ಸಮಾಜ ವಿಜ್ಞಾನ ವಿಷಯದ ಜಿಲ್ಲಾ ಅನುಕ್ರಮ ಕಾರ್ಯಗಾರ 2013-14

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ

ಅನುಕ್ರಮ ಕಾರ್ಯಾಗಾರಗಳಿಗಾಗಿ ಪೂರ್ವಸಿದ್ದತೆ

19ಶೈಕ್ಷಣಿಕ ಜಿಲ್ಲೆಗಳಿಂದ ಆಯ್ದ ಸಂಪನ್ಮೂಲ ವ್ಯಕ್ತಿಗಳಿಗೆ ೨೦೧೩ ರ ಜುಲೈನಿಂದ ಸೆಪ್ಟೆಂಬರ್ ವರೆಗೆ ಅಂತರ್ಜಾಲ ಬಳಕೆ ಮತ್ತು ಅಂತರ್ಜಾಲದ ಮೂಲಕ ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲ ಅಭಿವೃದ್ದಿ ಪಡಿಸುವ ಬಗ್ಗೆ ತರಭೇತಿ ನೀಡಲಾಗಿದೆ. ಜೊತೆಗೆ ಸಂಪನ್ಮೂಲ ಅಭಿವೃದ್ದಿ ಪ್ರಕ್ರಿಯೆಗೆ ಸಹಕಾರಿಯಾಗುವಂತಹ ಮೈಂಡ್ ಮ್ಯಾಪ್ ಪರಿಕಲ್ಪನೆ, ಪೋಟೋ ಸಂಕಲನ, ಮತ್ತು ವೀಡಿಯೋ ಸಂಕಲನದ ಬಗ್ಗೆಯೂ ತರಭೇತಿ ನೀಡಲಾಗಿದೆ. ಇದೇ ಕಾರ್ಯಾಗಾರಗಳಲ್ಲಿ ಕಲಿಕಾರ್ಥಿಗಳು ಸಿ.ಸಿ.ಇ ಮೌಲ್ಯಮಾಪನದ ಚೌಕಟ್ಟು ಮತ್ತು ಕಾರ್ಯತಂತ್ರಗಳ ಬಗ್ಗೆಯೂ ಚರ್ಚಿಸಿದ್ದಾರೆ.

ಈ ಕೆಳಕಂಡ ಜಿಲ್ಲೆಗಳ ಸಮಾಜ ವಿಜ್ಞಾನ ವಿಷಯ ಶಿಕ್ಷಕರ ವೇದಿಕೆಯ ಜಿಲ್ಲಾ ಹಂತದ ಕಾರ್ಯಾಗಾರಗಳು ನವೆಂಬರ್ ಮಾಹಿಯಿಂದ ಪ್ರಾರಂಭವಾಗಿವೆ.

ಬೆಂಗಳೂರು ವಿಭಾಗ ಬೆಂಗಳೂರು ಉತ್ತರ] ಬೆಂಗಳೂರು ದಕ್ಷಿಣ ಚಿಕ್ಕಬಳ್ಳಾಪುರ ಚಿತ್ರದುರ್ಗ ಶಿವಮೊಗ್ಗ
ಬೆಳಗಾವಿ ವಿಭಾಗ ಬಾಗಲಕೋಟೆ ಬೆಳಗಾವಿ ಚಿಕ್ಕೋಡಿ ಧಾರವಾಡ ಶಿರಸಿ ಉತ್ತರಕನ್ನಡ
ಗುಲ್ಬರ್ಗಾ ವಿಭಾಗ ಕೊಪ್ಪಳ ರಾಯಚೂರು ಯಾದಗಿರಿ
ಮೈಸೂರು ವಿಭಾಗ ಚಿಕ್ಕಮಗಳೂರು ದಕ್ಷಿಣ ಕನ್ನಡ ಹಾಸನ ಮಂಡ್ಯ ಉಡುಪಿ


ಜಿಲ್ಲಾ ವಾರು ಸಮಾಜ ವಿಜ್ಞಾನ ವಿಷಯ ಸಂಪನ್ಮೂಲವ್ಯಕ್ತಿಗಳ ಪಟ್ಟಿಯನ್ನು ಇಲ್ಲಿ ನೋಡಬಹುದು.

