ರಚನಾ ವಿಜ್ಞಾನ 9 ಪಾಠ-ಸೂಕ್ಷ್ಮ ಜೀವಿಗಳ ಪ್ರಪಂಚ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ

ಅಧ್ಯಾಯ-6

ಪಾಠ : ಸೂಕ್ಷ್ಮಜೀವಿಗಳ ಪ್ರಪಂಚ

1) ಕಲಿಕಾಂಶಗಳು/ಪರಿಕಲ್ಪನೆಗಳು

v ಸೂಕ್ಷ್ಮಜೀವಿ ಮತ್ತು ಬಹುಕೋಶಿಯ ಜೀವಿಗಳಿಗಿರುವ ವ್ಯತ್ಯಾಸ

v ಸೂಕ್ಷ್ಮಜೀವಿ ವಿವಿಧ ಗುಂಪುಗಳನ್ನು ಗುರುತಿಸುವುದು

v ನಿತ್ಯ ಜೀವನದಲ್ಲಿ ಸೂಕ್ಷ್ಮಜೀವಿಗಳ ಉಪಯೋಗಗಳು

v ಪರಿಸರ ನಿರ್ವಹಣೆಯಲ್ಲಿ ಸೂಕ್ಷ್ಮಜೀವಿಗಳ ಪಾತ್ರ

v ಪರಿಸರ ಮತ್ತು ಜೈವಿಕ ಸಮತೋಲನೆಯಲ್ಲಿ ಸೂಕ್ಷ್ಮಜೀವಿಗಳ ಮಹತ್ವ

v ಜೀವ ಭೂ ರಾಸಾಯನಿಕ ಚಕ್ರಗಳಲ್ಲಿ ಸೂಕ್ಷ್ಮಜೀವಿಗಳ ಪಾತ್ರ

v ನೀರಿನ ಶುದ್ಧೀಕರಣ ಘಟಕದ ರಚನೆ

v ಕೈಗಾರಿಕೆ, ಆಹಾರ ಕೈಗಾರಿಕೆ, ತಳಿ ಇಂಜಿನಿಯರಿಂಗ್‍ನಲ್ಲಿ ಸೂಕ್ಷ್ಮಜೀವಿಗಳ ಪಾತ್ರ

v ಮಾನವ ಜೀವನದ ಸುಧಾರಣೆ, ಅಭಿವೃದ್ಧಿಯಲ್ಲಿ ಸೂಕ್ಷ್ಮಜೀವಿಗಳ ಪಾತ್ರ

v ಸೂಕ್ಷ್ಮಜೀವಿಗಳ ಅನುಕೂಲ ಮತ್ತು ಅನಾನುಕೂಲ

2) ಮನನ ಮಾಡಿಕೊಳ್ಳಬೇಕಾದ ಅಂಶಗಳು

v ಸೂಕ್ಷ್ಮಜೀವಿ ಮತ್ತು ಬಹುಕೋಶಿಯ ಜೀವಿಗಳನ್ನು ಗುರುತಿಸಿ. ಅವುಗಳ ನಡುವಿನ ವ್ಯತ್ಯಾಸ ತಿಳಿಯುವುದು.

v ನಿತ್ಯ ಜೀವನದಲ್ಲಿ ಸೂಕ್ಷ್ಮಜೀವಿಗಳ ಮಹತ್ವ ಅರಿಯುವುದು.

v ಚಿಕ್ಕ ಪ್ರಾಯೋಗಿಕ ನೀರಿನ ಶುದ್ಧೀಕರಣ ಘಟಕದ ಮಾದರಿ ತಯಾರಿಕೆ

v ಪರಿಸರ ಸಮತೋಲನ ಉಳಿಸಿಕೊಳ್ಳುವಲ್ಲಿ ಸೂಕ್ಷ್ಮಜೀವಿಗಳ ಪಾತ್ರ ತಿಳಿಯುವುದು.

