟನ್ ಮೇಲೆ ಕ್ಲಿಕ್ ಮಾಡಿ.

kn-kgp (ನುಡಿ) ಕೀಲಿಮಣೆ ವಿನ್ಯಾಸ

Lob10.png


ಗಮನಿಸಿ : ಇಲ್ಲಿ ಅರ್ಕಾ ಒತ್ತು ಹಾಕಲು ಸ್ವಲ್ಪ ಬದಲಾವಣೆ ಮಾಡಬೇಕು ಉದಾ: ಸೂರ್ಯ ಎಂದು ಟೈಪ್ ಮಾಡಬೇಕಾದರೆ sUyFನ ಬದಲಾಗಿ sUrfy ಎಂದು ಟೈಪ್ ಮಾಡಬೇಕು. ಒಂದು ಪದದ ಮಧ್ಯದಲ್ಲಿ ವ್ಯಂಜನಾಕ್ಷರ ಬಂದಲ್ಲಿ, (ಉದಾ: ಇನ್‌ಸರ್ಟ್) inffsrfqff ಎಂದು ಟೈಪ್ ಮಾಡಿದಾಗ 'ನ್' ಅಕ್ಷರದ ನಂತರ ಬರುವ 'ಸ' ಅಕ್ಷರ ಒತ್ತಕ್ಷರವಾಗುವುದನ್ನು ತಪ್ಪಿ ಸಬಹುದು (ಎರಡು ಬಾರಿ 'f' ಅನ್ನು ಒತ್ತುವುದು)