ಐಸಿಟಿ ವಿದ್ಯಾರ್ಥಿ ಪಠ್ಯ/ಐಸಿಟಿಯ ಸ್ವರೂಪ ಹಂತ 1

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ

English

ಐಸಿಟಿ ವಿದ್ಯಾರ್ಥಿ ಪಠ್ಯ
ನಿಮ್ಮ ವಿಷಯಗಳನ್ನು ಶೈಕ್ಷಣಿಕ ಅನ್ವಯಕಗಳನ್ನು ಬಳಸಿ ಕಲಿಯಿರಿ ಐಸಿಟಿಯ ಸ್ವಭಾವ ಹಂತ ೧ ಫ್ರಿಜ್‌ಗಿಂತ ಕಂಪ್ಯೂಟರ್ ಹೇಗೆ ವಿಭಿನ್ನವಾಗಿದೆ

ಉದ್ದೇಶಗಳು

  1. ಡಿಜಿಟಲ್ ICT ಯ ಶಕ್ತಿಯನ್ನು ಅರ್ಥೈಸುವುದು
  2. ಐಸಿಟಿ ಎಂಬುದು ಕಂಪ್ಯೂಟರ್ಗಳಿಗಿಂತ ಹೆಚ್ಚು ಎಂದು ಅರ್ಥೈಸುವುದು
  3. ಆ ದತ್ತಾಂಶವು ವಿಭಿನ್ನ ರೀತಿಯದ್ದಾಗಿದೆ ಎಂದು ಅರ್ಥಮಾಡಿಕೊಳ್ಳುವುದು ಮತ್ತು ಸಂಪಾದನೆ, ಪ್ರಕ್ರಿಯೆಗೊಳಿಸುವುದು, ಅನೇಕ ಸ್ವರೂಪಗಳಲ್ಲಿ ಸಂಯೋಜಿಸಬಹುದು, ಇದು ಐಸಿಟಿಯೊಂದಿಗೆ ಅನೇಕ ವಿಷಯಗಳನ್ನು ಸೃ‍‍‍ಷ್ಟಿಸಲು ಸಾಧ್ಯವಾಗುವಂತೆ ಮಾಡುತ್ತದೆ
  4. ದತ್ತಾಂಶವನ್ನು ಸಂವಹನ ಮಾಡಲು, ವಾಚಿಸಲು, ಪ್ರತಿನಿಧಿಸಲು ವಿಭಿನ್ನ ಸಾಧನಗಳಿವೆ ಎಂದು ಅರ್ಥೈಸುವುದು. -ಐಸಿಟಿಯೊಂದಿಗೆ ಸಂವಹನ ಮಾಡುವುದು
  5. ದತ್ತಾಂಶವನ್ನು ಸಂವಹನ ಮಾಡುವ ಮತ್ತು ಇತರ ಕಂಪ್ಯೂಟರ್‌ಗಳೊಂದಿಗೆ ಸಂಪರ್ಕ ಹೊಂದಬಹುದಾದ ಐಸಿಟಿ ಸಾಧನವಾಗಿ ಕಂಪ್ಯೂಟರ್‌ ಅನ್ನು ಅರ್ಥೈಸುವುದು - ಐಸಿಟಿ ಜೊತೆ ಸಂಪರ್ಕ ಸಾಧಿಸುವುದು
  6. ಪ್ರೋಗ್ರಾಮಿಂಗ್ ಮತ್ತು ಗಣಕಯಂತ್ರದ ಕಲ್ಪನೆಗೆ ಪರಿಚಯಿಸುವುದು