v ಮಾನವನ ಆರೋಗ್ಯ ಸುಧಾರಣೆಯಲ್ಲಿ ಸೂಕ್ಷ್ಮಜೀವಿಗಳ ಪಾತ್ರ ಮೆಚ್ಚುವುದು.

v ತಳಿ ಇಂಜಿನಿಯರಿಂಗ್‍ನ ಆಗುಹೋಗುಗಳ ಬಗ್ಗೆ (ವರ ಮತ್ತು ಶಾಪ) ವಿಶ್ಲೇಷಿಸುವುದು - ಚರ್ಚೆ.


3) ಘಟಕಕ್ಕೆ ಮುನ್ನ ಪೂರ್ವ ಸಿದ್ಧತೆಗಳು

v ಕಣ್ಣಿಗೆ ಕಾಣುವ ಮತ್ತು ಕಾಣದ ಜೀವಿಗಳ ಹೆಸರುಗಳನ್ನು ವಿದ್ಯಾರ್ಥಿಗಳ ಮೂಲಕ ಪಟ್ಟಿಮಾಡಿಸಿರುವುದು.

v ವಿವಿಧ ರೀತಿಯ ಸೂಕ್ಷ್ಮಜೀವಿಗಳಿರುವ ಆಹಾರ ಪದಾರ್ಥಗಳನ್ನು ಮತ್ತು ಕೊಳೆತಿರುವ ಆಹಾರ, ತರಕಾರಿ, ಹಣ್ಣುಗಳನ್ನು ವಿದ್ಯಾರ್ಥಿಗಳ ಸಹಾಯದಿಂದ ಸಂಗ್ರಹಿಸಿಟ್ಟು ಕೊಳ್ಳುವುದು.

v ದ್ವಿದಳ ಧಾನ್ಯದ ಬೇರುಗಳನ್ನು ಬೇರುಗಂಟುಗಳ ಸಹಿತ (ಖooಣ ಓoಜuಟes oಜಿ ಆiಛಿoಣ Pಟಚಿಟಿಣs) ವಿದ್ಯಾರ್ಥಿಗಳ ಸಹಾಯದಿಂದ ಸಂಗ್ರಹಿಸಿಟ್ಟುಕೊಳ್ಳುವುದು.

v ಸೂಕ್ಷ್ಮದರ್ಶಕ ಯಂತ್ರವನ್ನು (ಒiಛಿಡಿosಛಿoಠಿe) ವ್ಯವಸ್ಥಿತವಾಗಿಟ್ಟುಕೊಂಡಿರುವುದು.

v ನಿತ್ಯ ಜೀವನದಲ್ಲಿ ಸೂಕ್ಷ್ಮಜೀವಿಗಳ ಪ್ರಾಮುಖ್ಯ, ಅವಶ್ಯಕತೆಗಳಿಗನುಗುಣವಾದ ಅಂಶವುಳ್ಳ ಪಟ್ಟಿ ತಯಾರಿಸಿಟ್ಟುಕೊಂಡಿರುವುದು.

v ಚಿಕ್ಕ ಪ್ರಾಯೋಗಿಕ ನೀರಿನ ಶುದ್ಧೀಕರಣ ಘಟಕ ನಿರ್ಮಿಸಿಟ್ಟುಕೊಂಡಿರುವುದು.

v ನೀರಿನ ಶುದ್ಧೀಕರಣ ಘಟಕ, ಕಾರ್ಬನ್ ಮತ್ತು ನೈಟ್ರೋಜನ್ ಚಕ್ರ, ತಳಿ ಇಂಜಿನಿಯರಿಂಗ್ ಮತ್ತು ಒಳಚರಂಡಿ ನೀರಿನ ನಿರ್ವಹಣೆಯ ಕುರಿತಾದ ಚಿತ್ರಪಟಗಳು, ಲೇಖನಗಳು, PPಖಿಗಳು (Poತಿeಡಿ Poiಟಿಣ Pಡಿeseಟಿಣಚಿಣioಟಿ), ನ್ಯೂಸ್ ಪೇಪರ್ ಕಟಿಂಗ್‍ಗಳು, ಸಾಧ್ಯವಿದ್ದಲ್ಲಿ ಔಊP Sheeಣ ಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದು.

