ವಿಕಾಸವಾದದ ಸಾಕ್ಷಾಧಾರಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಚಿತ್ರ:2 evi evin kan .mm


ಭೋಧನೆಯ ರೂಪರೇಶಗಳು

ಪರಿಕಲ್ಪನೆ #1ಜೀವವಿಕಾಸದ ಸಾಕ್ಷ್ಯಧಾರಗಳು

ಕಲಿಕೆಯ ಉದ್ದೇಶಗಳು

  1. ಜೀವವಿಕಾಸದ ಸಾಕ್ಷ್ಯಧಾರಗಳ ಬಗ್ಗೆ ತಿಳಿಯುವುದು.
  2. ಜೀವ ವಿಕಾಸ ಸಾಕ್ಷ್ಯಧಾರಗಳಾದ ಅಂಗರಚನಾಶಾಸ್ತ್ರ , ಭ್ರೂಣಶಾಸ್ತ್ರ , ಪಳೆಯುಳಿಕೆಗಳಿಂದ ಜೀವವಿಕಾಸವನ್ನು ಕಲಿಯುವರು .
  3. ಪಳೆಯುಳಿಕೆ ಉಂಟಾಗುವ ವಿಧಾನ ಹಾಗೂ ಅದರ ಬಗೆಗಳು ಬಗ್ಗೆ ಕುತೂಹಲ ವ್ಯಕ್ತಪಡಿಸುವರು
  4. ಜೀವವಿಕಾಸಕ್ಕೆ ಸಾಕ್ಷ್ಯಧಾರಗಳ ಕಲೆಹಾಕಿದ ವಿಜ್ಞಾನಿಗಳ ಕಾರ್ಯವೈಖರಿಗೆ , ಸಂಶೋಧನಾ ಮನೋಭಾವಕ್ಕೆ ಮೆಚ್ಚುಗೆ ವ್ಯಕ್ತ ಪಡಿಸುವರು.

ಶಿಕ್ಷಕರಿಗೆ ಟಿಪ್ಪಣಿ

ಚಟುವಟಿಕೆ ಸಂಖ್ಯೆ

  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ/ಬೆಳವಣಿಗೆಯ ಪ್ರಶ್ನೆಗಳು
  • ಮೌಲ್ಯ ನಿರ್ಣಯ
  • ಪ್ರಶ್ನೆಗಳು



ಪಳಿಯುಳಿಕೆ ಸಾಕ್ಷ್ಯಧಾರಗಳು

ಜೀವಿಕಾಸಕ್ಕೆ ಸಾಕ್ಷ್ಯಾಧಾರಗಳು ( ಸಾವಯವ ಜೀವವಿಕಾಸ ಪುರಸ್ಕರಿಸುವ ಪುರಾವೆಗಳು ) ಭೂಮಿಯ ಮೇಲೆ ಮೊದಲು ಕಾಣಿಸಿಕೊಂಡ ಜೀವಿಗಳು ಈಗ ಕಂಡು ಬರುವಂತಹವುಗಳು ಆಗಿರಲಿಲ್ಲ.ಅವು ಕ್ರಮೇಣ ಬದಲಾವಣೆ ಹೊಂದಿವೆ ಎಂಬುದಂತೂ ಸ್ಪಷ್ಟ. ಎಲ್ಲ ಜೀವಿಗಳಲ್ಲೂ ಕಂಡು ಬರುವ ಮೂಲ ಹೋಲಿಕೆಗಳು ಸಾವಯವ ಜೀವ ವಿಕಾಸ ಸಿದ್ಧಾಂತಕ್ಕೆ ಬಲವಾದ ಬೆಂಬಲವನ್ನು ಸೂಚಿಸುತ್ತದೆ.ಜೀವಶಾಸ್ತ್ರಜ್ಞರು ಸಾವಯವ ಜೀವ ವಿಕಾಸಕ್ಕೆ ಅನೇಕ ಪರೋಕ್ಷ ಮತ್ತು ಅಪರೋಕ್ಷ ವಾದ ಸಾಕ್ಷಿಗಳನ್ನು ಮಂಡಿಸಿದ್ದಾರೆ . 1.ರೂಪಶಾಸ್ತ್ರ 2.ಅಂಗರಚನಾಶಾಸ್ತ್ರ 3.ಶರೀರಶಾಸ್ತ್ರ 4.ಭ್ರೂಣಶಾಸ್ತ್ರ 5.ಶೇಷ ಅವಯವಗಳು 6.ಪಳೆಯುಳಿಕೆ ಶಾಸ್ತ್ರ 7.ತಳೀಶಾಸ್ತ್ರ 8.ವರ್ಗೀಕರಣಶಾಸ್ತ್ರ 9.ತುಲನಾತ್ಮಕ ಜೀವರಸಾಯನಶಾಸ್ತ್ರ ಎಂಬ ಇನ್ನೂ ಅನೇಕ ಮೂಲಗಳಿಂದ ಒದಗಿಬಂದವುಗಳಾಗಿವೆ.









