"ವಿದ್ಯುನ್ಮಾನ ಕಥೆ ಹೇಳುವುದು" ಆವೃತ್ತಿಗಳ ಮಧ್ಯದ ಬದಲಾವಣೆಗಳು
೧ ನೇ ಸಾಲು: | ೧ ನೇ ಸಾಲು: | ||
+ | {| style="height:10px; float:right; align:center;" | ||
+ | |<div style="width:150px;border:none; border-radius:10px;box-shadow: 5px 5px 5px #888888; background:#ffffff; vertical-align:top; text-align:center; padding:5px;"> | ||
+ | ''[https://teacher-network.in/OER/index.php/ICT_teacher_handbook/Digital_story_telling See in English]''</div> | ||
ಈ ಚಟುವಟಿಕೆಯ ಮುಖ್ಯ ಉದ್ದೇಶವೆಂದರೆ, ವಿದ್ಯುನ್ಮಾನ ರೂಪದ ಕಥೆಗಳನ್ನು ಬೋಧನಾ ಕಲಿಕಾ ಸಂದರ್ಭಗಳಿಗಾಗಿ ರಚಿಸುವುದಾಗಿದೆ. ಉದಾಹರಣೆಗೆ: ಒಂದು ಕಾರ್ಯಕ್ರಮದ ಬಗ್ಗೆ ಅಥವಾ ಒಂದು ಸ್ಥಳದ ಬಗ್ಗೆ ಚಿತ್ರಸಹಿತ ಕಥೆ ರಚಿಸುವುದು. ಕಥೆ ಹೇಳಲು ಚಿತ್ರಗಳನ್ನು ಬಳಸುವುದು ಹಾಗು ಆಡಿಯೋ ಮುದ್ರಣ ಮಾಡುವುದು. ಈ ಎಲ್ಲಾ ಚಟುವಟಿಕೆಗಳ ಮುಖ್ಯ ಉದ್ದೇಶವೆಂದರೆ ಕಲಿಕೆ ಮತ್ತು ಅರ್ಥೈಸಿಕೊಳ್ಳುವಿಕೆಯಲ್ಲಿ, ಕೇವಲ ಪಠ್ಯಾಧಾರಿತ ವಿಧಾನಗಳಿಗೆ ಅವಲಂಬಿತವಾಗದೇ ವಿದ್ಯುನ್ಮಾನ ಕಥೆಗಳ ವಿಧಾನದ ಸಾಧ್ಯತೆಗಳನ್ನು ಪ್ರಸ್ತುತಿ ಪಡಿಸುವುದಾಗಿದೆ. | ಈ ಚಟುವಟಿಕೆಯ ಮುಖ್ಯ ಉದ್ದೇಶವೆಂದರೆ, ವಿದ್ಯುನ್ಮಾನ ರೂಪದ ಕಥೆಗಳನ್ನು ಬೋಧನಾ ಕಲಿಕಾ ಸಂದರ್ಭಗಳಿಗಾಗಿ ರಚಿಸುವುದಾಗಿದೆ. ಉದಾಹರಣೆಗೆ: ಒಂದು ಕಾರ್ಯಕ್ರಮದ ಬಗ್ಗೆ ಅಥವಾ ಒಂದು ಸ್ಥಳದ ಬಗ್ಗೆ ಚಿತ್ರಸಹಿತ ಕಥೆ ರಚಿಸುವುದು. ಕಥೆ ಹೇಳಲು ಚಿತ್ರಗಳನ್ನು ಬಳಸುವುದು ಹಾಗು ಆಡಿಯೋ ಮುದ್ರಣ ಮಾಡುವುದು. ಈ ಎಲ್ಲಾ ಚಟುವಟಿಕೆಗಳ ಮುಖ್ಯ ಉದ್ದೇಶವೆಂದರೆ ಕಲಿಕೆ ಮತ್ತು ಅರ್ಥೈಸಿಕೊಳ್ಳುವಿಕೆಯಲ್ಲಿ, ಕೇವಲ ಪಠ್ಯಾಧಾರಿತ ವಿಧಾನಗಳಿಗೆ ಅವಲಂಬಿತವಾಗದೇ ವಿದ್ಯುನ್ಮಾನ ಕಥೆಗಳ ವಿಧಾನದ ಸಾಧ್ಯತೆಗಳನ್ನು ಪ್ರಸ್ತುತಿ ಪಡಿಸುವುದಾಗಿದೆ. | ||
೧೧:೧೮, ೬ ಅಕ್ಟೋಬರ್ ೨೦೧೭ ದ ಇತ್ತೀಚಿನ ಆವೃತ್ತಿ
ಈ ಚಟುವಟಿಕೆಯ ಮುಖ್ಯ ಉದ್ದೇಶವೆಂದರೆ, ವಿದ್ಯುನ್ಮಾನ ರೂಪದ ಕಥೆಗಳನ್ನು ಬೋಧನಾ ಕಲಿಕಾ ಸಂದರ್ಭಗಳಿಗಾಗಿ ರಚಿಸುವುದಾಗಿದೆ. ಉದಾಹರಣೆಗೆ: ಒಂದು ಕಾರ್ಯಕ್ರಮದ ಬಗ್ಗೆ ಅಥವಾ ಒಂದು ಸ್ಥಳದ ಬಗ್ಗೆ ಚಿತ್ರಸಹಿತ ಕಥೆ ರಚಿಸುವುದು. ಕಥೆ ಹೇಳಲು ಚಿತ್ರಗಳನ್ನು ಬಳಸುವುದು ಹಾಗು ಆಡಿಯೋ ಮುದ್ರಣ ಮಾಡುವುದು. ಈ ಎಲ್ಲಾ ಚಟುವಟಿಕೆಗಳ ಮುಖ್ಯ ಉದ್ದೇಶವೆಂದರೆ ಕಲಿಕೆ ಮತ್ತು ಅರ್ಥೈಸಿಕೊಳ್ಳುವಿಕೆಯಲ್ಲಿ, ಕೇವಲ ಪಠ್ಯಾಧಾರಿತ ವಿಧಾನಗಳಿಗೆ ಅವಲಂಬಿತವಾಗದೇ ವಿದ್ಯುನ್ಮಾನ ಕಥೆಗಳ ವಿಧಾನದ ಸಾಧ್ಯತೆಗಳನ್ನು ಪ್ರಸ್ತುತಿ ಪಡಿಸುವುದಾಗಿದೆ.
ಉದ್ದೇಶಗಳು