v ಸೂಕ್ಷ್ಮಜೀವಿಗಳು ವಿವಿಧ ಕೈಗಾರಿಕೆಗಳಲ್ಲಿ ನಿರ್ವಹಿಸುವ ಪಾತ್ರದ ಕುರಿತಾದ ಪ್ರಮುಖ ಅಂಶಗಳನ್ನು ಪಟ್ಟಿಮಾಡಿಟ್ಟು ಕೊಂಡಿರುವುದು.

v ಸಾಧ್ಯವಿದ್ದಲ್ಲಿ ಕಂಪ್ಯೂಟರ್, ಪೆÇ್ರಜಿಕ್ಟರ್‍ಗಳನ್ನು ಸಿದ್ಧವಾಗಿಟ್ಟುಕೊಂಡಿರುವುದು.

4) ಕಲಿಕಾ ಚಟುವಟಿಕೆಗಳು/ಕಲಿಕಾ ಅನುಭವಗಳು

v ವಿದ್ಯಾರ್ಥಿಗಳ ಅನುಭವಗಳಿಂದ ದೋಸೆಹಿಟ್ಟು ಹುದುಗುವುದು, ಮೊಸರು ಹುಳಿಯಾಗುವುದು, ಅನ್ನ ಹಳಿಸುವುದು, ಕೊಬ್ಬರಿಯಲ್ಲಿ ಬೂಸ್ಟು ಬೆಳೆಯುವುದು, ಇಂತಹ ಅನುಭವಗಳನ್ನು ಆರಂಭಿಕ ಪ್ರಶ್ನೆಗಳನ್ನಾಗಿ ಉಪಯೋಗಿಸಿ ಪಾಠವನ್ನು ಪರಿಚಯಿಸುವುದು.

v ಪಟ್ಟಿ ಮಾಡಿರುವ ಜೀವಿಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲು ತಿಳಿಸಿ, ವರ್ಗೀಕರಣಕ್ಕೆ ಸಮರ್ಥನೆ ನೀಡುವಂತೆ ಹೇಳುವುದು.

v ಸಂಗ್ರಹಿಸಿರುವ ಸೂಕ್ಷ್ಮಜೀವಿಗಳಿರುವ ಆಹಾರ ಪದಾರ್ಥ, ಕೊಳೆತಿರುವ ಹಣ್ಣು, ತರಕಾರಿಗಳ ಕೊಳೆತ ಭಾಗ, ದ್ವಿದಳ ಧಾನ್ಯದ ಬೇರಿನ ಗಂಟುಗಳನ್ನು ಸೂಕ್ಷ್ಮದರ್ಶಕ ಯಂತ್ರದ ಮೂಲಕ ವೀಕ್ಷಿಸುವಂತೆ ತಿಳಿಸುವುದು.

v ಬೇಕರಿ ಉತ್ಪನ್ನಗಳಲ್ಲಿ, ಮನೆಗಳಲ್ಲಿ, ಔಷಧಿಗಳ ತಯಾರಿಕೆಯಲ್ಲಿ ಬಳಕೆಯಾದ ಸೂಕ್ಷ್ಮಜೀವಿಗಳ ಹೆಸರುಗಳನ್ನು ಪಟ್ಟಿಮಾಡುವಂತೆ ತಿಳಿಸುವುದು.

