"ಪ್ರವೇಶದ್ವಾರ:ಕನ್ನಡ" ಆವೃತ್ತಿಗಳ ಮಧ್ಯದ ಬದಲಾವಣೆಗಳು
ಚು (added Category:ಕನ್ನಡ using HotCat) |
|||
೯೦ ನೇ ಸಾಲು: | ೯೦ ನೇ ಸಾಲು: | ||
[[ವರ್ಗ:ಪ್ರವೇಶದ್ವಾರ]] | [[ವರ್ಗ:ಪ್ರವೇಶದ್ವಾರ]] | ||
− |
೧೦:೫೨, ೧೪ ಮೇ ೨೦೧೯ ನಂತೆ ಪರಿಷ್ಕರಣೆ
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಕ್ಕೆ ಕೊಡುಗೆ ನೀಡಲು, ಇಲ್ಲಿ ಕ್ಲಿಕ್ಕಿಸಿ
ಕನ್ನಡ
ದ್ರಾವಿಡ ಭಾಷೆಗಳಲ್ಲಿ ಬಹಳ ಪುರಾತನವಾದ ಭಾಷೆಗಳಲ್ಲಿ ಒಂದಾದ ಕನ್ನಡ ಭಾಷೆ/ನುಡಿಯನ್ನು ಅದರ ವಿವಿಧ ರೂಪಗಳಲ್ಲಿ ಸುಮಾರು ೪೫ ದಶಲಕ್ಷ ಜನರು ಆಡುಭಾಷೆಯಾಗಿ ಬಳಸುತ್ತಿದ್ದಾರೆ. ಇದು ಭಾರತದ ೨೨ ಅಧಿಕೃತ ಭಾಷೆಗಳಲ್ಲಿ ಪ್ರಮುಖವಾದುದು ಹಾಗೂ ಕರ್ನಾಟಕ ರಾಜ್ಯದ ಅಧಿಕೃತ/ಆಡಳಿತ ಭಾಷೆ. ದಕ್ಷಿಣ ಭಾರತದ ಭಾಷೆಗಳ ಮೂಲವೆಂದು ಗುರುತುಸಲ್ಪಟ್ಟಿರುವ ಮೂಲದ್ರಾವಿಡದಿಂದ ಕನ್ನಡವು ಯಾವಾಗ ಆಡುಭಾಷೆಯಾಗಿ ಪರಿವರ್ತಿತವಾಯಿತೆಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ತಮಿಳು ಭಾಷೆಯು ದ್ರಾವಿಡ ಭಾಷೆಯಿಂದ ಬೇರ್ಪಟ್ಟ ಸಮಯದಲ್ಲಿಯೇ ಕನ್ನಡವು ಕೂಡ ಆಡುಭಾಷೆಯಾಗಿ ಬೇರ್ಪಟ್ಟಿರಬಹುದೆಂದು ಹೇಳಲಾಗುತ್ತದೆ. ಈ ಭಾಷೆಯ ಲಿಪಿಯು ಸುಮಾರು ೧೫೦೦-೧೬೦೦ ವರ್ಷಗಳಿಗಿಂತಲೂ ಹಿಂದಿನದು. ಐದನೆಯ ಶತಮಾನದ ಹಲ್ಮಿಡಿ ಶಾಸನದ ಸಮಯಕ್ಕಾಗಲೇ ಕನ್ನಡವು ಸಾಕಷ್ಟು ಅಭಿವೃದ್ಧಿ ಹೊಂದಿತ್ತು. ಲಿಪಿಯ ಉಗಮದ ಇತಿಹಾಸವನ್ನು ಗಮನಿಸಿದರೆ, ತಮಿಳಿಗಿಂತಲೂ ಕನ್ನಡದ ಲಿಪಿಯೇ ಮೊಟ್ಟ ವೊದಲಿಗೆ ಹೆಚ್ಚು ಪ್ರವರ್ಧಮಾನಕ್ಕೆ ಬಂದಂತೆ ಕಾಣಿಸುತ್ತದೆ.
ಕುತುಹಲಕಾರಿ ಸುದ್ದಿ
ಕನ್ನಡದ ಪ್ರಸಿದ್ಧ ಕವಿಗಳು ಮತ್ತು ಕಲಾವಿದರ ಜನ್ಮ ದಿನಾಂಕದ ಮಾಹಿತಿ |
---|
ಮಿರ್ಜಿ ಅಣ್ಣರಾಯರು ಕಂಡಂತೆ ಭಾಷಾ ಶಿಕ್ಷಣ |
---|
ಕನ್ನಡದ ಬಗ್ಗೆ ನಾವೆಲ್ಲ ತಿಳಿಯಬೇಕಿರುವ ವಿಶೇಷತೆಗಳು
- ಕನ್ನಡವು ಪ್ರಪಂಚದಲ್ಲಿಯೇ ಅತ್ಯಂತ ಪ್ರಾಚೀನ ಭಾಷೆಗಳಲ್ಲೊಂದಾಗಿದ್ದು ಸುಮಾರು ೨೦೦೦ ಸಾವಿರ ವರ್ಷಗಳಷ್ಟು ಹಳೆಯ ಭಾಷೆಯಾಗಿದೆ.
