ರಚನಾ ವಿಜ್ಞಾನ 9 ಪಾಠ-ಆಹಾರ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಪಾಠ : ಆಹಾರ

1) ಕಲಿಕಾಂಶಗಳು/ಪರಿಕಲ್ಪನೆಗಳು

v ಆಹಾರ ಸಂರಕ್ಷಣೆ ಹಾಗೂ ಸಂಗ್ರಹಣೆಯ ಮಹತ್ವ

v ಆಹಾರದಲ್ಲಿರುವ ಘಟಕಗಳ ವರ್ಗೀಕರಣ

v ನ್ಯೂನತಾ ಕಾಯಿಲೆ ಲಕ್ಷಣ ಮತ್ತು ಕಾರಣ

v ಆಹಾರ ಸಂರಕ್ಷಣೆಯ ವಿಧಾನಗಳು

v ಆಹಾರ ಕಲಬೆರಕೆ ಅರ್ಥ

v ಆಹಾರ ಕಲಬೆರಕೆಯ ದುಷ್ಪರಿಣಾಮಗಳು ಮತ್ತು ದುಷ್ಪರಿಣಾಮಗಳನ್ನು ಪತ್ತೆ ಹಚ್ಚುವ ಪ್ರಯೋಗಗಳು

v ಆಹಾರ ಕಲಬೆರಕೆ ನಿಯಂತ್ರಣ ಸಂಸ್ಥೆ ಹಾಗೂ ನಿಯಂತ್ರಿಸುವಲ್ಲಿ ನಮ್ಮ ಪಾತ್ರ

2) ಮನನ ಮಾಡಿಕೊಳ್ಳಲೇ ಬೇಕಾದ ಅಂಶಗಳು

v ಆಹಾರವನ್ನು ಅವು ಹೊಂದಿರುವ ಘಟಕಗಳ ಆಧಾರದ ಮೇಲೆ ವರ್ಗೀಕರಿಸುವುದು

v ನ್ಯೂನತಾ ಕಾಯಿಲೆ ಲಕ್ಷಣ ಮತ್ತು ಕಾರಣವನ್ನು ಗುರುತಿಸುವುದು

v ಆಹಾರ ಸಂರಕ್ಷಣೆಯ ಹಾಗೂ ಸಂಗ್ರಹಣೆಯ ಮಹತ್ವವನ್ನು ವಿವರಿಸುವುದು ಮತ್ತು ತಮ್ಮ ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳುವುದು

v ಆಹಾರ ಕಲಬೆರಕೆಯ ಅರ್ಥ ತಿಳಿಯುವುದು

v ಆಹಾರ ಕಲಬೆರಕೆಯ ದುಷ್ಪರಿಣಾಮ ಪತ್ತೆ ಹಚ್ಚಲು ಇರುವ ಪ್ರಯೋಗಗಳನ್ನು ನಿರ್ವಹಿಸುವುದು

v ಆಹಾರ ಕಲಬೆರಕೆ ನಿಯಂತ್ರಣ ಸಂಸ್ಥೆ ಹಾಗೂ ಕಲಬೆರಕೆಯನ್ನು ನಿಯಂತ್ರಿಸುವಲ್ಲಿ ನಮ್ಮ ಪಾತ್ರ ಗುರುತಿಸಿ ಮನನ ಮಾಡಿಕೊಳ್ಳುವುದು. ಹಾಗೂ ಸಂಸ್ಥೆಗಳ ಬಗ್ಗೆ ಅರಿಯುವುದು.

v ಆಹಾರ ಕೆಡಲು ಕಾರಣವಾದ ಅಂಶಗಳನ್ನು ಪಟ್ಟಿ ಮಾಡುವುದು.

v ಮನೆಯಲ್ಲಿ ಆಹಾರ ಪರೀಕ್ಷೆ ಮಾಡುವ ಕೌಶಲ್ಯ ಬೆಳೆಸುವುದು.