v ತರಗತಿ ವಿದ್ಯಾರ್ಥಿಗಳನ್ನು ತಂಡಗಳನ್ನಾಗಿ ವಿಂಗಡಿಸಿ ಒಂದೊಂದು ತಂಡಕ್ಕೂ ಒಂದೊಂದು ಕೈಗಾರಿಕೆಗಳಲ್ಲಿ ಬಳಸುತ್ತಿರುವ ಸೂಕ್ಷ್ಮಜೀವಿಗಳ ಹೆಸರುಗಳನ್ನು ಮತ್ತು ಅವುಗಳ ಕಾರ್ಯಗಳ ಮಾಹಿತಿ ಸಂಗ್ರಹಿಸಿ ಪಟ್ಟಿ ಮಾಡಲು ತಿಳಿಸುವುದು. ನಂತರ ತರಗತಿಯಲ್ಲಿ ಪ್ರತಿ ತಂಡವು ತಾನು ಸಂಗ್ರಹಿಸಿದ ಮಾಹಿತಿಯನ್ನು ತರಗತಿಯಲ್ಲಿ ಶಿಕ್ಷಕರ ಸಮ್ಮುಖದಲ್ಲಿ ಮಂಡಿಸುವಂತೆ ತಿಳಿಸುವುದು. v ನೀರಿನ ಚಿಕ್ಕದಾದ ಶುದ್ಧೀಕರಣ ಘಟಕ ನಿರ್ಮಿಸಲು ತಿಳಿಸುವುದು ಮತ್ತು ಅದರ ಸ್ಥಾಪನೆಗೆ ಬೇಕಾಗುವ ವಸ್ತುಗಳನ್ನು ಪಟ್ಟಿಮಾಡಲು ತಿಳಿಸುವುದು.

v ಒಳಚರಂಡಿ ನೀರಿನ ನಿರ್ವಹಣೆ, ತಳಿ ಇಂಜಿನಿಯರಿಂಗ್ ಕುರಿತಾದ ಚಿತ್ರಪಟಗಳು, ಲೇಖನಗಳು, ಸಾಧ್ಯವಿದ್ದಲ್ಲಿ PPಖಿ, ಔಊP ಸಹಾಯದಿಂದ ಸೂಕ್ಷ್ಮಜೀವಿಗಳ ಪಾತ್ರವನ್ನು ತಿಳಿಸುವುದು.

v ಜೀವ ಭೂ ರಾಸಾಯನಿಕ ಚಕ್ರಗಳಲ್ಲಿ ಪರಿಸರದ ಸಮತೋಲನದಲ್ಲಿ ಸೂಕ್ಷ್ಮಜೀವಿಗಳ ಪಾತ್ರದ ಬಗ್ಗೆ ಮಾಹಿತಿ ಕಲೆ ಹಾಕಲು ತಿಳಿಸಿ, ಶಿಕ್ಷಕರ ಸಮ್ಮುಖದಲ್ಲಿ ಸಾಧ್ಯವಿದ್ದಲ್ಲಿ ಪ್ರಾಯೋಗಿಕವಾಗಿ ವಿವರಣೆ ನೀಡಲು ತಿಳಿಸುವುದು.

5) ಕಲಿಕೆಗೆ ಅನುಕೂಲಿಸುವ ಚಟುವಟಿಕೆಗಳು

v ಜೈವಿಕ ಶಿಥೀಲಿಯವಾದ ಮತ್ತು ಜೈವಿಕ ಶಿಥೀಲಿಯವಲ್ಲದ ವಸ್ತುಗಳನ್ನು ಪಟ್ಟಿಮಾಡಲು ತಿಳಿಸುವುದು.