ಜಿಲ್ಲಾ ಸಮಾಜ ವಿಜ್ಞಾನ ವಿಷಯ ಕಾರ್ಯಾಗಾರದ ಕಾರ್ಯಸೂಚಿ (ಅಜೆಂಡಾ)

ಈ ವರ್ಷದ ಸಮಾಜ ವಿಜ್ಞಾನ ವಿಷಯ ಶಿಕ್ಷಕರ ವೇದಿಕೆಯಲ್ಲಿ ಪ್ರಮುಖ ಅಂಶಗಳೆಂದರೆ :

  1. ಪಠ್ಯಪುಸ್ತಕ ಪಠ್ಯಕ್ರಮವನ್ನು ಹೇಗೆ ಭೋದಿಸಬಹುದು- ಏನು ಭೋದಿಸಬೇಕು, ಯಾವ ರೀತಿಯ ಸಂಪನ್ಮೂಲಗಳು ಬೇಕು
  2. ಕಲಿಕಾ ಸಂಪನ್ಮೂಲವಾಗಿ ಅಂತರ್ಜಾಲವನ್ನು ಹೇಗೆ ಬಳಸಿ ತರಗತಿ ಭೋದನೆಗೆ ಸಂಪನ್ಮೂಲ ಸಂಗ್ರಹಾಲಯ ಅಭಿವೃದ್ದಿಪಡಿಸುವುದು
  3. ವಿದ್ಯುನ್ಮಾನ ಕಂಪ್ಯೂಟರ್ ಕೌಶಲ ಹೆಚ್ಚಿಸಿಕೊಳ್ಳುವುದು- ಇಮೇಲ್ ಬಳಕೆ, ಅಂತರ್ಜಾಲ ಬಳಕೆ, ಪೋಟೋ ಮತ್ತಯ ವೀಡಿಯೋ ಸಂಕಲನ ಮಾಡುವುದು.
  4. ICT ಪರಿಕರಗಳ ಬಳಕೆ- ಭೋದನೆಯಲ್ಲಿ ಪೋಟೋ, ವೀಡಿಯೋಗಳನ್ನು ಬಳಸುವುದು.
  5. ಕೊಯರ್ ನಲ್ಲಿ ಸಂಪನ್ಮೂಲ ಬಳಕೆ ಹೇಗೆ ಮತ್ತು ಸಂಪನ್ಮೂಲಗಳ ಕುರಿತು ಚಟುವಟಿಕೆಗಳನ್ನು ಹಂಚಿಕೊಳ್ಳುವುದು ಹೇಗೆ ಎಂಬುದನ್ನು ಅರ್ಥೈಸಿಕೊಳ್ಳುವುದು.
  6. ಸಮಾಜ ವಿಜ್ಞಾನ ವಿಷಯದ ಸಿ.ಸಿ.ಇ ಮೌಲ್ಯಮಾಪನ ಚೌಕಟ್ಟನ್ನು ಅರ್ಥೈಸಿಕೊಳ್ಳುವುದು.


ಕಲಿಕಾರ್ಥಿಗಳ ಮಾಹಿತಿ ಮತ್ತು ಕಾರ್ಯಾಗಾರದ ಹಿಮ್ಮಾಹಿತಿ

  1. ಕಲಿಕಾರ್ಥಿಗಳ ಮಾಹಿತಿ ದಾಖಲಿಸಲು ಇಲ್ಲಿ ಕ್ಲಿಕ್ ಮಾಡಿ
  2. ಕಾರ್ಯಾಗಾರದ ಬಗೆಗಿನ ಅಭಿಪ್ರಾಯ ದಾಖಲಿಸಲು ಇಲ್ಲಿ ಕ್ಲಿಕ್ ಮಾಡಿ

ಜಿಲ್ಲಾ ಅನುಕ್ರಮ ಕಾರ್ಯಗಾರದ ಸಾಹಿತ್ಯ ಕೈಪಿಡಿಗಳು

  1. ಅಜೆಂಡಾ ಡೌನ್ ಲೋಡ್ ಗೆ ಇಲ್ಲಿ ಕ್ಲಿಕ್ ಮಾಡಿ
  2. GIMP ಮೂಲಕ ಪೋಟೋ ಸಂಕಲನ ಮಾಡುವ ಕೈಪಿಡಿ
  3. ಕೊಯರ್_ಹಿನ್ನೆಲೆ_ಟಪ್ಪಣಿ
  4. ವಿಕೀ, ಇಂಟರ್ನೆಟ್, ಕೊಯರ್ ಬಗೆಗಿನ ಟಿಪ್ಪಣಿ
  5. ಬೇಸಿಕ್_Libreoffice_ಕೈಪಿಡಿ
  6. ಬೇಸಿಕ್_Ubuntu_ಕೈಪಿಡಿ
  7. ಪಿಕಾಸ ಪೋಟೋ ಅಪ್ ಲೋಡ್ ಮಾಡುವ ಕೈಪಿಡಿ
  8. ವೀಡಿಯೋ ಸಂಕಲನ ಕೈಪಿಡಿ
  9. ಪ್ರೀಮೈಂಡ್ ಕೈಪಿಡಿ
  10. ಸಂಪನ್ಮೂಲ ಸಂಗ್ರಹಾಲಯ ಬಗೆಗಿನ ಕೈಪಿಡಿ
  11. ಅಂತರ್ಜಾಲ ಬಳಕೆ ಬಗೆಗಿನ ಕೈಪಿಡಿ

ಕಾರ್ಯಗಾರದಿಂದ ನೀರೀಕ್ಷೆಗಳು

ಸಂಪನ್ಮೂಲ ವ್ಯಕ್ತಿಗಳು ಕಾರ್ಯಾಸೂಚಿ(ಅಜೆಂಡಾ)ದಲ್ಲಿನ ವಿಷಯಗಳನ್ನು (ಅಗತ್ಯವಿದ್ದಲ್ಲಿ ಬದಲಾವಣೆ ಮಾಡಿಕೊಳ್ಳಬಹುದು) ಕಾರ್ಯಗಾರದಲ್ಲಿ ಮಂಡನೆಮಾಡಬೇಕು. ಕಲಿಕಾರ್ಥಿಗಳು ಪೂರ್ಣಗೊಳಿಸಬೇಕಾದ ಚಟುವಟಿಕೆಗಳು :

  1. ಇಮೇಲ್ ಐಡಿ ರಚಿಸಿಕೊಳ್ಳುವುದು ಮತ್ತು ಗಣಿತವಿಜ್ಞಾನ ವೇದಿಕೆಗೆ ಸೇರ್ಪಡೆಗೊಳಿಸುವುದು
  2. ತಾವು ಆಬಿವೃದ್ದಿಪಡಿಸಿದ ಅಥವಾ ಸಂಗ್ರಹಿಸಿದ ಸಂಪನ್ಮೂಲಗಳನ್ನು ಸಂಪೂರ್ಣ ವಿವರಗಳೊಂದಿಗೆ ವೇದಿಕೆ ಗೆ ಹಂಚಿಕೊಳ್ಳುವುದು.
  3. ಕೊಯರ್ ವೆಬ್ ಪುಟವನ್ನು ಸರಾಗವಾಗಿ ಬಳಸುವಂತಾಗಬೇಕು, ಇನ್ನೂ ಸೇರಿಸಬಹುದಾದ ಸಂಪನ್ಮೂಲಗಳನ್ನು ಗುರುತಿಸುವುದು.
  4. ಕನಿಷ್ಟ ಒಂದು ಚಟುವಟಿಕೆ ಅಥವಾ ಉಪಯುಕ್ತ ಸಂಪನ್ಮೂಲವನ್ನು ಕೊಯರ್ ಗೆ ಕಳುಹಿಸುವುದು.
  5. ಜಿಲ್ಲಾ ಕಾರ್ಯಾಗಾರ ವೆಬ್ ಪುಟದಲ್ಲಿನ ಕಾರ್ಯಾಗಾರ ಸಮಯದ ಮತ್ತು ನಂತರದ ಚಟುವಟಿಕೆಗಳನ್ನು ತಪ್ಪದೇ ನಮೂದಿಸುವುದು
  6. ಕಾರ್ಯಗಾರದ ಪೋಟೋಗಳನ್ನು ಪಿಕಾಸ ಮೂಲಕ ಅಪ್ ಲೋಡ್ ಮಾಡುವುದು