3) ಘಟಕಕ್ಕೆ ಮುನ್ನ ಪೂರ್ವ ಸಿದ್ಧತೆಗಳು

v ವಿವಿಧ ಆಹಾರ ಪದಾರ್ಥಗಳನ್ನು ವಿದ್ಯಾರ್ಥಿಗಳಿಂದ ಸಂಗ್ರಹಿಸುವುದು. v ವಿದ್ಯಾರ್ಥಿಗಳಿಂದ, ಅವರು ತಮ್ಮ ಪರಿಸರದಲ್ಲಿ ಕಂಡು ಬಂದ ರೋಗಗಳ ಹೆಸರುಗಳನ್ನು ಮತ್ತು ಗಮನಿಸಿದ ಅಸಹಜ ದೇಹದ ಸ್ಥಿತಿಗಳನ್ನು ಪಟ್ಟಿ ಮಾಡಿ ಸಂಗ್ರಹಿಸಿಟ್ಟುಕೊಂಡಿರುವುದು.

v ನ್ಯೂನತಾ ಕಾಯಿಲೆಗಳು, ಅವುಗಳಿಗೆ ಕಾರಣಗಳು ಮತ್ತು ಲಕ್ಷಣಗಳುಳ್ಳ ಚಿತ್ರಪಟಗಳನ್ನು ಸಂಗ್ರಹಿಸುವುದು.

v ವಿವಿಧ ರೀತಿಯ ಕೊಳೆತ ಹಣ್ಣುಗಳು, ತರಕಾರಿಗಳು, ಮತ್ತು ಕೆಲವು ದಿನಗಳ ಹಿಂದೆ ಗಾಳಿಯಾಡದ ಮತ್ತು ಗಾಳಿಯಾಡುವ ಡಬ್ಬಗಳಲ್ಲಿ ತೇವಾಂಶ ಪ್ರದೇಶ ಹಾಗೂ ತೇವಾಂಶ ರಹಿತ ಜಾಗದಲ್ಲಿಟ್ಟ ದವಸ ಧಾನ್ಯಗಳು, ಚಪಾತಿ, ರೊಟ್ಟಿ/ಬ್ರೆಡ್ಡುಗಳನ್ನು ಸಂಗ್ರಹಿಸುವುದು.

v ವಿಧ ವಿಧದ ಕಾಳುಗಳನ್ನು, ದವಸ ಧಾನ್ಯಗಳನ್ನು, ಸಿಹಿ ತಿನಿಸುಗಳನ್ನು, ಮಧ್ಯಾಹ್ನದ ಬಿಸಿ ಊಟಕ್ಕೆ ಬಳಸುವ ಎಣ್ಣೆ, ಉಪ್ಪು, ಸಾಸಿವೆ, ಅರಿಶಿಣ ಪುಡಿ ಸಾಧ್ಯವಿದ್ದಲ್ಲಿ ತುಪ್ಪ, ಬೆಣ್ಣೆ, ಹಾಲುನ್ನು ವಿದ್ಯಾರ್ಥಿಗಳಿಂದ ಸಂಗ್ರಹಿಸುವುದು.

v ರಾಸಾಯನಿಕಗಳಾದ ಹೈಡ್ರೊಕ್ಲೋರಿಕ್ ಆಮ್ಲ, ನೈಟ್ರಿಕ್ ಆಮ್ಲ, ಸಕ್ಕರೆಯನ್ನು ಸಂಗ್ರಹಿಸುವುದು.

v ದುಗ್ಧಮಾಪಕ, ಪ್ರನಾಳ ಹಿಡಿ, ಜಾಡಿ, ಸ್ಪಿರಿಟ್ ದೀಪ, ಸೋಸುಕಾಗದ, ಗಾಜಿನ ತಟ್ಟೆ, ಇತ್ಯಾದಿ ಸಂಗ್ರಹಿಸುವುದು.