ವಿದ್ಯುನ್ಮಾನ ಕಥೆಗಳನ್ನು ಅರ್ಥೈಸಿಕೊಳ್ಳುವುದುವಿವಿಧ ರೀತಿಯ ಸಂವಹನಗಳ ಪರಿಣಾಮವನ್ನು ಅರ್ಥೈಸಿಕೊಳ್ಳುವುದು ಮೊದಲನೇ ವಿಧಾನವಾಗಿದೆ. ಒಂದು ವಿಚಾರವನ್ನು ಸಂವಹನ ಮಾಡುವಲ್ಲಿ ವಿದ್ಯುನ್ಮಾನ ವಿಧಾನದ ಪರಿಣಾಮಕಾರಿತ್ವವನ್ನು ಯಾವುದಾದರೊಂದು ಬಹುಮಾದ್ಯಮ ವಿಧಾನದ ಮೂಲಮ ಮಕ್ಕಳೊಡನೆ ಚರ್ಚಿಸುವುದು. ಉದಾಹರಣೆಗೆ: ಸರಣಿ ಚಿತ್ರ, ಅನಿಮೇಶನ್, ಪೋಸ್ಟರ್, ಆಡಿಯೋ ಕ್ಲಿಪ್, ವಿಡಿಯೋ ಕ್ಲಿಪ್ ಗಳನ್ನು ತೆಗೆದುಕೊಳ್ಳಿ ಈಗ ಮಕ್ಕಳಿಗೆ ಇವುಗಳನ್ನು ಸಂಯೋಜಿಸಿ ಕಥೆ ಹೇಳಲು ಸೂಚಿಸಿ. ಶಿಕ್ಷಕರಿಗೆ ಟಿಪ್ಪಣಿವಿದ್ಯುನ್ಮಾನ ಕಥೆಗಳನ್ನು ಮೌಲ್ಯಮಾಪನ ಮಾಡಲು ಈ ಕೆಳಗಿನ ಅಂಶಗಳನ್ನು ಪರಿಗಣಿಸಿ:
ವಿದ್ಯಾರ್ಥಿಗಳಲ್ಲಿನ ಪ್ರತಿಫಲ
ಚಿತ್ರಗಳು ಮತ್ತು ಪಠ್ಯದೊಂದಿಗೆ ವಿದ್ಯುನ್ಮಾನ ಕಥೆ ರಚಿಸುವುದು1. ಚಿತ್ರಗಳೊಂದಿಗೆ ಕಥೆ ಹೇಳುವುದುಚಿತ್ರಗಳೊಂದಿಗೆ ವಿದ್ಯುನ್ಮಾನ ಕಥೆ ಇಲ್ಲಿ ನಾವು ಚಿತ್ರ ಕಥೆಯನ್ನು ರಚಿಸಬೇಕು. ಇದು ಒಂದು ಘಟನೆಯ ವರದಿಯೂ ಇರಬಹುದು ಅಥವಾ ಚಿತ್ರಗಳ ಸಂಗ್ರಹವೂ ಇರಬಹುದಾಗಿದ್ದು ಇವುಗಳನ್ನು ಬಳಸಿ ಕಥೆ ಹೇಳುವುದು ಮತ್ತು ಒಂದು ಘಟನೆಯನ್ನು ವಿವರಿಸಬಹುದಾಗಿದೆ. ಈ ಚಿತ್ರಗಳು ಒಂದು ಸಂದರ್ಭದಲ್ಲಿ ತೆಗೆದುಕೊಂಡ ಪೋಟೋಗಳು ಇರಬಹುದು ಅಥವಾ ಕೈಯಲ್ಲಿ ಆ ಸಂದರ್ಭದ ಬಗ್ಗೆ ಬಿಡಿಸಿದ ಚಿತ್ರಗಳು ಇರಬಹುದು. ಸ್ಲೈಡ್ ಶೋ ಮೂಲಕ ಈ ಚಿತ್ರಗಳನ್ನು ಪ್ರಸ್ತುತಿ ಮಾಡಬಹುದು. ವಿದ್ಯುನ್ಮಾನ ಚಿತ್ರಗಳೊಂದಿಗೆ ಕಥೆ ರಚಿಸುವುದು ಪೋಟೋಗಳನ್ನು ತೆಗೆದುಕೊಳ್ಳುವುದರ ಜೊತೆಗೆ ಪೈಂಟ್ ಅಥವಾ ಡ್ರಾಯಿಂಗ್ ಅನ್ವಯಕಗಳನ್ನು ಬಳಸಿ ಚಿತ್ರಗಳನ್ನು ರಚಿಸಬಹುದು. ಚಿತ್ರಗಳನ್ನು ಟಕ್ಸ್‌ಪೈಂಟ್ ಅಥವಾ ಮೈಪೈಂಟ್ ತಂತ್ರಾಂಶಗಳನ್ನು ಬಳಸಿಕೊಂಡು ರಚಿಸಬಹುದು. ಸ್ಕ್ರೀನ್‌ಶಾಟ್ ಹಾಗು ವೀಡಿಯೋಗಳ ಸ್ನಾಪ್‌ಶಾಡ್‌ಗಳ ಮೂಲಕವು ಚಿತ್ರಗಳನ್ನು ರಚಿಸಬಹುದು. ಈ ರೀತಿಯ ಎಲ್ಲಾ ಚಿತ್ರಗಳ ರಚನೆಯನ್ನು ಸ್ಲೈಡ್ ಶೋನಲ್ಲಿ ಸಂಯೋಜಿಸಬಹುದು. ಚಿತ್ರ ಕಥೆಯಲ್ಲಿನ ಬೋಧನಾ ಸಾಧ್ಯತೆಗಳುಚಿತ್ರ ಸಹಿತವಾದ ಕಥೆಗಳ ಪ್ರಸ್ತುತಿಯಲ್ಲಿ ಹಲವು ರೀತಿಯ ಬೋಧನಾ ಸಾಧ್ಯತೆಗಳು ಇವೆ. ಮಕ್ಕಳಲ್ಲಿ ಅಭಿವ್ಯಕ್ತಿಸುವಿಕೆಯನ್ನು ಹಾಗು ಸಂವಹನವನ್ನು ರಚಿಸುವಲ್ಲಿ ಚಿತ್ರ ಕಥೆಗಳು ಬಳಕೆಯಾಗುತ್ತವೆ. ಚಿತ್ರಕತೆಯನ್ನು ಪರಿಣಾಮಕಾರಿಯಾಗಿಸುವಲ್ಲಿ ಯಾವ ರೀತಿಯ ಪೋಟೋಗಳನ್ನು ಆಯ್ಕೆ ಮಾಡಿಕೊಳ್ಳುತ್ತೀರಿ ಎಂಬುದು ಮುಖ್ಯವಾಗುತ್ತದೆ. ಪೋಟೋ ಮತ್ತು ಚಿತ್ರ ಕಥೆಗಳ ಮೂಲಕ ಕಥೆ ಹೇಳುವ ಸಾಮರ್ಥ್ಯ ವೃದ್ದಿಯಾಗುತ್ತದೆ. ಪಠ್ಯ ಮತ್ತು ಚಿತ್ರಗಳ ಹಲವು ರೀತಿಯ ಮಧ್ಯವರ್ತನೆಗಳನ್ನು ನೀಡುತ್ತವೆ. ಇದು ತರಗತಿ ಕೋಣೆಯಲ್ಲಿ ಎಲ್ಲಾ ಮಕ್ಕಳು ಭಾಗವಹಿಸುವಿಕೆಯನ್ನು ಹೆಚ್ಚಿಸುವಲ್ಲಿ ಪರಿಣಾಮಕಾರಿಯಾಗಿ ಬಳಕೆಯಾಗುತ್ತದೆ. ಒಂದು ಕಥೆ ಅಥವಾ ಕವನವನ್ನು ವಿವರಿಸಲು ಒಬ್ಬ ವಿದ್ಯಾರ್ಥಿಯನ್ನು ಕೇಳುವ ಮೂಲಕ ಅವನ ಸಮಗ್ರವಾದ ಭಾಗವಹಿಸುವಿಕೆಯನ್ನು ಮೌಲ್ಯಮಾಪನ ಮಾಡಬಹುದು. ವಿದ್ಯಾರ್ಥಿಗಳು ತನ್ನ ಸಹವರ್ತಿಗಳೊಡನೆ ಸೇರಿ ಸಹಯೋಜಿತವಾಗಿ ಕಥೆಗಳನ್ನು ರಚಿಸಲು ಪ್ರೋತ್ಸಾಹಿಸಬಹುದು. 