ಭೂಣಶಾಸ್ತ್ರದ ಸಾಕ್ಷಾಧಾರಗಳು

=. ಭ್ರೂಣಶಾಸ್ತ್ರದಿಂದ ದೊರೆತ ಸಾಕ್ಷಿಗಳು ; : ಕಪ್ಪೆಗಳ ಗೊದಮೊಟ್ಟೆಗಳು ಮೀನಿನಂತೆ ಬಾಲ ಮತ್ತು ಈಜುರೆಕ್ಕೆಗಳನ್ನು ಪಡೆದಿರುತ್ತವೆ.ಆದರೆ ಕಪ್ಪೆಗಳಿಗೆ ಬಾಲವಾಗಲಿ ,ಕಿವಿರುಗಳಾಗಲಿ ಇರುವುದಿಲ್ಲ.ಬದಲಿಗೆ ಕೈ ಕಾಲುಗಳು ಶ್ವಾಸಕೋಶವು ಇದೆ.ಸಾಕಷ್ಟು ದೀರ್ಘಕಾಲ ಸಣ್ಣ ಮೀನುಗಳು ಎನ್ನುವಂತೆ ನೀರಿನಲ್ಲಿರುವ ಗೊದಮೊಟ್ಟೆಗಳೂ ಬರುಬರುತ್ತಾ ಸಣ್ಣ ಬಾಲವಿರುವ ಮರಿಗಪ್ಪೆಗಳಾಗಿ ಪರಿವರ್ತನೆ ಹೊಂದುತ್ತವೆ.ನಂತರದಲ್ಲಿ ಈ ಮರಿಕಪ್ಪೆಗಳು ಬಾಲವನ್ನು ಪೂರ್ತಿಯಾಗಿ ಕಳೆದುಕೊಂಡು ಪ್ರೌಢಕಪ್ಪೆಗಳಾಗುತ್ತವೆ.ಒಂದು ಕಪ್ಪೆಯ ಬೆಳವಣಿಗೆ ವಿಧಾನ ಇಡೀ ಕಪ್ಪ ಜಾತಿಯ ಬೆಳವಣಿಗೆ ರೀತಿಯನ್ನು ಸೂಚಿಸುತ್ತದೆ.ಅಂದರೆ ಅವು ಬಹುಶಃ ಮೀನುಗಳಿಂತಿರುವ ಪೂರ್ವಜರಿಂದ ವಿಕಾಸ ಹೊಂದಿರಬೇಕು.ಇದೇ ರೀತಿಯಲ್ಲಿ ಮೀನು, ಸಾಲಮಾಂಡರ್ ,ಆಮೆ ಮತ್ತು ಕೋಳಿಗಳ ಭ್ರೂಣಗಳನ್ನು ಗಮನಿಸಿದರೆ ಭ್ರೂಣದ ಮೊದಲ ಹಂತದಲ್ಲಿ ಒಂದರಿಂದ ಇನ್ನೊಂದನ್ನು ಪ್ರತ್ಯೇಕವಾಗಿ ಗುರುತಿಸುವುದು ಕಷ್ಟ.ಎಲ್ಲವೂ ಒಂದೇ ರೀತಿ ಇರುತ್ತದೆ.ಇವೆಲ್ಲವೂ ಕೆಳದರ್ಜೆ ಕಶೆರುಕಗಳು .ಹಾಗೆಯೇ ಹಂದಿ , ಕರು ,ಮೊಲ ಮತ್ತು ಮಾನವ ಭ್ರೂಣಗಳು ಕೂಡ ಮೊದಲ ಹಂತದಲ್ಲಿ ಒಂದೇ ರೀತಿ ಕಾಣುತ್ತದೆ.ಇವೆಲ್ಲವೂ ಸಸ್ತನಿಗಳು ,ಕ್ರಮೇಣ ಹಂತಗಳಲ್ಲಿ ಈ ಹೋಲಿಕೆ ಕಡಿಮೆಯಾಗುತ್ತಾ ಅದರದರ ವಿಶಿಷ್ಟ ರೂಪ ಬರುತ್ತದೆ. ಹೀಗೆ ಒಂದು ಗುಂಪಿನ ಜೀವಿಗಳ ಸಂಬಂಧಗಳ ಸಾಮೀಪ್ಯವನ್ನು ಭ್ರೂಣಗಳ ಅಧ್ಯಯನದಿಂದ ತಿಳಿಯಬಹುದಾಗಿದೆ. =