v ಸಮತೋಲನ ಆಹಾರ ಹೇಗಿರಬೇಕು? ಆಹಾರ ಸಂರಕ್ಷಣೆ ಅಗತ್ಯ ಮತ್ತು ಸಂಗ್ರಹಣೆ ಮಹತ್ವ ಕುರಿತಾದ ಪರಿಕಲ್ಪನೆ ಮಕ್ಕಳಲ್ಲಿ ಮೂಡಿಸಲು ಅನುಗಮನ ಪದ್ಧತಿಯಲ್ಲಿ ಪ್ರಶ್ನಾವಳಿಯನ್ನು ರಚಿಸಿಕೊಂಡಿರುವುದು.

v ಆಹಾರ ಸಂರಕ್ಷಣೆಯ ವಿಧಾನಗಳ ಚಿತ್ರಪಟ, ಆಹಾರ ಪದಾರ್ಥ ಮತ್ತು ಸಾಮಾನ್ಯ ಕಲಬೆರಕೆಗಳುಳ್ಳ ಚಿತ್ರಪಟಗಳನ್ನು ಸಂಗ್ರಹಿಸಿರುವುದು.

v ಆಹಾರ ವ್ಯರ್ಥವಾಗಲು ಕಾರಣವಾದ ಅಂಶಗಳನ್ನು ಗುರುತಿಸಿ ಪಟ್ಟಿ ಮಾಡಲು ವಿದ್ಯಾರ್ಥಿಗಳಿಗೆ ತಿಳಿಸುವುದು.

v ವಿದ್ಯಾರ್ಥಿಗಳಿಂದ ಅವರು ತಮ್ಮ ನಿತ್ಯ ಜೀವನದಲ್ಲಿ ಬಳಸುವ ಕಲಬೆರಕೆ ಪದಾರ್ಥಗಳ ಪಟ್ಟಿ ತಯಾರಿಸಲು ತಿಳಿಸುವುದು ಹಾಗೂ ಸಂಗ್ರಹಿಸುವುದು.

v ಆಹಾರ ಗುಣಮಟ್ಟವನ್ನು ಹತೋಟಿಯಲ್ಲಿಡುವ ಸಂಸ್ಥೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿರುವುದು.

v ಸ್ಥಳೀಯ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಉಣಬಡಿಸುವ ಆಹಾರ ಪದಾರ್ಥಗಳ ಹೆಸರುಗಳನ್ನು ವಿದ್ಯಾರ್ಥಿಗಳಿಂದ ಸಂಗ್ರಹಿಸುವುದು.

4) ಕಲಿಕಾ ಚಟುವಟಿಕೆಗಳು

v ಅನುಗಮನ ಪದ್ಧತಿಯಲ್ಲಿ ರಚಿಸಿರುವ ಪ್ರಶ್ನಾವಳಿಯ ಮೂಲಕ ಸಮತೋಲನ ಆಹಾರ ಸೇವನೆ, ಆಹಾರ ಸಂರಕ್ಷಣೆ ಅಗತ್ಯ ಮತ್ತು ಆಹಾರ ಸಂಗ್ರಹಣೆ ಮಹತ್ವವನ್ನು ಚರ್ಚಿಸಲು ತಿಳಿಸುವುದು.

v ಸಂಗ್ರಹಿಸಿರುವ ಆಹಾರ ಪದಾರ್ಥಗಳಲ್ಲಿರುವ ಪೆÇೀಷಕಾಂಶಗಳನ್ನು ಪಟ್ಟಿಮಾಡಲು ತಿಳಿಸುವುದು ಮತ್ತು ಅವುಗಳ ಕಾರ್ಯಗಳನ್ನು ಚರ್ಚಿಸುವುದು.