2. ಚಿತ್ರಗಳನ್ನು ಸಂಕಲನ ಮಾಡುವುದು ಮತ್ತು ಪಠ್ಯ ಸೇರಿಸುವುದುಚಿತ್ರಕಥೆಯನ್ನು ಒಮ್ಮೆ ರಚಿಸಿದ ಮೇಲೆ, ಅದಕ್ಕೆ ಪಠ್ಯ ಸೇರಿಸುವುದು ಉಪಯುಕ್ತವೆನಿಸಬಹುದು. ಉದಾಹರಣೆ ಭಾಷಾ ತರಗತಿಗಳಿಗಾಗಿ ಕೆಲಸ ಮಾಡುವಾಗ, ನಾವು ಆಯಾ ಪಾಠಗಳಿಗೆ ಸಂಬಂಧಿಸಿದ ಚಿತ್ರಗಳನ್ನು ರಚಿಸಬೇಕಾಗುತ್ತದೆ. ಇದು ಪಠ್ಯಪುಸ್ತಕಕ್ಕೆ ಸಂಬಂಧೀಕರಿಸುತ್ತದೆ. ಚಿತ್ರಗಳನ್ನು ಪಠ್ಯ ದಾಖಲೆಗೆ ಸೇರಿಸಬಹುದು, ಪರಿಕಲ್ಪನಾ ನಕ್ಷೆಗಳನ್ನು ಸಹ ಸೇರಿಸಬಹುದು. ಪಠ್ಯ ಮತ್ತು ಚಿತ್ರಗಳನ್ನು ಸಂಯೋಜಿಸವುಲ್ಲಿ ವಿವಿಧ ಹಂತಗಳಿವೆ :
ಇದರ ಜೊತೆಗೆ, ಚಿತ್ರ ಮತ್ತು ಪಠ್ಯವೂ ಕಥೆ ಹೇಳುತ್ತವೆ. ಈ ವಿಧಾನವು ಕಲೆಯನ್ನು ವಿವಿಧ ವಿಷಯಗಳೊಡನೆ ಸಂಯೋಜಿಸಲು ಉಪಯುಕ್ತವಾಗುತ್ತದೆ. ಚಿತ್ರ ಕಥೆಯಲ್ಲಿನ ಬೋಧನಾ ಸಾಧ್ಯತೆಗಳುಚಿತ್ರ ಕಥೆಗಳು ಅವರವರ ಬಾಷಾ ಸಾಮರ್ಥ್ಯಕ್ಕೆ ತಕ್ಕಂತೆ ಪಠ್ಯವನ್ನು ಅರ್ಥೈಸಿಕೊಳ್ಳಲು ವಿದ್ಯಾರ್ಥಿಗಳಿಗೆ ಸಾಧ್ಯವಾಗಿಸುತ್ತದೆ. ಚಿತ್ರವು ವಿವರಣೆಯನ್ನು ಬೆಂಬಲಿಸುತ್ತದೆ. ಒಂದು ವಿಷಯದಲ್ಲಿ ಮಕ್ಕಳು ಹೇಗೆ ಕಥೆ ಹೇಳುವ ಸಾಮರ್ಥ್ಯ ಹೊಂದಿದ್ದಾರೆ ಹಾಗು ಅವರ ಅಭಿವ್ಯಕ್ತಿಸುವ ಸಾಮರ್ಥ್ಯ ಹೇಗಿದೆ ಎಂಬುದನ್ನು ಶಿಕ್ಷಕರು ಮೌಲ್ಯಮಾಪನ ಮಾಡಬಹುದು. ಚಿತ್ರ ಪ್ರಬಂಧ ಮತ್ತು ಚಿತ್ರಕಥೆಗಳು ಮಕ್ಕಳ ದಾಖಲಾತಿ ಸಾಮರ್ಥ್ಯವನ್ನು ಹಾಗು ಸಂವಹನ ನಡೆಸಲು ಪಠ್ಯ ಮತ್ತು ಪಠ್ಯೇತರ ವಿಧಾನಗಳನ್ನು ಸಂಯೋಜಿಸುವ ಕೌಶಲವನ್ನು ತಿಳಿಯಲು ಸಹಾಯಕವಾಗುತ್ತವೆ. ಚಿತ್ರಕಥೆಗಳ ಇತರೆ ಉದಾಹರಣಗಳು