v ಶಾಲಾ ಆವರಣದಲ್ಲಿ ಚಿಕ್ಕದಾದ ಗುಂಡಿಯನ್ನು ವಿದ್ಯಾರ್ಥಿಗಳಿಂದ ತೋಡಿಸಿ ಅದರಲ್ಲಿ ಬಳಕೆಗೆ ಬಾರದ ಪ್ಲಾಸ್ಟಿಕ್‍ಗಳು, ಪೇಪರ್‍ಗಳು, ತರಕಾರಿಗಳು, ಹಣ್ಣುಗಳು, ಆಹಾರ ಪದಾರ್ಥಗಳನ್ನು ಆ ಗುಂಡಿಯಲ್ಲಿ ಹಾಕಿಸಿ ಕೆಲವು ವಾರಗಳ ನಂತರ ವಿದ್ಯಾರ್ಥಿಗಳಿಗೆ ಆ ಗುಂಡಿಯಲ್ಲಾದ ಬದಲಾವಣೆಗಳನ್ನು ವೀಕ್ಷಿಸುವಂತೆ ಹೇಳಿ ಕಾರಣಗಳನ್ನು ಚರ್ಚಿಸಲು ತಿಳಿಸುವುದು ಮತ್ತು ಪ್ಲಾಸ್ಟಿಕ್ ಬಳಕೆಯನ್ನು ಮಿತಗೊಳಿಸುವ ಅನಿವಾರ್ಯತೆ ಬಗ್ಗೆ ಚರ್ಚಾ ಸ್ಪರ್ಧೆ ಏರ್ಪಡಿಸುವುದು.

v ಸೂಕ್ಷ್ಮಜೀವಿಗಳಲ್ಲದ ಪರಿಸರ ಸಾಧ್ಯವೇ? ಈ ವಿಷಯದ ಬಗ್ಗೆ ಪರ ಮತ್ತು ವಿರೋಧ ಪ್ರಬಂಧ ಏರ್ಪಡಿಸುವುದು.

v ಮಾನವನ ಯೋಗಕ್ಷೇಮಕ್ಕೆ ತಳಿ ಇಂಜಿನಿಯರಿಂಗ್ ವರವೇ? ಈ ವಿಷಯದ ಬಗ್ಗೆ ಚರ್ಚಾ ಸ್ಪರ್ಧೆ ಏರ್ಪಡಿಸುವುದು.

v ಸಾಧ್ಯವಾದಲ್ಲಿ ತಳಿ ಇಂಜಿನಿಯರಿಂಗ್‍ನ ವಿಧಾನಗಳನ್ನು ವಿಡಿಯೋ ಪ್ರದರ್ಶನ ಮೂಲಕ ತೋರಿಸುವುದು ಮತ್ತು ಇದರ ಬಗ್ಗೆ ಮಾಹಿತಿ ಕಲೆಹಾಕಲು ಗ್ರಂಥಾಲಯ, ಅಂತರ್ಜಾಲ ಬಳಸಲು ತಿಳಿಸುವುದು.

v ಪ್ರಸ್ತುತ, ವಿವಿಧ ಕ್ಷೇತ್ರಗಳಲ್ಲಿ ಬಳಕೆಯಾಗುತ್ತಿರುವ ಸೂಕ್ಷ್ಮ ಜೀವಿಗಳ ಹೆಸರುಗಳನ್ನು ಪಟ್ಟಿ ಮಾಡುವಂತೆ ತಿಳಿಸುವುದು.

6) ಮೌಲ್ಯಮಾಪನ ಚಟುವಟಿಕೆಗಳು

v ಎಲ್ಲಾ ಸೂಕ್ಷ್ಮಜೀವಿಗಳು ಹಾನಿಕಾರಕಗಳು ಅಲ್ಲ ಏಕೆ?

v ಇಡ್ಲಿ, ದೋಸೆ, ಫಡ್ಡು ಮಾಡುವ ಹಿಟ್ಟನ್ನು ಹಿಂದಿನ ದಿನವೇ ಸಿದ್ಧವಾಗಿಟ್ಟುಕೊಳ್ಳಬೇಕು. ಕಾರಣನೀಡಿ.

v ನೀರಿನ ಶುದ್ಧೀಕರಣದಲ್ಲಿ ಬಳಸುವ ವಸ್ತುಗಳು ಮತ್ತು ಅವುಗಳ ಕಾರ್ಯಗಳನ್ನು ಪಟ್ಟಿಮಾಡಿ.

v ಮಾನವನ ಯೋಗಕ್ಷೇಮಕ್ಕೆ ತಳಿ ತಂತ್ರಜ್ಞಾನದ ಕೊಡುಗೆಗಳನ್ನು ಗುರುತಿಸಿ.

v ವಿಘಟನೆಗೆ ಒಳಗಾಗದ ಮತ್ತು ವಿಘಟನೆಗೆ ಒಳಗಾಗುವ ಜನಬಳಕೆಯ ತ್ಯಾಜ್ಯವಸ್ತುಗಳನ್ನು ಪಟ್ಟಿಮಾಡಿ.

v ಉಪ್ಪಿನಕಾಯಿಯನ್ನು ಹಲವು ತಿಂಗಳುಗಳವರೆಗೆ ಶೇಖರಿಸಿ ಇಡಬಹುದು ಹೇಗೆ?

v ತಳಿ ಇಂಜಿನಿಯರಿಂಗ್‍ನಲ್ಲಿ ಸೂಕ್ಷ್ಮ ಜೀವಿಗಳ ಪಾತ್ರ ವಿವರಿಸಿ. v ನೀರಿನ ಅಸಮರ್ಪಕ ಬಳಕೆ ಮತ್ತು ಮಾಲಿನ್ಯದಿಂದ ಉಂಟಾಗಿರುವ ಸಮಸ್ಯೆಗಳಿಗೆ ಸೂಚಿಸುವ ಪರಿಹಾರ ಕ್ರಮಗಳಾವುವು? ವಿವರಿಸಿ.

v ನಮ್ಮ ದೊಡ್ಡ ಕರುಳಿನಲ್ಲಿರುವ ಸೂಕ್ಷ್ಮಜೀವಿಯ ಹೆಸರು ಮತ್ತು ಕಾರ್ಯವನ್ನು ತಿಳಿಸಿ.

7) ಹೆಚ್ಚುವರಿ ಅಧ್ಯಯನ ಚಟುವಟಿಕೆಗಳು

v ಶಾಲೆಯ ಸಮೀಪ ಇರುವ ಜೈವಿಕ ತಂತ್ರಜ್ಞಾನ ಸಂಶೋಧನಾ ಕೇಂದ್ರವೊಂದಕ್ಕೆ ವಿದ್ಯಾರ್ಥಿಗಳೊಂದಿಗೆ ಭೇಟಿ ನೀಡಿ.

v ನೀರಿನ ಶುದ್ಧೀಕರಣ ಘಟಕಕ್ಕೆ ಭೇಟಿ ನೀಡುವುದು.

v ಸೂಕ್ಷ್ಮಜೀವಿಗಳು ವಿವಿಧ ಕೈಗಾರಿಕೆಗಳಲ್ಲಿ ನಿರ್ವಹಿಸುವ ಪಾತ್ರ ಕುರಿತು ಗ್ರಂಥಾಲಯಗಳಲ್ಲಿ/ಕಂಪ್ಯೂಟರ್‍ಗಳಲ್ಲಿ/ಅಂತರ್ಜಾಲದ ಮೂಲಕ ತಿಳಿಸುವುದು.

v ಆಹಾರ ಉತ್ಪನ್ನ ತಯಾರಿಕಾ ಘಟಕಕ್ಕೆ ಭೇಟಿ ಕೊಟ್ಟು ಆಹಾರ ಕೈಗಾರಿಕೆಗಳಲ್ಲಿ ಬಳಸುವ ಸೂಕ್ಷ್ಮಜೀವಿಗಳ ಹೆಸರುಗಳನ್ನು ಪಟ್ಟಿಮಾಡಿ.