v ವಿದ್ಯಾರ್ಥಿಗಳು ಮೊದಲೇ ಪಟ್ಟಿಮಾಡಿದ ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಕಂಡುಬಂದ ರೋಗಗಳು ಮತ್ತು ದೇಹದ ಅಸಹಜ ಸ್ಥಿತಿಗಳಿಗೆ ಕಾರಣಗಳನ್ನು ನ್ಯೂನತಾ ಕಾಯಿಲೆಗಳು. ಕಾರಣಗಳು - ಲಕ್ಷಣಗಳು ಕುರಿತಾದ ಚಿತ್ರಪಟದ ಮೂಲಕ ಚರ್ಚಿಸುವಂತೆ ತಿಳಿಸುವುದು.

v ಸಂಗ್ರಹಿಸಿದ ಕೊಳೆತ ತರಕಾರಿ, ಹಣ್ಣುಗಳು, ದವಸ ಧಾನ್ಯಗಳು, ಬೂಸ್ಟು ಬಂದ ರೊಟ್ಟಿ, ಬ್ರೆಡ್ಡುಗಳನ್ನು ಗಮನಿಸಲು ತಿಳಿಸುವುದು ಮತ್ತು ಆ ಆಹಾರ ವ್ಯರ್ಥವಾಗಲು ಕಾರಣವಾದ ಆಂತರಿಕ ಮತ್ತು ಬಾಹ್ಯ ಅಂಶಗಳನ್ನು ಚರ್ಚಿಸಲು ತಿಳಿಸುವುದು. v ಒಣ ಪ್ರದೇಶ ಮತ್ತು ತೇವಾಂಶ ಪ್ರದೇಶಗಳಲ್ಲಿ ಹಾಗೂ ಗಾಳಿಯಾಡದ ಮತ್ತು ಗಾಳಿಯಾಡುವ ಡಬ್ಬಗಳಲ್ಲಿ ಶೇಖರಿಸಿಟ್ಟ ಆಹಾರ ಧಾನ್ಯಗಳಲ್ಲಾದ ಬದಲಾವಣೆಗೆ ಕಾರಣಗಳನ್ನು ಚರ್ಚಿಸಿ ಸಮರ್ಥನೆ ನೀಡುವಂತೆ ತಿಳಿಸುವುದು.

v ತರಗತಿ ವಿದ್ಯಾರ್ಥಿಗಳನ್ನು ತಂಡಗಳಾಗಿ ವಿಂಗಡಿಸಿ ಪ್ರತಿ ತಂಡಕ್ಕೂ ಸಂಗ್ರಹಿಸಿದ ಆಹಾರ ಪದಾರ್ಥಗಳನ್ನು ಒದಗಿಸಿ ಸಂಗ್ರಹಿಸಿದ ವೈಜ್ಞಾನಿಕ ಉಪಕರಣಗಳು, ರಾಸಾಯನಿಕಗಳ ಸಹಾಯದಿಂದ ತಿಳಿಸುವುದು.

v ಮಧ್ಯಾಹ್ನದ ಬಿಸಿ ಊಟ ಮಾಡುವಾಗ ಅನ್ನದಲ್ಲಿ ಸಿಕ್ಕ ಚಿಕ್ಕ ಚಿಕ್ಕ ಅನ್ನದ ಹಾಗೆ ಇರುವ ಕಲ್ಲಿನ ಚೂರುಗಳು ಕಾಣಿಸಿಕೊಳ್ಳಲು ಕಾರಣಗಳನ್ನು ಚರ್ಚಿಸಲು ತಿಳಿಸಬೇಕು ಮತ್ತು ಅವುಗಳನ್ನು ದವಸ ಧಾನ್ಯಗಳಿಂದ ಬೇರ್ಪಡಿಸುವ ವಿಧಾನಗಳನ್ನು ಪಟ್ಟಿ ಮಾಡುವಂತೆ ತಿಳಿಸುವುದು.

v ವಿದ್ಯಾರ್ಥಿಗಳು ತಾವು ಸಂಗ್ರಹಿಸಿದ ಆಹಾರ ಪದಾರ್ಥ ಮತ್ತು ಆಹಾರದಲ್ಲಿರುವ ಕಲಬೆರಕೆ ಪದಾರ್ಥಗಳನ್ನು ಪಟ್ಟಿಮಾಡಲು ತಿಳಿಸುವುದು ಹಾಗೂ ಪರಿಹಾರ ಸೂಚಿಸುವುದು.