ಡಿಜಿಟಲ್‌ ಕೌಶಲಗಳು

  1. ಐಸಿಟಿ ಸಾಧನಗಳ ಶ್ರೇಣಿಯ ಪರಿಚಯ, ಮತ್ತು ನಿರ್ದಿಷ್ಟವಾಗಿ ಕಂಪ್ಯೂಟರ್ ನ ಪರಿಚಯ.
  2. ಐಸಿಟಿ ಸಾಧನವನ್ನು ಸುರಕ್ಷಿತವಾಗಿ ಬಳಸುವುದು
  3. ಕಡತಗಳು ಮತ್ತು ಕಡತಕೋಶಗಳ ಮೂಲಕ ನಿಮ್ಮ ಕಂಪ್ಯೂಟರ್‌ನಲ್ಲಿ ದತ್ತಾಂಶವನ್ನು ಸಂಘಟಿಸಲು ಆಪರೇಟಿಂಗ್ ಸಿಸ್ಟಮ್ ಅನ್ನು ಬಳಸುವುದರೊಂದಿಗೆ ಪರಿಚಿತರಾಗಿ; ನಾವು ಉಬುಂಟು ಗ್ನೂ / ಲಿನಕ್ಸ್ ಮುಕ್ತ ಮತ್ತು ತೆರೆದ ಆಪರೇಟಿಂಗ್ ಸಿಸ್ಟಮ್ ಅನ್ನು ಬಳಸುತ್ತೇವೆ.
  4. ದತ್ತಾಂಶವನ್ನು ಪ್ರವೇಶಿಸಲು ಇನ್ಪುಟ್ ಸಾಧನಗಳನ್ನು ಬಳಸುವುದು
  5. ಐಸಿಟಿ ಮಾಡಬಹುದಾದ ವಿವಿಧ ವಿಷಯಗಳನ್ನು ಅರ್ಥಮಾಡಿಕೊಳ್ಳಲು ಅನೇಕ ಅನ್ವಯಗಳನ್ನು ಬಳಸುವುದು
  6. ಮಾಹಿತಿ ಪ್ರವೇಶಿಸುವ ಒಂದು ವಿಧಾನವಾಗಿ ವರ್ಲ್ಡ್ ವೈಡ್ ವೆಬ್ ಮೂಲಕ ಅಂತರ್ಜಾಲಕ್ಕೆ ಪರಿಚಯ.

ನಿಮ್ಮ ಕಲಿಕಾ ಮೊತ್ತಗಳು

  1. ಕೀಬೋರ್ಡ್ ಇನ್ಪುಟ್‌ ಆಗಿ ಅನ್ವಯಕಗಳನ್ನು ಬಳಸುವ ಪಾಠಗಳ ದಾಖಲೆಗಳು(ಕೈಬರಹದ ದಾಖಲೆಗಳು ಮತ್ತು ಪಠ್ಯ ಸಂಪಾದಕ ದಸ್ತಾವೇಜಿನಲ್ಲಿ ಟೈಪ್ ಮಾಡಬಹುದು)
  2. ಟಕ್ಸ್ ಪೇಂಟ್ ಬಳಸಿ ರಚಿಸಲಾದ ಚಿತ್ರಗಳು
  3. ಐಸಿಟಿ ಬಗ್ಗೆ ನಿಮ್ಮ ಗ್ರಹಿಕೆಯನ್ನು ಪ್ರತಿನಿಧಿಸುವ ಪರಿಕಲ್ಪನಾ ನಕ್ಷೆಗಳು (ಕೈಯಿಂದ ಬಿಡಿಸಿದ ಮತ್ತು ಡಿಜಿಕರಿಸಿದ)
  4. ಪಠ್ಯ ಸಂಪಾದಕ ವನ್ನು ಬಳಸುವ ಸರಳ ಪಠ್ಯ ದಸ್ತಾವೇಜು.

ಚಟುವಟಿಕೆಗಳು:

  1. ಚಟುವಟಿಕೆ 1 - ಫ್ರಿಜ್‌ಗಿಂತ ಕಂಪ್ಯೂಟರ್ ಹೇಗೆ ವಿಭಿನ್ನವಾಗಿದೆ:
  2. ಚಟುವಟಿಕೆ 2 - ಒಂದು ಕಂಪ್ಯೂಟರ್ ಏನೆಲ್ಲಾ ಮಾಡಬಹುದು: