"ಗಣಿತ ಮತ್ತು ವಿಜ್ಞಾನ ಕಲಿಕಾ-ಬೋಧನೆಯಲ್ಲಿ ಡಿಜಿಟಲ್ ಸಂಪನ್ಮೂಲಗಳ ಸಂಯೋಜನೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೮೩ ನೇ ಸಾಲು: ೮೩ ನೇ ಸಾಲು:
 
|-
 
|-
 
|1
 
|1
|[https://karnatakaeducation.org.in/KOER/en/index.php/Electric_Circuits][https://phet.colorado.edu/sims/html/circuit-construction-kit-dc-virtual-lab/latest/circuit-construction-kit-dc-virtual-lab_kn.html ವಿದ್ಯುಚ್ಛಕ್ತಿ ಮತ್ತು ಮಂಡಲಗಳು]  
+
|[https://phet.colorado.edu/sims/html/circuit-construction-kit-dc-virtual-lab/latest/circuit-construction-kit-dc-virtual-lab_kn.html ವಿದ್ಯುಚ್ಛಕ್ತಿ ಮತ್ತು ಮಂಡಲಗಳು]
 
|
 
|
 
* ವಿದ್ಯುತ್ ಮಂಡಲದ ಘಟಕಗಳು ಮತ್ತು ಗುಣಲಕ್ಷಣಗಳ ಕುರಿತಾದ ಪರಿಚಯಿಸುವಿಕೆ  
 
* ವಿದ್ಯುತ್ ಮಂಡಲದ ಘಟಕಗಳು ಮತ್ತು ಗುಣಲಕ್ಷಣಗಳ ಕುರಿತಾದ ಪರಿಚಯಿಸುವಿಕೆ  

೧೯:೦೨, ೨೩ ಆಗಸ್ಟ್ ೨೦೨೪ ನಂತೆ ಪರಿಷ್ಕರಣೆ

  1. ಉದ್ದೇಶಗಳು:
  • ತರಗತಿಯಲ್ಲಿನ ಅಗತ್ಯಗಳ ವೈವಿಧ್ಯತೆಯನ್ನು ಅರ್ಥಮಾಡಿಕೊಳ್ಳಲು ಶಿಕ್ಷಕರಿಗೆ ಸಹಾಯ ಮಾಡುವುದು ಹಾಗೂ ಗಣಿತ ಮತ್ತು ವಿಜ್ಞಾನ ತರಗತಿಯಲ್ಲಿ ತಂತ್ರಜ್ಞಾನ-ಆಧಾರಿತ ಬೋಧನ ವಿಧಾನವನ್ನು ಸಂಯೋಜಿಸುವ ಸಾಧ್ಯತೆಗಳನ್ನು ಊಹಿಸಲು ಶಿಕ್ಷಕರಿಗೆ ಅನುವು ಮಾಡಿಕೊಡುವುದು.
  • ಬಹು-ಹಂತದ, ಬಹು-ಮಾದರಿ ಸಂಪನ್ಮೂಲಗಳು ಮತ್ತು ಬೋಧನ ತಂತ್ರಗಳನ್ನು ಬಳಸುವಂತೆ ಶಿಕ್ಷಕರನ್ನು ಸಜ್ಜುಗೊಳಿಸುವುದು.
  • ಶಿಕ್ಷಕರು ತಮ್ಮ TPCK ಅನ್ನು ಹೆಚ್ಚಿಸಿಕೊಳ್ಳಲು ವಿವಿಧ ಡಿಜಿಟಲ್ ಉಪಕರಣಗಳು ಮತ್ತು ಸಂಪನ್ಮೂಲಗಳನ್ನು ಅನ್ವೇಷಿಸಲು ಸಹಾಯ ಮಾಡುವುದು.
  • ಅನುಭವಗಳು, ಆಲೋಚನೆಗಳು ಮತ್ತು ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳುವ ಮೂಲಕ ಮುಂದುವರಿಸುವ ಮತ್ತು ನಿರಂತರ ಶಿಕ್ಷಕರ ವೃತ್ತಿಪರ ಅಭಿವೃದ್ಧಿಗಾಗಿ ಕಲಿಕೆಯ ಸಮುದಾಯವನ್ನು ನಿರ್ಮಿಸುವುದು.

ಗಣಿತ

ಕ್ರಮ ಸಂಖ್ಯೆ ಗಣಿತ ಪರಿಕಲ್ಪನೆಗಳು ವಿಷಯ ಕುರಿತು ವಿವರಣೆ
1 ರೇಖೆಗಳು ಮತ್ತು ಕೋನಗಳು
  1. ರೇಖೆಗಳು ಮತ್ತು ರೇಖಾಖಂಡಗಳನ್ನು ಪರಿಚಯಿಸಲಾಗುತ್ತಿದೆ
  2. ಕೋನಗಳ ರಚನೆ ಮತ್ತು ಅವುಗಳ ವಿಧಾನಗಳನ್ನು ಅರ್ಥಮಾಡಿಕೊಳ್ಳುವುದು
  3. ಸಮಾಂತರ ರೇಖೆಗಳು ಮತ್ತು ಓರೆಯಾದ ರೇಖೆಗಳನ್ನು ಪ್ರತ್ಯೇಕಿಸುವುದು
  4. ಸಮಾಂತರ ರೇಖೆಗಳಲ್ಲಿ ರೂಪುಗೊಂಡ ಜೋಡಿ ಕೋನಗಳನ್ನು ಗುರುತಿಸುವುದು
2 ಸಮಾಂತರ ರೇಖೆಗಳ ಛೇಧಕ ಸಮಾಂತರ ರೇಖೆಗಳಲ್ಲಿ ಪರ್ಯಾಯ ಕೋನಗಳು ಮತ್ತು ಅನುರೂಪ ಕೋನಗಳು ಸಮ ಎಂದು ಅರ್ಥಮಾಡಿಕೊಳ್ಳುವುದು.
3 ಸಂಖ್ಯಾ ರೇಖೆಯ ಮೇಲೆ ಮೂಲ ಕ್ರಿಯೆಗಳು ಸಮತಲ ಸಂಖ್ಯೆಯ ರೇಖೆಯ ಮೇಲೆ ಪೂರ್ಣಾಂಕಗಳ ಸಂಕಲನ ಮತ್ತು ವ್ಯವಕಲನವನ್ನು ಪ್ರತಿನಿಧಿಸುವುದು
4 ಭಿನ್ನರಾಶಿಗಳು - Intro, Build a fraction, Fraction Matcher ಭಿನ್ನರಾಶಿ-ಸಂಬಂಧಿತ ವಿಷಯಗಳನ್ನು ಸರಳ ಮತ್ತು ಹೆಚ್ಚು ಪರಿಕಲ್ಪನಾತ್ಮಕವಾಗಿ ಅರ್ಥವಾಗುವಂತೆ ಮಾಡಬಹುದು.
5 ಸುತ್ತಳತೆ ಮತ್ತು ವಿಸ್ತೀರ್ಣ 1. ಘಟಕ ಚೌಕಗಳನ್ನು ಎಣಿಸುವ ಮೂಲಕ ಆಕೃತಿಯ ವಿಸ್ತೀರ್ಣವನ್ನು ಕಂಡುಹಿಡಿಯಿರಿ

2. ವಿಸ್ತೀರ್ಣ ಮತ್ತು ಸುತ್ತಳತೆ ನಡುವಿನ ಸಂಬಂಧವನ್ನು ವಿವರಿಸುವುದು

6 ತ್ರಿಭುಜಗಳು
  • ತ್ರಿಭುಜವನ್ನು ಗುರುತಿಸುವುದು ಮತ್ತು ಅದರ ರಚನೆಯನ್ನು ಅರ್ಥಮಾಡಿಕೊಳ್ಳುವುದು
  • ತ್ರಿಭುಜಗಳಿಗೆ ಸಂಬಂಧಿಸಿದ ನಿಯತಾಂಕಗಳನ್ನು ಗುರುತಿಸುವುದು
  • ಬಾಹುಗಳು ಮತ್ತು ಕೋನಗಳನ್ನು ಆಧರಿಸಿ ತ್ರಿಭುಜಗಳ ವಿವಿಧ ರಚನೆಗಳನ್ನು ಅರ್ಥೈಸಿಕೊಳ್ಳುವುದು
  • ತ್ರಿಭುಜಗಳಿಗೆ ಸಂಬಂಧಿಸಿದ ನಿಯತಾಂಕಗಳ(ಪ್ರಮಿತಿ) ನಡುವಿನ ಸಂಬಂಧವನ್ನು ಸ್ಥಾಪಿಸುವುದು
7 ತ್ರಿಭುಜಗಳ ರಚನೆ ವಿವಿಧ ತ್ರಿಭುಜಗಳ ರಚನೆಯ ಪರಿಚಯಿಸಬಹುದು
8 ಸಮೀಕರಣಗಳು ಒಂದೇ ರೀತಿಯ ಚರಾಕ್ಷರಗಳನ್ನು ವಿವಿಧ ಪ್ರಕ್ರಿಯೆಗಳ(ಕೂಡುವ/ಕಳೆಯುವ) ಮೂಲಕ ಉಕ್ತಿಗಳನ್ನು ಸರಳಗೊಳಿಸುವುದು
9 ವೃತ್ತಗಳು
  • ವೃತ್ತವು 2 ಆಯಾಮದ ವೃತ್ತಾಕಾರದ ಸಮತಲ ಆಕೃತಿ ಹಾಗೂ ವೃತ್ತದ ಅಂಚಿನಲ್ಲಿರುವ ಎಲ್ಲಾ ಬಿಂದುಗಳು ಕೇಂದ್ರದಿಂದ ಸಮವಾಗಿರುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಲು
  • ವೃತ್ತಕ್ಕೆ ಸಂಬಂಧಿಸಿದ ವಿಷಯಗಳ ಗುಣಗಳನ್ನು ತಿಳಿಯಲು
10 ಚತುರ್ಭುಜಗಳು ವಿವಿಧ ಚತುರ್ಭುಜಗಳು ಮತ್ತು ಅವುಗಳ ಗುಣಲಕ್ಷಣಗಳನ್ನು ತಿಳಿಯಬಹುದು
11 2 ಮತ್ತು 3 ಆಯಾಮದ ಆಕಾರಗಳು
  • ದೈನಂದಿನದಲ್ಲಿ ಬಳಸುವ ವಿವಿಧ ವಸ್ತುಗಳಲ್ಲಿ ಸಾಮಾನ್ಯವಾಗಿ ಕಾಣುವ 2D (ವೃತ್ತ, ಚೌಕ, ತ್ರಿಭುಜ, ಆಯತ) ಮತ್ತು 3D (ಗೋಳ, ಆಯತಘನ, ಶಂಕು, ಸಿಲಿಂಡರ್) ಆಕೃತಿ /ಆಕೃತಿಗಳನ್ನು ಗುರುತಿಸುವುದು.
  • ವಿವಿಧ ಆಕೃತಿಗಳಲ್ಲಿನ ಗುಣಲಕ್ಷಣಗಳ ಆಧಾರದ ಮೇಲೆ ವರ್ಗೀಕರಿಸುವುದು ಮತ್ತು ವಿಂಗಡಿಸುವುದು (ಉದಾ., ಬಾಹುಗಳ ಸಂಖ್ಯೆ, ಮೂಲೆಗಳು, ಮುಖಗಳು, ಅಂಚುಗಳು).
  • ಆಕೃತಿಗಳ ವಿವಿಧ ಗುಣಲಕ್ಷಣಗಳಾದ ಬಾಹು, ಶೃಂಗ (ಮೂಲೆ), ಅಂಚು ಮತ್ತು ಮುಖಗಳನ್ನು ವಿವರಿಸಲು ಸೂಕ್ತವಾದ ಪರಿಭಾಷೆಯನ್ನು ತಿಳಿಯುವುದು.
  • ಸ್ಥಾನ, ದೃಷ್ಟಿಕೋನ ಮತ್ತು ಸಾಪೇಕ್ಷ ಗಾತ್ರದಂತಹ ಪರಿಕಲ್ಪನೆಗಳನ್ನು ಒಳಗೊಂಡಂತೆ ಆಕೃತಿಗಳ ನಡುವಿನ ಪ್ರಾದೇಶಿಕ ಸಂಬಂಧಗಳ ತಿಳುವಳಿಕೆಯನ್ನು ಅಭಿವೃದ್ಧಿಪಡಿಸುವುದು.
  • 2D ಆಕೃತಿಗಳನ್ನು ಸಂಯೋಜಿಸಿ 3D ಆಕೃತಿಗಳನ್ನು ರೂಪಿಸಬಹುದೆಂಬುದನ್ನು ಗುರುತಿಸುವುದು.
  • ಬಹುವಿಧದ (ಮಲ್ಟಿಮೀಡಿಯಾ) ಸಂಪನ್ಮೂಲಗಳ ಮೂಲಕ ಆಕೃತಿ ಬಗೆಗಿನ ಪರಿಕಲ್ಪನೆಗಳ ಕಲಿಕೆಯನ್ನು ಅರ್ಥಪೂರ್ಣವಾಗಿಸುವುದು.