v ಆಹಾರ ಪದಾರ್ಥ ಮತ್ತು ಸಾಮಾನ್ಯ ಕಲಬೆರಕೆಯ ಚಿತ್ರಪಟದ ಮೂಲಕ ಕಲಬೆರಕೆಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡುವುದು.

v ಸಂಗ್ರಹಿಸಿದ ಅಂಗನವಾಡಿ ಕೇಂದ್ರದ ಆಹಾರ ಪದಾರ್ಥಗಳ ಹೆಸರುಗಳ ಪಟ್ಟಿಯನ್ನು ಗಮನಿಸಿ, ಆ ಆಹಾರದಲ್ಲಿರುವ ಪೆÇೀಷಕಾಂಶಗಳನ್ನು ಪಟ್ಟಿಮಾಡಿ ಚರ್ಚಿಸಲು ತಿಳಿಸುವುದು.

v ನಮ್ಮ ದೇಶದಲ್ಲಿರುವ ವಿವಿಧ ಗುಣಮಟ್ಟ ಹತೋಟಿಯಲ್ಲಿಡುವ ಸಂಸ್ಥೆಗಳ ಹೆಸರುಗಳು ಮತ್ತು ಅವುಗಳ ಪಾತ್ರವನ್ನು ಚರ್ಚಿಸುವುದು. ಹಾಗೂ ಕಲಬೆರಕೆ ನಿಯಂತ್ರಿಸುವಲ್ಲಿ ನಮ್ಮ ಪಾತ್ರದ ಬಗ್ಗೆ ಅರಿವು ಮೂಡಿಸುವುದು.

5) ಕಲಿಕೆಗೆ ಅನುಕೂಲಿಸುವ ವಿಧಾನಗಳು

v ಸಾಧ್ಯವಾದಲ್ಲಿ ಗ್ರಂಥಾಲಯ ಪುಸ್ತಕಗಳನ್ನು ಸಂಗ್ರಹಿಸುವುದು.

(ಉದಾ : ಪುಸ್ತಕ : ಆಹಾರ ಕಲಬೆರಕೆ : ಲೇಖಕ ಪೆÇ್ರ|| ಸಿ.ಡಿ. ಪಾಟೀಲ bಥಿ ಏಖಗಿP)

v ಕ್ವಿಜ್ ಏರ್ಪಡಿಸುವುದು

v ಪ್ರಬಂಧ ಬರಹ ಸ್ಪರ್ಧೆ ಏರ್ಪಡಿಸುವುದು

v ಆಹಾರ ಕಲಬೆರಕೆ ಪರೀಕ್ಷಾ ಕೇಂದ್ರಕ್ಕೆ ಭೇಟಿ ಕೊಡುವುದು

v ವಿವಿಧ ಆಹಾರ ಗುಣಮಟ್ಟ ನಿಯಂತ್ರಣಾ ಸಂಸ್ಥೆಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅಂತರ್ಜಾಲದಿಂದ ತಿಳಿಯುವುದು.

v ಸ್ಥಳೀಯ ಆಸ್ಪತ್ರೆಗಳಿಗೆ ಭೇಟಿಕೊಟ್ಟು ಪೆÇೀಷಕಾಂಶಗಳ ಕೊರತೆಯಿಂದ ಬಳಲುತ್ತಿರುವ ಮತ್ತು ಕಲಬೆರಕೆಯ ಪರಿಣಾಮದಿಂದ ಆಸ್ಪತ್ರೆ ಸೇರಿ ಮತ್ತು ಅವುಗಳ ದುಷ್ಪರಿಣಾಮಗಳನ್ನು ಎದುರಿಸುತ್ತಿರುವ ರೋಗಿಗಳ ಅಂಕಿ ಅಂಶ ಸಂಗ್ರಹಿಸುವುದು ಮತ್ತು ಚರ್ಚಿಸುವುದು.