- ಕನ್ನಡ ಎರಡು ಸಾವಿರ ಹಳೆಯದಷ್ಟೇ ಅಲ್ಲ, ನಾವು ಮಾತನಾಡುವುದನ್ನು ಬರೆಯಬಹುದು, ಬರೆದುದ್ದನ್ನ ಓದಬಹುದಾದ ಭಾಷೆ. ಈ ವಿಶಿಷ್ಟತೆ ಹಲವಾರು ಭಾಷೆಗಳಲ್ಲಿ ಅವಕಾಶವಿಲ್ಲ.
- ಕನ್ನಡ ಪ್ರತಿಶತ ೯೯.೯೯ ರಷ್ಟು ವೈಜ್ಞಾನಿಕ ಹಾಗು ತರ್ಕಬದ್ಧವಾದ ಭಾಷೆ.
- ಕನ್ನಡಕ್ಕೆ ಇದುವರೆಗೂ ಸಂದಿರುವುದು ೮ ಜ್ಞಾನಪೀಠ ಪ್ರಶಸ್ತಿಗಳು. (ಬೇರೆಯವುಗಳಿಗೆ ಹೋಲಿಸಿದರೆ ಹಿಂದಿ - ೬, ತೆಲಗು - ೨, ಮಲಯಾಳಂ - ೩, ತಮಿಳು - ೨)
- ಈವರೆಗೆ ಎಂಟು ಕನ್ನಡ ಸಾಹಿತಿಗಳು ಜ್ಞಾನಪೀಠ ಪ್ರಶಸ್ತಿ ಯಿಂದ ಪುರಸ್ಕೃತಗೊಂಡು, ಕನ್ನಡವನ್ನು ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆಯನ್ನಾಗಿ ಮಾಡಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ಸಾಹಿತಿಗಳ ಪಟ್ಟಿ ಹೀಗಿದೆ.
ಹೆಸರು | ವರ್ಷ | ಕೃತಿ |
---|---|---|
ಕುವೆಂಪು | ೧೯೬೭ | ಶ್ರೀರಾಮಾಯಣ ದರ್ಶನಂ |
ದ.ರಾ.ಬೇಂದ್ರೆ | ೧೯೭೩ | ನಾಕುತಂತಿ |
ಶಿವರಾಮ ಕಾರಂತ | ೧೯೭೭ | ಮೂಕಜ್ಜಿಯ ಕನಸುಗಳು |
ಮಾಸ್ತಿ ವೆಂಕಟೇಶ ಅಯ್ಯಂಗಾರ್ | ೧೯೮೩ | ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ವಿಶೇಷ ಉಲ್ಲೇಖ ಚಿಕವೀರರಾಜೇಂದ್ರ |
ವಿ.ಕೃ.ಗೋಕಾಕ | ೧೯೯೦ | ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ವಿಶೇಷ ಉಲ್ಲೇಖ ಭಾರತ ಸಿಂಧುರಶ್ಮಿ |
ಯು.ಆರ್.ಅನಂತಮೂರ್ತಿ | ೧೯೯೪ | ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ವಿಶೇಷ ಉಲ್ಲೇಖ ಸಂಸ್ಕಾರ |
ಗಿರೀಶ್ ಕಾರ್ನಾಡ್ | ೧೯೯೮ | ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ ಗಿರೀಶ್ ಕಾರ್ನಾಡರ ಸಮಗ್ರ ನಾಟಕಗಳ ಸಮೀಕ್ಷೆ. |
ಚಂದ್ರಶೇಖರ ಕಂಬಾರ | ೨೦೧೦ | ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ |
- ಶ್ರೀಯುತ'ವಿನೋಭಾ ಭಾವೆ' ಅವರು 'ಕನ್ನಡ ಭಾಷೆ'ಯನ್ನು 'ವಿಶ್ವ ಲಿಪಿಗಳ ರಾಣಿ' ಎಂದು ಕೊಂಡಾಡಿದ್ದಾರೆ.