ವಿಜ್ಞಾನ

Sl. No. Science ವಿಷಯ ಕುರಿತು ವಿವರಣೆ
1 ವಿದ್ಯುಚ್ಛಕ್ತಿ ಮತ್ತು ಮಂಡಲಗಳು
  • ವಿದ್ಯುತ್ ಮಂಡಲದ ಘಟಕಗಳು ಮತ್ತು ಗುಣಲಕ್ಷಣಗಳ ಕುರಿತಾದ ಪರಿಚಯಿಸುವಿಕೆ
  • ಸರಣಿ ಮಂಡಲ ಮತ್ತು ಸಮಾಂತರ ಮಂಡಲಗಳ ರಚನೆ ಅವುಗಳ ನಡುವಿನ ವ್ಯತ್ಯಾಸ ಮತ್ತು ಸಾಮ್ಯತೆ ಕುರಿತಾದ ಚರ್ಚೆ
  • ವಿದ್ಯುತ್ ವಾಹಕಗಳು ಮತ್ತು ವಿದ್ಯುತ್ ಅವಾಹಕಗಳ ಪರಿಶೋಧನೆ
2 ರಾಸಾಯನಿಕ ಸಮೀಕರಣಗಳನ್ನು ಸರಿದೂಗಿಸುವುದು ಪ್ರತಿ ಅಣುವಿನಲ್ಲಿನ ಪರಮಾಣು ಸಂಖ್ಯೆಗಳನ್ನು ಗುರುತಿಸಿ, ರಾಶಿ ಸಂರಕ್ಷಣಾ ನಿಯಮದ ಮೂಲಕ ಪ್ರತಿಕಾರಕಗಳು ಮತ್ತು ಉತ್ಪನ್ನಗಳ ಸಂಖ್ಯೆಯನ್ನು ಸರಿದೂಗಿಸುವುದು.
3 ಬಲ ಮತ್ತು ಚಲನೆ 1. ಬಲ ಯಾವಾಗ ಸಮನಾಗಿರುತ್ತದೆ ಮತ್ತು ಅಸಮವಾಗಿರುತ್ತದೆ ಎಂದು ಗುರುತಿಸುವುದು