ಚಿತ್ರ ಕಥೆಗಳನ್ನು ರಚಿಸಲು ವಿದ್ಯುನ್ಮಾನ ಕಲಿಕಾ ಸಂಪನ್ಮೂಲಗಳನ್ನು ಬಳಸಬಹುದು
ಆಡಿಯೋ ಮತ್ತು ವೀಡಿಯೋ ಕಥೆಗಳುಇವುಗಳನ್ನು ನಾವು ಹೆಚ್ಚು ಬಳಸದಿರಬಹುದು. ಆದರೆ ಸಣ್ಣ ಆಡಿಯೋ ಕ್ಲಿಪ್‌ಗಳನ್ನೂ ಕಥೆ ಹೇಳಲು ಬಳಸಬಹುದು. ಶಬ್ದಗಳನ್ನು ಹಾಗು ವಿವರಣೆಗಳನ್ನು ಕಥೆ ಹೇಳುವಲ್ಲಿ ಬಳಸಬಹುದು. ಇದು ಕಥೆ ಹೇಳುವಲ್ಲಿ ಆಡಿಯೋ ಮತ್ತು ವೀಡಿಯೋ ಕಡತವನ್ನು ಯಾವಾಗ ಬಳಸಬೇಕು ಎಂಬ ಕೌಶಲವನ್ನು ವೃದ್ದಿಸುತ್ತದೆ. ಆಡಿಯೋ ವೀಡಿಯೋ ಕಡತಗಳನ್ನು ರಚಿಸಲು ಹಲವು ವಿಧಾನಗಳಿವೆ.
ಆಡಿಯೋ ವಿಶ್ಯುವಲ್ ಕಥೆಗಳ ಮೂಲಕ ಬೋಧನಾ ಸಾಧ್ಯತೆಗಳುಆಡಿಯೋ ವಿಶ್ಯುವಲ್ ವಿಧಾನವು ಸಂದೇಶಕ್ಕೆ ಪರಿಣಾಮಕಾರಿತ್ವವನ್ನು ಒದಗಿಸುತ್ತದೆ. ಆಡಿಯೋ ವೀಡಿಯೋ ಮತ್ತು ಆನಿಮೇಶನ್‌ಗಳನ್ನು ಒಳಗೊಂಡ ಈ ಕೆಳಗಿನ ವೀಡಿಯೋವನ್ನು ನೋಡಿ. ಚಿತ್ರಗಳ ಕಥೆಯಂತೆ ಕಥೆಯನ್ನು ನಿರ್ಧರಿಸುವುದು, ಚಿತ್ರಗಳನ್ನು ಆಯ್ಕೆ ಮಾಡುವುದು ಇದರ ಪರಿಣಾಮಕಾರಿತ್ವವನ್ನು ಹೆಚ್ಚಿಸುತ್ತದೆ. ಆಡಿಯೋವಿಶ್ಯುವಲ್ ಕಥೆಗಳು ವಿವಿಧ ರೀತಿಯ ಅಭಿವ್ಯಕ್ತಪಡಿಸುವಿಕೆಯನ್ನು ಸಾಧ್ಯವಾಗಿಸುತ್ತವೆ. ಇದರಿಂದ ತರಗತಿಯಲ್ಲಿ ಕಲಿಕಾ ವಾತಾವರಣ ನಿರ್ಮಿಸಬಹುದಾಗಿದೆ. ಇದು ಸಮುದಾಯ/ಸಾಮಾಜಿಕ ಸಂಸ್ಥೆಗಳ (ಸಮಾಜ ವಿಜ್ಞಾನ), ಪರಿಸರ ಮತ್ತು ನೈಸರ್ಗಿಕ ಪ್ರಕ್ರಿಯೆಗಳ (ವಿಜ್ಞಾನ), ಅಭಿವ್ಯಕ್ತಿಸುವಿಕೆ (ಭಾಷೆ) ಬಗೆಗಿನ ಆಳವಾದ ಅರ್ಥೈಸಿಕೊಳ್ಳುವಿಕೆಗೆ ಸಹಾಯ ಮಾಡುತ್ತಿದೆಯೇ ನಿರ್ದಿಷ್ಟ ಉದ್ದೇಶಗಳ ಮೇಲೆ ವಿದ್ಯುನ್ಮಾನ ಕಥೆಯ ಇತರೇ ಪ್ರತಿಫಲಗಳು ನಿರ್ಧರಿತವಾಗುತ್ತವೆ. ಕಲೆ ಮತ್ತು ಸಂಗೀತದ ಅಂಶಗಳು ಸಹ ವಿದ್ಯುನ್ಮಾನ ಕಥೆಯಲ್ಲಿ ಮಿಶ್ರಣಗೊಳ್ಳಬಹುದಾಗಿದೆ. ಪ್ರಸ್ತುತಿಯ ಶೈಲಿ ಹಾಗು ಗುಣಮಟ್ಟವು ಮಕ್ಕಳ ಭಾಗವಹಿಸುವಿಕೆ ಹಾಗು ಅವರ ತಂತ್ರಿಕ ಕೌಶಲದ ಬಗೆಗೆ ಸ್ಷಷ್ಟ ಸೂಚಕಗಳನ್ನು ಒದಗಿಸುತ್ತವೆ. ಚಿತ್ರ ಕಥೆಗಳನ್ನು ರಚಿಸಲು ವಿದ್ಯುನ್ಮಾನ ಕಲಿಕಾ ಸಂಪನ್ಮೂಲಗಳನ್ನು ಬಳಸಬಹುದುIn addition to the tools mentioned, the following tools are to be used: ವಿದ್ಯುನ್ಮಾನ ಕಥೆಗಳ ಮೌಲ್ಯಮಾಪನವಿಧ್ಯಾರ್ಥಿಗಳ ಕಲಿಕಾ ಮೌಲ್ಯಮಾಪನಕ್ಕಾಗಿ ವಿದ್ಯುನ್ಮಾನ ಕಥೆಗಳ ಮೌಲ್ಯಮಾಪನ ಮಾಡಬಹುದು:
ಭಾಷಾ ವಿಷಯಗಳಿಗಾಗಿ ಈ ಕೆಳಗಿನವುಗಳನ್ನು ನೋಡಬಹುದು:
ಸಮಾಜ ವಿಜ್ಞಾನ, ವಿಜ್ಞಾನ ಮತ್ತು ಗಣಿತ ವಿಷಯಗಳಿಗಾಗಿ ಈ ಕೆಳಗಿನವುಗಳನ್ನು ನೋಡಬಹುದು:
ವಿದ್ಯುನ್ಮಾನ ಕಥೆ ಪ್ರಸ್ತುತಿಯನ್ನು ಬೊಧನಾ ಪರಿಕರವಾಗಿ ಹೇಗೆ ಬಳಸಬಹುದು ಎಂಬುದಕ್ಕೆ ಈ ಕೆಳಗಿನವುಗಳು ಉದಾಹರಣೆಯಾಗಿವೆ. ಶಾಲೆಗಳಲ್ಲಿನ ವಿದ್ಯುನ್ಮಾನ ಕಥೆಗಳಲ್ಲಿನ ಕೆಲವು ಉದಾಹರಣಗಳು ಈ ವಿದ್ಯುನ್ಮಾನ ಕಥೆಗಳನ್ನು ನೋಡುವಾಗ ಇವುಗಳನ್ನು ಶಾಲೆಗಳಲ್ಲಿ ಬೋಧನಾ ಪರಿಕರವಾಗಿ ಬಳಸಬಹುದಾದ ಸಾಧ್ಯತೆಗಳನ್ನು ಕಾಣಬಹುದು.
|