- ಕ್ರಿಸ್ತಶಕ ಸುಮಾರು ೪೫೦ರಲ್ಲಿ ರಚಿತವಾದ ಕನ್ನಡ ಮೊಟ್ಟ ಮೊದಲ ಶಾಸನ ಹನ್ಮಿಡಿ ಶಾಸನ (ಹಲ್ಮಿಡಿ ಶಾಸನವೆಂದು ಪ್ರಸಿದ್ದಿ)
- ಕನ್ನಡದ ಬಗೆಗಿನ ಪ್ರಾಚೀನ ಬರಹ ದಾಖಲೆ ಎಂದರೆ ಅಶೋಕನ ಬ್ರಹ್ಮಗಿರಿ ಶಾಸನದ 'ಇಸಿಲ' ಎಂಬ ಪದ (ಕ್ರಿಸ್ತಪೂರ್ವ.ಸು. ೨೩೦)
- ವಿದೇಶಿಗನೊಬ್ಬನಿಂದ ಶಬ್ದಕೋಶದ ರಚನೆಯಾಗಿರುವುದು ಕನ್ನಡದಲ್ಲಿ ಮಾತ್ರ. (ಕಿಟಲ್'ನ ಶಬ್ದಕೋಶ)
- ರಗಳೆ ಸಾಹಿತ್ಯ ಎಂಬುದು ಕನ್ನಡಲ್ಲಿ ಮಾತ್ರ ಕಾಣಬಹುದಾದ ವಿಶಿಷ್ಟ ಹಾಗು ಅಪರೂಪವಾದ ಸಾಹಿತ್ಯ ಪ್ರಕಾರವಾಗಿದೆ.
- ಕುವೆಂಪುರವರು ಪಡೆದಿರುವಷ್ಟು ಗೌರವ,ಸಾಹಿತ್ಯ ಪ್ರಶಸ್ತಿಗಳನ್ನು ಬೇರೆ ಯಾವ ಭಾರತೀಯ ಸಾಹಿತಿಯೂ ಪಡೆದಿಲ್ಲ.
- ಷಟ್ಪದಿ ಎಂಬ ಛಂದಸ್ಸಿನ ಪ್ರಕಾರವನ್ನು ಬೇರಾವ ಭಾಷೆಯಲ್ಲಿಯೂ ನೀವು ಕಾಣಲಾರಿರಿ.
ಕರ್ನಾಟಕದ ಪ್ರಸಿದ್ದ ವಿಶ್ವವಿದ್ಯಾನಿಲಯಗಳ ಪಟ್ಟಿ
- ಕರ್ನಾಟಕದ ಪ್ರಸಿದ್ಧ ವಿಶ್ವವಿದ್ಯಾಲಯಗಳ ಪಟ್ಟಿಯನ್ನು ವೀಕ್ಷಿಸಲು ಮತ್ತು ಪ್ರವೇಶದ್ವಾರಕ್ಕಾಗಿ ಇಲ್ಲಿ ಕ್ಲಿಕ್ಕಿಸಿರಿ
ಕನ್ನಡದ ̠ಮೊದಲುಗಳು
ಪುಸ್ತಕಗಳು
- ಸುಮಾರು 5000 ಕ್ಕಿಂತ ಹೆಚ್ಚು ಮುಕ್ತ ಕನ್ನಡ ಪುಸ್ತಕಗಳನ್ನು ವೀಕ್ಷಿಸಲು ಮತ್ತು ಡೌನ್‌ಲೋಡ್ ಮಾಡಲು ಇಲ್ಲಿ ಒತ್ತಿರಿ
- ಕನ್ನಡ ಪುಸ್ತಕಗಳ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಒತ್ತಿರಿ
- ಮಲೆಗಳಲ್ಲಿ ಮದುಮಗಳು ಕೃತಿಯನ್ನು ಓದಲು ಇಲ್ಲಿ ಒತ್ತಿರಿ
- ಸಂಪೂರ್ಣ 18 ಪರ್ವಗಳ (ಡಾ.ಹೆಚ್.ರಾಮಚಂದ್ರಸ್ವಾಮಿ) ಮಹಾಭಾರತ ಕಥಾ ಸಂಗ್ರಹ
- ಕೆಲವು ಪ್ರಮುಖ ಪುಸ್ತಕಗಳ ಉಚಿತ ಡೌನ್ಲೋಡ್ಗೆ ಇಲ್ಲಿ ಒತ್ತಿರಿ
- ಮಕ್ಕಳಿಗಾಗಿ ಬಸವಣ್ಣನವರ ಜೀವನ ಚರಿತ್ರೆ ನೋಡಲು ಇಲ್ಲಿ ಒತ್ತಿರಿ ಬಸವಣ್ಣನವರ ವಚನಗಳು
ಕನ್ನಡದ ಪ್ರಸಿದ್ಧ ಪುಸ್ತಕ ಪ್ರಕಾಶನಗಳು
ಘಟನೆಗಳು
ಕನ್ನಡ ಸಾಹಿತ್ಯ ಸಮ್ಮೇಳನಗಳ ವರ್ಷ, ಸ್ಥಳ ಮತ್ತು ಅಧ್ಯಕ್ಷರುಗಳ ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಒತ್ತಿರಿ
ವರ್ಗಗಳು
ವಿಷಯಗಳು
ಸಂಪನ್ಮೂಲ ಹೊಂದಿರುವ ವಿಷಯಗಳು
- ೮ನೇ ತರಗತಿ
- ೯ನೇ ತರಗತಿ
- ೧೦ನೇ ತರಗತಿ
ಮೊದಲ ಪಾಠ ಜಾನಪದ ಲೋಕ
ಅಕ್ಷರಗಳ ಉಚ್ಚಾರಕ್ಕೆ ಸಂಬಂಧಿಸಿದ ಕೆಲವು ಪ್ರಯೋಗಗಳು.