2. ಹೆಚ್ಚು ಬಲದಿಂದ ವಸ್ತುವಿನ ಒಟ್ಟು ಬಲದ ಮೇಲಾಗುವ ಪರಿಣಾಮವನ್ನು ಕಂಡುಹಿಡಿಯುವುದು

4 ಬೆಳಕು ಮಸೂರಗಳ ಪ್ಯಾರಾಮೀಟರ್ಗಳನ್ನು (ಫೋಕಲ್ ಲೆಂತ್ ಮತ್ತು ಡಯಾಮೀಟರ್) ಬದಲಾಯಿಸುವುದರಿಂದ ಉಂಟಾಗುವ ಪ್ರತಿಬಿಂಬದಲ್ಲಾಗುವ ಮತ್ತು ಅದು ಉಂಟಾಗುವ ರೀತಿಯಲ್ಲಿನ ಬದಲಾವಣೆಗಳೇನು ಎಂದು ಅರ್ಥಮಾಡಿಕೊಳ್ಳುವುದು.
5 ಆಮ್ಮ ಮತ್ತು ಪ್ರತ್ಯಾಮ್ಲ ರುಚಿ ಮತ್ತು ಸ್ಪರ್ಶದ ಮೂಲಕ ಮನೆಯಲ್ಲಿ ಬಳಸುವ ಸಾಮಾನ್ಯ ವಸ್ತುಗಳನ್ನು ಆಮ್ಲ ಮತ್ತು ಪ್ರತ್ಯಾಮ್ಲಗಳಾಗಿ ವಿಂಗಡಿಸುವುದು ಮತ್ತು ಅದರ ಕುರಿತಾದ ಚರ್ಚೆ. Acid and Base(PH scale) ಆಮ್ಲ_ಮತ್ತು_ಪ್ರತ್ಯಾಮ್ಲಗಳ_ಪತ್ತೆ_ಹಚ್ಚುವಿಕೆ ಪಿ.ಹೆಚ್ ಸ್ಕೇಲ್ ಬಳಸಿ ನೀಡಲಾಗಿರುವ ವಸ್ತುಗಳನ್ನು ಆಮ್ಲ, ಪ್ರತ್ಯಾಮ್ಲ ಮತ್ತು ತಟಸ್ಥ ವಸ್ತುಗಳಾಗಿ ವಿಂಗಡಿಸುವುದು. ಅದರ ಮೂಲಕ ಆಮ್ಮ, ಪ್ರತ್ಯಾಮ್ಲ ಮತ್ತು ತಟಸ್ಥ ವಸ್ತುಗಳ ಗುಣಲಕ್ಷಣಗಳ ಪರಿಶೋಧನೆ
6 ಜೀರ್ಣಾಂಗ ವ್ಯವಸ್ಥೆ 1. ಜೀರ್ಣಾಂಗ ವ್ಯವಸ್ಥೆಯ ವಿವಿಧ ಅಂಗಗಳ ಕಾರ್ಯಗಳನ್ನು ಅರ್ಥಮಾಡಿಕೊಳ್ಳುವುದು

2. ದಿನ ನಿತ್ಯ ಬಳಸುವ ವಸ್ತುಗಳನ್ನ ಬಳಸಿ ಜೀರ್ಣಾಂಗವ್ಯೂಹದ ಮಾದರಿಯನ್ನು ತಯಾರಿಸುವುದು

7 ಶ್ವಾಸಾಂಗ ವ್ಯವಸ್ಥೆ 1. ಶ್ವಾಸಾಂಗವ್ಯವಸ್ಥೆಯ ಕಾರ್ಯವನ್ನು ವಿವರಿಸುವುದು

2.  ಶ್ವಾಸಾಂಗವ್ಯೂಹದ ವಿವಿಧ ಭಾಗಗಳ ರಚನೆ ಮತ್ತು ಕಾರ್ಯವನ್ನು ಶ್ವಾಸಾಂಗವ್ಯೂಹದ ಮಾದರಿಯನ್ನು ಬಳಸಿ ಅರ್ಥಮಾಡಿಕೊಂಡು ವಿವರಿಸುವುದು

