ಭಾರತದ ಮಾನ್ಸೂನ್ ವಾಯುಗುಣ ಋತುಮಾನಗಳು ಮತ್ತು ಲಕ್ಷಣಗಳು ಭಾರತದಲ್ಲಿ ಮಳೆಯ ಹಂಚಿಕೆ ಚಟುವಟಿಕೆ 2

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search


ಚಟುವಟಿಕೆ - ಚಟುವಟಿಕೆಯ ಹೆಸರು ಮಳೆಯ ಪ್ರಮಾಣವನ್ನು ಅಳೆಯಲು ವೃಷ್ಟಿ ಮಾಪನವನ್ನು ತಯಾರಿಸುವುದು.

ಅಂದಾಜು ಸಮಯ

ಒಂದು ಅವಧಿ

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಸಮಾನಾಂತರದ ಗಾಜಿನ ಗ್ಲಾಸ್ ಅಥವಾ ಬೀಕರ್, ಸ್ಕೇಲ್,ಮಾರ್ಕರ್ ಪೆನ್

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

ಗಾಜಿನ ಗ್ಲಾಸ್ ಅಥವಾ ಬೀಕರ್ ನ ತಳ ಸಮಾನಾಂತರವಾಗಿರಬೇಕು ಮತ್ತು ಬದಿಯ ಬಾಹುಗಳು ಸಮಾನಾಂತರವಾಗಿರಬೇಕು.

ಬಹುಮಾಧ್ಯಮ ಸಂಪನ್ಮೂಲಗಳ

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

ಒಂದು ಸಮಾನಾಂತರವಾದ ಗಾಜಿನ ಗ್ಲಾಸ್ ನ ಬದಿಯಲ್ಲಿ ಸ್ಕೇಲ್ ತೆಗೆದುಕೊಂಡು ತಳದಿಂದ ಸೆಂಟಿ ಮೀಟರ್ ಗಳನ್ನು ಮಾರ್ಕರ್ ನಿಂದ ಗುರುತು ಹಾಕಿ. ನಂತರ ಮಳೆಬಂದಾಗ ಆ ಗ್ಲಾಸನ್ನು ವಿಶಾಲವಾದ ಮೈದಾನದಲ್ಲಿ ಇಡಿ.ಮಳೆಯ ಹನಿಗಳು ನೇರವಾಗಿ ಗ್ಲಾಸಿನಲ್ಲಿ ಬೀಳುವಂತೆ ನೋಡಿಕೊಳ್ಳಿ.ಮಳೆನಿಂತ ನಂತರ ಗ್ಲಾಸಿನಲ್ಲಿ ತುಂಬಿರುವ ನೀರನ್ನು ನಿಶ್ಚಲ ಸ್ಥಿಗೆ ತಂದು ಅದು ಯಾವ ಸೆಂ.ಮೀ.ನ ಅಲತೆಗೆ ನಿಂತಿರುತ್ತದೆಯೋ ಅಷ್ಟು ಸೆಂ.ಮೀ. ಮಳೆ ಆಯಿತು ಎಂದು ನಿರ್ಧರಿಸಬಹುದು.

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

  1. ನಿಮ್ಮ ಊರಿನಲ್ಲಿ ಆಗುವ ಒಂದು ವಾರದ ಮಳೆಯ ಸರಾಸರಿ ಪ್ರಮಾಣವನ್ನು ಹೇಗೆ ಅಳೆಯುತ್ತೀರಿ?

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

  1. ಭಾರತದಲ್ಲಿ ಅತೀ ಹೆಚ್ಚು ಮಳೆ ಎಲ್ಲಿ ದಾಖಲಾಗಿದೆ?
  2. ಭಾರತದಲ್ಲಿ ಅತೀ ಕಡಿಮೆ ಮಳೆ ಎಲ್ಲಿ ದಾಖಲಾಗಿದೆ?

ಪ್ರಶ್ನೆಗಳು

  1. ಮಳೆಗಾಲದಲ್ಲಿ ಕೋರಮಂಡಲ ತೀರಕ್ಕೆ ಕಡಿಮೆ ಮಳೆ ಏಕೆ?
  2. ಕೋರಮಂಡಲ ತೀರಕ್ಕೆ ಅಂದರೆ ಪ್ರಮುಖವಾಗಿ ತಮಿಳುನಾಡು ರಾಜ್ಯಕ್ಕೆ ಹೆಚ್ಚು ಮಳೆ ಯಾವಾಗ ಆಗುತ್ತೆದೆ ಏಕೆ?

ಚಟುಟವಟಿಕೆಯ ಮೂಲಪದಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಭಾರತದಲ್ಲಿ ಮಳೆಯ ಹಂಚಿಕೆ