ಸೇತುಬಂಧ ಕಾರ್ಯಕ್ರಮದ ಸಾಮಾಗ್ರಿಗಳು
ಕನ್ನಡದ ಉಪಯುಕ್ತ ವೆಬ್ ತಾಣಗಳು
ವೇದಿಕೆ ಶಿಕ್ಷಕರ ಲೇಖನಗಳು
ಮೋಜು ತಾಣ
ಕನ್ನಡ ಕವನ, ಕಥೆ, ಕಾದಂಬರಿಗಳುಳ್ಳ ಬ್ಲಾಗ್ ಗಳು
ಕನ್ನಡ ಮಾಹಿತ ಕೋಶ
ಕನ್ನಡ ಮಾಹಿತಿ ಕೋಶ
- ಕನ್ನಡ ವಿಕಿಪೀಡಿಯಾ
- ಕಣಜ
- ವಚನ ಸಾಹಿತ್ಯ(ವಚನ ಸಂಚಯ)
- ಸರ್ವಜ್ಞನ ತ್ರಿಪದಿ (ಸರ್ವಜ್ಞ ಸಂಚಯ)
- ದಾಸ ಸಂಚಯ (ದಾಸ ಸಂಚಯ)
- ಮಂಕುತಿಮ್ಮನ ಕಗ್ಗ (ಕಗ್ಗ ಸಂಚಯ)
- ವಿಚಾರ ಮಂಟಪ
- ಸಂಚಯ
- ಸಂಪದ
- ವಿಶ್ವ ಕನ್ನಡ
- ಕನ್ನಡ ಯೂನಿಕೋಡ್ ವಿನ್ಯಾಸ
- ಜ್ಞಾನಮುಖಿ
- 8-9-10ನೇ ತರಗತಿ ಪಠ್ಯಪುಸ್ತಕ ಸಂಪನ್ಮೂಲವುಳ್ಳ ಕನ್ನಡದೀವಿಗೆ
ಕನ್ನಡ ದಿನಪತ್ರಿಕೆಗಳು
- ವಿಜಯವಾಣಿ ದಿನಪತ್ರಿಕೆ
- ಪ್ರಜಾವಾಣಿ ದಿನಪತ್ರಿಕೆ
- ವಿಜಯಕರ್ನಾಟಕ ದಿನಪತ್ರಿಕೆ
- ಕನ್ನಡಪ್ರಭ ದಿನಪತ್ರಿಕೆ
- ಉದಯವಾಣಿ ದಿನಪತ್ರಿಕೆ
- ಸಂಯುಕ್ತ ಕರ್ನಾಟಕ ದಿನಪತ್ರಿಕೆ
- ಕನ್ನಡ ಒನ್ ಇಂಡಿಯಾ ಸುದ್ದಿ
- ಕನ್ನಡ ವೆಬ್ ದುನಿಯಾ
- ವಾರ್ತಾಭಾರತಿ
- ಹೊಸದಿಗಂತ ದಿನಪತ್ರಿಕೆ
- ಈ ನಾಡು ದಿನಪತ್ರಿಕೆ
ಕನ್ನಡ ಸಂಜೆ ಪತ್ರಿಕೆಗಳು
ಕನ್ನಡ ನಿಯತಕಾಲಿಕೆಗಳು/ಸುದ್ದಿ ಪುಟಗಳು
ಕರ್ನಾಟಕ ಸರ್ಕಾರದ ಪ್ರಮುಖ ಜಾಲತಾಣಗಳು