6) ಮೌಲ್ಯಮಾಪನ ಚಟುವಟಿಕೆಗಳು

v ಕಡಿಮೆ ಖರ್ಚಿನಲ್ಲಿ ನಾವು ಹೇಗೆ ಪೌಷ್ಟಿಕ ಆಹಾರವನ್ನು ಪಡೆಯಬಹುದು ಚರ್ಚಿಸಿ ಮತ್ತು ಪಟ್ಟಿಮಾಡಿ (ಉದಾಹರಣೆಗೆ : ಮಾಂಸ, ಮೊಟ್ಟೆ ಬದಲಾಗಿ ಹುರುಳಿಕಾಳುಗಳನ್ನು ಬಳಸುವುದು; ಚಾಕಲೇಟ್ ಬದಲಾಗಿ ಚಿಕ್ಕಿ ತಿನ್ನುವುದು)

v ಸಾಮಾನ್ಯವಾಗಿ ರವೆಯನ್ನು ಮನೆಯಲ್ಲಿ ಹುರಿದು ಇಟ್ಟಿರುತ್ತಾರೆ ಏಕೆ?

v ಹಾಲಿನ ಪುಡಿ ಮಾಡುವುದು ಏಕೆ?

v ಉಪ್ಪಿನ ಕಾಯಿಯನ್ನು ತಯಾರುಮಾಡುವಾಗ ಹೆಚ್ಚಿನ ಪ್ರಮಾಣದ ಉಪ್ಪು ಬೆರೆಸುತ್ತಾರೆ ಏಕೆ? ಮತ್ತು ಉಪ್ಪಿನಕಾಯಿ ಜಾಡಿಯನ್ನು ಬಿಗಿಯಾಗಿ ಮುಚ್ಚಿರುತ್ತಾರೆ ಏಕೆ?

v ಹಣ್ಣುಗಳು ಬೇಗ ಕೊಳೆತು ಹೋಗಲು ಕಾರಣವಾದ ಅಂಶಗಳನ್ನು ಪಟ್ಟಿ ಮಾಡಿ.

v ಆಹಾರ ಕಲಬೆರಕೆ ನಿಯಂತ್ರಿಸುವಲ್ಲಿ ನಮ್ಮ ಪಾತ್ರ ಚರ್ಚಿಸಿ.

v ಹಾಲಿನ ಸಾಂದ್ರತೆ ಅಳೆಯುವ ಉಪಕರಣದ ಹೆಸರೇನು?

ಹೆಚ್ಚುವರಿ ಚಟುವಟಿಕೆಗಳು

v ಶಾಲಾ ಸಮೀಪದ ಆಹಾರ ಗೋದಾಮುಗಳಿಗೆ ಭೇಟಿಕೊಟ್ಟು ಅಲ್ಲಿ ಆಹಾರ ಪ್ಯಾಕ್ ಮಾಡುವ ಕ್ರಮವನ್ನು ವೀಕ್ಷಿಸಿ.

v ಸಾಧ್ಯವಾದಲ್ಲಿ ಮೈಸೂರಿನಲ್ಲಿರುವ ಆಈಖಐ ಮತ್ತು ಅಈಖಿಖI ಗೆ ಭೇಟಿ ನೀಡಿ. ನೈಸರ್ಗಿಕ ವಿಕೋಪ ಉಂಟಾದ ಸಂದರ್ಭದಲ್ಲಿ ಅವರು ಒದಗಿಸುವ ಆಹಾರ ಪೆÇಟ್ಟಣಗಳನ್ನು ಪ್ಯಾಕ್ ಮಾಡುವ ವಿಧಾನವನ್ನು ಗಮನಿಸಿ ಮತ್ತು ಹೆಚ್ಚಿನ ಮಾಹಿತಿ ಪಡೆಯಿರಿ.