ತುಲನಾತ್ಮಕ ಅಂಗರಚನಾಶಾಸ್ತ್ರ

1.ರೂಪಶಾಸ್ತ್ರ ದಿಂದ ದೊರೆತ ಸಾಕ್ಷಿಗಳು 

ಅ) ಅನುರೂಪತೆ : ಒಂದೇ ಭ್ರೂಣದಿಂದ ಉತ್ಪತ್ತಿಯಾದ ಒಂದೇ ರೀತಿಯ ರಚನೆಯನ್ನು ಹೊಂದಿದ ಹಾಗೂ ಒಂದೇ ಬಗೆಯ ಕಾರ್ಯವನ್ನು ನಿರ್ವಹಿಸುವ ಇಲ್ಲವೇ ನಿರ್ವಹಿಸದಿರುವ ಅವಯವಗಳಿಗೆ ಅನುರೂಪದ ಅವಯವಗಳೆಂದು ,ಈ ಸಂಗತಿಯನ್ನು ಅನುರೂಪತೆ ಎನ್ನುವರು .ಒಂದೇ ವಂಶದ ಪ್ರಾಣಿಗಳ ನಡುವಿನ ಇಲ್ಲವೆ ರಚನೆಯಲ್ಲಿಯ ಹೋಲಿಕೆಯನ್ನು ಅನುರೂಪತೆ ಎನ್ನುವರು. ಉದಾಹರಣೆ : ಕಶೇರುಕಗಳ ಕೈ-ಕಾಲುಗಳ ರಚನೆಯ ನಕ್ಷೆಯು ಒಂದೇ ತೆರನಾಗಿದೆ.ಆದರೆ ಅವು ನಿರ್ವಹಿಸುವ ಕಾರ್ಯಕ್ಕಗನುಗುಣವಾಗಿ ಮಾರ್ಪಾಟನ್ನು ಹೊಂದಿರುತ್ತವೆ. ಉದಾರಹಣೆ : ಕಪ್ಪೆ --- ಜಿಗಿಯಲು ,ಕುದುರೆ-- ಓಡಲು , ಪಕ್ಷಿ -- ಹಾರಲು , ತಿಮಿಂಗಲು -- ಈಜಲು ಕಶೆರುಕಗಳ ಮುಂಗಾಲಿನ ರಚನೆ --- ಹುಮೆರಸ್ , ರೇಡಿಯಸ್ , ಆಲ್ನ, ಕಾರ್ಪಲ್,ಮೆಟಾ ಕಾರ್ಪಲ್ಸ್ ಮತ್ತು ಫೆಲೆಂಜಿಸ್ ಎಂಬ ಮೂಳೆಗಳಿವೆ. ಉಭಯ ಜೀವಿಗಳು , ಸರೀಸೃಪಗಳು ,ಪಕ್ಷಿಗಳು ,ಸಸ್ತನಿಗಳು ಪುರಾತನ "ಮತ್ಸ್ಯ ಪೂರ್ವಕ "ವನ್ನು ತಮ್ಮ ಮೂಲಪುರಷನನ್ನಾಗಿ ಹೊಂದಿವೆ.

ಆ) ಸಾದೃಶ್ಯತೆ : ಜೀವವಿಕಾಸದ ರೂಪ ಹಾಗೂ ಅಂಗರಚನಾಶಾಸ್ತ್ರದಿಂದ ದೊರೆತ ಸಾಕ್ಷಿಗಳ ಹಿನ್ನೆಲೆಯಲ್ಲಿ ಪ್ರಾಣಿಗಳನ್ನು ಗಮನಿಸಿದಾಗ ವಿಭಿನ್ನ ರಚನೆಯನ್ನು ಹೊಂದಿದ ಬೇರೆ ಬೇರೆ ಮೂಲಗಳಿಂದ ಉತ್ಪತ್ತಿಯಾದ ಅವಯವಗಳು ಒಂದೇ ಬಗೆಯ ಕಾರ್ಯನಿರ್ವಹಿಸುವ ಅವಯವಗಳನ್ನು ಸಾದೃಶ್ಯದ ಅವಯವಗಳೆಂದೂ ,ಈ ಸಂಗತಿಯನ್ನು ಸಾದೃಶ್ಯತೆ ಎನ್ನುವರು.ಉದಾಹರಣೆ : ಕೀಟ ,ಪಕ್ಷಿ ಮತ್ತು ಬಾವಲಿ (ಸಸ್ತನಿ) ಯಲ್ಲಿ ಕಂಡುಬರುವ ರೆಕ್ಕೆಗಳ ಕ್ರಿಯೆ ಒಂದೇ ಆಗಿದ್ದು ರಚನೆ ಮಾತ್ರ ಭಿನ್ನವಾಗಿದೆ. ಈ ಬಗೆಯ ಜೀವವಿಕಾಸವನ್ನು "ಅಭಿಸರಣ ಜೀವವಿಕಾಸ" ಎಂದು ಕರೆಯುತ್ತಾರೆ.