8


ನಮ್ಮ ಸುತ್ತಲಿನ ಬದಲಾವಣೆಗಳು

  1. ರಾಸಾಯನಿಕ ಅಥವಾ ಭೌತಿಕ ಬದಲಾವಣೆಯನ್ನು ಗುರುತಿಸಿ. ವಿಂಗಡಿಸುವುದು
  2. ಒಂದೇ ವಸ್ತುವು ರಾಸಾಯನಿಕ ಮತ್ತು ಭೌತಿಕ ಬದಲಾವಣೆಗಳಿಗೆ ಒಳಗಾಗಬಹುದು ಎಂಬುದನ್ನು ಅವಲೋಕಿಸುವುದು
  3. ಗುಣಲಕ್ಷಣಗಳ ಆಧಾರದ ಮೇಲೆ ರಾಸಾಯನಿಕ ಅಥವಾ ಭೌತಿಕ ಬದಲಾವಣೆಯನ್ನು ವಿವರಿಸುವುದು
9 ಎಳೆಯಿಂದ ಬಟ್ಟೆ 1. ನಾರಿನಿಂದ ಬಟ್ಟೆ ತಯಾರಾಗುವ ಪ್ರಕ್ರಿಯೆಯನ್ನು ದೃಶ್ಯೀಕರಿಸುವುದು

2.ಕಥೆಯ ಮೂಲಕ ವಿವಿಧ ಬಗೆಯ ಬಟ್ಟೆಗಳು ಮತ್ತು ಅವುಗಳ ಗುಣಲಕ್ಷಣಗಳನ್ನು ಚರ್ಚಿಸುವುದು

10 ಪರಮಾಣುವನ್ನು ನಿರ್ಮಿಸಿ
  1. ಪ್ರೋಟಾನ್, ನ್ಯೂಟ್ರಾನ್ ಮತ್ತು ಇಲೆಕ್ಟ್ರಾನ್ಗಳು ಪರಮಾಣುವಿನ ಮುಖ್ಯ ಘಟಕಗಳೆಂದು ತಿಳಿಯುವುದು. ಪರಮಾಣುವಿನ ರಚನೆಯಲ್ಲಿ ಅವುಗಳ ಮಹತ್ವವನ್ನು ಅರಿಯುವುದು.
  2. ಪರಮಾಣುವಿನ ಸಂಕೇತ, ರಾಶಿ ಸಂಖ್ಯೆ, ಒಟ್ಟು ಚಾರ್ಜ್, ಸ್ಥಿರತೆಯನ್ನು ಅರ್ಥಮಾಡಿಕೊಳ್ಳುವುದು
11 ಸಸ್ಯದ ಜೀವನ ಚಕ್ರ 1. ಬೀಜದಿಂದ ಸಸ್ಯದ ಬೆಳವಣಿಗೆಯ ಎಲ್ಲಾ ಹಂತಗಳನ್ನು ದೃಶ್ಯೀಕರಿಸುವುದು

2.ಕಥೆಯ ಮೂಲಕ ವಿದ್ಯಾರ್ಥಿಗಳ ನಿತ್ಯ ಜೀವನದಲ್ಲಿನ ಸಸ್ಯದ ಬೆಳವಣಿಗೆಯ ಕುರಿತಾಗಿ ಚರ್ಚಿಸುವುದು

ಗಣಿತ ಕಲಿಕಾ-ಬೋಧನೆಗೆ ವೆಬ್‌ಸೈಟ್‌ಗಳು/ಅಪ್ಲಿಕೇಶನ್‌ಗಳು

  1. ಆಯ್ದ ವಿಷಯವಸ್ತುಗಳಿಗೆ ಸಂಬಂಧಿಸಿದ ಜಿಯೋಜಿಬ್ರಾ ಕಡತಗಳು ಮತ್ತು ಫೆಟ್ ಸಿಮ್ಯೂಲೇಷನ್ ಗಳು
  2. ಜಿಯೋಜಿಬ್ರಾ ಫೈಲ್‌ಗಳು
  3. ಫೆಟ್ (ಪಿಎಚ್‌ಇಟಿ- PhET)
  4. ಮ್ಯಾನಿಪ್ಯುಲೇಟಿವ್ಸ್ - ವರ್ಚುವಲ್ ಮ್ಯಾನಿಪ್ಯುಲೇಟಿವ್ಸ್ ಸಂಗ್ರಹ.
  5. ರೋಬೋಕಾಂಪಾಸ್
  6. ಜಿಕಾಂಪ್ರಿಸ್
  7. ಆಯ್ದ ವಿಷಯವಸ್ತುಗಳಿಗೆ ಸಂಬಂಧಿಸಿದ ಜಿಯೋಜಿಬ್ರಾ ಕಡತಗಳು ಮತ್ತು ಫೆಟ್ ಸಿಮ್ಯೂಲೇಷನ್ ಗಳು

ವಿಜ್ಞಾನ ಕಲಿಕಾ-ಬೋಧನೆಗೆ ವೆಬ್‌ಸೈಟ್‌ಗಳು/ಅಪ್ಲಿಕೇಶನ್‌ಗಳು

  1. ಫೆಟ್ (ಪಿಎಚ್‌ಇಟಿ- PhET)
  2. ಜಿಕಾಂಪ್ರಿಸ್
  3. ಝೈಗೋಟ್ ಬಾಡಿ 3D ಅನ್ಯಾಟಮಿ ಆನ್‌ಲೈನ್ ವಿಷುಲೈಜರ್
  4. SIMPOP- ವಿಜ್ಞಾನ ಸಿಮ್ಯುಲೇಶನ್‌ಗಳು ಮತ್ತು ಆಟಗಳು

ತಂತ್ರಜ್ಞಾನ ಸಂಪನ್ಮೂಲಗಳು

  1. ತರಗತಿಯ ತಂತ್ರಜ್ಞಾನ ಪರಿಕರ ಕಿಟ್ - ಕ್ಲಿಕ್ ಮಾಡಿ
  2. ಜಿಯೋಜೀಬ್ರಾ ಕಲಿಯಲು ಸಹಾಯವಾಗುವ ಟಿಪ್ಪಣಿಯ ಪುಟ
  3. ಫೆಟ್ ಬಳಸಲು ಸಹಾಯವಾಗುವ ಟಿಪ್ಪಣಿಯ ಪುಟ
  4. ರೋಬೋಕಾಂಪಸ್ ಕಲಿಯಿರಿ
  5. ಸ್ಟೆಲ್ಲಾರಿಯಮ್ ಕಲಿಯಿರಿ
  6. ಕ್ಯಾಲ್ಜಿಯಂ ಕಲಿಯಿರಿ
  7. ಇತರ ಅನ್ವಯಕಗಳನ್ನು ಅನ್ವೇಷಿಸಿ

ಇತರೆ ಸಂಪನ್ಮೂಲಗಳು

  1. ಕೆಲವು ಪ್ರಮುಖ ಗಣಿತ ವಿಷಯ ತಾಣಗಳು
  2. ರಾಷ್ಟ್ರೀಯ ಪಠ್ಯಕ್ರಮ ನೆಲೆಗಟ್ಟು - ೨೦೦೫
  3. NCF ಆಧರಿತ ಕರ್ನಾಟಕ ಪಠ್ಯಕ್ರಮ ಮಾರ್ಗದರ್ಶಿ ತತ್ವಗಳು
  4. ಗಣಿತ ಶಿಕ್ಷಣ ಮತ್ತು ವಿಮರ್ಶಾತ್ಮಕ ಚಿಂತನೆ
  5. Primary resources : ಈ ವೆಬ್‌ಸೈಟ್ ನಲ್ಲಿ ಮುದ್ರಿಸಬಹುದಾದ ಸಂಪನ್ಮೂಲಗಳನ್ನು ಪಡೆಯಬಹುದು.
  6. ಗಣಿತ ಪ್ರಯೋಗ ಶಾಲೆ